ಕಣ್ಣು ಮಿಟುಕಿಸಿದರೆ ಮಿಂಚು!
ರೆಕ್ಕೆ ಬಡಿದರೆ ಗುಡುಗು!
ಬಲವೋ ಅಗಾಧ!
ಶಕ್ತಿಯೋ ಅಲೌಕಿಕ!
ಗುಡುಗು ಹಕ್ಕಿ ಇಡೀ ಆಕಾಶದ ಅಧಿಪತಿ!
ನೀರೊಳಗಿನ ದುಷ್ಟ ರಾಕ್ಷಸ ಸರ್ಪದ ಮೇಲೆ ಮಿಂಚು ಹಾಯಿಸಿ ಸಜ್ಜನರನ್ನು ಕಾಯುವ
ದೈವೀ ಹಕ್ಕಿ!
ಗುಡುಗು ಹಕ್ಕಿಯ ಮೊಟ್ಟೆಗಳು ಬಹಳ ಧೃಡ. ಪರ್ವತ ಶಕ್ತಿಗಳು ಕೆರಳಿ ಬೆಂಕಿ ಕಾರಿ ಯುಧ್ಧಕ್ಕೆ
ತೊಡಗಿದಾಗ, ಶಿಖರಗಳಲ್ಲಿ ಮನೆ ಮಾಡಿದ್ದ ಗುಡುಗು ಹಕ್ಕಿಗಳ ಗುಡುಗು ಮೊಟ್ಟೆಗಳ ಪ್ರಹಾರ
ಮಾಡಿ ಪರಸ್ಪರ ಸೆಣಸಿದವಂತೆ!
ಬುಡಕಟ್ಟಿನ ಅಮೇರಿಕ ಜನಾಂಗದ ಇತಿಹಾಸ ಪುರಾಣಗಳಲ್ಲಿ, ಕಲೆ ಮತ್ತು ಕರಕುಶಲ
ವಸ್ತುಗಳಲ್ಲಿ,ಜಾನಪದ ಗೀತೆಗಳಲ್ಲಿ ಒಂದು ವಿಶಿಷ್ಟ ಸ್ಥಾನ ವಹಿಸುತ್ತದೆ ಗುಡುಗು ಹಕ್ಕಿ.
ವಂಶ ವೃಕ್ಷದ ವಿವರಗಳನ್ನೂ, ಆಯಾ ಮನೆತನದ ನಾಯಕನ ಬಗೆಗಿನ ಕಳೆದುಹೋದ
ಪ್ರಸಂಗಗಳ ವಿವರಗಳನ್ನೂ ಹೊತ್ತು ಪ್ರತಿಯೊಂದು ಮನೆಯ ಮುಂದೆಯೂ
ಸ್ಥಾಪಿತವಾಗಿರುವ 'ಟೋಟೆಮ್ ಪೋಲ್' ಎನ್ನಲಾಗುವ ವರ್ಣಮಯವಾದ ಕಂಬದ ಮೇಲೆ
ಗುಡುಗು ಹಕ್ಕಿಯ ಲಾಂಛನ ಕಂಡು ಬರುತ್ತದೆ.
ಸ್ಥಾಪಿತವಾಗಿರುವ 'ಟೋಟೆಮ್ ಪೋಲ್' ಎನ್ನಲಾಗುವ ವರ್ಣಮಯವಾದ ಕಂಬದ ಮೇಲೆ
ಗುಡುಗು ಹಕ್ಕಿಯ ಲಾಂಛನ ಕಂಡು ಬರುತ್ತದೆ.
'ಥಂಡರ್ ಬರ್ಡ್' ಒಂದು ಪೌರಾಣಿಕ ಪಕ್ಷಿಯಾಗಿದ್ದರೂ 'ಥಂಡರ್ ಎಗ್ಸ್' ಎಂಬ ಗುಡುಗು
ಮೊಟ್ಟೆಗಳು ಅಮೆರಿಕಾದ ಪೆಸಿಫಿಕ್ ನಾರ್ತ್ ವೆಸ್ಟ್ ಪ್ರದೇಶದಲ್ಲಿ ಹೇರಳವಾಗಿ ಕಂಡುಬರುತ್ತವೆ.
ಇಂದಿನ ಮೌಂಟ್ ಹೂಡ್ ಮತ್ತು ಮೌಂಟ್ ಜೆಫರ್ಸನ್ ಎಂಬ ಜ್ವಾಲಾಮುಖಿಗಳು
ಸ್ಪೋಟಗೊಂಡು ಅಗ್ನಿಶಿಲೆಗಳನ್ನು ವರ್ಷಿಸಿದಾಗ, ಪರ್ವತ ಶಕ್ತಿಗಳು ಗುಡುಗು
ಮೊಟ್ಟೆಗಳನ್ನು ಬೀರಿ ಯುದ್ಧ ಮಾಡುತ್ತಿವೆಯೆಂದು ಆದಿವಾಸಿಗಳು ನಂಬಿದರು.
60 ಮಿಲಿಯನ್ ವರುಷಗಳ ಕೆಳಗೆ ಜ್ವಾಲಾಮುಖಿಗಳಿಂದ ಹೊರ ಹೊಮ್ಮಿದ ಶಿಲಾರಸವು
ಪ್ರವಹಿಸಿದ್ದ ಪ್ರದೇಶಗಳಲ್ಲಿ 'ಥಂಡರ್ ಎಗ್ಸ್' ಎಂಬ ದುಂಡನೆಯ ಆಕಾರದ
ಅಗ್ನಿಶಿಲೆಗಳು ಕಂಡುಬರುತ್ತವೆ.
ಅಗ್ನಿಶಿಲೆಗಳು ಕಂಡುಬರುತ್ತವೆ.
ಶಿಲಾರಸದಲ್ಲಿಯ ಅನಿಲ ಗುಳ್ಳೆಗಳ ಅಚ್ಚಿನಲ್ಲಿ ಈ ದುಂಡನೆಯ ಕಲ್ಲುಗಳು ರೂಪಗೊಂಡಿವೆ
ಎಂಬುದು ಭೂವಿಜ್ಞಾನಿಗಳ ಹೇಳಿಕೆ. ಕ್ರಮೇಣ ತಂಪಾದ ಸರಂಧ್ರ ಶಿಲಾರಸ ಕಲ್ಲುಗಳಲ್ಲಿ
ಎಂಬುದು ಭೂವಿಜ್ಞಾನಿಗಳ ಹೇಳಿಕೆ. ಕ್ರಮೇಣ ತಂಪಾದ ಸರಂಧ್ರ ಶಿಲಾರಸ ಕಲ್ಲುಗಳಲ್ಲಿ
ನೀರಿನೊಂದಿಗೆ ಬೆರೆತ ಸಿಲಿಕಾ ಸಹ ಒಳಹೊಕ್ಕು ಟೊಳ್ಳು ಜಾಗಗಳನ್ನು ಆಕ್ರಮಿಸಿಕೊಂಡಿತು.
ರಂಧ್ರಗಳ ಮೂಲಕ ಒಳಗೆ ಸೇರಿಕೊಂಡ ವಿವಿಧ ಖನಿಜಗಳು ಪದರು ಪದರಾಗಿ ಒಳಗೆ
ಶೇಖರವಾದವು.

'ಥಂಡರ್ ಎಗ್' ಕಲ್ಲನ್ನು ಎರಡಾಗಿ ಕತ್ತರಿಸಿ, ಕತ್ತರಿಸಿದ ಬಾಗವನ್ನು ನುಣುಪುಗೊಳಿಸಿ
ಮೆರುಗು ಕೊಟ್ಟರೆ ಖನಿಜಗಳ ರಾಸಾಯನಿಕ ರಚನೆಗನುಗುಣವಾದ ಬಣ್ಣಗಳಲ್ಲಿ
ಬಗೆಬಗೆಯ ಅದ್ಬುತ ಚಿತ್ರಗಳಂತಹ ವಿನ್ಯಾಸಗಳು ಮೂಡಿಬಂದಿರುವುದನ್ನು ಕಾಣಬಹುದು.

'ಥಂಡರ್ ಎಗ್' ಕಲ್ಲನ್ನು ಎರಡಾಗಿ ಕತ್ತರಿಸಿ, ಕತ್ತರಿಸಿದ ಬಾಗವನ್ನು ನುಣುಪುಗೊಳಿಸಿ
ಮೆರುಗು ಕೊಟ್ಟರೆ ಖನಿಜಗಳ ರಾಸಾಯನಿಕ ರಚನೆಗನುಗುಣವಾದ ಬಣ್ಣಗಳಲ್ಲಿ
ಬಗೆಬಗೆಯ ಅದ್ಬುತ ಚಿತ್ರಗಳಂತಹ ವಿನ್ಯಾಸಗಳು ಮೂಡಿಬಂದಿರುವುದನ್ನು ಕಾಣಬಹುದು.

ಗುಡುಗು ಹಕ್ಕಿಯ ಗುಡುಗು ಮೊಟ್ಟೆ ಸಂಗ್ರಹಿಸಲರ್ಹವಾದ ಅಮೂಲ್ಯವಾದ ಭೂನಿಧಿ!