Tuesday, June 25, 2013

Keerthi Nidhi Kesari Singha - Book Release

                   ಕೀರ್ತಿ ನಿಧಿ ಕೇಸರಿ ಸಿಂಘ 
ಕನ್ನಡ ತಾಯಿಯ ಪಾದ ಕಮಲಗಳಿಗೊಂದು ಪುಷ್ಪಾಂಜಲಿ 
                           

ದಾಸ್ಯವೆಂಬ ಕಾರ್ಗತ್ತಲನ್ನು ಸೀಳಿ ಹಾಕಲು  ಪಣ ತೊಟ್ಟ ಬೆಂಕಿ ಚೆಂಡು -
ಅದಕ್ಕೆ ಬೆಂಬಲ ನೀಡಲೆಂದು  ತೊಡೆ ತಟ್ಟಿ ನಿಂದ ಸಿಂಹಗಳ  ದಂಡು -
ಈ  ಚರಿತ್ರೆಯ ಹಿನ್ನೆಲೆಯಲ್ಲಿ -
ಜ್ವಾಲಾಮುಖಿಯ ಕೇಂದ್ರ ಬಿಂದುವಾಗಿದ್ದ ಪಟ್ಟಣವನ್ನು ಕುರಿತು  ಪಯಣ ಬೆಳೆಸಲೇ  ಬೇಕಾದ ಪರಿಸ್ಥಿತಿಯಲ್ಲಿ ಒಬ್ಬ  ಮುಗ್ದ ಹಳ್ಳಿ ಹುಡುಗ! ಆ ಹುಡುಗ ಯಾರು ?

ಸುಬ್ಬಾ ಭಟ್ಟರ ಮಾತಿನಲ್ಲೇ ಅವನ ಬಗ್ಗೆ ಅರಿತುಕೊಳೋಣವೇ ?

"..... ಕರುಣಾಳನ ಒಡಲಲ್ಲಿ ಅದೆಲ್ಲಿ ಆ ಶೌರ್ಯ ಅಡಗಿದ್ದಿತೋ ಏನೋ?ಸೆಟೆದ ಬೊಂಬಿನಂತಿದ್ದ ಉದ್ದನೆಯ ಕೈಕಾಲುಗಳು ಕಣ್ಣು ಮಿಟುಕಿಸುವುದರಲ್ಲಿ ಅದೆಷ್ಟು  ದಾಂಡಿಗರನ್ನು ನೆಲಕ್ಕುರುಳಿಸುತ್ತಿದ್ದವು!ತೊಡೆ ತಟ್ಟಿ ಬಂದ ಮೈಸೂರಿನ ಮಲ್ಲ ಕೇಸರಿಗಳನ್ನ ಮಣ್ಣು ಮುಕ್ಕಿಸಿ "ಮಲ್ಲ ಕೇಸರಿಗಳ  ಸಿಂಘ "ನೆಂಬ ಬಿರುದನ್ನು ಪಡೆದು ಆತ ಹಿಂತಿರುಗಿದ ಆ ದಿನವೇ ನಿನ್ನ ಪುಣ್ಯ ಜನನ. ನಮ್ಮ ಗ್ರಾಮದಲ್ಲಿ ಅಂದು ವೈಭವವೇ ವೈಭವ! ಆತನ ಶೌರ್ಯಕ್ಕೆ,ಪರಾಕ್ರಮಕ್ಕೆ, ಕೀರ್ತಿಗೆ  ನಿಧಿಯಾಗಿ ಸಿಕ್ಕ ಬಿರುದನ್ನ ನಿನಗೆ ನಾಮಕರಣ ಮಾಡಿದ."

 'ಕೀರ್ತಿ ನಿಧಿ ಕೇಸರಿ ಸಿಂಘ'
ಅವನ ಪಯಣ ಸುಗಮವಾಗಿತ್ತೇ ?
ಅವನು ಪಟ್ಟಣಕ್ಕೆ ತೆರಳಲೇ  ಬೇಕಾಗಿದ್ದ ಕಾರಣವೇನು ?
ಅವನು ಯಾವ ಗುರಿಯನ್ನು ಸಾಧಿಸಲು ಹೊರಟಿದ್ದ ?

ಇವೆಲ್ಲ ಪ್ರಶ್ನೆಗಳಿಗೆ ಉತ್ತರ ಕೊಡಲೆಂದೂ  -
ಓದುಗರ ಕಣ್ಮನ ತಣಿಸಿ ರಂಜಿಸಲೆಂದೂ - 
ಶೀಘ್ರದಲ್ಲಿ ಬಿಡುಗಡೆಯಾಗಲಿದ್ದಾನೆ -

ಕೀರ್ತಿ ನಿಧಿ ಕೇಸರಿ ಸಿಂಘ 

ಮೂವತ್ತೊಂದು ಸುಂದರವಾದ ಬಣ್ಣದ ಚಿತ್ರಗಳನ್ನೊಳಗೊಂಡ ಅದ್ದೂರಿಯಾದ ಪುಸ್ತಕ ರೂಪದಲ್ಲಿ  ತನ್ನ ಸಾಹಸದ ಕಥೆಯನ್ನು ನಿಮ್ಮೊಡನೆ ಹಂಚಿಕೊಳ್ಳಲು ಅತಿ ವೇಗವಾಗಿ ಬರುತ್ತಿ ದ್ದಾನೆ -
ಕೀರ್ತಿ ನಿಧಿ ಕೇಸರಿ ಸಿಂಘ


                    
ಕಥೆ:ಶ್ರೀಮತಿ. ಚಿತ್ರಾ ರಾಮಚಂದ್ರನ್ 

ಮುಖ ಪುಟ ವಿನ್ಯಾಸ  ಮತ್ತು ಬಣ್ಣದ ಚಿತ್ರಗಳು: ಶ್ರಿಮತಿ. ವಿದ್ಯಾ ಮುರಳಿ 


2 comments: