Monday, October 30, 2023

ಗೊಂಬೆ ಹಬ್ಬದ ಸಂಭ್ರಮ / KOLU

 ಗೊಂಬೆ ಹಬ್ಬದ ಸಂಭ್ರಮ 

ಗೊಂಬೆ ಹಬ್ಬ ಬಂದರೆ ಮಕ್ಕಳಿಗೆ ಮಾತ್ರವಲ್ಲದೆ ಎಲ್ಲ ವಯಸ್ಸಿನವರಿಗೂ ಸಂಭ್ರಮವೆ . ನವರಾತ್ರಿ ಹಬ್ಬದಲ್ಲಿ ಮನೆ ಮನೆಯಲ್ಲೂ ಗೊಂಬೆಗಳನ್ನು ಕೂರಿಸಿ ಪೂಜೆ ಮಾಡುವ ಪದ್ದತಿ  ಹದಿನೇಳನೇ ಶತಮಾನದಲ್ಲಿ ರಾಜ ಒಡೆಯರ್ ಅವರ ಕಾಲದಲ್ಲಿ ಪ್ರಾರಂಭವಾಯಿತು . ಈಗಿನ ಕಾಲದಲ್ಲಿ ಸಾರ್ವಜನಿಕರು ಓಡಾಡುವ ಮಾಲ್ ,  ಮ್ಯೂಸಿಯಂ, ಗೊಂಬೆ ಅಂಗಡಿಗಳು, ಮುಂತಾದ ಸ್ಥಳಗಳಲ್ಲಿ ವೈವಿದ್ಯಮಯವಾದ ಗೊಂಬೆಗಳ ಪ್ರದರ್ಶನವನ್ನು ಏರ್ಪಡಿಸಲಾಗುತ್ತಿದೆ .  

                                                                                                               

 ಇಂದಿಗೂ ಪಟ್ಟದ ಗೊಂಬೆಗಳೊಂದಿಗೆ ವಿವಿಧ ರೀತಿಯ ಇತರ ಗೊಂಬೆಗಳನ್ನೂ ಜೋಡಿಸಿ ಗೊಂಬೆ ಹಬ್ಬವನ್ನು ತಂತಮ್ಮ ಮನೆಗಳಲ್ಲೇ ಪದ್ದತಿಯಾಗಿ ಆಚರಿಸುವವರಿದ್ದಾರೆ . ಶ್ರೀಮತಿ ಪದ್ಮಾ ಉದಯಕುಮಾರ್ ಅವರ ಮನೆಯಲ್ಲಿ ತಲೆತಲಾಂತರದಿಂದ ಗೊಂಬೆ ಕೂರಿಸುವ ಪದ್ದತಿ ಆಚರಣೆಯಲ್ಲಿದೆ . ನವರಾತ್ರಿ ಸಮಯದಲ್ಲಿ ಅವರ ಮನೆಯ ವಿಶಾಲವಾದ ಹಜಾರವು ಗೊಂಬೆ ಮನೆಯಾಗಿ ಪರಿವರ್ತಿಸಿಬಿಡುತ್ತದೆ .  

ನೂರು ವರುಷ ಪುರಾತನವಾದ ಪಟ್ಟದ ಗೊಂಬೆಯ ಜೋಡಿ ಮತ್ತು ನೂರ ಇಪ್ಪತ್ತು ವರ್ಷದ ಲೋಹದ ಪಟ್ಟದ ಗೊಂಬೆಗಳು ಇವರ ಗೊಂಬೆ ಪ್ರದರ್ಶನದಲ್ಲಿ ವಿಶಿಷ್ಟ ಸ್ಥಾನ ವಹಿಸುತ್ತವೆ. ಪ್ರತಿ ವರ್ಷವೂ ವಿಶೇಷವಾದ ಒಂದು ವಿಷಯವನ್ನು ಆಧಾರಿಸಿ ಗೊಂಬೆಗಳನ್ನು ಕೂರಿಸುತ್ತಾರೆ ಪದ್ಮಾ ಉದಯಕುಮಾರ್ ಅವರು . ಅಂತರರಾಷ್ಟ್ರೀಯ ಸ್ಪರ್ಧೆಗಳಲ್ಲಿ ಬಾಗವಹಿಸಿ ತನ್ನ ಸೃಜನಶೀಲ ಗೊಂಬೆ ಪ್ರದರ್ಶನಕ್ಕೆ ಅನೇಕ ಪ್ರಶಸ್ತಿಗಳನ್ನು ಗಳಿಸಿದ್ದಾರೆ . ಈ ವರ್ಷ ಪದ್ಮಾ ಅವರು ಆಯ್ದುಕೊಂಡಿರುವುದು ದೈವಿಕ ವಿಷಯ . ಗೊಂಬೆ ಮನೆಯೊಳಗೆ ಕಾಲಿಟ್ಟಾಕ್ಷಣ ದೇವರ ಗುಡಿಯನ್ನು ಪ್ರವೇಶಿಸುತ್ತಿರುವ ಅನುಭವವಾಗುತ್ತದೆ . ಅಲ್ಲಲ್ಲಿ ಕೂರಿಸಿರುವ ಕೋದಂಡ ರಾಮ , ರಾಮಾಂಜನೇಯ , ಗೀತೋಪದೇಶ ಮುಂತಾದ ಗೊಂಬೆ ಸೆಟ್ಟುಗಳು ಚಿತ್ತಾಕರ್ಷಕವಾಗಿ ಕಂಗೊಳಿಸುತ್ತವೆ. 


                                                                                                                     

ಗೊಂಬೆ ಪ್ರದರ್ಶನವನ್ನು  ಮೂರು ವಿಭಾಗಗಳಾಗಿ ವಿಂಗಡಿಸಲಾಗಿದೆ . ಮೊದಲನೆಯ ವಿಭಾಗದಲ್ಲಿ ಗುಡಿ ಗೋಪುರದ ಚಿತ್ರವಿರುವ ಪರದೆಯ ಹಿನ್ನೆಲೆಯಲ್ಲಿ ಐದು ಮೆಟ್ಟಿಲುಗಳನ್ನು ನಿರ್ಮಾಣಮಾಡಲಾಗಿದೆ . ಮೊದಲನೆಯ ಅಂತಸ್ತಿನಲ್ಲಿ  ದುರ್ಗಾ , ಲಕ್ಷ್ಮಿ ಮತ್ತು ಸರಸ್ವತಿ ಗೊಂಬೆಗಳೊಂದಿಗೆ ಕಳಶ ಸ್ಥಾಪನೆಯಾಗಿದೆ . ಎರಡನೆಯ ಮೆಟ್ಟಿಲನ್ನು ಅಷ್ಟ  ಲಕ್ಷ್ಮಿಗಳು ಅಲಂಕರಿಸಿದ್ದಾರೆ . ಮೂರನೆಯ ಅಂತಸ್ತಿನಲ್ಲಿ ಆಂಡಾಳ್ ಜನನ , ಶ್ರೀನಿವಾಸ ಕಲ್ಯಾಣ ಮತ್ತು ಅಳ್ವಾರಗಳ ಗೊಂಬೆ ಸೆಟ್ ಕಂಗೊಳಿಸುತ್ತವೆ . ನಂತರದ ಅಂತಸ್ತಿನಲ್ಲಿ ಅಲಂಕರಿಸಲ್ಪಟ್ಟ ನಾಲಕ್ಕು ಜೋಡಿ ಪಟ್ಟದ ಗೊಂಬೆಗಳು ಶಿಸ್ತಿನ ಸಿಪಾಯಿಗಳಂತೆ ನಿಂತಿವೆ . ಶ್ರೀನಿವಾಸ  ಪದ್ಮಾವತಿ ಮತ್ತು ದಶಾವತಾರ ಗೊಂಬೆಗಳ ಮದ್ಯೆ ದೇವಾಲಯದ ಗೊಂಬೆ ಸೆಟ್ ಕಾಣಿಸಿಕೊಳ್ಳುತ್ತದೆ . ವಾದ್ಯ ಘೋಷ್ಟಿ , ಆನೆಗಳು ಮುಂತಾದ ಸಣ್ಣ ಸಣ್ಣ ಗೊಂಬೆಗಳನ್ನೊಳಗೊಂಡ ಪುಟಾಣಿ ಮೆರವಣಿಗೆಯ ದೃಶ್ಯ ಮನವ ರಂಜಿಸುತ್ತದೆ . ದೂರ ನಿಂತು ನೋಡುವಾಗ ಹೊಸತಾಗಿ ಬಣ್ಣ ಬಳಿದ ಶಿಲ್ಪಗಳಿಂದಕೂಡಿದ ಗುಡಿ  ಗೋಪುರವನ್ನು ದರ್ಶನ ಮಾಡಿದಂತಾಗುತ್ತದೆ . 


                                                                  
                                                                                                                        
ಎರಡನೆಯ ವಿಭಾಗದಲ್ಲಿ ಗರಿಕೆದರಿ ನರ್ತಿಸುತ್ತಿರುವ ನವಿಲಿನ ಬೆನ್ನ ಮೇಲೆ ಮೂರು ಅಂತಸ್ತುಗಳನ್ನು ನಿರ್ಮಿಸಲಾಗಿದೆ .  ಈ ಸುಂದರವಾದ ನವಿಲು ಪೀಠದಮೇಲೆ ನವದುರ್ಗೆಯರು ತಂತಮ್ಮ ವಾಹನಗಳಲ್ಲಿ ವಿರಾಜಮಾನವಾಗಿದ್ದಾರೆ . ನವದುರ್ಗೆಯರ ಗೊಂಬೆಗಳು ಕೈಯಿಂದ ಮಾಡಲಾಗಿರುವುದು ಒಂದು ವಿಶೇಷ .  
 
                                                                                             

                                                                                
ನವದುರ್ಗೆಯರ ಪೂಜೆಯ ಬಗ್ಗೆ ಆಳವಾದ ಅಧ್ಯಯನ ಮಾಡಿರುವ ಶ್ರೀಮತಿ ಪದ್ಮಾ ಅವರು ನವರಾತ್ರಿಯ ಪ್ರತಿಯೊಂದು ದಿನವೂ ದುರ್ಗಾ ದೇವಿಯ ಒಂದೊಂದು ರೂಪವವನ್ನು ಪದ್ದತಿಯಂತೆ  ಪೂಜಿಸುತ್ತಾರೆ .  ಆಯಾ ದೇವಿಗೆ ಪ್ರಿಯವಾದ ಬಣ್ಣದ ವಸ್ತ್ರಗಳು , ಹೂವು , ಪತ್ರೆ , ನೈವೇದ್ಯ, ದಾನ್ಯ , ರಂಗೋಲಿ ಮುಂತಾದ ಮಂಗಳಕರವಾದ ವಸ್ತುಗಳನ್ನು  ಅರ್ಪಿಸುತ್ತಾರೆ . 


                                                                     

                                                                                                                      
ಮೂರನೆಯ ವಿಭಾಗದಲ್ಲಿ  'ವೈಕುಂಠ ದ್ವಾರ' !  ಬಂಗಾರದ ಗೋಪುರದಲ್ಲಿ ಪರಮಪದನಾಥ , ಶ್ರೀನಿವಾಸ ಮತ್ತು ಪದ್ಮಾವತಿಯ ಗೊಂಬೆಗಳನ್ನು ಸ್ಥಾಪಿಸಲಾಗಿದೆ . ಬಾಗಿಲ ಚೌಕಟ್ಟನ್ನು ದಶಾವತಾರ ಗೊಂಬೆಗಳು ಅಲಂಕರಿಸುತ್ತವೆ . ಹೂವಿನ ತೋರಣಗಳು ಮತ್ತು ಗುಡಿ ಗಂಟೆಗಳು ಛಾವಣಿಯಿಂದ ಇಳಿಬಿಡಲಾಗಿದೆ .  ಹೂವಿನ ರಂಗೋಲಿಯ ನಡುವೆ ದೀಪದ ಕಂಬ ರಾರಾಜಿಸುತ್ತದೆ !  'ಗೋವಿಂದಾ ಗೋವಿಂದಾ ' ಎನ್ನುತ್ತ  ಪರದೆಯನ್ನು ಸರಿಸಿದಾಗ , ಮಂದವಾದ ದೀಪಗಳ ಬೆಳಕಿನಲ್ಲಿ ಅಭಯ ಹಸ್ತ ತೋರುತ್ತ ಪ್ರತ್ಯಕ್ಷವಾಗುತ್ತಾನೆ  ಶ್ರೀನಿವಾಸ ! ಶ್ರೀ ವೆಂಕಟೇಶಾಯ ನಮಃ ಎಂಬ ನಾಮ ಜಪವನ್ನು ಆಲಿಸುತ್ತ  ಶ್ರೀನಿವಾಸನ ದರ್ಶನವನ್ನು  ಮಾಡುವಾಗ ರೋಮಾಂಚನವಾಗುತ್ತದೆ . ದೇವಾಲಯದ ನಿರ್ಮಾಣ ಕಾರ್ಯ ಎಂಬುದು ಒಂದು ಪವಿತ್ರವಾದ ಕೆಲಸ . ಬಹಳ ಕಷ್ಟದ ಕೆಲಸವೂ ಹೌದು . ಆದರೆ ಶ್ರೀಮತಿ ಪದ್ಮಾ ಅವರು ಮನೆಯಲ್ಲಿರುವ ವಸ್ತುಗಳನ್ನೇ ಉಪಯೋಗಿಸಿ ನಿರ್ಮಿಸಿರುವ ಅದ್ಭುತವಾದ ಶ್ರೀನಿವಾಸನ ದೇಗುಲವನ್ನು ಕಂಡು ಬೆಕ್ಕಸಬೆರಗಾಗಿ ನಿಲ್ಲುತ್ತೇವೆ ! ಕಿರುನಗೆಯೊಂದಿಗೆ ತುಳಸಿ ತೀರ್ಥ ಮತ್ತು ಲಾಡು ಪ್ರಸಾದವನ್ನು ನೀಡುವ ಪದ್ಮಾ ಅವರ ಸೃಜನಶೀಲತೆ , ಶ್ರೇದ್ಧೆ ಮತ್ತು ಭಕ್ತಿಯನ್ನು ಎಷ್ಟು ಕೊಂಡಾಡಿದರೂ ಸಾಲದು . 

                                                                
 ಇನ್ನೂ ವೈಕುಂಠ ದ್ವಾರವನ್ನು ಪ್ರವೇಶಿಸಿದ ಗುಂಗಿನಲ್ಲೇ ತೇಲುತ್ತ  ಶ್ರೀಮತಿ ಪದ್ಮಾ ಉದಯಕುಮಾರ್ ಅವರು ಇನ್ನೂ ಅನೇಕ ಪ್ರಶಸ್ಥಿಗಳನ್ನು ಗಳಿಸಲಿ ಎಂದು ಹಾರೈಸಿ ಹಿಂದಿರುಗುತ್ತೇವೆ . 

--------------------------------------------------------------------------------------------------------------------------------                    

KOLU

One of the  most joyous rituals of Dasara Festival is The Dolls Display ( Kolu ) , which inspires not only children but people of all ages . The tradition of arranging dolls representing deities in attractive displays and offering them worship began in the 17th century during the reign of Raja Wodeyar and is being upheld enthusiastically till today not only in households but in Malls , Museums and shops too .

                                                                                                        

In all displays , a pair of Royal Wooden Dolls called Pattada Gombay is given place of pride 
without fail , perhaps harking to that history . 
Smt . Padma Udayakumar's family has been actively engaged in putting up Dasara Doll displays for three generations now . Come Dasara , her spacious Hall turns into a Mega Dolls House .
Two antique Pattada Gombe sets , one of wood and one of metal , which are 100 years and 150 years old respectively , occupy a special niche in her display stand . 
Her displays are usually organised around any one special theme every year . She participates in Display contests and has won awards in International Contests too . 
This year , stepping into her Dolled up house felt like entering a sacred space , with sets depicting Geethopadesham , Rama Anjaneya , Kodanda Rama etc tastefully arranged in the foreground . 

                                                           

The entire display area was divided into three distinct zones . The first part had a printed backdrop of a temple gopuram creating a perfect ambience for five registers ( steps ) of divinities . On the top step were Goddesses Durga , Lakshmi and Saraswathi along with the Kalasha .
The second step was occupied by the eight Ashtalakshmis . Next was Stinivasa Kalyana , Birth of Andal and the row of Alwars . After these divinities came the four sets of Royal Dolls ( Pattada Gombe ), decorated in Royal fashion and posing in dignified rigiditi !
Accompanying the Srinivasa Padmavathi set  , on the next tier was a Temple set including a procession of tiny elephants and musicians .
The whole pyramidal arrangement , along with the backdrop , re - created the magnificence of a real temple gopuram with its myriad , colourful stucco figurines .  

                                                                 
The second section consisted of a lovely large peacock with open plumes , on whose back was a stand of three tiers .These tiers were occupied by the Nava Durgas with their respective Vahanas .  It is noteworthy that all these Durgas were handmade . 

                                                                      

Smt .Padma has made a deep study of Devi worship traditions and scrupulously follows the rituals as ordained for each day of Navaratri . She offers each Devi the exact flower, leaves, coloured attire , rangoli , grain and naivedya as stipulated in scriptures . 


                                                                 

The third section was Vaikunta Dwara ! Paramapadanatha , Srinivada and Padmavathi reside in the Golden Domed vimana ! The door way was framed by Dashavatara dolls and decorated with beautiful Flower hangings , toranas and bells . Tall lamps stood on intricate rangolis .
When the screen was parted with the chant of '' Govinda ! Govinda !'', in the soft light was seen the enchanting presence of Srinivasa , hand held in abhaya mudra ! One could feel the Divine Grace pervading as one bowed to the presence with the silent chant " Sri Venkatesaya
Namaha !"
Building a temple is no easy task . But Smt . Padma , being resourceful and creative , had made use of odds and ends found at home to create the enchanting shrine which left visitors speechless in wonder . 
Smt . Padma's passion , hard work and piety are exemplary and praise worthy . She served Tulasi Teertha and Laddoo prasadam with so much joy and affection that it warmed the cockles of our heart . 
Still dazed by the awesome experience of entering the Vaikunta Dwara , we took leave by wishing Smt. Padma many more successes in her endeavours .

------------------------------------------------------------------------------------------                               

                                                                                
Conversation opened. 1 read message.