Thursday, December 12, 2019

ಐ ಲವ್ ಬೆಂಗಳೂರು ! / I love Bangalore !

ಐ ಲವ್ ಬೆಂಗಳೂರು !
" ಮೆಗನ್ ರೆಡಿಯಾದ್ಮೇಲೆ  ಓರಿಯೋನ್ ಮಾಲ್ಗೆ ಕರಕೊಂಡು ಹೋಗೋಣ ತಾತ ! "
ಅತಿಥಿಯಾಗಿ ಬಂದಿದ್ದ ಹೊಸ ಸ್ನೇಹಿತಿಗೆ ನಮ್ಮ ಊರ ವೈಭವಗಳನ್ನೆಲ್ಲ ಒಮ್ಮೆಗೇ ತೋರಿಸಿಬಿಡಬೇಕೆಂಬ ಆತುರ ಮೇಘನಾಳಿಗೆ !
" ಛೆ ! ವಿದೇಶದಿಂದ ಬಂದಿರೋ ಹುಡುಗಿ ! ಅವಳಿಗೆ ನಮ್ಮ ಕಲಾಚಾರ , ಸಂಸ್ಕೃತಿ ಎಲ್ಲಾನೂ ತೋರಿಸೋದು ಬಿಟ್ಟು ಮಾಲ್ಗೆ ಕರಕೊಂಡು ಹೋಗೋದೇ ? " ಎಂದರು ಅಜ್ಜಿ.
" ನಮ್ಮ ಮಲ್ಲೇಶ್ವರದಲ್ಲಿ ನಡೀತಿರೋ ಕಡ್ಲೇಕಾಯಿ ಪರಿಷೆಗೆ ಕರಕೊಂಡು ಹೋಗೋಣ!"
ತಾತನ ಐಡಿಯಾ ಕೇಳಿ ಮೇಘನಾ ಮುಖ ಸೊಟ್ಟ ಮಾಡಿಕೊಂಡಳು .
ಅಷ್ಟು ಹೊತ್ತಿಗೆ ತಯಾರಾಗಿ ಬಂದು ನಿಂತ ಮೆಗ್ " ವಾಟ್ ಇಸ್ ಕಡ್ಲೇಕಾಯಿ ಪರಿಷೆ ? " ಎಂದು ಪ್ರಶ್ನಿಸಿದಳು .
" ಓ ಮೆಗ್ ! ರೆಡಿನಾ ? ಕಡ್ಲೇಕಾಯಿ ಪರಿಷೆ ಅಂದ್ರೆ ಗ್ರೌಂಡ್ ನಟ್  ಫೆಸ್ಟಿವಲ್ ! ಪ್ರತಿ ವರುಷ ಈ ಸೀಸನ್ನಲ್ಲಿ ನಡೆಯೋ ಹಬ್ಬ ! ನೀನೇ ಹೇಳು ! ಮಾಲ್ಗೆ ಹೋಗೋಣವೆ ಇಲ್ಲ ಗ್ರೌಂಡ್ ನಟ್ ಫೆಸ್ಟಿವಲ್ಗೆ ಹೋಗೋಣವೆ ? " ಅವಳನ್ನೇ ಕೇಳಿದರು ತಾತ .
" ವಾವ್ ! ಐ ವಾಂಟ್ ಟು ಗೋ ಟು ಗ್ರೌಂಡ್ ನಟ್ ಫೆಸ್ಟಿವಲ್ ! ಪಂಪ್ಕಿನ್ ಫೆಸ್ಟಿವಲ್ , ಎಲಿಫೆಂಟ್ ಗಾರ್ಲಿಕ್ ಫೆಸ್ಟಿವಲ್ , ಟ್ಯೂಲಿಪ್ ಫೆಸ್ಟಿವಲ್ ಅಂತ ನಮ್ಮೂರಲ್ಲೂ ಆಯಾ ಸೀಸನಲ್ಲಿ ಫೆಸ್ಟಿವಲ್ ಆಚರಿಸ್ತೀವಿ ! ವಾವ್ ! ಕಡಲೇಕಾಯಿ ಪರಿಷೆ ! ವಾಟ್ ಫನ್! "
ಖುಷಿಯಿಂದ ಚಪ್ಪಾಳೆ ತಟ್ಟಿದಳು ಮೆಗ್ .


                                                                               
ರಸ್ತೆಯುದ್ದಕ್ಕೂ ಸಣ್ಣ ಸಣ್ಣ ಗುಡ್ಡಗಳಂತೆ ಕಂಡುಬಂದ ಕಡಲೆ ಕಾಯಿ ರಾಶಿ ! ಟೆಂಪಲ್ ಸ್ಟ್ರೀಟಿನ ಎರಡು ಬದಿಯಲ್ಲೂ ಸಾಲುಗಟ್ಟಿದ್ದ ತಿಂಡಿ ತಿನಿಸಿ, ವಸ್ತ್ರಾಭರಣ , ಅಲಂಕಾರದ ವಸ್ತುಗಳು , ಮಕ್ಕಳ ಆಟಿಕೆಗಳು ಮುಂತಾದ  ಬೇಕಾಗುವ, ಬೇಡದ ವಸ್ತುಗಳನ್ನೂ ಕೂಡ ವ್ಯಾಪಾರ ಮಾಡುತ್ತಿದ್ದ ತಾತ್ಕಾಲಿಕ ಅಂಗಡಿಗಳು ! ಧ್ವನಿವರ್ಧಕಗಳಿಂದ ಗಟ್ಟಿಯಾಗಿ ಹೊರಹೊಮ್ಮಿದ ಸಿನಿಮಾ ಹಾಡುಗಳ ಗದ್ದಲ ! ಎತ್ತ ತಿರಿಗಿದರೂ  ಗ್ರಾಮೀಣ ಜಾತ್ರೆಯ ವಾತಾವರಣ !

ಜನಜಂಗುಳಿಯಲ್ಲಿ ನುಗ್ಗಿ ನುಸುಳಿ ನಡೆಯುತ್ತ ಬೆರಗುಗಣ್ಣುಗಳಿಂದ ಎಲ್ಲವನ್ನೂ ನೋಡುತ್ತ ಅಜ್ಜಿ ತಾತರೊಂದಿಗೆ ನಡೆದರು ಹುಡುಗಿಯರು .


                                                                               
" ಓ ! ಸೋ ಮೆಜೆಸ್ಟಿಕ್ ! ವಾಟ್ ಇಸ್ ದಿಸ್? " ಕಾಡುಮಲ್ಲೇಶ್ವರನ ಅಲಂಕರಿಸಲ್ಪಟ್ಟ ತೇರನ್ನು ಕಂಡು ಅಲ್ಲೇ ನಿಂತುಬಿಟ್ಟಳು ಮೆಗ್ .
" ಇದು ದೇವರ ತೇರು ! ಟೆಂಪಲ್ ಕಾರ್ ! ಉತ್ಸವಗಳ ಸಮಯ ದೇವರನ್ನು ಇದರಲ್ಲಿ ಕೂರಿಸಿ  ಬೀದಿಗಳಲ್ಲಿ ಪ್ರೊಸೆಷನ್ ಮಾದಿಸ್ತಾರೆ  ! " ಎಂದರು ಅಜ್ಜಿ .
" ಫೆಂಟಾಸ್ಟಿಕ್ !" ಮೆಗ್ ತಲೆದೂಗಿದಳು .
" ಕಾಡು ಮಲ್ಲೇಶ್ವರನ ಗುಡಿ ಅಂತಾರಲ್ಲ ! ಊರೊಳಗೆ ಎಲ್ಲಿಂದ ಕಾಡು ಬಂತು? " ಮೇಘನಾ ಲವಲವಿಕೆಯಿಂದ  ತಾತನನ್ನು ಪ್ರಶ್ನಿಸಿದಳು .
" ಊರೊಳಗೆ ಕಾಡು ಬರಲಿಲ್ಲಮ್ಮ ! ಕಾಡೊಳಗೆ ಊರು ಬಂದಿದೆ ! " ನಗುತ್ತ ನುಡಿದರು ತಾತ .
" ಅಂದ್ರೆ ?? "
" ಅಂದ್ರೆ , ಹಿಂದೆ ಈ ಪ್ರದೇಶವೆಲ್ಲ ಕಾಡಾಗಿತ್ತು. ಅಲ್ಲಿ  ಗುಡ್ಡದ ಮೇಲೆ ಈಶ್ವರನ ದೇವಸ್ಥಾನ ಇದ್ದುದರಿಂದ ಈ ದೇವರಿಗೆ ಕಾಡು ಮಲ್ಲೇಶ ಅಂತ ಹೆಸರು ಬಂತು. ಕಾಡು ಮಲ್ಲಿಕಾರ್ಜುನ ಅಂತಲೂ ಹೇಳ್ತೀವಿ ! "
" ಕಾಡು ಸರಿ ! ಮಲ್ಲೇಶ್ವರ  ಯಾಕೆ ? " ಮೇಘನಾಳ ಮತ್ತೊಂದು ಪ್ರಶ್ನೆ !
" ನೂರಾರು ವರುಷಗಳ ಹಿಂದೆ ಕಾಡಲ್ಲಿದ್ದ ಒಂದು ಪುಟ್ಟ ವಾಸಸ್ಥಳಕ್ಕೆ ಮಲ್ಲಪುರ ಅಂತ ಹೆಸರಿತ್ತಂತೆ.  ಹಾಗಾಗಿ  ಮಲ್ಲಪುರದ ಈಶ್ವರ  ಮಲ್ಲೇಶ್ವರನಾದ ."
" ಇಂಗ್ಲೀಷಲ್ಲಿ ಹೇಳು ತಾತ ! "
" ಎಲ್ರೂ ಇಂಗ್ಲಿಷಲ್ಲೇ ಮಾತಾಡ್ತಿದ್ರೆ ನಿನಗೆ ಕನ್ನಡವೇ ಮರೆತು ಹೋಗತ್ತೆ ಪುಟ್ಟಿ ! " ಎಂದ ತಾತ ನಕ್ಕರು .
" ಈ ಕಥೆಯೆಲ್ಲ ಮೆಗ್ಗಿಗೆ ಅರ್ಥವಾಗಬೇಕಲ್ಲ ! ಅದಕ್ಕೆ  ... "
" ಒಹ್ ! ನೋ ಮೇಘನಾ ! ಐ ವಿಲ್ ಟ್ರೈ ಟು ಅಂಡರ್ಸ್ಟ್ಯಾಂಡ್ ಕನ್ನಡ ! " ಮೆಗ್ ಉತ್ಸಾಹದಿಂದ ನುಡಿದಳು .
" ಅರ್ಥವಾಗ್ದಿದ್ರೆ ಇಂಗ್ಲೀಷಲ್ಲೂ ಹೇಳ್ತೀನಿ ಮೆಗ್ ! ಸಂಕೋಚ ಪಟ್ಕೊಳ್ದೆ ಕೇಳು ! " ತಾತ ಸಂತೋಷದಿಂದ ನುಡಿದರು .
" ಓಕೆ ಥಾಥಾ ! ಒನ್ ಕ್ವೆಶ್ಚನ್ ! ವಾಟ್ ಇಸ್ ಪುಟ್ಟಿ ? "
" ಪುಟ್ಟಿ ಅಂದ್ರೆ ಡಿಯರ್ ಅಂತ ! "

" ಕಾಡಲ್ಲಿ ಗುಡಿಯನ್ನ ಯಾರು ಕಟ್ಟಿಸಿದ್ರು ತಾತ ? " ಮೇಘನಾಳ ಗಮನ  ಮತ್ತೆ ಗುಡಿಯ ವಿಷಯಕ್ಕೆ  ತಿರುಗಿತು .
" ಛತ್ರಪತಿ ಶಿವಾಜಿಯ ತಮ್ಮ ಏಕೋಜಿ ಕಟ್ಟಿಸಿದ ಅಂತ ಕೆಲವರು ಹೇಳ್ತಾರೆ . ಮೊದಲೇ ಇದ್ದ ಗುಡಿಗೆ ಆತ ಆವರಣ ಗೋಡೆಗಳನ್ನ ಮಾತ್ರ ವಿಸ್ತರಿಸಿ ಕಟ್ಟಿಸಿದ ಅನ್ನೋದು ಇನ್ನೂ ಕೆಲವರ ಅಭಿಪ್ರಾಯ ! ಉದಾರಗುಣದಿಂದ ಕೂಡಿದ ಎಲೆ ಮಲ್ಲಪ್ಪ ಶೆಟ್ಟಿ ಎಂಬ ದಾನಿಯೊಬ್ಬರು 1898 ಇಸವಿಯಲ್ಲಿ ಈ ಗುಡಿಯ ಜೀರ್ಣೋದ್ದಾರವನ್ನ ಮಾಡಿಸಿದ್ರು ! "
" ಏಕೋಜಿ ಮರಾಠಾ  ರಾಜವಂಶದವನಲ್ವೇ ? ಕರ್ನಾಟಕಕ್ಕೇ ಅದ್ರಲ್ಲೂ ಬೆಂಗಳೂರಿಗೆ ಬಂದು ಈ ಗುಡಿಗೆ ಯಾಕೆ ಸೇವೆ ಮಾಡಿದ ? "  ಮೇಘನಾಳ ಪ್ರಶ್ನೆಗಳಿಗೆ ಅಂತ್ಯವೇ ಇಲ್ಲ !
" ಕರ್ನಾಟಕ ರಾಜ್ಯ ಇತ್ತೀಚಿಗೆ 1956ಲ್ಲಿ ತಾನೇ ಸ್ಥಾಪನೆಯಾಯಿತು ? ಅದಕ್ಕೂ ಬಹಳ ಕಾಲದ ಹಿಂದೆ ನಮ್ಮ ಅಖಂಡವಾದ ಕನ್ನಡ ಪ್ರದೇಶ ಅನೇಕ ರಾಜವಂಶದವರ ಆಡಳಿತದಲ್ಲಿತ್ತು ... "
" ಗಂಗ ಕಡಂಬಾದಿ ಚಾಲುಕ್ಯ ರಾಷ್ಟ್ರಕೂಟ
  ಯಾದವ  ಬಲ್ಲಾಳ ವಿಜಯನಗರ ವೀರರ
  ಗತ ವೈಭವ ಕಾಣುವ .... '' ಇದ್ದಕ್ಕಿದ್ದಂತೆ ಮೇಘನಾ ರಾಗವಾಗಿ ಗುನುಗ ತೊಡಗಿದಳು .
" ವಾಟ್ ವಾಸ್ ದಟ್ ? " ಮೆಗ್ ಹುಬ್ಬೇರಿಸಿದಳು .
"  ಡೈನಾಸ್ಟಿಸ್  ದಟ್ ರೂಲ್ಡ್ ಕರ್ನಾಟಕಾ ಸೆಂಚುರೀಸ್ ಅಗೋ ! ರಾಜ್ಯೋತ್ಸವ ದಿನಾಚರಣೆಯಂದು ನಮ್ಮ ಸ್ಕೂಲಲ್ಲಿ ಒಂದು  ದೃಶ್ಯ ರೂಪಕ ಪ್ರೆಸೆಂಟ್ ಮಾಡಿದ್ವಿ ! 'ಕನ್ನಡದ ಮಕ್ಕಳೆಲ್ಲ ಒಂದಾಗಿ ಬನ್ನಿ'  ಅನ್ನೋ ಈ ಹಾಡನ್ನೇ ಹಾಡಿದ್ವಿ ."ಎಂದು ಹೆಮ್ಮೆಯಿಂದ ಮೇಗನ್ನಿಗೆ ವಿವರವಾಗಿ ತಿಳಿಸಿದಳು ಮೇಘನಾ.
"ಸರಿ ! ಏಕೋಜಿ ಹೇಗೆ ಬೆಂಗಳೂರಿಗೆ ಬಂದ ? ಹೇಳು ತಾತ !" ಎಂದು ಮತ್ತೆ ಎಕೋಜಿಯ ವಿಷಯ ತೆಗೆದಳು.
" ಕನ್ನಡ ದೇಶವನ್ನ ಅನೇಕ ರಾಜವಂಶದವರು ಆಳ್ತಿದ್ರು ಅಲ್ವೇ ? ಹಾಗಾಗಿ ನಮ್ಮ ಬೆಂಗಳೂರು ಒಮ್ಮೆ ಬೀಜಾಪುರ್ ಸುಲ್ತಾನನ ಆಡಳಿತದಲ್ಲಿತ್ತು. ಸಲ್ತಾನನ ಮಹಾದಂಡನಾಯಕನಾಗಿದ್ದ ಶಿವಾಜಿಯ ತಂದೆ  ಶಹಾಜಿ ರಾಜೇ ಬೊಂಸ್ಲೆಯವರಿಗೆ ಬೆಂಗಳೂರನ್ನು ಜಾಗೀರಾಗಿ ಕೊಡಲಾಗಿತ್ತು. ಅವರನಂತರ ಬೆಂಗಳೂರು ಅವರ ಕಿರಿಯ ಮಗ ಏಕೋಜಿಯ ಪಾಲಿಗೆ ಬಂತು . "
" ಓ ! ಈಗ ಅರ್ಥವಾಯಿತು ! " ಮೇಘನಾ ತಲೆತೂಗಿದಳು .
" ಥಾಥಾ ! ಇದು ತುಂಬಾ ಓಲ್ಡ್ ಟೆಂಪಲ್ಲಾ ? " ಮೆಗ್ ಅನುಮಾನದಿಂದ ಕೇಳಿದಳು .
" ಹೌದು ಮೆಗ್ ! ಇದು ಹದಿನೈದನೇ ಶತಮಾನಕ್ಕೆ ಸೇರಿದ ಗುಡಿ ಅಂತಾರೆ ! ಕೆಲವರು ಇಲ್ಲ ಹದಿನಾರು ಇಲ್ಲವೇ  ಹದಿನೇಳನೇ ಶತಮಾನದ್ದು ಅಂತಲೂ ಹೇಳ್ತಾರೆ ! ಹೇಗಿದ್ರೂ   ಕಾಡು ಮಲ್ಲೇಶ್ವರನ ಗುಡಿ ಬಹಳ ಪುರಾತನವಾದ ಗುಡಿ ಅನ್ನೋದು ಮಾತ್ರ ನಿಜ ."
" ದಿಸ್ ಟೆಂಪಲ್ ಇಸ್ ಫೈವ್ ಟು ಸಿಕ್ಸ್ ಹಂಡ್ರೆಡ್ ಇಯರ್ಸ್ ಓಲ್ಡ್ ! ವಂಡರ್ಫುಲ್ ! " ಮೆಗ್ ವಾಸ್ತವವಾಗಿಯೇ ಮೂಗಿನ ಮೇಲೆ ಬೆರಳಿಟ್ಟಳು !

 " ಇನ್ನೊಂದು  ಹಳೆ ಟೆಂಪಲ್ ಬಗ್ಗೆ ಹೇಳ್ತೀನಿ ಕೇಳು ! ಒಂಬತ್ತನೇ ಶತಮಾನದಲ್ಲಿ ಬಾಣರ ವಂಶದ ರಾಜ ವಿದ್ಯಾಧರನ ರಾಣಿ ರತ್ನಾವಳಿ ಎಂಬೋಳು ನಂದಿ ಗ್ರಾಮದಲ್ಲಿ ಭೋಗನಂದೀಶ್ವರನ ಗುಡಿಯನ್ನ ಕಟ್ಟಿಸಿದ್ಲು ! ಕರ್ನಾಟಕದ ಅತಿ ಪುರಾತನವಾದ ದೇವಾಲಯಗಳಲ್ಲಿ ಇದೂ ಒಂದು ! "
" ಓ ಮೈ ಗಾಡ್ ! ತೌಸನ್ ಇಯರ್ಸ್ ಓಲ್ಡ್ ! ಆ ಟೆಂಪಲ್ ಇನ್ನೂ ಇದೆಯಾ ಥಾಥಾ ? " ಮೆಗನ್ ಬೆರಗಿನಿಂದ ಕಣ್ಣು ಬಾಯಿ ಬಿಟ್ಟಳು .
" ಹೌದು ಮೆಗ್ ! ನಮ್ಮ ದೇಶಕ್ಕೆ ಸಾವಿರಾರು ವರುಷಗಳ ಇತಿಹಾಸವಿದೆ ! ರಾಜಮಹಾರಾಜರು ತಮ್ಮ ಕಾಲದಲ್ಲಿ ತಾವು ಮಾಡಿದ ಕೆಲಸಗಳ ಬಗ್ಗೆ ಅವರುಗಳು ಕಟ್ಟಿಸಿದ ದೇಗುಲಗಳಲ್ಲಿ, ಕೋಟೆಗಳಲ್ಲಿ , ಮತ್ತು ಕೆರೆಗಳಲ್ಲಿ  ಕುರುಹುಗಳನ್ನು ಬಿಟ್ಟು ಹೋಗಿದ್ದಾರೆ..... "
" ವಂಡರ್ಫುಲ್ ! "
" ಏನು ಕುರುಹುಗಳು ತಾತ ? "
" ಹೇಳ್ತಿನಿ ಪುಟ್ಟೀಸ್ ! ತಾವು ಮಾಡಿದ ಕೆಲಸಗಳ ಬಗ್ಗೆಯ ಡಾಕ್ಯುಮೆಂಟ್ಗಳನ್ನ ಕಲ್ಲುಗಳಲ್ಲಿ ಕೆತ್ತಿಸಿಟ್ಟು ಹೋಗಿದ್ದಾರೆ ! ಅಂತಾ ಕಲ್ಲುಗಳು ಇಂದಿನ ವರೆಗೆ ನೆಲೆಸಿದ್ದು ಆ ರಾಜರ ಕಥೆಗಳನ್ನೂ ನಮ್ಮ ಇತಿಹಾಸವನ್ನೂ ನಮಗೆ ಹೇಳ್ತಿವೆ ! ಅಂತಾ ಕಲ್ಲುಗಳನ್ನ ಶಿಲಾಶಾಸನ ಅಂತ ಹೇಳ್ತಿವಿ !"
" ನಾವೂ ಅಂತ ಒಂದು ಕಲ್ಲನ್ನ ನೋಡ್ಬೇಕು ತಾತ ! " ಮೇಘನಾ ತುದಿಗಾಲಲ್ಲಿ ನಿಂತಳು .
" ಎಸ್ ! ವೀ ಮಸ್ಟ್ ಸೀ ಎ ಶಾಸನಾ !" ಮೆಗ್ ಉತ್ಸಾಹದಿಂದ ಕುಣಿದಳು .


                                                                            

ಮಾತನಾಡುತ್ತಲೇ ಜಾತ್ರೆಯ ತಮಾಷೆಗಳನ್ನೆಲ್ಲ ನೋಡುತ್ತಾ ನಡೆದರು . ಅಜ್ಜಿ ಹುಡುಗಿಯರಿಗೆ ಇಷ್ಟವಾದ ಬಣ್ಣ ಬಣ್ಣದ ಬಳೆಗಳು , ಕಾಲ್ಸರ , ಕೊರಳ ಸರ , ಸ್ಟಿಕರ್ ಬೊಟ್ಟುಗಳು ಮುಂತಾದ ವಸ್ತುಗಳನ್ನೆಲ್ಲ ತೆಗೆಸಿಕೊಟ್ಟರು  .
" ಥ್ಯಾಂಕ್ ಯೂ ಅಜ್ಜಿ ಪುಟ್ಟಿ ! " ಎನ್ನುತ್ತ ಮೆಗ್ ಅಜ್ಜಿಯನ್ನು ತಬ್ಬಿಕೊಂಡಳು ! ಅಜ್ಜಿ ತಾತ ಇಬ್ಬರೂ ಕಿರುನಗೆ ಬೀರಲು ಮೇಘನಾ ಜೋರಾಗಿ ನಕ್ಕಳು .
"  ಓ ! ಡಿಡ್ ಐ ಸೇ ಎನಿತಿಂಗ್ ರಾಂಗ್ ? "

" ಇಲ್ಲ ಮೆಗ್ ಪುಟ್ಟಿ ! " ಎಂದ ತಾತ " ನಡೀರಿ ! ಇವಾಗ ನಿಮ್ಮಿಬ್ರಿಗೂ ಒಂದು ಸರ್ಪ್ರೈಸ್ ತೋರಿಸ್ತೀನಿ !" ಎನ್ನುತ್ತ ಇಬ್ಬರು ಹುಡುಗಿಯರನ್ನೂ ಕರೆದುಕೊಂಡು ಒಂದು ಅಡ್ಡ ರಸ್ತೆಯಲ್ಲಿ ತಿರುಗಿದರು .
ಕುತೂಹಲದಿಂದ ಹಿಂಬಾಲಿಸಿದ ಹುಡುಗಿಯರು ರಸ್ತೆಯ ಕೊನೆಯಲ್ಲಿ  ಜಾಲರಿಯಿಂದ ಕೂಡಿದ  ಒಂದು ವಿಶಾಲವಾದ ಕೋಣೆಯನ್ನು ಕಂಡರು .



" ಏನಿದೆ ಒಳಗೆ ? " ಮೇಘನಾ ಮತ್ತು ಮೆಗ್ ಒಳಗೆ ಇಣುಕಿದರು . ಒಳಗೆ ಕೋಣೆಯುದ್ದಕ್ಕೂ  ಮಲಗಿದ್ದ ಒಂದು ದೊಡ್ಡ ಕಲ್ಲು ಬಂಡೆ ಕಾಣಿಸಿತು .
" ಶಾಸನ ಕಲ್ಲು ! ನೋಡ್ಬೇಕು ಅಂದಿರಲ್ಲ ? ಗಮನವಿಟ್ಟು ನೋಡಿದ್ರೆ  ಕೆತ್ತಿರೋ ಅಕ್ಷರಗಳು ಕಾಣಿಸಬೋದು ! " ಎಂದರು ತಾತ .
 ಜಾಲರಿ ಕಂಬಿಗಳಲ್ಲಿ ಮುಖ ಒತ್ತಿ ನಿಂತು ತೀಕ್ಷ್ಣವಾಗಿ ನೋಟ ಬೀರಿದಾಗ ಕಲ್ಲಲ್ಲಿ ಕೆತ್ತಿದ್ದ ಕೆಲವು ಅಕ್ಷರಗಳು ಸುಮಾರಾಗಿ ಗೋಚರವಾದವು .
" ಅದ್ರಲ್ಲಿ ಏನು ಬರ್ದಿದೆ ತಾತ ? "
" 1669 ಇಸವಿಯಲ್ಲಿ ಮಲ್ಲಪುರದ ಮಲ್ಲಿಕಾರ್ಜುನ ದೇವರಿಗೆ ಏಕೋಜಿ ರಾಯನು ಮೇದರನಿಂಗನ ಹಳ್ಳಿಯನ್ನು ಧರ್ಮಕ್ಕೆ ಕೊಟ್ಟನಂತೆ ! ಆ ವಿಷಯವನ್ನೇ ಈ ಬಂಡೆಯಲ್ಲಿ ಕೆತ್ತಿಸಿದ್ದಾನೆ ! "
" ವಾವ್ ! ಶೀಲಾ ಶಾಸನ ! ಆದ್ರೆ ಅದನ್ನ ಯಾಕೆ ಬೋನಲ್ಲಿಟ್ಟಿದ್ದಾರೆ ತಾತ ? "
 ಮೇಘನಾಳ ಮಾತು ಕೇಳಿ ತಾತ ಗೊಳ್ಳೆಂದು ನಕ್ಕರು .
" ಊರು ಬೆಳೀತಾ ಇದೆ ! ಎಲ್ಲೆಲ್ಲೂ ಕಟ್ಟಡಗಳು ಏಳ್ತಿವೆ ! ತಮ್ಮ ಕೆಲ್ಸಕ್ಕೆ ಅಡ್ಡ ಬಾರೋ ಶಾಸನ ಕಲ್ಲುಗಳನ್ನ ಅವುಗಳ ಮೌಲ್ಯ ತಿಳಿಯದ ಜನ ಎತ್ತಿ ಬಿಸಾಡ್ತಾರೆ ! ನೂರಾರು, ಸಾವಿರಾರು ವರ್ಷಗಳಿಂದ ಇದ್ದ ಶಾಸನಗಳೆಲ್ಲ ಹೀಗೆ ಒಂದೊಂದಾಗಿ ನಾಶವಾಗ್ತಿವೆ....  "
" ಅಯ್ಯೊ ! ಹಾರಿಬಲ್ !"
" ಈ  ಶಾಸನ ಕಲ್ಲಿಗೂ ಅಂತ ಗತಿ ಬರಬಾರದೂ ಅಂತ ಹೀಗೆ ಬೊನೊಳಗೆ ಕೂಡಾಕಿ ಸಂರಕ್ಷಣೆ ಮಾಡಿದ್ದಾರೆ  ! " ಎಂದು ಮತ್ತೆ ನಕ್ಕರು ತಾತ .

" ಕಡ್ಲೇಕಾಯಿ ಪರಿಷೇಲಿ ಅವರೆಕಾಯಿ ಬಂದ್ಬಿಟ್ಟಿದೆ ? ಕೊಂಡ್ಕೊಂಡು ಹೋಗೋಣ ! " ಅಜ್ಜಿ ಅವರೆಕಾಯಿ ಮಾರುತ್ತಿದ್ದವಳ ಬಳಿ ನಡೆದರು .
" ಇನ್ನೇನು ಅವರೇ ಮೇಳ ಬರತ್ತೆ ! ಅಲ್ಲೀತನಕ ಕಾಯಕ್ಕಾಗಲ್ವೆ ? " ಎಂದರು ತಾತ .
" ನಮ್ಮೂರ ಸ್ಪೆಷಲ್ ! ಮೆಗ್ಗಿಗೆ ಮಾಡಿ ಹಾಕೋದು ಬೇಡವೇ ? " ಎಂದರು ಅಜ್ಜಿ . 
" ಅವರೆಕಾಯಿ ಫೀಸ್ಟ್ ಕಮಿಂಗ್ ಅಪ್ ? "
" ಹೌದು ಮೆಗ್ ! ಡಿಸೆಂಬರ್ ತಿಂಗಳು ಬಂದ್ರೆ ಅವರೆಕಾಯಿ ಮೇಳ ! ಅಲ್ಲಿ ರುಚಿ ರುಚಿಯಾದ ತಿಂಡಿ ತಿನಸಿಗಳನ್ನ ಮಾರಾಟ ಮಾಡ್ತಾರೆ ! ದೋಸೆಯಿಂದ ಹಿಡಿದು ಸಿಹಿ ತಿಂಡಿಯಾದ ಜಾಮೂನ್ ವರೆಗೆ ಎಲ್ಲ ತಿಂಡಿಗಳಲ್ಲೂ ಕಾಳೇ ಕಾಳು ! " ಹೇಳುತ್ತಿದ್ದಹಾಗೆಯೇ ಮೇಘನಾಳ ಬಾಯಲ್ಲಿ ನೀರೂರಿತು .
" ವಾಂಟ್ ಟು ಸೀ ಅವರೇ ಮೇಳ  ! " ಮೆಗ್ಗಿಗೆ ಎಲ್ಲದ್ದಕ್ಕೂ ಉತ್ಸಾಹ .

" ಇನ್ನೊಂದು ವಿಷಯ ಗೊತ್ತಾ ಮೆಗ್ ? ಈ ಕಾಳಿನಿಂದ್ಲೇ ನಮ್ಮೂರಿಗೆ ಬೆಂಗಳೂರು ಅನ್ನೋ ಹೆಸರು ಬಂತು ! "
" ವಾಟ್ ? ದ ಸಿಟಿ ಇಸ್ ನೇಮ್ಡ್ ಆಫ್ಟರ್ ಆ ಬೀನ್ ? " ಮೆಗ್ ಮುಸಿ ಮುಸಿ ನಕ್ಕಳು 
" ನಿಜ್ವಾಗ್ಲೂ ಮೆಗ್ ! ಆ ಸ್ಟೋರಿ ಹೇಳ್ತಿನಿ ಕೇಳು ! ಒಮ್ಮೆ ಕೆಂಪ ಅನ್ನೋ ವ್ಯಕ್ತಿ ಕಾಡೆಲ್ಲಾ ತಿರುಗಾಡಿ ಹಸಿವಿನಿಂದ ಸುಸ್ತಾದ. ಆಗ ಒಂದು ಸಣ್ಣ ಗುಡಿಸಿಲೊಳಗಿದ್ದ ಅಜ್ಜಿಯೊಬ್ಬಳು  ಕೆಂಪನ ಪರಿಸ್ಥಿತಿ ಕಂಡು ಮರುಗಿದಳು .  
" ಮಗು ! ನನ್ನ ಬಳಿ ತಿನ್ನಕ್ಕೆ ಇರೋದು ಈ ಬೆಂದ ಕಾಳು ಮಾತ್ರ . ಇದನ್ನ ತಿಂದು ಹಸಿವಾರು!"  ಎಂದು ಪ್ರೀತಿಯಿಂದ ಉಪಚಾರ ಮಾಡಿದ್ಲು . ಕಾಲಕ್ರಮೇಣ ಕೆಂಪ ಆ ಪ್ರದೇಶಕ್ಕೇ ರಾಜನಾದ .  ಕೆಂಪೇ ಗೌಡ ಅಂತ ಪ್ರಖ್ಯಾತಿ ಪಡೆದ .  ಅಜ್ಜಿಯ ಪ್ರೀತಿಯನ್ನೂ ಅವಳು ಕೊಟ್ಟ ಬೆಂದ ಕಾಳನ್ನೂ ಅವನು ಮರೆಯಲೇ ಇಲ್ಲ . ತಾನು ಕಟ್ಟಿದ ಹೊಸ ಪಟ್ಟಣಕ್ಕೆ ಬೆಂದಕಾಳೂರು ಅಂತ ನಾಮಕರಣ ಮಾಡಿದ ! ಶತಮಾನಗಳ ನಂತರ ಆ ಹೆಸರು ಬೆಂಗಳೂರು ಅಂತ ಪರಿವರ್ತನೆಯಾಯಿತು ! " ಮೇಘನಾ ತಾತನಂತೆಯೇ ಮೊದಲು ಕನ್ನಡದಲ್ಲೂ ನಂತರ ಇಂಗ್ಲೀಷಿನಲ್ಲೂ  ಹೇಳಿದ ಸ್ವಾರಸ್ಯಕರವಾದ ಕಥೆಯನ್ನು ಕೇಳಿ ಮೆಗ್ ಬೆಕ್ಕಸ ಬೆರಗಾದಳು .

ಆ ವರೆಗೆ ಕಥೆ ಕೇಳಿಸಿಕೊಂಡಿದ್ದ ತಾತ ಕಿರುನಗೆ ಬೀರಿದರು .
" ಇದು ಹದಿನಾರನೇ ಶತಮಾನದಲ್ಲಿದ್ದ ರಾಜ ಕೆಂಪೇ ಗೌಡನ ಬಗ್ಗೆ  ಬಹಳ ಕಾಲದಿಂದ ಬಳಕೆಯಲ್ಲಿ ಬಂದಿರೋ  ಜಾನಪದ ಕಥೆ ! ಇನ್ನೊಂದು ಕಥೆ ಹೀಗಿದೆ ! ಹದಿಮೂರನೇ ಶತಮಾನದಲ್ಲಿದ್ದ ಹೊಯ್ಸಳ ರಾಜ ಎರಡನೇ ವೀರ ಬಲ್ಲಾಳ ಬೇಟೆಗೆ ಹೋದಾಗ ಕಾಡಲ್ಲಿ ದಾರಿ ತಪ್ಪಿದ್ನಂತೆ . ಕಾಡಲ್ಲಿ ತಿರುಗಿ ತಿರುಗಿ  ಸುಸ್ತಾಗಿ ಹಸಿವಿನಿಂದ ಬಳಲಿದ್ದ ಅವನಿಗೆ   ಗುಡಿಸಲಲ್ಲಿದ್ದ  ಮುದುಕಿಯೊಬ್ಬಳು ಬೆಂದ ಕಾಳನ್ನು ಕೊಟ್ಟು ಹಸಿವಾರಿಸಿದ್ಳಂತೆ ! ಆ ಘಟನೆಯ ಜ್ಞಾಪಕಾರ್ಥವಾಗಿ  ಆ ಪ್ರದೇಶಕ್ಕೆ  ಬೆಂದಕಾಳೂರು ಅಂತ ಹೆಸರಿಟ್ಟನಂತೆ !"

"  ಡಿಫರೆಂಟ್ ಕಿಂಗ್ಸ್ ! ಡಿಫರೆಂಟ್ ಟೈಮ್ಸ್ ! ಸೇಮ್ ಸ್ಟೋರಿ ! "  ಮೆಗ್ ಆಶ್ಚರ್ಯಗೊಂಡಳು .
" ಎಸ್ ! ಇವೆಲ್ಲ ಬೆಂಗಳೂರು ಎಂಬ ಹೆಸರಿನ ಹಿಂದೆ ಇರೋ  ಜಾನಪದ ಕಥೆಗಳು. ಆದ್ರೆ ಬೆಂಗಳೂರು ಅನ್ನೋ ಹೆಸರು ಅದೆಷ್ಟು ಪುರಾತನವಾದದ್ದು ಅನ್ನೋದನ್ನ ಪುರಾತತ್ವಶಾಸ್ತ್ರಜ್ಞರು ಆಧಾರಪೂರ್ವಕವಾಗಿ ನಿರೂಪಿಸಿದ್ದಾರೆ! " ಎಂದು ಹೇಳಿ ಅಷ್ಟಕ್ಕೇ ಮಾತು ನಿಲ್ಲಿಸಿದರು ತಾತ .
" ಹೇಳು ತಾತ ! ಸಸ್ಪೆನ್ಸ್ ಯಾಕೆ ?! " ಕುತೂಹಲ ತಡೆಯಲಾರದೆ ಕೇಳಿದಳು ಮೇಘನಾ .
" ಇಲ್ಲೇ ! ಸಮೀಪದಲ್ಲೇ ಬೇಗೂರು ಅನ್ನೋ ಊರಿದೆ . ಅಲ್ಲಿ ಪುರಾತನವಾದ ಒಂದು ದೇವಸ್ಥಾನವಿದೆ. ದೇವಸ್ಥಾನದ ಆವರಣದಲ್ಲಿ ಒಂಬತ್ತನೇ ಶತಮಾನಕ್ಕೆ ಸೇರಿದ ಅನೇಕ  ಶಾಸನ  ಕಲ್ಲುಗಳಿವೆ . ಜೊತೆಗೆ ವೀರಮರಣ ಹೊಂದಿದ ವ್ಯಕ್ತಿಗಳ ನೆನಪಿಗಾಗಿ ಕೆತ್ತಿಸಿದ ವೀರಗಲ್ಲುಗಳೂ ಇವೆ . 900 ಇಸವಿಯಲ್ಲೇ ಬೆಂಗಳುರು ಎಂಬ ವಾಸಸ್ಥಳ ಇದ್ದದ್ದನ್ನ ಹೇಳೋ ಒಂದು ಶಿಲಾ ಶಾಸನ ಅಲ್ಲಿದೆ . "
" ಆ ಶಾಸನ ಏನನ್ನ ಹೇಳ್ತಿದೆ  ತಾತ ? "



" ನಾಗತ್ತರನ ಸಾಕು ಮಗ ಪೇರ್ವೋಣ ಶೆಟ್ಟಿ ಮತ್ತು ಅವನ ಸ್ವಂತ ಮಗ ಬುಟ್ಟಣ ಪತಿ  ಇಬ್ಬರೂ ಬೆಂಗಳುರ ಕಾಳಗದಲ್ಲಿ ಸತ್ತ ವಿಷಯವನ್ನ ಹೇಳೋ ಶಾಸನ ಅದು . ಅಂದ್ರೆ ನಮಗೆ ತಿಳಿದ ಮಟ್ಟಿಗೆ  ಒಂಬತ್ತನೇ ಶತಮಾನದಲ್ಲೇ 'ಬೆಂಗಳುರು' ಎಂಬ ಊರಿದ್ದು ಅಲ್ಲಿ ಒಂದು ಯುದ್ಧವೂ ನಡೆದಿದೆ ಅಂತ ಆಯಿತಲ್ವೇ ? "
" ಅನದರ್ ಏನ್ಷಿಯಂಟ್ ಟೆಂಪಲ್ ! " ಮೆಗ್ ಆಶ್ಚರ್ಯದ ಸಾಗರದಲ್ಲಿ ಮುಳುಗಿದಳು .
" ಅಷ್ಟೇ ಅಲ್ಲ ! ಮಡಿವಾಳ ಸೋಮೇಶ್ವರನ ಟೆಂಪಲಲ್ಲಿ ಹದಿಮೂರನೇ ಶತಮಾನಕ್ಕೆ ಸೇರಿದ  ಒಂದು  ಶಾಸನದಲ್ಲಿ  ಬೆಂಗಳೂರನ್ನ ಕುರಿತ ರೆಫರೆನ್ಸ್ ಇದೆ ! ವೆಪ್ಪೂರ್ ಅಂದ್ರೆ  ಇಂದಿನ ಬೇಗೂರಿಗೆ ಸೇರಿದ ದಾನಿಗಳು ಮಡಿವಾಳದ  ಸೋಮೇಶ್ವರ ಸ್ವಾಮಿಗೆ, ಬೆಂಗಳೂರ ದೊಡ್ಡ ಕೆರೆಯ ಬಳಿ ಇದ್ದ ಭೂಮಿಯನ್ನ ದಾನವಾಗಿ ಕೊಟ್ಟ ವಿಷಯ ದಾಖಲಾಗಿದೆ . " ಹುಡುಗಿಯರು ಸ್ವಾರಸ್ಯದಿಂದ  ಕೇಳಿಸಿಕೊಳ್ಳುತ್ತಿದ್ದ ಕಾರಣ ತಾತನಿಗೂ ಕಥೆ  ಹೇಳುವ ಉತ್ಸಾಹ ಉಕ್ಕಿ ಹರಿಯಿತು .
" ಬೆಂಗಳೂರು ವಿವಿಧ ರಾಜಮನೆತವರ ಆಡಳಿತದಲ್ಲಿತ್ತು ಅನ್ನೋದು ನಿಮಗೆ ತಿಳಿದ ವಿಷಯ!  ನಮ್ಮೂರು  ವಿವಿಧ ಭಾಷೆಗಳನ್ನಾಡುವ ಪ್ರಜೆಗಳಿಗೂ ಆಶ್ರಯವಾಗಿತ್ತು . ಹಾಗಾಗಿ ಈ ಶಾಸನ ತಮಿಳು ಭಾಷೆಯಲ್ಲಿದೆ . ಶಾಸನದಲ್ಲಿ ಬೆಂಗಳೂರನ್ನು ವೇಂಗಳೂರ್ ಅಂತ ಉಲ್ಲೇಖಿಸಲಾಗಿದೆ . "
" ಬೆಂಗಳೂರು ಹೇಗೆ  ವೇಂಗಳೂರ್ ಆಯಿತು ತಾತ ? "


                                                                             
" ಪುಟ್ಟಿ ! ಅಕ್ಷರದಿಂದ ಶುರುವಾಗೋ ಅನೇಕ ಕನ್ನಡ ಪದಗಳು ತಮಿಳಲ್ಲಿ ಅಕ್ಷರದಿಂದ ಶುರುವಾಗೋದು ಸಹಜವಾಗಿ ಕಂಡುಬಂದಿದೆ  ! ಬಲ್ಲಾಳ ವಲ್ಲಾಳ ಆದಂತೆ ,  ಬಾ ಅನ್ನೋದು ವಾ ಆಗತ್ತೆ ! ಬಾಯಿ ವಾಯಿ ಆಗತ್ತೆ ! ಬೆಂಡೆ ವೆಂಡೆ ಆಗತ್ತೆ , ಬೆರಳು ವೆರಳ್ ಆಗತ್ತೆ ... "
" ಓ ! ಗಾಟ್ ಇಟ್ ! ಹಾಗೆಯೇ ಬೆಂಗಳೂರ್  ವೇಂಗಳುರ್ ಆಯ್ತು  .. " ಚುರುಕು ಬುದ್ಧಿಯ ಹುಡುಗಿ ಮೇಘನಾ ಥಟ್ಟನೆ ಅರ್ಥಮಾಡಿಕೊಂಡಳು .
" ಓ ಗಾಡ್ ! ದಿಸ್ ಇಸ್ ಟೂ ಮಚ್ ! ಆದ್ರೆ ಇನ್ನೊಂದು ಪುರಾತನವಾದ ಟೆಂಪಲ್ ಬಗ್ಗೆ ತಿಳ್ಕೊಂಡೆ!" ಎನ್ನುತ್ತಾ ತಲೆತೂಗಿ ನಿಟ್ಟುಸಿರು ಬಿಟ್ಟಳು ಮೆಗ್.

ಅಜ್ಜಿ ಅಷ್ಟೊತ್ತಿಗೆ ಚೌಕಾಸಿ ಮುಗಿಸಿ ಚೀಲದಲ್ಲಿ ಅವರೆಕಾಳನ್ನು ತುಂಬಿಕೊಂಡಿದ್ದರು .
" ಇವತ್ತು ಮೆಗ್ಗಿಗೆ ರುಚಿರುಚಿಯಾದ ಕಾಳು ಸಾಂಬಾರ್ ಮಾಡಿ ಬಡಿಸ್ತೀನಿ ! " ಎನ್ನುತ್ತ ಅವಳ ತಳೆದಡವಿದರು ಅಜ್ಜಿ .
" ಪುಟ್ಟೀಸ್ ! ಕಾಡುಮಲ್ಲೇಶ್ವರನ ಗುಡಿಗೆ ಮಾತ್ರವಲ್ಲ , ನಾವು ಊಟ ಮಾಡೋ ಸಾಂಬಾರಿಗೂ ಸಹ  ಮರಾಠಾ ರಾಜವಂಶದವರೊಂದಿಗೆ ನಿಕಟ ಸಂಭಂದ ಇದೆ ಗೊತ್ತೇ ? " ಎನ್ನುತ್ತಾ ಮರ್ಮ ನಗೆಯನ್ನು ಬೀರಿದರು ತಾತ .
" ಜೋಕ್ ಮಾಡ್ತಿದ್ದೀಯ ತಾತ ? " ಮೇಘನಾ ಕೊಂಕಿನಿಂದ ಕೇಳಿದಳು .
" ಥಾಥಾ ! ಗೋ ಆನ್ ! " ಮೆಗ್ ತಾತನನ್ನು ಪ್ರೋತ್ಸಾಹಪಡಿಸಿದಳು .
" ನಮ್ಮ ಏಕೋಜಿ ಒಮ್ಮೆ ದಂಡನಾಯಕನಾಗಿದ್ದು  ತಂಜಾವೂರನ್ನು ದಾಳಿ ಮಾಡಿದ . ಯುದ್ಧದಲ್ಲಿ ಗೆದ್ದು ತಾನೇ ರಾಜನಾಗಿ ತಂಜಾವೂರಲ್ಲಿ ಮರಾಠಾ ಸಾಮ್ರಾಜ್ಯವನ್ನು ಸ್ಥಾಪಿಸಿದ. ಅವನ ನಂತರ ಅವನ ಮಗ ಶಾಹೂಜಿ ರಾಜನಾದ.  ಛತ್ರಪತಿ ಶಿವಾಜಿಯ ನಂತರ ಗದ್ದುಗೆ ಏರಿದ ಅವನ ಪುತ್ರ ಸಾಂಭಾಜಿ ತಂಜಾವೂರಿಗೆ ಒಮ್ಮೆ ಭೇಟಿ ನೀಡಿದ . ಮಾನ್ಯ ಅಥಿತಿಗೆ ವಿಶೇಷವಾದ ಊಟೋಪಚಾರವಾಗ ಬೇಕೆಂದು ರಾಜಬಾಣಸಿಗರು ಹುಣಸೆ ರಸ ಸೇರಿಸಿ ತೊವ್ವೆ ತಯಾರಿಸಿದ್ರು . ಅಥಿತಿಯನ್ನು ಗೌರವಿಸುವುದರ ಸಲುವಾಗಿ ಹೊಸ ವಿಧವಾದ ತೊವ್ವೆಗೆ ಅವರ ಹೆಸರನ್ನೇ ಅನುಕರಿಸಿ 'ಸಾಂಬಾರ್' ಎಂದೇ ನಾಮಕರಣ ಮಾಡಿದ್ರು !''
" ಸಾಂಬಾರಿಗೂ ಒಂದು ಇತಿಹಾಸವೇ ? ನಿಜವಾಗಿ ಹಾಗೆ ನಡೀತೇ  ತಾತ ? "
" ನಿಜ ಇದ್ದರೂ ಇರ್ಬೋದು ! ಇಲ್ಲವೇ ಜಾನಪದ ಕಥೆಯೂ ಆಗಿರ್ಬೋದು ! "
ತಾತ ಹೇಳಿದ ವಿಷಯಗಳನ್ನೆಲ್ಲ ಗ್ರಹಿಸಿಕೊಂಡ ಮೇಗನ್ ' ಆಶ್ಚಾರ್ಯದ ಪರಮಾವದಿ ಬೆಂಗಳೂರು ' ಎಂದುಕೊಂಡಳು  !
" ವಾವ್ !  ಇಂಟೆರೆಸ್ಟಿಂಗ್ ಫುಡ್ ಹಿಸ್ಟರಿ ! ದಿಸ್ ಸಿಟಿ ಇಸ್ ಫುಲ್ ಅಫ್ ಏನ್ಷಿಯೆಂಟ್ ಟೆಂಪಲ್ಸ್! ಏನ್ಷಿಯೆಂಟ್  ಹಿಸ್ಟ್ರಿ ! ಅಂಡ್  ಲೆಜೆಂಡ್ಸ್ ! ದೇರ್ ಇಸ್  ಹಿಸ್ಟರಿ ಬಿಹೈನ್ಡ್ ಆ ಟೀನಿ ವೀನಿ ಬೀನ್ ಟೂ ! ಐ ಲವ್ ಬೆಂಗಳೂರು ! " ಎಂದು ಉತ್ಸಾಹದಿಂದ ಉದ್ಗಾರ ಮಾಡಿದಳು ಮೆಗನ್  !
-----------------------------------------------------------------------------------------------------
Based on :
Inscription at Kadu Malleshwara Temple
Bangaluru Kalaga at Begur
Inscription at Madivala Someshwara Temple, E.C. 9, No : 68
----------------------------------------------------------------------------------------------------
 I love Bangalore ! 

Meghana and Megan came out of the German language coaching class and found Meghana’s Grandmother  waiting by the  car to pick them up. Their mothers had gone to Freedom Park to protest cutting down of trees in the neighbourhood .

“ Ajji , lets have a milk shake first , I am so thirsty ! ”   said Meghana, getting into the car with her friend.
“ With lots of Ice ! ” Added Megan, fanning herself with a book .

Megan, an expat ,  studied in an International School and lived in the same Apartment Complex as Meghana . Her father worked for an MNC .
They were close friends .

Ajji turned into the main road and bought them Milkshakes . Then she drove in a direction away from the route to home.
“Ajji , are we going to The Mall ?” Asked Meghana eagerly .
“ No . I am taking you to a more exciting place  ! - to Kadlekai Parishe ! ” 
“ Whats that ? ”  wondered Meg , while Meghana made a disappointed face .
“ Thats the annual Groundnut Fair , Meg . It will be very interesting . Groundnut farmers bring their  harvest to sell there .”

“ Wow ! Farmers market in Bangalore ! I can never imagine that ! I thought Bangalore is a Modern Metropolis !....This Groundnut Fair sounds like fun !”

“ You will discover the other face of Bangalore now ! ” Laughed Ajji , as she parked the car and led them to the street by the Kadu Malleswara Temple in Malleswaram .

The street had turned into a village square ! Lining both sides were heaps of groundnuts  and snack carts . There were also kiosks selling knick knacks of all sorts : jewelry , toys , bags, kitchen essentials  and clothing along with fruits , vegetables and flowers . Rustic playground items like swings and carousels were set up on the side . Loud music was blaring above the din of people .

                                                                               
Ajji , Megan and Meghana  walked around  the crowded, noisy and colourful Fair, stopping here and there to pick up some interesting things .
Megan’s eyes widened in wonder when she saw the huge decorated Theru standing by the  temple .” 


                                                                              
“ Whats this ? A temple on wheels ? ” 
“ Thats the Chariot or temple car , in which the Gods from Kadu Malleshwara temple are taken in procession around the neighbourhood on special days. ”   explained Meghana .
“ I think Kadu means Forest in Kannada, right ?”  asked Meg , “ where’s the forest in the City ? ” 
“ The City swallowed the forest.  ”  Laughed Ajji , selecting some  bangles for the girls , “ all this was once Forest land and the Mallikarjuna temple was built on a hillock in the forest .” 
“ Who could have built a temple in a forest , Ajji ? ”  asked Meghana
“ Some say , it was built by Ekoji , the brother of Chatrapati Shivaji . Others say , he only built a compound wall around a temple that already existed ....we only know for sure that a rich and charitable man named Ele Mallappa Setti renovated the temple in 1898 . ” 
“ But Ajji , Shivaji and Ekoji were Maratha kings , weren’t they ? Why would they build anything here in Karnataka , in Bangalore ? ” 
“ What you now know as Karnataka was created only in 1956 , dear . Before that, since long time ago , our land was ruled by many different  royal dynasties .”

“ Oh yes , I know ! “ declared Meghana and started singing : “ Ganga kadamba chalukya rashtrakuta , yadava , ballala , vijayanagara veerara gatha vaibhava kaanuva ....”
“ Hey , whats that you are singing !  interrupted  Meg.
“ The dynasties that ruled Karnataka centuries ago ! From the song “ Kannada makkalella ondaagi banni  which we sang for the School Day celebrations recently.”
“ Yes, Meg dear , all those dynasties ruled one after the other and at one  time , our Bangalore was under the rule of Bijapur Sultans too . And Shivaji’s father, Shahaji Raje Bhonsle  , who  was a Chief Commander for a Sultan , had received Bangalore as a Jagir - say, a gift - from them . And from him it passed to his younger son Ekoji. 
“ Oh , I see ! So this is a very old temple ! 
“ Yes , built either in 15th or 16th Century .”
“ Wow , Thats Ancient !  remarked Meg .
“ There are more ancient temples here too . Not far from here , in Nandigrama is Bhoganandeeswara ,  a 1000 year old temple built by a Bana queen named Ratnavali . 
“ Oh my Gosh ! 1000 ? Is that true ? 
“ Absolutely . We have a very long history . All those   kings and great people who built temples and tanks have left us documents about them inscribed on stones . We call them Shilashasanas . 
“ Incredible ! Can we see one anywhere ? 

                                                                              
“ Sure ! ....look Meg , do you like these Sticker Bindis ? And these lovely jasmines? Would you like to dress up like an Indian princess for a festival ?”
“Would love it , Ajji dear !  she laughed .

Ajji packed her purchases in her jutebag and led the girls by hand to a smaller lane branching off the road . At the end of the lane stood a shed like structure with locked grill doors . Through the grill was visible a sprawling boulder strewn with flowers .


“ Why have they locked up a rock , Ajji ? 
Ajji pointed out and said “ Look carefully over there , do you some letters etched on the rock ? This is a Shilashasana , an Inscription Stone .”
The girls peered in and called out excitedly “ yes yes , can see ! ...whats written there ? 
“ It is written that in 1669 , Ekoji gifted the village, Medaraninganahalli to Lord Mallikarjuna of Mallapura . That's the God of the temple you see here ......they have to keep this locked so that it is safe . Otherwise, it may be destroyed to make place for a new building ! 
“ Oh that would be horrible ! 
“ Come on girls , time to head back home . Let me pick up some avarekalu before leaving . ....” Ajji walked towards a vendor sitting with a heap of beans . “ There will be a similar Fair , Avarekaalu Mela in December , when large quantities of Beans from the fields will be brought in by farmers . 
“ Yet another Fair ! How exciting !” Said Meg, “Like we have the Garlic Fair, The Tulip Fair , The Pumpkin Festival and all that back home ! 

“ You know what Meg , our Bangalore gets its name from this Bean only . ” giggled Meghana “ City of cooked Beans !”
“ You kidding ! cooked Bean City ? Why would anyone name a city after a Bean! 
“Long story short , Meg : There was this king who went hunting , lost his way and ended up tired and hungry at the door of an old woman’s hut and the woman fed him the only thing she had : Boiled Beans . So the king ate that , rested the night and went home the next day. When he built a new city he named it in honour of the Bean  that saved his life : Benda  Kaalu Ooru ! 
“ Oh boy ! Which king was that ? 
“ Either Kempegowda in 16th Century or Veera Ballala in 13th Century , I am not sure . I have heard both legends  and both are same ! 
“ And stories they are !  Laughed Ajji , unlocking the car door “Folk tales , believed for long .....get in , girls . 
“ So not true , huh ? 


                                                                               
“ Of course not ! Ajji cruised out of the bylane and drove into the main road . “A little further from where your father works is a place called Begur . There is a very ancient temple there too . And lots of memorial stones to heroes who died  in wars , long , long ago . One of the stones gives the information that in 900 C.E. Nagattara’s son Buttana Pati  and House Lad Pervona Setti died in Bengalur War. 
“ Fantastic ! So a Bengaluru existed before any king ate boiled beans ! 
“ Not just in Begur , the name is also found in another inscription , this time in Tamil language , in Madiwala Someshwara temple . 
“ Oh I know that name , Madiwala ! I went with my mom once to buy fruit there! Said Meg excitedly , “there’s an ancient temple there  too ?”
“ Yes ! In that temple , an inscription gives the  information that a donor from Veppur , that is Begur , had given the Temple some land by a tank in Vengaloor ! So there you have it , Bengaluru in 1248 A.D. ! 


                                                                               
“ Are you saying Vengaloor is Bangalore ? How ? 
“ The sounds of Va and Ba get interchanged between Tamil and Kannada . Vaa is Baa , Vayi is Bayi , Viral is Beral ....”
“ But how is the writing made in Tamil  Ajji ? Local language is Kannada , is'nt it!  said Meghana .
“ People speaking many languages have always lived here , dear . There have been kings of many dynasties . There were no marked borders dividing people according to language spoken . So there are inscriptions in Kannada , Tamil , Telugu , Sanskrit everything ! 

Ajji parked the car in the basement of the Apartment building and the  girls helped to get her shopping bags out .

“ Meg , I will make a delicious  sambhar with the beans and send across some for your dinner . 
“ Thank you Ajji . I love Dosa  -Sambhar . Yummy Karnataka food. 
“ Hmm ....for Sambhar , you can thank Ekoji’s friends - I mean Maratthas , I guess ! 
Meghana was surprised “Are you saying Sambhar is Marathi food ?”
“ No Language issues for food , dear ! ....Story is that our Ekoji invaded Thanjavur and seized the throne there . Once , Sambaji , who was Shivaji’s Son , visited Thanjavur . To impress the royal guest, the royal Chefs  cooked vegetables and lentils with spiced tamarind pulp which turned out to be a hit . It was named Sambhar in honour of the guest ! 

Meghan laughed in amusement “ A history for the sambhar too ! 
Ajji and Meghana joined in her laughter  “ It may be true , it may not be true ........but everything has a story , a history , in our Bengaluru which is a young city as well as an ancient city and we are proud of it ! 
“ Thank you for the exciting outing , Ajji Dear !  Megan hugged Ajji “I made so many wonderful  discoveries about The City  today . I love Bangalore ! 
-----------------------------------------------------------------------------------------------------
Based on:
Inscription at Kadu Malleshwara Temple
Bengaluru Kalaga at Begur
Inscription at Madivala Someshwara Temple, E.C. 9, NO :68
-----------------------------------------------------------------------------------------------------

Monday, October 28, 2019

ಅದ್ದೂರಿ ಅಂಚೆ !

ಅದ್ದೂರಿ ಅಂಚೆ !
 ಅಂಚೆ ಮತ್ತು ತಂತಿ ಸೇವೆ   (Post and Telegraph Service) ಅಸ್ತಿತ್ವಕ್ಕೆ ಬರುವ ಮೊದಲು ಒಂದೆಡೆಯಿಂದ ಮತ್ತೊಂದೆಡೆಗೆ ಸಂದೇಶವಾಹಕರು ಸುದ್ದಿಯನ್ನು ಹೊತ್ತು ಹೋಗುತ್ತಿದ್ದರು.  ಅವರನ್ನು ಓಲೆಗಾರರು , ದೂತರು , ಹರಕಾರರು, ರನ್ನರ್ ಎಂದು ಕರೆಯುತ್ತಿದ್ದರು. ಇವರುಗಳು ಟಪ್ಪಾ ಓಟದ ( Relay race) ಮೂಲಕ ವೇಗವಾಗಿ ಸುದ್ದಿಯನ್ನು ತಲುಪಿಸಬಲ್ಲವರಾಗಿದ್ದರು .
  ಹಿಂದಿನ ಕಾಲದಲ್ಲಿ ಪಕ್ಷಿ ಪ್ರಾಣಿಗಳೂ ಸಹ ಸಂದೇಶವಾಹಕರಾಗಿದ್ದವು .
ಬ್ರಿಟಿಷರ ಆಳ್ವಿಕೆಯಲ್ಲಿದ್ದ ಆಸ್ಟ್ರೇಲಿಯಾದಲ್ಲಿ , ಆಫ್ಘಾನಿಸ್ತಾನದ ಒಂಟೆ ಸವಾರರ ನೆರವಿನಿಂದ  ಒಂಟೆ ಅಂಚೆ ಜಾರಿಯಲ್ಲಿತ್ತು .


                                                            
ಅಲಾಸ್ಕಾದಲ್ಲಿ ಇಂದಿಗೂ ಚಾಲನೆಯಲ್ಲಿರುವ ಡಾಗ್ಸ್ಲೆಡ್ ಮೇಲ್ ಎಂಬ ಅಂಚೆಗಾಗಿ ಶ್ವಾನಗಳನ್ನು ಪಳಗಿಸಲಾಗಿದೆ  . 


                                                           
ಉತ್ತರ ಅಮೇರಿಕಾದಲ್ಲಿ ಪೋನಿ ಎಕ್ಸ್ಪ್ರೆಸ್ ಅಂಚೆಗಾಗಿ ಕುದುರೆಗಳನ್ನು ತರಬೇತು ಮಾಡಿದ್ದರು. 

ಲೋಕದಾದ್ಯಂತ ಟಪ್ಪಾ ಕುದುರೆಗಳ ತಂಡಗಳು ಅಂಚೆ ಸೇವೆಗೆಂದೇ ತಯಾರಾಗಿದ್ದವು . 

                                                                     
ಹತ್ತೊಂಬತ್ತನೇ ಶತಮಾನದ ಕೊನೆಯವರೆಗೂ ಅಲಾಸ್ಕಾದಲ್ಲಿ ಹಿಮ ಸಾರಂಗಗಳನ್ನು / (ರೇನ್ಡೀರ್) ಅಂಚೆಗಾಗಿ ಉಪಯೋಗಿಸಲಾಯಿತು . 


                                                             
ಪರ್ಷಿಯಾ ದೇಶದಲ್ಲಿ ಪಾರಿವಾಳಗಳ  ಅಂಚೆ ರೂಡಿಯಲ್ಲಿತ್ತು  .


                                                                          
೧೯೩೭ ಲ್ಲಿ ಕೂಚ್ ಬಿಹಾರ್ ಮಹಾರಾಜರು ತನ್ನ ಪ್ರತಿಷ್ಠೆಗೆ ತಕ್ಕಂತ  ಒಂದು ಅದ್ದೂರಿಯ ಅಂಚೆಯ ಮೂಲಕ ಬರೋಡಾ ಮಹಾರಾಜರಿಗೆ ಒಂದು ಪತ್ರವನ್ನು ಕಳುಹಿಸಿದರು .

                                                                   

ಆ ಅದ್ಧೂರಿಯ ಸಂದೇಶವಾಹಕನ ಹೆಸರು ಜೆಯ್ ಸಿಂಗ್ !  ಕಲ್ಕತ್ತೆಯಿಂದ ಮುಂಬಯ್ ವರೆಗೂ ಹಡಗಿನಲ್ಲಿ ಪಯಣಿಸಿದ ಪೋಸ್ಟ್ ಮ್ಯಾನ್ ಜೆಯ್ ಸಿಂಗ್ !




ಅಲ್ಲಿಂದ ತನ್ನ ಗಜ ಗಂಭೀರ ನಡಿಗೆಯಲ್ಲಿ ಬರೋಡ ತಲುಪಿ ಮಹಾರಾಜರಿಗೆ ಪತ್ರ ತಲುಪಿಸಿದ !  



ಈ ಅದ್ಧೂರಿಯ ಆನೆ ಅಂಚೆ ( ಹಾತಿ ಡಾಕ್ )ಕೂಚ್ ಬಿಹಾರ್ ನಿಂದ ಬರೋಡಾ ತಲುಪಲು ತೆಗೆದುಕೊಂಡ ಅವಕಾಶ ಎಷ್ಟು ಎಂಬುದು ಮಾತ್ರ ಮರ್ಮವಾಗಿಯೇ ಉಳಿದಿದೆ !

Sunday, October 13, 2019

ವಪ್ಪಟ್ಟೂ ದ್ವೀಪದಲ್ಲಿ ಕುಂಬಳಕಾಯಿ ಹಬ್ಬ

ಕಾರ್ಮೋಡ ಕವಿದಿದ್ದ ಕತ್ತಲಾದ ವಾತಾವರಣ -
ಹಸಿರು ವೃಕ್ಷಗಳು ದಟ್ಟೈಸಿದ್ದ  ಕಾಡು ಪ್ರದೇಶ -
ದಾರಿ ಕಾಣದಷ್ಟು ಚಟ ಪಟ ಬೀಳುತ್ತಿದ್ದ ಮಳೆ ಹನಿಗಳು -
ಹೆಡ್ ಲೈಟಿನಲ್ಲಿ ಕಂಡೂ ಕಾಣದಂತೆ ಗೋಚರವಾದ ಕಡಿದಾದ ಹೇರ ಪಿನ್ ತಿರುವುಗಳು

ಪೋರ್ಟ್ಲ್ಯಾನ್ಡ್ ವೆಸ್ಟ್ ಹಿಲ್ಸ್ (Portland West Hills) ಎಂಬ ಪರ್ವತ ಶ್ರೇಣಿಯಿಂದ ಕೆಳಗಿಳಿಯುವುದೇ ಒಂದು ಸಾಹಸದ  ಕಾರ್ಯವಾಗಿತ್ತು! ಪರ್ವತದ ಬುಡದಲ್ಲಿಯ  ಹೆದ್ದಾರಿಯ ಜೊತೆ ಜೊತೆಯಾಗಿ  ಹರಿದು ಬರುತ್ತದೆ  ಮಲ್ಟ್ನೋಮ   ಚ್ಯಾನಲ್ (Multnomah Channel) ಎಂಬ ನಾಲೆ. ಕೆಲವೇ ನಿಮಿಷಗಳಲ್ಲಿ ಸಾವಿ ಐಲಂಡ್ ಸೇತುವೆಯನ್ನು (Sauvie Island Bridge) ಹಾದು ನಾವು ತಲಪುವುದು ಪ್ರಾಚೀನದಲ್ಲಿ ವಪ್ಪಟ್ಟೂ ಐಲ್ಯಾಂಡ್ ಎನ್ನಿಸಿಕೊಂಡಿದ್ದ ಇಂದಿನ  ಸಾವಿ ಐಲಂಡನ್ನ!



ದಿಗಂತದ ವರೆಗೆ  ಹರಡಿಕೊಂಡಿರುವ ಅಖಂಡವಾದ ಹಚ್ಛೆ ಹಸಿರಾದ  ಪ್ರದೇಶ ನಮಗೆ ಸುಸ್ವಾಗತ ನೀಡುತ್ತದೆವಲಸೆ ಹೋಗುವ ಪಕ್ಷಿ ಪ್ರಾಣಿಗಳಿಗೆ ತಾತ್ಕಾಲಿಕ ತಂಗುದಾಣವಾಗಿರುವ ಸಂರಕ್ಷಿಸಲ್ಪಟ್ಟ  ಆರ್ದ್ರ  ಭೂಮಿ ಅನೇಕ ಸಸ್ಯಗಳಿಗೆ  ನೆಲೆಬೀಡಾಗಿದೆ. ಸ್ಟ್ರಾ ಬೆರಿ, ರಾಸ್ಪ್ ಬೆರಿ, ಬ್ಲೂ ಬೆರಿ, ಬ್ಲ್ಯಾಕ್ ಬೆರಿ, ಪೀಚ್, ಪೇರ್  ಮುಂತಾದ ಅನೇಕ ಹಣ್ಣುಗಳನ್ನೂ ಜೋಳ ಮತ್ತು ಇತರ ತರಕಾರಿಗಳನ್ನೂ ಉತ್ಪನ್ನ ಮಾಡುವ ಫಲವತ್ತಾದ ಮಣ್ಣನ್ನು ಹೊಂದಿದೆ ಸಾವಿ ಐಲಂಡ್.  ದ್ವೀಪವು  ಪೋರ್ಟ್ಲ್ಯಾನ್ಡ್ನ ವಾಯವ್ಯಕ್ಕೆ ಹತ್ತು ಮೈಲಿ ದೂರದಲ್ಲಿ ಕೊಲಂಬಿಯ ನದಿ ಮತ್ತು  ವಿಲ್ಲಾಮೆಟ್ ನದಿಗಳು ಸಂಗಮವಾಗುವ ಪ್ರದೇಶದಲ್ಲಿದೆ.

ಸೆಪ್ಟಮ್ಬರ್ - ಅಕ್ಟೋಬರ್ ತಿಂಗಳು ಎಂದರೆ  ಪೋರ್ಟ್ಲ್ಯಾನ್ಡ್ ವಾಸಿಗಳಿಗೆ ಎಲ್ಲಿಲ್ಲದ  ಸಂಭ್ರಮ! ಏಕೆಂದರೆ ಅದು ಕುಂಬಳಕಾಯಿಯ ಸುಗ್ಗಿ ಕಾಲ! ಸುತ್ತಮುತ್ತಲಿನ ಕುಂಬಳಕಾಯಿ ತೋಟಗಳು  ಕುಂಬಳಕಾಯಿ ಉತ್ಸವಕ್ಕೆ ಸಡಗರದಿಂದ ಅಣಿಯಾಗುವ ಕಾಲ. ವಪ್ಪಟ್ಟೂ  ದ್ವೀಪದಲ್ಲಿಯ ಬೆಲ್ಲಾ ಆರ್ಗಾನಿಕ್ಸ್ ಏರ್ಪಡಿಸಿದ್ದ ಕುಂಬಳಕಾಯಿ ಹಬ್ಬಕ್ಕೆ  ಪರಿವಾರ ಸಮೇತರಾಗಿ ನಾವು ಹಾಜರಾದಾಗ ಆವರೆಗೂ ಕಾರ್ಮುಗಿಲಲ್ಲಿ ಬಚ್ಚಿಟ್ಟುಕೊಂಡಿದ್ದ ಸೂರ್ಯ ಕಣ್ಣು ಕುಕ್ಕುವಂತಹ  ಬೆಳಕನ್ನು ಚೆಲ್ಲುತ್ತ  ಹೊರಗೆ ಇಣುಕಿದ



ಒಂದು ಕ್ಷಣ ಮಳೆಯಾದರೆ ಮರು ಕ್ಷಣವೇ ಎಲ್ಲಿಂದಲೋ ತೂರಿ ಬಂದು  ಜಾಜ್ವಲ್ಯವಾದ ಪ್ರಕಾಶವನ್ನು ಬೀರುವ ಪೋರ್ಟ್ಲ್ಯಾನ್ಡ್  ಸೂರ್ಯನ  ಕಣ್ಣಾಮುಚ್ಚಿ  ಆಟಕ್ಕೆ ನಾವು ಈಗಾಗಲೇ ಹೊಂದಿಕೊಂಡಿದ್ದೆವು!  ಬಿಸಿಲಾದರೇನು? ಮಳೆಯಾದರೇನು? ವಾರದ ಅಂತ್ಯದಲ್ಲಿ  ಆಚರಿಸಲ್ಪಡುವ ಎಲ್ಲ ಹಬ್ಬಗಳಿಗೂ ನಗರವಾಸಿಗಳು ಮಕ್ಕಳು ಮರಿಗಳೊಂದಿಗೆ ಹಾಜರಾಗುತ್ತಾರೆ!
ಕಾರ್ಮುಗಿಲ ಕಿರೀಟ ಧರಿಸಿದ್ದ ಪರ್ವತಶ್ರೇಣಿಗಳ ಹಿನ್ನೆಲೆಯಲ್ಲಿ ಹಚ್ಛೆ ಹಸಿರಾದ ಹುಲ್ಲು ಹಾಸಿನ ಮೇಲೆ ಚಿನ್ನದ ಚೆಂಡುಗಳಂತೆ ಉರುಳಿಕೊಂಡಿರುವ  ಕುಂಬಳಕಾಯಿಗಳು -



ಪಂಪ್ಕಿನ್ ಪ್ಯಾಚ್ ಎಂಬ ಕುಂಬಳ ಬಳ್ಳಿಗಳ ತೋಟದಿಂದ ನಾವೇ ಸ್ವತಃ ನಮಗೆ ಬೇಕಾದ ಕಾಯಿಗಳನ್ನು ಆರಿಸಿ ತೆಗೆದುಕೊಳ್ಳುಬಹುದಾದ  ಸೌಲಭ್ಯ -

                                                                            
ತೋಟದ ವರೆಗೆ ನಮ್ಮನ್ನು ಒಯ್ಯಲು ಹುಲ್ಲು ಮೆದೆ  ಹಾಸಿದ  ಟ್ರೈಲರೊಂದಿಗೆ ತಯಾರಾಗಿರುವ ಟ್ರ್ಯಾಕ್ಟರ್ -



ಉತ್ಸವಕ್ಕಾಗಿ ಸಜ್ಜುಗೊಳಿಸಲ್ಪಟ್ಟಿದ್ದ  ಮಾರುಕಟ್ಟೆಯಲ್ಲಿ ವಿವಿಧ ಗಾತ್ರಗಳಲ್ಲಿ, ವಿವಿಧ ಆಕಾರಗಳಲ್ಲಿ, ಕಣ್ಣುಗಳನ್ನು ಕೋರೈಸುವಂತಹ  ವಿವಿಧ ಬಣ್ಣಗಳಿಂದ ಕೂಡಿದ  ಕುಂಬಳಕಾಯಿಗಳ  ರಾಶಿ -





ವಿಶೇಷವಾದ ಹ್ಯಾಲೋವೀನ್  ಅಲಂಕಾರದಲ್ಲಿ ಕಂಗೊಳಿಸುವ  ಮಾರ್ಕೆಟ್ ಚೌಕ -




ಬಗೆ ಬಗೆಯ ಪಾನೀಯಗಳು, ಆಹಾರಗಳು ಮತ್ತು ತಿಂಡಿಗಳನ್ನು ಬಿಸಿ ಬಿಸಿಯಾಗಿ ಸರಬರಾಜು ಮಾಡುವ ಫುಡ್ ಪೆವಿಲಿಯನ್ಗಳು -



ಮಕ್ಕಳಿಗಾಗಿ ಹಸುವಿನಾಕಾರದ ಬೋಗಿಗಳೊಂದಿಗೆ ಪುಟಾಣಿ ಎಕ್ಸ್ಪ್ರೆಸ್ -




ಶುಭ್ರವಾದ ಪುಟ್ಟ ಮೃಗಾಲಯದಲ್ಲಿ ಮಕ್ಕಳಿಗಾಗಿ, ಅವರುಗಳು  ಮುದ್ದಿಸಿ, ತಿನ್ನಿಸಿ ಆಡಿಸಲೆಂದು  ಬೇಲಿಯೊಳಗೆ ಕೂಡಿಡಲ್ಪಟ್ಟಿದ್ದ ಕರುಗಳು, ಕುರಿಮರಿಗಳು ಮತ್ತು ಮರಿಹಂದಿಗಳು -


ಮಕ್ಕಳಿಗೆಂದೇ ಏರ್ಪಡಿಸಲಾಗಿದ್ದ  ಬೊಂಬೆ  ಬಾತುಗಳ ಈಜುವ ಸ್ಪರ್ಧೆ ( ರಬ್ಬರ್ ಡಕ್ ರೇಸ್)- 
ಅದಲ್ಲದೆ ಮಕ್ಕಳಿಗೆ ಬಹು ಪ್ರಿಯವಾದ ಫೇಸ್ ಪೇಂಟಿಂಗ್ ಮತ್ತು ಪಾಪ್ ಕಾರ್ನ್ ಸ್ಟಾಲ್ಗಳು -

'ಕಾರ್ನ್ ಮೇಜ್' (corn maze) ಎಂಬ ಸಾಹಸದಾಟ ಮಕ್ಕಳನ್ನಲ್ಲದೆ ಹಿರಿಯರನ್ನೂ ಆಕರ್ಷಿಸುತ್ತದೆಜೋಳದ ಗದ್ದೆಗಳಲ್ಲಿ ಏರ್ಪಡಿಸಲಾಗಿದ್ದ ಚಕ್ರ ವ್ಯೂಹದೊಳಗೆ  ಹೊಕ್ಕು ನಿರ್ದಿಷ್ಟ ಕಾಲದೊಳಗೆ ಹೊರ ಬರ ಬೇಕಾದಂತಹ ಆಟ ಇದು. 'ಹಾಂಟೆಡ್ ಕಾರ್ನ್ ಮೇಜ್' (haunted corn maze) ಎಂಬ ರೋಮಾಂಚಕಾರೀ ಚಕ್ರವ್ಯೂಹ ಹೃದಯ ಗಟ್ಟಿ ಇದ್ದವರಿಗೆ ಮಾತ್ರ! ಹ್ಯಾಲೋವೀನ್ ಪ್ರಯುಕ್ತ ವ್ಯೂಹದೊಳಗೆ ಭಯಾನಕ  ಭೂತಗಳು ಅನಿರೀಕ್ಷಿತವಾಗಿ ನಮ್ಮ ಮುಂದೆ ಪ್ರತ್ಯಕ್ಷವಾಗಿ ದಿಗಿಲು ಹುಟ್ಟಿಸುತ್ತವೆ !


ಕುಂಬಳಕಾಯಿ ಹಬ್ಬದಲ್ಲಿ ಪಾಲ್ಗೊಂಡ ನೂತನ ಅನುಭವದೊಂದಿಗೆ ನಾವು ಹೊರ ಬರುತ್ತೇವೆ. ಗಲ್ಲಾದಲ್ಲಿ  ಕುಂಬಳಕಾಯಿಗಳಿಗೆ ಬೆಲೆ ನಿರ್ಣಯಿಸುವ ರೀತಿ ಕಂಡು ವಿಚಿತ್ರವೆನಿಸುತ್ತದೆ. ಪ್ರತ್ಯೇಕವಾದ ಟೇಬಲ್ (pricing table) ಮೇಲೆ ಒಂದೊಂದು ಕಾಯನ್ನೂ ಕೂರಿಸಿ, ಅದರ ಸುತ್ತಳತೆಗೆ ತಕ್ಕಂತೆ  ಬೆಲೆ ನಿರ್ಣಯಿಸಲ್ಪಡುತ್ತದೆ




ಕುಂಬಳಕಾಯಿಗಳನ್ನು ತುಂಬಿಕೊಂಡು ಬಂದ  ಕೈಬಂಡಿಯನ್ನು ವಾಪಸ್ಸು ಮಾಡಿ,   ಒಬ್ಬೊಬ್ಬರೂ ಎರಡೆರಡು ಕುಂಬಳಕಾಯಿಗಳನ್ನು ಹೊರಲಾರದೆ ಹೊತ್ತುಕೊಂಡು ಕಾರನ್ನು ಕುರಿತು ನಡೆಯುತ್ತೇವೆ!
 ಕುಂಬಳಕಾಯಿ ಕಾಲದಲ್ಲಿ ಸೂಪರ್ ಮಾರ್ಕೆಟ್ಗಳಲ್ಲಿ  ಮಾರಾಟವಾಗುವ ಎಲ್ಲ ತಿಂಡಿ
ತಿನಿಸುಗಳಲ್ಲೂ  ಕುಂಬಳಕಾಯಿಯೇ ಪ್ರಧಾನ ಪದಾರ್ಥವಾಗಿದೆ. ಪಂಪ್ಕಿನ್ ಬ್ರೆಡ್, ಪಂಪ್ಕಿನ್ ಕೇಕ್, ಪಂಪ್ಕಿನ್ ಕುಕ್ಕಿ, ಪಂಪ್ಕಿನ್ ಪೈ, ಪಂಪ್ಕಿನ್ ಸೂಪ್ ಇನ್ನೂ ಎಷ್ಟೋ ಪದಾರ್ಥಗಳು! ಸ್ಟಾರ್ ಬಕ್ಸ್ ಕಾಫಿ ಶಾಪಲ್ಲಿ ಪಂಪ್ಕಿನ್ ಲಾಟ್ಟೆ  ಎಂಬ ಪೇಯ ಸಹ ದೊರಕುತ್ತದೆ ಎಂದರೆ ಕುಂಬಳಕಾಯಿಯ ವಿಶಾಲವಾದ  ವ್ಯಾಪಕವನ್ನು ಏನೆಂದು ಹೇಳುವುದು? ಇಷ್ಟೆಲ್ಲಾ ದೊರಕಿದರೂ ಕುಂಬಳಕಾಯಿ ಹಬ್ಬಕ್ಕೆ ಆಗಮಿಸಿದವರೆಲ್ಲಾ  ಕೈಬಂಡಿಯ ತುಂಬ ಕುಂಬಳಕಾಯಿಗಳನ್ನು ಕೊಂಡುಕೊಂಡೇ ಹೋಗುತ್ತಾರೆ
ಕೊಂಡೊಯ್ದ  ಕುಂಬಳಕಾಯಿಗಳನ್ನು ಸುಂದರವಾಗಿ ಕೆತ್ತಿ ಹ್ಯಾಲೋವೀನ್ ಸಮಯ ಅವುಗಳಲ್ಲಿ ದೀಪಗಳನ್ನು ಹಚ್ಚಿಟ್ಟು, ಜಾಕ್ ಲ್ಯಾಂಟರ್ನ್ ಗಳನ್ನು  ಮನೆಯ ಮುಂದೆ ಅಲಂಕಾರವಾಗಿ ಇಡುತ್ತಾರೆ


                                
ನಮ್ಮ ಮನೆಯಲ್ಲಿ ಜಾಕ್ ಲ್ಯಾಂಟರ್ನ್ ಜೊತೆಗೆ ಕುಂಬಳಕಾಯಿ ತೊವ್ವೆ, ಕುಂಬಳಕಾಯಿ ಹಲ್ವ ಸಹ ತಯಾರಾಗುತ್ತವೆ!
ಒಟ್ಟಲ್ಲಿ ಸುಂದರವಾದ ವಪ್ಪಟ್ಟೂ ದ್ವೀಪದಲ್ಲಿ ನಾವು  ಕಂಡ ಕುಂಬಳಕಾಯಿ ಹಬ್ಬ ನಿಜಕ್ಕೂ ಬಹಳ ಮೋಜಿನ ಹಬ್ಬವೇ ಆಗಿತ್ತು!
-------------------------------------------------------------------------------------------------


Pumpkin Festival in Wappatoo Island

The road , winding across the thickly wooded Portland West Hills , is hardly visible through the thick sheets of rain . The headlights pick  out a series of hairpin bends and the silvery trail of the Multnomah Channel gurgling  by the road.  After  quite a rally,  we cross  Sauvie Island Bridge to arrive at Sauvie Island that was once known as Wappatoo Island .


We are greeted by the amazing sight of  an endless field of emerald green stretching to the horizon. It is a protected ecosystem that provides  a pit stop for migratory birds and the rich soil of the island supports cultivation of a variety of crops like Strawberry, Blueberry, Blackberry, Raspberry, Peach, Pear and Sweetcorn . It lies at  the confluence of rivers Willamette and Columbia, 10 miles away from Portland City .

September-October is a season of joy and festivities  for the people of Portland as it is Pumpkin Harvest time ! Fields  in and around Portland are flooded with bumper harvests of Pumpkin .



We are at the Pumpkin Festival organised by Bella Organics . The rain that was chasing our car has disappeared and a dazzling sun is lighting up the fields in brilliant colours . Weather in Portland is always a fickle see-saw  between dark clouds and bright Sun.

But rain or shine , all Portlanders set out with family and friends to have a field day at the Pumpkin patches . What a glorious sight these patches are ! Pumpkins like golden balls scattered thickly over velvetty fields of green ! 




Visitors can choose and pick pumpkins off the patch  by  themselves .

                                                        
They are taken to the patches by tractors pulling trailer wagons spread with hay.



There are also stalls selling pumpkins of all sizes and colours in lovely displays .





The market square is lively and is dazzling with decorations  for Halloween. 



There is brisk business in kiosks vending food and drinks.


There are many attractions for kids too , like a mini train with carriages that look like cows ! 



A small petting zoo with lambs , calves,  chicken and piglets and games like Rubber Duck Race and Face Painting .


“The Corn Maze”created in a corn field is a game of adventure  that attracts not only kids , but adults too. Getting lost inside the maze is easy ! “ The Haunted Corn Maze” is a variation that is for the stout hearted only ! You never know what horrible halloween creature will pounce on you at which corner !


After all the games and eating our fill , we check out with the pumpkins we have picked . They are not weighed for billing , but are priced according to the girth at The Pricing Table .



We return the wheelbarrow and carry our fat pumpkins to the car, staggering under their weight .

During Pumpkin Harvest Season , its Pumpkin all the way . Supermarkets sell pumpkin bread , pumpkin pies, pumpkin cake ,
pumpkin cookies , pumpkin soup ……including Pumpkin Latte in Starbucks ! 


                            

Inspite of such pumpkin overload , people still buy pumpkins by the dozen …..to carve Jack O Lanterns !
Lit up with a candle placed within the hollowed pumpkin these grinning
Jack O Lanterns  are displayed in their gardens , doorstep, window sill and roof tops .

In our home , in addition to becoming Jack O Lanterns , some of the pumpkins we picked also become   Kumblakai Thovve and Kumblakai Halwa .

The Pumpkin Festival at Wappatoo Island is total Fun !

-----------------------------------------------------------------------------------------------------