ಏಕಾಂಕ ನಾಟಕ
( ದೃಶ್ಯ : ಬಾಗಿಲಿಲ್ಲದ ತೆರೆದ ಅಡುಗೆಮನೆಯಲ್ಲಿ ಅಮ್ಮ ತಿಂಡಿ ತಯಾರಿಸುತ್ತಿದ್ದಾಳೆ. ಅಡುಗೆಮನೆಗೆ ಸೇರಿದಂತಿದ್ದ ಊಟದ ಮನೆಯಲ್ಲಿದ್ದ ಮೇಜಿನ ಮೇಲೆ ಅಂದಿನ ವಾರ್ತಾಪತ್ರಿಕಿಯನ್ನು ಹರಡಿಕೊಂಡು ಕುರ್ಚಿಯಲ್ಲಿ ಕುಳಿತಿದ್ದಾರೆ ಅಜ್ಜಿ. )
ಅಮ್ಮ : ( ದನಿಯೆತ್ತಿ) ವರ್ಷಾ .. ! ಅಮೃತಾನ ಕರಕೊಂಡು ಬಾ ! ಬಿಸಿ ಬಿಸಿ ಮಸಾಲೆ ದೋಸೆ ರೆಡಿ !
ಧ್ವನಿ 1 : ( ಗಟ್ಟಿಯಾಗಿ ) ಹಾ ! ಮಸಾಲೆ ದೋಸೆ ! ಇಗೋ ಬಂದ್ವಿ ಅಮ್ಮ!
( ಮೃದುವಾಗಿ) ಅಮೃತಾ ! ಗೇಮ್ ಪಾಸ್ ಮಾಡಿ ಹೋಗೋಣ ಬಾ ! ತಿಂಡಿ ಮುಗಿಸ್ಕೊಂಡು ಬಂದು ಉಳಿದದ್ದು ಆಡೋಣ.
ಧ್ವನಿ 2 : ಸರಿ ಕಣೆ ! ಕೈ ತೊಳಕೊಂಡು ಹೋಗೋಣ ?
( ನೀರು ಹರಿವ ಶಬ್ದ)
ಅಮ್ಮ : ( ದೋಸೆ ಮಾಡುತ್ತಲೇ ಮತ್ತೆ ಗಟ್ಟಿಯಾಗಿ ನುಡಿಯುತ್ತಾಳೆ ) ವರ್ಷಾ ! ನಲ್ಲಿ ತಿರುಗಿಸಬೇಡ! ಅಲ್ಲೇ ಬಕೆಟಲ್ಲಿ ನೀರು ಹಿಡಿದಿಟ್ಟಿದ್ದೀನಿ ನೋಡು ! ಕೈ ತೊಳೆಯಕ್ಕೆ ಮಗ್ ಯೂಸ್ ಮಾಡು !
ಧ್ವನಿ 1 : ( ಗಟ್ಟಿಯಾಗಿ ) ಓಕೆ ಅಮ್ಮಾ ! ಅಮೃತಾಗೆ ಗೊತ್ತಿರ್ಲಿಲ್ಲ ...
ಧ್ವನಿ 2 : ಯಾಕೇ ? ನಲ್ಲಿ ಉಪಯೋಗಿಸಬಾರದೇ ?
ಧ್ವನಿ 1 : ನಮ್ಮನೇಲಿ ಅವಕ್ಕೆಲ್ಲ ತಡೆ ಹಾಕಿದ್ದಾರೆಕಣೆ ! ಮುಖ ತೊಳೆಯಕ್ಕೆ, ಕೈ ತೊಳೆಯಕ್ಕೆ , ಹಲ್ಲುಜ್ಜಕ್ಕೆ ... ಯಾವುದಕ್ಕೂ ನಲ್ಲಿ ತಿರುಗಿಸಬಾರದು! ಮಗ್ಗೇ ಯೂಸ್ ಮಾಡಬೇಕು ! ಬಾತ್ ಟಬ್ ಇದ್ರೂ ಅದ್ರಲ್ಲಿ ಸ್ನಾನ ಮಾಡಬಾರದು ...
ಅಮ್ಮ : ( ಗಟ್ಟಿಯಾಗಿ ) ಆಯಿತಾ ? ಬೇಗ ಬನ್ನಿ ! ಬಿಸಿ ಆರ್ತಿದೆ !
( ವರ್ಷಾ ಮತ್ತು ಅಮೃತಾ ಇಬ್ಬರೂ ಊಟದಮನೆಯನ್ನು ಪ್ರವೇಶಿಸುತ್ತಾರೆ. ಊಟದ ಮೇಜಿನ ಮುಂದೆ ಕುಳಿತುಕೊಳ್ಳುತ್ತಾರೆ )
ಅಮ್ಮ : ಕೈ ತೊಳೆಯಕ್ಕೆ ಇಷ್ಟು ಹೊತ್ತೇ ? ದೋಸೆ ಬಿಸಿಬಿಸಿಯಾಗಿ ತಿಂದ್ರೆ ಚೆನ್ನ ! (ಇಬ್ಬರಿಗೂ ತಟ್ಟೆಗಳಲ್ಲಿ ಮಸಾಲೆ ದೋಸೆಗಳನ್ನು ತಂದಿಡುತ್ತಾಳೆ )
ವರ್ಷಾ : ನಲ್ಲಿ , ಟಬ್ ಎಲ್ಲ ಇದ್ದೂ ನಮ್ಮನೇಲಿ ಅವನ್ನೆಲ್ಲ ಯಾಕೆ ಬ್ಯಾನ್ ಮಾಡಿದ್ದೀವಿ ಅಂತ ಅಮೃತಾಗೆ ಆಶ್ಚರ್ಯ ....
ಅಮೃತಾ : ( ಸಂಕೋಚದಿಂದ ) ಆಂಟಿ ! ಅದು ಅದು ...
ಅಜ್ಜಿ : (ಪತ್ರಿಕೆಯನ್ನು ಮಡಚಿಟ್ಟು) ಎಲ್ರೂ ಹಾಗೇ ಕೇಳ್ತಾರೆ ಅಮೃತಾ !( ನಗುತ್ತ ) ನಮ್ಮನ್ನ ಕ್ರೇಜಿ ಫ್ಯಾಮಿಲಿ ಅನ್ನೋರೂ ಇದ್ದಾರೆ ! ನಾನು ಚಿಕ್ಕವಳಿದ್ದಾಗ ನಮ್ಮಮ್ಮ ಹೇಳೊವ್ರು ! ಸುಂಸುಮ್ನೆ ನೀರು ಚೆಲ್ಲಿದ್ರೆ ದರಿದ್ರ ನಮ್ಮನ್ನ ಹುಡುಕ್ಕೊಂಡು ಬರತ್ತಂತೆ ! ಎಲ್ಲದ್ದಕ್ಕೂ ಕೊಡದ ನೀರೇ ಆಗ್ತಿತ್ತು!
ಅಮ್ಮ : ( ಕಾವಲಿಯ ಮೇಲೆ ಹಿಟ್ಟನ್ನು ಹುಯ್ಯುತ್ತ ) ಕರೆಕ್ಟ್ ! ಈಗ ಅದೇತಾನೆ ಆಗಿರೋದು! ಎಲ್ಲಿ ನೋಡಿದ್ರೂ ನೀರಿನ ಸಮಸ್ಯೆ! ನೀರಿಗೆ ಬರ ಬಂದ್ರೆ ಅದು ದರಿದ್ರ ಅಲ್ದೆ ಇನ್ನೇನು ? ಇಂತಾ ಪರಿಸ್ಥಿತಿಯಲ್ಲಿ ಒಂದು ಟಬ್ ನೀರನ್ನ ಸ್ನಾನಕ್ಕೆ ಉಪಯೋಗಿಸಿ ಚೆಲ್ಲೋದು ಸರಿಯೇ ?
( ಅಮೃತಾ ನಾಲಿಗೆ ಕಚ್ಚಿಕೊಳ್ಳುತ್ತಾಳೆ )
ಅಮ್ಮ : ( ಮಾತು ಮುಂದುವರಿಸಿ ) ಕೆಲವರಿಗೆ ಷವರಲ್ಲಿ ನಿಂತ್ಬಿಟ್ರೆ ಸಮಯದ ಪರಿವೆಯೇ ಇರೋದಿಲ್ಲ ! ಸ್ನಾನ ಮುಗಿದಿದ್ರೂ ಷವರ್ ಕೆಳಗೆ ನಿಂತೇ ಇರ್ತಾರೆ ! ನೀರು ಹೋಗ್ತಾನೇ ಇರತ್ತೆ ! ಕೈ ತೊಳೆಯೋವಾಗ, ಮುಖ ತೊಳೆಯೋವಾಗ, ಹಲ್ಲುಜ್ಜುವಾಗ ನಲ್ಲಿ ನೀರನ್ನ ಹರಿಬಿಡ್ತಾನೇ ಇದ್ರೆ, ಅದೆಷ್ಟು ನೀರು ಚರಂಡಿಗೆ ಸೇರಿ ವೇಸ್ಟ್ ಆಗತ್ತೆ !
ಅಜ್ಜಿ : ಅಷ್ಟು ನೀರನ್ನ ಉಳಿತಾಯ ಮಾಡಿದ್ರೆ ಎಷ್ಟು ಜನರ ಬಾಯಾರಿಕೆಯನ್ನ ತಣಿಸಬೋದು !
ಅಮೃತ : ಒಬ್ಬರ ಮನೇಲಿ ನೀರು ಉಳಿಸೋದ್ರಿಂದ ಏನು ಪ್ರಯೋಜನ ಅಜ್ಜಿ ?
( ಅಮ್ಮ ದೋಸೆಯನ್ನು ಬೇಯಲು ಬಿಟ್ಟು ಹುಡುಗಿಯರಿಗೆ ಚಟ್ನಿ ಬಡಿಸುತ್ತಾಳೆ )
ಅಜ್ಜಿ : ನಮ್ಮ ಊರಲ್ಲಿ ಎಷ್ಟು ಕೋಟಿ ಮನೆಗಳಿವೆ ? ಅವುಗಳಲ್ಲಿ ಎಷ್ಟು ಮಂದಿ ವಾಸವಾಗಿದ್ದಾರೆ!ಎಲ್ರೂ ಮನಸ್ಸು ಮಾಡಿ ಇಂತಾ ಪ್ರಯತ್ನ ಮಾಡಿದ್ರೆ ಒಟ್ಟಾರೆ ಅದೆಷ್ಟು ನೀರು ಉಳಿತಾಯವಾಗತ್ತೆ ? ಯೋಚ್ನೆ ಮಾಡು !
ವರ್ಷಾ : ಇದನ್ನೆಲ್ಲಾ ನಾವು ಸ್ಕೂಲಲ್ಲೇ ಕಲ್ತಿದ್ದೀವಿ ಅಜ್ಜಿ! ( ಅಮ್ಮನನ್ನು ಕುರಿತು ) ಇನ್ನು ಸ್ವಲ್ಪ ಚಟ್ನಿ ಹಾಕಮ್ಮ.
ಅಜ್ಜಿ : ಕಲಿತರೆ ಮಾತ್ರ ಸಾಲದು ಪುಟ್ಟಿ ! ಅದನ್ನ ನಮ್ಮ ನಮ್ಮ ಮನೆಗಳಲ್ಲೂ ರೂಡಿಸಿಕೊಳ್ಬೇಕು! ನಮ್ಮನೇಲಿ ನೀರಿನ ಸಮಸ್ಯೆ ಇಲ್ಲಾಂತ ನಾವು ಅದನ್ನ ದುರುಪಯೋಗ ಮಾಡೋದು ಯಾವ ನ್ಯಾಯ ಹೇಳು ? ಯಾರೂ ಮಾಡ್ತಿಲ್ಲ ! ನಾವ್ಯಾಕೆ ಮಾಡ್ಬೇಕು ಅಂತ ಎಲ್ರೂ ಇದ್ಬಿಟ್ರೆ ನೀರಿನ ಸಮಸ್ಯಗೆ ಪರಿಹಾರವೇ ಇಲ್ಲ! ಚೆನ್ನೈಯಲ್ಲಿ ನೀರಿನ ಅಭಾವ ಎಷ್ಟರ ಮಟ್ಟಿಗೆ ಇದೆ ಅಂದ್ರೆ , ಹಾಸ್ಟಲ್ಗಳನ್ನೆಲ್ಲ ಮುಚ್ಚಿ ಓದೋ ಮಕ್ಕಳನ್ನ ಅವರವರ ಊರಿಗೆ ವಾಪಸು ಕಳಿಸಿಬಿಟ್ರಂತೆ ! ಪೇಪರಲ್ಲಿ ಸುದ್ದಿ ಬಂದಿದೆ ನೋಡು!
ಅಮ್ಮ : ಹೌದು ಅತ್ತೆ ! ನನ್ನ ಫ್ರೆಂಡ್ ನೆನ್ನೆ ವಾಟ್ಸಾಪ್ ಮಾಡಿದ್ಲು ! ಟ್ಯಾಂಕರ್ ನೀರು ಬಹಳ ದುಬಾರಿಯಂತೆ ! ಬುಕ್ ಮಾಡಿದ್ರೂ ನಮ್ಮ ಸರದಿಗಾಗಿ ಒಂದು ತಿಂಗಳು ಕಾಯಬೇಕಂತೆ .......... ( ಹುಡುಗಿಯರಿಗೆ ಇನ್ನೂ ಒಂದೊಂದು ದೋಸೆ ಬಡಿಸಿ ಹೋಗುತ್ತಾಳೆ )
ಅಜ್ಜಿ : ( ನಿಟ್ಟುಸಿರೆಳೆದು ) ಇನ್ನು ನಮ್ಮೂರಿಗೂ ಅದೇ ಗತಿಯಾಗತ್ತೋ ಏನೋ !
ವರ್ಷಾ : ನಮ್ಮೂರಲ್ಲಿ ನದಿ ಇದ್ದಿದ್ದರೆ ಎಷ್ಟು ಚೆನ್ನಾಗಿರೋದು ?
ಅಮ್ಮ : ನಮ್ಮೂರಲ್ಲಿ ನದಿ ಇಲ್ಲಾಂದವರ್ಯಾರು ? ನಂದಿ ಬೆಟ್ಟದಲ್ಲಿ ಹುಟ್ಟಿ ಕನಕಪುರದ ವರೆಗೂ ಹರಿದು ಮೇಕೆದಾಟಿನಲ್ಲಿ ಕಾವೇರಿಯೊಂದಿಗೆ ಸಂಗಮವಾಗೋ ಅರಕಾವತಿ ನಮ್ಮೂರ ನದಿ ! ಅದೇ ನಂದಿ ಬೆಟ್ಟದಲ್ಲಿ ಉಗಮವಾಗೋ ದಕ್ಷಿಣ ಪಿನಾಕಿನಿ ನದಿ ನಮ್ಮ ಅನೇಕ ಕೆರೆಗಳನ್ನು ತುಂಬಿಸಿ, ನೆರೆ ರಾಜ್ಯಕ್ಕೆ ಹರಿದು ಬಂಗಾಳ ಕೊಲ್ಲಿಯನ್ನು ಸೇರತ್ತೆ.
ಅಮೃತಾ : ( ಬೆರಗಿನಿಂದ ) ಹೌದಾ ಆಂಟಿ ?
ಅಜ್ಜಿ : ಅಷ್ಟೇ ಅಲ್ಲ ! ನಮ್ಮ ದೊಡ್ಡ ಬಸವನ ಬಲಗಡೆಯ ಪಾದ ವೃಷಭಾವತಿ ನದಿಯ ಉಗಮಸ್ಥಾನ ! ಈ ವಿಷಯದ ಬಗ್ಗೆ ಬಸವನ ಪೀಠದಲ್ಲಿ ಒಂದು ಶಾಸನವೇ ಇದೆ !
ಅಮ್ಮ : ( ಕಾವಲಿಯಿಂದ ದೋಸೆಯನ್ನು ತಗೆಯುತ್ತ) ಇನ್ನೊಂದು ದೋಸೆ ಹಾಕ್ಲಾ ?
ಅಮೃತಾ : ಬೇಡಿ ಆಂಟಿ! ಹೊಟ್ಟೆ ಫುಲ್ ! ಮೂರು ಮೂರು ನದಿಗಳಿವೆ ಅಂತ ಹೇಳಿದ್ರಿ ! ನಾವು ಒಂದನ್ನೂ ನೋಡಿಲ್ವಲ್ಲ ? ಬಸವನ ಗುಡಿಯಲ್ಲಿ ನದಿ ಇದೆ ಅಂದ್ರೆ ಆಶ್ಚರ್ಯವಾಗಿದೆ !
ಅಜ್ಜಿ : ( ಅಮ್ಮನನ್ನು ಕುರಿತು ) ಮಕ್ಕಳಿಗೆ ನಾನು ಮಾಡಿದ ಸ್ವೀಟ್ ಕೊಡು !
ಅಮ್ಮ : ಇಗೋ ತಂದೆ ! ( ಹುಡುಗಿಯರ ಮುಂದೆ ಸ್ವೀಟ್ ತಂದಿಡುತ್ತಾಳೆ ) ನಿಮಗೂ ದೋಸೆ ತರಲೇ ಅತ್ತೆ ?
ಅಜ್ಜಿ : ಈಗ ಬೇಡ ! ನೀನು ಕುಳಿತುಕೋ ! (ನಗುತ್ತ ) ಈ ಮಕ್ಕಳಿಗೆ ನಾವು ಇಷ್ಟು ಪಾಠ ಹೇಳಬೇಕಿದೆ!
ವರ್ಷ : ( ಸ್ವೀಟನ್ನು ಸವಿಯುತ್ತ ) ಹೇಳು ಅಜ್ಜಿ ! ನಮ್ಮ ನದಿಗಳೆಲ್ಲ ಎಲ್ಲಿ ?
( ಅಮ್ಮ ತಟ್ಟೆಗಳನ್ನು ಸಿಂಕಿಗೆ ಹಾಕಿ ಸ್ಟವ್ ಆರಿಸಿ ಬಂದು ಕುಳಿತುಕೊಳ್ಳುತ್ತಾಳೆ )
ಅಜ್ಜಿ : ( ಗಂಭೀರ ಧ್ವನಿಯಲ್ಲಿ ) ಎಲ್ಲ ಸತ್ತು ಹೋದವು !
ವರ್ಷಾ : ( ಚಕಿತಳಾಗಿ ) ಹಾ ?
ಅಮೃತಾ : ಹಾಗಂದ್ರೆ ?
ಅಮ್ಮ : ಎಸ್ ಮೈ ಗರ್ಲ್ಸ್ ! ನಗರದ ಪ್ರಜ್ಞಾಹೀನ ಬೆಳವಣಿಗೆ ! ಎಲ್ಲೆಲ್ಲೂ ಮೊಳೆತಿರೋ ಕಟ್ಟಡಗಳು ! ನೀರನ್ನು ಒಯ್ಯಲಾರದೆ ಮುಚ್ಚಿ ಹೋದ ರಾಜಕಾಲುವೆಗಳು! ಮಹಾ ನಗರದ ಕಸ, ಕಚಡ, ಕೈಗಾರಿಕಾ ತ್ಯಾಜ್ಯಗಳ ವಿಸರ್ಜನೆಗಳನ್ನ ಒಯ್ಯುಬೇಕಾದ ಹೀನ ಪರಿಸ್ಥಿತಿಯಲ್ಲಿ ಕೆಲವು ರಾಜಕಾಲುವೆಗಳು ! ಅರಣ್ಯ ನಾಶ ! ಅದರಿಂದ ಮಳೆಯ ಅಭಾವ ! ನದಿ ಉಸಿರುಕಟ್ಟಿ ಸಾಯಲು ಇವೆಲ್ಲ ಸಾಲದೇ ?
( ಹುಡುಗಿಯರಿಬ್ಬರೂ ಗಮನದಿಂದ ಕೇಳಿಸಿಕೊಳ್ಳುತ್ತಾರೆ )
ಅಜ್ಜಿ : ಪ್ರಕೃತಿಯ ಸಂಪನ್ಮೂಲಗಳನ್ನ ಪೂಜ್ಯ ಭಾವನೆಯಿಂದ ಕಂಡು, ಅವಕ್ಕೆ ಕೊಡ ಬೇಕಾದ ಗೌರವವನ್ನು ಕೊಟ್ಟು, ಪರಸ್ಪರ ಸೇವೆ ಸಲ್ಲಿಸ್ಕೊಂಡು ಬಾಳ್ತಿದ್ದ ಕಾಲ ಒಂದು ಇತ್ತು ! ಆದರೆ ಬರುಬರುತ್ತ ಮಾನವನ ಆಸೆಗೆ ಕೊನೆಯೇ ಇಲ್ಲದಾಗಿದೆ! ಎಲ್ಲ ತನಗೇ ಆಗ್ಬೇಕು ! ತನ್ನ ಸುಖಕ್ಕೇ ಆಗ್ಬೇಕು ಅನ್ನೋ ಮನೋಭಾವ ಹೆಚ್ಚಾಗ್ಬಿಟ್ಟಿದೆ !
ಅಮ್ಮ : ಸ್ವಾರ್ಥದಿಂದ ಸಂಪನ್ಮೂಲಗಳನ್ನೆಲ್ಲ ಹೀರಿ ಹೀರಿ ಹಿಪ್ಪೆ ಮಾಡ್ಬಿಟ್ಟಿದ್ದೀವಿ !
ಅಜ್ಜಿ : ಈಗ ನೀರು ನೀರು ಅಂತ ಬಡಕೊಂಡು ಏನು ಪುಣ್ಯ ? ಅತಿ ಆಸೆ ಗತಿಗೇಡು ಅನ್ನೋದು ಎಷ್ಟು ಸತ್ಯವಾದ ಮಾತು ನೋಡಿ! ಈ ಸರ್ತಿ ಮಳೆ ಬರದಿದ್ರೆ ನಮ್ಮ ಗತಿ ಅದೋ ಗತಿ !
ಅಮ್ಮ : ವಿಜ್ಞಾನಿಗಳು ಮೋಡದ ಬಿತ್ತನೆ ಮಾಡಿಯಾದ್ರೂ ಮಳೆ ತರಿಸೋ ಯತ್ನಗಳನ್ನ ನಡೆಸ್ತಿದ್ದಾರಲ್ಲ ! ಹೇಗಾದ್ರೂ ಮಳೆ ಬಂದ್ರೆ ಸಾಕಾಗಿದೆ !
ಅಜ್ಜಿ : ಹಾಗೇನಾದ್ರೂ ಮಳೆ ಬಂದ್ರೆ , ಆ ನೀರನ್ನ ಹಿಡಿದಿಡಕ್ಕೆ ಪಾತ್ರೆ ಎಲ್ಲಿದೆ ?
ವರ್ಷಾ : ಇದೊಳ್ಳೆ ತಮಾಷೆ ! ( ನಗುತ್ತ) ಅಷ್ಟೊಂದು ಮಳೆ ನೀರನ್ನ ಪಾತ್ರೆಗಳಲ್ಲಿ ಹಿಡಿದಿಡಕ್ಕೆ ಆಗತ್ಯೇ ಅಜ್ಜಿ ?
ಅಮ್ಮ : ಅಜ್ಜಿ ಪಾತ್ರೆ ಅಂದಿದ್ದು ಕೆರೆಗಳನ್ನ ...
ಅಮೃತಾ : ಓ ! ನಮ್ಮೂರಲ್ಲಿ ಕೆರೆಗಳಿಗೇನು ಕಡಿಮೆ ?
ವರ್ಷಾ : ಅದೇ ಮತ್ತೆ ! ಅಲಸೂರ್ ಕೆರೆ , ಸ್ಯಾಂಕಿ ಟ್ಯಾಂಕ್ , ಹೆಬ್ಬಾಳ್ ಲೇಕ್, ಮಡಿವಾಳ ಲೇಕ್ , ಜಕ್ಕೂರ್ ಕೆರೆ ! ಆಮೇಲೆ .. ಆಮೇಲೆ ...
ಅಜ್ಜಿ : ಆಮೇಲೆ ?
ವರ್ಷಾ : ನೀನೆ ಹೇಳು ಅಜ್ಜಿ !
ಅಜ್ಜಿ : ಒಂದಾನೊಂದು ಕಾಲದಲ್ಲಿ ಅನೇಕ ಸುಂದರವಾದ ದೊಡ್ಡ ದೊಡ್ಡ ಕಲ್ಯಾಣಿಗಳು, ಅಂದರೆ ಕೆರೆಗಳಿದ್ದ ಕಾರಣ ನಮ್ಮೂರನ್ನ ಕಲ್ಯಾಣಪುರಿ ಅಂತಲೇ ಕರೀತಿದ್ರು . ಗುಡಿಗೊಂದು ಕಲ್ಯಾಣಿ, ತೋಟಕ್ಕೊಂದು ಕೊಳ, ಊರಿಗೊಂದು ಕೆರೆ ಅಂತ , ಸ್ವಾವಲಂಬಿಗಳಾಗಿದ್ದ ಪುಟ್ಟ ಪುಟ್ಟ ಗ್ರಾಮಗಳೆಲ್ಲ ಇವತ್ತು ಎಡೆಬಿಡದೆ ಒಂದಾಗಿ ಕಲೆತು ಈ ಮಹಾನಗರವಾಗ್ಬಿಟ್ಟಿದೆ ! ಅದರ ಪರಿಣಾಮವಾಗಿ ಕೃಷಿ ಮಾಡೋ ಜಮೀನುಗಳು ಮತ್ತು ತೋಟಗಳ ಜೊತೆ ಅನೇಕ ಕೆರೆಗಳೂ ಕಾಣೆಯಾಗಿಹೋದವು. ಕೆಲವು ಕೆರೆಗಳು ತಿಪ್ಪೆ ಗುಂಡಿಗಳಾಗಿ, ಇನ್ನೂ ಕೆಲವು ಕೊಳಚೆ ನೀರಿನ ಹೊಂಡಗಳಾಗಿ ಪರಿವರ್ತಿಸಿಬಿಟ್ಟಿವೆ . ರಾಸಾಯನಿಕೆ ಹೊಗೆಯನ್ನ ಕಾರ್ತಿವೆ !ನೀರು ಕಾಣದೆ ಹೂಳು ತುಂಬಿ ಬತ್ತಿ ಹೋದ ಕೆರೆಗಳನ್ನ ಮಲ್ಟಿ ಸ್ಟೋರಿ ಬಿಲ್ಡಿಂಗ್ಸ್ ಆಕ್ರಮಿಸಿಕೊಂಡಿವೆ . ಉಳಿದಿರೋ ಕೆಲವೇ ಕೆರೆಗಳು ಜೀವವನ್ನು ಕೈಯಲ್ಲಿ ಹಿಡ್ಕೊಂಡು ನರಳ್ತಿವೆ !
ಅಮೃತಾ : ನರಳ್ತಿರೋ ಕೆರೆಗಳನ್ನ ಕಾಪಾಡಕ್ಕಾಗಲ್ವೆ ಅಜ್ಜಿ ?
ಅಜ್ಜಿ : ಕಾಪಾಡಬೇಕು ಅಮೃತಾ ! ನಾವಾಗಿ ಹೊಸತಾದ ಕೆರೆಗಳನ್ನ ಕಟ್ಟಿಸಕ್ಕಾಗ್ದಿದ್ರೂ , ನೂರಾರು ವರುಷಗಳ ಹಿಂದೆ ರಾಜಮಹಾರಾಜರೆಲ್ಲ ಸಮಾಜ ಕಲ್ಯಾಣಕ್ಕಾಗಿ ನಿರ್ಮಿಸಿದ ಕೆರೆಗಳನ್ನ ಕಾಪಾಡ್ಕೊಳ್ಳೋದು ನಮ್ಮ ಕರ್ತವ್ಯ ಅಲ್ವೇ !
ವರ್ಷಾ : ರಾಜಮಹಾರಾಜರು ನಿರ್ಮಿಸಿದ ಕೆರೆ ಅಂತ ಹೇಗೆ ಗೊತ್ತಾಗ್ಬೇಕು ಅಜ್ಜಿ ? ಅಷ್ಟು ಪುರಾತನವಾದ ಕೆರೆಗಳೆಲ್ಲ ಇನ್ನೂ ಇವೆಯೇ ?
ಅಜ್ಜಿ : ಅವರೆಲ್ಲ ಕೆರೆಗಳನ್ನ ನಿರ್ಮಾಣ ಮಾಡಿದ್ದು ಮಾತ್ರವಲ್ಲ, ಅವುಗಳ ಬಗ್ಗೆಯ ವಿವರಗಳನ್ನ ಶಾಸನಗಳಲ್ಲಿ ಕೆತ್ತಿಸಿಯೂ ಇದ್ದಾರೆ. ಆ ಶಾಸನಗಳನ್ನ ಓದಿ ಕೆರೆಗಳ ಹಿಸ್ಟ್ರಿಯನ್ನ ತಿಳ್ಕೋಬೋದು .
ಅಮೃತಾ : ಶಾಸನಗಳನ್ನ ಓದಕ್ಕಾಗತ್ತಾ ಅಜ್ಜಿ ?
ವರ್ಷಾ : ಅಜ್ಜಿ ಪುರಾತತ್ವ ಶಾಸ್ತ್ರ - ಅಂದ್ರೆ ಆರ್ಕಿಯಾಲಜಿಯಲ್ಲಿ ಡಾಕ್ಟ್ರೇಟ್ ಪಡ್ಕೊಡಿದ್ದಾರೆ ! ಜೊತೆಗೆ ಶಾಸನ ಶಾಸ್ತ್ರವನ್ನೂ ಅಭ್ಯಾಸ ಮಾಡಿದ್ದಾರೆ ಅಮೃತಾ !
ಅಮೃತಾ : ವಾವ್ ! ( ಕುತೂಹಲದಿಂದ) ಕೆರೆ ಶಾಸನಗಳಲ್ಲಿ ಏನು ಬರೆದಿದ್ದಾರೆ ಹೇಳಿ ಅಜ್ಜಿ !
ಅಜ್ಜಿ : ಒಂಬತ್ತನೇ ಶತಮಾನದ ಅಗರ ಕೆರೆಯ ಶಾಸನವೇ ಅತಿ ಪುರಾತನವಾದ ಶಾಸನ. 'ಇವ್ಯುಲಿಯೂರೊಡೆಇರುಗಮಯ್ಯನಮಗಂಸಿರಿಯಮಯ್ಯನೆರಡುಕೆರೆಯಂತೂ೦ಬನಿಕ್ಕಿಮೂಡಣಕೆರೆಯಯಂಕಟ್ಟಿಸಿಮೂರುಕೆರೆಯಬಿತ್ತುಪಟ್ಟವಂಪಡೆದಂ .... '
ಅಮ್ಮ : ( ನಗುತ್ತ) ಶಾಸನ ನಿಮಗೆ ಬಾಯಿಪಾಠವೇ ಆಗ್ಬಿಟ್ಟಿದೆಯಲ್ಲ ಅತ್ತೆ ?
ಅಜ್ಜಿ : ( ನಕ್ಕು) ಲೆಕ್ಚರ್ ಮಾಡೋ ಕಡೆಯೆಲ್ಲ ಹೇಳಿ ಹೇಳಿ ರೂಡಿಯಾಗ್ಬಿಟ್ಟಿದೆ !
ವರ್ಷಾ : ( ಬೆರಗಿನಿಂದ) ಹಾಗಂದ್ರೆ ಏನು ಅಜ್ಜಿ ?
ಅಜ್ಜಿ : ಇರುಗಮೈಯ್ಯನ ಮಗ ಸಿರಿಮೈಯ ಎಂಬಾತ ಎರಡು ಕೆರೆಗಳಿಗೆ ತೂಬುಗಳನ್ನು ನಿರ್ಮಿಸಿದ್ದಲ್ದೇ , ಮತ್ತೊಂದು ಕೆರಯನ್ನೂ ಕಟ್ಟಿಸಿದನಂತೆ ! ನೀವು ಏನಾದ್ರೊಂದು ಒಳ್ಳೆ ಕೆಲಸ ಮಾಡಿದ್ರೆ ನಿಮ್ಮ ಅಪ್ಪ ಅಮ್ಮ ನಿಮಗೆ ಗಿಫ್ಟ್ ಕೊಡಿಸಲವೇ ? ಹಾಗೆಯೇ ಅವನ ಕೆಲಸವನ್ನ ಮೆಚ್ಚಿ ಅವನಿಗೆ ಗದ್ದೆಯನ್ನ ಗಿಫ್ಟ್ ಮಾಡಿದ್ರಂತೆ ! ಬಿತ್ತುವಟ್ಟ ಅಂದ್ರೆ ಕೆರೆ ಕಟ್ಟಿಸಿದವರಿಗೆ ಕೊಡೊ ಗಿಫ್ಟ್ ! ಅದನ್ನ ಕೆರೆಕಟ್ಟು ಕೊಡಿಗೆ ಅಂತಲೂ ಹೇಳ್ತಾರೆ.
ವರ್ಷಾ : ವೆರಿ ಇಂಟೆರೆಸ್ಟಿಂಗ್ !
ಅಮೃತಾ : ಇನ್ನೊಂದು ಶಾಸನದ ಕಥೆ ಹೇಳಿ ಅಜ್ಜಿ !
ಅಜ್ಜಿ : ಸ್ತ್ರೀ ದೈವದ ಸೇವೆಗಾಗಿಯೂ ಪಶು, ಪಕ್ಷಿ, ಪ್ರಾಣಿ, ಮತ್ತಿತರ ಜೀವಿಗಳ ಸಂರಕ್ಷಣೆಗಾಗಿಯೂ ಕೆಂಗೇರಿಯ ಬಳಿ ಇರೋ ರಾಮಸಮುದ್ರ ಎಂಬಲ್ಲಿ 1340 ಯಲ್ಲಿ ನಿರ್ಮಾಣವಾಗಿರೋ ಕೆರೆಯ ಬಗ್ಗೆಯ ಶಾಸನ ಒಂದಿದೆ .
ವರ್ಷಾ : ಹಿಂದಿನಕಾಲದಲ್ಲೂ ಪ್ರಾಣಿ ಪಕ್ಷಿಗಳ ಬಗ್ಗೆ ಯೋಚಿಸಿದ್ರಲ್ಲ! ಸೋ ಸ್ವೀಟ್ !
ಅಜ್ಜಿ : ಇನ್ನೊಂದು ಶಾಸನದ ಬಗ್ಗೆ ಹೇಳ್ತಿನಿ ಕೇಳಿ ! ಕೆರೆ ಕಟ್ಟಿಸಿದ್ರೆ ಮಾತ್ರ ಸಾಲದು. ಅದನ್ನ ಚೆನ್ನಾಗಿ ಮೈಂಟೈನೂ ಮಾಡ್ಬೇಕು ಅಲ್ವೇ ? ಕೃಷ್ಣದೇವರಾಯರ ಕಾಲದ ಶಾಸನವೊಂದರಲ್ಲಿ ಹೀಗಿದೆ - '..... ಸೋಮೋಪರಾಗ ಪುಣ್ಯಕಾಲದಲ್ಲಿ ತನ್ನ ತಂದೆಗೆ ಧರ್ಮವಾಗಬೇಕೆಂದು ಸಿವಂಣಪ ನಾಯಕರು ಅಗರದ ಕೆರೆಗೆ ಭಂಡಿ ನಡವುದಕ್ಕೆ ಕೊಟ್ಟ ಹೊಲ ' ಅಂದ್ರೆ, ಚಂದ್ರ ಗ್ರಹಣ ಕಾಲದಲ್ಲಿ ತನ್ನ ತಂದೆಗೆ ಪುಣ್ಯ ಸೇರಲಿ ಅಂತ, ಅಗರದ ಕೆರೆಯ ಹೂಳನ್ನು ತೆಗೆಯುವ ಬಂಡಿಯ ಪರಾಮರಿಕೆಗಾಗಿ ಹೊಲವನ್ನು ಕೊಟ್ಟ ಸಿವಣ್ಣಪ್ಪ ನಾಯಕ ಎಂಬಾತ.
ವರ್ಷಾ : ಬಂಡಿ ಪರಾಮರಿಕೆಗೆ ದುಡ್ಡು ಕೊಡ್ದೆ ಹೊಲ ಯಾಕೆ ಕೊಟ್ಟ ಅಜ್ಜಿ ?
ಅಜ್ಜಿ : ಹೊಲದಲ್ಲಿ ದುಡಿದು ಅದ್ರಲ್ಲಿ ಬಾರೋ ವರಮಾನದಿಂದ ಗಾಡಿ ಪರಾಮರಿಸಲಿ ಅಂತ !
ಅಮ್ಮ : ಬರಿ ಮಹಾರಾಜರು ಮಾತ್ರ ಅಲ್ಲ ! ಗ್ರಾಮದ ಮುಖ್ಯಸ್ಥರು, ಪ್ರಧಾನಿಗಳು, ಇತರ ಅಧಿಕಾರಿಗಳು ಮತ್ತು ಜನಸಾಮಾನ್ಯರೂ ಕೆರೆ ಕಟ್ಟೆಗಳನ್ನ ಕಟ್ಟಿಸೋದನ್ನ ಒಂದು ಪುಣ್ಯ ಕಾರ್ಯ ಅಂತಲೇ ತಿಳಿದಿದ್ರು . ಕುಟುಂಬದವರಿಗೆ ತಲೆತಲಾಂತರದವರೆಗೂ ಪುಣ್ಯ ಸಿಕ್ಕಲಿ ಅಂತ ಕೆರೆಗಳನ್ನ ಕಟ್ಟಿಸ್ತಿದ್ರು ಕೆಲವರು .
ಅಜ್ಜಿ : 1366 ಇಸವಿಯಲ್ಲಿ ನಾಗಸಾನಿ ಎಂಬ ಮಹಿಳೆ, ತನ್ನ ಗಂಡನಿಗೂ ಭಂದುಗಳಿಗೂ ಇಪ್ಪತ್ತೊಂದು ತಲೆಮಾರಿನವರಿಗೆ ಪುಣ್ಯ ಲಭಿಸೋದಕ್ಕಾಕಿ , ಚಂದ್ರ ಸೂರ್ಯರಿರೋವರೆಗೂ ನೆಲಸಿರಲಿ ಅಂತ ಒಂದು ಕೆರೆಯನ್ನ ಕಟ್ಟಿಸಿದ್ದಾಳೆ . ಈ ಶಾಸನ ಕ್ಯಾಲ್ಸನಹಳ್ಳಿಯ ಒಂದು ಗದ್ದೆಯಲ್ಲಿ ಇತ್ತಂತೆ.
ವರ್ಷಾ : ಇನ್ನೂ ಅಲ್ಲೇ ಇದೆಯಾ ಅಜ್ಜಿ ?
ಅಜ್ಜಿ : ನೋಡಬೇಕು ವರ್ಷಾ. ಧಾಖಲಾಗಿರೋ ಎಲ್ಲ ಶಾಸನಗಳನ್ನೂ ಪತ್ತೆ ಹಚ್ಚೋ ಸಾಹಸಕ್ಕೆ ತೊಡಗಿದೆ ಒಂದು ತಂಡ. ಒಮ್ಮೊಮ್ಮೆ ಶಾಸನಗಳ ಹಂಟಿಂಗ್ ಮಾಡಕ್ಕೆ ನಾನೂ ಹೋಗ್ತೀನಿ!
ಅಮೃತಾ : ( ಕುತೂಹಲದಿಂದ) ಶಾನಗಳು ಎಲ್ಲಿ ಧಾಖಲೆಯಾಗಿವೆ ಅಜ್ಜಿ ?
ಅಜ್ಜಿ : ಈ ಶಾಸನಗಳನ್ನೆಲ್ಲ ತನ್ನ ಎಪಿಗ್ರಾಫಿಯಾ ಕರ್ನಾಟಿಕಾ ಎಂಬ ಶಾಸನಗಳ ಸಂಪುಟದಲ್ಲಿ ಲೂಯಿಸ್ ರೈಸ್ ಧಾಖಲೆ ಮಾಡಿದ್ದಾರೆ. ಇಲ್ಲಿ ನೋಡಿ ( ತನ್ನ ಟ್ಯಾಬ್ಲೆಟ್ ತೆರೆದು) ಈಗ ಆ ಸಂಪುಟ ಇಂಟರ್ನೆಟ್ಟಲ್ಲೂ ಲಭ್ಯ .
( ಅಮೃತಾ ಮತ್ತು ವರ್ಷಾ ಎದ್ದು ಬಂದು ಅಜ್ಜಿಯ ಅಕ್ಕಪಕ್ಕ ನಿಲ್ಲುತ್ತಾರೆ. ಟ್ಯಾಬ್ಲೆಟನ್ನು ದಿಟ್ಟಿಸುತ್ತಾರೆ. ಅಜ್ಜಿ ಸಂಪುಟದಲ್ಲಿಯ ಒಂದು ಶಾಸನವನ್ನು ತೋರಿಸುತ್ತಾರೆ )
ಅಜ್ಜಿ : ಈ ಶಹಾಸನವನ್ನ ಓದಕ್ಕಾಗತ್ತಾ ನೋಡಿ ! ?
ವರ್ಷಾ : ( ಓದಲು ಎತ್ನಿಸುತ್ತಾಳೆ ) ಸ್ವಸ್ತಿಶ್ರೀಲಕ್ಷುಮೀಪತಿಯಾಗುತಂ .... !!! ಅಬ್ಬಬ್ಬಾ ! ನೀನೇ ಓದ್ಬಿಡು ಅಜ್ಜಿ !
ಅಜ್ಜಿ : ಅಮೃತಾ ! ನೀನು ಟ್ರೈ ಮಾಡು !
ಅಮೃತಾ : (ಮುಂದುವರೆಯಲೆತ್ನಿಸಿ ) ವಿರ್ದ್ಧಪ್ರಸಂನಮೂರ್ತಿಶ್ರೀಮನ್ ... !( ಬೆರಗಿನಿಂದ) ಒಂದೇ ಲೈನಲ್ಲಿ ಎಷ್ಟೊಂದು ಪದಗಳು ... ! ಬಿಡಿಸಿ ಬರೆದಿದ್ರೆ ಓದಕ್ಕೆ ಈಜಿಯಾಗ್ತಿತ್ತು ! ನೀವೇ ಓದ್ಬಿಡಿ ಅಜ್ಜಿ !
ಅಜ್ಜಿ : ಕಲ್ಲಲ್ಲಿ ಅಕ್ಷರಗಳನ್ನ ಕೆತ್ತೋದು ಕಷ್ಟವಾದ ಕೆಲಸ ! ದಕ್ಷತೆಯಿಂದ ಮಾಡ್ಬೇಕಾದ ಕೆಲಸ! ವಿಷಯ ಚಿಕ್ಕದ್ದೆ ಆಗಿರ್ಬೋದು! ಯಾವ ದೇವರ ಆಶೀರ್ವಾಧದಿಂದ, ಯಾವ ಮಹಾರಾಜನ ಆಳ್ವಿಕೆಯಲ್ಲಿ , ಯಾವ ವರುಷದಲ್ಲಿ ಯಾವ ದಿನಾಂಕದಲ್ಲಿ ಯಾರು, ಯಾವ ಕಾರ್ಯದ ಬಗ್ಗೆ ಶಾಸನವನ್ನ ಕೆತ್ತಿಸಿದ್ದಾರೆ , ಕೆತ್ತಿದವರ ಹೆಸರು , ಅವರ ತಂದೆಯ ಹೆಸರು , ಮಾಡಿರುವ ಕಾರ್ಯಕ್ಕೆ ಲಭಿಸುವಂತ ಫಲ, ಅದನ್ನು ನಾಶಗೊಳಿಸಿದವರಿಗೆ ದೊರತಕ್ಕ ಪಾಪ, ಎಲ್ಲ ವಿಷಯಗಳನ್ನೂ ಮಹಾರಾಜರ ಹೆಸರಿನೊಂದಿಗೆ ಅವರ ವಂಶ , ಬಿರುದುಗಳ ಸಹಿತ ಈ ಶಾಸನದಲ್ಲಿ ಕೆತ್ತಿಸಿದ್ದಾರೆ . ಇಷ್ಟು ವಿಷಯಗಳನ್ನೊಳಗೊಂಡಿರೋ ಶಾಸನ ಓದೋವಾಗ ಆ ಕಾಲಘಟ್ಟದ ಇತಿಹಾಸದ ಒಂದು ಟ್ರೈಲರ್ ನೋಡಿದಂತೆ ಅನ್ನಿಸತ್ತೆ !
ವರ್ಷಾ : ಕಲ್ಲು ಹೇಳೋ ಕಥೆ ! ಆದ್ರೆ ತಲೆ ಗಿರ್ರನ್ನತ್ತೆ !
ಅಜ್ಜಿ : ( ನಗುತ್ತಾರೆ ) ಓಕೆ ! ಈಗ ಈ ಶಾಸನದ ಇಂಗ್ಲಿಷ್ ಅನುವಾದ ಇಲ್ಲಿ ಕೊಟ್ಟಿದ್ದಾರೆ ನೋಡಿ !
( ಟ್ಯಾಬ್ಲೆಟ್ಟಲ್ಲಿ ಶಾಸನದ ಇಂಗ್ಲಿಷ್ ಅನುವಾದವನ್ನ ತೋರಿಸುತ್ತಾರೆ )
( ವರ್ಷಾ ಮತ್ತು ಅಮೃತಾ ಅನುವಾದವನ್ನು ಓದುತ್ತಾರೆ )
ವರ್ಷ : ಈ ಶಾಸನದ ಬಗ್ಗೆ ಇದೀಗ ನೀನು ಹೇಳಿದ್ದೆಯಲ್ಲ ಅಜ್ಜಿ !
ಅಮೃತಾ : ಅಬ್ಬ! ನಮ್ಮೂರಲ್ಲಿ ಅದೆಷ್ಟು ಕೆರೆಗಳು ನಿರ್ಮಾಣವಾಗಿವೆ ? ಅಷ್ಟೊಂದು ಕೆರೆಗಳನ್ನೂ ದುರಸ್ತಿ ಮಾಡಿಸಿದ್ರೆ ನೀರಿನ ಕೊರತೆಯೇ ಇರೋದಿಲ್ಲ, ಅಲ್ವ ಅಜ್ಜಿ ?
ಅಜ್ಜಿ : ಶಾಸನೋಕ್ತ ಕೆರೆಗಳನ್ನೆಲ್ಲ ಉಳಿಸಿದ್ರೆ ನೀರಿಗೆ ಇಷ್ಟು ಪರದಾಟ ಇರ್ತಿರ್ಲಿಲ್ಲ. ಬಟ್ ಇಟ್ ಇಸ್ ವೆರಿ ಸಾಡ್ ! ಕೆಲವೆಡೆ ಶಾಸನಗಳು ಮಾತ್ರ ಉಳ್ಕೊಂಡಿವೆ ! ಕೆರೆಗಳು ಮಾಯ ! ಇನ್ನೂ ಕೆಲವೆಡೆ ಶಾಸನಗಳೂ ಸಹ ಕಾಣೆಯಾಗಿವೆ ! ಮೊದ್ಲೇ ಹೇಳಿದ್ನಲ್ಲ ! ಬರಿ ತಿಪ್ಪೆ ಗುಂಡಿ! ಮೋರಿ ನೀರಿನ ಹೊಂಡ! ರಾಸಾಯನಿಕ ಹೊಗೆ ಮತ್ತು ಬೆಂಕಿ ಕಾರೋ ಕೊಳ್ಳಿ ದೆವ್ವ ! ಇವೆ ಕೆಲವು ಕೆರೆಗಳ ಇಂದಿನಪರಿಸ್ಥಿತಿ !
ವರ್ಷಾ : ಅಯ್ಯೋ ಅಜ್ಜಿ ! ಹಾಗಾದ್ರೆ, ಜೋರು ಮಳೆ ಬಂದ್ರೂ , ನೀನು ಹೇಳಿದಹಾಗೆ ನೀರನ್ನ ಹಿಡಿದಿಡಕ್ಕೆ 'ಪಾತ್ರೆಗಳೇ' ಇಲ್ಲಾನ್ನು !
ಅಮ್ಮ : ಇಂದಿನ ಪರಿಸ್ಥಿತೀಲಿ ಕೆರೆ ಕಟ್ಟೋದೆಲ್ಲ ಆಗದ ಕೆಲಸ . ಇರೋ ಕೆರೆಗಳನ್ನ ಸ್ವಚ್ಛವಾಗಿಟ್ಕೊಂಡ್ರೆ ಅದೇ ಸಾಕಾಗಿದೆ . ಈಗೀಗ ಇದರ ಬಗ್ಗೆ ಜನ ಎಚ್ಚರಗೊಂಡಿದ್ದಾರೆ ! ಅನೇಕ ಕೆರೆ ಸಂರಕ್ಷಣೆಯ ವೇದಿಕೆಗಳು ಹುಟ್ಕೊಂಡಿವೆ.
ಅಮೃತಾ : ಮೊನ್ನೆ ಮುಂಬೈಯಲ್ಲಿ ಜೋರು ಮಳೆಯಾಗಿ ರಸ್ತೆಗಳಲ್ಲೆಲ್ಲ ಪ್ರವಾಹ ಅಂತೆ ! ಎಷ್ಟು ನೀರು ವೇಸ್ಟ್ ಆಲ್ವಾ ಅಜ್ಜಿ ?
ಅಜ್ಜಿ : ಇಲ್ಲೂ ಹಾಗೇತಾನೇ ? ಜೋರು ಮಳೆಯಾದ್ರೆ ಅಂಡರ್ ಪಾಸುಗಳಲ್ಲಿ ದೋಣಿಯಲ್ಲೇ ಸಾಗ್ಬೇಕು !
( ಅಮ್ಮನ ಮೊಬೈಲ್ ಟ್ರಿಂಗುಟ್ಟುತ್ತದೆ )
ಅಮ್ಮ : ಈ ವಾಟ್ಸಾಪ್ ಮೆಸೇಜ್ ನೋಡಿ ಅತ್ತೆ !( ಮೆಸೇಜ್ ತೋರಿಸಿ ) ಚೀನಾ ದೇಶದ ಡೊಂಗುವಾನ್ ನಗರದಲ್ಲಿ ಏಳು ಗಂಟೆಕಾಲ ಸತತವಾಗಿ ಜೋರು ಮಳೆಯಂತೆ . ಆದ್ರೆ ರಸ್ತೆಯಲ್ಲಿ ಒಂದು ಹನಿ ನೀರೂ ನಿಂತಿಲ್ಲ.
ವರ್ಷಾ : ( ಆಶ್ಚರ್ಯದಿಂದ ಇಣುಕಿ ನೋಡಿ ) ಹೇಗೆ ಅಮ್ಮ ?
ಅಮ್ಮ : ರಸ್ತೆಗಳ ಎರಡು ಬದಿಯುದ್ದಕ್ಕೂ ಮಾಡಿರೋ ರಂದ್ರಗಳ ಮೂಲಕ ನೀರೆಲ್ಲ ಬಸಿದು ಭೂಮಿಗಿಳಿದು ಅಂತರ್ಜಲವನ್ನ ರಿಚಾರ್ಜ್ ಮಾಡತ್ತಂತೆ ! ಎಷ್ಟು ಸೊಗಸಾಗಿ ಮಳೆ ನೀರಿನ ಕೊಯ್ಲು ಮಾಡ್ತಾರೆ ನೋಡು ಅವರು!
ವರ್ಷಾ : ಅಜ್ಜಿ ! ನೀನು ಹೇಳಿದಂತೆ ಅದು ಪ್ರಕೃತಿ ಸಂಪನ್ಮೂಲಕ್ಕೆ ಅವರು ಸಲ್ಲಿಸೋ ಸೇವೆ
ಅಲ್ವೇ ?
ಅಜ್ಜಿ : ಊಂಹೂಂ ! ( ಕಿರುನಗೆ ಬೀರಿ ) ಅದು ನಮಗೆ ನಾವೇ ಮಾಡ್ಕೊಂಡಂತ ಸೇವೆ !
ಅಮ್ಮ : ಪ್ರತಿಯೊಬ್ಬರ ಮನೆಯಲ್ಲೂ ರೈನ್ ವಾಟರ್ ಹಾರ್ವೆಸ್ಟಿಂಗ್ ಮಾಡಿ ಮಳೆ ನೀರನ್ನ ಸಂಗ್ರಹ ಮಾಡೋದು ಒಳ್ಳೇದು .
ಅಮೃತಾ : ನಿಮ್ಮನೇಲಿ ಮಾಡಿದ್ದೀರಾ ಆಂಟಿ ?
ಅಮ್ಮ : ಹೌದು ಅಮೃತಾ ! ನಮ್ಮ ಟೆರೇಸಲ್ಲಿ ಬೀಳೋ ಮಳೆ ನೀರನ್ನೆಲ್ಲ ಕಲೆಕ್ಟ್ ಮಾಡಿ ಶೋಧಿಸಿ ಪೈಪ್ಗಳ ಮೂಲಕ ಟ್ಯಾಂಕಿಗೆ ತುಂಬಿ, ನಂತರ ಆ ನೀರನ್ನ ನಮ್ಮ ಬೋರ್ ವೆಲ್ಗೆ ಸಾಗಿಸ್ತೀವಿ ! ಪ್ರಕೃತಿ ನಮಗೆ ಕೊಟ್ಟದ್ದನ್ನ ನಾವು ಧನ್ಯವಾದಗಳೊಂದಿಗೆ ಅದಕ್ಕೆ ಹಿಂದಿರುಗಿಸೋದು ನಮ್ಮ ಕರ್ತವ್ಯ ! ಅಲ್ವೇ ?
ಅಮೃತಾ : ನಮ್ಮನೇಲೂ ವಾಟರ್ ಹಾರ್ವೆಸ್ಟಿಂಗ್ ಮಾಡೋ ಬಗ್ಗೆ ಮಾತಾಡ್ತಿದ್ರು ! ಈಗ ಅದರ ಮುಖ್ಯತ್ವ ಅರ್ಥವಾಯಿತು ! ಇನ್ಮೇಲೆ ನಾನು ನಲ್ಲಿ ನೀರು ವೇಸ್ಟ್ ಮಾಡಲ್ಲ ! ಷವರಲ್ಲಿ ನೀರು ಹರಿಬಿಡಲ್ಲ !
ಅಜ್ಜಿ : ವೆರಿ ಗುಡ್ ! ನಾಳೆಯ ದಿನಗಳು ನಿಮ್ಮದ್ದೇ ಅಲ್ವೇ ಪುಟ್ಟಿ ? ಬುದ್ಧಿವಂತಿಗೆಯಿಂದ ಬದುಕೋದು ಕಲಿತರೆ ನಿಮಗೇ ಒಳ್ಳೆಯದಾಗತ್ತೆ.
( ಕಾರ್ ಹಾರನ್ ಶಬ್ದ ಕೇಳಿಸುತ್ತದೆ )
ಅಮೃತಾ : ( ಎದ್ದು ನಿಂತು ) ಅಪ್ಪ ಬಂದ್ರು ! ನಾನು ಹೊರಡ್ತಿನಿ ವರ್ಷಾ !
ಅಮ್ಮ : ನಿಮ್ಮ ಗೇಮ್ ಮುಗಿಸ್ಲೇ ಇಲ್ವಲ್ಲ ...
ಅಮೃತಾ : ನಮ್ಮ ಮಾತುಕತೆ ಅದಕ್ಕಿಂತ ಚೆನ್ನಾಗಿತ್ತು ಆಂಟಿ ..
( ವರ್ಷಾ ಅಮೃತಾಳನ್ನು ಬೀಳ್ಗೊಡಲು ಹೊರಡುತ್ತಾಳೆ)
ವರ್ಷಾ : ಮುಂದಿನ ಸರ್ತಿ ಅಜ್ಜಿ ಜೊತೆ ಶಾಸನಗಳ ಹಂಟಿಂಗ್ ಮಾಡಕ್ಕೆ ನಾವೂ ಹೋಗೋಣವೆ ?
ಅಮೃತಾ : ಖಂಡಿತವಾಗಲೂ ಹೋಗೋಣ ವರ್ಷಾ ! ಅಷ್ಟೇ ಅಲ್ಲ ! ನಾಳೆ ಸ್ಕೂಲಲ್ಲಿ ನಮ್ಮೂರ ಕೆರೆಗಳ ಬಗ್ಗೆ ಎಲರಿಗೂ ಹೇಳ್ಬೇಕು !
ವರ್ಷಾ : ಕೆರೆ ಸಂರಕ್ಷಣೆಯ ಬಗ್ಗೆ ಎಲ್ರಿಗೂ ಅರಿವು ಮೂಡಿಸಕ್ಕೆ ನಾನೂ ರೆಡಿ !
ಅಮೃತಾ : ಬೈ ಅಜ್ಜಿ ! ಬೈ ಆಂಟಿ !
ಅಮ್ಮ, ಅಜ್ಜಿ : ಬೈ ಅಮೃತಾ !
(ವರ್ಷಾ ಅಮೃತಾ ಹೊರಗೆ ನಡೆಯುತ್ತಾರೆ )
( ತೆರೆ )
---------------------------------------------------------------------------------------------
ಆಧಾರ : EC NO: 70, 79, 111, 80, 56
-----------------------------------------------------------------------------------------------
The Tanks of Kalyanapuri

ಅಜ್ಜಿ : ಚುರುಕಾದ ಮಕ್ಕಳು !
ಅಮ್ಮ : ಇಂದಿನ ಮಕ್ಕಳು ಬಹಳ ಸ್ಮಾರ್ಟ್ ಅತ್ತೆ ! ಬೇಗ ಕಲೀತಾರೆ ! ಚೆನ್ನಾಗಿ ಬದುಕ್ಕೊತ್ತಾರೆ !( ತೆರೆ )
---------------------------------------------------------------------------------------------
ಆಧಾರ : EC NO: 70, 79, 111, 80, 56
-----------------------------------------------------------------------------------------------
The Tanks of Kalyanapuri
( One Act play )
( Scene : Amma is cooking in the open kitchen . Grandma is at the dining table in the adjoining area , poring over the newspaper )
Mother( calling) : Varsha ! Crispy Masala Dosa is ready ! Come , with Amritha , and get it !
Voice-1 ( offstage) : Wow ! Masala dosa ! Coming Mom ! ......come Amritha ! Pause that game , we can continue after tiffin.
Voice -2 ( offstage ) : Ok ! lets wash hands first .
( Sound of water running offstage )
Mother ( turning over a dosa ): Varsha ! Don't open the tap . Use the water in the bucket . The mug is on the shelf .
Voice -1( offstage) : Sure Mom.... Amritha din't know ( sound of running tap stops)
Voice -2 ( offstage) : Shouldn’t use tap ? Why , yaar ?
Voice -1 ( offstage): There’s a ban on using the tap in our house , for washing hand, brushing teeth ...for everything, we use mug water . Though there’s a tub , no tub-bath !
Mother : ( calling) are you girls coming ? Dosa is getting cold .
( Enter Varsha and Amritha . They sit at the table . Mother places the plates before them)
Mother : So long to wash hands ? Masala Dosa will be crisp only if eaten hot , fresh off the stove.
Varsha : Amritha was surprised that we don't use our taps and bathtub , Mom !
Amrita ( embarrassed ) no Auntie , I was ....
Grandma ( folding the newspapers): Not just you , my dear , everyone wonders the same . Some even call us Crazy Family !( laughs) When I was young , we never opened taps ! For everything we used only water stored in pots . Our elders used to say , Wasting Water invites Daridra ( poverty ) !
Mother : So true ! That's exactly whats happening now . Poverty of Water ! Crisis everywhere ! In such situation , is it right to waste a tubful of water for bath ?
(Amritha bites her tongue )
Mother : when water flows out of a tap , people don't realise how much they use . Even after washing off the soap, some keep standing under the shower , dreaming ! Or keep the tap running while brushing teeth , washing hands or shaving ...... all water going down the drain ! Sheer waste !
Grandma : Which , if saved , could have been used to slake ten people’s thirst .
Amritha : will one family saving water help hundreds who suffer scarcity somewhere else ?
Grandma : if each and every family saves a little, imagine how much a town can save!
Varsha : We hear all this in school lectures ......Some more Chutney , Mom !
Mother ( serving) : Merely listening to lectures is not enough , you have to practice it . Just because we have no problem in our house , we cannot waste a natural resource . And giving the excuse that no one else is saving is also irresponsible .
Grandma : Was just reading in papers that in Chennai , the water scarcity is so grave that some hostels have been closed down and students sent back to their homes . And Tankers have become pricey , they have to wait nearly a fortnight after booking to get a tanker of water it seems !
Mother : Our City may also be in the same boat soon !
Varsha : if only our City had Rivers !
Mother : who said we have no Rivers ! Arkavathi , that springs from Nandi Hills and joins Kaveri in Mekedatu is very much our own City’s River . From the same place comes our other River , Dakshina Pinakini ,that feeds many tanks here before flowing on to other states .
Amritha ( in wonder ) : Is that so , Auntie !
Grandma : and don't forget the Vrishabhavathi that is born under the foot of our dear Dodda Basava in Basavangudi !
Varsha : Are you kidding , Grandma ! A river in Basavangudi ! ? Where ?
Grandma : No kidding . There is an inscription on the platform below Basava that says so .
Mother ( bringing more dosa ) One more, girls ?
Amritha : No , thank you Auntie . Tummy full !.... it is unbelievable that our City has three Rivers !
Grandma ( to mother) : Give the girls the sweet I made .
Varsha : Where are our Rivers , Grandma ?
Grandma : ( With a serious face) All dead.
Varsha : Oh !
Amritha : What !
Mother (serving the sweet ): Uncontrolled growth of cities ! Feeder canals and storm water drains clogged with garbage and industrial waste ! Tank beds used up for more concrete jungles ! Rains failing because of deforestation ! Is it any wonder Rivers are starved to death ?
Grandma : There was a time when Nature and its Gifts were treated with respect , honour and devotion ..... now it is only selfishness and greed and no thought about tomorrow .
Mother : After doing all this thoughtlessly, whats the use of crying about water shortage ! ....Now scientists are trying to bring rain by cloud seeding ....... whatever the means , it will be a great relief if we get good rains soon . Otherwise , we are doomed .
( The girls exit to wash hands )
Grandma : Yes , may it rain well ! .... But only concern is , there is no vessel to store the rain !
( The girls return and sit down )
Varsha ( giggling ) : Vessel to hold rain ! What are you saying , grandma !
Mother : She means Lakes , Varsha .
Varsha : we do have many Lakes , don't we ! There’s Ulsoor Lake , Madivala Lake , Sankey Tank , Hebbal Lake , Jakkur Lake ...
Grandma : ....and lots more . Once , our Bengaluru was called Kalyanapuri because of the great number of Kalyanis it had .
Amritha : What is Kalyani ?
Grandma : A tank , lake or pond ..... every temple had a tank , every garden or orchard had a pond , every village had a lake . Now the City has grown large , eating up gardens , orchards and fields , drying up water bodies . Only a few are left , some of them are in horrible condition and dying .
Amritha : Can't they be saved , Grandma ?
Grandma : They must be saved somehow , Amritha . Even if we are not creating new tanks , is it not our duty to at least take care of the tanks constructed by kings for public good , centuries ago !
Amritha : Centuries ago ? Will something constructed hundreds of years ago still exist ? How do we know if the lakes were not natural ?
Grandma : Not only did our ancestors build tanks and lakes , they also left behind Inscriptions which give the history of the tanks .
Amritha : Can old Inscriptions be really read ?
Varsha : Grandma has a degree in Archeology , Amritha, and she has done research on Inscriptions !
Amritha : Wow ! Can you please tell us whats written in tank Inscriptions , Grandma ? How old are they ?
Grandma : The oldest in our City is the Agara Lake Inscription of 9th Century ......
Amritha : What does it say ?
Grandma : “ Sirimayya , son of Irugamya , built a tank in addition to making sluices for two already existing tanks . And just like your parents give you a treat for doing something good , the Town gave him a Bittuvattu for the good work . Bittuvattu is a Reward for constructing tanks . It is also called Kere Kattukoduge .
Amritha : How Interesting !
Grandma : In Kengeri region , a tank called Ramasamudra was constructed in 1340 in honour of a local goddess , for the benefit of all living beings including birds and animals .
Varsha : So sweet of them to think of birds and animals too !
Grandma : Just building tanks is not enough , they have to be maintained well too , isn't it ! There is another Inscription of Krishnadevaraya time that mentions grant of a field for maintenance of a cart to be used in desilting the tank .
Amritha : Why give a field , why not money ?
Mother : Not everything was paid in hard cash , which can be lost or wasted . If you keep tilling a field , you keep earning money !
Grandma : And it wasn’t only kings or Chieftains that built tanks . Anybody who wanted to do good for the public too created tanks . There was a lady named Nagasani who, in 1366 , got a tank made to bring lasting merit to her husband and relatives ! They found this inscription lying in a field in Kyalsanahalli it seems .
Varsha : Is it still lying there ?
Grandma : Don't know Varsha . Many documented inscriptions are not found today . There are groups of concerned people who go hunting for these inscribed stones ..... and sometimes , I join such hunts !
Amritha : Where are they documented , Grandma ?
Grandma : All inscriptions found by Lewis Rice in early 20th Century are collected together in volumes called Epigraphia Carnatica . Now they are digitized and found on Internet too ( She takes out her Tablet ) Here it is ! ...See if you can read a line here ?
( Both girls go and stand beside Grandma and peer into the tablet)
Varsha ( trying to read slowly ) : Swas -tee-sri- laksu-mee-pati-yaagutm -...... abba ! Breaks my teeth ! You try , Amrita !
Amrita ( reading ) Virddha/pra-samsa-moorthi-Sri-mann .....so many words crammed together in one line ! It would be easier had they written word by word clearly !
Grandma : Chiseling letters on stone is a difficult job . It needs patience and dedication . And the text has to include a great deal of information like the period in which it was inscribed , the name and titles of the king then reigning , the name and lineage of the person whose deed is memorialised , the God whose blessing is sought , the merit that will be credited to the person who preserves the work mentioned , the curse that will befall those who destroy the work , the name of the person who commissioned the Inscription .......reading an inscription is like seeing a trailer of a period movie ! ( laughs)
Varsha : “The Speaking Stones” ! But so difficult to read and understand !
Grandma : A translation is also found in the books ! They made things easy for you ! Look here ! ( shows the translation )
( The girls read )
Varsha ( excited ) This is the same story you told us just a while ago .....
Amritha : Oh , WOW ! So many tanks in our City ! If only we could keep these tanks clean and get them filled up , we should have no problem !
Mother :( looking at her mobile phone ) I had a whatsapp message yesterday , showing a clip from a town in China . In spite of seven hours of rain , no flooding is seen . All water runs into little holes drilled on the kerbs of the road and percolates into the earth to recharge the water table it seems ! So simple , so effective !
Varsha : we also have water harvesting in school . They showed us how its done .
Mother : Yes , helping rain water to get back into the Natural Cycle is a great service , not only to Nature , but also to ourselves ! We have to show our gratefulness to Nature for providing us a life giving resource.
Amritha : Yes , I promise I will not waste tap water henceforth . I will make effort to save every drop I can and educate every person I can !
Grandma : Very Good , my child ! Tomorrow is yours . Being mindful and smart is beneficial to the resources and to yourselves. .
( Car horn sounds outside )
Amritha : That's my Daddy, I must be going .....see you , Varsha ! Bye Auntie and Grandma .
Varsha : Bye, Amritha ! I am planning to go with Grandma on her next Inscription hunt , do you want to join ?
Amritha : Sure ! ....Tomorrow I plan to speak in SUPW period all about what we learnt today ! Bye ! ( Exits)
Grandma : Smart Kids !
Mother : yes , modern children learn fast . They will thrive well .
( Fade out and curtain )
----------------------------------------------------------------------------------------------------------
Reference : EC NO: 70, 79, 111, 80, 56
--------------------------------------------------------------------------------------------------------