Tuesday, March 25, 2025

ರಾಮಸಮುದ್ರ / RAMASAMUDRA

ರಾಮಸಮುದ್ರ  

                                                                                                   

'' ಅಣ್ಣಯ್ಯ ! ಬೆಳಿಗ್ಗೆಯಿಂದ ಒಂದೇ ಸಮನೆ ಸವಾರಿ ಮಾಡಿ ಸಾಕಾಗಿದೆ . ಕುದುರೆಗಳು ಸಹ ಸುಸ್ತಾಗಿವೆ . ಈ ಹೊಳೆಯ ತೀರದಲ್ಲಿ  ಸ್ವಲ್ಪ ವಿಶ್ರಾಂತಿ ಪಡೆದು ನಂತರ ಪ್ರಯಾಣ ಮುಂದುವರಿಸೋಣವೇ ? '' ವಿನಯದಿಂದ ತನ್ನ ಅಣ್ಣನನ್ನು ಪ್ರಶ್ನಿಸಿದ ತಮ್ಮ . 

'' ನಾನೂ ಅದನ್ನೇ ಯೋಚಿಸಿದ್ದೆ ತಮ್ಮಯ್ಯ ! ಹಾಲ್ನೊರೆಯಂತೆ ಉಕ್ಕಿ ಹರಿಯುವ ಈ ಹೊಳೆಯ ಸೊಬಗನ್ನು ಕಣ್ತುಂಬ ನೋಡುತ್ತಿದ್ದರೆ ಎಂತಾ ದಣಿವೂ ಮಾಯವಾಗುತ್ತದೆ ! ಇಲ್ಲೇ ಇಳಿದು ಶ್ರಮ ಪರಿಹಾರ ಮಾಡಿಕೊಳ್ಳೋಣ  ನಡಿ ! '' 

ಇಬ್ಬರು ಸೋದರರೂ ತಂತಮ್ಮ ಕುದುರೆಗಳಿಂದ ಕೆಳಕ್ಕಿಳಿದರು . ಕುದುರೆಗಳನ್ನು  ಹೊಳೆಯ ದಡದಲ್ಲಿದ್ದ ಹೆಮ್ಮರದ ಬುಡಕ್ಕೆ ಕಟ್ಟಿದರು . ಮೈಮುರಿದು ಬೀಸುತ್ತಿದ್ದ ತಂಗಾಳಿಗೆ ಮೈಯೊಡ್ಡಿ  ಸ್ವಲ್ಪ ಹೊತ್ತು ನಿಂತರು . ನಂತರ  ದಂಡೆಯಿಂದ ಇಳಿದು ಇನ್ನೇನು ನೀರಿಗೆ ಕೈ ಹಾಕುವುದರಲ್ಲಿದ್ದರು .  

 '' ಅಯ್ಯಾ ! ಬೇಡಿ ! ಬೇಡಿ ! ಆ ನೀರು ಕುಡಿಯಬೇಡಿ ! '' ಎಂದು ಕೂಗಿಕೊಳ್ಳುತ್ತ ತಮ್ಮ ಬಳಿ ಧಾವಿಸಿ ಬಂದ ಹುಡುಗನನ್ನು ಕಂಡು ಚಕಿತರಾದರು .

'' ಏಕೆ ನೀರು ಕುಡಿಯಬಾರದು ? '' ಏದುಸಿರುತ್ತ ಓಡಿಬಂದ ಹುಡುಗನನ್ನು ಅಚ್ಚರಿಯಿಂದ ನೋಡಿ ಪ್ರಶ್ನಿಸಿದ ಕಿರಿಯ ಸೋದರ . 

'' ಈ ಹೊಳೆ ನೀರಲ್ಲಿ  ವಿಷವಿದೆ  ..... '' ಭಯದಿಂದಲೋ ಎಂಬಂತೆ  ಮೊಟ್ಟೆ ಗಾತ್ರ ಕಣ್ಣರಳಿಸಿ ಉತ್ತರಿಸಿದ ಹುಡುಗ .  

'' ಇದೇ ನೀರನ್ನ ನೀನು ಬಿಂದಿಗೆಗಳಲ್ಲಿ ತುಂಬಿಕೊಂಡಿದ್ದನ್ನು ನಾವು ನೋಡಿಲ್ಲ ಎಂದುಕೊಂಡೆಯಾ ?  ತುಂಬಿಸಿದ ಕೊಡಗಳನ್ನು  ಅಲ್ಲೇ ಇಟ್ಟು ಇಲ್ಲಿ ಬಂದು ನಮ್ಮನ್ನು  ತಡೆಯುವುದು ಏಕೆ ? ಹೊಳೆ ನೀರು ನಿನಗೆ ಅಮೃತ , ನಮಗೆ ಮಾತ್ರ ವಿಷವಾ ?'' ಗತ್ತಿನಿಂದ ವಾದಕ್ಕಿಳಿದ ಅಣ್ಣಯ್ಯ  . 
'' ನಮಗೆ ಬೇರೆ ಗತಿ ಇಲ್ಲ ಅಯ್ಯ . ಮೂಲಿಕೆಗಳನ್ನು ಹಾಕಿ ಕುದಿಸಿ ಸೋಸಿದ ನಂತರ ಮಾತ್ರ ಈ ನೀರು ಕುಡಿಯಲು ಯೋಗ್ಯವಾಗುತ್ತದೆ . '' ಎಂದ ಹುಡುಗ . 
 '' ಹೌದೇನು ? ನಿಮ್ಮ ಹಳ್ಳಿಯಲ್ಲಿ ಎಲ್ಲರ ಮನೆಯಲ್ಲೂ ಹೀಗೆಯೇ ಮಾಡುತ್ತಾರೇನು ?  ''
'' ನೀರನ್ನು ಶುದ್ಧಿಕರಿಸಿ ನನ್ನ ಅಮ್ಮನೇ ಎಲ್ಲರಿಗೂ ವಿತರಣೆ ಮಾಡುತ್ತಾಳೆ ಅಯ್ಯ . '' ಹೆಮ್ಮೆಯಿಂದ ನುಡಿದರೂ , ಹುಡುಗನ ಮಾತಿನಲ್ಲಿ ತುಸು ಬೇಸರವೂ ಇಣುಕಿದಂತಿತ್ತು . 
'' ಏನು ? ಇಡೀ ಗ್ರಾಮಕ್ಕೆ ಈ ಎರಡೇ ಬಿಂದಿಗೆ ನೀರನ್ನು ಶುದ್ಧಿಕರಿಸಿ ವಿತರಣೆ ಮಾಡುತ್ತಾರೆಯೇ ನಿನ್ನ ಅಮ್ಮ ? " ಕೊಂಕಿನಿಂದ ಪ್ರಶ್ನಿಸಿ ಗಹಗಹಿಸಿ ನಕ್ಕನು ಅಣ್ಣಯ್ಯ . 
'' ಏ ! ಅದು ಹೇಗೆ ಸಾಕಾಗುತ್ತದೆ ಅಯ್ಯಾ ? ದಿನಕ್ಕೆ ಸುಮಾರು ಐವತ್ತು ಬಿಂದಿಗೆ ನೀರಾದರೂ ಬೇಕಾಗುತ್ತದೆ . ಮನೆಯಿಂದ ಹೊಳೆಗೆ , ಹೊಳೆಯಿಂದ ಮನೆಗೆ ನಡೆದು ನಡೆದು ಕಾಲುಗಳು ಬಿದ್ದು ಹೋಗುತ್ತವೆ . ಆದರೂ ಸಹಿಸಿಕೊಂಡು ಬೆಳಿಗ್ಗೆಯಿಂದ ಸಂಜೆಯವರೆಗೂ ಇದೇ ಕೆಲಸವನ್ನು ಮಾಡುತ್ತೇನೆ . ನೀರಿಲ್ಲದೆ ಬಳಲುತ್ತಿರುವ ಜನಕ್ಕೆ ಇಂತಾ ಸೇವೆ ಮಾಡುವುದು ಪುಣ್ಯದ ಕೆಲಸ ಎಂದು ಅಮ್ಮ ಹೇಳುತ್ತಾಳೆ . '' ಮುಗ್ದವಾಗಿ ಉತ್ತರಿಸಿದ ಹುಡುಗ . 

                                                                                                        
'' ನೀರು ಒಯ್ಯಲು ಬೇರೆ ಯಾರೂ ಬರುವುದಿಲ್ಲವೇ ? ! '' ಎನ್ನುತ್ತ ದಂಡೆಯುದ್ದಕ್ಕೂ ನೋಟ ಹರಿಸಿದ ಅಣ್ಣಯ್ಯ . 
'' ಹಳ್ಳಿಯಲ್ಲಿ ನನ್ನಷ್ಟು ಬಲಶಾಲಿ ಬೇರೆ ಯಾರೂ ಇಲ್ಲ ಅಯ್ಯ . ಅದಕ್ಕೇ ನೀರಿಗಾಗಿ ನಾನು ಮಾತ್ರ ಬರುತೇನೆ . '' 
 ಸಣಕಲ ಕಡ್ಡಿಯಾಗಿದ್ದ ಹುಡುಗ ತೋಳನ್ನು ಉಬ್ಬಿಸಿ ತೋರುತ್ತ ಆಡಿದ ಮಾತಿಗೆ ಸೋದರರಿಬ್ಬರಿಗೂ ನಗು ಬಂದಿತು . 
'' ತುಂಬ ದೂರದಿಂದ ನೀವು ಬಂದಿರಬೇಕು. ನಮ್ಮ ಹಳ್ಳಿಗೆ ಬನ್ನಿ ! ನಮ್ಮ ಮನೆಯಲ್ಲಿ ಶುದ್ಧಿಕರಿಸಿದ ನೀರು ಕುಡಿದು ದಣಿವಾರಿಸಿಕೊಳ್ಳುವಿರಂತೆ . '' ಮಾತನಾಡುತ್ತಿದ್ದ ಹಾಗೆಯೇ ಹುಡುಗನ ಕಣ್ಣುಗಳು ಆಗಿಂದಾಗ್ಯೆ ಕುದುರೆಗಳಕಡೆ ಹೊರಳುತ್ತಿದ್ದವು . 
ಕಣ್ಣ ಮುಂದೆ ಉಕ್ಕಿ ಹರಿಯುತ್ತಿರುವ ಹೊಳೆ ! ಆದರೂ ಗ್ರಾಮದಲ್ಲಿ ನೀರಿನ ಅಭಾವ ಇರುವಂತೆ ಮಾತನಾಡುತ್ತಿರುವನಲ್ಲಾ ಈ ಹುಡುಗ ! ಇಡೀ ಗ್ರಾಮಕ್ಕೆ ಇವನ ಅಮ್ಮ ನೀರು ಶುದ್ಧಿಕರಿಸಿ ಕೊಡುತ್ತಾಳೆ ಎನ್ನುತ್ತಾನೆ ! ಇದು ಅಷ್ಟು ಸುಲಭ ಸಾಧ್ಯವಾದ ಕೆಲಸವೇ ?  
' ಹುಡುಗಾಟ ಆಡುತ್ತಿರುವನೋ ಇಲ್ಲ ಇವನಿಗೇನಾದರೂ ತಲೆ ಕೆಟ್ಟಿರಬಹುದೋ ? ಇವನು ಪೋಕಿರಿಯೋ ಇಲ್ಲ ಹುಚ್ಚನೋ ? ' ಕಣ್ಸನ್ನೆಯಲ್ಲೇ ಮಾತನಾಡಿಕೊಂಡರು ಸೋದರರು . 
'' ದಯವಿಟ್ಟು ನಮ್ಮ ಹಳ್ಳಿಗೆ ಬನ್ನಿ ಅಯ್ಯ . ನಮ್ಮ ಮನೆಯಲ್ಲಿ ದಣಿವಾರಿಸಿಕೊಂಡು ನಿಮ್ಮ ಪಯಣ ಮುಂದುವರಿಸುವಿರಂತೆ . ಕುದುರೆಗಳೂ ಸುಸ್ತಾಗಿರುವಂತೆ ಕಾಣುತ್ತದೆ . '' ಎಂದು ಮತ್ತೆ ಬೇಡಿಕೊಂಡ ಹುಡುಗ . 
ಹುಡುಗನ ಆತ್ಮೀಯವಾದ ಕರೆಯನ್ನು ಅಲ್ಲಗಳೆಯಲಾರದೆ , '' ನಿಮ್ಮ ಹಳ್ಳಿ ಎಲ್ಲಿದೆ ? '' ಎಂದು ಪ್ರಶ್ನಿಸಿದ ತಮ್ಮಯ್ಯ . 
'' ಆಗೋ ! ಅಲ್ಲಿ ಒಣಕಲು ತೆಂಗಿನ ತೋಪು ಕಾಣಿಸುತ್ತದೆಯೇ ? ಅದರಾಚೆ ಇದೆ ನಮ್ಮ ಹಳ್ಳಿ . '' ಹುಡುಗ ಬೆರಳು ಮಾಡಿ ತೋರಿಸಿದ ಕಡೆ ಕಣ್ಣಾಡಿಸಿದ ತಮ್ಮಯ್ಯ . 
'' ಮರಗಳೆಲ್ಲ ಯಾಕೆ ಒಣಗಿವೆ ? ''
'' ನೀವು ಮನೆಗೆ ನಡೆಯಿರಿ , ನಿಮಗೆ ಎಲ್ಲವೂ ಅರ್ಥವಾಗುತ್ತದೆ . '' 
'' ಹೋಗೋಣವೇ ಅಣ್ಣಯ್ಯ ? '' ಅಣ್ಣಯ್ಯನ ಒಪ್ಪಿಗೆಗಾಗಿ ಅವನ ಮೊಗವನ್ನೇ ನೋಡುತ್ತ ನಿಂತ  ತಮ್ಮಯ್ಯ . 
ಹಳ್ಳಿಗರಿಗೆ ಅದೆಂತಾ ಸಮಸ್ಯೆ ಎಂದು ನೇರವಾಗಿ ಹೋಗಿ ತಿಳಿದುಕೊಳ್ಳಲು ಇದು ಒಳ್ಳೇ ಅವಕಾಶ ಎಂದುಕೊಂಡ ಅಣ್ಣಯ್ಯ '' ಸರಿ ಹಾಗಾದರೆ ! ಹೋಗೋಣ ನಡಿ ! ''  ಎಂದನು . 
'' ನೀನೂ ಕುದುರೆ ಹತ್ತು   ... '' ಎನ್ನುತ್ತ ಮರದ ಬುಡಕ್ಕೆ ಕಟ್ಟಿದ್ದ ತನ್ನ ಕುದುರೆಯನ್ನು ಬಿಚ್ಚಿದ ತಮ್ಮಯ್ಯ . 
'' ಅಯ್ಯೋ ಬೇಡಿ ಅಯ್ಯ . ಪಾಪ ನಿಮ್ಮ ಕುದುರೆ ! ನೀವು , ನಾನು , ಎರಡು ತುಂಬಿದ ಬಿಂದಿಗೆಗಳು ! ಛೆ ! ಪಾಪದ  ಪ್ರಾಣಿಯಮೇಲೆ ಅಷ್ಟೆಲ್ಲ ಬಾರ ಹಾಕೋದು ಬೇಡ .  ನಾನು ಮುಂದೆ ದಾರಿ ತೋರಿಸಿಕೊಂಡು ನಡೆಯುತ್ತೇನೆ . ನೀವು ಕುದುರೆ ಸವಾರಿಯಲ್ಲಿ ಹಿಂಬಾಲಿಸಿ .'' ಉತ್ಸಾಹದಿಂದ ನುಡಿದ ಹುಡುಗ . 
ತುಂಬಿಸಿಟ್ಟಿದ್ದ  ಬಿಂದಿಗೆ ಹೊತ್ತು ಹಳ್ಳಿಯನ್ನು ಕುರಿತು ಹೆಜ್ಜೆ ಹಾಕತೊಡಗಿದ ಹುಡುಗ . ಈ ಹುಡುಗ ಹೇಳುವ ಕಾಗಕ್ಕ ಗುಬ್ಬಕ್ಕ ಕಥೆಯ ಸತ್ಯಾಸತ್ಯಗಳನ್ನು ಅರಿತುಕೊಳ್ಳಲೇ ಬೇಕು ಎಂಬ ನಿರ್ದಾರದೊಂದಿಗೆ ಕುದುರೆಗಳನ್ನು ನಡೆಸಿಕೊಂಡು ಅವನನ್ನು ಹಿಂಬಾಲಿಸಿದರು ಸೋದರರು . 
ಬೆಳೆ ಇಲ್ಲದ ಗದ್ದೆಗಳು , ಬೂದು ಬಣ್ಣದ ಗರಿಗಳನ್ನು ಹೊತ್ತು ಸೊರಗಿದ್ದ ತೆಂಗಿನ ಮರಗಳು , ಕಳೆಗುಂದಿದ ರೋಗ ಪೀಡಿತ ಹಣ್ಣಿನ ತೋಟಗಳು ! ಎಲ್ಲವನ್ನು ವೀಕ್ಷಿಸುತ್ತ ನಡೆಯುತ್ತಿದ್ದ ಸೋದರರಿಗೆ ಆಘಾತವಾಯಿತು . ' ಹಸಿರಾದ ಗುಡ್ಡ ಬೆಟ್ಟಗಳಿಂದಲೂ ತುಂಬಿ ತುಳುಕುವ ಹಳ್ಳ ಕೊಳ್ಳಗಳಿಂದಲೂ ಕೂಡಿದ ನಿಸರ್ಗ ಧಾಮ ! ಪ್ರಕೃತಿ ಸೌಂದರ್ಯದ ಗಣಿ ! ' ಎಂದು ಎಲ್ಲರಿಂದ ಕೊಂಡಾಡಲ್ಪಡುವ ಈ ಕುಕ್ಕಲ ನಾಡಿನಲ್ಲಿ ಇಂತಹ ಒಂದು ಪ್ರದೇಶವೇ ?  
ಪಶು , ಪಕ್ಷಿ , ಪ್ರಾಣಿ ಮುಂತಾದ ಯಾವೊಂದು ಜೀವರಾಶಿಯೂ ಕಾಣಿಸುತ್ತಿಲ್ಲ ! ಬೀದಿಯಲ್ಲಿ ಒಂದು ನರಪಿಳ್ಳೆಯಾಗಲಿ ,  ಆಗಂತುರನ್ನು ಕಂಡರೆ ಬೊಗಳುವ ಒಂದೇ ಒಂದು ಶ್ವಾನವಾಗಲಿ ಈವರೆಗೆ ಎದುರಾಗಿಲ್ಲ ! ಪಾಳು ಬಿದ್ದ ಗುಡಿಸಲುಗಳು ! ನಿರ್ಜನವಾದ ಬೀದಿಗಳು ! ಬಿಕೋ ಎನ್ನುತ್ತಿದ್ದ ಹಳ್ಳಿಯನ್ನು ಕಂಡು ದಿಗ್ಬ್ರಾಂತರಾದರು ಸೋದರರು !
 ಕಲಕಲವೆಂದು ಹರಿಯುವ ಹೊಳೆ ತೀರದಲ್ಲಿದ್ದೂ ಈ ಗ್ರಾಮ ಜಲಕ್ಷಾಮದಿಂದ ಬಳಲುತ್ತಿರುವಂತಿದೆಯಲ್ಲಾ ? ಇದೇನು ವಿಚಿತ್ರ ! 
'' ಇದೇ ನಮ್ಮ ಮನೆ ! ಬನ್ನಿ ಅಯ್ಯ . ಕುದುರೆಗಳನ್ನು ದನದ ಕೊಟ್ಟಿಗೆಯಲ್ಲಿ ಕಟ್ಟ ಬಹುದು . '' 
ಮನೆಗೆ ತಾಗಿಕೊಂಡಂತಿದ್ದ ಕಾಲಿಯಾಗಿದ್ದ ದನಗಳ ಕೊಟ್ಟಿಗೆಯಲ್ಲಿ ಕುದುರೆಗಳನ್ನು ಕಟ್ಟಲು ಸಹಕರಿಸಿದ ಹುಡುಗ ,  ಸೋದರರನ್ನು ಮನೆಯೊಳಗೆ ಕರೆದೊಯ್ದನು . 
'' ಅಮ್ಮಾ ! ಅತಿಥಿಗಳು ಬಂದಿರುವರು ನೋಡು .''  ತನ್ನ ತಾಯಿಯನ್ನು ಕೂಗಿ ಕರೆದನು .  
'' ನಮ್ಮ ಊರಿಗೂ ಅತಿಥಿಗಳೆ ? ಯಾರಪ್ಪ ಅವರು ? '' ಆಶ್ಚರ್ಯ ವ್ಯಕ್ತಪಡಿಸಿ ಹೊರ ಬಂದಳು ಆ ಮಹಿಳೆ . 
'' ದೂರದೂರಿಂದ ಬಂದಿರುವರು ಅನ್ನಿಸುತ್ತದೆ . ಹೊಳೆ ನೀರಲ್ಲಿ ಕೈ ಹಾಕಲು ಹೊರಟಿದ್ದರು . ಅವರನ್ನು ತಡೆದು ಮನೆಗೆ ಕರೆ ತಂದಿರುವೆ . ಮೊದಲು  ಅವರಿಗೆ ಕುಡಿಯಲು ನೀರು ಕೊಡು . ''  ನೀರು ತುಂಬಿಸಿಕೊಂಡು ತಂದಿದ್ದ ಬಿಂದಿಗೆಗಳನ್ನು ಒಳಗೆ ಸಾಗಿಸುತ್ತ ನುಡಿದ ಹುಡುಗ . 
'' ಸಧ್ಯ ! ಒಳ್ಳೆ ಕೆಲಸ ಮಾಡಿದೆ ! ನಮ್ಮೂರ ಲಕ್ಷಣ ಇವರಿಗೆ ಹೇಗೆ ತಿಳಿದಿರಬೇಕು ! '' ಎಂದು ಅಂಗಲಾಚುತ್ತ , ಅತಿಥಿಗಳು  ಕುಳಿತುಕೊಳ್ಳಲು ಚಾಪೆ ಹಾಸಿ ಉಪಚರಿಸಿದಳು ಮಹಿಳೆ . ಅವಳು ತಂದು ಕೊಟ್ಟ ಮೂಲಿಕೆಗಳ ಸುವಾಸನೆಯಿಂದ ಕೂಡಿದ ತಣ್ಣನೆಯ ನೀರನ್ನು ಕುಡಿದು ಬಾಯಾರಿದರು ಸೋದರರು .   
'' ಅಮ್ಮ , ಕುದುರೆಗಳನ್ನ ಕೊಟ್ಟಿಗೆಯಲ್ಲಿ ಕಟ್ಟಿದ್ದೀವಿ . ಈ ತಪ್ಪಲೆ ನೀರನ್ನ ತೊಟ್ಟಿಗೆ ಸುರಿದು ಬರುವೆ . ಪಾಪ ! ಕುದುರೆಗಳೂ ಬಾಯಾರಲಿ . '' ಕಾಯಿಸಿ ಸೋಸಿ ತಣ್ಣಗಾಗಿದ್ದ ಒಂದು ತಪ್ಪಲೆ ನೀರನ್ನು ಹೊತ್ತು ಕೊಟ್ಟಿಗೆಯ ಕಡೆ ಹೊರಟ ಹುಡುಗ . 
'' ಬೇಡ ಹುಡುಗ ! ನೀವು ಕಷ್ಟಪಟ್ಟು ಶುದ್ಧಿಕರಿಸಿದ ನೀರನ್ನು ಕುದುರೆಗಳಿಗೆ ಕೊಟ್ಟು ಏಕೆ ವ್ಯಯ ಮಾಡುವೆ ? ಹೇಗೂ ಮೇವಿಗಾಗಿ  ಹುರುಳಿ ಚೀಲವನ್ನು ಬಾಯಿಗೆ ಕಟ್ಟಿದ್ದೇವೆ . ಅಗತ್ಯವಾದರೆ  ಹೋಗುವಾಗ ಹೊಳೆಯಲ್ಲಿ ನೀರು ತೋರಿಸಿಕೊಂಡು ಹೋಗುತ್ತೇವೆ ಬಿಡು . '' ನಯವಾಗಿ ಅವನನ್ನು ತಡೆದ ತಮ್ಮಯ್ಯ . 
'' ಅಯ್ಯೋ ! ಅವಕ್ಕೂ ಬೇಡ ಅಯ್ಯ ಆ ನೀರು ! ಆ ನೀರು ವಿಷವಾಗಿದೆ ಎಂದು ಆಗಲೇ ಹೇಳಿದೆನಲ್ಲ ! ''  
'' ಮತ್ತೆ ? ಮೇವಿನಿಂದ ಹಿಂದಿರುಗುವ ನಿಮ್ಮ ದನಗಳಿಗೂ ಶುದ್ಧಿಕರಿಸಿದ ನೀರನ್ನೇ ಕುಡಿಸುವಿರೇ ? '' ಎಂದು ಅಚ್ಚರಿಯಿಂದ ಹುಬ್ಬೇರಿಸಿದನು ತಮ್ಮಯ್ಯ . 
 '' ಇನ್ನೆಲ್ಲಿಯ ನಮ್ಮ ದನಗಳು ? ನಮ್ಮ ದನಗಳು ಮತ್ತು ನನ್ನ ಕಾಳ ...  ಕಾಳ ...  '' ಎನ್ನುತ್ತ ಇದ್ದಕ್ಕಿದಂತೆ ಬಿಕ್ಕಿ ಬಿಕ್ಕಿ ಅಳ ತೊಡಗಿದ ಹುಡುಗ . ಹುಡುಗನನ್ನು ತನ್ನ ತೋಳಲ್ಲಿ ಬಳಸಿ ತಬ್ಬಿ , ಅವನ ಬೆನ್ನು ನೀವಿ ಸಂತೈಸಿದಳು ಅವನ ತಾಯಿ . 
'' ಎಲ್ಲಾ ಸರಿಹೋಗುತ್ತದೆ ಮಗ ! ಅಳಬಾರದು ! ನೀನು ಶುದ್ಧ ವೀರನಲ್ಲವೇ ? ಮೊದಲು ಇವರ ಕುದುರೆಗಳಿಗೆ ನೀರು ತೋರಿಸು ಹೋಗು . ಬಹಳ ದಿನಗಳನಂತರ ಇಂದು ಪ್ರಾಣಿಗಳನ್ನ ಕಾಣುವಂತಾಯಿತು ! ಹೋಗು ಕಂದ ! ಕುದುರೆಗಳ ಆರೈಕೆ ಮಾಡು . '' 
ಅಮ್ಮನ ಮಾತು ಕೇಳಿ ಸಮಾಧಾನ ಮಾಡಿಕೊಂಡು , ತೊಟ್ಟಿದ್ದ ಮಾಸಿದ ಅಂಗಿಯ ತುದಿಯಿಂದ ಕಣ್ಣು ಮೂಗು ಒರೆಸಿಕೊಂಡು ನೀರಿನ ತಪ್ಪಲೆಯೊಂದಿಗೆ ಕೊಟ್ಟಿಗೆಯನ್ನು ಕುರಿತು ನಡೆದ ಹುಡುಗ . 
ಕ್ಷಣದಲ್ಲಿ ಭಾವಾವೇಶಗೊಂಡ ಹುಡುಗನ ವಿಚಿತ್ರ ವರ್ತನೆ ಕಂಡು ತಬ್ಬಿಬ್ಬಾದರು ಸೋದರರು . 

                                                                                                        
'' ಅಯ್ಯ ! ರಾಮ ಮುದ್ದಾಗಿ ಸಾಕಿದ್ದ ನಾಯಿ ಮರಿ 'ಕಾಳ '. ಸದಾ ಅವನ ಹಿಂದೆ ಹಿಂದೆಯೇ ತಿರುಗುತ್ತಿತ್ತು . ಹೊಳೆ ನೀರು  ಕುಡಿದ ಕಾಳನ ಪ್ರಾಣವನ್ನು ಆ ಹೊಳೆಯೇ ಕುಡಿದುಬಿಟ್ಟಿತು . ಆ ಆಘಾತದಿಂದ ಇವನು ಹೊರಬರುವ ಮುನ್ನವೇ ಏಟಿನ ಮೇಲೆ ಏಟು ಬಿದ್ದಂತೆ ನಮ್ಮ ಮತ್ತು ಹಳ್ಳಿಗರ ಇತರ ದನಗಳಿಗೂ , ಉಳಿದ ಪ್ರಾಣಿಗಳಿಗೂ ಅದೇ ಗತಿಯಾಗಲು ಶುರುವಾಯಿತು . ರಾಮನಿಗೆ ಮೂಖ ಪ್ರಾಣಿಗಳ ಮೇಲೆ ಬಹಳ ಪ್ರೀತಿ . ನಮ್ಮ ದನಗಳ ಆರೈಕೆ ಮಾಡುವುದಲ್ಲದೆ ,  ಹಳ್ಳಿಯಲ್ಲಿಯ ಎಲ್ಲ ಪ್ರಾಣಿಗಳಿಗೂ ಸಹ ಕಾಳಜಿ ತೋರುತ್ತಿದ್ದ  . ಪ್ರಾಣಿಗಳ ಸಲುವಾಗಿ ಯಾರಿಗೆ ಏನು ಸಹಾಯ ಬೇಕಿದ್ದರೂ ಇವನೇ ಮುಂದಾಳಾಗಿ ಹೋಗಿ ನಿಲ್ಲುತ್ತಿದ್ದ . ನಡೆದುಹೋದ ದುರ್ಘಟನೆಗಳ ನಂತರ ರಾಮ 
ಮಂಕು ಬಡಿದವನಂತೆ ಮಾತು ಬಿಟ್ಟು ಮೂಲೆ ಸೇರಿಕೊಂಡುಬಿಟ್ಟಿದ್ದ . ನಿಮ್ಮ ಕುದುರೆಗಳಿಂದಾಗಿ ಅವನ ಮೊಗದಲ್ಲಿ ಇಂದು ಲವಲವಿಕೆ ಕಂಡುಬಂದಿದೆ .  '' ಎಂದ ರಾಮನ ತಾಯಿ ನಿಟ್ಟುಸಿರು ಬಿಟ್ಟಳು . 
'' ಹಾಲ್ನೊರೆಯಂತೆ ಉಕ್ಕಿ ಹರಿವ ಹೊಳೆ ಅದೆಷ್ಟು ಸುಂದರವಾಗಿ ಕಾಣಿಸುತ್ತದೆ ! ಅಂತಹ ಸುಂದರ ಹೊಳೆಯ ನೀರು ವಿಷವಾಗಿದೆ ಎಂದರೆ ನಂಬಲು ಸಾಧ್ಯವಾಗುತ್ತಿಲ್ಲವಲ್ಲ ತಾಯಿ .'' ಎಂದನು ಅಣ್ಣಯ್ಯ . 
'' ಸುಂದರವಾಗಿ ಕಾಣುವುದೆಲ್ಲ ಒಳ್ಳೆಯದೇ ಆಗಿರುತ್ತದೆ ಎಂದು ನಂಬಬಾರದು ಅಯ್ಯ  . ಸ್ಪಟಿಕದಂತೆ ತಿಳಿಯಾಗಿ ಹರಿಯುತ್ತಿದ್ದ ಈ ಹೊಳೆಯ ನೀರು ನಮ್ಮ ಗ್ರಾಮದ ಜೀವಾಳವಾಗಿದ್ದ ಕಾಲ ಒಂದು ಇತ್ತು . ಆದರೆ .. '' ಮಾತು ಮುಂದುವರಿಸಲಾರದೆ ಅವಳ ಕಂಠ ಬಿಗಿದುಕೊಂಡಿತು . 
''ಆದರೆ ,  ಏನಾಯಿತು ತಾಯಿ ? '' ಕುತೂಹಲದಿಂದ ಪ್ರಶ್ನಿಸಿದ ತಮ್ಮಯ್ಯ . 
'' ಇದ್ದಕ್ಕಿದ್ದ ಹಾಗೆಯೇ ತಿಳಿ ನೀರು ನೊರೆಯಿಂದ ಕೂಡಿದ , ಒಮ್ಮೊಮ್ಮೆ ಹೊಗೆಯಾಡುವ ಬಿಳಿ ನೀರಾಗಿ ಪರಿವರ್ತಿಸ ತೊಡಗಿತು . ಅಕ್ಕಪಕ್ಕದ ಮರಗಳಲ್ಲಿ ಗೂಡು ಕಟ್ಟಿಕೊಂಡಿದ್ದ ಪಕ್ಷಿಗಳು , ನೀರಿನಲ್ಲಿ ಚುರುಕಾಗಿ ಓಡಾಡಿಕೊಂಡಿದ್ದ ಮೀನುಗಳು, ನಮ್ಮ ಜಾನುವಾರುಗಳು , ತೋಟ ತುಡಿಕೆ , ಗದ್ದೆ , ಎಲ್ಲವೂ  ಸರ್ವನಾಶವಾಗ ತೊಡಗಿತು . '' 
'' ಅದಕ್ಕೆಲ್ಲ ಈ ಹೊಳೆ ನೀರೇ ಕಾರಣ ಎನ್ನುವಿರಾ ತಾಯಿ ? '' ನಂಬಲಾರದೆ ಪ್ರಶ್ನಿಸಿದ ಅಣ್ಣಯ್ಯ . 
'' ಹೌದು ಅಯ್ಯ ! ಕ್ರಮೇಣ ಹಳ್ಳಿಗರೂ ರೋಗಪೀಡಿತರಾಗ ತೊಡಗಿದಾಗ ಗ್ರಾಮದ ಮುಖ್ಯಸ್ಥರು ಎಚ್ಛೆತ್ತುಕೊಂಡರು . ಎಲ್ಲ ಅನಾಹುತಗಳಿಗೂ ಹೊಳೆಯ ನೀರೇ ಕಾರಣ ಎಂಬುದು ಸಾಬೀತಾದಾಗ ಕಾಲ ಮಿಂಚಿತ್ತು . '' ಉಮ್ಮಳಿಸಿದ ದುಃಖ್ಖವನ್ನು ನುಂಗಿಕೊಂಡು ಮುಂದುವರಿಸಿದಳು ರಾಮನ ತಾಯಿ . 
'' ಕೃಷಿ ಮಾಡಲಾರದೆ , ವರಮಾನವಿಲ್ಲದೆ , ಹೊಟ್ಟೆಗಿಲ್ಲದೆ , ಕುಡಿಯಲು ನೀರಿಲ್ಲದೆ ಬದುಕುವುದಾದರೂ ಹೇಗೆ ? ಜೀವ ಉಳಿಸಿಕೊಂಡರೆ ಸಾಕು ! ಎಲ್ಲಿಗಾದರೂ ಹೋಗಿ ದುಡಿದು ಬದುಕು ಕಟ್ಟಿಕೊಳ್ಳಬಹುದು ಎಂದು ತೀರ್ಮಾನಿಸಿ ಪರಿವಾರ ಸಮೇತ ಹಳ್ಳಿಯವರೆಲ್ಲ ಗುಳೆ ಹೋದರು . ''
'' ರಾಮ ಮತ್ತು ನೀವು ಮಾತ್ರ ಯಾಕೆ ಇಲ್ಲೇ ಉಳಿದುಕೊಂಡಿರಿ ? '' ಆಶ್ಚರ್ಯದಿಂದ ಪ್ರಶ್ನಿಸಿದ ತಮ್ಮಯ್ಯ . 

                                                                                                       
'' ಎಲ್ಲಾದರೂ ಒಂದು ಕಡೆ ನೆಲೆ ಹುಡುಕಿಕೊಂಡಮೇಲೆ ಅವರನ್ನು ತಮ್ಮಲ್ಲಿಗೆ ಕರೆಸಿಕೊಳ್ಳುವುದಾಗಿ ಬರವಸೆ ನೀಡಿ ಮುದಿ ಜೀವಿಗಳು ಮತ್ತು ಬಲಹೀನರನ್ನು ಇಲ್ಲೇ ಬಿಟ್ಟು ಅವರೆಲ್ಲ ಹೊರಟು ಹೋದರು . ಎರಡು ಹೊತ್ತು ಕೂಳು ಮತ್ತು ಕುಡಿಯಲು ಶುದ್ಧ ನೀರು ಕೊಟ್ಟು ಅವರುಗಳ ಆರೈಕೆ ಮಾಡುತ್ತ ರಾಮ ಮತ್ತು ನಾನು ಇಲ್ಲೇ ಉಳಿದುಕೊಂಡೆವು . '' 
ತಾಯಿ ಮತ್ತು ಮಗನ ಸೇವಾ ಮನೋಭಾವ ಸೋದರರ ಮನ ಮುಟ್ಟಿತು .  
'' ಅಯ್ಯ ! ಕುದುರೆಗಳು ಹುರುಳಿ ತಿಂದು ಮುಗಿಸಿ , ನೀರು ಕುಡಿದು ಆರಾಮವಾಗಿವೆ .'' ಎನ್ನುತ್ತ ಕೊಟ್ಟಿಗೆಯಿಂದ ಹಿಂದಿರುಗಿ ಬಂದ ರಾಮನ ಮೊಗ ಸಂತೋಷದಿಂದ ಅರಳಿತ್ತು . 

                                                                                                         
 '' ನಿಮಗೂ ಹಸಿವಾಗಿರಬಹುದು . ಕೂಳು ತಯಾರಾಗಿದೆ , ನೀವೂ ಸ್ವಲ್ಪ ತೆಗೆದುಕೊಳ್ಳಿರಿ ಅಯ್ಯ . '' ರಾಮ ಆದರದಿಂದ ಉಪಚರಿಸಿದ . 
'' ಅಯ್ಯೋ ! ಅದೆಲ್ಲ ಬೇಡ ರಾಮ ! '' ಎಂದ ಅಣ್ಣಯ್ಯ . 
'' ಹೆದರ ಬೇಡಿ ಅಯ್ಯ ! ಹೊಳೆ ನೀರು ವಿಷವಾಗುವ ಮುನ್ನವೇ ಬೆಳೆಸಿ ಕುಯ್ಯಲು ಮಾಡಿ ಕಣಜದಲ್ಲಿ ಸಂಗ್ರಹಿಸಿಟ್ಟಿದ್ದ ಧಾನ್ಯವನ್ನು ಮೂಲಿಕೆ ನೀರಿನಲ್ಲಿ  ಬೇಯಿಸಿ ತಯಾರಿಸಿದ ಕೂಳು . ನೀವೂ ಸ್ವಲ್ಪ ರುಚಿ ನೋಡಿ ! '' ಎನ್ನುತ್ತ ಎದ್ದಳು ರಾಮನ ತಾಯಿ . 
'' ಹಾಗಲ್ಲಾ ಅಮ್ಮ ! ನೀವೇ ಕಷ್ಟದಲ್ಲಿರುವಾಗ ... '' ತಮ್ಮಯ್ಯನ ಮಾತಿನ ಮಧ್ಯೆ ಬಾಯಿ ಹಾಕಿದ ರಾಮ . 
'' ಕಷ್ಟವೋ ನಷ್ಟವೋ ! ಇರುವುದನ್ನು ಹಂಚಿ ತಿನ್ನಬೇಕು ಎಂದು ಅಮ್ಮ ಹೇಳುತ್ತಾಳೆ ! ಅಲ್ಲವೇನಮ್ಮಾ ? '' ಎನ್ನುತ್ತ ಅಮ್ಮನ ಮೊಗವನ್ನು ನೋಡಿದ ರಾಮ . 
'' ಮಾತಾಡುವ ಬರದಲ್ಲಿ  ನಾನು ಇಲ್ಲೇ ಕೂತುಬಿಟ್ಟೆ ನೋಡು . '' ಎನ್ನುತ್ತ ಒಲೆಯಮೇಲೆ ಬಿಸಿ ಬಿಸಿಯಾಗಿದ್ದ ಕೂಳನ್ನು ಎರಡು ಕರಟಗಳಿಗೆ ಹಾಕಿ ಸೋದರರಿಗೆ ನೀಡಿದಳು ರಾಮನ ತಾಯಿ . 
ಆತ್ಮೀಯವಾದ ತಾಯಿ ಮಗನ ಉಪಚಾರವನ್ನು ಧನ್ಯತೆಯಿಂದ ಸ್ವೀಕರಿಸಿದರು ಸೋದರರು . 
'' ನಿಮ್ಮ ಕಷ್ಟ ಕಾಲ ಶೀಘ್ರದಲ್ಲೇ ಬಗೆಹರಿಯಲಿ ಎಂದು ಪ್ರಾರ್ಥಿಸುವೆವು ತಾಯಿ ! '' ಎಂದನು ಅಣ್ಣಯ್ಯ . 
'' ಆ ದಾಮೋಧರ ಪೆರುಮಾಳ್ ಕಣ್ ತೆರೆಯಬೇಕು ಅಯ್ಯ ! '' ಎನ್ನುತ್ತ ಕೈ ಮುಗಿದಳು ರಾಮನ ತಾಯಿ . 
'' ಚಿಂತಿಸ ಬೇಡವೋ ರಾಮ ! ನಿನ್ನ ಸೇವೆ ಹೀಗೆಯೇ ಮುಂದುವರೆಯಲಿ ! ಒಳ್ಳೆಯವರಿಗೆ ಎಲ್ಲಾ  ಒಳ್ಳೆಯದೇ ಆಗುತ್ತದೆ .''
ಎನ್ನುತ್ತ ರಾಮನ ಬೆನ್ನು ತಟ್ಟಿ ಕುದುರೆ ಏರಿದರು ಸೋದರರು . 
ಪ್ರೀತಿಯಿಂದ ಕುದುರೆಗಳ ಬೆನ್ನು ಸವರುತ್ತ ಹಳ್ಳಿಯ ಗಡಿ ದಾಟುವವರೆಗೆ ಅವರ ಹಿಂದೆ ಹಿಂದೆಯೇ ಹೆಜ್ಜೆ ಹಾಕಿದ ರಾಮ .
'' ಮತ್ತೊಮ್ಮೆ ಬನ್ನಿರಿ ಅಯ್ಯ ! '' ಮನಸ್ಸಿಲ್ಲದ ಮನಸ್ಸೊಂದಿಗೆ ಅವರುಗಳನ್ನು ಬೀಳ್ಕೊಟ್ಟ ರಾಮನ ಮೊಗ ಬಾಡಿದಂತಿತ್ತು . 
'' ಹೂಂ ! ಖಂಡಿತ  ! '' ಎನ್ನುತ್ತ ಕೈ ಬೀಸಿ ಅವನಿಗೆ ವಿದಾಯ ಹೇಳಿದರು ಸೋದರರು . 
ನಾಗಾಲೋಟದಲ್ಲಿ ಓಡ ತೊಡಗಿದ ಕುದುರೆಗಳು ದಿಗಂತದಲ್ಲಿ ಕಣ್ಮರೆಯಾಗುವ ವರೆಗೂ ಅಲ್ಲೇ ನಿಂತು ನೋಡುತ್ತಿದ್ದ ರಾಮ  . 
ದಿನಗಳು ಒಂದೇ ರೀತಿ ಉರುಳುತ್ತಿದ್ದವು . ನದಿ ತೀರದಲ್ಲಿ ಅಂದು ಕಂಡ ಆ ಇಬ್ಬರು ಸೋದರರು ಮತ್ತೇ ಕಾಣಿಸಿಕೊಳ್ಳುವರೇನೋ ಎಂದು ಕಾತರದಿಂದ ಕಾಯುತ್ತಿದ್ದ ರಾಮ . ಮತ್ತೊಮ್ಮೆ ಬನ್ನಿ ಎಂದಾಗ ಖಂಡಿತ ಎಂದು ಭರವಸೆ ನೀಡಿದ್ದರು . ಇವತ್ತು ಬರುವರೋ ? ನಾಳೆ ಬರುವರೋ ಎಂದು ಪ್ರತಿ ದಿನ ಅವರಿಗಾಗಿ ಹೊಳೆಯ ಬಳಿಯೇ ಕಾದು , ನಂತರ ಹತಾಶೆಯಿಂದ ಬಿಂದಿಗೆಗಳನ್ನು ತುಂಬಿಸಿಕೊಂಡು ಮನೆಗೆ ಮರಳುತ್ತಿದ್ದ ರಾಮ . 
 ' ಊರು ಬಿಟ್ಟು ಗುಳೆ ಹೋದವರಿಂದ ಯಾವ ಸುದ್ದಿಯೂ ಇಲ್ಲ . ಸಂಗ್ರಹಿಸಿದ್ದ ಧಾನ್ಯಗಳು ಮತ್ತು ಮೂಲಿಕೆಗಳು ತೀರುತ್ತ ಬಂದಿದೆ . ಹೇಗಾದರೂ ಮಾಡಿ ಇನ್ನೂ ಎರಡು ವಾರಗಳನ್ನು ದೂಡಿಬಿಡಬಹುದು . ಆಮೇಲೆ ? '
'' ಅಮ್ಮಾ .... ಅಮ್ಮಾ .. ''  
ಚಿಂತಿಸುತ್ತಲೇ ಕೆಲಸದಲ್ಲಿ ಮಗ್ನಳಾಗಿದ್ದ ರಾಮನ ತಾಯಿ ರಾಮನ ದನಿ ಕೇಳಿ ಎಚ್ಚರಗೊಂಡಳು .
'' ಯಾಕೋ ಮಗ ಹೀಗೆ ಓಡಿ ಬರುತ್ತಿರುವೆ ? ತಾತೈಯ್ಯನಿಗೆ ಕೂಳು ಕೊಟ್ಟೆಯೋ ಇಲ್ಲವೋ ? ಅವರು ಆರಾಮವಾಗಿ ಇದ್ದಾರೆತಾನೆ ? " ಗಲಿಬಿಲಿಯಿಂದ ಪ್ರಶ್ನಿಸಿದಳು ಅಮ್ಮ . 
'' ಹೂಂ ಅಮ್ಮ ! ನಮ್ಮ ಬಗ್ಗೆ ವಿಚಾರಿಸಿಕೊಂಡು ತಾತೈಯ್ಯನ ಮನೆಗೆ ಯಾರೋ ಬಂದಿರುವರು ಅಮ್ಮಾ ! ತಾತೈಯ್ಯ ಅವರನ್ನ ನಮ್ಮ ಮನೆಗೆ ಕರೆತರುತ್ತಿದ್ದಾರೆ . ನಿನಗೆ ವಿಷಯ ತಿಳಿಸಬೇಕೆಂದು ಓಡಿ ಬಂದೆ .'' 
ರಾಮ ಏದುಸಿರುತ್ತ ಹೇಳಿದ್ದನ್ನು ಕೇಳಿ ಅಮ್ಮ ತಬ್ಬಿಬ್ಬಾದಳು .  
 ಕತ್ತು ಉದ್ದ ಮಾಡಿ ಹೊರಗೆ ನೋಡಿದಾಗ ತಾತೈಯ್ಯನ ಜೊತೆ ಓರ್ವ ಗಣ್ಯ ವ್ಯಕ್ತಿ ತಮ್ಮ ಮನೆಯನ್ನು ಕುರಿತು ಬರುತ್ತಿರುವುದು ಕಂಡಿತು . 
'' ನಾಡ ಸೇನಬೋವ ಕೇಶವ ದೇವಣ್ಣನವರು ನಿನ್ನನ್ನು ಭೇಟಿಯಾಗಲು ಬಂದಿರುವರು ತಾಯಿ . '' ಎಂದರು ತಾತೈಯ್ಯ  . 
ಬಂದವರನ್ನು ಕೈ ಮುಗಿದು ಸ್ವಾಗತಿಸಿ , ಶುದ್ಧಿಕರಿಸಿದ ನೀರು ಕೊಟ್ಟು ಉಪಚರಿಸಿದಳು ಅಮ್ಮ . 

                                                                                      
'' ನಿಮ್ಮ ಗ್ರಾಮದ ಪರಿಸ್ಥಿತಿ ಇತ್ತೀಚಿಗೆ ತಿಳಿಯಿತು ತಾಯಿ .  ವೀರಬಲ್ಲಾಳ ಮಹಾರಾಜರ ಸಾಮಂತರಾದ  ಕಾಡೆಯನಾಯಕರ ಆಡಳಿತದಲ್ಲಿ ಈ ಕುಕ್ಕಲನಾಡಿನ ಹಳ್ಳ ಕೊಳ್ಳಗಳಲ್ಲಿಯೂ ನದಿಗಳಲ್ಲಿಯೂ ಹಾಲು ಜೇನಿನಂತಹ ಸಿಹಿ ನೀರು ತುಂಬಿ ಹರಿಯುತ್ತಿರುವುದಾಗಿ ಪ್ರತೀತಿ . ಆದರೆ ಇಲ್ಲಿ ಹೊಳೆಯಲ್ಲಿ  ವಿಷ ಭರಿತ ನೀರು ಹರಿಯುವ ವಿಷಯ ಕೇಳಿ ಆಘಾತವಾಯಿತು . '' 
'' ಅಯ್ಯೋ ಏನು ಹೇಳಲಿ ಅಯ್ಯ ನಮ್ಮ ಗೋಳನ್ನ ! ಸ್ಪಟಿಕದಂತೆ ತಿಳಿಯಾಗಿ ಹರಿಯುತ್ತಿದ್ದ ಈ ಹೊಳೆಯ ನೀರು ನಮ್ಮ ಗ್ರಾಮದ ಜೀವಾಳವಾಗಿದ್ದ ಕಾಲ ಒಂದು ಇತ್ತು . ಆದರೆ .. ''  ಎಂದು ಶುರುಮಾಡಿದವಳು , '' ಬೆಳಕು ಹರಿಯುವಾಗ ಕೊಕೊಕೋಕೋ ಎನ್ನಲು ಒಂದು ಕೋಳಿಯನ್ನು ಸಹ ಉಳಿಸಿಲ್ಲ ಆ ನೀರು . '' ಎಂದು ಗ್ರಾಮದ ಪರಿಸ್ಥಿತಿಯನ್ನು ವಿವರವಾಗಿ ಹೇಳಿ  ಮುಗಿಸಿದಳು ರಾಮನ ತಾಯಿ . 
 '' ನಿಮ್ಮ ಪಾಡು ಕೇಳಿ ಬಹಳ ಸಂಕಟವಾಗುತ್ತಿದೆ ತಾಯಿ . ನಿಮಗೆ ಏನು ಸಹಕಾರ ಬೇಕಾದರೂ ಮಾಡಿಕೊಡುವಂತೆ ಅಪ್ಪಣೆಯಾಗಿದೆ . ಸದ್ಯಕ್ಕೆ ಧಾನ್ಯಗಳ ಮೂಟೆ ಮತ್ತು ಶುದ್ಧ ನೀರಿನ ಪೀಪಾಯಿಗಳನ್ನು ಹೊತ್ತು ಬಂದ ಗಾಡಿಗಳನ್ನು ಊರಾಚೆ ಗ್ರಾಮದ ಎಲ್ಲೆಯಲ್ಲಿ  ನಿಲ್ಲಿಸಲಾಗಿದೆ . ನಿಮ್ಮ ಒಪ್ಪಿಗೆ ಪಡೆದು ಎಲ್ಲವನ್ನೂ ನಿಮ್ಮ ಮನೆಗೆ ಸಾಗಿಸಲು ಆದೇಶ ನೀಡಲಾಗಿದೆ . '' 
'' ಧನ್ಯರಾದೆವು ಅಯ್ಯ ! ಯಾವುದೋ ಅನಾಮದೇಯ ಗ್ರಾಮದಲ್ಲಿಯ ದುಃಖಕರ ಕಥೆಯನ್ನು ತಿಳಿದುಕೊಂಡು , ನಮ್ಮ ಸಹಾಯಕ್ಕೆ ನಿಂತಿರುವ ನಾಯಕರಿಗೆ ಅದೆಷ್ಟು ಧನ್ಯವಾದಗಳನ್ನು ಅರ್ಪಿಸಿದರೂ ಸಾಲದು .'' ಬಾವುಕಳಾಗಿ ನುಡಿದಳು  ರಾಮನ ತಾಯಿ . 
'' ಹೊಳೆ  ನೀರಲ್ಲಿ ಬೆರೆತಿರುವ ವಿಷದ ಮೂಲವನ್ನು ಪತ್ತೆ ಹಚ್ಚಿ , ನಿರ್ಮೂಲ ಮಾಡುವುದು ಮತ್ತು ಗ್ರಾಮದ ಒಳಿತಿಗಾಗಿ ಒಂದು ದೊಡ್ಡ ಕೆರೆಯನ್ನು ಕಟ್ಟಿಸುವುದು ಎಂದು ಎರಡು ಯೋಜನೆಗಳನ್ನು ರೂಪಿಸಲಾಗಿದೆ . ಈ ಯೋಜನೆಗಳು ಯಶಸ್ವಿಯಾಗಿ ಪೂರ್ಣಗೊಳ್ಳುವವರೆಗೂ ಗ್ರಾಮದಲ್ಲಿ ಉಳಿದುಕೊಂಡಿರುವ ನಿಮ್ಮೆಲ್ಲರನ್ನೂ ನಗರದಲ್ಲಿ ಇರಿಸಿಕೊಳ್ಳುವುದು ಎಂದು ನಿರ್ಧರಿಸಲಾಗಿದೆ  . '' 
ಕೆಲವು ನಿಮಿಷಗಳು ಅವಾಕ್ಕಾಗಿ ನಿಂತಳು ರಾಮನ ತಾಯಿ . 
'' ಅಯ್ಯ ! ನಾಯಕರ ಉದಾರ ಗುಣಕ್ಕೆ ಏನನ್ನಬೇಕೋ ತಿಳಿಯುತ್ತಿಲ್ಲ . ನಿಮ್ಮ ಯೋಜನೆಗಳೆಲ್ಲ ಸಂಪೂರ್ಣಗೊಳ್ಳಲು ಎಷ್ಟು ಕಾಲ ಹಿಡಿಯುತ್ತದೋ ಏನೋ ! ನಗರದ ಸೌಕರ್ಯಗಳಿಗೆ ಒಗ್ಗಿಬಿಟ್ಟರೆ ಯಾರಿಗೇ ಆಗಲಿ ಗ್ರಾಮಕ್ಕೆ ಹಿಂದಿರುಗುವ ಮನಸ್ಸಾಗುತ್ತದೆಯೇ ? ಈಗಾಗಲೇ ನಮ್ಮ ಭೂಮಿ ಮತ್ತು ಗ್ರಾಮ ಪಾಳು ಬಿದ್ದಂತೆ  ಕಾಣಿಸುತ್ತಿದೆ . ಹಾಗಿರಲು ಇಲ್ಲಿರುವ ಅಲ್ಪ ಸಂಖ್ಯಾತರೂ ನಗರಕ್ಕೆ ತೆರಳಿಬಿಟ್ಟರೆ ಈ ಕೃಷಿಕರ ಗ್ರಾಮ ಮರುಭೂಮಿಯಾಗುವುದು ಖಚಿತ .  ಕೃಷಿಕರೆಲ್ಲ  ನಗರಿಕರಾಗಿಬಿಟ್ಟರೆ ಎಲ್ಲರಿಗೂ ಅನ್ನ ಕೊಡುವವರಾದರೂ ಯಾರು?  '' 
'' ಹಾಗಾದರೆ ನಿಮ್ಮ ಸಲಹೆ ಏನು ತಾಯಿ ? ''
'' ದಯವಿಟ್ಟು ತಪ್ಪು ತಿಳಿಯಬೇಡಿ ಐಯ್ಯ . ನಿಮ್ಮ ಯೋಜನೆಗಳು ಯಶಸ್ವಿಯಾಗ ಬೇಕು . ಗುಳೆ ಹೋದವರೆಲ್ಲ ಮತ್ತೇ ಹಿಂದಿರುಗ ಬೇಕು . ನಮ್ಮ ಹಳ್ಳಿಯ ಗದ್ದೆ ತೋಟಗಳೆಲ್ಲ ಮತ್ತೇ ಹಸಿರು ಹೊದ್ದು ಆರೋಗ್ಯವಾಗಿ ನಳನಳಿಸ ಬೇಕು ! ನಿಮ್ಮ ಕೆಲಸ ಪ್ರಾರಂಭವಾಗಲಿ . ಗ್ರಾಮದ ಹಿರಿಯರ ಸೇವೆ ಮಾಡುತ್ತಾ ನಾನು ಮತ್ತು ರಾಮ ಇಲ್ಲೇ ಉಳಿಯುತ್ತೇವೆ . ತಾತೈಯ್ಯ ! ನಿಮ್ಮ ಅಭಿಪ್ರಾಯ ಏನು ? '' 
 '' ಸರಿಯಾಗಿ ಹೇಳಿದೆಯಮ್ಮ ! ನಮ್ಮ ಗ್ರಾಮ ಕೃಷಿಕರ ಗ್ರಾಮವಾಗಿಯೇ ಉಳಿಯಬೇಕೆಂದರೆ ಗುಳೆ ಹೋದವರೆಲ್ಲ ಹಿಂದಿರುಗಲೇ ಬೇಕು . ನಾವೆಲ್ಲ ಇಲ್ಲೇ ಉಳಿದುಕೊಂಡರೆ , ನಮ್ಮ ಪರಿವಾರಗಳು ನಮಗೋಸ್ಕರವಾದರೂ ಗ್ರಾಮಕ್ಕೆ ಹಿಂದಿರುಗುವ ಸಾಧ್ಯತೆ ಇದೆ ! ಹಾಗಾಗಿ ನಾವು ಇಲ್ಲೇ ನೆಲಸಿರುವುದೇ ಉತ್ತಮ . '' 
ಗ್ರಾಮದ ಇತರ ಹಿರಿಯರ ಅಭಿಪ್ರಾಯವೂ ಅದೇಯಾಗಿತ್ತು . 
ಅಂತರ್ಜಲ ತಪಾಸಣೆ ಮುಗಿದು ಜಲ ಮೂಲಗಳನ್ನು ಗುರ್ತಿಸಿದ್ದಾಯಿತು . ಶೀಘ್ರದಲ್ಲೇ ಕೆರೆ ಕಟ್ಟುವ ಕೆಲಸ ಶುರುವಾಯಿತು . ಕೆಲಸಕ್ಕಾಗಿ ನಗರದಿಂದ ಬಂದಿದ್ದ ಆಳುಗಳು ತಾವು ಉಳಿದುಕೊಳ್ಳಲು ಗುಡಾರಗಳನ್ನು ನಿರ್ಮಿಸಿಕೊಂಡರು . ಧಾನ್ಯದ ಮೂಟೆಗಳು ಮತ್ತು ನೀರಿನ ಪೀಪಾಯಿಗಳೊಂದಿಗೆ ಸೊಪ್ಪು ತರಕಾರಿಗಳೂ ನಗರದಿಂದ ರವಾನೆಯಾಗ ತೊಡಗಿದವು . ಗ್ರಾಮದ ಹಿರಿಯರಿಗೆ ಮಾತ್ರವಲ್ಲದೆ , ಕೆಲಸಗಾರರಿಗೂ ಅಡುಗೆ ಮಾಡ ತೊಡಗಿದಳು ರಾಮನ ತಾಯಿ . 
ರಾಮನಿಗೆ ನೀರು ಹೊತ್ತು ತರುವ ಪರಿಶ್ರಮ ತಪ್ಪಿತು . ಹಾಗಾಗಿ ಅವನ ದಿನಚರಿಯೂ ಬದಲಾಗಿತ್ತು . ಅಡುಗೆ ಕೆಲಸದಲ್ಲಿ ಅಮ್ಮನಿಗೆ ಸಹಾಯ ಮಾಡುವುದು , ಕೆರೆ ನಿರ್ಮಾಣ ಕಾರ್ಯದಲ್ಲಿ ಹೆಗಲು ಕೊಡುವುದು , ಮಧ್ಯೆ ಅಣ್ಣಯ್ಯ ತಮ್ಮಯ್ಯ ಸೋದರರ ಆಗಮನದ ನಿರೀಕ್ಷೆಯಲ್ಲಿ ಪ್ರತಿದಿನವೂ ಸ್ವಲ್ಪ ಸಮಯ ಹೊಳೆಯ ತೀರದಲ್ಲಿ ಕಾಯುವುದು ಅವನ ಬದಲಾದ ದಿನಚರಿಯಾಗಿತ್ತು . 
ಅಂದೊಂದು ದಿನ ಎಂದಿನಂತೆ ಹೊಳೆಯ ಬಳಿ ನಿಂತಿದ್ದ ರಾಮ ದಿಗಂತದಲ್ಲಿ ಗೋಚರಿಸಿದ ಧೂಳಿನ ಮಂಡಲ ಕಂಡು ಚಕಿತಗೊಂಡನು . ' ಓ ! ಕುದುರೆ ಸವಾರರು ! ಅಂದರೆ ಅಣ್ಣಯ್ಯ ಮತ್ತು ತಮ್ಮಯ್ಯ ಬರುತ್ತಿರುವರೇ ? ' ಕುತೂಹಲದಿಂದ ಚಡಪಡಿಸಿತು ಮನಸ್ಸು . 
ನೋಡನೋಡುತ್ತಿದ್ದ ಹಾಗೆಯೇ ಅವನ ಸಮೀಪ ಬಂದು ನಿಂತ ಕುದುರೆಯಿಂದ  '' ರಾಮಾ ! '' ಎನ್ನುತ್ತಾ ಕೆಳಕ್ಕೆ ಜಿಗಿದವನು ತಮ್ಮಯ್ಯ ! 
'' ಅಯ್ಯ ! ಅಂತೂ ಬಂದಿರಾ ? ಮನೆಗೆ ಬರದೇ ಇಲ್ಲಿಗೆ ಯಾಕೆ ಬಂದಿರಿ ? ಅಣ್ಣಯ್ಯ ಯಾಕೆ ಬಂದಿಲ್ಲ ? '' ಒಂದೇ ಉಸಿರಲ್ಲಿ ಪ್ರಶ್ನೆಗಳ ಸುರಿಮಳೆಯನ್ನೇ ವರ್ಷಿಸಿದ ರಾಮ . 

                                                                                                             
 '' ಅಣ್ಣಯ್ಯ ಕೆಲಸದ ಮೇಲೆ ಬೇರೆ ಕಡೆ ಹೋಗಿರುವರು . ನೀರಿಗಾಗಿ ನೀನು ಇಲ್ಲಿಗೆ ಬಂದೇ ಬರುವೆ ಎಂದು ತಿಳಿದಿತ್ತು !   ಹಾಗಾಗಿ ನಿನ್ನನ್ನು ನೋಡಲೆಂದು ಇಲ್ಲಿಗೆ ಬಂದದ್ದು . ''
 '' ಈಗ ನಮಗೆ ನದಿ ನೀರಿನ ಅವಶ್ಯಕತೆಯೇ ಇಲ್ಲ ತಮ್ಮಯ್ಯ ! '' ಕುದುರೆಯ ಬೆನ್ನು ಸವರುತ್ತ ನುಡಿದ ರಾಮ . 
'' ಮತ್ತೆ ? ''
''  ನಮ್ಮ ಗ್ರಾಮದಲ್ಲಿ ಇತ್ತೀಚೆಗೆ  ಒಂದು ಪವಾಡವೇ ನಡೆದುಹೋಗಿದೆ ತಮ್ಮಯ್ಯ ! '' 
 ಏನದು ಎಂಬಂತೆ ಹುಬ್ಬೇರಿಸಿದನು ತಮ್ಮಯ್ಯ . 
'' ಬನ್ನಿ ! ಮನೆಗೆ ಹೋಗುತ್ತ ಎಲವನ್ನೂ ಹೇಳುವೆ ! '' ಎಂದ ರಾಮ ಕುದುರೆಯನ್ನು ಮುದ್ದಿಸಿ ತಾನೇ ಅದನ್ನು ನಡೆಸಿಕೊಂಡು ಮನೆಯನ್ನು ಕುರಿತು ನಡೆಯ ತೊಡಗಿದ ,  ಹಾಗೆಯೇ ಊರಿನ ಕಥೆಯನ್ನು ಹೇಳತೊಡಗಿದ . 
ದಿಡೀರೆಂದು ಗ್ರಾಮಕ್ಕೆ ಆಗಮಿಸಿದ ನಾಡ ಸೇನಬೋವರು ತಂದಿದ್ದ ಸುದ್ದಿಯ ಬಗ್ಗೆ , ಕೆರೆ ನಿರ್ಮಾಣದ ಬಗ್ಗೆ , ನಗರದಿಂದ ರವಾನೆಯಾಗುವ ಧಾನ್ಯ ಮೂಟೆ ಮತ್ತು ನೀರಿನ ಪೀಪಾಯಿಗಳ ಬಗ್ಗೆ ಎಲ್ಲ ವಿಷಯಗಳನ್ನೂ ಹೇಳತೊಡಗಿದ ರಾಮ . 
'' ಕೆರೆಯ ಕೆಲಸ ಮುತವರ್ಜಿಯಿಂದ ನಡೆಯುತ್ತಿದೆ . ಅದರ ವಿಸ್ತೀರ್ಣ ಕಂಡರೆ ನೀವು ಕಣ್ಣು ಬಾಯಿ ಬಿಟ್ಟುಕೊಂಡು ಶಿಲೆಯಾಗಿ ನಿಲ್ಲುವುದು ಖಚಿತ . ಒಂದಲ್ಲ ಎರಡಲ್ಲ , ಆಗಲೇ ಐದಾರು ಒರತೆಗಳು ಕಣ್ ತೆರೆದಿವೆ . ''
 ಮನೆಯನ್ನು ಸಮೀಪಿಸುತ್ತಿದ್ದಂತೆ ತಯಾರಾಗುತ್ತಿದ್ದ ಭೋಜನದ ಪರಿಮಳ ಮೂಗಿಗೆ ಬಡಿಯಿತು . 
ತಮ್ಮಯ್ಯನನ್ನು ಕಂಡ ರಾಮನ ತಾಯಿ ಸಂತೋಷದಿಂದ ಆತನನ್ನು ಸ್ವಾಗತಿಸಿದಳು . ನಡೆದ ಸಂಗತಿಗಳನ್ನೆಲ್ಲಾ ಚಾಚೂ ತಪ್ಪದೆ ವಿವರಿಸಿ , '' ಒಟ್ಟಲ್ಲಿ ದಾಮೋದರ ಪೆರುಮಾಳ್ ಕಣ್ಣು ತೆರೆದನು ! ಇನ್ನೇನು ಹೇಳಲಿ ಅಯ್ಯ ! '' ಎಂದಳು.   
'' ಅಂದು ನೀವು ಬಂದಾಗ ಬರಿ ಗಂಜಿಯನ್ನು ಮಾತ್ರ ಕೊಟ್ಟು ಉಪಚರಿಸ ಬೇಕಾಯಿತು . ನಾಯಕರ ಕೃಪೆಯಿಂದ ಇಂದು ಮುದ್ದೆ ಕಟ್ಟಿ ತರಕಾರಿಗಳ ಪಲ್ಯ ಮಾಡಿರುವೆ . ಕೈಕಾಲು ತೊಳೆದು ಊಟಕ್ಕೆ ಬನ್ನಿ !  ರಾಮ, ನೀನೂ ಜೊತೆಯಲ್ಲಿ ಕೂರು . ''
'' ತಮ್ಮಯ್ಯ ! ಬೇಗ ಊಟ ಮಾಡಿ ಕೆರೆ ಕಟ್ಟುವ ಕೆಲಸ ನಡೆಯುತ್ತಿರುವಲ್ಲಿಗೆ ಹೋಗೋಣ . ಮತ್ತೊಮ್ಮೆ ನೀವು ಬರುವಾಗ ಅಣ್ಣಯ್ಯನನ್ನೂ ಕರೆ ತರ ಬೇಕು ...... '' 
ಅದೇ ಸಮಯ ಚಡಪಡಿಸುತ್ತ ಮನೆಯೊಳಗೆ ದಡಬಡಿಸಿ ನುಗ್ಗಿದರು ಸೇನಬೋವರು . 
'' ಅಯ್ಯೋ ! ಇದೇನು ! ನಾವೆಲ್ಲ ನಿಮ್ಮ ಸ್ವಾಗತಕ್ಕಾಗಿ ಗ್ರಾಮದ ಹೆಬ್ಬಾಗಿಲಬಳಿ ಕಾಯುತ್ತಿದ್ದರೆ , ತಾವು ಇಲ್ಲಿ ಬಂದು ಕುಳಿತಿರುವಿರಲ್ಲ ನಾಯಕರೇ  ! '' 
 ಸೇನಬೋವರು ತಮ್ಮಯ್ಯನನ್ನು ಗೌರವದಿಂದ ನಾಯಕರೇ ಎಂದು ಸಂಭೋದಿಸಿದ್ದು ಕೇಳಿ ರಾಮ ಮತ್ತು ಅವನ ತಾಯಿ ಬೆಚ್ಚಿದರು . 
'' ಏನು ? ಏನು ಹೇಳುತ್ತಿರುವಿರಿ ಐಯ್ಯ ? ನಾಯಕರು ! ಅಂದರೆ ಇವರು ... '' ತೊದಲಿದಳು ರಾಮನ ತಾಯಿ  . 
'' ಹೌದು ತಾಯಿ ! ವೀರಬಲ್ಲಾಳರ ಸಾಮಂತರಾಗಿ ಕುಕ್ಕಲ ನಾಡನ್ನು ಆಳಿದ ಕಾಡೆಯನಾಯಕರ ಮಕ್ಕಳು ಮಇಲೆಯನಾಯಕರು ಮತ್ತು ಚೆಂನೆಯನಾಯಕರು . ಕುಕ್ಕಲ ನಾಡಿನ ಆಡಳಿತವನ್ನು ಇಬ್ಬರು ಮಕ್ಕಳ ಕೈಗೆ ಒಪ್ಪಿಸಿ ಆರಾಮವಾಗಿರುವರು ಕಾಡೆಯನಾಯಕರು . ''
'' ಹಾ ! ಮತ್ತೆ ತಮ್ಮಯ್ಯ .... ? '' ಯಾವ ದರ್ಪ ದೌಲತ್ತು  ಧಿಮಾಕು ತೋರದೇ ನಮ್ಮ ಮನೆಯಲ್ಲಿ ನನ್ನ ಜೊತೆ ಕುಳಿತು ಆಹಾರ ಸೇವಿಸುತ್ತಿರುವ ವ್ಯಕ್ತಿ ಕುಕ್ಕಲ ನಾಡಿನ ಅಧಿಪತಿಯೇ ? ನಂಬಲಾರದೇ ಕಣ್ ಕಣ್ ಬಿಟ್ಟುಕೊಂಡು ತಮ್ಮಯ್ಯನನ್ನು ನೋಡಿದ ರಾಮ . 
'' ಹೌದು ಕಣೋ ಮುಠ್ಠಾಳ ! ಚೆಂನೆಯನಾಯಕರ ಜೊತೆಯಲ್ಲಿ ಊಟಕ್ಕೆ ಕುಳಿತದ್ದಲ್ಲದೆ , ನಮ್ಮ ನಾಯಕರನ್ನು ತಮ್ಮಯ್ಯ  ಎಂದು ಕರೆಯುವ ಧೈರ್ಯ ಮಾಡಿದೆಯಲ್ಲ ನೀನು ! '' ಎಂದು ಹೌಹಾರಿದರು ಸೇನಬೋವರು . 
 ರಾಮ ಮತ್ತು ಅವನ ತಾಯಿ ದಿಗ್ಬ್ರಾಂತರಾಗಿ ಭಯದಿಂದ ಪೆಚ್ಚು ಮೋರೆ ಹಾಕಿ ನಿಂತರು . 
'' ನಿಮ್ಮ ಗ್ರಾಮದ ಪರಿಸ್ಥಿತಿಯನ್ನು ನೇರವಾಗಿ ಕಂಡರಿತಮೇಲೆ , ಈ ಗ್ರಾಮವನ್ನು ಪುನರುಜ್ಜೀವನಗೊಳಿಸ ಬೇಕೆಂದು  ಅಂದೇ ತೀರ್ಮಾನಿಸಿದರು . ಮೊದಲು ಹೊಳೆಯಲ್ಲಿ ಬೆರೆತಿರುವ ವಿಷದ ಮೂಲವನ್ನು ಪತ್ತೆ ಮಾಡಿದರು . ಬೆಟ್ಟದ ತಪ್ಪಲಲ್ಲಿ ನೆಲೆಸಿರುವ ವೈದ್ಯಕೀಯ ಸಂಶೋಧನಾ ಶಾಲೆಯು ವಿಸರ್ಜಿಸುವ ತ್ಯಾಜ್ಯಗಳಿಂದಲೇ ಹೊಳೆ ನೀರು ಕಲುಷಿತಗೊಂಡು ವಿಷವಾಗಿದೆ ಎಂಬುದು ಖಚಿತವಾಯಿತು . ತ್ಯಾಜ್ಯವನ್ನು ವಿಸರ್ಜನೆ ಮಾಡಲು ಬೇರೆ ಮಾರ್ಗಗಳನ್ನು ಪರಿಶೀಲಿಸಲು ಹೊರಟಿರುವರು ಮಇಲೆಯನಾಯಕರು !  ಗ್ರಾಮದಲ್ಲಿ  ವಿಸ್ತಾರವಾದ ಕೆರೆಯನ್ನು ನಿರ್ಮಾಣ ಮಾಡುವ ಜವಾಬ್ದಾರಿಯನ್ನು ವಹಿಸಿಕೊಂಡಿರುವರು ಚೆಂನೆಯನಾಯಕರು . .. ! '' 
ಬೆಟ್ಟದಲ್ಲಿ ಉಗಮವಾಗುವ ಹೊಳೆ ಕೆಲವು ಗ್ರಾಮಗಳ ಮೂಲಕ ಹರಿದು ಸಮೀಪದಲ್ಲೇ ಇರುವ ಅಖಂಡ ನದಿಯೊಂದಿಗೆ  ಸೇರುತ್ತದೆ . ಹಾಗಾಗಿ ಈ ಗ್ರಾಮದಂತೆಯೇ ಇತರ ಗ್ರಾಮಗಳಿಗೂ ಈ ಹೊಳೆಯ ನೀರಿನಿಂದ ಸಮಸ್ಯೆ ಉಂಟಾಗಿದ್ದರೆ , ಅದು ಎಷ್ಟರಮಟ್ಟಿಗೆ ಎಂದು ಪರಿಗಣಿಸಿ , ಅದಕ್ಕೆ ತಕ್ಕಂತೆ ಪರಿಹಾರ ಕ್ರಮವನ್ನು ಕೈಗೊಳ್ಳಬೇಕೆಂದು ನಿರ್ಧರಿಸಿದ್ದರು ಸೋದರರು . ಹೊಳೆ ನೀರು ಶುದ್ಧವಾಗುವವರೆಗೂ ಅದರ ಹರಿವನ್ನು ನಿಯಂತ್ರಿಸಿ ,  ಅಖಂಡ ನದಿಯಲ್ಲಿ ಸಂಗಮವಾಗದಂತೆ  ತಡೆಯಲು , ಹೊಳೆಗೆ ಅಡ್ದಲಾಗಿ ಎರಡು ಮೂರು ತಡೆಅಣೆಕಟ್ಟುಗಳನ್ನು  ನಿರ್ಮಿಸುವ ಮಹತ್ತಾದ ಯೋಜನೆಯನ್ನೂ ಹಾಕಿಕೊಂಡಿದ್ದರು ನಾಯಕ  ಸೋದರರು . 
'' ಕೆಲಸವೆಲ್ಲ ಮುಗಿಯುವತನಕ ಈ ವಿಷಯವನ್ನು ಯಾರಿಗೂ ತಿಳಿಸಕೂಡದು ಎಂದು ಅಪ್ಪಣೆಯಾಗಿತ್ತು ! ಆದರೇ ... '' ಸೇನಬೋವರು ವಿಷಯಗಳನ್ನು ಬಡ ಬಡ ಹೇಳುತ್ತಲೇ ಇದ್ದರು . 
'' ಸೇನಬೋವರೇ ! ಶಾಂತಿ ಶಾಂತಿ ! ಸಮಾಧಾನವಾಗಿರಿ ! ಅಣ್ಣಯ್ಯ ಮತ್ತು ನಾನು ರಾಜ್ಯದ ಪರ್ಯಟನೆ ಮಾಡುತ್ತ ಹೊಳೆಯ ತೀರಕ್ಕೆ ಬಂದೆವು . ಹೊಳೆಯ ನೀರು ವಿಷವಾಗಿರುವ ವಿಷಯ ಹೇಳಿ ನನ್ನ ಮತ್ತು ಅಣ್ಣಯ್ಯನ ಪ್ರಾಣ ಉಳಿಸಿದ ರಾಮ . ತನ್ನ ಮನೆಗೆ ಕರೆದೊಯ್ದ .  ಕುಡಿಯಲು ಶುದ್ಧಿಕರಿಸಿದ್ದ ನೀರು ಮತ್ತು ಬಿಸಿ ಬಿಸಿ ಕೂಳು ಕೊಟ್ಟು ನಮ್ಮ ದಣಿವಾರಿಸಿದರು ರಾಮನ ತಾಯಿ . ರಾಮನನ್ನು ಮತ್ತು ತಾಯಿಯವರನ್ನೂ ಏಕಾಂತದಲ್ಲಿ ಭೇಟಿಯಾಗಲೆಂದೇ ನಾನು ಹೊಳೆಯ ತೀರದ ಮಾರ್ಗವಾಗಿ ಮೊದಲು ಇಲ್ಲಿಗೆ ಬಂದದ್ದು . ನೀವು ಕೆರೆಯ ಕೆಲಸ ನಡೆಯುವ ಸ್ಥಳದಲ್ಲಿರಿ . ಊಟ ಮುಗಿಸಿ ನಾವು ಅಲ್ಲಿಗೆ  ಬರುತ್ತೇವೆ . '' ಎಂದ ನಾಯಕರು  , ಹೆದರಿ ದೂರ ಸರಿದು ನಿಂತಿದ್ದ ರಾಮನನ್ನು ಕೈ ಹಿಡಿದೆಳೆದು ಪಕ್ಕದಲ್ಲಿ ಕುಳ್ಳರಿಸಿಕೊಂಡರು.  
'' ಪೂರಾ ಊಟ ಮುಗಿಸದೆ ಏಳಬಾರದು ! ತಮ್ಮಯ್ಯನ ಜೊತೆ ಕುಳಿತು ಊಟಮಾಡಲು ಸಂಕೋಚವೇಕೆ  ? ''
ರಾಮ ಸಂಕೋಚದಿಂದ ಮೌನವಾಗಿ ಕುಳಿತು ಊಟಮಾಡ ತೊಡಗಿದನು . 
ಕೆರೆಯ ಕೆಲಸ ರಾಮ ಹೇಳಿದಂತೆ ಮುತವರ್ಜಿಯಿಂದ ನಡೆಯುತ್ತಿತ್ತು . ಹಾಡುತ್ತ ಕೆಲಸ ಮಾಡುತ್ತಿದ್ದವರೆಲ್ಲ ಚೆಂನೆಯನಾಯಕರನ್ನು ಕಂಡು , ಅವರಿಗೆ ಕೈ ಮುಗಿದು ಕೆಲಸ ಮುಂದುವರಿಸಿದರು . ಕೆರೆಯ ವಿಸ್ತೀರ್ಣ ಕಂಡು ಚೆಂನೆಯನಾಯಕರ ಮೊಗ ತೃಪ್ತಿಯಿಂದ ಅರಳಿತು . ಐದಾರು ಒರತೆಗಳ ನೀರು ಮತ್ತು ಮುಂಗಾರು ಮಳೆಯಿಂದ ತುಂಬಿ ತುಳುಕಲಿರುವ ಸಮುದ್ರದಂತಹ ಕೆರೆಯನ್ನು ಕಲ್ಪಿಸಿಕೊಂಡಾಗ  ಹೃದಯ ತುಂಬಿಬಂದಿತು . 
'' ಕೆರೆಯ ಬಗ್ಗೆಯ ಶಾಸನದಲ್ಲಿ ಕೆತ್ತಬೇಕಾದ ವಿಷಯ ಹೀಗಿದೆ ನೋಡಿ ನಾಯಕರೇ ! '' ಎನ್ನುತ್ತ ವಿಷಯವನ್ನು ಓದಲು ತಯಾರಾದರು ಸೆನುಬೋವರ ಪುತ್ರ ಅನಂತಣ್ಣ   .
'' ಮುಖ್ಯವಾದ ವಿಷಯಗಳನ್ನು ಮಾತ್ರ ಹೇಳಿ ಸಾಕು . '' 
'' ದಾಮೋದರ ಪೆರುಮಾಳ್ ದೇವರ ದಿಬ್ಯ ಶ್ರೀಪಾದ ಪದುಮಾರಾದಕ ಮಇಲೆಯನಾಯಕನವರ ತಮ್ಮ  ಚೆಂನೆಯನಾಯಕರು ... '' 
'' ಇಲ್ಲಿ ಮತ್ತೊಂದು ವಿಷಯ ಸೇರಿಸಬೇಕು ... ಈ ಭೂತಳ ದೇವ ನರ ವಾನರ ಮ್ರಿಗ ಪಶು ಪಕ್ಷಿ ಮೊದಲಾದ ಜೀವರಾಶಿಗಳೆಲ್ಲವನೂ ಸಾರ್ವಕಾಲವಂ ರಕ್ಷಿಸಲೆಂದ ಅನವರತವೂ ಶ್ರೀ ಗಂಗಾದೇವಿಯ ರೂಪಂ ಗೊಂಡು ಪೂರ್ಣ ತಟಾಕವಾಗಿ ನೆಲೆಸಿ ನಲಿಹುತ್ತಿರೆ ರಾಮಸಮುದ್ರದ  ... '' ಎಂದು ನಾಯಕರು ಮುಂದುವರಿಯಲು ,  ಮದ್ಯೆ ಬಾಯಿ ಹಾಕಿ  ''..... ಧರ್ಮಮ್ಕೆ ೩೦೦೦ ಮೂರುಸಾವಿರ ಹೊಂನನಿಕ್ಕಿ ... '' ಎಂದು ಖರ್ಚಿನ ಬಗ್ಗೆ  ಒಂದು ಸಾಲನ್ನು ಸೇರಿಸಿದರು ಸೇನಬೋವರು .  

                                                                                           
'' ಸಾಕು ಸಾಕು ಸೇನಬೋವರೇ ! ಉಳಿದದ್ದೆಲ್ಲಾ ನಿಮ್ಮ ಮಗನಿಗೆ ಬಿಟ್ಟಿದ್ದು . ನಾನು ಹೇಳಿದ ವಿಷಯವನ್ನು ಮಾತ್ರ ಮರೆಯದೆ ಸೇರಿಸಿಬಿಡಿ . '' ಎಂದರು ಚೆಂನೆಯನಾಯಕರು .  
'' ರಾಮ ! ಇಡೀ ಗ್ರಾಮಕ್ಕೆ ನೀರು ಸರಬರಾಜು ಮಾಡುವ ಕೆಲಸವನ್ನು ಇನ್ನು ಮುಂದೆ ಈ ' ರಾಮಸಮುದ್ರ ' ವಹಿಸಿಕೊಳ್ಳುತ್ತದೆ ! ನೀನು ಪ್ರೀತಿಸುವ ಪಶು ಪಕ್ಷಿ ನರ ವಾನರ ಮುಂತಾದ ಎಲ್ಲ ಜೀವರಾಶಿಗಳನ್ನು ರಕ್ಷಿಸುವುದು  ರಾಮಸಮುದ್ರದ ಹೊಣೆ ! '' ಎನ್ನುತ್ತ ಕಿರುನಗೆ ಬೀರಿ ರಾಮನ ಬೆನ್ನು ತಟ್ಟಿದರು ಚೆಂನೆಯನಾಯಕರು . 
ಸ್ಪಟಿಕದಂತಹ ನೀರು ತುಂಬಿತುಳುಕುವ ರಾಮಸಮುದ್ರ ಕೆರೆ , 
ಎಲ್ಲೆಲ್ಲೂ ಹಸಿರು ಹೊದ್ದ ತೋಟಗಳು ಮತ್ತು ಗದ್ದೆಗಳು , 
ಸ್ವಚ್ಛಗೊಳಿಸಲ್ಪಟ್ಟ ಶುದ್ಧವಾದ ನೀರು ಹರಿಯುವ ಹೊಳೆ ,  
ಮುಂಜಾವಿನಲ್ಲಿ ಕಲರವ ಎಬ್ಬಿಸುವ ಪಕ್ಷಿಗಳು , 
ಹುಲ್ಲುಗಾವಲುಗಳಲ್ಲಿ ಮೇಯುವ ಆಕಳುಗಳು ಮತ್ತಿತರ ಜಾನುವಾರುಗಳು !

 
ಬದಲಾಗಲಿರುವ ಗ್ರಾಮದ ಸುಂದರ ದೃಶ್ಯಗಳನ್ನು ಮನದಲ್ಲಿ ಕಲ್ಪಿಸಿಕೊಳ್ಳುತ್ತಿದ್ದಹಾಗೆಯೇ , ಧನ್ಯತೆಯಿಂದ ಚೆಂನೆಯನಾಯಕರ ಮುಖ ನೋಡಿ ಸಂತೋಷದ ನಗೆ ಬೀರಿದ ರಾಮ .  
--------------------------------------------------------------------------------------------------------------------------
   ಆಧಾರ ;   ರಾಮಸಂದ್ರದ ಕೆರೆ ನಿರ್ಮಾಣ ಶಾಸನ 
------------------------------------------------------------------------------------------------------------------------------
 

RAMASAMUDRA

 “ Annayya , we have been riding since morning and I am tired. The horses need a rest too. Shall we halt for a while ?”

The younger brother asked the older one respectfully.

“I was thinking the same, Thammayya ” said the elder one , “….,,, this cool, brimming honda (water body) looks very inviting indeed ”

They got down , tied their horses to the stump of a huge tree and stretched their limbs savouring the cool breeze.

Just when they were about to dip their hands in the water, they heard a warning cry :
“ Stop ! Don't  drink that water !” A lad, waving his hands frantically,  was running towards them.

The brothers stopped short in surprise .

“Why ? Whats wrong in drinking  water from a public honda!” asked Thammayya.

The panting lad , widening his eyes , as big as eggs in horror , blabbered “ Its poisoned ! The water is poisoned !”

“What do you mean its poisoned !”demanded Annayya, “as we rode in we saw you filling two pots with this same water . Its good for you, poison for us ?”

“ No sir , this water I take will be  boiled with herbs and filtered by my mother before it is made fit for drinking.”

“ What ! You mean the entire village does this , everyday ?”

“No sir , my mother does it everyday and distributes it to all…..” The lad’s voice held both pride and some sadness.

“Two pots for the entire village ???”

“Sir , I carry two pots every trip and make numerous trips everyday . Our village has scarcity of water , Sir . ”

The brothers were surprised “ Only you ? ...why can’t the other villagers fetch their own water !”

“ Only I am strong enough to do it , Sir” Said the thin and frail looking lad, causing the brothers to smile.

“ You have come from far and look tired." Continued the lad, “Come with me to my home and refresh yourselves with good water .” As he spoke , his eyes wandered towards the horses.

The brothers were perplexed . It did not seem believable that , being so close to a brimming  and foaming honda , the village had water scarcity and that this lad’s mother was solely responsible for supplying good water to an entire village !

Was he joking or was he off his mind ? The brothers looked at each other meaningfully.

“ Please do come home ,Sirs . Your horses too can drink and rest there .”

“Where’s your village ? ”

“There !” He pointed towards a clump of dried coconut palms , a short distance away.

“ Why are those  groves so dried up ?”

“ You will know, Sirs, if you come to our place with me . ”

Determined to find out what exactly was happening in that village and to verify if this lad was telling them cock-and-bull stories , the brothers set out with him.

“Come on , Boy, get on  my horse, we’ll go !”Said Tammaiyya.

“Oh no Sir, I will walk , showing the way . We cannot burden the poor horse with the weight of two people and two filled pots !”

He walked ahead and the brothers rode behind him.

They went past dried up fields, grey and drooping coconut palms, withering orchards and stretches of waste land…….It seemed so unreal ! How could such a place even exist in Kukkala Nadu , the celebrated region of lush forests and  bountiful groves surrounded by scenic mountain ranges !

The village they entered was desolate . Neither cattle nor birds were seen . Not even a mangy dog to bark at strangers coming into the dusty streets lines with ruined huts.

The brothers were astounded to see such ghostly place, so close to the honda,  a good sized water body  !

The boy stopped at a run-down hut.

“ This is my home, Sirs !....Please come in , the horses can rest in the cow shed.”

 He helped them tie up the horses in the empty cow shed nearby and called into the house : “Amma ! Come, look here !  We have guests !”

“Guests ? Who would come to this village !” Voicing utter surprise, a lady came out to receive them .

“They are travelers from afar, Amma. They were about to drink the  water  from the honda, I stopped them and brought them home. Please serve them good water, while I fill the cattle trough for the horses….”

“Oh thank goodness, you stopped them !” exclaimed the lady, unrolling a mat for the brothers to sit . Then she handed them earthen bowls of water that was cool , sweet and filled with the fragrance of herbs.

As the lad took two pots of good water to the cattle shed, Annayya stopped him, “ Please don’t bother. We cannot let you pour that water , purified with much trouble, by your mother into the trough. Let the horses eat the feed in the bags we have hung near their mouths . They can have their drink at the  tank when we go on our way. “
“Oh no, Sir ! Did I not tell you that water is poisoned ! Its poison for the horses too. I cannot let them drink it !.....it has been such a long time since we saw animals around here …all our cattle gone …and my Kala…my Kala….” Suddenly the lad started weeping .

“ Don’t weep, Child !” Said his mother, hugging him. “Everything will be fine…good times will return....go now, give the horses this water….”

Wiping his eyes and nose with the edge of his dirty tunic, the lad took the clay pots and went towards the shed.

The lady could see that this little emotional outburst had startled the guests . 

    

She turned to them and spoke in a low voice : 

“ Rama has always loved animals, Sir . He loved taking care of and playing with not only our own cattle and fowls , but pitched in with caring for all the animals of the entire village. Kala was his own pet puppy , which mysteriously died one day after drinking the water from the river. It was a blow to him . And more was in store as more animals of the village started dropping dead after drinking the honda water, till none were left . It was such a big shock to Rama that he withdrew into himself becoming a lifeless rock……I am seeing a spark of life in him only today , lit by the sight of your fine horses …..”

“It is hard to believe that such a wonderful tank , deep and brimming with mirror like water,  is poisonous to drink !” said Annayya.

“ All that looks wonderful, may not necessarily be good , Sir” Sighed the lady, “ There was a time when this honda too had pure nectarine water , sparkling like crystal , but then…..” her voice trailed off , in sadness.

“….and then what happened, mother ?”asked Annayya

“….and then,quite suddenly , that crystal clear water started getting cloudy , as though with smoke , and then the fish in it started dying.  Then the birds and other  the creatures that lived on the banks, the plants and trees watered by it, all life started wilting and dying …  people using the water started developing unknown illnesses, becoming weak ….by the time our elders  woke up to the danger and issued a ban on using that water ,  it was too late. Our crops were  wilting. We tried to dig a well for use of the village. But  very little water was found and that too at very deep levels. It was not enough to sustain our crops and rains were erratic . With  no scope to grow food crops or maintain cattle, most people left the village to seek a living , however difficult,  in far away places . They left behind the old and the weak , promising to come and fetch them after they had found a means to live…..”

“ Oh what a terrible situation ! ......but, why are you still remaining in such a wretched place ….?”

“Rama and I chose to  stay behind to care for the old,  the weak and the ill people who were left behind . ”

                              

The brothers were greatly moved by the compassion and charitable motivation of the simple mother and son.

Just then, Rama came in from the shed announcing cheerfully : “Sir , the horses have finished eating their gram and also had a good drink .”

                           

His face was  glowing with happiness.

“Let them rest for a while, Sir….we have some gruel , please do share with us and take rest too ” Said the Lady, getting up

“Oh no ! That will not be necessary !” protested the brothers.

“Don’t be scared, Sirs !”Laughed Rama, “ the gruel is made from grain grown, harvested and stored long before the tank water turned poisonous !”

“ Its not that!” Said Thammaiya, hurriedly, “ ….we don’t want to take away what little you may have…..”

“Less or more, we have to share whatever we have with others !”piped up Rama, “that’s what Mother always says !”

Overwhelmed by the kindness shown by the Mother and Son, the brothers accepted the coconut shell cups filled with piping hot gruel saying :  “May all your troubles end soon , Mother.”

“ Lord Damodara Perumal will not let us down. “ Said the lady devoutly.

As they mounted their horses again, the brothers patted Rama’s head and shoulders affectionately “ Do not worry, Rama ! Continue your great service. Good will befall the good hearted.”

Rama lovingly caressed the horses and walked behind them till the edge of the village. 

“ Please visit again, Sirs !”

“We sure will, Rama !”

The trotting horses gathered speed and galloped away , while Rama stood there watching them vanish on the horizon.

Days passed by and the two horsemen who had promised to return someday never did. Rama expected to see them everyday when he went to fetch water, only to return disappointed.

One day, Rama’s Mother was in deep thought . None of the village folk who left the village had returned yet. She was worried about how long her saved stock of grains and herbs would last . Maybe  for  a fortnight more ….after that , what ?

Suddenly she became aware of Rama , running in , panting and babbling “Amma…Amma…”

“What !...oh Rama !  Why are you in such a  state ! What happened ? Is Thathayya alright ? Did you give him gruel ?”

 “ Amma…Thathayya is coming here …bringing someone with him to our house ! Look !”

Surprised, the lady peeped out .  A  fine looking gentleman, clearly a man of some importance, was walking towards her house with Thathayya !  Seeing him, the poor lady was overcome with confusion and anxiety.

“The Senabova of our Nadu, Keshava Devanna, wants to talk with you, mother.” Said Thathayya , arriving at her doorstep.

     

The  gentleman  greeted her warmly and said : “ We heard about the misfortune that has befallen your village, mother. And of the service you and your son are rendering. It is a matter of great concern and astonishment that Kukkala Nadu, administered by Kadeya Nayaka , the able Samantha of Veera Ballala Maharaja, a land  so famous for its boundless, honey-sweet  fresh water resources, lush vegetation and beautiful mountain ranges surrounding it , should have a village like yours where the very water is poison !”

“What can I say  about this strange curse, Sir ! Who would have imagined that our crystal clear honda , our life blood once, would become our worst nightmare, sparing not even a rooster to crow at dawn !” Sighed the lady , and proceeded to tell him all that had come to pass in that little hamlet in recent times.

 “ It is indeed very sad to hear all this, mother. I have received orders to bring whatever relief is needed for your village  right now. Sacks of grain and barrels of good fresh water have been brought in carts to the village  outskirts. I need your permission to bring and store them in your house .”

This sudden, unexpected offer stunned the lady . Overwhelmed with emotion, she could hardly speak coherently . “ Thank you so much, Sir ! I don’t know how to show my immense gratitude for the good Nayaka who noticed the problem of some small village in the corner of his land and extended this  help !”

“ Additionally, some plans have been charted out” Informed the gentleman, “One is to find the cause of the poisoning of the tank water and correct it ;  the other is to dig a new tank, a Kere, for this village's use. Till these projects are successfully completed, it has been suggested that those of you still remaining here should be given a proper and safe home in the town . You can return later when things have become normal here and flourishing again". 

Rama’s mother did not respond immediately. It seemed like she was either thinking  it over or was hesitating to say what she felt.

Finally she spoke , squirming uneasily : “Sir , I have no words to praise the noble mind of the Nayaka. May God give him long life ! ….But .....I don’t know how long it may take for all these  works to be completed . If people get used to city life , whoever they may be , going back to  the village routines may not seem very attractive. Already our village wears an abandoned look . If we, the few remaining here , too leave , this agricultural village will turn into a complete wasteland. If all farmers turn city dwellers of different professions, who will grow food for all ?”

“So what do you advise , mother?”

“Kindly don’t  get offended, Sir. May all  your excellent plans be completed successfully . May all those who left this village seeking livelihood return to the rejuvenated homeland. May our village fields turn green and gold with abundant crops again……please begin your work, Sir. We will stay back , my son and I will  continue taking care of the old and needy……..Thathayya, what are your thoughts ?”

“I agree with you "nodded the old man." Our village should remain  agricultural . Only if we continue living here, those who left to seek livelihood elsewhere will have a reason to return.”

The other elders in  the village were also consulted and everybody agreed with the plan . 

Soon, work started on the proposed projects. 

The cause of the poisoning of the honda was soon discovered.  A Vaidya , who had discovered certain new medical recipes for curing certain maladies of the heart and brain , had set up his workshop near the foot hills, very close to the  water source that was feeding the honda .  He was using minute extracts from plants like Oleander( arali), datura , milkweed ( ekka), cascabela ( kadu ganigale), castor, gulaganji etc , in addition to arsenic and mercury  for his medicines and was carelessly dumping the the waste products into the soil around the spring . And toxins were seeping into the water , that came to the honda.  The Vaidya industrialist was taken to task and educated on safe disposal of his waste products. Then the honda itself was  drained and desilted . It was hoped a good monsoon would replenish it. 

Simultaneously began the more important job of excavating a new tank for the village.  Water diviners chose a good spot , just a short distance away from the village .  Laborers were brought from towns and housed in tents at the village outskirts. Supplies of food grains, vegetables and water  were also sent to them and to the villagers periodically.

Rama’s mother started cooking for everyone, on a large scale  , with Rama too helping her. 

Rama had no more need to fetch endless pots of water everyday.  Freed from that task , he took active interest in the ongoing projects , giving a helping hand wherever needed. Moreover, there were now a couple of cows ,calves and chicken too in the tent city to his great delight. 

He didn't however forget to keep a look out for the two brothers who had promised to visit again.

One day, while going by the old honda, he noticed a cloud of dust approaching and , as his heart thudded in anticipation, caught sight of a man riding a horse straight  towards him . Yes ! It was Thammayya , the younger of the two brothers who had visited before !

“Rama !” Called out Thammayya , dismounting .

“Sir ! You’ve come ! Where is Annayya ? And why did you come to this honda again ?”

“Easy, boy ! One thing at a time !”Laughed Thammayya. “Annayya  has gone somewhere else on work. I came here because I knew you would be here fetching water !”

“I don’t need to fetch this water any longer, Sir !”

“Oh ? Then how….?”

Rama told him in one long stretch everything that had transpired in the village and how they were looking forward to seeing their almost dead village revived.

“Like Magic ! And you will not believe the size of the  new tank getting excavated. Not one or two, but five springs have already been opened up !”he said with happiness, “Come home, Sir . Mother will be happy to see you …and you can also see the work happening here”

The aroma of food cooking on the huge stove pervaded the street . Rama’s mother was very glad to see Thammayya and promptly invited him to sit down for a meal. 

“ The first time you came, I could only serve you gruel. Today I have made Ragi Balls and  vegetable palyas. Please have a good lunch , Rama will give you company …. Rama must have told you about what is  happening in our village now ! All by the grace of Damodara Perumal ! What else can I say , Sir !”

Suddenly, the Senabova entered , wringing his hands and muttering anxiously.

“Ayyo ! What is the meaning of this ! There we were, awaiting your arrival with due honours at the village entrance ….and you are sitting here, Nayaka !”

When they heard him address Thammayya as “Nayaka” , Rama and his Mother were dumbstruck.

“What ? Nayaka ?”

“Yes !  Samantha Kadeya Nayaka, who administered Kukkala Nadu for Veera Ballala Maharaja, has retired happily now , entrusting administration to his sons Mayileya Nayaka and Chenneya Nayaka …. ! “

“This Thammayya…..” Rama rolled his eyes in wonderment looking at Chenneya Nayaka , seated on the mat next him without a trace of pride or pomp , enjoying the ragi balls.

“ Fool !”growled the Senabova in rage  “Not only do you presume to sit equal with the Nayaka, you also boldly call him Thammayya!”

Rama and his mother went white in the face with terror.  

“ After getting to know of the pitiable condition of your village, the Nayakas planned to do something about it and after consulting the best advisors , they drew up this plan of finding the cause of the water poisoning and stopping it and of excavating a new tank. They had ordered that nothing be spoken of it till everything is completed ….but before that ….”

“Peace ! Peace, Senabova….” Said Chenneya Nayaka, smiling “ I have never forgotten how Rama and his Mother had saved us from the poisoned water and served us hot gruel so lovingly. I wanted to meet them privately as a friend, hence came by the honda  where I was sure to find Rama….you please go and wait at the site of the New Tank , Senabova. I shall finish my meal and join you soon.” He nudged Rama , who sat petrified “ Go on Rama, eat your lunch , don’t you enjoy eating with Thammayya?” he laughed.

When they arrived at the tank in progress, the labourers who were singing as they worked, straightened up and saluted the Nayaka. 

The size of the tank pleased the Nayaka as he visualized it brimming with water fed by the numerous springs and rain .

Anantanna, the Senabova’s son came up to him to show the script getting readied to be inscribed on stone , regarding the tank.

“Just tell  me the most important points” Said the Nayaka .

“ Mayileya Nayaka and Chenneya Nayaka, devotees of the divine feet of Lord Damodara Perumal…..”  began Anantanna.

“ There’s one detail I want you to add,” Instructed the Nayaka, “That,  this Ramasamudram should forever exist as a bountiful tank , as an aspect of Ganga Devi, nourishing all living things on Earth, all celestials, all humans, all wild animals, all cattle, all birds till infinity.”

The Senabova squeezed in a word “….and 3000 Hons for charity and ….”

“Enough Senabova, leave the rest to your Son , he will take care of it. …but don’t forget to include the detail I just gave. ''

      

He turned to Rama and smiled : “Rama, the responsibility of supplying good water to the entire village will now be Ramasamudram’s ! Henceforth and forever, this Ramasamudram will take care of all the animals and birds that you so love !”

Ramasamudram Tank brimming with crystal clear sweet water....

Abundant crops and greenery all over....

Songs of happy birds heralding each dawn …

             

With visions of a golden future wafting before his eyes, Rama looked at the Nayaka and smiled back.

----------------------------------------------------------------------------------------------------------------

Based on Ramasamudra lake inscription .

-------------------------------------------------------------------------------------------------------------------------------------


No comments:

Post a Comment