Wednesday, September 5, 2018

ಮೂರು ಮರಿ ಗೂಬೆ ! Three Little Owls!

ಮೂರು ಮರಿ ಗೂಬೆ !
ಬಣ್ಣ ಬಣ್ಣ ಗೂಬೆ,
ಮೂರು ಮರಿ ಗೂಬೆ! 
ಆಟವಾಡಲೆಂದೆ, 
ಅಡವಿ ಸೇರಿದವಂತೆ.  
ಬಣ್ಣ ತುಂಬಿದೆಲೆ, 
ಬಲಿತ ಕಪ್ಪು ರೆಂಬೆ. 
ಮೇಲೆ ನಿಂತ ಗೂಬೆ, 
ನೀಲ ವರ್ಣ  ಗೂಬೆ!  
ಅದರ ತಲೆಯ ಮೇಲೆ, 
ಹಚ್ಚ ಹಸಿರು ಗೂಬೆ!  
ಅಕ್ಕಪಕ್ಕ ಚಿಟ್ಟೆ! 
ಮೋಡ ತುಂಬ ಮಳೆ! 
ಒಂಟಿ ಕಾಲಲಿ ನಿಂದೆ, 
" ಸರ್ಕಸ್ ಆಟ ವಲ್ಲೆ !"
ಎಂದ ಹಳದಿ ಗೂಬೆ,  
ಹಾರಿ ಹೋಯಿತಂತೆ !
--------------------------------------------------
The Three Little OWLS!

Three little Owls,
Colourful little Owls, 
Went to play and wander,
In the forest yonder.
Stood the tall dark trees,
Thick with colourful leaves.
Blue owl with a hop,
Perched on the top.
Green owl on his crown,
Made him slightly frown.
Butterflies fluttered 'flip flop',
Clouds held the rain drops.
 Balancing on one leg,
'Circus isn't for me I beg'!
Said the tiny yellow Owl,
Flying away to his tree hole!
-------------------------------------------------------

Saturday, September 1, 2018

ರತ್ನ ಕಂಬಳಿ ಹೇಳಿದ ಕಥೆ ! An ornate rug tells a story!

ರತ್ನ ಕಂಬಳಿ ಹೇಳಿದ ಕಥೆ !
ಇಕ್ಷ್ವಾ ಬಹು ಚೂಟಿಯಾದ ಹುಡುಗ. ನಿಂತಲ್ಲಿ ನಿಲ್ಲದೆ ಸದಾ ತುಂಟತನ ಮಾಡುತ್ತಿದ್ದನು. ಮುತ್ತಜ್ಜನನ್ನು ಕಂಡುಬ್ಬಿಟ್ಟರೆ 'ಕಥೆ ಹೇಳು ಮುತ್ತು ತಾತ' ಎಂದು ಪೀಡಿಸುತ್ತಿದ್ದನು. ಮುತ್ತಜ್ಜನಿಗೆ ಕಥೆ ಹೇಳಿ ಹೇಳಿ ಸಾಕಾಗುತ್ತಿತ್ತು. ಒಮ್ಮೆ ಹೀಗೆಯೇ ಇಕ್ಷ್ವಾ ಕಥೆಗಾಗಿ ಪೀಡಿಸಿದಾಗ ಮುತ್ತಜ್ಜನ ಬತ್ತಳಿಕೆಯಲ್ಲಿದ್ದ ಕಥೆಗಳೆಲ್ಲ ಖಾಲಿಯಾಗಿದ್ದವು. ಹೊಸ ಕಥೆ ಹೆಣೆಯಲು ಯೋಚಿಸುತ್ತಿದ್ದ ಮುತ್ತಜ್ಜನ ದೃಷ್ಟಿ ನೆಲದ ಮೇಲೆ ಹಾಸಿದ್ದ ರತ್ನ ಕಂಬಳಿಯ ಮೇಲೆ ಹರಿಯಿತು. ರತ್ನ ಕಂಬಳಿಯ ಮೇಲೆ ಚಿತ್ರ ವಿಚಿತ್ರವಾದ ವಿನ್ಯಾಸಗಳು ಕಂಡು ಬಂದವು. 
" ಮುತ್ತು ತಾತ! ಬೇಗ ಹೇಳು!" ಎಂದು ಇಕ್ಷ್ವಾ ಅವಸರಪಡಿಸಿದನು. 
" ಸ್ವಲ್ಪ ಇರೋ ಇಕ್ಕು! ರತ್ನ ಕಂಬಳಿ ಕಥೆ ಹೇಳ್ತಿದೆ ನೋಡು! ಸುಮ್ನೆ ಕೇಳು!" ಸೋಪಾದಿಂದ ಬಾಗಿ ಕುಳಿತು ಕಂಬಳಿಯನ್ನು ನಿಟ್ಟಿಸುತ್ತ ಉತ್ತರಿಸಿದರು ಮತ್ತಜ್ಜ. 
" ಹೋಗು ಮುತ್ತು ತಾತ! ರತ್ನ ಕಂಬಳಿ ಎಲ್ಲಾದ್ರೂ ಮಾತಾಡುತ್ತೆಯೇ? " ಎಂದನು  ಇಕ್ಷ್ವಾ.  
" ಹೂಂ ಮತ್ತೆ! ಒಳ್ಳೆ ಕಥೆಯನ್ನೇ ಹೇಳ್ತಿದೆ ಕೇಳು!" 
" ನನಗೇನೂ ಕೇಳಿಸ್ತಿಲ್ಲ! ಅದು ಏನ್ ಕಥೆ ಹೇಳ್ತಿದೆ ತಾತ? "
" ತಡಿ! ತಡಿ! ಮೊದ್ಲು ಅದು ಹೇಳೋ ಕಥೆಯನ್ನ ಪೂರ್ತಿ ಕೇಳಿಸ್ಕೊಳ್ಳೋಣ!" ಎಂದರು ಮುತ್ತಜ್ಜ. 
" ರತ್ನ ಕಂಬಳಿ ಹೇಳೋ ಕಥೆಯನ್ನ ನನಗೂ ಹೇಳ್ತಿಯಾ ಮುತ್ತು ತಾತ? "
"ಆಯಿತು! ಆಯಿತು! ಇನ್ನೇನು ಕಥೆ ಮುಗೀತಾ ಬಂತು! ಹೇಳ್ತಿನಿ ಕೇಳು!" ಎಂದ ಮುತ್ತಜ್ಜ ನಿಮಿಷಗಳನಂತರ ಸೋಪಾದ ಮೇಲೆ ನೆಟ್ಟಗೆ ಒರಗಿ ಕುಳಿತರು. ಇಕ್ಷ್ವಾ ಅವರ ತೊಡೆಯ ಮೇಲೆ ಹತ್ತಿ ಕುಳಿತು ರತ್ನ ಕಂಬಳಿ ಹೇಳಿದ ಕಥೆಯನ್ನು ಆಲಿಸಲು ಸಿದ್ಧನಾದನು.
ಮುತ್ತು ತಾತ ಕಥೆಯನ್ನು ಶುರು ಮಾಡಿದರು. 
" ಒಂದಾನೊಂದು ಕಾಲದಲ್ಲಿ ಅಶ್ವವನವೆಂಬ ಒಂದು ಕಾಡಿತ್ತು. ಆ ಕಾಡಿನಲ್ಲಿ ಅನೇಕ ಪ್ರಾಣಿಗಳಿದ್ದವು. ಅವುಗಳ ಜೊತೆಗೆ  ಹೇರಳವಾದ ಕಾಡು ಕುದುರೆಗಳೂ ವಾಸವಾಗಿದ್ದವು. 


ಒಮ್ಮೆ ಬೇಟೆಗಾಗಿ ಅಶ್ವವನಕ್ಕೆ ಹೋದ ಆ ರಾಜ್ಯದ ಅರಸನು ಕಾಡು ಕುದುರೆಗಳ ಹಿಂಡನ್ನು ಕಂಡನು. ಅವುಗಳ ಪೈಕೆ ಸುಂದರವಾದ ಕೆಂಪು ಬಣ್ಣದ ಒಂದು ಕುದುರೆ ಮರಿ ಇದದ್ದನ್ನು ಕಂಡನು. 


ಕೂಡಲೇ ಅವನಿಗೆ ತನ್ನ ಕುಮಾರನ ನೆನಪಾಯಿತು. ರಾಜಕುಮಾರನಿಗೆ ಪಕ್ಷಿ ಪ್ರಾಣಿಗಳೆಂದರೆ ಬಹಳ ಇಷ್ಟ. 


ಆದ್ದರಿಂದ ಅರಸನು ಕೆಂಪು ಕುದುರೆಮರಿಯನ್ನು ಹಿಡಿದು ತಂದು ರಾಜಕುಮಾರನಿಗೆ ಉಡುಗೊರೆಯಾಗಿ ಕೊಟ್ಟನು. ರಾಜಕುಮಾರನು ಅಪರೂಪದ ಕೆಂಪು ಕುದುರೆಮರಿಗೆ ಕೆಂಪರಾಜನೆಂದು ನಾಮಕರಣ ಮಾಡಿದನು.


ಪ್ರತಿ ದಿನವೂ ರಾಜಕುಮಾರನು ಕೆಂಪರಾಜನ ಮೇಲೆ ಕುಳಿತು ಸವಾರಿ ಮಾಡುತ್ತಾ  ವನವನ್ನೆಲ್ಲ ಸುತ್ತಾಡಿಕೊಂಡು ಬಂದನು.  
ವನದಲ್ಲಿ ಜಿಂಕೆಗಳು ನೆಗೆದಾಡಿ ಆಟವಾಡುತ್ತಿದ್ದವು.  


ಅರಳಿದ್ದ ಹೂವುಗಳು ಚೆಲ್ಲಿದ  ಸುಘಂದ ಎಲ್ಲೆಲ್ಲೂ ಹರಡಿತ್ತು.  


ಮನ ರಂಜಿಸುವ ಹಕ್ಕಿಗಳ ಚಿಲಿಪಿಲಿ ಗಾನ ಹೋದೆಡೆಯೆಲ್ಲ ಕೇಳಿಸಿತು. 


ಆನಂದದಿಂದ ಎಲ್ಲವನ್ನೂ ನೋಡುತ್ತ ಸಾಗುತ್ತಿದ್ದ ರಾಜಕುಮಾರ ಬಂಡೆಯಮೇಲೆ ಕುಳಿತಿದ್ದ ಭಯಂಕರವಾದ ಬಿಳಿ ಬಣ್ಣದ ಹೆಬ್ಬುಲಿಯನ್ನು ಗಮನಿಸಲೇ ಇಲ್ಲ. ಹುಲಿ ಒಮ್ಮೆ ಗುರುಗುಟ್ಟಿತು. 


ರಾಜಕುಮಾರ ಎಚ್ಚರಗೊಂಡು ಕೈಯಲ್ಲಿ ಹಿಡಿದಿದ್ದ ಈಟಿಯನ್ನು ಮೇಲಕ್ಕೆತ್ತಿದನು. 


ಅಷ್ಟರಲ್ಲಿ ಹುಲಿಯು ಅವನ ಮೇಲೆ ಜಿಗಿದೇಬಿಟ್ಟಿತು. 
ತಕ್ಕ ಸಮಯಕ್ಕೆ ಕೆಂಪರಾಜ ತನ್ನ ಬಲಿಷ್ಠವಾದ ಮುಂಗಾಲುಗಳನ್ನೆತ್ತಿ  ರಾಜಕುಮಾರನಮೇಲೆರಗುತ್ತಿದ್ದ ಹುಲಿಯ ಎದೆಗೆ ಬಲವಾಗಿ ಒದ್ದಿತು. ನೋವು  ತಡೆಯಲಾರದ ಹುಲಿ ಹೆದರಿ ಹಿಂದಿರುಗಿ ಕಾಡಿನೊಳಕ್ಕೆ ಓಡಿ ಕಣ್ಮರೆಯಾಯಿತು. 
ಕೆಂಪರಾಜನ ಉಪಕಾರವನ್ನು ರಾಜಕುಮಾರ ಎಂದಿಗೂ ಮರೆಯಲೇ ಇಲ್ಲ. 


ರಾಜಕುಮಾರನು ಬೆಳೆದಂತೆ ಅವನಿಗೆ ಅರ್ಹವಾದ ವಿಶೇಷ ಶಿಕ್ಷಣಗಳನ್ನು ನೀಡಲಾಯಿತು.  


ಕೆಂಪರಾಜನಿಗೂ ವಿಶೇಷವಾದ  ತರಬೇತಿ ನೀಡಲಾಯಿತು. 


ಕ್ರಮೇಣ ರಾಜಕುಮಾರನಿಗೆ ವಿಜೃಂಭಣೆಯಿಂದ ಪಟ್ಟಾಭಿಷೇಕ ನಡೆಯಿತು. ರಾಜಕುಮಾರ ತನ್ನ ನೆಚ್ಚಿನ ಕೆಂಪು ಕುದುರೆಗೆ ಪಟ್ಟ ಕಟ್ಟಿದನು. 


ಕೆಂಪರಾಜನನ್ನ ತನ್ನ ಪಟ್ಟದ ಕುದುರೆಯನ್ನಾಗಿ ಮಾಡಿಕೊಂಡನು." ಎಂದು ಮುತ್ತಜ್ಜ ಕಥೆಯನ್ನು  ಮುಗಿಸಿದರು. 
 ಸ್ವಾರಸ್ಯದಿಂದ ಕಥೆಯನ್ನು ಕೇಳುತ್ತಿದ್ದ ಇಕ್ಷ್ವಾ, " ಆಮೇಲೆ ?" ಎಂದನು. 
" ಆಮೇಲೆ!? ಕಥೆ ಮುಗೀತು ಕಣೋ ಇಕ್ಕು!" ಎಂದರು ಮುತ್ತಜ್ಜ. 


ರತ್ನ ಕಂಬಳಿಯನ್ನು ಬಗ್ಗಿ ಬಗ್ಗಿ ನೋಡಿ ಪರಿಶೀಲಿಸಿದನು ಇಕ್ಷ್ವಾ. 
ಅದರಲ್ಲಿ ಕೆಂಪು ಕುದುರೆ ಮಾತ್ರವೇ? ಸಿಂಹ, ನರಿ, ಕಪ್ಪು ಕುದುರೆ, ಬಿಳಿ ಕುದುರೆ, ಕಂದುಬಣ್ಣದ ಕುದುರೆ, ಮೊಲ, ದೇವತೆಗಳು  ಇನ್ನೂ ಏನೇನೋ ಚಿತ್ರಗಳು ಕಂಡುಬಂದವು! 
" ಕಂಬಳಿಯನ್ನ ಕೇಳಿ ಅವುಗಳ ಕಥೆಯನ್ನೂ ನನಗೆ ಹೇಳು ಮುತ್ತು ತಾತ!" ಎಂದು ಉತ್ಸಾಹದಿಂದ ಮುತ್ತಜ್ಜನನ್ನು ಕೇಳಿದನು ತುಂಟ ಇಕ್ಷ್ವಾ .
"ಅಯ್ಯೋ ಶಿವನೇ !" ಎಂದು ನಕ್ಕರು ಮುತ್ತು ತಾತ. 
----------------------------------------------------------------------------------------------------------

An Ornate Rug tells a Story!
Ikshva was a frisky lad. He was always active, running, playing, jumping, and rolling. When 
great grandfather was around, Ikshva always pestered him to tell him stories.

"Grandpa! Grandpa! A story! Now!" he would go.

Great grandfather told Ikshva many, many stories. But Ikshva kept demanding more and more.

One day, when Ikshva pestered him for yet another story, poor grandpa fell silent. All the stories in his storehouse were exhausted, and there were none left! Grandpa stared at the floor wondering what new story to weave for Ikshva. His eyes fell on the beautifully woven rug spread on the floor.

"Grandpa! Grandpa! A story! Now!" whined Ikshva.

" Shhh! " said Grandpa, pointing to the rug "Wait! The rug is telling me a story!"

" What!? " cried Ikshva, "Does the rug talk?"

" Yes. It does - if you listen carefully."

 "I can hear nothing!" cried Ikshva pricking up his ears.

"Shhh...Wait! It's almost completed telling me the story."

After staring at the rug intently for a while, Grandpa sat back on the couch.  Immediately,  Ikshva clambered onto his lap and demanded,  "Now, tell me the story the rug told you!''

Grandpa began, "Once upon a time, there was a great forest called Ashvavana. In the forest lived all kinds of animals, both gentle and fierce. Along with them lived a herd of wild horses.
Once, the King of that country came to Ashvavana for hunting.


He came upon a herd of horses. Among the horses, he saw a handsome red pony!


The King thought of his Little Prince who had a great love for birds and animals.



"The red pony would make a great gift for my Little Prince!" thought the King happily, and had his men capture the pony, without hurting it.

The Little Prince was thrilled to get a rare red pony all for himself and named it Kemparaja.
The prince loved Kemparaja dearly and soon learnt to ride it.



 Together they roamed around in the woods every day.



They watched the deer play in the meadows.



They enjoyed the fragrance of different flowers wafting in the air.



They stopped to listen to songs and merry calls of a great variety of birds.

Once, while riding through the forest, the Prince did not notice a white tiger resting on a nearby rock.



The tiger roared suddenly.

The Prince jumped in fright but quickly drew his spear out to throw at the tiger.



However,  the Tiger was too quick and pounced on him.

At that moment, the brave Kemparaja raised his front legs high and kicked the tiger hard on its chest.

The tiger was thrown back and snarled in pain. The kick was so powerful that the tiger disappeared into the bushes in fright.

The Prince was saved! He would never forget Kemparaja's brave deed!

As the Prince grew up he was given all kinds of education needed for a prince.



Along with the Prince,  Kemparaja was also given special training.



In time, The Prince was crowned as the new King.

He got Kemparaja also crowned at the same time.



Kemparaja, the brave and wonderful red pony, became The Royal Horse of the Kingdom." 

ended Grandpa.

"........and then?" asked Ikshva, with great interest.

"And then nothing!" laughed Grandpa " That is the end of the story."

Ikshva bent down and looked at the rug very closely. 



He could see the red horse, the Prince, and the white tiger. He also found a lion, a fox, a white horse, a black horse, a brown horse, few rabbits, Angels, plants, creepers, and many other beautiful things. 

" Grandpa! Grandpa! Ask the Rug to tell us more stories about those other creatures too!" the insatiable  Ikshva started pestering all over again!

" Oh, dear God!" laughed Grandpa, hugging him.
---------------------------------------------------------------------------------------