ತೊಟ್ಟಿಲು ಶಾಸ್ತ್ರದ ಒಂದು ಹಳೆಯ ಹಾಡು.
ಸಂಗೀತವೇ ಜೀವನದ ಸಾರ. ಮನಸ್ಸಿಗೆ ಶಾಂತಿಯನ್ನು ನೀಡಿ , ತನುಮನ ತಣಿಸುವ ಅಮೃತ ಸಂಗೀತ. ತಾಯಿಯ ಹೊಟ್ಟೆಯಲ್ಲಿರುವಾಗಲೇ ಮಗು ಸಂಗೀತವನ್ನು ಗ್ರಹಿಸಿಕೊಳ್ಳುವ ಶಕ್ತಿಯನ್ನು ಪಡೆದಿರುತ್ತದೆ.ಹಿತವಾದ ಶಾಂತವಾದ ಸಂಗೀತ ಮಗುವಿಗೆ ವಿಶ್ರಾಂತಿಯನ್ನು ಕೊಟ್ಟು ಅದರ ಮನಸ್ವಾಸ್ಥ್ಯಕ್ಕೂ ಅಸ್ತಿಭಾರವಾಗುತ್ತದೆ. ತಾಯಿಯ ಮೂಲಕ ಮಗುವೂ ಕೇಳಬೇಕೆಂದೇ ಶ್ರೀಮಂತದ ಸಮಯದಲ್ಲಿ ಹಿತವಾದ ಸಾಮ ವೇದವನ್ನು ವೀಣೆಯಲ್ಲಿ ನುಡಿಸುವುದು ಸಂಪ್ರದಾಯ. ಹುಟ್ಟಿದ ಮೇಲಂತೂ ಲಾಲಿ ಹಾಡು, ಸ್ನಾನಕ್ಕೆ ಹಾಡು, ಊಟಕ್ಕೆ ಹಾಡೆಂದು, ಜೀವನದುದ್ದಕ್ಕೂ ಹಾಡುಗಳನ್ನು ಕೇಳುತ್ತಲೇ ಬೆಳೆಯುತ್ತದೆ ಮಗು.
ತೊಟ್ಟಿಲು ಶಾಸ್ತ್ರದಂದು, ಗುಂಡುಕಲ್ಲನ್ನು ಮಗುವಾಗಿ ಭಾವಿಸಿ ಅದಕ್ಕೆ ಸ್ನಾನ ಮಾಡಿಸಿ, ಒಳ್ಳೆಯಲ್ಲಿ ಹಾಲು ಕುಡಿಸಿ, ಪೌಡರ್ ಒತ್ತಿ, ಕಾಡಿಗೆ ಲೇಪಿಸಿ, ರೆಶ್ಮೆ ಬಟ್ಟೆಯಲ್ಲಿ ಸುರುಳಿ ಸುತ್ತಿ ತೊಟ್ಟಿಲಿಗೆ ಹಾಕಿದನಂತರವೇ ಮಗುವನ್ನು ಅದರ ಪಕ್ಕದಲ್ಲಿ ಮಲಗಿಸುವುದು ಹಳೆಯ ಕಾಲದಿಂದ ಬಂದಿರುವ ಒಂದು ಪದ್ದತಿ. ಮಗು ಗುಂಡು ಕಲ್ಲಿನ ಹಾಗೆ ಆರೋಗ್ಯವಾಗಿ ದೀರ್ಘ ಕಾಲ ಬಾಳಿ ಬದುಕಬೇಕೆಂಬ ಹಾರೈಕೆಯ ಕುರುಹು ಈ ಪದ್ದತಿ.
ಅಡಿಗೆ ಮಾಡುತ್ತಲೇ ರತ್ನಮ್ಮನವರು ಗುನುಗಿದ ಹಳೆಯ ಹಾಡು ಕೇಳಿ ನನಗೆ ಬಹಳ ಖುಷಿಯಾಯಿತು. ಗುಂಡುಕಲ್ಲನ್ನು ತೊಟ್ಟಿಲಿಗೆ ಹಾಕುವುದನ್ನು ಚಿತ್ರಿಸುವಂತಹ ಈ ಹಾಡಲ್ಲಿ ತುಪ್ಪವನ್ನು ನುಂಗುವ ಬಾಣಂತಿಯನ್ನು ತಮಾಷೆ ಮಾಡುವಂತಹ ಕೊನೆಯ ಸಾಲು ಬಹಳ ಹಾಸ್ಯಕಾರಕ. ಓದಿ ನೀವೂ ಆನಂದಿಸಿ.
ಜೋ ಜೋ ಜೋ ಜೋ
ಜೋ ಗುಂಡ ಲಂಡ,
ಮಂಡೇಲಿ ಕಣಕವ ಮರ್ಧಿಸುವ ಗುಂಡ,
ಗುಂಡಪ್ಪ ನಿನಗ್ಯಾರೂ ಸರಿ ಇಲ್ಲ ಕಂಡ್ಯಾ,
ಜೋ ಜೋ ಜೋ !
ಕಣ್ಣು ಕಿವಿ ಮೂಗು ಮಾಡವ್ನೆ ನಿಮ್ಮಪ್ಪ,
ಆರು ಕಾಸಿಗೆ ಕೊಂಡವ್ವ್ಳೆ ನಮ್ಮಮ್ಮ,
ಆರು ಕಾಸಿಗೆ ಕೊಂಡ ನಮ್ಮಮ್ಮಗೆ
ಖಾರವಾಗಿ ಚಟ್ಟನಿಯ ಅರಿಯ ಬಲ್ಲೆ,
ಜೋ ಜೋ ಜೋ!
ಹೆತ್ತ ತುಪ್ಪವ ತಂದು ದೊನ್ನೆಯಲಿಟ್ಟು,
ಪತ್ಯ ಮಾಡಮ್ಮ ಬಾಣಂತಿ ಅಂದರೆ,
ಕಂಡದ್ದು ಕಾಣದಾಗೆ ಸಾಗಿಸಿದಳು
****************************************
No comments:
Post a Comment