ಸಿಡ್ನಿ ಬೈ ಸೆಂಟಿನಿಯಲ್ ಪಾರ್ಕ್ !
ಹಸಿರು ಹುಲ್ಲಿನ ಕಂಬಳಿ ಹೊದ್ದು ಮಲಗಿದಂತಹ ಹಳ್ಳ ಗುಡ್ಡಗಳು -
ಸ್ಪಟಿಕದಂತೆ ಹೊಳೆದು ತುಂಬಿ ತುಳುಕುವ ನೀರ ನೆಲೆಗಳು -
ನದಿಮುಖದ ಕೆಸರಿನಲ್ಲಿ ದಟ್ಟ ಮ್ಯಾಂಗ್ರೋವ್ ಬನಗಳು -
ಹಾರಾಡುತ್ತ ತೇಲಾಡುತ್ತ ಓಡಾಡುತ್ತಿರುವ ವಿವಿಧ ಹಕ್ಕಿಗಳು -
ಸ್ವಪ್ನಲೋಕಕ್ಕೆ ಸಾಟಿಯಾಗಿ ಕಂಗೊಳಿಸುವ ಇಂತಹ ಸುಂದರ ದೃಶ್ಯಾವಳಿಗಳನ್ನು ತನ್ನಲ್ಲಿ ಅಡಗಿಸಿಕೊಂಡಿದೆ ಸಿಡ್ನಿ ನಗರದ (Sydney Bicentennial Park) 'ಬೈ ಸೆಂಟಿನಿಯಲ್ ಪಾರ್ಕ್' ಎಂಬ ಉಪವನ . ( Homebush Bay ) ಹೋಂ ಬುಷ್ ಬೇ ಎಂಬ ಕೊಲ್ಲಿ ಪ್ರದೇಶದಲ್ಲಿ ( Sydney Olympic Park ) ಸಿಡ್ನಿ ಒಲಿಂಪಿಕ್ ಪಾರ್ಕಿನ ಒಂದು ಅಂಗವಾಗಿರುವ ಈ ಉಪವನ , ಅಗಾದವಾದ ನೈಸರ್ಗಿಕ ವೈವಿದ್ಯತೆಯ ಸಂಪತ್ತನ್ನು ಹೊಂದಿರುವ ನಲವತ್ತು ಹೆಕ್ಟೇರ್ಗಳ ವಿಸ್ತೀರ್ಣವುಳ್ಳ ಅಮೂಲ್ಯ ತಾಣ .
ಪಾರ್ಕಿನ ಸುತ್ತಲೂ ನಗರದ ಎಡೆಬಿಡದ ವಾಹನಗಳ ಗದ್ದಲ. ಹಸಿರು ಕೋಟೆಯಾಗಿ ಪಾರ್ಕನ್ನು ಆವರಿಸಿ ನಿಂತಿರುವ Eucalypt, Casuarina, Swamp Oak ಜಾತಿಗಳಿಗೆ ಸೇರಿದ ಮರಗಳ ಕಾಡು ಶಬ್ದ ಮಾಲಿನ್ಯವನ್ನು ಸೋಸಿ ತಡೆಗಟ್ಟುವುದರಿಂದ ಆ ಸುಂದರ ವನದೊಳಗೆ ನೆರೆದಿರಿವುದೆಲ್ಲ ನಿರ್ಮಲ ನಿರಾಮಯ ನೀರವತೆ ಮಾತ್ರ !
ಪಾರ್ಕಿನೊಳಗೆ ಕಾಲಿಟ್ಟ ಕ್ಷಣ ಬೇರೆಯೇ ಲೋಕವನ್ನು ಪ್ರವೇಶಿಸಿದ ಅನುಭವ . ವಿಹಾರ ಮಾಡಲು ಅನುಕೂಲವಾದ ಕಾಲು ದಾರಿಗಳು. ವ್ಯಾಯಾಮಕ್ಕಾಗಿ ಸೈಕಲ್ ಮಾಡುವ ಸವಾರರಿಗೆಂದೇ ಪ್ರತ್ಯೇಕ ಹಾದಿಗಳು . ಎತ್ತರವಾದ ಮರಗಳಲ್ಲಿ ಮ್ಯಾಗ್ಪೈ , ಮೈನಾ , ರಾಬಿನ್, ಕುಕ್ಕೂ , ಪುಟ್ಟ ಹಾಡು ಹಕ್ಕಿಗಳು , ಪಂಚ ವರ್ಣ ಗಿಳಿಗಳು , ಗಾಲಾ, ಕಾಕಟೂ ಮೊದಲಾದ ಅನೇಕ ಹಕ್ಕಿಗಳ ಚಿಲಿಪಿಲಿ . ಮೈನಾಗಳನ್ನು ಹೋಲುವ 'ನಾಯ್ಸಿ ಮೈನರ್ಸ್ ' ( Noisy Miners ) ಎಂಬ ಹಳದಿ ಬಣ್ಣದ ಕೊಕ್ಕಿನ, ಬೂದು ಬಣ್ಣದ ಹಕ್ಕಿಗಳ ಕಿವಿ ತೂತು ಮಾಡುವಂತಹ ಸಾಮೂಹಿಕ ಗದ್ದಲ. ( Lemon Bottlebrush ) ಲೆಮನ್ ಬಾಟಲ್ ಬ್ರಷ್ ಮರವನ್ನು ಮುತ್ತಿಗೆ ಇಟ್ಟು, ಹಣ್ಣಿಗಾಗಿ ಅವುಗಳು ಜಗಳಗಂಟರಂತೆ / ಜಗಳಗಂಟಿಯರಂತೆ ಸತತವಾಗಿ ಅರಚಾಡುವ ಸಂದಣಿ . ಮರದಿಂದ ಮರಕ್ಕೆ ತೋರಣ ಕಟ್ಟಿದಂತಹ ರಾಕ್ಷಸ ಜೇಡರ ಬಲೆಗಳ ವಿಚಿತ್ರ ವಿನ್ಯಾಸ. ಅಲ್ಲಲ್ಲಿ ಜುಳು ಜುಳು ಹರಿವ ಝರಿಗಳು. ಹೆಸರಿಸಲಾರದ ಬಣ್ಣ ಬಣ್ಣದ ಚಿಕ್ಕ ಪುಟ್ಟ ಹೂವುಗಳನ್ನೂ ಹಣ್ಣುಗಳನ್ನೂ ಹೊತ್ತ ಗಿಡಗಳು, ಪೊದರುಗಳು .
ನದಿಮುಖದ ಉಪ್ಪಿನಿಂದ ಕೂಡಿದ ಕೊಚ್ಚೆ ನೀರಿನಲ್ಲಿ ದಟ್ಟವಾಗಿ ಬೆಳೆದು ನಿಂತಿರುವ (Badu Mangrove) ಮ್ಯಾಂಗ್ರೋವ್ ಬನದ ಬೆದರಿಸುವಂತಹ ನಿಗೂಡ ಮೌನ .
ನದಿಮುಖದ ಉಪ್ಪಿನಿಂದ ಕೂಡಿದ ಕೊಚ್ಚೆ ನೀರಿನಲ್ಲಿ ದಟ್ಟವಾಗಿ ಬೆಳೆದು ನಿಂತಿರುವ (Badu Mangrove) ಮ್ಯಾಂಗ್ರೋವ್ ಬನದ ಬೆದರಿಸುವಂತಹ ನಿಗೂಡ ಮೌನ .
ಬನವನ್ನು ಹಾದು ಹೋಗಲು , ಕೆಸರಿನ ಮೇಲೆ ( Board Walk ) ಹಲಗೆಗಳಿಂದ ನಿರ್ಮಿಸಲ್ಪಟ್ಟ ಕಾಲು ದಾರಿಗಳು . ಗಾಢ ಮೌನವನ್ನು ಒಮ್ಮೊಮ್ಮೆ ಸೀಳುವ ಕಪ್ಪೆಗಳ 'ಗೊಟರ್' ಮತ್ತು ಜೀರುಂಡೆಗಳ 'ಜೀಂಗ್' ಶಬ್ದ ! ಚಕ್ರ ವ್ಯೂಹದಂತೆ ಮ್ಯಾಂಗ್ರೋವ್ ಕಾಡಿನ ನಡುವೆ ಸುಳಿದು ಸುಳಿದು ಹೋಗುವ ಹಲಗೆಯ ಮೇಲೆ ನಡೆಯುತ್ತಿದ್ದರೆ ದಿಕ್ಕು ಕಾಣದ ಕಾಡಿನಲ್ಲಿ ತಪ್ಪಿಸಿಕೊಂಡ ಭೀಕರ ಅನುಭವವಾಗುತ್ತದೆ . ಅಲ್ಲಲ್ಲಿ ಕಾಣಿಸಿಕೊಳ್ಳುವ ಮಾರ್ಗದರ್ಶಿ ಫಲಕಗಳೂ, ಮ್ಯಾಂಗ್ರೋವ್ ಬಗ್ಗೆ ವಿವರ ನೀಡುವ ಮಾಹಿತಿ ಫಲಕಗಳೂ ದಾರೀ ದೀಪವೂ ಜ್ಞಾನ ದೀಪವೂ ಆಗಿ ನಮಗೆ ಸಾಂತ್ವನ ನೀಡುತ್ತವೆ .
ಮ್ಯಾಂಗ್ರೋವ್ ವ್ಯೂಹದಿಂದ ಹೊರ ಬಂದು, ನಾವು ಹಿಡಿಯುವ ಮತ್ತೊಂದು ಕವಲು ದಾರಿಯ ಎರಡು ಬದಿಯಲ್ಲೂ ಹಿತವಾದ ಹಸಿರು ಹಸಿರು ಹಸಿರು ! ಅಲ್ಲಲ್ಲಿ ಚುಕ್ಕಿ ಇಟ್ಟ ಬಣ್ಣದ ಹೂವುಗಳು, ಪುಟ್ಟ ಪುಟ್ಟ ಸುಂದರವಾದ ತಿನ್ನಬಾರದ ಹಣ್ಣುಗಳು ! ನಿಸರ್ಗ ಸೌಂದರ್ಯವನ್ನು ಕಣ್ತುಂಬ ಹೀರುತ್ತಾ ಮುನ್ನಡೆದರೆ , ದಾರಿಯ ತಿರುವಿನಲ್ಲಿ 'ಥಟ್ ' ಎಂದು ಗೋಚರವಾಗುವ ವಿಶಾಲವಾದ ಸರೋವರ - ( Water Bird Refuge ) 'ವಾಟರ್ ಬರ್ಡ್ ರೆಫ್ಯೂಜ್ '! ನೀರ ಹಕ್ಕಿಗಳೂ ಕೆಸರಿನಲ್ಲಿ ಆಹಾರ ಹುಡುಕುವ ಹಕ್ಕಿಗಳೂ ವಲಸೆ ಬರುವ ವಿದೇಶೀ ಹಕ್ಕಿಗಳೂ ಒಗ್ಗಟ್ಟಾಗಿ ಸಾಮೂಹಿಕ ಜೀವನ ನಡೆಸುತ್ತಿರುವ ಅದ್ಭುತ ದೃಶ್ಯ ಬೆರಗುಗೊಳಿಸುತ್ತದೆ .
ಎಂದೂ ಕಂಡಿರದ ಆಸ್ಟ್ರೇಲಿಯದ ಕಪ್ಪು ಹಂಸ, ಸಾಕು ಸಾಕೆನ್ನುವಷ್ಟು ಪೆಲಿಕನ್ ಹಕ್ಕಿಗಳು, ಸ್ಪೂನ್ ಬಿಲ್ಗಳು ಬೆಳ್ಳಕ್ಕಿಗಳು , ವಿವಿಧ ಜಾತಿಯ ಕೊಕ್ಕರೆಗಳು , ನೀರು ಕಾಗೆಗಳು, ಬಾತು ಕೋಳಿಗಳು - ಇನ್ನೂ ಅನೇಕ ಜಾತಿಯ ನೀರ ಹಕ್ಕಿಗಳು ಒಂದೇ ಸರೋವರದಲ್ಲಿ ಕೂಡಿ ಬಾಳುವ ದೃಶ್ಯ ಇನ್ನೆಲ್ಲಿ ಕಾಣಸಿಗಬೇಕು ?
ಸರೋವರದ ದೂರದ ಅಂಚಿನಲ್ಲಿ ( Bird Hide ) 'ಬರ್ಡ್ ಹೈಡ್ ' ಎಂಬ ಮರದಿಂದಾದ ಕೊಠಡಿ ನಿರ್ಮಿಸಲ್ಪಟ್ಟಿದೆ . ಒಳಗಿರುವ ಮರದ ಬೆಂಚುಗಳಲ್ಲಿ ಹಕ್ಕಿಗಳಿಗೆ ಕಾಣಿಸಿಕೊಳ್ಳದ ಹಾಗೆ ಕುಳಿತುಕೊಂಡು , ಮರದ ಹಲಗೆಯಿಂದಾದ ಗೋಡೆಯ ಸೀಳು ಕಿಟಕಿಯ ಮೂಲಕ ಅವುಗಳನ್ನು ವೀಕ್ಷಿಸುತ್ತಿದ್ದರೆ ಸಮಯದ ಪರಿವೆಯೇ ಇರುವುದಿಲ್ಲ .
ಸುತ್ತುವರಿದಿರುವ ಗೋಡೆಗಳ ಮೇಲೇ ತಗಲು ಹಾಕಿರುವ ಹಕ್ಕಿಗಳ ವರ್ಣ ಚಿತ್ರಗಳೂ ಮಾಹಿತಿಗಳನ್ನು ಹೊತ್ತ ಫಲಕಗಳೂ ಎಂತಹವರ ಮನಸ್ಸಲ್ಲೂ ಹಕ್ಕಿಗಳ ಬಗ್ಗೆ ಅರಿತುಕೊಳ್ಳುವ ಆಸಕ್ತಿಯನ್ನು ಕೆರಳಿಸುತ್ತವೆ .
'ಬರ್ಡ್ ಹೈಡ್ ' ನಿಂದ ಕವಲೋಡೆವ ಮತ್ತೊಂದು ದಾರಿ ನಮ್ಮನ್ನು( Duck River ) 'ಡಕ್ ರಿವರ್ ' ನದಿಯ ದಡದ ಮೇಲೆ ನಡೆಸಿಕೊಂಡು ಹೋಗುತ್ತದೆ. ಪುಟಾಣಿ ಭೂಷಿರದಂತೆ ಕಾಣಿಸಿಕೊಳ್ಳುವ ದಡದ ತುದಿಯಲ್ಲಿ ನಿಂತರೆ ಎದುರಿಗೆ ಸಮುದ್ರದಂತಹ 'ಡಕ್ ರಿವರ್ ' ಪ್ರವಾಹ . ದೂರದ ಎದುರು ದಡದಲ್ಲಿ Rhodes ಎಂಬ ವಸತಿ ಪ್ರದೇಶ.
ನದಿಯ ಹಿನ್ನೀರಿನಲ್ಲಿ ಮ್ಯಾಂಗ್ರೋವ್ಗಳ ಪೊದೆಯಲ್ಲಿ ಹುದುಗಿದಂತೆ ಬಿದ್ದುಕೊಂಡಿರುವ ಒಡೆದ ಹಡಗು ನಮ್ಮ ಗಮನ ಸೆಳೆಯುತ್ತದೆ . ಫಲಕ ಹೇಳುವ ಕಥೆಯ ಪ್ರಕಾರ ಅದು ಎರಡನೇಯ ವಿಶ್ವ ಸಮರದಲ್ಲಿ ಸೇವೆ ಸಲ್ಲಿಸಿ ( Battle Honour 'Darwin 1942 - 43') 'ಯುದ್ಧ ಪ್ರಶಸ್ತಿ' ಗೌರವ ಪಡೆದ HMAS Karangi ಎಂಬ ಯುದ್ಧ ನೌಕೆಯ ಅವಸೇಷ ಎಂದರಿತಾಗ ಮೈ ನವಿರೇಳುತ್ತದೆ. ಇಂತದ್ದೇ ಇನ್ನೂ ಎರಡು ಹಡಗುಗಳ ಅವಶೇಷಗಳನ್ನೂ ಮತ್ತು ಕಲ್ಲಿದ್ದಲ ಸಾಗಾಣಿಕೆಗೆ ಉಪಯೋಗಿಸಲ್ಪಟ್ಟ ಒಂದು ಒಡೆದ ಹಡಗನ್ನೂ ಸಹ ಇಲ್ಲಿ ಕಾಣ ಬಹುದು. ಹಿಂದೆ ಹೋಂ ಬುಷ್ ಬೇಯ ಈ ಪ್ರಾಂತ್ಯವನ್ನು ಕೆಲಸಕ್ಕೆ ಬಾರದ ಹಳೆಯ ಹಡಗುಗಳನ್ನು ಒಡೆದು ಹಾಕುವ ಕಾರ್ಯಾಗಾರವಾಗಿ ಬಳಸಲಾಗುತ್ತಿತ್ತಂತೆ .

ಆ ನೆನಪಿನ ಕುರುಹಾಗಿ ಪುರಾತನವಾದ ಈ ಒಡೆದ ಹಡಗುಗಳ ಅವಶೇಷಗಳನ್ನು ಇಲ್ಲೇ ಸಂರಕ್ಷಿಸಿಡಲಾಗಿದೆ .
ಒಡೆದ ಹಡಗುಗಳ ಮೇಲೆ ಬೆಳೆದು ನಿಂತಿರುವ ಮ್ಯಾಂಗ್ರೋವ್ಗಳಿಂದಾಗಿ ಅವು ಪುಟ್ಟ ನೌಕಾ ದ್ವೀಪಗಳಂತೆ ಕಾಣುತ್ತವೆ. ಆ ಸುಂದರ ದ್ವೀಪಗಳ ಪ್ರಜೆಗಳಾಗಿ ಸದಾ 'ಗಲ್ ಗಲ್ ' ಎಂದು ಹಾರಿ ನಲಿವ 'ಸಿಲ್ವರ್ ಗಲ್ ' ಹಕ್ಕಿಗಳು!
ಹಸಿರು ಹುಲ್ಲು ಹಾಸಿನ ಮೇಲೇರಿ ಗುಡ್ಡಗಳನ್ನು ಹತ್ತಿದರೆ ಪಕ್ಷಿ ನೋಟದಲ್ಲಿ ಕ್ಷಿತಿಜದ ವರೆಗೂ ಎಲ್ಲೆಲ್ಲೂ ಸ್ವರ್ಗ ಸೌಂದರ್ಯ . ಅಲ್ಲಲ್ಲಿ ನಿರ್ಮಿಸಲ್ಪಟ್ಟಿರುವ ಮಂಟಪಗಳಲ್ಲಿಯ ಆಸನಗಳು 'ವಿಶ್ರಾಂತಿ ವಿಶ್ರಾಂತಿ ' ಎಂದು ನಮ್ಮನ್ನು ಕೈ ಬೀಸಿ ಕರೆಯುತ್ತವೆ.
ಗುಡ್ಡದಿಂದ ಉರುಳಿ ಸರಿವ ಇಳಿಜಾರುಗಳಲ್ಲಿ, ಕಾಮನ ಬಿಲ್ಲಿನ ವರ್ಣಗಳು ಚದುರಿದಂತೆ ವಿವಿಧ ಬಣ್ಣದ, ವಿವಿಧ ಘಾತ್ರದ, ವಿವಿಧ ಜಾತಿಯ ಹಕ್ಕಿಗಳು! Pacific Black Duck, Eurasian Coot, Purple Swamphen, Dusky Moorhen, Lapwing, Wren, Ibis, Raven, Crested Dove, Myna, Magpies, Galah ಮುಂತಾದ ಅನೇಕ ಪಕ್ಷಿಗಳು ಒಟ್ಟೊಟ್ಟಿಗೆ ಒಗ್ಗಟ್ಟಿನಿಂದ ಮೇಯುತ್ತಿರುವ ಅದ್ಭುತವನ್ನು ಬೆರಗಿನಿಂದ ವೀಕ್ಷಿಸುತ್ತ ಬುತ್ತಿ ಬಿಚ್ಚುತ್ತಿದ್ದರೆ -

ಆಹಾ ಅದೆಂತಹ ಆನಂದ !
ಇಷ್ಟೊಂದು ವಿಧವಾದ ಹಕ್ಕಿಗಳ ಚಿತ್ರಗಳೊಂದಿಗೆ, ಅವುಗಳ ಬಗ್ಗೆ ವಿವರವಾದ ಮಾಹಿತಿಗಳನ್ನೂ ಹೊತ್ತ ಅನೇಕ ಫಲಕಗಳು ಅಲ್ಲಲ್ಲಿ ಕಂಡು ಬರುತ್ತವೆ . ಒಂದೊಂದು ಹಕ್ಕಿಯನ್ನೂ ನೋಡಿ , ಮಾಹಿತಿಗೆ ಹೋಲಿಸಿ , ಗುರ್ತಿಸಿ , ಅವುಗಳ ನಾಮಧೇಯಗಳನ್ನ ಮನದಟ್ಟು ಮಾಡಿಕೊಳ್ಳುವುದು ಮೆದುಳಿಗೆ ವ್ಯಾಯಾಮ ನೀಡುವ ಆಟವಾಗುತ್ತದೆ. ಆಟವಾಡುತ್ತಲೇ ಪಾಠ ಕಲಿಯುವುದು ಖುಷಿ ಕೊಡುವ ಸಂಗತಿಯಲ್ಲವೇ ?
( Lake Belvedere ) ಬೆಲ್ವೆಡೇರ್ ಎಂಬ ಅತಿ ಸುಂದರವಾದ ಸರೋರವರ ಅನೇಕ ಜಾತಿಯ ನೀರ ಹಕ್ಕಿಗಳು ಮೆರೆವ ಬೀಡಾಗಿದೆ . ಸರೋವರದ ನಡುಗಡ್ಡೆಯಲ್ಲಿರುವ ಎತ್ತರವಾದ ಮರಗಳಲ್ಲಿ ಕಾರ್ಮೊರಾಂಟ್ ಎಂಬ ನೀರು ಕಾಗೆಗಳು ಗೂಡು ಕಟ್ಟಿಕೊಂಡು ನಿರ್ಭಯವಾಗಿ ಬದುಕಿ ಬಾಳುತ್ತಿವೆ . ಸರೋವರದ ಪುಟಾಣಿ ದ್ವೀಪಗಳಲ್ಲಿ ಕುಳಿತು ರವಿವರ್ಮನ ಸೊಂಪು ಕೂದಲಿನ ಚಿತ್ರ ಸುಂದರಿಯರಂತೆ ಅವು ರೆಕ್ಕೆ ಬಿಚ್ಚಿ ಹರಡಿ ಬಿಸಿಲಿನಲ್ಲಿ ಒಣಗಿಸಿಕೊಳ್ಳುವ ಒಯ್ಯಾರವೇ ಒಯ್ಯಾರ . ಅಪರೂಪದ ಕಪ್ಪು ಹಂಸ ಠೀವಿಯಿಂದ ಈಜಿ ಬಂದು, ಸನಿಹದಲ್ಲಿ ನಿಂದು, ನೋಡಿ , ಹೋದ ಹೃದಯಂಗಮ ದೃಶ್ಯ ಕ್ಯಾಮರಾದಲ್ಲಿ ಮಾತ್ರವಲ್ಲದೆ ಹೃದಯದಲ್ಲೂ ಅಚ್ಚಳಿಯದ ಚಿತ್ರವಾಗಿ ಉಳಿದುಕೊಂಡುಬಿಟ್ಟಿದೆ .
ಪಾರ್ಕಿನ ಅತಿ ಎತ್ತರವಾದ ಗುಡ್ಡದ ಮೇಲೆ Treillage Tower ಎಂಬ ಜಾಲಂದರ ಗೋಪುರವನ್ನು ನಿರ್ಮಿಸಲಾಗಿದೆ. ಮೆಟ್ಟಲುಗಳನ್ನು ಹತ್ತಿ ಮೂರು ಅಂತಸ್ತಿನ ಗೋಪುರದ ಶಿಕರವನ್ನು ತಲುಪಿ, ವೀಕ್ಷಣಾ ವೇದಿಕೆಯ ಮೇಲೆ ನಿಂತು ಕಣ್ಣು ಹಾಯಿಸಿದರೆ -
ಎಲ್ಲೆಲ್ಲೂ ಅಖಂಡ ಸಸ್ಯ ರಾಶಿಯ ಹಸಿರು ಹರಹು -
ಜರತಾರಿಯಂತೆ ಥಳ ಥಳಿಸುವ ನದಿಯ ಸೊಬಗು -
ಕಣ್ಮನಕ್ಕೆ ಹಿತ ನೀಡುವಂತಹ ಮನೋಹರ ದೃಶ್ಯಗಳು.
ಗೋಪುರದ ಎದುರಲ್ಲಿ ಫ್ಫೌಂಟನ್ಗಳ ಸಾಲು ಉತ್ಸಾಹದ ಚಿಲುಮೆಗಳಾಗಿ ಚಿಮ್ಮಿ ಕುಣಿಯುತ್ತವೆ .
ಪ್ರಪಂಚದಲ್ಲೇ ಮೊಟ್ಟಮೊದಲ ಬಾರಿಗೆ ಪರ್ಶಿಯ ದೇಶದ ಮಹಾನ್ ಚಕ್ರವರ್ತಿ ಸೈರಸ್ ಎಂಬಾತ ಮನುಷ್ಯ ಜನಾಂಗದ ಹಕ್ಕುಗಳು, ಅಧಿಕಾರಗಳು ಮತ್ತು ಉತ್ತಮ ನಡವಳಿಕೆಯ ಬಗ್ಗೆಯ ಶಾಸನವನ್ನು ಪ್ರಕಟಿಸಿದ್ದನು. ಮಾನವ ಹಕ್ಕುಗಳ ಈ ಶಾಸನದ 2532ನೆ ವಾರ್ಷಿಕೋತ್ಸವದ ಸಂದರ್ಬದಲ್ಲಿ ಆಸ್ಟ್ರೇಲಿಯ ದೇಶದ ಸಾಂಸ್ಕೃತಿಕ ವೈವಿಧ್ಯತೆಯನ್ನು ಕೊಂಡಾದುವುದರ ಸಲುವಾಗಿ ಆ ಮಹಾನುಬಾವನ ಉಬ್ಬು ಶಿಲ್ಪವನ್ನು ಪಾರ್ಕಿನಲ್ಲಿ ಸ್ಥಾಪಿಸಲಾಗಿದೆ.
ಈ ಸುಂದರ ಶಿಲ್ಪಕಲಾಕೃತಿಯು ಆಸ್ಟ್ರೇಲಿಯಾದ The Persian Cultural Foundation ಎಂಬ ಸಂಸ್ಥೆ ಸಿಡ್ನಿ ನಗರಕ್ಕೆ ಕೊಟ್ಟಿರುವ ಕಾಣಿಕೆ .
ಮಕ್ಕಳಲ್ಲಿ ಮಾತ್ರವಲ್ಲದೆ ಹಿರಿಯರಲ್ಲೂ ಕುತೂಹಲ ಮೂಡಿಸುವಂತಹ ಒಂದು ನೆರಳು ಗಡಿಯಾರವನ್ನು ಹಚ್ಚ ಹಸಿರಿನ ಮೈದಾನದ ನಡುವೆ ನಿರ್ಮಿಸಲಾಗಿದೆ .
ಇಷ್ಟೊಂದು ವಿಧವಾದ ಹಕ್ಕಿಗಳ ಚಿತ್ರಗಳೊಂದಿಗೆ, ಅವುಗಳ ಬಗ್ಗೆ ವಿವರವಾದ ಮಾಹಿತಿಗಳನ್ನೂ ಹೊತ್ತ ಅನೇಕ ಫಲಕಗಳು ಅಲ್ಲಲ್ಲಿ ಕಂಡು ಬರುತ್ತವೆ . ಒಂದೊಂದು ಹಕ್ಕಿಯನ್ನೂ ನೋಡಿ , ಮಾಹಿತಿಗೆ ಹೋಲಿಸಿ , ಗುರ್ತಿಸಿ , ಅವುಗಳ ನಾಮಧೇಯಗಳನ್ನ ಮನದಟ್ಟು ಮಾಡಿಕೊಳ್ಳುವುದು ಮೆದುಳಿಗೆ ವ್ಯಾಯಾಮ ನೀಡುವ ಆಟವಾಗುತ್ತದೆ. ಆಟವಾಡುತ್ತಲೇ ಪಾಠ ಕಲಿಯುವುದು ಖುಷಿ ಕೊಡುವ ಸಂಗತಿಯಲ್ಲವೇ ?
( Lake Belvedere ) ಬೆಲ್ವೆಡೇರ್ ಎಂಬ ಅತಿ ಸುಂದರವಾದ ಸರೋರವರ ಅನೇಕ ಜಾತಿಯ ನೀರ ಹಕ್ಕಿಗಳು ಮೆರೆವ ಬೀಡಾಗಿದೆ . ಸರೋವರದ ನಡುಗಡ್ಡೆಯಲ್ಲಿರುವ ಎತ್ತರವಾದ ಮರಗಳಲ್ಲಿ ಕಾರ್ಮೊರಾಂಟ್ ಎಂಬ ನೀರು ಕಾಗೆಗಳು ಗೂಡು ಕಟ್ಟಿಕೊಂಡು ನಿರ್ಭಯವಾಗಿ ಬದುಕಿ ಬಾಳುತ್ತಿವೆ . ಸರೋವರದ ಪುಟಾಣಿ ದ್ವೀಪಗಳಲ್ಲಿ ಕುಳಿತು ರವಿವರ್ಮನ ಸೊಂಪು ಕೂದಲಿನ ಚಿತ್ರ ಸುಂದರಿಯರಂತೆ ಅವು ರೆಕ್ಕೆ ಬಿಚ್ಚಿ ಹರಡಿ ಬಿಸಿಲಿನಲ್ಲಿ ಒಣಗಿಸಿಕೊಳ್ಳುವ ಒಯ್ಯಾರವೇ ಒಯ್ಯಾರ . ಅಪರೂಪದ ಕಪ್ಪು ಹಂಸ ಠೀವಿಯಿಂದ ಈಜಿ ಬಂದು, ಸನಿಹದಲ್ಲಿ ನಿಂದು, ನೋಡಿ , ಹೋದ ಹೃದಯಂಗಮ ದೃಶ್ಯ ಕ್ಯಾಮರಾದಲ್ಲಿ ಮಾತ್ರವಲ್ಲದೆ ಹೃದಯದಲ್ಲೂ ಅಚ್ಚಳಿಯದ ಚಿತ್ರವಾಗಿ ಉಳಿದುಕೊಂಡುಬಿಟ್ಟಿದೆ .
ಪಾರ್ಕಿನ ಅತಿ ಎತ್ತರವಾದ ಗುಡ್ಡದ ಮೇಲೆ Treillage Tower ಎಂಬ ಜಾಲಂದರ ಗೋಪುರವನ್ನು ನಿರ್ಮಿಸಲಾಗಿದೆ. ಮೆಟ್ಟಲುಗಳನ್ನು ಹತ್ತಿ ಮೂರು ಅಂತಸ್ತಿನ ಗೋಪುರದ ಶಿಕರವನ್ನು ತಲುಪಿ, ವೀಕ್ಷಣಾ ವೇದಿಕೆಯ ಮೇಲೆ ನಿಂತು ಕಣ್ಣು ಹಾಯಿಸಿದರೆ -
ಎಲ್ಲೆಲ್ಲೂ ಅಖಂಡ ಸಸ್ಯ ರಾಶಿಯ ಹಸಿರು ಹರಹು -
ಜರತಾರಿಯಂತೆ ಥಳ ಥಳಿಸುವ ನದಿಯ ಸೊಬಗು -
ಕಣ್ಮನಕ್ಕೆ ಹಿತ ನೀಡುವಂತಹ ಮನೋಹರ ದೃಶ್ಯಗಳು.
ಗೋಪುರದ ಎದುರಲ್ಲಿ ಫ್ಫೌಂಟನ್ಗಳ ಸಾಲು ಉತ್ಸಾಹದ ಚಿಲುಮೆಗಳಾಗಿ ಚಿಮ್ಮಿ ಕುಣಿಯುತ್ತವೆ .
ಮಕ್ಕಳಲ್ಲಿ ಮಾತ್ರವಲ್ಲದೆ ಹಿರಿಯರಲ್ಲೂ ಕುತೂಹಲ ಮೂಡಿಸುವಂತಹ ಒಂದು ನೆರಳು ಗಡಿಯಾರವನ್ನು ಹಚ್ಚ ಹಸಿರಿನ ಮೈದಾನದ ನಡುವೆ ನಿರ್ಮಿಸಲಾಗಿದೆ .
ಸಂಯುಕ್ತ ರಾಷ್ಟ್ರ ಸಂಸ್ಥೆಯು 1986 ನೆ ವರುಷವನ್ನು ವಿಶ್ವಶಾಂತಿಯ ವರುಷವಾಗಿ ಗುರ್ತಿಸಿದ ಸಂದರ್ಬದಲ್ಲಿ, ಆ ಸಂಭ್ರಮವನ್ನು ಕೊಂಡಾಡುವುದರ ಸಲುವಾಗಿ ಒಂದು ಶಾಂತಿ ಸ್ಮಾರಕವನ್ನು ಬೈ ಸೆಂಟಿನಿಯಲ್ ಪಾರ್ಕಿನಲ್ಲಿ ಸ್ಥಾಪಿಸಲಾಗಿದೆ. ಈ ಶಿಲ್ಪದಲ್ಲಿ ಕಾಣಿಸಿಕೊಳ್ಳುವ ಮೂರು ಗಂಟೆಗಳೂ ಬಾರಿಸದಂತೆ ಮುಚ್ಚಳ ಹಾಕಿ ತಡೆಯಲ್ಪಟ್ಟಿವೆ . ಪ್ರಪಂಚದಲ್ಲಿ ಎಂದು ಶಾಶ್ವತವಾಗಿ ಶಾಂತಿಯು ನೆಲೆಸುವುದೋ ಆ ಸುದಿನದಂದು ಈ ಶಿಲ್ಪದಲ್ಲಿರುವ ಗಂಟೆಗಳು ಮೊಳಗುತ್ತವೆ ಎಂಬ ಹೇಳಿಕೆಯನ್ನು ನೀಡಿದ್ದಾನೆ ಈ ನವೀನ ಕಲಾಶಿಲ್ಪವನ್ನು ರಚಿಸಿರುವ ಶಿಲ್ಪಿ ( Mike Kitching) ಮೈಕ್ ಕಿಚಿಂಗ್ ಎಂಬಾತ.
(Sydney Bicentennial Park) ಸಿಡ್ನಿ ಬೈ ಸೆಂಟಿನಿಯಲ್ ಪಾರ್ಕ್ ನಿಸರ್ಗ ಪ್ರೇಮಿಗಳಿಗೂ , ವಿಹಾರ ಪ್ರಿಯರಿಗೂ , ಆರೋಗ್ಯ ಸ್ಮರಣೆಯುಳ್ಳ ವ್ಯಾಯಾಮ ನಿಷ್ಠೆಯುಳ್ಳವರಿಗೂ, ತಾಯ್ ಚೀ, ಯೋಗಾ, ಧ್ಯಾನ ಮಾರ್ಗಗಳನ್ನು ಹಿಡಿದಿರುವವರಿಗೂ ಅಚ್ಚುಮ್ಮೆಚ್ಚಿನ ತಾಣವಾದರೆ , ಶಾಲೆಯ ಮಕ್ಕಳಿಗೆ ಸ್ವಾರಸ್ಯಕರವಾದ ಸೈಕ್ಷಣಿಕ ಕೇಂದ್ರವೂ ಆಗಿದೆ. ಚಿಟ್ಟೆಗಳಂತೆ ಹಾರಿ ಬಂದು ನಿಸರ್ಗದ ಮಡಿಲಲ್ಲಿ ಕುಳಿತು ಪರಿಸರ ವಿಜ್ಞಾನ ಅಭ್ಯಸಿಸುವ ಮಕ್ಕಳ ಮುಗ್ಧ ಮೊಗಗಳಲ್ಲಿತಾನೇ ಅದೆಷ್ಟು ಸಂತೋಷ ! ವಿಸ್ಮಯ !
ಪಾರ್ಕಿನ ಸ್ವಚ್ಛತೆ ಮತ್ತು ಸುರಕ್ಷತೆಯ ಹೊಣೆ ಹೊತ್ತಿರುವ ಸಿಬ್ಬಂದಿಗಳಿಗೆ ಎಷ್ಟು ಅಭಿನಂದನೆಗಳನ್ನು ಸಲ್ಲಿಸಿದರೂ ಸಾಲದು !
ಪ್ರತಿಯೊಂದು ಅಂಗುಲದಲ್ಲೂ ಜೀವ ಚಿಮ್ಮಿ ತುಳುಕುತ್ತಿರುವ ಈ ಸುಂದರ ಬನದ ಸೊಬಗನ್ನು ಅನುಭವಿಸುತ್ತಿದ್ದರೆ ನಮ್ಮ ಚೈತನ್ಯವು recharge ಆಗಿ ದೇಹಮನಗಳಲ್ಲಿ ಹೊಸ ಹುರುಪು ತುಂಬಿ ಹರಿಯುತ್ತದೆ .
ಇಂದು ಎಲ್ಲರ ಮನರಂಜಿಸುವ ಸುಂದರ ವನವಾಗಿರುವ ಸಿಡ್ನಿ ಬೈ ಸೆಂಟಿನಿಯಲ್ ಪಾರ್ಕ್ ಹಿಂದೊಮ್ಮೆ ನಗರದ ಕಸವನ್ನೆಲ್ಲ ಸುರಿವ ತಿಪ್ಪೆಯಾಗಿದ್ದಿತು ಎಂಬುದನ್ನು ನಂಬುವುದು ಅಸಾಧ್ಯವಾಗಿದೆ .
ಪರಿಸರ ಸ್ಮರಣೆಯೊಂದಿಗೆ ತುಸು ಮನುಷ್ಯ ಯತ್ನವೂ ಕೂಡಿದರೆ ಪ್ರಕೃತಿ ಮಾತೆಯು ತನ್ನ ಕರುಣಾ ಕಟಾಕ್ಷದ ಮಳೆಯನ್ನೇ ಗರೆದು ಎಷ್ಟರ ಮಟ್ಟಿಗೆ ಸಹಕರಿಸುತ್ತಾಳೆ ಎಂಬುದಕ್ಕೆ , ನಾಗರಿಕರ ದೇಹಮನ ಆರೋಗ್ಯವನ್ನು ಪೋಷಿಸುತ್ತಿರುವ 'ಸಿಡ್ನಿ ಬೈ ಸೆಂಟಿನಿಯಲ್ ಪಾರ್ಕ್' ಎಂಬ ಭೂಲೋಕ ಸ್ವರ್ಗವೇ ಸಾಕ್ಷಿಯಾಗಿದೆ !
ಸಿಡ್ನಿ ಬೈ ಸೆಂಟಿನಿಯಲ್ ಪಾರ್ಕಿನ ಸೊಬಗನ್ನು ಕಂಡು ಆನಂದಿಸುತ್ತಿರುವ ವೇಳೆಯಲ್ಲಿ, 'ಪ್ರಕೃತಿ ದೇವಿಯನ್ನು ಸಂರಕ್ಷಿಸುವವರು ಸಂರಕ್ಷಿಸಲ್ಪಡುತ್ತಾರೆ ' ಎಂಬ ಮಾತು ಅದೆಷ್ಟು ಸತ್ಯಅನ್ನಿಸುತ್ತದೆ !