ಬಿಲ್ಲನಕೋಟೆ ಭೂಕಂಪ !
" ಯಾಕ್ಲಾ ಮಗ ! ಮಂಕಾಗಿ ಕುಂತಿದ್ದೀ ? "
ಮುಖ ಊದಿಸಿಕೊಂಡು ಒಂದು ಬಂಡೆಯ ಮೇಲೆ ಕುಳಿತಿದ್ದ ದೊಡ್ಡವೀರಯ್ಯ , ಕಾಳಜಿಯಿಂದ ಪ್ರಶ್ನಿಸಿ ತನ್ನ ಸಮೀಪ ಬಂದು ಕುಳಿತ ಬುಕ್ಕಜ್ಜನನ್ನು ತಿರುಗಿಯೂ ನೋಡಲಿಲ್ಲ !
ಅಂದು ಬೆಳ್ಳಂಬೆಳಿಗ್ಗೆ ಎದ್ದ ಕೂಡಲೇ ಶುರುವಾಗಿತ್ತು ಅವ್ವನ ಕೂಗಾಟ . " ಮೇವಿಗೆ ಬುಟ್ಟ ಆಕಳುಗಳ ಕಡೆ ಗಮನ ಬ್ಯಾಡ್ವೇ ? ಬೆಟ್ಟದ್ಮ್ಯಾಗೆ ಆ ಒಂಟಿ ಪಿಚಾಚಿ ಬುಕ್ಕಜ್ಜನ್ ಕೂಡ ಕುಂತು ಅದೇನ್ ಮಾಡಕ್ಕ ಒಂಟಿದ್ಯೋ ? ಈಗ್ ಏನಾಗದೆ ನೋಡು ! ಸರಿಯಾದ ಮೇವಿಲ್ದೆ ಒಂದು ಆಕಳೂ ಆಲು ಕೊಡ್ತಿಲ್ಲ ! ಇಂಗಾದ್ರೆ ವ್ಯಾಪಾರ ನಡೆಯೋದೇಂಗೆ ? ಮಾಡೋ ಕೆಲಸದಾಗೆ ಗ್ಯಾನ ಇರ್ಲಿ ! ಇವತ್ತೇನಾರ ಬೆಟ್ಟದ್ ತಾವ ಓದ್ಯೋ ನಾ ಸುಮ್ಕಿರಾಕ್ಕಿಲ್ಲಾ ! " ಎಂದು ಗದರಿದ್ದಳು ಅವ್ವ .
ಬೆಟ್ಟದ ಬುಡದಲ್ಲಿದ್ದ ಹುಲ್ಲುಗಾವಲಿಗೆ ಆಕಳುಗಳನ್ನು ಕರೆದೊಯ್ಯುತ್ತಿದ್ದ ದೊಡ್ಡವೀರಯ್ಯ ಬುಕ್ಕಜ್ಜನೊಂದಿಗೆ ಸ್ನೇಹ ಬೆಳೆಸಿದ್ದನು. ಬುಕ್ಕಜ್ಜನಿಗೂ ಆ ಚುರುಕಾದ ಹುಡುಗನಲ್ಲಿ ಏನೋ ಒಂದು ವಾತ್ಸಲ್ಯ. ತಾನು ನೋಡಿದ್ದ ಊರುಗಳ ಬಗ್ಗೆ, ಅಲ್ಲಿಯ ಜನ, ಅವರುಗಳ ಭಾಷೆ , ಕಲಾಚಾರ, ನಾಡನ್ನಾಳಿದ ದೊರೆಗಳು, ಯುದ್ಧಗಳು, ಸಮುದ್ರ ತೀರಗಳು, ಹಡಗುಗಳು, ಅವುಗಳು ಹೊತ್ತು ತಂದ ವಿದೇಶಿ ಜನಗಳು, ಸರಕುಗಳು .... ಇನ್ನೂ ಅನೇಕ ಸ್ವಾರಸ್ಯಕರವಾದ ವಿಷಯಗಳ ಬಗ್ಗೆ ಹುಡುಗನಿಗೆ ವಿವರಿಸಿ ಹೇಳುತ್ತಿದ್ದನು. ಅದನ್ನೆಲ್ಲ ಬಾಯಿ ಬಿಟ್ಟುಕೊಂಡು ಕೇಳಿಸಿಕೊಳ್ಳುತ್ತಿದ್ದ ದೊಡ್ಡವೀರಯ್ಯ ಬೇರೆಯೇ ಒಂದು ಕನಸಿನ ಲೋಕಕ್ಕೆ ಹೋಗಿಬಿಡುತ್ತದ್ದ.
ಬುಕ್ಕಜ್ಜ ಇಡೀ ದೇಶ ತಿರುಗಾಡಿ ಕೊನೆಗೆ ಬಂದು ನೆಲೆಸಿದ್ದು ಹಸಿರು ಬೆಟ್ಟ ಗುಡ್ಡಗಳಿಂದ ಆವರಿಸಲ್ಪಟ್ಟಿದ್ದ ಈ ಪುಟ್ಟ ಗ್ರಾಮದಲ್ಲಿ. ಅವನ ಪಾಡಿಗೆ ಯಾರ ಉಸಾಬರಿಗೂ ಹೋಗದೆ ಬೆಟ್ಟದ ತಪ್ಪಲಲ್ಲಿ ಮನೆ ಮಾಡಿಕೊಂಡು ಒಂಟಿಯಾಗಿ ಬದುಕುತ್ತಿದ್ದನು. ಅವನಿಗೆ ಅವ್ವ ಕಟ್ಟಿರೋ ಪಟ್ಟ 'ಒಂಟಿ ಪಿಚಾಚಿ' !
" ಅದ್ಯಾಕ್ ಬುಕ್ಕಜ್ಜ ನಮ್ ಗ್ರಾಮ ಬುಟ್ಟು ಈ ಬೆಟ್ಟದ್ಮ್ಯಾಗೆ ಒಂಟಿಯಾಗಿ ಮನೆ ಮಾಡ್ಕಂಡೀ ? ಬೇಸ್ರ ಆಗಾಕಿಲ್ವಾ ? " ಎಂದು ಒಮ್ಮೆ ದೊಡ್ಡವೀರಯ್ಯ ಬುಕ್ಕಜ್ಜನನ್ನು ಪ್ರಶ್ನಿಸಿದ್ದ.
" ಜನ ಜಂಗುಳಿ ನೋಡಿ ನೋಡಿ ಸಾಕಾಗೈತೆ ಕಣ್ ಮಗ ! ಸುಮ್ಕೆ ಒಂದ್ತವ ಕುಂತ್ರೆ ಸಾಕು ಅನ್ನಿಸ್ತು. ಈ ಚಂದದ ಗ್ರಾಮ ಬಲು ಇಷ್ಟ ಆಯಿತು. ಈ ಬೆಟ್ಟ , ಅದ್ರ ಮ್ಯಾಗಿರೊ ಬಂಡೆಯುಂಡೆಗಳು ಎಲ್ಲಾನೂವೆ ನಂಗೆ ತೀರಾ ಆಪ್ತ ಅನ್ನಿಸ್ತದೆ. ಜೀವಮಾನ ಎಲ್ಲ ಕಲ್ಲುಗಳ ಒಡನಾಟದಲ್ಲೇ ಕಳ್ದೀವ್ನಿ ! ಅದಕ್ಕೆ ಇರ್ಬೇಕು, ಈ ಬಂಡೆಗಳು ನನ್ನ ಸೆಳೀತಿರೋದು ! " ಬೆಟ್ಟದ ಹೆಬ್ಬಂಡೆಗಳನ್ನು ನೋಡುತ್ತ ಉತ್ತರಿಸಿದಾಗ ಬುಕ್ಕಜ್ಜನ ಕಣ್ಣುಗಳು ಮಿಣಿ ಮಿಣಿ ಹೊಳೆದಿದ್ದವು .
ಬೆಟ್ಟದ ತುದಿಯಲ್ಲಿ ನಿಂತಿದ್ದ ದೊಡ್ಡ ಬಂಡೆಯನ್ನು ತೋರಿಸಿ " ಆ 'ಭೀಮನ ಬೆಣ್ಣೆ' ಎಂಗೈತೆ ನೋಡು! ಕೈ ಅಗ್ಲದ ಜಾಗದಾಗೆ ಅದು ನಿಂತಿರೋ ಅದ್ಭುತ ನೋಡ್ಲಾ ! " ಎಂದು ಆಶ್ಚರ್ಯದಿಂದ ಉದ್ಗರಿಸುತ್ತಿದ್ದ ಬುಕ್ಕಜ್ಜ .
" ಭೀಮ ಆಪಾಟಿ ದಪ್ಪ ಬೆಣ್ಣೆ ತಿಂತಿದ್ನೇ ಬುಕ್ಕಜ್ಜಾ ? " ಎಂದು ದೊಡ್ಡವೀರಯ್ಯ ಕಣ್ಣರಳಿಸಿ ಕೇಳಿದಾಗ , ಭೀಮನ ಆಕೃತಿ , ಪರಾಕ್ರಮ, ಹೊಟ್ಟೆಬಾಕತನ, ಅಡುಗೆ ಸಾಮರ್ಥ್ಯ ಎಲ್ಲದರ ಬಗ್ಗೆ ಸಣ್ಣ ಸಣ್ಣ ಕಥೆಗಳನ್ನು ಅವನಿಗೆ ಹೇಳುತ್ತಿದ್ದ ಬುಕ್ಕಜ್ಜ . ಅಂದಿನಿಂದ ದೊಡ್ಡವೀರಯ್ಯನೂ ಆ ಒಂಟಿ ಬಂಡೆಯುಂಡೆಯನ್ನು 'ಭೀಮನ ಬೆಣ್ಣೆ' ಎಂದೇ ಕರೆಯ ತೊಡಗಿದ್ದ.
ತನ್ನ ಪ್ರಶ್ನೆಗೆ ಉತ್ತರಿಸದೆ ಎಲ್ಲೋ ಕಳೆದುಹೋಗಿದ್ದ ದೊಡ್ಡವೀರಯ್ಯನ ಬೆನ್ನು ತಟ್ಟಿ ಗಮನ ಸೆಳೆಯಲು ಯತ್ನಿಸಿದ ಬುಕ್ಕಜ್ಜ .
" ಸರಿ ! ಯೋಳಕ್ಕೆ ಇಸ್ಟ ಇಲ್ಲಾಂದ್ರೆ ಬ್ಯಾಡ ಬುಡು ! ಆದ್ರೆ ಇವತ್ತು ಲಿಪಿ ಗಿಪಿ ಅಭ್ಯಾಸನಾರ ಮಾಡ್ತೀಯೋ ಇಲ್ಲ ಇಂಗೇ ಕುಂತ್ಕಂಡಿರ್ತಿಯೋ ? " ಕಡ್ಡಿಯ ಮೊನೆಯನ್ನು ಸಣ್ಣ ಕತ್ತಿಯಿಂದ ಚೂಪು ಮಾಡುತ್ತ ಮತ್ತೆ ಪ್ರಶ್ನಿಸಿದ ಬುಕ್ಕಜ್ಜ.
" ನೋಡಜ್ಜ ! ಎಷ್ಟು ಚೆಂದ ಮೇಯಿತಿವೆ ಆಕಳುಗಳು ! ನನಗೆ ಆಕಳುಗಳ ಮೇಲೆ ಗಮನ ಇಲ್ವಂತೆ !ನಾನು ಅವನ್ನ ಸರಿಯಾದ ಕಡೆ ಮೇಯಕ್ಕೆ ಬುಡ್ತಿಲ್ವಂತೆ ! ಅದಕ್ಕೆ ಆಕಳುಗಳು ಸರಿಯಾಗಿ ಆಲು ಕೊಡ್ತಿಲ್ವಂತೆ ! ಎಲ್ರ ಮನೆ ಆಕಳುಗಳದ್ದೂ ಇದೆ ಕಥೆ ಅಂದ್ರೆ ಅವ್ವ ಕೇಳಿಸ್ಕೊತಿಲ್ಲ ! ಬೆಳಿಗ್ಗೆದ್ದು ನನ್ನ ಬೈಕೋತಾ ಇದ್ಲು ! " ಎಂದು ಹುಲ್ಲುಗಾವಲತ್ತ ಕೈ ಮಾಡಿ ತೋರಿಸಿದ ದೊಡ್ಡವೀರಯ್ಯ .
ಬೆಟ್ಟದ ಬುಡಕ್ಕೆ ಅಂಟಿದಂತೆ ಸೊಂಪಾಗಿ ನಳನಳಿಸುತ್ತಿದ್ದ ಹಚ್ಛೆ ಹಸಿರಾದ ಹುಲ್ಲುಗಾವಲಲ್ಲಿ ದೊಡ್ಡವೀರಯ್ಯನ ಆಕಳುಗಳು ಮತ್ತು ಕುರಿಗಳು ಮೇಯುತ್ತಿದ್ದವು . ಸಮೀಪದಲ್ಲಿದ್ದ ಕಮಲಗಳು ಅರಳಿದ್ದ ಕೆರೆಯಲ್ಲಿ ಬಾತುಕೋಳಿಗಳು ಗುಂಪು ಗುಂಪಾಗಿ ಆಹಾರ ಹುಡುಕಿ ಈಜಾಡುತ್ತಿದ್ದವು. ದೂರದ ತೋಪನ್ನು ದಾಟಿ ನಾಲ್ಕು ಸಾಲುಗಳ ಮನೆಗಳನ್ನೊಳಗೊಂಡಿದ್ದ ಪುಟ್ಟ ಗ್ರಾಮ. ಮುಂಜಾನೆ ಮಂಜಿನ ಮುಸುಕಿನಲ್ಲಿ ಸುಂದರವಾದ ಬಣ್ಣದ ಚಿತ್ರದಂತೆ ಕಂಗೊಳಿಸುತ್ತಿತ್ತು ಬೆಟ್ಟ ಗುಡ್ಡಗಳಿಂದ ಆವರಿಸಲ್ಪಟ್ಟಿದ್ದ ಬಿಲ್ಲನಕೋಟೆ ಗ್ರಾಮ .
" ಅವ್ವ ಅಂದಿದ್ದಕ್ಕ ಇಷ್ಟು ಬೆಸ್ರಾನಾ ? ಆಕಳುಗಳು ಯಾವಾಗ್ಲೂ ಒಂದೇ ಸಮ ಇರ್ತಾವೆಯೇ ! ನೀನು ಒಳ್ಳೆ ತಾವೇ ಮೇಯಕ್ಕೆ ಬುಟ್ಟಿದ್ದೀ ! ಆಲು ಕೊಡ್ದೆ ಇರಕ್ಕೆ ಬ್ಯಾರೆ ಕಾರಣ ಇರ್ಬೋದು. " ಎಂದು ಕನಿಕರದಿಂದ ಬುಕ್ಕಜ್ಜ ನುಡಿದಾಗ ದೊಡ್ಡವೀರಯ್ಯನಿಗೆ ಸ್ವಲ್ಪ ಸಮಾಧಾನವಾಯಿತು.
" ತಗೋ ! ಕಡ್ಡಿ ಚೂಪು ಮಾಡೀವ್ನಿ ! ಎಲ್ಲ ಕನ್ನಡ ಅಕ್ಸರಾನೂ ಕಲ್ತಿದ್ದೀ ! ಈಗ ನಿನ್ನ ಎಸ್ರು ಬರಿ ನೋಡುವ ! " ಎಂದು ಉತ್ಸಾಹದಿಂದ ನುಡಿದ ಬುಕ್ಕಜ್ಜ. ದೊಡ್ಡವೀರಯ್ಯ ಕಡ್ಡಿ ಹಿಡಿದು ಬುಕ್ಕಜ್ಜ ಸಮ ಮಾಡಿದ್ದ ಮಣ್ಣಿನ ಮೇಲೆ ತನ್ನ ಹೆಸರನ್ನು ಬರೆಯಲು ಯತ್ನಿಸಿದ.
ಗುಡಿಗಳ ನಿರ್ಮಾಣ , ಶಿಲ್ಪಗಳ ಕೆತ್ತನೆ , ಶಾಸನಗಳನ್ನು ಬರೆಯುವುದು ಮುಂತಾದ ಕಲೆಗಳನ್ನು ತನ್ನ ತಂದೆ ಶಿಲ್ಪಿ ತಮ್ಮೋಜನಿಂದ ಕಲಿತಿದ್ದ ಬುಕ್ಕ. ಊರೂರು ತಿರುಗುತ್ತ ಹಲವು ರಾಜ್ಯಗಳ ದೊರೆಗಳಿಗೆ ಸೇವೆ ಸಲ್ಲಿಸುತ್ತಾ ಕಲ್ಲು ಸಂಬಂಧಿಸಿದ ಎಲ್ಲ ಕಲೆಗಳನ್ನೂ ತನ್ನ ಅಪ್ಪನಿಂದ ಕಲಿತು ಪ್ರವೀಣನಾಗಿದ್ದ. ತನ್ನ ಜೀವಮಾನದಲ್ಲಿ ಅದೆಷ್ಟು ಶಿಲ್ಪಗಳು , ಅದೆಷ್ಟು ಶಾಸನಗಳು, ಅದೆಷ್ಟು ವೀರಗಲ್ಲುಗಳನ್ನು ಕೆತ್ತಿದ್ದನೋ ? ಅದರ ಲೆಕ್ಕವೆಲ್ಲ ಬುಕ್ಕಜ್ಜನ ನೆನಪಿನಲ್ಲಿ ಇಂದು ಉಳಿದಿರಲಿಲ್ಲ . ಅನೇಕ ಸುಂದರ ಶಿಲ್ಪಗಳನ್ನು ಕೆತ್ತಿದ್ದರೂ ಬುಕ್ಕಜ್ಜನಿಗೆ ಶಾಸನಗಳನ್ನು ಕೆತ್ತುವುದರಲ್ಲಿ ಮಾತ್ರ ವಿಶೇಷ ಆಸಕ್ತಿ. ಮುತ್ತುಗಳಂತಹ ಅಕ್ಷರಗಳನ್ನು ಪೋಣಿಸಿ ತಾನು ಶಾಸನವನ್ನು ಕೆತ್ತಿದಾಗ ಮಲ್ಲಿಗೆ ದಂಡೆಯಂತೆ ಕಲ್ಲಿನ ಮೇಲೆ ಅರಳುವ ಶಾಸನ ವಾಕ್ಯಗಳ ಸೌಂದರ್ಯಕ್ಕೆ ತಾನೇ ಮಾರುಹೋಗುತ್ತಿದ್ದ ಬುಕ್ಕಜ್ಜ .
" ಶಾಸನ ಅಂದ್ರೆ ಏನು ಬುಕ್ಕಜ್ಜ ? " ಎಂದು ದೊಡ್ಡವೀರಯ್ಯ ಒಮ್ಮೆ ಪ್ರಶ್ನಿಸಿದ್ದ.
" ರಾಜಮಹಾರಾಜರು , ಅಧಿಕಾರಿಗಳು ಮತ್ತು ಧನವಂತ್ರು ದಾನಗಳನ್ನ ಮಾಡ್ತಾವ್ರೆ . ಒಳ್ಳೊಳ್ಳೆ ಕಾರ್ಯಗಳಿಗೆ ಕೊಡುಗೆಗಳನ್ನ ನೀಡ್ತಾವ್ರೆ . ಗುಡಿಗಳು , ಕೆರೆ ಕಟ್ಟೆಗಳು ಎಲ್ಲಾನು ಕಟ್ಟಿಸ್ತಾವ್ರೆ . ಯುದ್ಧದಾಗೆ ಕೆಲವು ವೀರರು ಪ್ರಾಣ ತ್ಯಾಗ ಮಾಡ್ತಾವ್ರೆ . ಇಂತಾ ಅನೇಕ ಮುಖ್ಯ ಇಸ್ಯಗಳನ್ನೆಲ್ಲ ಎಲ್ಲ ಜನರೂ ತಿಳ್ಕಳ್ಳೀ ಅಂತ ಕೆತ್ತಿಸಿ ಇಡ್ತಾವ್ರೆ . ತಮ್ಮ ಕಟ್ಟಳೆಗಳು ಸೂರ್ಯಚಂದ್ರರು ಇರೋ ತಂಕ ಖಾಯಮ್ಮಾಗಿ ಇರ್ಬೇಕು ಅಂತಲೇ ಕಲ್ಲಲ್ಲಿ ಕೆತ್ತಿಸ್ತಾವ್ರೆ . ಅವನ್ನೇ ಶಾಸನಗಳು ಅಂತೀವಿ. ತಮ್ಮ ಗ್ರಾಮವನ್ನೋ ತುರುಗಳನ್ನೋ ಕಾಯ್ತಾ ಪ್ರಾಣ ತ್ಯಾಗ ಮಾಡ್ದ ವೀರರ ಶಿಲ್ಪಗಳನ್ನ ಕೆತ್ತಿ ಜೊತೆಗೆ ಅವ್ರ ಶೌರ್ಯದ ಕಥೆಯನ್ನೂ ಕೆತ್ತಿದ್ರೆ ಅವನ್ನ ವೀರಗಲ್ಲು ಅಂತೀವಿ. " ಬುಕ್ಕಜ್ಜ ತಾಂಬೂಲ ಜಗಿಯುತ್ತಾ ವಿವರಿಸಿದಾಗ ದೊಡ್ಡವೀರಯ್ಯನಿಗೆ ತಾನೂ ಲಿಪಿಗಳನ್ನು ಕಲಿಯಬೇಕೆಂಬ ಆಸೆ ಮನದಲ್ಲಿ ಚಿಗುರೊಡೆಯಿತು.
ದೊಡ್ಡವೀರಯ್ಯನ ಆಸಕ್ತಿ ಕಂಡು ಖುಷಿಯಾದ ಬುಕ್ಕಜ್ಜ ಅಂದೇ ಅವನಿಗೆ ಕನ್ನಡ ಅಕ್ಷರಗಳನ್ನು ಪರಿಚಯಿಸ ತೊಡಗಿದ್ದ.
" ನಾವು ಕಲಿತ ವಿದ್ಯೆ ನಮ್ಮೊಂದಿಗೆ ಕೊನೆಗೊಳ್ಳ ಬಾರ್ದು ಕಣ್ ಮಗ ! ಮೂರ್ಖರಿಗೆ ಕಲಿಸೋ ವಿದ್ಯೆ ನೀರಲ್ಲಿ ಹೋಮ ಮಾಡಿದಂಗೆ ! ಆದ್ರ ಆಸಕ್ತರಿಗೆ ವಿದ್ಯಾ ದಾನ ಮಾಡಿದ್ರೆ ಅದಕ್ಕಿಂತ ಪುಣ್ಯ ಬೇರೆ ಇಲ್ಲಾಂತ ನಮ್ಮಪ್ಪ ಯೋಳ್ತಿದ್ದ ಮಗ ! ನೀನು ಶ್ರದ್ದಾ ಭಕ್ತಿಯಿಂದ ಕಲಿಯೋದಾದ್ರೆ ನಾನು ನಿನ್ಗೆ ಯೋಳ್ಕೊಡ್ತೀನಿ !"
ಅಂದು ಶುರುವಾದ ದೊಡ್ಡವೀರಯ್ಯನ ಲಿಪಿ ಕಲಿಕೆ ಇಂದು ಅವನು ಹೆಸರನ್ನು ಬರೆಯುವಷ್ಟು ಮುಂದುವರಿದಿತ್ತು.
" ನೋಡು ಬುಕ್ಕಜ್ಜ ! ನನ್ನ ಎಸ್ರು ಬರೆದೀವ್ನಿ ! " ಚೂಪಾದ ಕಡ್ಡಿ ಬಳಸಿ ಮಣ್ಣ ಮೇಲೆ ತಾನು ಬರೆದದ್ದನ್ನು ಹೆಮ್ಮೆಯಿದೆ ತೋರಿಸಿದ ದೊಡ್ಡವೀರಯ್ಯ .
" ಭಲಾ ಮಗ ! ಭಲಾ ! ಮುಂದೆ ಕಲ್ಲಲ್ಲಿ ಕೆತ್ತೋದೆ ! " ಎಂದು ಶಿಷ್ಯನ ಬೆನ್ನು ತಟ್ಟಿದ ಬುಕ್ಕಜ್ಜ .
" ಉಳಿ ಸುತ್ತಿಗೆ ಮುಂತಾದ ನನ್ನ ಕೆತ್ತನೆ ಸಾಮಗ್ರಿ ಎಲ್ಲ ತಕ್ಕೊಂಡೋಗಿ ನಿನ್ನ ಅಪ್ಪನಿಗೆ ತೋರಿಸು . ಎಂಗೂ ಅವ್ನು ಕಬ್ಬಿಣ ಕೆಲಸ ಮಾಡ್ತಾವ್ನೆ . ಅಂತದ್ದೇ ಉಪಕರಣ ನೀನು ಮಾಡಿಸ್ಕಂಡು ಬಾ ! ಈ ಗುಡ್ಡದಲ್ಲೆಲ್ಲಾ ಕಲ್ಲೇ ಕಲ್ಲು ! ಕೆತ್ತನೆ ಸುರು ಮಾಡಿಬಿಡುವ ! " ಎಂದು ಉತ್ಸಾಹದಿಂದ ನುಡಿದ ಬುಕ್ಕಜ್ಜ.
" ಆದ್ರೆ ಬುಕ್ಕಜ್ಜ ... "
" ಯಾಕ್ಲಾ ? ನಿಂಗೆ ಕಲ್ಲಲ್ಲಿ ಕೆತ್ತಕ್ಕೆ ಖುಷಿ ಇಲ್ವಾ ? "
" ಅದಲ್ಲಾ ಬುಕ್ಕಜ್ಜಾ ! ನಮ್ಮಪ್ಪ ಕುಲುಮೆ ಆರಿಸಿ ಮೂರು ದಿನಗಳಾದ್ವು ! ಮತ್ತೆ ಯಾವಾಗ ಕೆಲಸ ಸುರು ಮಾಡ್ತಾವನೋ ಏನೋ ! "ನಿರಾಸೆಯಿಂದ ನುಡಿದ ದೊಡ್ಡವೀರಯ್ಯ .
" ಯಾಕೋ ? ಕೈಯಾಗೆ ಕೆಲಸ ಏನೂ ಇಲ್ವಾ ? "
" ಅಯ್ಯೋ ಕೈ ತುಂಬಾ ಕೆಲಸ ಅದೇ ! ಪಾಳೇಗಾರರಿಗೆ ಈಟಿ , ಗುರಾಣಿ, ಕತ್ತಿ ಎಲ್ಲ ತುರ್ತಾಗಿ ತಯಾರಿ ಮಾಡಿ ಕಳಿಸ್ಬೇಕು . ಅದ್ರ ಕೆಲಸ ಎಲ್ಲ ಅಂಗೇ ನಿಂತದೆ . ಮೂರು ದಿನಗಳಿಂದ ನಮ್ ಅಳ್ಳಿಲಿರೋ ನಾಯಿಗಳೆಲ್ಲ ಯಾಕೋ ಕೆಟ್ಟದಾಗಿ ಊಳಿಡ್ತಾವೆ . ಎಂತದೋ ಕೇಡು ನಡೀಲಿಕ್ಕಿದೆಯಂತೆ . ಅದಕ್ಕೆ ಬೆಂಕಿ ಆರಿಸಿ ಕುಂತಾವ್ನೆ ಅಪ್ಪ ! "
ಬುಕ್ಕಜ್ಜ ಹುಲ್ಲುಗಾವಲಲ್ಲಿ ಮೇಯುತ್ತಿದ್ದ ಆಕಳುಗಳ ಕಡೆ ಅನುಮಾನದಿಂದ ದೃಷ್ಟಿ ಹರಿಸಿದ . ಮೇಲ್ನೋಟಕ್ಕೆ ಅವುಗಳು ಮೇಯುತ್ತಿರುವಂತೆ ಕಂಡರೂ , ಅವುಗಳ ನಡವಳಿಕೆಯಲ್ಲಿ ಎಂತದ್ದೋ ತಳಮಳ ಭಾಸವಾಯಿತು . ಕುರಿಗಳೂ ಸಹ ಅಲ್ಲಿಂದ ಕಾಲು ಕೀಳುವುದರಲ್ಲಿದ್ದವು .
ಆಕಳುಗಳು ಹಾಲು ಕೊಡುತ್ತಿಲ್ಲ ! ನಾಯಿಗಳು ಊಳಿಡುತ್ತಿವೆ ! ಅಂದ್ರೆ ಮುಂಬರಲಿರುವ ಅನಾಹುತವನ್ನು ಇವು ಸೂಚಿಸುತ್ತಿವೆ ! ಈ ಗ್ರಾಮಕ್ಕೆ ಕೇಡು ಬರಲಿದೆ ! ಆದರೆ ಯಾವಾಗ ? ಯಾವ ಸ್ಥಳದಲ್ಲಿ ?
" ಅಯ್ಯಯ್ಯೋ ! ಇಲ್ನೋಡು ಬುಕ್ಕಜ್ಜಾ ! " ದೊಡ್ಡವೀರಯ್ಯನ ಕೂಗು ಬುಕ್ಕಜ್ಜನನ್ನು ಎಚ್ಚರಿಸಿತು .
ಒಂದು ಬಂಡೆಯ ಸಂದಿನಿಂದ ಕಪ್ಪು ಬಣ್ಣದ ನದಿಯೊಂದು ಮಿಲಿ ಮಿಲಿ ಹರಿದು ಬರುತ್ತಿತ್ತು! ಸನಿಹಕ್ಕೆ ಹೋಗಿ ನೋಡಿದಾಗ ಬಂಡೆಯ ಕೆಳಗಿದ್ದ ಹುತ್ತದಿಂದ ಹೊರಹೊಮ್ಮಿ ನದಿಯಂತೆ ಹರಿದು ಬರುತ್ತಿದ್ದವು ಸಾವಿರಾರು, ಇಲ್ಲ ಇಲ್ಲ , ಲಕ್ಷಾಂತರ ಇರುವೆಗಳು !
" ಮಗ ! ಇನ್ನು ನೀನು ಇಲ್ಲಿರಬಾರ್ದು ! ಆಕಳು ಕುರಿ ಎಲ್ಲ ಅಟ್ಕಂಡು ಮನೆಗೆ ಒಂಟೋಗೂ ! ಬ್ಯಾಗ್ನೆ ಒಂಟೋಗು ! " ಕಾತರದಿಂದ ಅವಸರಪಡಿಸಿದ ಬುಕ್ಕಜ್ಜ .
" ಯಾಕೆ ಬುಕ್ಕಜ್ಜ ? ಏನಾಯ್ತು ? "
ಇದ್ದಕ್ಕಿದ್ದಂತೆ ಜೋರಾಗಿ ಗದ್ದಲ ಮಾಡುತ್ತ ಕೆರೆಯಲ್ಲಿ ಈಜುತ್ತಿದ್ದ ಬಾತುಕೋಳಿಗಳೆಲ್ಲ ಒಮ್ಮೆಗೆ ಆಗಸಕ್ಕೇರಿ ಹಾರಿ ಹೋಗ ತೊಡಗಿದವು ! ಆಕಳುಗಳೂ ಕುರಿಗಳೂ ಬೆಚ್ಚಿ ಎದ್ದು ಬಿದ್ದು ಓಡತೊಡಗಿದವು.
ಗುಡುಗಿನಂತಹ ಶಬ್ದ ಜೋರಾಗಿ ಕಿವಿಗಳಿಗೆ ಅಪ್ಪಳಿಸಿತು. 'ಭೀಮನ ಬೆಣ್ಣೆ' ಒಮ್ಮೆ ಅಲುಗಾಡಿದಂತೆ ಕಂಡಿತು . ಮತ್ತೊಮ್ಮೆ ಕಿವುಡುಗೊಳಿಸುವ ಸ್ಫೋಟ ! ನೋಡನೋಡುತ್ತಿದ್ದ ಹಾಗೆಯೇ 'ಭೀಮನ ಬೆಣ್ಣೆ' ಬೆಟ್ಟದ ತುದಿಯಿಂದ 'ಗುಡು ಗುಡು' ಗಡುಗುತ್ತ ಉರುಳಿ ಬರ ತೊಡಗಿತು.
" ಬುಕ್ಕಜ್ಜಾ .... "
ಗಟ್ಟಿಯಾಗಿ ಚೀರುತ್ತ ಬುಕ್ಕಜ್ಜನ ಮೇಲೆ ಹಾರಿ ಅವನನ್ನು ತಬ್ಬಿಕೊಂಡ ದೊಡ್ಡವೀರಯ್ಯ . 'ಭೀಮನ ಬೆಣ್ಣೆ' ಉರುಳಿಬರುತ್ತಿದ್ದ ಹಾದಿಯಿಂದ ಅವನನ್ನು ದೂರ ಎಳೆದುತಂದ . ಅವರುಗಳು ನಿಂತಿದ್ದ ನೆಲ ಇದ್ದಕ್ಕಿದ್ದಂತೆ ಅಲ್ಲಾಡಿತು! ಆಯ ತಪ್ಪಿ ಕೆಳಗೆ ಬಿದ್ದ ಇಬ್ಬರೂ ಸಾವರಿಸಿಕೊಳ್ಳಲು ಯತ್ನಿಸಿದರು. ದೂರದ ಗ್ರಾಮದಲ್ಲಿ ಜನರೆಲ್ಲಾ ಬೊಬ್ಬೆಯಿಡುತ್ತ ಮನೆಗಳಿಂದ ಹೊರಬೀಳುತ್ತಿದ್ದದ್ದು ಕಂಡಿತು . ಕೆಲವು ಮನೆಗಳು ಕುಸಿದು ಬಿದ್ದಿದ್ದವು !
'ಭೀಮನ ಬೆಣ್ಣೆ' ಬೆಟ್ಟದ ಬುಡ ಸೇರಿ ಇನ್ನೂ ಅಲ್ಲಾಡುತ್ತಲೇ ಇತ್ತು.
" ಏನಾಗತೈತೆ ಬುಕ್ಕಜ್ಜ ? " ತಬ್ಬಿಬ್ಬಾಗಿದ್ದ ದೊಡ್ಡವೀರಯ್ಯ ಬಟ್ಟೆ ಕೊಡವಿಕೊಂಡು ಎದ್ದು ನಿಂತ ಬುಕ್ಕಜ್ಜನನ್ನು ಭಯದಿಂದ ಪ್ರಶ್ನಿಸಿದ .
" ಭೂಕಂಪ ಕಣ್ ಮಗ ! ಬಿಲ್ಲನಕೋಟೆಯಾಗೆ ಭೂಕಂಪ ! " ನಿಧಾನವಾಗಿ ಉತ್ತರಿಸಿದ ಬುಕ್ಕಜ್ಜ .
ಬಿಲ್ಲನಕೋಟೆ ಎಂಬ ಸುಂದರ ಗ್ರಾಮದಲ್ಲಿ ಅಂದು ನಾಲ್ಕು ಬಾರಿ ಭೂಮಿ ಕಂಪಿಸಿತು . ಬೆಟ್ಟದ ತಪ್ಪಲಲ್ಲಿದ್ದ ಬುಕ್ಕಜ್ಜನ ಮನೆ ಮಾತ್ರವಲ್ಲದೆ ಗ್ರಾಮದ ಇತರ ಕೆಲವು ಮನೆಗಳೂ ಕುಸಿದು ಬಿದ್ದವು . ಪ್ರಾಣ ಹಾನಿ ಇಲ್ಲದಿದ್ದರೂ ಕೆಲವು ಮಂದಿ ಅಲ್ಪ ಸ್ವಲ್ಪ ಗಾಯಗೊಂಡಿದ್ದರು.
ಕೆಲವೇ ದಿನಗಳಲ್ಲಿ ಮುರಿದುಹೋಗಿದ್ದ ಮನೆಗಳನ್ನೆಲ್ಲ ದುರಸ್ತಿ ಮಾಡಲಾಯಿತು. ಈ ಕೆಲಸದಲ್ಲಿ ಬುಕ್ಕಜ್ಜನೂ ಕೈಜೋಡಿಸಿದ್ದ. ಗಾಯಗೊಂಡಿದ್ದ ಮಂದಿಗೆಲ್ಲ ಮೂಲಿಕೆಗಳನ್ನು ಕಿತ್ತು ತಂದು ಚಿಕಿತ್ಸೆ ನೀಡಿ ಎಲ್ಲರ ಸ್ನೇಹಕ್ಕೆ ಪಾತ್ರನಾದ.
ಪ್ರಾಣಿ ಪಕ್ಷಿಗಳೆಲ್ಲ ಸಹಜ ಸ್ಥಿತಿಗೆ ಮರಳಿದ್ದವು . ಯಥಾಪ್ರಕಾರ ಮುಂಜಾನೆ ಮಂಜಿನ ಮುಸುಕಿನಲ್ಲಿ ಸುಂದರವಾದ ಬಣ್ಣದ ಚಿತ್ರದಂತೆ ಕಂಗೊಳಿಸುತ್ತಿತ್ತು ಬಿಲ್ಲನಕೋಟೆ ಗ್ರಾಮ.
ಹುಲ್ಲುಗಾವಲಲ್ಲಿ ಆಕಳುಗಳನ್ನು ಬಿಟ್ಟು ಬುಕ್ಕಜ್ಜನನ್ನು ಕುರಿತು ದಾಪುಗಾಲು ಹಾಕಿ ಓಡಿ ಬಂದ ದೊಡ್ಡವೀರಯ್ಯ.
" ಬುಕ್ಕಜ್ಜಾ ! ಇಲ್ನೋಡು ! ಅಪ್ಪ ಎಲ್ಲ ಸಾಮಗ್ರಿ ಮಾಡ್ಕೊಟ್ಟವ್ನೆ ! " ಬುಕ್ಕಜ್ಜನ ಸಲಹೆಯಂತೆ ಅಪ್ಪ ಮಾಡಿಕೊಟ್ಟ ಸಾಮಗ್ರಿಗಳನ್ನೆಲ್ಲ ಚೀಲದಿಂದ ಉತ್ಸಾಹದಿಂದ ಹೊರತೆಗೆದನು ದೊಡ್ಡವೀರಯ್ಯ .
" ಭಲಾ ! ಅದ್ಸರಿ ! ಶಾಸನದ ವಿಸ್ಯ ತೀರ್ಮಾನ ಮಾಡ್ಕಂಡ್ಯಾ ? "
" ನೀನೆ ಯೋಳು ಬುಕ್ಕಜ್ಜ ! "
" ನಿನ್ ಊರ್ನಾಗೆ ಈಚೆಗೆ ಏನ್ ಮುಖ್ಯ ವಿಸ್ಯ ನಡ್ದದೆ ? ಅದನ್ನೇ ಕೆತ್ಬೇಕು ! " ಎಂದು ನಿಧಾನಕ್ಕೆ ನುಡಿದ ಬುಕ್ಕಜ್ಜ.
" ಭೂಕಂಪ ! ಬುಕ್ಕಜ್ಜ ! ಬಿಲ್ಲನಕೋಟೆ ಭೂಕಂಪದ್ ಬಗ್ಗೆ ಶಾಸ್ನ ಕೆತ್ತೋಣ ! " ಎಂದಾಗ ದೊಡ್ಡವೀರಯ್ಯನ ಮುಖ ಹೊಳೆಯಿತು .
" ಸಭಾಷ್ ಮಗ ! ಸುರು ಮಾಡು ! "
ಬುಕ್ಕಜ್ಜನ ಮಾರ್ಗದರ್ಶನದಲ್ಲಿ ದೊಡ್ಡವೀರಯ್ಯ ಬೆಟ್ಟದ ದೊಡ್ಡ ಬಂಡೆಕಲ್ಲಿನ ಮೇಲೆ ತನ್ನ ಮೊದಲನೆಯ ಶಾಸನವನ್ನು ಅಕ್ಕರೆಯಿಂದ ಕೆತ್ತ ತೊಡಗಿದನು.
--------------------------------------------------------------------------------------------------------------------
ಪಕ್ಷಿ ಪ್ರಾಣಿಗಳು ಭೂಕಂಪ ಸಂಭವಿಸಲಿರುವುದನ್ನು ಮುಂಚಿತವಾಗಿ ಅರಿತುಕೊಳ್ಳುತ್ತವೆ ಎಂಬುದೂ , ಆ ಸಮಯದಲ್ಲಿ ಅವುಗಳ ವಿಚಿತ್ರ ನಡವಳಿಕೆ ಮನುಷ್ಯರಿಗೆ ಒಂದು ಮುನ್ಸೂಚನೆಯಾಗಿರುತ್ತದೆ ಎಂಬುದೂ ಬಹಳ ಹಿಂದಿನಿಂದ ಕಾಲದಿಂದ ಬಂದಿರುವ ನಂಬಿಕೆ . ಈ ವಿಷಯದ ಬಗ್ಗೆ ವೈಜ್ಞಾಕ ಸಂಶೋದನೆಗಳು ಇಂದಿಗೂ ನಡೆಯುತ್ತಲೇ ಇವೆ .
-------------------------------------------------------------------------------------------------------------------------
ಆಧಾರ : ಬಿಲ್ಲನಕೋಟೆ ಭೂಕಂಪ ಶಾಸನ
https://m.facebook.com/groups/inscriptionstones/permalink/2863311423910074/
----------------------------------------------------------------------------------------------------------------------------
EARTHQUAKE IN BILLANAKOTE!
“ What's the matter, Boy ? Why the long face ?” Asked Bukkajja yet again . But there was no response , yet again.
Doddaveerayya was a cheerful
lad , ever eager to chat with Bukkajja about the Old Man’s adventures around the country.
But on this day, he wore a
sullen look and kept moping silently, not responding to any of Bukka’s attempt
to make conversation. His mind was still on the angry words of his Mother that
had spoilt his whole morning.
“ You are becoming careless ! ” she had shouted at him , “ You are not taking our cows to the proper grazing pastures….you just want to let them loose somewhere and run off to the hills to sit with that Lone Ghost ! Our cattle are starving and not giving the usual quantity of milk. If this continues, how are we to see any income ! …..You lazy boy ! If you leave the cows and go up that hill again , you will regret it , I warn you !”
Doddaveerayya could see their
cattle grazing contentedly in the lush green meadow at the foot of the hill. The
lotus pond by the meadow was crowded with water birds waiting to get their
prey. Their village lay yonder, beyond the lake, a huddle of four streets,
surrounded by groves. Though Veera went up the hill to chat with the Old Man,
he always kept an eye on the cattle below and knew that they were grazing well.
It was unfair of Mother to blame him for reduced milk supply when all the cows
of the village were reportedly giving less too, all of a sudden, since these
past two days. Mother thought only she suffered because her son had taken a
fancy to chatting with that Lone Ghost.
Yes, that is what all villagers called Bukkajja because he had chosen to build his house by the hill, away from the village. He had spent his entire adult life away from the village, traveling far and wide with his stone cutting tools, earning from the skills his father Tammoja The Sculptor had taught him. Having lived among stones for so long, he himself has become half- stone, that’s why he doesn’t socialise with people gossipped the villagers.
“Stones are my life
companions” he had told Veera once. His skilled sculpting of stone is what took
him to distant places where kings, chieftains and wealthy lords commissioned
him to make temples, palaces, statues, hero-stones and Shasanas for them.
Veera loved to listen to these tales in openmouthed wonder. Later he would dream of magical Towns, amazing people with strange languages and cultures, great wars, wealthy Traders who sailed in magnificent ships to unknown lands to bring home wonderful things …….' will I ever have a chance to see the world beyond our 8-Village limit? '
Bukkajja was equally glad to share his experiences with the eager lad. Veera showed promise and could use some education. He was ready to help.“After all, Boy, a person must pass on the knowledge he has gained to those who are willing to receive it.”
Veera had been enchanted when the Old Man had made some marks on the earth with a stick and told him that each of those marks had a sound, which together would make words and sentences. He told him that those were the marks which he strung together, like a chain of pearls, on huge stone tablets to make Shasanas.
“Why do people make Shasanas?” Veera had wondered.
“So that they can speak, long after they are dead, to people born hundreds of years later!” Bukka had laughed, “Engraved in stone, those words will talk, till the Sun and Moon shine in the sky, about the grants and charities they gave, temples and tanks they built and about heroes who gave up their lives for the good of the people.”
“Can I write a Shasana,
Bukkajja?”
“Sure! Why not? I will teach
you script and engraving it in stone ….But what do you want to write , tell me
?”
“Something! Anything! So
that, as you say, people born a hundred years later can hear me telling them
something!” How his eyes had shone when he said that!
The Old Man had patted the boy’s head affectionately and indulgently. And writing lessons had begun right away!
Doddaveerayya was still
sulking and staring at the cows below the hill.
“Come on, Boy! Enough of staring at them. They are grazing well, don’t worry. If they are not giving sufficient milk, there could be some other reason, we will find out ……..come now , lets see if you remember yesterday’s lesson . I showed you how to put letters together to make your name ….here, write it for me ……”
He smoothened a patch of soil in front of them and held out a sharpened stick. Veera took the stick without a word and wrote his name on the ground carefully.
“ Wonderful !” Exclaimed the
Old Man , preferring to overlook two small mistakes in the calligraphy. “You are ready to
start writing on stone!”
His student smiled at last,
proud of his achievement.
“ Did you show the model
chisels I gave you to your father, so that he can make a set for your use ?”
“ Yes , I did and he
promised to make a few for me……..but……..its
been two days since he put off the furnace .”
“ Oh ? What’s wrong ? No
orders ?”
“ No , no . He has plenty of orders for spears, daggers , arrow heads and sickles from the Big Chief . But our Elder told him , some calamity is going to happen in our village , so the fires should be put out.”
“ Whose prediction is this ?”
“ I don’t know Bukkajja . The village dogs have been howling for no reason since two days. So the Elders are saying something bad is going to happen.”
The Old Man scratched his head “ Hmmmm…..dogs howling , cows not normal …..”
“ Ajja ! Look !” Veera screamed suddenly . His hand was pointing towards a black rivulet gushing out from under a rock . It turned out to be millions of black ants scurrying out together in a torrent . Just as they jumped on to a higher rock to avoid them , there arose a big commotion from the foothills . The water birds at the lotus pond took flight all together, like a big cloud , while the grazing cattle started running helter skelter.
“ My boy !” Cried the Old Man in an agitated voice , “ Get
your cattle and go home immediately ! Make
haste ! Go !”
“ Wha…….”
Booooooom ! There was a deep
loud sound like a thunder. Veera jumped in fright and his eye fell on the
summit to their left. The large rounded
rock , nicknamed Bheema’s Butter , which had been balancing precariously and miraculously on the point of the summit for
ages , seemed to shudder once.
Veera froze in fright. The rock, Bheema’s Butter , had always seemed comical to the village kids. ‘How can anyone, even Bheema, eat so much butter ! And how clever of him to save it for himself , stuck on a summit where no one can reach it ! Someday, it will melt and flow down into the lotus pond and Bheema will have none’ …….Suddenly , it was no longer comical. The round rock was sliding down, bouncing against the rocky face of the hill , tearing off clods of earth and pebbles , all hurtling down madly .
Booooooooooom ! The thunder
like sound reverberated around the hills and vales again and Veera could feel
the ground beneath his feet tremble.
Bheema’s Butter had crashed at the foot of the hill and yonder in the village , people were running all over , shouting and wailing , as some huts were collapsing .
“ Bukkajja ! Bukkajja ! Whats
happening ?” Screamed the terrified Veera , holding on to him tightly. The Old
Man , put his arms around the shaking
boy, trying to comfort him “ Earthquake
, Boy ! Earthquake in Billanakote!
The little hamlet of Billanakote was shaken by four
tremors that day . Though no one was killed , a few villagers had sustained
injuries. Many houses , including Bukkajja’s by the hill , were reduced to
rubble.
All the animals and birds went back to their normal behaviour. In the golden light of the evening , the village , ringed by the hills, looked lovely and peaceful as before.
One morning , Doddaveerayya
left his cattle at the meadow and ran up the hill excitedly : “ Bukkajja !
Bukkajja ! Look what I have !”
He waved a cloth bundle in
front of his teacher’s face “ Father finished making the chisels for me , just
like the ones you showed as model ! My
very own set !”
“ Wonderful !” Beamed the Old Man “ Today is as good a day as any to start writing on stone !”
“ What should I write ?”
Veera tapped his cheek in deep thought.
“ What is the biggest event
that happened in the village recently ?”
“ The Earthquake !”
“ Go on then ! Start telling people yet to be born about the Earthquake you experienced !”
They chose a large rockface on the hill and , under the guidance of Bukkajja, Doddaveerayya started cutting letters into the stone , as cows grazed contentedly in the meadow below and water birds lazed around the lotus pond .There is a long standing
belief that animals and birds can sense an earthquake soon to happen and start showing unusual behavior. Scientific research in this matter is still
going on for full understanding of the phenomenon.
--------------------------------------------------------------------------------------
Story is based on Billanakote Earthquake Inscription.
https://m.facebook.com/groups/inscriptionstones/permalink/2863311423910074/
------------------------------- --------------------------------------------------------