Sunday, May 19, 2019

ಸಮಯದ ಬೆನ್ನೇರಿ .... / Riding on the back of Time"
ಯಾಯ್! ವೀಕ್ ಎಂಡ್! "
ಶಾಲೆಯಿಂದ ಹಿಂದಿರುಗಿದ ನಂದನಾ ಮತ್ತು ಅಭಿನಂದನ್ ಉತ್ಸಾಹದಿಂದ ಕುಣಿದು ಕುಪ್ಪಳಿಸದರು
"ಅಮ್ಮ! ನಾಳೆ 'ಅವೆಂಜರ್ಸ್ ಎಂಡ್ ಗೇಮ್' ಮಾರ್ನಿಂಗ್ ಷೋಗೆ ಹೋಗೋಣ? " 
"ಸಂಜೆ 'ಡ್ರ್ಯಾಗನ್ ಗ್ಲಾಸ್ ಎಸ್ಕೇಪ್ ರೂಮ್' ಗೆ ಹೋಗಬೇಕು! ಸವಾಲುಗಳನ್ನ ಎದುರಿಸಿ ಮಿಸ್ಟ್ರೀಸ್ ಸಾಲ್ವ್ ಮಾಡೋದು ಸಖತ್  ಫನ್ ಅಂತ ನಮ್ಮ ಫ್ರೆಂಡ್ಸ್ ಎಲ್ಲ ಹೇಳಿದ್ರು!" 
ತನ್ನ ಅವಳಿ ಮಕ್ಕಳ ಉತ್ಸಾಹ, ಲವಲವಿಕೆ ಕಂಡು ಅಮ್ಮ ಕಿರುನಗೆ ಬೀರಿದಳು.  
"ಅಪ್ಪ ಈಗಾಗಲೇ ನಿಮ್ಮ ಔಟಿಂಗ್ ಬಗ್ಗೆ ಒಂದು ಪ್ಲ್ಯಾನ್ ಇಟ್ಟಿದ್ದಾರೆ !" ಎಂದು ಅಮ್ಮ ನುಡಿದಾಗ ಮಕ್ಕಳಿಗೆ ಖುಷಿಯಾಯಿತು
" ಹೌದಾ? ಹೌ ಸ್ವೀಟ್ಏನು ಪ್ಲಾನ್ ಅಮ್ಮ?" 
ಅದನ್ನ ಅವರೇ ಹೇಳ್ತಾರೆ!"
"ವಾವ್! ಸಸ್ಪೆನ್ಸಾ?" 
 ನಂದನಾ ಮತ್ತು ಅಭಿನಂದನ್ ಕೈಕಾಲು ತೊಳೆದುಕೊಂಡು ಬಟ್ಟೆ ಬದಲಿಸಿ ಬಂದಾಗ ಅಪ್ಪ ಆಫೀಸಿನಿಂದ ಹಿಂದಿರುಗಿದ್ದರು
"ನಾಳೆ ಏನೋ ಎಕ್ಸೈಟಿಂಗ್ ಪ್ಲಾನ್ ಇದೆಯಂತೆ? ! ಎಲ್ಲಿಗೆ ಹೋಗ್ತಿದ್ದೀವಿ ಅಪ್ಪಾ?"
ಕುತೂಹಲ ತಡೆಯಲಾರದೆ ಪ್ರಶ್ನಿಸಿದಳು ನಂದನಾ
"ಹೌದಮ್ಮ! ಹತ್ತನೇ ಶತಮಾನದಲ್ಲಿ ಪ್ರಖ್ಯಾತವಾಗಿದ್ದ ವೆಪ್ಪೂರ್ ಎಂಬ ಪಟ್ಟಣಕ್ಕೆ ನಮ್ಮ ದಂಡ ಯಾತ್ರೆ ನಡೆಯಲಿದೆ!" ಎಂದು ನಕ್ಕರು ಅಪ್ಪ
"ವೆಪ್ಪೂರ್! ಹೆಸರೇ ಕೇಳಿಲ್ಲ!" ಎಂದ ಅಭಿನಂದನ್
"ಎರೆಯಪ್ಪ ನೀತಿಮಾರ್ಗನೆಂಬ ರಾಜನು ಗಂಗವಾಡಿ ತೊಂಬತ್ತಾರು ಸಾವಿರವನ್ನು ಒಂದೇ ಕೊಡೆಯ ಕೆಳಗೆ ಆಳುತ್ತಿದ್ದ. ಆಗ ರಾಜ್ಯದ  ವೆಪ್ಪೂರ್ ಮತ್ತು ಸುತ್ತಮುತ್ತಲಿನ  ಪ್ರಾಂತ್ಯವನ್ನು ನಾಗತ್ತರ ನಿರ್ವಹಿಸುತ್ತಿದ್ದಅದಕ್ಕೆ ಸಾಕ್ಷಿಯಾಗಿದ್ದ  ದೇಗುಲಗಳು, ವೀರಗಲ್ಲುಗಳು, ಕೋಟೆ, ಶಾಸನಗಳು ಎಲ್ಲ ಇನ್ನೂ ಅಲ್ಲೇ ಉಳಿದಿವೆ! ಅದನ್ನೆಲ್ಲ ನೋಡಬೇಡವೇ?" ಎಂದರು ಅಪ್ಪ
"ಅಯ್ಯೋ! ಹಾಳು  ಬಿದ್ದ ಊರನ್ನು ನೋಡೋದ್ರಲ್ಲಿ ಏನು ಮಜ ಅಪ್ಪ? ನಮ್ಮ ವೀಕ್ ಎಂಡ್ ಎಲ್ಲ ವೇಸ್ಟ್!" ಎಂದು ಮುಖ ಸೊಟ್ಟ ಮಾಡಿದಳು ನಂದನಾ
"ನಂದನಾ! ನೀವಿಬ್ರೂ ಇನ್ನೂ ಎರಡೋ ಮೂರೋ ವರುಷಗಳಲ್ಲಿ ಶಿಕ್ಷಣಕ್ಕಾಗಿ ಬೇರೆ ದೇಶಕ್ಕೆ ಹೋಗಲಿದ್ದೀರಿ. ನೀವು ಎಲ್ಲಿದ್ದರೂ ನಿಮ್ಮ ಮೂಲವನ್ನ ಮರೆಯಬಾರದು. ಇದು ನಮ್ಮಪ್ಪಇದು ನಮ್ಮಮ್ಮ, ಇದು ನಮ್ಮ ಊರುಇದು ನಮ್ಮ ಇತಿಹಾಸ ಎಂಬಂತಹ ' ನಮ್ಮ' ತನವನ್ನು ಮನಸ್ಸಲ್ಲಿ ಬೆಳೆಸಿಕೊಳ್ಳೋದು ಬಹಳ ಮುಖ್ಯ." ಅಪ್ಪ ಎಂದಿನಂತೆ ಈಗಲೂ ಒಂದು ಹೊಸ ವಿಷಯವನ್ನು ತೆಗೆದರು.  
"ಪ್ರತಿಯೊಬ್ಬ ಮನುಷ್ಯನಿಗೂ ಜೀವಿಸಲು ಅಗತ್ಯವಾಗಿ ಬೇಕಾದ ವಸ್ತುಗಳು, ಅಂದರೆ ಬೇಸಿಕ್ ನೇಸಸಿಟೀಸ್ ಯಾವವು?" 
"ಊಟ, ಬಟ್ಟೆ ಮತ್ತು ಸೂರುಫುಡ್ ಷೆಲ್ಟರ್ ಅಂಡ್ ಕ್ಲೋದಿಂಗ್!" ಎಂದ ಅಭಿನಂದನ್
"ಅಷ್ಟು ಮಾತ್ರವಲ್ಲಮನಸಲ್ಲಿ ಒಂದು ಸೆನ್ಸ್ ಓಫ್ ಬಿಲಾಂಗಿಂಗ್ ಇರುವುದೂ ಅಷ್ಟೇ ಮುಖ್ಯ."   ಎಂದರು ಅಪ್ಪ.  
"ನಾವು ಮನೆತನಕ್ಕೆ ಸೇರಿದವರು,  ಸಂಸ್ಕೃತಿಗೆ ಸೇರಿದವರು, ಕಲಾಚಾರಕ್ಕೆ ಸೇರಿದವರು ಅನ್ನೋ ಒಂದು ಸೆನ್ಸ್ ಓಫ್ ಬಿಲಾಂಗಿಂಗನ್ನು ಬೆಳೆಸಿಕೊಂಡಾಗ, ಎಲ್ಲೇ ಇರಲಿ ಹೇಗೇ ಇರಲಿ, ಒಂಟಿತನ ನಮ್ಮನ್ನು ಕಾಡೋದಿಲ್ಲ
ನಮ್ಮ ಮೂಲದ - ಅಂದ್ರೆ ರೂಟ್ಸ್ಅರಿವಿನಿಂದ ಆತ್ಮ ವಿಶ್ವಾಸ ಮತ್ತು ಆತ್ಮಗೌರವ ಹೆಚ್ಚುತ್ತದೆ. ಮಾನಸಿಕ ಆರೋಗ್ಯಕ್ಕೆ ಇದು ಬಹಳಮುಖ್ಯ. ಇಂತಹ ಅರಿವಿನ ಬಲವಾದ ಬುನಾದಿ ಇಲ್ಲದ ವ್ಯಕ್ತಿಗಳೆಲ್ಲ ಸೂತ್ರ ಕಳಕೊಂಡ ಗಾಳಿ ಪಟಗಳ ಹಾಗೆಯೇ!" 
" ವಿಷಯಕ್ಕೂ ನಮ್ಮ ಟ್ರಿಪ್ಪಿಗೂ ಏನು ಸಂಭಂದ ಅಪ್ಪ?" ಅಸಹನೆಯಿಂದ ಪ್ರಶ್ನಿಸಿದಳು ನಂದನಾ.
 "ತಾಳ್ಮೆ! ತಾಳ್ಮೆ! ಅದನ್ನೇ ಈಗ ಹೇಳಲು ಹೊರಟೆ!" ಅಪ್ಪ ನಗುತ್ತ ಮುಂದುವರಿಸಿದರು
"ನಮ್ಮ  ಮೂಲದ ಅರಿವನ್ನು ಪಡೆಯೋದು  ಹೇಗೆ? ನಮ್ಮ ಇತಿಹಾಸವನ್ನೂ ಪರಂಪರೆಯನ್ನೂ ಹೇಳುವ ಪಳೆಯುಳಿಕೆಗಳನ್ನು ಕಂಡು ಅವುಗಳ ಸಂಶೋಧನೆ ಮಾಡುವುದರಿಂದ ಅದು ಸಾಧ್ಯ. ನಮ್ಮ ಪುರಾತನವಾದ ದೇವಾಲಯಗಳು ಬರಿ ಪೂಜಾ ಸ್ಥಳಗಳು ಮಾತ್ರವಾಗಿರಲಿಲ್ಲ. ಹಿಂದೆ ಬಳಕೆಯಲ್ಲಿದ್ದ ಭಾಷೆಗಳು, ಲಿಪಿಗಳು, ವಾಸ್ತುಶಿಲ್ಪ ಶಾಸ್ತ್ರ, ಪುರಾಣ, ಇತಿಹಾಸ, ಕಲೆ, ಕೃಷಿ, ಅಂದಿನ ಜನರ ಜೀವನ ಶೈಲಿ, ಅವರುಗಳ ಸಾಧನೆ ಮುಂತಾದ ಅನೇಕ ವಿಷಯಗಳನ್ನು ಹೇಳುವ ಒಂದು ವಿಶ್ವವಿದ್ಯಾಲಯವೇ ಆಗಿದ್ದವು." 
"ಹಾಗಾದರೆ ನಾಳೆ ನಾವು ಒಂದು ಪುರಾತನವಾದ ವಿಶ್ವವಿದ್ಯಾಲಯಕ್ಕೆ ಹೋಗ್ತಿದ್ದೀವೇ?!"  
ನಂದಾನ ಮತ್ತು ಅಭಿನಂದನ್ ಮುಖ ಸಪ್ಪೆ ಮಾಡಿಕೊಂಡರು
"ನಿಮ್ಮ 'ಅವೆಂಜರ್ಸ್' ಮತ್ತು  'ಡ್ರ್ಯಾಗನ್ ಗ್ಲಾಸ್ ಎಸ್ಕೇಪ್ ರೂಮ್' ಪ್ಲ್ಯಾನನ್ನ ಬರೋ ವಾರ ಇಟ್ಟುಕೊಂಡ್ರೆ ಆಯಿತು!"  ಅಮ್ಮ ಅವರುಗಳನ್ನು  ಸಮಾಧಾನಗೊಳಿಸಲೆತ್ನಿಸಿದಳ . 
 'ವಾಟ್ ಬೋರ್!' 
ನಂದನಾ ಮತ್ತು ಅಭಿನಂದನ್ ಕಣ್ಣುಗಳಲ್ಲೇ ಮಾತನಾಡಿಕೊಂಡರು!

ಮರು ದಿನ -
ದಟ್ಟವಾದ ವಾಹನಗಳ ಸಂಚಾರದ ಮಧ್ಯೆ ಒಂದು ಗಂಟೆಕಾಲ ಪಯಣಿಸಿ ಮಣ್ಣುರಸ್ತೆಯಲ್ಲಿ ತಿರುಗಿ, ಇನ್ನಷ್ಟು ದೂರ ಪಯಣಿಸಿ  'ವೀ ಆರ್ ಹಿಯರ್' ಎಂದರು ಅಪ್ಪ
"ನಾವಿನ್ನೂ ಸಿಟಿನೇ ಬಿಟ್ಟಿಲ್ಲ! ಅಷ್ಟರಲ್ಲಿ 'ವಿ  ಆರ್ ಹಿಯರಾ'?" ಎಂದು  ಆಶ್ಚರ್ಯದಿಂದ ಕಣ್ಣು ಬಿಟ್ಟಳು ನಂದನಾ
"ಹೌದಮ್ಮ! ಪುರಾತನವಾದ ವೆಪ್ಪೂರ್ ಎಂಬ ಹೆಸರು ಹಂತ ಹಂತವಾಗಿ ಬದಲಾವಣೆ ಹೊಂದಿ ಇಂದು  ಬೇಗೂರಾಗಿದೆಬೆಂಗಳೂರೊಂದಿಗೆ ಒಂದಾಗಿ ಬೆರೆತುಕೊಂಡುಬಿಟ್ಟಿದೆ!" ಎನ್ನುತ್ತ ಕಾರಿನಿಂದಿಳಿದರು ಅಪ್ಪ
ಬೆಂಗಳೂರಿನ ಜನಜಂಗುಳಿಯಲ್ಲಿ ಬಚ್ಚಿಟ್ಟುಕೊಂಡಿದ್ದು
ಇದ್ದಕ್ಕಿದ್ದಂತೆ ಅನಾವರಣಗೊಂಡ ಗ್ರಾಮೀಣ ಪ್ರದೇಶವನ್ನು ಕಂಡಾಗ ನಂದನಾ ಮತ್ತುಅಭಿನಂದನ್ ಬೆಕ್ಕಸಬೆರಗಾದರು
"ಮೊದ್ಲು ದೇವರ ಪೂಜೆ ಮುಗಿಸೋಣ. ಆಮೇಲೆ ನಿಧಾನವಾಗಿ ಸುತ್ತಾಡೋಣ." ಎಂದಳು ಅಮ್ಮ
 ಪಂಚಲಿಂಗೇಶ್ವರ ದೇವಾಲಯದ  ಆವರಣದಲ್ಲಿದ್ದ  ನಗರೇಶ್ವರಸ್ವಾಮಿಯ ಗುಡಿಯನ್ನು ಸೇರಿದಾಗ ತೆರೆ ಇಳಿಬಿಟ್ಟಿತ್ತು. ದೇವರ ದರುಶನಕ್ಕೆ ಇನ್ನೂ ಸಮಯವಿತ್ತು
ಮಕ್ಕಳಿಬ್ಬರೂ ಲವಲವಿಕೆಯಿಂದ ಅತ್ತ ಇತ್ತ ಕಣ್ಣಾಡಿಸಿದರು. ರಾಶಿ ರಾಶಿಯಾಗಿ ಬಿದ್ದುಕೊಂಡಿದ್ದ ಕಲ್ಲುಗಳಲ್ಲಿ  ಕಾಣಿಸಿಕೊಂಡ  ಉಬ್ಬು ಶಿಲ್ಪಗಳು, ಶಾಸನಕಲ್ಲುಗಳುಗುಡಿಯ ಹಿನ್ನೆಲೆಯಲ್ಲಿ ಕಂಡು ಬಂದ ಕೆರೆ - ಎಲ್ಲವೂ ಅವರುಗಳ ಕುತೂಹಲವನ್ನು ಕೆರಳಿಸಿದವು
"ಅಪ್ಪ ಕೋಟೆ ಎಲ್ಲಿ?" 
"ಅಬ್ಬಬ್ಬ! ಅದೇನು ಅವಸರ ಎಲ್ಲದ್ದಕ್ಕೂ? ಪೂಜೆ ಮುಗಿಸಿ ಕೋಟೆಯ ಅವಶೇಷವನ್ನೂ ನೋಡಿ ಬರೋಣ!" ಎಂದಳು ಅಮ್ಮ
"ನಾವು ಇಲ್ಲೇ ಸ್ವಲ್ಪ ಎಕ್ಸ್ಪ್ಲೋರ್ ಮಾಡಿ ಬರ್ತೀವಿ. ತೆರೆ ತೆಗೆಯಲು ಇನ್ನೂ ಸಮಯವಿದೆಯಲ್ಲ!" ಎಂದ ಅಭಿನಂದನ್
"ಬೇಡ ಅಭಿ! ಎಲ್ಲೆಲ್ಲಿಗೋ ಹೋಗಬೇಡಿ. ಪೂಜೆ ಮುಗಿದಮೇಲೆ ಎಲ್ರೂ ಒಟ್ಟಿಗೇ  ಹೋಗೋಣ." ಎಂದಳು ಅಮ್ಮ
"ಎಲ್ಲಿಗೂ ಹೋಗಲ್ಲಮ್ಮಾ! ಇಲ್ಲಿ ಸುಮ್ನೆ ಕಾಯ್ತಾ ಕೂತಿರೋ ಬದಲು ಇಲ್ಲೇ ಸುತ್ತಾಡಿಕೊಂಡು ಬರ್ತೀವಿ! ಪ್ಲೀಸ್ ಅಮ್ಮ!" ನಂದನಾ ಅಮ್ಮನನ್ನು ಕಾಡಿದಳು
"ನೆನ್ನೆ ಪ್ರವಾಸದ ಪ್ಲಾನ್ ಕೇಳಿ ಮುಖ ಊದಿಸಿಕೊಂಡಿದ್ರು! ಈಗ ಆಸಕ್ತಿ ಮೂಡಿದೆಯಲ್ಲ! ಹೋಗಿ ಬರಲಿ ಬಿಡು!" ಎಂದು ಶಿಫಾರಸು ಮಾಡಿದರು  ಅಪ್ಪ.  
ಮುಂದಾಗಲಿರುವ ಅನಾಹುತದ ಬಗ್ಗೆ ಎಳ್ಳಷ್ಟಾದರೂ ಸೂಚನೆ ದೊರಕಿದ್ದಿದ್ದರೆ ಅವರು ಹೀಗೆ ಅನುಮತಿ ನೀಡುತ್ತಿರಲಿಲ್ಲವೋ ಏನೋ!

*****************************************


 
ಅರಳಿದ್ದ ಕಮಲದ ಹೂವುಗಳನ್ನೂ, ಈಜಾಡುತ್ತಿದ್ದ ಕೆಲವು ನೀರ ಹಕ್ಕಿಗಳನ್ನೂ ನೋಡುತ್ತ ಕೆರೆಯ ದಂಡೆಯಲ್ಲಿ ನಿಂತರು  ನಂದನಾ ಮತ್ತು ಅಭಿ
"ಅಭಿ! ಇದು ಎಷ್ಟು ಒಳ್ಳೆ ಪಿಕ್ನಿಕ್ ಸ್ಪಾಟ್! ಅಮ್ಮ ತಂದಿರೋ ಹುಳಿಯನ್ನ, ಮೊಸರನ್ನ, ಸಂಡಿಗೆಯನ್ನ ಇಲ್ಲೇ ಕೂತು ತಿನ್ನಬಹುದು." 
" ಜಾಗ ಇಷ್ಟು ಸುಂದರವಾಗಿರತ್ತೆ ಅಂತ ನಾನು ಅಂದುಕೊಂಡೇ  ಇರಲಿಲ್ಲ." ಎಂದ ಅಭಿ
ನೀರಿನಡಿಯಲ್ಲಿ ಈಜುತ್ತಿದ್ದು ಸಿಕ್ಕಿದ ಮೀನನ್ನು ಕೊಕ್ಕಿನಲ್ಲಿ ಕಚ್ಚಿಕೊಂಡು 'ಡುಬುಕ್' ಎಂದು  ಮೇಲೆ ತಲೆ ಎತ್ತಿದ ನೀರು ಕಾಗೆಗಳ ಸಾಹಸಗಳನ್ನು ನೋಡಿ ನಂದನಾಳಿಗೆ ಬಲು ಖುಷಿಯಾಯಿತುದಂಡೆಯುದ್ದಕ್ಕೂ ನಡೆದು ದೂರ ಹೋಗಿದ್ದ ಅಭಿಯನ್ನು ಅವಳು ಗಮನಿಸಲೇ ಇಲ್ಲ.  
"ನಂದನಾ! ಬಾ ಇಲ್ಲಿ! ಲುಕ್ ಅಟ್ ದಿಸ್!"
ಇದ್ದಕ್ಕಿದ್ದಹಾಗೆಯೇ ಗಟ್ಟಿಯಾಗಿ ಕೇಳಿಸಿದ ಅಭಿಯ ಧ್ವನಿ ಅವಳನ್ನು ಎಚ್ಚರಿಸಿತು. ಅವಳು ನಿಂತಿದ್ದ ಸ್ಥಳದಿಂದ ಸಾಕಷ್ಟು ದೂರದಲ್ಲಿಪೊದರುಗಳ ಸಮೀಪ ನಿಂತು ಅಭಿ ಕೈ ಬೀಸಿ ಕರೆಯುತ್ತಿದ್ದನು
ನಂದನಾ ಬಿರಬಿರನೆ ಅವನನ್ನು ಕುರಿತು ನಡೆದಳು. ಅವನು ಬೆರಳು ಮಾಡಿ ತೋರಿಸಿದ ಕಡೆ ನೋಡಿದಳು. ಅವಾಕ್ಕಾಗಿ ನಿಂತಳು!
ಪೊದರುಗಳ ನಡುವೆ ಕುಳಿತ ಬಂಗಿಯಲ್ಲಿ  ಶಿಥಿಲವಾಗಿದ್ದ ಒಂದು ದೊಡ್ಡ ಸಿಂಹದ ಶಿಲ್ಪ! ಅದರ ಎರಡು ಮುಂಗಾಲುಗಳ ಮಧ್ಯೆ ಒಂದು ಕಟ್ಟೆಯಿಲ್ಲದ ಬಾವಿ!
" ಮೈ ಗಾಡ್!" ಎಂದಳು ನಂದನಾ.
"ನಂದನಾ! ನಾಗತ್ತರನ ಅಂದಿನ ವೆಪ್ಪೂರು ಅತ್ಯಂತ ಸುಂದರವಾದ ಪಟ್ಟಣವೇ ಆಗಿತ್ತು ಅನ್ನಿಸುತ್ತದೆ! ವಿಷ್ ವೀ ವರ್ ದೇರ್ ಡ್ಯೂರಿಂಗ್ ಥಟ್ ಟೈಮ್!"
ಅಭಿ ಹೀಗೆ ನುಡಿದಾಕ್ಷಣ ಬಾವಿಯೊಳಗೆ ಏನೋ ಗುಳುಗುಳು ಶಬ್ದವಾಯಿತು. ಕುತೂಹಲದಿಂದ ಒಳಗೆ ಇಣುಕಿದ ಇಬ್ಬರೂ ಮೈಮರೆತು ಸ್ತಬ್ದರಾಗಿ ನಿಂತುಬಿಟ್ಟರುಹೊಗೆಯಂತಹ ಒಂದು ಕಪ್ಪು ವಸ್ತು ಬಾವಿಯ ತಳದಿಂದ ಸುರುಳಿ ಸುರುಳಿಯಾಗಿ ಮೇಲೆದ್ದಿತುತನ್ನ ಕೊಳಬೆಯಂತಹ ಸುರುಳಿಯೊಳಗೆ ನಂದನಾಳನ್ನೂ ಅಭಿಯನ್ನೂ ಬಲವಂತವಾಗಿ  ಹೀರಿಕೊಂಡು ಮತ್ತೆ ಸುರುಳಿ ಸುರುಳಿಯಾಗಿ ಬಾವಿಯೊಳಕ್ಕೆ ಅಂತರ್ಧಾನವಾಯಿತು!

*****************************************ಮುಖದ ಮೇಲೆ ನೀರು ಸಿಂಪಟಿಸಿದಂತಾಗಿ ಕಣ್ಣು ಬಿಟ್ಟ ನಂದನಾ ತಾನು ಕೆರೆಯ ದಂಡೆಯಲ್ಲಿ ಮಲಗಿರುವುದನ್ನು ಅರಿತು ಥಟ್ಟನೆ ಎದ್ದು ಕುಳಿತಳು
"ಬುಟ್ಟಣ್ಣಾ! ಇನ್ನೂ ನೀರು ತರಲೆ?" ಎಂದು ಕೆರೆಯಿಂದ ನೀರನ್ನು ಮೊಗೆಯುತ್ತಿದ್ದ ಹುಡುಗ ಪ್ರಶ್ನಿಸಿದ
"ಸಾಕು ಬಾ  ಪೇರ್ವೋಣ! ಅಣ್ಣನೂ ಎದ್ದ!"  ನಂದನಾಳ ಬಳಿ ಮಂಡಿಯಿಟ್ಟು  ಕುಳಿತು ಆರೈಕೆ ಮಾಡುತ್ತಿದ್ದ ಹುಡುಗ, ಅವಳ ಸಮೀಪವೇ ಕಣ್ಣು ಬಿಡಲು ಎತ್ನಿಸುತ್ತಿದ್ದ ಅಭಿಯ ಕಡೆ ದೃಷ್ಟಿ ಹರಿಸುತ್ತ ನುಡಿದನು.   
 ನೀರ ಹಕ್ಕಿಗಳ ಕಲರವ ಇಡೀ ಪ್ರಾಂತ್ಯವನ್ನು ಆವರಿಸಿಕೊಂಡಿತ್ತುಎಕರೆಗಟ್ಟಲೆ ಕಣ್ಣಮುಂದೆ ಗೋಚರಿಸಿದ ದೊಡ್ಡ ಕೆರೆ ನಂದನಾಳನ್ನೂ ಅಭಿಯನ್ನೂ ಚಕಿತಗೊಳಿಸಿತು. ಅವರುಗಳು ನೋಡುತ್ತ ನಿಂತಿದ್ದ ಕೆರೆಗಿಂತ ಇದು ನೂರ್ಮಡಿ ದೊಡ್ಡದಾಗಿದೆ! ಹಕ್ಕಿಗಳ ವೈವಿದ್ಯತೆ, ಸಂಖ್ಯೆ ಎಲ್ಲವೂ ಕೂಡ ಹೆಚ್ಚಾಗಿ ಕಾಣುತ್ತಿವೆ ! 
'ದಿಸ್ ಸ್ ವಿಯರ್ಡ್!' 
"ಈಗ ಸ್ವಲ್ಪ ಸುಧಾರಿಸಿಕೊಂಡಿರಾ?" ಪೇರ್ವೋಣ  ಎಂದು ಕರೆಯಲ್ಪಟ್ಟ ಹುಡುಗ ಬಳಿಗೆ ಬಂದು ಕಾಳಜಿಯಿಂದ ಪ್ರಶ್ನಿಸಿದನು.     
"ಇದೇ ದಾರೀಲಿ ಬರುತ್ತಿದ್ದಾಗ ನಿಮ್ಮನ್ನ ನೋಡಿದಿವಿ.  ಯಾಕೆ ಜ್ಞಾನ ತಪ್ಪಿ ಬಿದ್ದಿರೀ?" ಬುಟ್ಟಣ್ಣ ವಿಚಾರಿಸಿದ
  ಹುಡುಗರ ವಿಚಿತ್ರವಾದ ವೇಷಬೂಷಣಗಳನ್ನು ಮೌನವಾಗಿ ದಿಟ್ಟಿಸಿದರು  ನಂದನಾ ಮತ್ತುಅಭಿ
 ಉದ್ದ ಕೂದಲನ್ನು ತಲೆಯ ಪಕ್ಕಕ್ಕೆ ಬಾಚಿ ತುರುಬಿನಂತೆ  ಕಟ್ಟಿದ್ದರುಕಚ್ಛೆ ಪಂಚೆ ಉಟ್ಟು, ಮೇಲೆ ಒಂದು ಹೊಲಿಯದ ವಸ್ತ್ರವನ್ನು ಧರಿಸಿದ್ದರುಕಿವಿಯಲ್ಲಿ ಕಡಕುಕೈ ಕಡಗಕಾಲ್ಕಡಗ, ಕುತ್ತಿಗೆ ಸರ, ಮುಂತಾದ ಆಭರಣಗನ್ನು ತೊಟ್ಟಿದ್ದರು
ಸೊಂಟದಲ್ಲಿ ಬಿಗಿದಿದ್ದ  ಉದ್ದುದ್ದವಾದ ಖಡ್ಗಗಳು
"ಹೋಯ್! ಯಾರು ನೀವು? ಯಾವೂರು? " ಅವರುಗಳ ಗಮನ ಸೆಳೆಯಲು ಎತ್ನಿಸಿದ ಬುಟ್ಟಣ್ಣ
"ವೀ ಆರ್ ಫ್ರಮ್ ಬ್ಯಾಂಗಲೋರ್ ... " ನಂದನಾ ತಡವರಿಸಿ ತೊದಲಿದಳು.
"ಹಾಂ?" ಇಬ್ಬರು ಹುಡುಗರೂ ಅವಳ ಮಾತನ್ನು ಗ್ರಹಿಸಲಾರದೆ  ಅವಳನ್ನು ದುರುಗುಟ್ಟಿಕೊಂಡು ನೋಡಿದರು
"ನಾವು ಬೇರೆ ಊರವರು. ಬೇಗೂರು ಪಂಚಲಿಂಗೇಶ್ವರ ಗುಡಿಗೆ ಬಂದೆವು!" ಎಂದು ವಿವರಿಸಿದ ಅಭಿ.
"ಈಗ ನೋಡಣ್ಣ, ಅರ್ಥವಾಯಿತುವೆಪ್ಪೂರು ಪಂಚಲಿಂಗೇಶ್ವರ ದೇವಾಲಯ ಅನ್ನಿ! ಆಗೋಅಲ್ಲಿದೆ ನೋಡಿ!" ಬೆರಳುಮಾಡಿ ತೋರಿಸಿದ ಬುಟ್ಟಣ್ಣ

*****************************************

ನಗರೇಶ್ವರ ದೇವಸ್ಥಾನದಲ್ಲಿ ಇನ್ನೂ ತೆರೆ ಸರಿಸಿರಲಿಲ್ಲ
"ಇವ್ರಿಬ್ರೂ ಇನ್ನೂ ಬರಲೇ ಇಲ್ಲವಲ್ಲ.... " ಅಮ್ಮ ಚಡಪಡಿಸತೊಡಗಿದಳು
"ಸುತ್ತಾಡಿಕೊಂಡು ಬರಲಿ ಬಿಡು! ಏನು ಅವಸರ?" ಎಂದರು ಅಪ್ಪ
"ನಿಂತಲ್ಲಿ ನಿಲ್ಲಲ್ಲಾ! ಅದೇನು ಚಂಚಲ ಬುದ್ಧಿಯೋ? ವಯಸಾಗುತ್ತಾ ಬಂದಿದೆ! ಇನ್ನೂ ಕಪಿಚೇಷ್ಟೆಯನ್ನ ಬಿಟ್ಟಿಲ್ಲ!" ಬೇಸರದಿಂದ ನುಡಿದಳು ಅಮ್ಮ

*****************************************


ಪಂಚಲಿಂಗೇಶ್ವರ ದೇವಸ್ಥಾನ ಹೊಸತಾಗಿ ನಿರ್ಮಿಸಿದಂತಹ ನಿರ್ಮಲವಾದ ಕಾಂತಿಯಿಂದ ಮಿನುಗುತ್ತಿತ್ತು. ಹೂವುಗಳು, ಧೂಪ, ಮತ್ತು ಶ್ರೀಗಂಧದ  ಪರಿಮಳ ಇಡೀ ಪರಿಸರವನ್ನು ಆವರಿಸಿಕೊಂಡಿತ್ತು. ಪೂಜೆಗಾಗಿ ಮಕ್ಕಳು ಮರಿಗಳೊಂದಿಗೆ ಜನ ಬಂದು ಹೋಗುತ್ತಿದ್ದರು.
 ಆವರಣದ ಒಂದು ಬದಿಯಲ್ಲಿ ಒಂದು ಬೃಹದಾಕಾರದ ಕಲ್ಲಿನಲ್ಲಿ ಒಂದು ಪ್ರಚಂಡವಾದ ಕಾಳಗದ ದೃಶ್ಯವನ್ನು ಕೆತ್ತನೆ ಮಾಡುತ್ತಿದ್ದರು ಶಿಲ್ಪಿಗಳು.
ಕುದುರೆ ಸವಾರಿಯಲ್ಲಿ ಆಕ್ರೋಶದಿಂದ ಹೋರಾಡುವ ಬಂಗಿಯಲ್ಲಿ ಓರ್ವ ನಾಯಕ! ಎದುರಲ್ಲಿ ತನ್ನ ಮಸ್ತಕದಲ್ಲಿ ನಾಟಿದ್ದ ಬಾಣಗಳೊಂದಿಗೆ  ಮುನ್ನುಗ್ಗುತ್ತಿದ್ದ ಮತ್ತೇರಿದ ಆನೆ! ಮಧ್ಯ ಬಾಗದಲ್ಲಿದ್ದ ಮುಖ್ಯವಾದ ಇವೆರಡು ಕೆತ್ತನೆಗಳ ಸುತ್ತಲೂ ಭೀಕರವಾದ ಕಾಳಗವನ್ನು ಚಿತ್ರಿಸುವ ಅನೇಕ ಕೆತ್ತನೆಗಳು!
"ತೊಂಡಬ್ಬೆ!"
ಕೆತ್ತನೆಯಲ್ಲಿ ನಿಮಗ್ನಳಾಗಿದ್ದ ಹುಡುಗಿ ತಿರುಗಿ ನೋಡಿದಳು. ಕೂಡಲೇ ಅವಳ ಮುಖ ಅರಳಿತು.
"ಬುಟ್ಟಣ್ಣ! ಪೇರ್ವೋಣ! ಬೇಟೆ ಮುಗಿಸಿ ಬಂದಿರಾ?" ಪ್ರಶ್ನಿಸಿದವಳ ಕಣ್ಣಗಳು ಹುಡುಗರ ಜೊತೆಯಲ್ಲಿ ಬಂದು ನಿಂತ ಅಪರಿಚಿತರ ಮೇಲೆ ನೆಲೆಸಿತು.
ಅವರುಗಳು ತೊಟ್ಟಿದ್ದ ಕೊಳಭೆಗಳಂತಹ ವಸ್ತ್ರ, ಮೇಲೆ ಧರಿಸಿದ್ದ ಅಂಗಿ, ಕತ್ತರಿಸಿದ್ದ ತಲೆಗೂದಲು, ಆಭರಣಗಳಿಲ್ಲದ ಬೋಳು ಕುತ್ತಿಗೆ ಕೈಕಾಲುಗಳು - ಎಲ್ಲವನ್ನೂ ಆಶ್ಚರ್ಯದಿಂದ ನೋಡಿದಳು.
ಅಷ್ಟೇ ಆಶ್ಚರ್ಯದಿಂದ ಅವಳನ್ನು ಕುರಿತು  ನೋಟ ಬೀರಿದರು  ನಂದನಾ ಮತ್ತು ಅಭಿ!
 ತಮ್ಮ ವಯಸ್ಕಳೇ ಆಗಿರಬಹುದಾದ ಹುಡುಗಿ! ತಲೆಯಮೇಲೆ ದೊಡ್ಡ ತುರುಬು, ವಯಸ್ಸಾದ ಮಹಿಳೆಯಂತೆ ಅವಳು ಉಟ್ಟಿದ್ದ ಸೀರೆ, ಮೈತುಂಬ ಧರಿಸಿದ್ದ ವಿವಿಧ ಆಭರಣಗಳು!
ಇದೆಂತಹ ವೇಷ?
"ಆಯಿತು! ಬೇಟೆಯನ್ನ ಹುಡುಗರು ಕೋಟೆಗೆ ಸಾಗಿಸಿದ್ದಾರೆ. ನಾನು ಪೇರ್ವೋಣ ಮೈ ತೊಳೆಯಲು ಕೆರೆಗೆ ಹೋದಾಗ, ಇವರಿಬ್ಬರೂ ದಂಡೆಯ ಮೇಲೆ ಜ್ಞಾನ ತಪ್ಪಿ ಬಿದ್ದಿದ್ದರು! ಬೇರೆ ಊರವರಂತೆ! ಊರಿಗೆ ಹೋಗಬೇಕಂತೆಇಲ್ಲಿ ಪಂಚಲಿಂಗೇಶ್ವರನ ಗುಡಿಯ ಬಳಿ ಅದೇನೋ ಬಸ್ಸಂತೆ! ಅದರಲ್ಲಿ ಕೂತು ಹೋಗಬಹುದಂತೆ! ಅವರಾಡೋ 'ಪಿಸ ಪಿಸ' ಮಾತು ನನಗೆ ಅರ್ಥವೇ ಆಗಲ್ಲ! ನೀನೇ  ವಿಚಾರಿಸು!" ಎಂದ ಬುಟ್ಟಣ್ಣ.
"ನಿಮ್ಮ ನಾಮದೇಯ?" ಮೃದುವಾಗಿ ಕೇಳಿದಳು ತೊಂಡಬ್ಬೆ.
"ನಾನು ನಂದನ! ಇವನು ಅಭಿ!"
" ! ನಂದನಬ್ಬೆ! ಅಭಿಯಣ್ಣ!" ಎಂದ ತೊಂಡಬ್ಬೆ, "ಯಾವೂರು?" ಎಂದು ಕೇಳಿದಳು.
"ಬೆಂಗಳೂರು! ಇಲ್ಲಿ ಬೆಗೂರಲ್ಲಿ - ಅಲ್ಲವೇಪ್ಪೂರಲ್ಲಿ ಬಸ್ ಸ್ಟಾಂಡ್ ಇದೆಯಲ್ಲ? ಬಸ್ ಹಿಡಿದರೆ ಒಂದೇ ಗಂಟೆ ಕಾಲದಲ್ಲಿ ನಮ್ಮ ಮನೆ ಸೇರಬಹುದು!"
ಅಭಿಯ ವಿವರವಾದ ಮಾತು ತೊಂಡಬ್ಬೆಗೆ ಅರ್ಥವಾಗಲಿಲ್ಲ!
"ಬಸ್ ಅಂದರೆ ? ಅದೊಂದು ವಾಹನವೇ? ಆನೆ, ಕುದುರೆ ಹಾಗೆ?"
"ಅದು ವಾಹನವೇ! ಆದರೆ ಪ್ರಾಣಿಯಲ್ಲ! ಒಮ್ಮೆಗೆ ಮೂವತ್ತು ನಲವತ್ತು ಮಂದಿ ಅದರಲ್ಲಿ ಪ್ರಯಾಣ ಮಾಡಬಹುದು. ಅಂತಹ ವಾಹನಗಳು ನಮ್ಮೂರಲ್ಲಿ ಹೇರಳವಾಗಿ ಓಡಾಡುತ್ತವೆ ... " ಅಭಿಗೆ ಇನ್ನೂ ಹೇಗೆ ವಿವರಿಸಬೇಕೋ ತಿಳಿಯಲಿಲ್ಲ.
'ಬೆಂಗಳೂರು ಗ್ರಾಮದಲ್ಲಿ ಅಂತಹ ವಾಹನಗಳಿರೋ ಬಗ್ಗೆ ಯಾರೂ ಹೇಳಿಲ್ಲವಲ್ಲಾ ... !'
ಗೊಂದಲಕ್ಕೊಳಗಾದ ತೊಂಡಬ್ಬೆ, ಬುಟ್ಟಣ್ಣ  ಮತ್ತು ಪೇರ್ವೋಣ ಒಂದು ಕಡೆ ಕೂಡಿ ನಿಂತು ತಮ್ಮಲ್ಲಿ ತಾವೇ ಏನೋ ಮಾತನಾಡಿಕೊಂಡರು.
ನಂದನಾಳ ಹೃದಯ ಕುತೂಹಲದಿಂದಲೂ ಭಯದಿಂದಲೂ ವೇಗವಾಗಿ ಬಡಿದುಕೊಂಡಿತು.
"ಅಭಿ! ನೋ ಪಾಯಿಂಟ್ ಟಾಕಿಂಗ್ ಟು ದೆಮ್! ಊರೇ ಡಿಫರೆಂಟಾಗಿದೆ! ನೋ ಟಾರ್ ರೋಡ್ಸ್ಎಲ್ಲೂ ವಾಹನ  ಸಂಚಾರ ಕಾಣಿಸ್ತಿಲ್ಲದೂರದಲ್ಲಿ ಕಾಣಬೇಕಾದ ಮಲ್ಟಿ ಸ್ಟೋರಿ ಬಿಲ್ಡಿಂಗ್ಸ್  ಎಲ್ಲೂ ಕಾಣಿಸ್ತಿಲ್ಲ!ಎಲ್ಲೂ ಎಲೆಟ್ರಿಕ್ ಕನೆಕ್ಷನ್ ಇದ್ದ ಹಾಗಿಲ್ಲ! ಗುಡಿಯೂ ಹೊಚ್ಚಹೊಸದಾಗಿ ಕಾಣಿಸ್ತಿದೆ.   ಹುಡುಗರು, ಗುಡಿಗೆ ಬಂದು ಹೋಗುತ್ತಿರೋರು, ಶಿಲ್ಪಿಗಳುಇವರೆಲ್ಲರ  ಉಡುಪು ತೊಡುಪು ನೋಡುಇದು ಒಳ್ಳೆ ಓಬಿರಾಯನ ಕಾಲದ ಊರು ಇದ್ದಹಾಗಿದೆ!"
"ಎಸ್! ಯೂ ಆರ್ ರೈಟ್! ನನಗೂ ಅದೇ ಅನ್ನಿಸಿತುನಾವು  ಬೂತಕಾಲಕ್ಕೇನಾದರೂ ಹೋಗಿದ್ದೀವೆ?" ಭಯದಿಂದ ತನ್ನ ಅನುಮಾನವನ್ನು ಮುಂದಿಟ್ಟ ಅಭಿ.
"ಹೋಗಿಲ್ಲ ಅಭಿ! ಬಂದಿದ್ದೀವಿ!" ನಂದನಾಳ ದನಿ ಕಂಪಿಸಿತು.
ಬಂದು ಹೋಗುತ್ತಿದ್ದವರೆಲ್ಲ ಅವರಿಬ್ಬರನ್ನೂ 'ಇದೇನು ವಿಚಿತ್ರ!' ಎಂಬಂತೆ ನೋಡುತ್ತಿದ್ದದ್ದು ಬೇರೆ ಇಬ್ಬರಿಗೂ ಮುಜುಗುರವನ್ನೇರ್ಪಡಿಸಿತು.
ಅದೇ ಸಮಯ ತೊಂಡಬ್ಬೆ ಸಮೀಪ ಬಂದು ನಿಂತಳು.
"ನಂದನಬ್ಬೆ! ನೀವು ದೂರದ ಊರಿಂದ ಬಂದಿದ್ದೀರಿ! ತುಂಬಾ ದಣಿದಿದ್ದೀರಿ! ನಮ್ಮ ಮನೆಗೆ ಬಂದು ಉಂಡು ಮಲಗಿ. ನಮ್ಮಣ್ಣ ಎರೆಯಪ್ಪ ನೀತಿಮಾರ್ಗ ಮಹಾರಾಜರನ್ನು ನೋಡಕ್ಕೆ ಹೋಗಿದ್ದಾನೆ. ಅವನು ಬಂದಮೇಲೆ ನಿಮ್ಮನ್ನ ಊರಿಗೆ ಕಳಿಸೋದು ಹೇಗೆ ಎಂದು ಯೋಚಿಸೋಣ."  ಕನಿಕರದಿಂದ ನುಡಿದಳು ತೊಂಡಬ್ಬೆ.
 "ಅಣ್ಣಾ! ಶಾಸನವನ್ನ ಗಮನವಾಗಿ ನಿಧಾನವಾಗಿ ಕೆತ್ತಿರಿ! ಅಲ್ಪ ತಪ್ಪಿದ್ದರೂ ಇರುಗ ಒಪ್ಪೋದಿಲ್ಲ."  ಎಂದು ಶಿಲ್ಪಿಗಳಿಗೆ ಆದೇಶ ನೀಡಿಡದಳು.
ಕುದುರೆ ಸವಾರನ ಶಿಲ್ಪವನ್ನು ಪ್ರೀತಿ ತುಂಬಿದ ಕಣ್ಣುಗಳಿಂದ ನೋಡಿ ಅದರ  ಮೇಲೆ ಕೈಯಾಡಿಸಿದಳು ತೊಂಡಬ್ಬೆ. ನಂದನಾ ಮತ್ತು ಅಭಿ ಅವಳನ್ನೇ ನಿಟ್ಟಿಸುತ್ತಿದ್ದದ್ದು ಅರಿವಾಯಿತು.
"ನಾಗತ್ತರ! ನಮ್ಮ ತಂದೆ! ತುಂಬೇಪಾಡಿಯೋಳ್ ನಡೆದ ಕಾಳಗದಲ್ಲಿ ನುಗ್ಗಿ ಬಂದ ಆನೆಯನ್ನು ಇರಿದು ಸತ್ತನು!"  ಎಂದಾಗ ಅವಳ ಕಣ್ಣುಗಳು ತುಂಬಿಬಂದವು.
"ತೊಂಡಬ್ಬೆ! ಅಪ್ಪ ಆನೆ ಪಡೆಯೊಡನೆ ಕಾದು ವೀರ ಮರಣವನ್ನಪ್ಪಿದರು.  ಅವರ ತ್ಯಾಗವನ್ನು ಮೆಚ್ಚಿ  ಇರುಗನ್ಗೆ ನಾಗತ್ತರವಟ್ಟಂಗಟ್ಟಿ ೧೨ ಊರುಗಳನ್ನೂ ಕೊಟ್ಟು ಗೌರವಿಸಿರುವರು ಮಹಾರಾಜರು . ಅಂತಹ ಗೌರವಾನ್ವಿತನ  ಮಕ್ಕಳಾಗಿ ನಾವು ಕಣ್ಣೀರು ಹಾಕಬಹುದೇ?" 
ಬುಟ್ಟಣ್ಣ ಮೃದು ಮಾತನಾಡಿ ತೊಂಡಬ್ಬೆಯನ್ನು ಸಂತೈಸಿದನು.
'ಹತ್ತನೇ ಶತಮಾನದಲ್ಲಿ ಎರೆಯಪ್ಪ ನೀತಿಮಾರ್ಗನೆಂಬ ರಾಜನು ಗಂಗವಾಡಿ ತೊಂಬತ್ತಾರು ಸಾವಿರವನ್ನು ಒಂದೇ ಕೊಡೆಯ ಕೆಳಗೆ ಆಳುತ್ತಿದ್ದ. ಸಮಯ  ವೆಪ್ಪೂರ್ ಮತ್ತು ಸುತ್ತಮುತ್ತಲಿನ  ಪ್ರಾಂತ್ಯವನ್ನು ಆಳುತ್ತಿದ್ದ ನಾಗತ್ತರ! ಅಪ್ಪ ಹೇಳಿದ್ದ  ನಾಗತ್ತರ ಹುಡುಗಿಯ ತಂದೆಅಂದರೆ ನಾವೀಗ ಹತ್ತನೇ ಶತಮಾನದಲ್ಲಿದ್ದೀವೆ?' 
ನಂದನಾಳಿಗೆ ನಾಲಿಗೆ ಒಣಗಿತು
"ಇದು ಯಾವ ಇಸವಿ?" ಮೆಲ್ಲನೆ ತೊಂಡಬ್ಬೆಯನ್ನು ಕುರಿತು ಪ್ರಶ್ನಿಸಿದಳು ನಂದನಾ
"ಇಸವಿ ಅಂದರೆ?" 
"ಅಂದರೆ, ಇದು  ಯಾವ ಕಾಲ?" ನಂದನಾಳ ಪ್ರಶ್ನೆಯನ್ನು ಕೇಳಿ ಕಿರುನಗೆ ಬೀರಿದಳು ತೊಂಡಬ್ಬೆ
ಮಧ್ಯಾಹ್ನ ಕಾಲದ ಪೂಜೆ ಆಗುತ್ತಿದೆಅಂದರೆ ಇದು ಮಧ್ಯಾಹ್ನ ಕಾಲವೇ ಅಲ್ಲವೇ?" 
ನಂದನಾಳಿಗೆ ಮೈ ಪರಚಿಕೊಳ್ಳುವಂತಾಯಿತು
ಕಳವಳದಿಂದ ತನ್ನ ಜೀನ್ಸ್ ಜೇಬಿನಿಂದ ಮೊಬೈಲನ್ನು ತೆಗೆದು ಗುಂಡಿಗಳನ್ನು ಆತುರ ಆತುರವಾಗಿ ಒತ್ತ  ತೊಡಗಿದಳು
"ಡೋಂಟ್ ಬಿ ಸ್ಟುಪಿಡ್! ಶತಮಾನದಲ್ಲಿ ಮೊಬೈಲ್ ಸಿಗ್ನಲ್ ಹೇಗೆ ಸಿಗಬೇಕು?" ಎಂದು ಉರಿದು ಬಿದ್ದ ಅಭಿ
"ನನಗೂ ಗೊತ್ತು! ಯೂ ಶಟ್ ಅಪ್!" ಎಂದು ಮುಖ ಊದಿಸಿಕೊಂಡ ನಂದನಾ ಸತ್ತಿದ್ದ ಮೊಬೈಲನ್ನು ಮತ್ತೇ  ಜೇಬಿಗಿಟ್ಟುಕೊಂಡಳು.  
"ಅದೇನಣ್ಣ?" ಬುಟ್ಟಣ್ಣ ಕುತೂಹಲ ತಡೆಯಲಾರದೆ ಪ್ರಶ್ನಿಸಿದ
"ಅದೇ? ಅದೊಂದು ಯಂತ್ರ! ಅದರ ಮೂಲಕ  ದೂರದಲ್ಲಿರುವವರೊಂದಿಗೆ ಮಾತನಾಡಬಹುದು!"  ಆದಷ್ಟು ಅವನಿಗೆ ಅರ್ಥವಾಗುವ ರೀತಿಯಲ್ಲಿ ಉತ್ತರಿಸಿದ ಅಭಿ
"ಫ್ಯುಟೈಲ್ ಟಾಕ್!" ಸಿಡಿಮಿಡಿಗೊಂಡು ಉರಿದುಬಿದ್ದಳು ನಂದನಾ
ಅವರುಗಳಾಡಿದ ಮಾತು ಅರ್ಥವಾಗದಿದ್ದರೂ, ಅವರುಗಳ ಮುಖಭಾವದಿಂದ ಇಬ್ಬರ ನಡುವೆ  ಏನೋ ಮನಸ್ತಾಪವಿರಬೇಕು ಎಂಬುದನ್ನು ಊಹಿಸಿದಳು ತೊಂಡಬ್ಬೆ.
 "ನಂದನಬ್ಬೆ! ಅಭಿಯಣ್ಣ! ಬನ್ನಿ ಮನೆಗೆ ಹೋಗೋಣ." ಎನ್ನುತ್ತ ಹೊರಟಳು.
 ''ಬುಟ್ಟಣ್ಣ! ನೀನು ಇನ್ನೂ ಸ್ವಲ್ಪ ಸಮಯ ಇಲ್ಲೇ ಇದ್ದು ಕೆತ್ತನೆ ಕೆಲಸವನ್ನ ನೋಡಿಕೋ. ಪೇರ್ವೋಣ! ನೀನು ಬಸದಿಗೆ ಹೋಗಿ ಗುರುಗಳು ಇದ್ದಾರೆಯೇ ಎಂದು ನೋಡಿ ಬಾ! ಊಟದ ನಂತರ ಅವರ ಬಳಿ ಹೋಗಿ ನಂದನಬ್ಬೆ ಮತ್ತು ಅಭಿಯಣ್ಣನ ವಿಚಾರ ಮಾತನಾಡೋಣ!"

*****************************************

ನಗರೇಶ್ವರಸ್ವಾಮಿಯ  ಗುಡಿಯಲ್ಲಿ ತೆರೆ ತೆರೆದು ಪೂಜೆ ಮುಗಿದು ಮಂಗಳಾರತಿಯೂ ಮುಗಿದಿತ್ತು.
"ನೋಡಿ! ಇನ್ನೂ ಇವರಿಬ್ಬರೂ ಬಂದಿಲ್ಲ! ಹೋದರೆ ಹೋದ ಕಡೆ! ಬಂದರೆ ಬಂದ ಕಡೆ! ಚೂರೂ ಜವಾಬ್ದಾರಿ ಇಲ್ಲ!" ಅಮ್ಮ ರೇಗಾಡಿದಳು.
"ನೀನು ಇಲ್ಲೇ ಕುಳಿತಿರು. ನಾನು ಹೋಗಿ ಎಲ್ಲಿದ್ದರೂ ಕಾರಕೋಡು ಬರ್ತೀನಿ." ಎಂದ ಅಪ್ಪ ನಂದನಾಳನ್ನೂ ಅಭಿಯನ್ನೂ ಹುಡುಕಿಕೊಂಡು  ಹೊರಟರು.

*****************************************ಆಯುಧ ಶಾಲೆ, ಧಾನ್ಯಾಗಾರ, ಗೋಶಾಲೆ, ಅಶ್ವಶಾಲೆ ಮುಂತಾದ ಅನೇಕ ವಿಭಾಗಗಳನ್ನು ಒಳಗೊಂಡಿದ್ದ ವೃತ್ತಾಕಾರದ ಕೋಟೆಯ ನಡುವೆ  ಇದ್ದ ನಾಗತ್ತರನ ಮನೆಯ ಒಂದು ಕೋಣೆಯಲ್ಲಿ ಗೋಡೆಗೆ ಮುಖ ಮಾಡಿ ಮಲಗಿದ್ದಳು ನಂದನಾ. ಅಭಿ ಮತ್ತೊಂದು ಕಡೆ ಕುಳಿತು ನಾನಾವಿಧ ಚಿಂತೆಗಳಲ್ಲಿ ಮುಳುಗಿದ್ದನು.
"ಊಂ! ತಿನ್ನಿ! ಬಹಳ ಹಸಿದಿರಬೇಕು! ನಿರಾಳವಾಗಿ ತಿನ್ನಿ!" ಎಂದು ಹರಿವಾಣದ ತುಂಬ ಪಲಹಾರವನ್ನು ತಂದಿಟ್ಟು  ಪ್ರೀತ್ಯಾದರದಿಂದ ಉಪಚರಿಸಿದ್ದಳು ತೊಂಡಬ್ಬೆ.
ತುಪ್ಪದಲ್ಲಿ ಮಿಂದ ಮಲ್ಲಿಗೆ ಚೆಂಡಿನಂತೆ ಕಂಡ ಪಲಹಾರ ಬಾಯಲ್ಲಿ ನೀರೂರಿಸಿದರೂ ತಿನ್ನಲು ಏಕೋ ಅಂಜಿಕೆ.
"ಯಾಕೆ ಹಾಗೆ ನೋಡುತ್ತಿರುವಿರೀ? ಇಡ್ಡಲಿಗೆ ತಿಂದಿಲ್ಲವೇ ನೀವು? ತಿನ್ನಿ!"
"ನೀವೆಲ್ಲ?"
"ನಮ್ಮ ಇರುಗಣ್ಣ ಬರುತ್ತಿದ್ದಾನೆ! ನಾವೆಲ್ಲಾ ಅವನ ಜೊತೆಗೆ ಊಟ ಮಾಡುತ್ತೇವೆ! ನೀವಿಬ್ಬರೂ ದಣಿದಿದ್ದೀರಿ! ತಿಂದು ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳಿ! " ಎಂದಳು ತೊಂಡಬ್ಬೆ.
ತೊಂಡಬ್ಬೆಯ ಮಾತಿನಿಂದ ಉತ್ಸುಕರಾದರು  ನಂದನಾ ಮತ್ತು ಅಭಿ.  ಇನ್ನೂ ತಡಮಾಡದೆ  ಐದಾರು ಇಡ್ಡಲಿಗೆಗಳನ್ನು ಗುಳುಂ ಮಾಡಿದ್ದರು.
ವಿಶ್ರಾಂತಿಗಾಗಿ ಅವರುಗಳನ್ನು ಒಂದು ಕೋಣೆಯಲ್ಲಿ ಇರಿಸಿ, ಹೊರಟು  ಹೋಗಿದ್ದಳು ತೊಂಡಬ್ಬೆ.
ಅಭಿಗೆ ಹಸಿವಿನಿಂದ ಮಂಕು ಬಡಿದಿದ್ದ ಬುದ್ಧಿ ಈಗ ಸ್ವಲ್ಪ ಚುರುಕುಗೊಂಡಂತಿತ್ತು. ಮುಖ ತಿರುಗಿಸಿಕೊಂಡಿದ್ದ ನಂದನಾಳ ಕಡೆ ದೃಷ್ಟಿ ಬೀರಿದನು.
'ಪಾಪ! ಅವಳಿಗೂ ನನ್ನಷ್ಟೇ ಭಯ ಬೇಸರ ಎಲ್ಲ ಆಗಿರಬೇಕು !' 
"ನಂದನಾ! ಸಾರಿ! ಎದ್ದೇಳು! ಮೊದಲು ನಾವು ಶತಮಾನದಿಂದ ತಪ್ಪಿಸಿಕೊಂಡು ನಮ್ಮ ಶತಮಾನಕ್ಕೆ ಹಿಂದಿರುಗಬೇಕು! ಅದಕ್ಕೆ ಇಬ್ಬರೂ ಸೇರಿ ಏನಾದರೂ ಪ್ಲಾನ್ ಮಾಡಬೇಕು!"
ಥಟ್ಟೆನ್ದು ಎದ್ದು ಕುಳಿತಳು ನಂದನಾ.
"ನಾವು ಇಲ್ಲಿಗೆ ಬಂದ್ದದ್ದು ಹೇಗೋ ಹಾಗೆಯೇ ವಾಪಸ್ಸು ಹೋಗಬೇಕು! ಹೇಗೆ ಬಂದ್ವಿ ಅನ್ನೋದನ್ನ ಚೆನ್ನಾಗಿ ನೆನಪಿಸಿಕೊಂಡ್ರೆ ಏನಾದ್ರೂ  ಹೊಳೀಬಹುದು!" ಎಂದಳು ನಂದನಾ.  
"ಎಸ್! ನಾವು ಕೆರೆಯನ್ನು ನೋಡಕ್ಕೆ ಹೋದೆವಲ್ಲ?"
"ಹೌದು ಅಭಿ! ನೀನು ದೂರ ಹೋಗಿ ನನ್ನನ್ನು ಕೈ ಬೀಸಿ ಕರೆದೆ .. "
"ಹಾಂ! ಸಿಂಹದ ಶಿಲ್ಪದ ಕಾಲ ಮಧ್ಯೆ ಒಂದು ಬಾವಿ ಇತ್ತಲ್ಲ, ಅದನ್ನ ತೋರಿಸಕ್ಕೆ ಕರೆದೆ!"
"ನಾನು ಬೆರಗಾದೆ! ಮೈ ಗಾಡ್ ಎಂದೆ! ಆಮೇಲೆ... ?"
"' ನಾಗತ್ತರನ ಅಂದಿನ ವೆಪ್ಪೂರು ಅತ್ಯಂತ ಸುಂದರವಾದ ಪಟ್ಟಣವೇ ಆಗಿತ್ತು ಅನ್ನಿಸುತ್ತದೆ! ವಿಷ್ ವೀ ವರ್ ದೇರ್ ಡ್ಯೂರಿಂಗ್ ಥಟ್ ಟೈಮ್ !' ಎಂದಿದ್ದೆ ನಾನು!"
"ಆವಾಗಲೇ ಬಾವಿಯಲ್ಲಿ ಗುಳು ಗುಳು ಶಬ್ದ ... "
ಸುರುಳಿಸುರುಳಿಯಾಗಿ ಎದ್ದ ಕಪ್ಪು ಹೊಗೆಯಂತಹ ವಸ್ತು ಇಬ್ಬರನ್ನೂ ಬಲವಂತವಾಗಿ ಹೀರಿಕೊಂಡಿದ್ದು ಇಬ್ಬರಿಗೂ ನೆನಪಾಯಿತು.
"ಅಭಿ!  ಸಮಯದ ಒಂದು ಆಯಾಮದಿಂದ ಮೊತ್ತೊಂದು ಆಯಾಮಕ್ಕೆ ನಮ್ಮನ್ನ ಅದು ಎತ್ತಿ ಎಸೆದಿದೆ !  'ಡ್ಯೂರಿಂಗ್ ಥಟ್ ಟೈಮ್ ' ಎಂಬ ನಿನ್ನ ಸಂಕಲ್ಪದ ಪ್ರಕಾರ ಇಲ್ಲಿಗೆ ತಂದು ಸೇರಿಸಿದೆ!"
"ಹಾಗಾದರೆ? ಬಾವಿಯಲ್ಲಿದ್ದ ವಸ್ತು ವರ್ಮ್ ಹೋಲ್  ಅಥವಾ ಬ್ಲ್ಯಾಕ್ ಹೋಲ್ನಂತಹ  ಒಂದು .... ..... "
"ಎಸ್! ಬಾವಿಯೇ ಒಂದು ಪೋರ್ಟಲ್ ಆಗಿರಬೇಕು! ಸಮಯದ ಎರಡು ಆಯಾಮಗಳ  ನಡುವೆ ಇರುವ ಪ್ರವೇಶ ದ್ವಾರ!" ನಂದನಾ ಹೀಗೆ ನುಡುದಾಗ  ಅಭಿಯಂತೆಯೇ ಅವಳಿಗೂ  ಮೈ ಝಂಮೆಂದಿತು.
'ಹಾಗಾದರೆ ನಾವು ನಿಜಕ್ಕೂ ಟೈಮ್ ಟ್ರಾವೆಲ್ ಮಾಡಿದ್ದೀವೇ ! ಇಲ್ಲ ಇದೆಲ್ಲ ಬರಿ ಕನಸೇ?'
"ಅಭಿಯಣ್ಣಾ! ನಂದನಬ್ಬೆ! ವಿಶ್ರಾಂತಿ ತೆಗೆದುಕೊಂಡಿರಾ?" ಪೇರ್ವೋಣ ವಿಚಾರಿಸಿಕೊಂಡು ಬಂದು ನಿಂತಾಗ 'ಕನಸಲ್ಲ! ಇದೆಲ್ಲ ನಿಜವೇ!'  ಎಂಬುದು  ಖಚಿತವಾಯಿತು.
"ಪೇರ್ವೋಣ! ನಾವು ಜ್ಞಾನ ತಪ್ಪಿ ಬಿದ್ದಿದ್ದ ಸ್ಥಳದಲ್ಲಿ ಯಾವುದಾದರೂ ಬಾವಿ ಇದೆಯೇ?"
ಅಭಿಯ ಪ್ರಶ್ನೆ ಕೇಳಿ ಪೇರ್ವೋಣನ ಮುಖ ಪೆಚ್ಚಾಯಿತು.
"ಅಯ್ಯೋ! ಕೆರೆಯ ಬದಿಯಲ್ಲಿರುವ ಸಿಂಹದ ಬಾವಿಯಲ್ಲಿ ಯಕ್ಷಿಣಿ ಇದೆ! ನಿಮಗೆ ಜ್ಞಾನ ಮಾತ್ರ ತಪ್ಪಿತ್ತುಸಾಮಾನ್ಯವಾಗಿ ಅದರ ಬಳಿ ಸುಳಿದವರೆಲ್ಲ ಕಾಣೆಯಾಗುತ್ತಾರೆ! ಹಿಂದಿರುಗುವುದೇ ಇಲ್ಲ!"
'ಪಾಪ! ಕಾಣೆಯಾದವರೆಲ್ಲ ಸಮಯದ ಯಾವ ಯಾವ ಆಯಾಮಗಳಲ್ಲಿ ಸಿಕ್ಕಿಕೊಂಡು  ಬಳಲುತ್ತಿತುವರೋ ಏನೋ?' ಎಂದುಕೊಂಡು ನಂದನಾ ಮತ್ತು ಅಭಿ ಒಬ್ಬರ ಮುಖ ಒಬ್ಬರು ನೋಡಿಕೊಂಡರು.
ತಾವು ತಮ್ಮ ಸಮಯಕ್ಕೆ ಹಿಂದಿರುಗಬೇಕಾದರೆ ಮತ್ತೆ ಬಾವಿಯ ಬಳಿ ಹೋಗ ಬೇಕಾಕುತ್ತದೆ ! ಹೋದರೂ ಅದು ತಮ್ಮನ್ನು ಸರಿಯಾದ ಕಾಲಕ್ಕೆ, ತಮ್ಮ ತಂದೆ ತಾಯಿಗಳಿರುವ ಸ್ಥಳಕ್ಕೆ ತಮ್ಮನ್ನು ಸುರಕ್ಷಿತವಾಗಿ ಕರೆದೊಯ್ಯಬೇಕುಅದನ್ನು ನೆನೆದ  ಮಾತ್ರಕ್ಕೆ ಮೈಯೆಲ್ಲಾ ಭಯದಿಂದ ಕಂಪಿಸಿತು.

*****************************************


"
ಎಲ್ಲಿ? ಎಲ್ಲಿ ಅವರುಗಳು?"
ಪಯಣ ಮುಗಿಸಿ ಇದೀಗತಾನೆ ಮನೆಯನ್ನು ಪ್ರವೇಶಿಸುತ್ತಿದ್ದ ಇರುಗ ಆವೇಶದಿಂದ ಗುಡುಗಿದನು.   
"ಇರುಗಣ್ಣ! ಬಂದೆಯ? ಯಾಕೆ ಇಷ್ಟು ಆವೇಶಬಾ ಒಳಗೆ! ಬುಟ್ಟಣ್ಣ, ಪೇರ್ವೋಣ  ನಾವೆಲ್ಲಾ ನಿನ್ನ ಜೊತೆ ಊಟ ಮಾಡಲು ಕಾಯುತ್ತಿದ್ದೇವೆ!" ತೊಂಡಬ್ಬೆ ಪ್ರೀತಿಯಿಂದ ತನ್ನ ಅಣ್ಣನನ್ನು ಸ್ವಾಗತಿಸಿದಳು.
"ಊಟ ಹಾಗಿರಲಿ! ಎಲ್ಲಿ ಪರದೇಶಿಗಳು? ನಮ್ಮ ಗಡಿ ಪ್ರದೇಶಗಳನ್ನೆಲ್ಲ ಆಕ್ರಮಣ ಮಾಡಿ  ಕ್ರಮೇಣ ನಮ್ಮ ಗಂಗವಾಡಿಯನ್ನೇ ನುಂಗಿ ಹಾಕಲು ಹೊರಟಿರುವರು  ನೊಳಂಬರು! ಎಚ್ಚರಿಕೆಯಿಂದಿರಬೇಕಾದ ಸಮಯದಲ್ಲಿ ಯಾರೋ ಆಗಂತುಕರಿಗೆ ನಾಗತ್ತರನ  ಮನೆಯಲ್ಲೇ  ಆಶ್ರಯ ಕೊಡುವುದೇ? ಅವರೇನಾದರೂ ನೊಳಂಬರ ಬೇಹುಗಾರರೇ ಆಗಿದ್ದರೆ .... " ಇರುಗ ಆಡಿದ ಒಂದೊಂದು ಮಾತಲ್ಲೂ ಕಿಡಿ ಹಾರಿತು.
"ಅಣ್ಣ! ಹಾಗೆಲ್ಲ ಇಲ್ಲ! ಪಾಪ ಯಾರೋ ದಾರಿ ತಪ್ಪಿ ಬಂದಿರುವರು. ತಮ್ಮ ಊರಿಗೆ ಹೋಗಲು ದಾರಿ ಕಾಣದೆ ಪೇಚಾಡುತ್ತಿರುವರು. ನೀನು ಬಂದೊಡನೆ ಗುರುಗಳ ಸಲಹೆ ಪಡೆದು ಅವರಿಗೆ ಒಂದು ದಾರಿ ಕಾಣಿಸುತ್ತೀಯ ಎಂದು ಅವರುಗಳಿಗೆ ಮಾತು ಕೊಟ್ಟಿದ್ದೆ ....  " ತೊಂಡಬ್ಬೆ ಆತಂಕದಿಂದ ನುಡಿದಳು.
"ತೊಂಡಬ್ಬೆ! ನೀನು ಇನ್ನೂ ಅಮಾಯಕ ಹುಡುಗಿಯಾಗಿಯೇ ಇದ್ದೀಯ. ನಾನು ಅವರುಗಳನ್ನು ಬಂಧಿಸಿ ಮಹಾರಾಜರ ಬಳಿಗೆ ವಿಚಾರಣೆಗೆ ಕರೆದೊಯ್ಯುವೆ! ಎಲ್ಲಿ ಅವರು?"
"ಅಣ್ಣ! ನೋಡಲು ಅವರಿಬ್ಬರೂ ಬಲಹೀನರಾಗಿರುವರು! ನಿರಾಯುಧಪಾಣಿಗಳು! ಅವರಿಂದ ಏನೂ ಅಪಾಯ ಉಂಟಾಗುವುದಿಲ್ಲ!" ಬುಟ್ಟಣ್ಣ ಅಣ್ಣನನ್ನು ಸಮಾಧಾನಗೊಳಿಸಲೆತ್ನಿಸಿದನು.
"ಬುದ್ಧಿ ಇಲ್ಲದೆ ಮಾತನಾಡಬೇಡ ಬುಟ್ಟಣ್ಣ! ಆಯುಧಗಳಿಲ್ಲದಿದ್ದರೆ ಏನು? ದೂರದಲ್ಲಿರುವವರೊಂದಿಗೆ ಸಂಪರ್ಕಿಸಲು ಅವರಲ್ಲಿ ಒಂದು ಯಂತ್ರವಿದೆಯಂತೆ? ಸಮಯ ನೋಡಿ ಅವರುಗಳು ವೈರಿಗಳನ್ನು ಸಂಪರ್ಕಿಸಿ ಇಲ್ಲಿಗೆ ಆಹ್ವಾನಿಸಿದರೆ?"
"ಅಣ್ಣಾ!" ಇರುಗನಿಗೆ ವಿಷಯ ಹೇಗೆ ತಿಳಿಯುತು?
"ನಾನು ಎಲ್ಲೇ ಇದ್ದರು ನನ್ನ ಕಣ್ಣು ಕಿವಿ ಎಲ್ಲ ಎಲ್ಲೆಡೆ  ಇರುತ್ತವೆ! ನನ್ನ ಬೇಹುಗಾರರ ರೂಪದಲ್ಲಿ! ಎಲ್ಲಿ ಅವರು? ತಂದು ನನಗೊಪ್ಪಿಸು ತೊಂಡಬ್ಬೆ!" ಎಂದು ಗರ್ಜಿಸಿದ ಇರುಗ.
ನಡೆಯುತ್ತಿದ್ದ ವಾಕ್ವಾದಗಳನ್ನೆಲ್ಲ ಬಾಗಿಲ ಮರೆಯಿಂದ ಕೇಳಿಸಿಕೊಳ್ಳುತ್ತಲೇ ಇದ್ದರು ಅಭಿ ಮತ್ತು ನಂದನಾ.
'ಅಯ್ಯೋ! ಇದೇನು! ತಾವಿಬ್ಬರೂ ಹತ್ತನೇ ಶತಮಾನದ ಕಾರಾಗ್ರಹದಲ್ಲಿ  ಬಿದ್ದು ಕೊಳೆಯಬೇಕೇ?' ಎಂದು ಮರುಗಿದರು ಅಭಿ ಮತ್ತು ನಂದನಾ.
"ನಂದನಾ! ಬೇರೆ ದಾರಿ ಇಲ್ಲ! ಎಸ್ಕೇಪ್!" ಪಿಸುಮಾತಿನಲ್ಲಿ ನುಡಿದು ನಂದಾನಾಳ ಕೈಯನ್ನು ಹಿಡಿದೆಳೆದುಕೊಂಡು ಅಲ್ಲಿಂದ ಕಾಲ್ಕಿತ್ತ ಅಭಿ.
"ಹೊಯ್! ಹೋಯ್! ಹಿಡಿಯಿರಿ! ಹಿಡಿಯಿರಿ ಅವರನ್ನ!"
"ನಂದನಬ್ಬೆ! ಅಭಿಯಣ್ಣ! ನಿಲ್ಲಿ! ಓಡಬೇಡಿ!" ತೊಂಡಬ್ಬೆಯ ಬೇಡಿಕೆಯನ್ನು ಲಕ್ಷ್ಯ ಮಾಡದೆ ಇಬ್ಬರೂ ಓಟ ಹಿಡಿದರು.
ಹತ್ತಾರು ಆಳುಗಳು ಹಿಂಬಾಲಿಸುತ್ತಿರಲು ಅಭಿ ಮತ್ತು ನಂದನಾ ಹುಲಿಗೆ ಹೆದರಿ ಓಡುವ ಹುಲ್ಲೆಗಳಂತೆ ವೇಗವಾಗಿ ಓಡಿ ಕೆರೆಯ ದಂಡೆ ಸೇರಿದರು.
"ಅಯ್ಯೋ! ಸಿಂಹ ಬಾವಿಯ ಬಳಿ ಹೋಗಬೇಡಿ! ತಡೆಯಿರಿ!" ಎಂದು ಕೂಗುತ್ತ ಹಿಂಬಾಲಿಸಿದ  ಬುಟ್ಟಣ್ಣನನ್ನೂ ಲೆಕ್ಕಿಸದೆ ಇಬ್ಬರೂ ಬಾವಿಯತ್ತ ಸಾಗಿದ್ದರು.
"ಬೇಗೂರ್ ಪಂಚಲಿಂಗೇಶ್ವರ ದೇವಾಲಯ ... !" ಅಭಿ ಭಯದಿಂದ ತಡವರಿಸಿದ.
"ಬೇಗೂರ್ ಪಂಚಲಿಂಗೇಶ್ವರ ದೇವಾಲಯ, ಅಮ್ಮ, ಅಪ್ಪ, ನಮ್ಮ ವಾಹನ, ನಮ್ಮ ಕಾರ್...  ..."  ನಂದನಾ ಸಂಕಲ್ಪವನ್ನು ಸ್ಪಷ್ಟವಾಗಿ ನುಡಿಯುತ್ತಿರಲು, ಬಾವಿಯಲ್ಲಿ ಗುಳು ಗುಳು ಶಬ್ದ ಕೇಳಿಸಿತು.......

*****************************************
'ಇನ್ನೂ ಇವರುಗಳು ಬಂದಿಲ್ಲವಲ್ಲ !' ಎಂದು ಚಡಪಡಿಸುತ್ತ ನಂದಿಯ ಮಂಟಪದಲ್ಲಿ
ಕುಳಿತಿದ್ದ ಅಮ್ಮ ಎದ್ದು, ಅತ್ತ ಇತ್ತ ಹೆಜ್ಜೆಯಿಡುತ್ತಿದ್ದಳು. ದೂರದಲ್ಲಿ ಅಪ್ಪ ಬರುತ್ತಿರುವುದನ್ನು ಕಂಡು ಕಳವಳಗೊಂಡಳು.
"ನೋಡು ! ಎಸ್ಪ್ಲೋರ್ ಮಾಡಕ್ಕೆ ಹೋದವರು ಮಾಡಿರೋ ಕೆಲಸವನ್ನ .. " ಎಂದರು ಅಪ್ಪ.
"ಏನು? ಏನು ಮಾಡಿದರು?"
"ಕಾರಲ್ಲಿ ಆರಾಮಾಗಿ ಕುಳಿತು ಗೊರಕೆ ಹೊಡೀತಿದ್ದರು! ನೀರು ಹಿಮುಕಿಸಿದ ಮೇಲೆ ಎದ್ದರು!  ನಾನು ಕಾರ್ ಸರಿಯಾಗಿ ಲಾಕ್ ಮಾಡಿರಲಿಲ್ಲ ಅನ್ನಿಸತ್ತೆ! ಸರಿಯಾಗಿ ಲಾಕ್ ಮಾಡಿ ಬನ್ನಿ ಅಂದೇ!" ಎಂದು ನಕ್ಕರು ಅಪ್ಪ.
ಕೋಪದಿಂದ ಸಿಡಿಯಲು ಸಿದ್ಧವಾಗಿದ್ದ ಅಮ್ಮ ನಂದನಾ ಮತ್ತು ಅಭಿಯನ್ನು ಕಂಡೊಡನೆ ತಣ್ಣಗಾದಳು.
"ಬೆಳಿಗ್ಗೆ ತುಂಬಾ ಬೇಗ ಎದ್ದಿರಿ! ಬಿಸಿಲು ಬೇರೆ! ಒಳ್ಳೆ ನಿದ್ದೆ ಆಯಿತೇ? ಇನ್ನೂ ಸುತ್ತಾಡಕ್ಕೆ   ಹೋಗೋಣವೆ? " ಎಂದು ಪ್ರೀತಿಯಿಂದ ಇಬ್ಬರ ತಲೆ ನೇವರಿಸಿದಳು ಅಮ್ಮ.
ದೇವಾಲಯದ ಸುತ್ತಲೂ ಇದ್ದ ಶಿಲ್ಪಗಳನ್ನು ನೋಡುತ್ತ ನಡೆದಾಗ ಹುಡುಗರಿಬ್ಬರ ಕಣ್ಣುಗಳೂ  ಏನನ್ನೋ ಹುಡುಕಾಡುವುದನ್ನು ಗಮನಿಸಿದರು  ಅಪ್ಪ.
"ಏನು ಹುಡುಕುತ್ತಿದ್ದೀರಿ?"
"ನಾಗತ್ತರನ ವೀರಗಲ್ಲು.... " ಎಂದಳು ನಂದನಾ.
"ಅರೆ! ಅದರ ಬಗ್ಗೆಯೆಲ್ಲ ತಿಳುಕೊಂಡಿದ್ದೀರಾ?" ಅಪ್ಪ ಆಶ್ಚರ್ಯದಿಂದ ಹುಬ್ಬೇರಿಸಿದರು.
"ಹೌದು ಅಪ್ಪ! ಎಲ್ಲ ಗೂಗಲ್ ಮಾಡಿ ತಿಳ್ಕೊಂಡ್ವಿ!" ಅಭಿಯ ಸಮಯೋಚಿತವನ್ನು ತನ್ನ ನೋಟದಿಂದಲೇ ಮೆಚ್ಚಿಕೊಂಡಳು ನಂದನಾ.
"ಈಗ ಅದು ಸುರಕ್ಷಿತವಾಗಿ ಬೆಂಗಳೂರು ಮ್ಯೂಸಿಯಂ ಲ್ಲಿದೆ!" ಎಂದ ಅಪ್ಪ ಒಂದು  ಶಾಸನದ ಬಳಿ ಕರೆದೊಯ್ದರು.
"890 C E ಯಲ್ಲೇ ಬೆಂಗಳೂರು ಎಂಬ ಒಂದು ವಾಸಸ್ಥಳ ಇದ್ದುದ್ದನ್ನು  ಶಾಸನ ಹೇಳುತ್ತದೆ ನೋಡಿ!"
"ಶಾಸನದಲ್ಲಿ ಏನು ಬರೆದಿದೆ ಅಪ್ಪ?" ಎಂದು ಕೇಳಿದ ಅಭಿ
"ನಾಗತ್ತರನ ಸಾಕು ಮಗ ಪೇರ್ವೋಣ ಶೆಟ್ಟಿ ಮತ್ತು ಅವನ ಸ್ವಂತ ಮಗ ಬುಟ್ಟಣ್ಣ ಶೆಟ್ಟಿ ಇಬ್ಬರೂ ಬೆಂಗಳೂರು ಕಾಳಗದಲ್ಲಿ ಸತ್ತರಂತೆ. ಅದನ್ನೇ ಶಾಸನದಲ್ಲಿ ಕೆತ್ತಿದ್ದಾರೆ." ಎಂದು ಅಪ್ಪ ನುಡಿದದ್ದನ್ನು ಕೇಳಿ ಆಘಾತಕ್ಕೊಳಗಾದ ನಂದನಾ ಮತ್ತು ಅಭಿ ' ಅಯ್ಯೋ !' ಎಂದು ಒಟ್ಟಿಗೆ ಉದ್ಗರಿಸಿದರು.
'ಬುಟ್ಟಣ್ಣ ಪೇರ್ವೋಣ ಇಬ್ಬರೂ ಯುದ್ಧದಲ್ಲಿ ಸತ್ತರೆ?' ಹುಡುಗರ ಹೃದಯ ಭಾರವಾಯಿತು.
''ತೊಂಡಬ್ಬೆ! ತೊಂಡಬ್ಬೆಗೆ ಏನಾಯಿತು?" ನಂದನಾ ಕಳವಳದಿಂದ ಪ್ರಶ್ನಿಸಿದಳು.
" ! ಎಲ್ಲ ಆಗಲೇ ಗೂಗಲ್ ಮಾಡಿದ್ದೀರಿ!" ಎಂದರು ಅಪ್ಪ
 ಪಳೆಯುಳಿಕೆಯಾಗಿಬಿಟ್ಟಿದ್ದ ಕೋಟೆಯ ಬಳಿ ಕಾರಿನಲ್ಲೇ ಕರೆದೊಯ್ದರು. ಅವರಿಗೆ ಮುಂಚೆ ಕೋಟೆಯೊಳಗೆ ನುಗ್ಗಿಬಿಟ್ಟ ನಂದನಾ ಮತ್ತು ಅಭಿ ಕೋಟೆ ಇದ್ದ ಸ್ಥಿತಿಯನ್ನು ಕಂಡು ದಿಗ್ಬ್ರಾಂತರಾದರು. ಮುಳ್ಳು, ಹುಲ್ಲು , ಪೊದರುಗಳು, ಬೆಳೆದುಕೊಂಡಿದ್ದ ಹಾಳು ಬಿದ್ದ ಮಣ್ಣು ಕೋಟೆಯೊಳಗೆ ಆಲಸ್ಯದಿಂದ ಕುರಿಗಳು ಮೇಯುತ್ತಿದ್ದವು.  ಅಷ್ಟೊಂದು ಇಲಾಖೆಗಳನ್ನೊಳಗೊಂಡಿದ್ದ ಕೋಟೆ ಈಗ ಬರಿದಾಗಿ  'ಬಿಕೋ ' ಎನ್ನುತ್ತಿತ್ತು. ತಣ್ಣನೆಯ ಗಾಳಿ ಬೀಸುತ್ತಿದ್ದ ಮೈದಾನದಲ್ಲಿ ಹುಡುಗರು ಕ್ರಿಕೆಟ್ ಆಡುತ್ತಿದ್ದರು.
"ಇಲ್ನೋಡಿ ಬನ್ನಿ! ತೊಂಡಬ್ಬೆಯ ಬಗ್ಗೆಗಿನ ಶಾಸನ ಇಲ್ಲಿ ಮಹಾದ್ವಾರದ ಕಲ್ಲು ಗೋಡೆಯ ಮೇಲೆ ಇದೆ." ಎಂದು ಅಪ್ಪ ಕರೆದರು.
" ಶಾಸನ ಏನು ಹೇಳ್ತಿದೆ ಅಪ್ಪ?" ಕುತೂಹಲದಿಂದ ಕೇಳಿದಳು  ನಂದನಾ
"ನಾಗತ್ತರನ ಮಗಳು ತೊಂಡಬ್ಬೆ ಸನ್ಯಾಸ ದೀಕ್ಷೆ ತೆಗೆದುಕೊಂಡದ್ದನ್ನ ಈ ಶಾಸನ ಹೇಳತ್ತೆ . ಆಮೇಲೆ ಸಲ್ಲೇಖನ ವ್ರತವನ್ನ ಅವಳು ಕೈಗೊಂಡ ವಿಷಯದ ಬಗ್ಗೆ ಬೇರೆ ಒಂದು ಶಾಸನದಲ್ಲಿದೆಯಂತೆ  . "
"ಹಾಗಂದ್ರೆ?"
"ಆಹಾರ ನೀರು ಬಿಟ್ಟು ದೇವರ ಧ್ಯಾನದಲ್ಲಿದ್ದು ಪ್ರಾಣ ಬಿಡುವುದನ್ನು ಜೈನರು ಸಲ್ಲೇಖನ ವ್ರತ ಅಂತ ಕರೀತಾರೆ. ತೊಂಡಬ್ಬೆ ಅದನ್ನೇ ಮಾಡಿದ್ದಾಳೆ!" ಎಂದರು ಅಪ್ಪ
'ಪ್ರೀತ್ಯಾದರ ತೋರಿ ನಮಗೆ ಊಟ ಕೊಟ್ಟು ಉಪಚರಿಸಿದ ತೊಂಡಬ್ಬೆ ಅನ್ನ ಆಹಾರ ಬಿಟ್ಟು ಸತ್ತಳೆ ?'
ಹನಿಗೂಡಿದ ಕಣ್ಣುಗಳನ್ನು ಯಾರಿಗೂ ಕಾಣದಂತೆ ಒರೆಸಿಕೊಂಡರು ಅಭಿ ಮತ್ತು ನಂದನಾ.  
ಬಸದಿ ಇದ್ದ ಸುಳಿವೇ ಇಲ್ಲದೆ ಎಲ್ಲ ನೆಲಮಟ್ಟವಾಗಿತ್ತು. ಪೊದರುಗಳೆಡೆ ಅಲ್ಲಿ ಇಲ್ಲಿ ಚದುರಿ ಬಿದ್ದಿದ್ದ ಶಿಥಿಲವಾದ ತೀರ್ಥಂಕರರ ವಿಗ್ರಹಗಳನ್ನೂ ರುಂಡವಿಲ್ಲದ ಒಂದು ತೀರ್ಥಂಕರರ ಶಿಲ್ಪವನ್ನೂ ಕಂಡು ಬಾರವಾದ ಮನಸ್ಸಿನೊಂದಿಗೆ ತಮ್ಮ ಪ್ರವಾಸವನ್ನು ಮುಗಿಸಿಕೊಂಡರು ನಂದಾನಾ ಮತ್ತು ಅಭಿನಂದನ್.

ಮನೆಗೆ ಹಿಂದಿರುಗುತ್ತಿದ್ದಾಗ ಹುಡುಗರ ಸಪ್ಪೆ ಮುಖ ನೋಡಿ ಅಮ್ಮನಿಗೆ 'ಅಯ್ಯೋ ' ಎನ್ನಿಸಿತು
ಹುಡುಗರನ್ನು ಉತ್ಸಾಹಪಡಿಸಲೆಂದು "ನಾಳೆ ಬೇಕಾದರೆ 'ಡ್ರ್ಯಾಗನ್ ಗ್ಲಾಸ್ ಎಸ್ಕೇಪ್ ರೂಮ್' ಗೆ ಹೋಗೋಣವೆ?" ಎಂದು ಕೇಳಿದಳು
ಅಮ್ಮನ ಮಾತು ನಂದನಾಳಿಗೂ ಅಭಿಗೂ ಯಾವ ಥ್ರಿಲ್ಲನ್ನೂ ಕೊಡಲಿಲ್ಲಅದಕ್ಕಿಂತ ರೋಮಾಂಚಕಾರಿಯಾದ ಬೇರೆಯೇ ಒಂದು ಸಮಯದ ಆಯಾಮದಿಂದ ಸವಾಲುಗಳನ್ನು ಎದುರಿಸಿ ಎಸ್ಕೇಪ್ ಆಗಿ ಹೊರ ಬಂದಿದ್ದರಲ್ಲವೇ ಅವರು?  
"ನಾಳೆ ಮ್ಯೂಸಿಯಂಗೆ ಹೋಗೋಣ ಅಮ್ಮ!" ಎಂದ ಅಭಿ
"ಹೌದಮ್ಮ! ನಾಗತ್ತರನ ವೀರಗಲ್ಲನ್ನ ನೋಡೋಣ!" ಎಂದಳು ನಂದನಾ
'ಮಕ್ಕಳಿಗೆ ಒಂದು ಹೊಸತಾದ ಅಭಿರುಚಿಯನ್ನು ಏರ್ಪಡಿಸಿದೆನಲ್ಲ!' ಎಂದು ಹೆಮ್ಮೆಯಿಂದ ಬೀಗಿದರು ಅಪ್ಪ

*****************************************
ಹಿನ್ನುಡಿ -


ಇಡ್ಲಿ ಎಂದರೆ ನೂರು ಮೀಟರ್ ಓಡುತ್ತಿದ್ದ ತನ್ನ ಅವಳಿ ಮಕ್ಕಳು 'ಇನ್ನೊಂದು ಇನ್ನೊಂದುಎಂದು ಹಾಕಿಸಿಕೊಂಡು ತುಪ್ಪದಲ್ಲಿ ಅದ್ದಿ ಅವನ್ನು ಗುಳುಂ ಮಾಡುತ್ತಿದ್ದದ್ದು ಕಂಡು ಅಮ್ಮನಿಗೆ ಆಶ್ಚರ್ಯ
"ಏನಪ್ಪಾ ಇದು? ದಪ್ಪ ಆಗ್ತೀವಿ ಅಂತ ತುಪ್ಪದ ಕಡೆ ಕಣ್ಣೆತ್ತಿಯೂ ನೋಡ್ತಿರ್ಲಿಲ್ಲ! ಇವತ್ತೇನಪ್ಪಾನ್ದ್ರೆ ನೀವು ಮೆಚ್ಚದ ಇಡ್ಲಿಗಳನ್ನ  ದೂರವಿಟ್ಟಿದ್ದ ತುಪ್ಪದಲ್ಲಿ ಅದ್ದಿ ಸ್ವಾಹಾ ಮಾಡ್ತಿದ್ದೀರಿ? ಏನಾಯಿತು ನಿಮಗೆ?" ನಗುತ್ತಲೇ ಕೇಳಿದಳು ಅಮ್ಮ
"ಅಮ್ಮನಮ್ಮ ಆಹಾರ ಸಂಸ್ಕೃತಿಯ ಕುರುಹು ಅಲ್ಲವೇ ಇಡ್ಲಿ! ಹತ್ತನೇ ಶತಮಾನದಲ್ಲೇ ಮಲ್ಲಿಗೆ ಚೆಂಡಿನಂತ  ಇಡ್ಡಲಿಗೆಗಳನ್ನ ತುಪ್ಪದಲ್ಲಿ ಅದ್ದಿ ತಿನ್ನುತ್ತಿದ್ದರು! ಯುಮ್! ಅದೆಂತಹ ರುಚಿ ಅಂತೀಯಾ?"
"ಏನೋ ನೀವೇ ತಿಂದ ಹಾಗೆ ಹೇಳ್ತಿದ್ದೀರಿ!!!"
"ಗೂಗಲ್ ಹೇಳತ್ತಲ್ಲದಿನ ಇಡ್ಲಿ ಮಾಡ್ತಿದ್ರೂ ನಿನಗೆ ಅದರ ಇತಿಹಾಸದ ಅರಿವಿಲ್ಲವಲ್ಲ? ಅಪ್ಪನ ಹೇಳಿಕೆಯಂತೆ ನೀನು ಸೂತ್ರ ಕಳ್ಕೊಂಡ ಗಾಳಿಪಟವೇ ಹೋಗು!" 
ಮಕ್ಕಳು ಅಮ್ಮನ ಕಾಲೆಳೆಯುತ್ತಿದ್ದದ್ದನ್ನು ಕೇಳಿಸಿಕೊಂಡು ಬಂದರು ಅಪ್ಪ
ಹುಡುಗರು ಹೇಳೋದು ಹಂಡ್ರೆಡ್ ಪರ್ಸೆಂಟ್ ಕರೆಕ್ಟ್! ಹತ್ತನೇ ಶತಮಾನದ ಶಿವಕೋಟ್ಯಾಚಾರ್ಯರ 'ವಡ್ಡಾರಾಧನೆ' ಎಂಬ ಕೃತಿಯಲ್ಲಿ ಮೊದಲ ಬಾರಿಗೆ  ಇಡ್ಡಲಿಗೆ ಎಂಬ ಹೆಸರು ಕಾಣಿಸಿಕೊಂಡಿದೆ . . ." ಎಂದ ಅಪ್ಪ ಟ್ರಿಂಗುಟ್ಟಿದ ಮೊಬೈಲನ್ನು ತೆಗೆದು ನೋಡಿದರು
" ಮೈ ಗಾಡ್! ಸುದ್ಧಿ ನೋಡಿ ..." 
ಅಪ್ಪನ ಎರಡು ತೋಳುಗಳ ಹಿಂದಿನಿಂದಲೂ ಮೊಬೈಲನ್ನು ಇಣುಕಿ ನೋಡಿದ ನಂದನಾ ಮತ್ತು ಅಭಿಯ ಕಣ್ಣುಗಳು ಬೆರಗಿನಿಂದ ಬಿರಿದವು
'ನಮ್ಮೂರ ಶಿಲಾಶಾಸನಗಳು' ಎಂಬ ವೇದಿಕೆಯಲ್ಲಿ ಹೊಸತಾಗಿ ಬೇಗೂರಿನಲ್ಲಿ ದೊರಕಿದ್ದ ಒಂದು ವೀರಗಲ್ಲಿನ ಚಿತ್ರವನ್ನು ಪ್ರಕಟಿಸಿದ್ದರು ಕುಮಾರ್ ಅವರು. ಚಿತ್ರದ ವಿವರಗಳು ಹೀಗಿದ್ದವು:
"ಹತ್ತನೇ ಶತಮಾನದ ವೀರಗಲ್ಲಲ್ಲಿ ಜೀನ್ಸ್ ಮತ್ತು ಮೊಬೈಲ್!"
'ಬೇಗೂರಿನಲ್ಲಿ ಹೊಸ ಕಟ್ಟಡಕ್ಕಾಗಿ ಪಾಯ ತೊಡುತ್ತಿದ್ದ ಸಮಯ ಕಲ್ಲು ಸಿಕ್ಕಿತು. ಕಲ್ಲಲ್ಲಿ ಲಿಪಿಗಳು ಕಂಡು ಬಂದಿಲ್ಲ. ಗಂಗರ ಶೈಲಿಯ ವೀರಗಲ್ಲಿನಲ್ಲಿ ಕಾಣಿಸಿಕೊಳ್ಳುವ ಇಬ್ಬರು ವ್ಯಕ್ತಿಗಳ ಉಡುಪುಗಳು ಇಂದಿನ ಜೀನ್ಸ್ ಪ್ಯಾಂಟ್ ಮತ್ತು ಟಿ ಷರ್ಟನ್ನು ಹೋಲುತ್ತವೆ. ಓರ್ವ ವ್ಯಕ್ತಿಯ ಕೈಯಲ್ಲಿ ಹಿಡಿದಿರುವ ವಸ್ತು ಪುಸ್ತಕದಂತೆ ಕಂಡರೂ, ಅದರ ಆಕಾರ ಬಹಳ ಚಿಕ್ಕದ್ದಾಗಿದೆಉಡುಪು ಜೀನ್ಸ್ ಎಂಬುದು ಖಚಿವಾಗಿರುವುದರಿಂದ, ವ್ಯಕ್ತಿ ಹಿಡಿದಿರುವ ವಸ್ತು ಮೊಬೈಲ್ ಆಗಿರಲು ಸಾಧ್ಯ ಎಂಬುದು ಅನೇಕರ ಅನಿಸಿಕೆ! ವಿಚಿತ್ರ ವೀರಗಲ್ಲ ಬಗ್ಗೆ ಸಂಶೋದನೆಗಳು ನಡೆಯಲಿವೆ.' 
ನಂದನಾ ಮತ್ತು ಅಭಿ ಎಂದಿನಂತೆ ಕಣ್ಣಲ್ಲೇ ಸಂಭಾಷಣೆ ನಡೆಸಿದರು. ಇಬ್ಬರ ಮನಸ್ಸಲ್ಲೂ ಒಂದೇ ಯೋಚನೆ!
'ತೊಂಡಬ್ಬೆ! ತಾವು ಸಿಂಹ ಬಾವಿಯಲ್ಲಿ ಕಣ್ಮರೆಯಾದದ್ದನ್ನು ಕಂಡು ಅವಳು ಅದೆಷ್ಟು ಮರುಗಿದಳೋತಮ್ಮಿಬ್ಬರಿಗಾಗಿ ವೀರಗಲ್ಲನ್ನು ಅವಳೇ ಕೆತ್ತಿಸಿರಬೇಕು!'
--------------------------------------------------------------------------------------
ಮೂರು ಬೇಗೂರು ಶಾಸನಗಳ ಆಧಾರದ ಮೇಲೆ ರಚಿಸಲ್ಪಟ್ಟ ಟೈಮ್ ಟ್ರಾವೆಲ್ ಫ್ಯಾಂಟಸಿ ಕಥೆ .
ನಾಗತ್ತರನ ವೀರಗಲ್ಲು - E C 83
ತೊಂಡಬ್ಬೆ ಸನ್ಯಾಸಂ ಗೈದು ಮುಡಿಪಿದಳ್ - E C 94
ಬೆಂಗಳೂರು ಕಾಳಗ 

------------------------------------------------------------------------------------

*****************************************
Riding on the back of Time
“ Yey ! Its Weekend !  
Nandana and Abhinandan , just back from school on Friday, were in great spirits.
“ Mom, lets go to see ' Avengers The Endgame' , morning show tomorrow.  
“ And in the evening lets go to Dragon Glass Escape Room ! Solving mysteries by taking challenges there is so much fun it seems.  

Mom smiled at the excited demands of her twins .
“ Dad has already made plans for an outing tomorrow.   she told them .
“ Great ! Where are we going ?  
“ Surprise !   laughed  Mom.
They had to wait till Dad returned from work and sat down for dinner . 
“ Dad , what's the surprise ? Where are we going tomorrow ?  
“ To a great place that was famous in the 10th Century : Veppur !  
“ Veppur ? Where is that ? Never heard of it !  
“ The Ganga king Ereyappa Nitimarga had brought 96000 villages under his rule and in that period Nagattara was governing Veppur and nearby regions for him. He had made it a wonderful place with a Fort , a tank and a grand temple.....that's what we are going to explore .”
The children were disappointed .
“ Oh Dad , looking at a bunch of old ruins is no fun !  sulked Abhi.
“ Waste of weekend .” grumbled Nandana.
“ Tell me kids , what is of utmost importance to life ?  Asked Dad , changing the topic completely. .
“ Food, clothing, shelter.  chorused the twins, without enthusiasm.
“ And Roots .   added Dad ,” In a few years from now both of you may be far away in some foreign country , studying or working . Wherever you go, you must not forget  your Roots . You must have a sense of belonging , a feeling for our native land , our people, our culture and traditions , so that you always have that rootedness , sense of belonging  to a place , a culture . That's what gives us self confidence and self respect, which is important for mental and emotional wellbeing. Those who have no sense of belonging to their roots are like kites cut off from the string , tossing around in the wind.  
“Why  are you lecturing all this now Dad ?  
“ Patience, my dears ! I am coming to that ......tell me how can we know our roots ? By studying the relics left by ancestors, the remnants left behind by history .......our ancient temples are not merely places of worship. We can understand so much about the historical times , about the ancient  society, their languages,scripts,customs , art , occupations, achievements and much more . Temples are like Universities.”
“ So we have to visit an old university tomorrow ?  The children  sulked :“ what a bore !  
“ We will watch Avengers next weekend.   promised Mom, to pacify them. 

*****************************************

The next day -
Having driven through heavy city traffic for an hour , they had arrived at a rural suburb with muddy roads and humble houses. It wasn't so crowded like the city.
“ We are here !  Announced Dad.
“ Hardly an hour from home , already we arrived?   wondered Nandana.
“ Right !   said Dad. “Ancient Veppur is now called Begur and is a part of ever growing Bengaluru !  
“ Puja at the temple first , and then we go exploring.  Announced Mom .
But when they arrived at the Nagareshwara temple within the Panchalingeswara temple complex, the sanctum was screened off for rituals . They had to wait .
The children were restless and started looking around the temples. There were a lot of stone slabs strewn around , some with carvings . Beyond the temple was the Kere, tank , and far away would be the Fort which Dad had spoken  about .
“ Mom, instead of sitting here doing nothing , we will go explore the place .  They pestered their mother .  We will be back soon.  
“ No , don't go wandering off now . After the puja, we will all go exploring .” Said Mom.
“ Let them go for a while.   recommended Dad , “ Yesterday they  were disappointed that I was dragging  them here, at least now they are showing some interest !.......Ok , kids, don't go too far , be back soon !  
“ Ok , don't worry , Dad !  
Had they known the kind of trouble the children would be getting into , their parents would never have permitted them to go .

*****************************************Nandana and Abhi were standing by the lake , admiring the lotus blooms and waterbirds dotting the tank. The weather was pleasant.
“ This is a lovely  picnic spot.   Said Nandana  “ We can sit here and enjoy the puliyogre and curd rice Mom has packed .  
“ I hadn’t expected a village to look so lovely !   said Abhi walking further .
Nandana , who was observing a cormorant diving for fish, was startled when Abhi called  out suddenly :
“ Nandu , come here ! Look at this !   he shouted , pointing in front of him.
She hurried to where he was , looked where he was pointing at . She too was astonished .
Hidden among wild bushes , was a lovely sculpture of a large stone lion . Between its front legs was the mouth of a large well without steps . But it had carvings of beautiful scrolls and vines all around its mouth. But , It was deep, dark and in a ruined state .
“ Dad was saying , under Nagattara , Veppur was a beautifully built city ....this well looks beautiful even in ruins . I wish we were there during that time .  

The moment he said that, there was a deep gurgling noise inside the well. Curious to  see what it was , the children  stepped closer and peeped in.
Bubbling from within and swirling upwards was a thick dark plume of what looked like heavy smoke . Rising upwards, the swirl sucked the two children into its hollow tube like center and collapsed into the well again.

*****************************************Nandana opened her eyes with a start when she felt water being sprinkled on her face . She found herself sitting on the bank of a lake .
“ Buttanna ! Should I bring more water ?   cried a lad , standing in the water nearby .
“ No need , Pervona , the boy is also waking up . 

The sound of innumerable water birds filled the air . The huge lake stretched up to the horizon , much larger than what they had first seen . The environment  looked different .
“ This is weird !   declared Abhi.
The lad called Pervona , came near him and enquired politely : “Are you feeling better now ?  
The other lad, Buttanna asked “ Why did you fall unconscious ? We were just passing by this path and saw you lying here .”
The attire and manner of the two lads were very strange . They wore earrings, bracelets, arm bands and neck chains . Their clothing was simple with a dothi worn as kacche and a cloth across the shoulders . They had lots of hair which was tied up as buns on the side of  their heads. Both had long swords hanging at their waists .
“ Oy ! Who are you ? Where do you come from ?   asked Buttanna.
“ We are from Bangalore ...  stuttered Nandana in English .
“ Uh ?   they stared at her . They did not understand  a word of what she said .
“ We are from a different  city .   said Abhi slowly , in Kannada “We came to see Begur Panchalingeswara temple . 
“ Ah , understood !   Said Buttanna , “ what you mean is Veppur Panchalingeswara ! Its just over there , look   He pointed it out.

*****************************************
At Nagareshwara temple , the screen was still closed .
“ Wonder where the kids have gone .....” mumbled  Mom, a little anxious. “ its been quite some time since they went off . 
“ Don’t  worry , they will not get lost .  said Dad .  They must be looking at the hero stones outside the temple . 
“ Hope they return soon ......why can't they sit quietly for a while ! Restless as monkeys !

******************************************Panchalingeswara temple looked like it was newly built . The stones were shiny with polish . The fragrance of flowers and incense wafted around . Bells were tinkling , people were walking about .
On one corner were sculptors working on a gigantic stone slab . They were carving a very large  pictorial panel depicting a war . It showed innumerable figures engaged in fierce fighting and many animals too . The  central figure was a horseman facing a charging elephant which had arrows stuck in its head .
“ Tondabbe !  
The girl who was supervising the sculptors intently , turned around.
“ O , Buttanna ! Pervona ! Had a good hunt ?  She  enquired, even as her eyes went towards the two strangers standing  with the lads.
The long cylindrical attire they were wearing and their limbs, ears and neck totally devoid of any ornaments surprised her very much .

Nandana and Abhi were equally surprised by Tondabbe . Though she seemed to be about their own age , she was wearing a saree like an aged lady , with ornaments all over her body.

“ Yes, a good hunt . Have sent it up to The Fort .   Said the lad named Buttanna , “ Pervona and I just went to the kere ( Tank) to clean up and we found these two people unconscious there. They seem lost and want to return home .”
“ And they  are saying  added Pervona , “ if they find something called Bus , they  can go home it seems . We can hardly understand what they speak . 
The girl, Tondabbe , turned to Nandana and kindly enquired their names, in a strange,  formal way .
“ I am Nandana , my brother is Abhinandan . We are from Bengaluru .....if you can kindly show us the way to Begur Bus stand , we can take a bus to reach home .”
“ What is Bus ?   asked Tondabbe “ is it some animal you can ride, like horse or elephant ?  
“ No , no ! Not an animal. Its a vehicle in which 40 or 50 people can travel together . That's how we travel in our City .”
“ Is that so ? How strange ! I have never heard anyone tell us that Bengaluru has such kind of carts without animals ? ” Exclaimed Tondabbe , while Buttanna and Pervona whispered something to each other .
Nandana felt uneasy and a bit scared .
“ Abhi , I think there is no point in asking help from these people . The whole place looks so different . No roads. No vehicles. No electric poles .Cannot see any apartment high rise in the horizon ....And the temple looks brand new , the people going about look like characters in a historical play ! And I don't like the way they are looking at us - like we are some zoo exhibits !  
“ You are right ! Do you think we have ....somehow....come into The Past ?”

“ Nandanabbe !   Tondabbe’s  sweet voice hailed “ you seem to have come from very far away . You look tired and hungry . Why don't you come home and have some food and rest ? Come !  
“ We have to go back....” mumbled Nandana. 
“ My brother has gone on a trip to meet King  Nitimarga and will return soon. He will find some way to send you home safely.   
Tondabbe then turned to Buttanna and said “ You stay here and see to it the script writers don't make any mistakes, Iruga will not tolerate any imperfection.  
She then touched the central  figure of the horseman on that huge slab affectionately . Her eyes went moist as she told them : 
“ My Father ! Nagattara ! ....fought bravely in the Tumbepadi battle and killed a war elephant that was rampaging among our troops .”
“ Father died a heroic death” added Buttanna,  “so our King honoured his memory by giving the title Nagattara to our brother  Iruga along with an honorarium of  12  Villages.

Nandana and Abhi were astounded. They remembered Dad telling them about the vast Ganga kingdom and Nagattara governing the Veppur region. This is Nagattara’s family ? They were really in 10th century !!!!

“ Come ! Its already noon , lets go home   said Tondabbe , leading the way .
Following her , Nandana took out the mobile phone from her jeans pocket and jabbed the blank screen frantically .
“ What is that ?  Asked the curious Tondabbe while Pervona craned his neck to get a good look too.
“ Its a mobile ....a machine ....a Yantra ...with which we can speak to people very far away .”explained Nandana, still fiddling with it.
“ Stupid !   Chided Abhi “ What are you trying ? There was no mobile phone service in 10th Century , you fool !  
Nandana glared at him “ I know that . You shut up . 

Though Tondabbe could not understand what they were speaking , she could understand both were tired , hungry and in very bad mood.
“ Pervona , you please go to the Basadi and see if The Master is there. Perhaps he will understand  what these people are saying and find a way to help them.”
Having sent him off , she took them both towards the Fort.

********************************************
At Nagareshwara temple , the screen had been lifted, puja had been completed and Dad and Mom were in the courtyard wondering why  the children had not returned yet .
“ You wait here,   Said Dad ,” I will go and bring them back from where ever they are roaming .”********************************************


Nagattara’s home was in the middle of the circular Fort , inside which were various other buildings like  the armouries, the grain silos and the stables too .
Nandana and Abhi were sitting in a small room in the mansion , lost in thought  and anxiety.
“ Here you are ! Please do eat !   Tondabbe placed a large tray of many eatables before them “I hope you like Iddalige ?  

Since both were very hungry , the sight of jasmine soft dumplings soaked in fragrant  ghee  made Nandana’s and Abhi’s mouths water. 
“ Will you not eat with us ?   asked Nandana .
“ I will wait for brother  Iruga . We all eat together .....you just enjoy the meal and then lie down and rest well.  
They needed no more prompting . Both of them polished off the whole plate of iddaliges , making Tondabbe very happy . Telling them to rest , she left the room .

Once the hunger pangs were appeased , the twins felt much better and regretted their recent  foul moods.

“ Nandu , lets not waste time resting . We must think of a way to escape from this Time frame.”

“ We can only leave the same way we came into this Time .....try to remember how we came here ....”

“ We were at the Kere  ....then we saw the lovely Lion Well .... then we were saying what a nice town Nagattara had made .....and saying wish we were there then .....”

“ And that's when some black smoky swirl came up and sucked us into the well and we lost consciousness ...!  

“ It plucked us from one Dimension of Time and hurled us into another Dimension ....whatever it was ....Blackhole ....Wormhole ....that was the portal between different Dimensions  of Time !!!  

“ Oh my god ! Have we really done  Time Travel or is this a dream?  
Both were totally shaken by the thought .

Just then, convincing  them it was not a dream , came Pervona’s voice :
“ Abhiyanna ! Nandanabbe  ! Did you rest well ?   He entered  the room and sat down in front of them.

“ Pervona ! Please tell us , was there any well near the place where you found us unconscious ?   Abhi asked in  a feverish  tone  .
“ Ayyo ! Why are you asking ? .....yes , there is a Lion-well a little way off , but it is haunted ! By a Yashi. .....Who ever goes near it disappears totally ! ....no one from our town ever goes near it.!!!  

Abhi and Nandana looked at each other knowingly .
God knows how many unfortunate people wandered near it and got sucked into some other Dimension of Time and are suffering there !

They needed to find that well if they had to return to their time......but what if the well sent them to some other Time frame ! ......they shuddered to even think of it . They decided  that  if they found the well , they would very strongly  , single mindedly make the precise wish to get back exactly to their own time and place .....

***********************************************Iruga , just returning from his long  trip, stormed  into the house with great fury , followed by an anxious Buttanna .
“ Where are they !  ,Shouted Iruga “ Where are the foreigners ?  
Tondabbe came out from the kitchen saying “ Welcome back Iruganna ! Come, lets have lunch.  
“ Lunch can wait !  Growled Iruga “Tell me where the foreigners are hiding ? Those wretched Nolambas have been raiding our boundaries frequently and waiting for a chance to invade us. Just when we have to be extra vigilant , we allow two strangers , unknown refugees , to take shelter in Nagattara’s own house ! What a shameful breach of security ! ...I am very sure they are Nolamba spies.  

“ No, no ,brother , they cannot be  spies . They are just lost, poor souls . I have promised  them to get your help for returning home safely.  

“ Tondabbe ! You are still an innocent girl who does not understand war or danger .  

“ They are unarmed , Iruganna !” mumbled Pervona, stuttering in fear.

“ So what if they are unarmed , you fool ! They have some Yantra through which they can talk to people at distant places ! They can relay reports of our town to their Masters and help them invade us at any  vulnerable moment !  
“ Iruganna ! How do you know of their yantra ?   asked a very surprised Tondabbe .
“ Though I keep traveling, I have eyes and ears in all places who will gather information for me . I have spies . Same way , Nolambas also have spies ....And those people you sheltered  are Spies ! Where are they ?  
Iruga entered the room and caught sight of Nandana and Abhi , who had turned white with fear .
“ No time to lose !   roared Iruga , “ Buttanna! Pervona ! Tie up these two and haul them to the dungeons  

The twins froze in terror . Were they to rot in a 10th Century dungeon forever ?
But very next moment , Abhi jumped up , yanking Nandana’s arm .
“ Nandu ! Its now or never ! RUN !   he screamed darting out of the door , pushing aside Pervona. “To the Kere ! The Well ! The Well !  

Iruga was startled by this unexpected move and started bellowing :
“ Get them ! Get them ! ...” and ran to the shed behind the house , to find his horse .
Buttanna and Pervona ran behind the twins , shouting “:Wait ! Don't  go near the Well ! The Yakshi will get you !  

It was precisely towards the well that Abhi and Nandana ran , streaking like lightning , but muttering the steadfast prayer :
“ Begur Panchalingeswara temple....Mom...Dad....Our car ....Mom ...Dad ...Our car ....”

Just as Iruga , on a horse , was closing in on them , they reached the well muttering Mom...Dad...our Car...and the deep dark well began to gurgle . The thick smoky swirls started rising up...... 

*******************************************

Mom was losing her mind, worrying  about the children . She was pacing up and down the courtyard in great agitation , when she heard Dad’s voice :
“ Look what our Adventurous Darlings have done !  
“ Have you found them ? Where were they ?  
“ This is how our heroes went exploring ! By snoring away inside the car !  

Abhi and Nandana , who were following Dad , came up and stood before Mom , looking sheepish .
Forgetting her anger , Mom embraced them.
“ The poor dears must have been tired ! They woke up early today ! .....Do you want some fruit ?  
Nandhana , hardly listening to Mom, was scanning  the courtyard with her searching eyes, eagerly .
“ What are you looking for ?  
“ Nagattara’s Herostone panel......”
“ Oh ? You already did your homework about this place?   beamed Dad .
“ Um...we...googled last night,  Dad .  said Abhi , giving his sister a knowing look .
“ Good ! ....that huge Nagattara stone is in the Museum .....but we can see other  stones  here . 
He took them to a place within the temple compound where many hero stones were lined up . “ Look , this one here , is a very important stone that gives the name of Bengaluru in 890 CE itself!  
He pointed to a small, simple stone slab with large strange lettering.
“ What does it say , Dad ?  
“ It just records that in the war of Bengaluru , Nagattara’s son Buttana and his house-son Pervona  were killed . 

Both children were shocked . What ! Those two dear lads were killed in battle !
Their faces fell in sorrow .
“ And Tondabbe ?   asked Nandana in a small voice .
“ Oho ! You have done full research on Begur ! You know of Tondabbe  too ! .....come , we will go to the Fort now .”

The Fort was a total ruin. There was hardly anything but a round boundary marked with some  soil mounds . Only a rude stone gateway could be seen . There were no buildings at all inside , except a small temple . It was a wasteland where village kids were playing cricket .

Dad pointed to some faint writing on the pillar of the doorway . “Look , it says here that Nagattara’s daughter Tondabbe embraced monkhood . Heard there is another inscription stating that she observed sallekhana vrata....”

“ What does that mean , Dad ?”
“ It is a Jaina method of voluntarily giving up life , by fasting unto death . ”

Nandana felt a lump in her throat . Oh god ! That sweet girl who had so lovingly fed us , herself starved to death !
Both children fell silent as their parents took them exploring the town. There were many remnants of Jain sculptures, scattered around , including a large one of a headless Tirthankara . But no Basadi to be seen. Nor were there any trace of the armoury , the silos , the stables , nothing .
That whole historic town they had so recently seen had vanished completely !

That evening , seeing  that the children were unusually quiet and thoughtful , Mom suggested that they could  all go to Dragon Glass Escape Room and have fun playing detectives.
Strangely , they seemed uninterested . They had had a better adventure, being actually mistaken for spies !
“ Lets go to the Museum tomorrow .   said Abhi “ We want to see the Nagattara’s hero stone .  
Dad smiled at Mom , saying “ Good , they have picked  up a new in
************************************************
EpilogueMom was astonished to see her kids, who usually made a face and refused to eat Idlis , gobbling  them by the dozen and asking for more.

“ What has got into you people ! Abhi always complained idlis are tasteless, Nandu always said its rice, and is fattening ....now opinion changed ? How ? ”

“ Idlis are our Heritage food, Mom ! Even during 10th Century , people around here were savouring soft-as-jasmine idlis drenched in home made ghee ! Yummy ! How good  it tasted ! 

“ As though you tasted it yourself ! Said Mom.
“ What  he says is 100% correct .....” Said Dad .“ Idli is indeed Heritage food . ...there’s a grantha  called Vaddaradhane , a 10th Century work which talks of Iddalike ! 

Just then, his phone beeped a notification . Dad tapped the screen , read briefly and exclaimed “ Well , look at this !  
The others crowded around behind him to look at the screen which was open at his favourite web page “ Inscription Stones of Our City   The headline of the report read : “ Unusual, Millenium old  Memorial Stone unearthed at construction site in Begur . .
“A stone slab , looking like a hero stone, with bas relief carvings but no inscriptions , was reportedly found while excavating earth for the foundation of a high rise building . With all the features of a Ganga style hero stone , the relief work showed two figures wearing unique attire , one of them holding up a rectangular object. Experts who studied it are intrigued by the fact that the attire resembles the modern jeans -T Shirt and the object in hand looks like a mobile phone . The stone has been sent for further study and analysis .”

Abhi and Nandana gazed at the picture of the stone and then at each other . Both had the same thought .
‘ Tondabbe ! Having seen us disappear into the Lion Well , she must have got this memorial stone put up for us ! **********************************************
This is Time Travel Fantasy based on three Inscription Stones of Begur.
Nagattar's Hero Stone Panel - EC 83
Tondabbe observed sallekhana vratha - EC 94
Bengaluru Kalaga Inscription 

----------------------------------------------------------------