ಅದ್ದೂರಿ ಅಂಚೆ !
ಅಂಚೆ ಮತ್ತು ತಂತಿ ಸೇವೆ (Post and Telegraph Service) ಅಸ್ತಿತ್ವಕ್ಕೆ ಬರುವ ಮೊದಲು ಒಂದೆಡೆಯಿಂದ ಮತ್ತೊಂದೆಡೆಗೆ ಸಂದೇಶವಾಹಕರು ಸುದ್ದಿಯನ್ನು ಹೊತ್ತು ಹೋಗುತ್ತಿದ್ದರು. ಅವರನ್ನು ಓಲೆಗಾರರು , ದೂತರು , ಹರಕಾರರು, ರನ್ನರ್ ಎಂದು ಕರೆಯುತ್ತಿದ್ದರು. ಇವರುಗಳು ಟಪ್ಪಾ ಓಟದ ( Relay race) ಮೂಲಕ ವೇಗವಾಗಿ ಸುದ್ದಿಯನ್ನು ತಲುಪಿಸಬಲ್ಲವರಾಗಿದ್ದರು .
ಹಿಂದಿನ ಕಾಲದಲ್ಲಿ ಪಕ್ಷಿ ಪ್ರಾಣಿಗಳೂ ಸಹ ಸಂದೇಶವಾಹಕರಾಗಿದ್ದವು .
ಬ್ರಿಟಿಷರ ಆಳ್ವಿಕೆಯಲ್ಲಿದ್ದ ಆಸ್ಟ್ರೇಲಿಯಾದಲ್ಲಿ , ಆಫ್ಘಾನಿಸ್ತಾನದ ಒಂಟೆ ಸವಾರರ ನೆರವಿನಿಂದ ಒಂಟೆ ಅಂಚೆ ಜಾರಿಯಲ್ಲಿತ್ತು .
ಅಲಾಸ್ಕಾದಲ್ಲಿ ಇಂದಿಗೂ ಚಾಲನೆಯಲ್ಲಿರುವ ಡಾಗ್ಸ್ಲೆಡ್ ಮೇಲ್ ಎಂಬ ಅಂಚೆಗಾಗಿ ಶ್ವಾನಗಳನ್ನು ಪಳಗಿಸಲಾಗಿದೆ .
ಉತ್ತರ ಅಮೇರಿಕಾದಲ್ಲಿ ಪೋನಿ ಎಕ್ಸ್ಪ್ರೆಸ್ ಅಂಚೆಗಾಗಿ ಕುದುರೆಗಳನ್ನು ತರಬೇತು ಮಾಡಿದ್ದರು.
ಲೋಕದಾದ್ಯಂತ ಟಪ್ಪಾ ಕುದುರೆಗಳ ತಂಡಗಳು ಅಂಚೆ ಸೇವೆಗೆಂದೇ ತಯಾರಾಗಿದ್ದವು .
ಹತ್ತೊಂಬತ್ತನೇ ಶತಮಾನದ ಕೊನೆಯವರೆಗೂ ಅಲಾಸ್ಕಾದಲ್ಲಿ ಹಿಮ ಸಾರಂಗಗಳನ್ನು / (ರೇನ್ಡೀರ್) ಅಂಚೆಗಾಗಿ ಉಪಯೋಗಿಸಲಾಯಿತು .
ಪರ್ಷಿಯಾ ದೇಶದಲ್ಲಿ ಪಾರಿವಾಳಗಳ ಅಂಚೆ ರೂಡಿಯಲ್ಲಿತ್ತು .
೧೯೩೭ ಲ್ಲಿ ಕೂಚ್ ಬಿಹಾರ್ ಮಹಾರಾಜರು ತನ್ನ ಪ್ರತಿಷ್ಠೆಗೆ ತಕ್ಕಂತ ಒಂದು ಅದ್ದೂರಿಯ ಅಂಚೆಯ ಮೂಲಕ ಬರೋಡಾ ಮಹಾರಾಜರಿಗೆ ಒಂದು ಪತ್ರವನ್ನು ಕಳುಹಿಸಿದರು .
ಆ ಅದ್ಧೂರಿಯ ಸಂದೇಶವಾಹಕನ ಹೆಸರು ಜೆಯ್ ಸಿಂಗ್ ! ಕಲ್ಕತ್ತೆಯಿಂದ ಮುಂಬಯ್ ವರೆಗೂ ಹಡಗಿನಲ್ಲಿ ಪಯಣಿಸಿದ ಪೋಸ್ಟ್ ಮ್ಯಾನ್ ಜೆಯ್ ಸಿಂಗ್ !

ಅಲ್ಲಿಂದ ತನ್ನ ಗಜ ಗಂಭೀರ ನಡಿಗೆಯಲ್ಲಿ ಬರೋಡ ತಲುಪಿ ಮಹಾರಾಜರಿಗೆ ಪತ್ರ ತಲುಪಿಸಿದ !

ಈ ಅದ್ಧೂರಿಯ ಆನೆ ಅಂಚೆ ( ಹಾತಿ ಡಾಕ್ )ಕೂಚ್ ಬಿಹಾರ್ ನಿಂದ ಬರೋಡಾ ತಲುಪಲು ತೆಗೆದುಕೊಂಡ ಅವಕಾಶ ಎಷ್ಟು ಎಂಬುದು ಮಾತ್ರ ಮರ್ಮವಾಗಿಯೇ ಉಳಿದಿದೆ !
ಅಂಚೆ ಮತ್ತು ತಂತಿ ಸೇವೆ (Post and Telegraph Service) ಅಸ್ತಿತ್ವಕ್ಕೆ ಬರುವ ಮೊದಲು ಒಂದೆಡೆಯಿಂದ ಮತ್ತೊಂದೆಡೆಗೆ ಸಂದೇಶವಾಹಕರು ಸುದ್ದಿಯನ್ನು ಹೊತ್ತು ಹೋಗುತ್ತಿದ್ದರು. ಅವರನ್ನು ಓಲೆಗಾರರು , ದೂತರು , ಹರಕಾರರು, ರನ್ನರ್ ಎಂದು ಕರೆಯುತ್ತಿದ್ದರು. ಇವರುಗಳು ಟಪ್ಪಾ ಓಟದ ( Relay race) ಮೂಲಕ ವೇಗವಾಗಿ ಸುದ್ದಿಯನ್ನು ತಲುಪಿಸಬಲ್ಲವರಾಗಿದ್ದರು .
ಹಿಂದಿನ ಕಾಲದಲ್ಲಿ ಪಕ್ಷಿ ಪ್ರಾಣಿಗಳೂ ಸಹ ಸಂದೇಶವಾಹಕರಾಗಿದ್ದವು .
ಬ್ರಿಟಿಷರ ಆಳ್ವಿಕೆಯಲ್ಲಿದ್ದ ಆಸ್ಟ್ರೇಲಿಯಾದಲ್ಲಿ , ಆಫ್ಘಾನಿಸ್ತಾನದ ಒಂಟೆ ಸವಾರರ ನೆರವಿನಿಂದ ಒಂಟೆ ಅಂಚೆ ಜಾರಿಯಲ್ಲಿತ್ತು .
ಅಲಾಸ್ಕಾದಲ್ಲಿ ಇಂದಿಗೂ ಚಾಲನೆಯಲ್ಲಿರುವ ಡಾಗ್ಸ್ಲೆಡ್ ಮೇಲ್ ಎಂಬ ಅಂಚೆಗಾಗಿ ಶ್ವಾನಗಳನ್ನು ಪಳಗಿಸಲಾಗಿದೆ .
ಉತ್ತರ ಅಮೇರಿಕಾದಲ್ಲಿ ಪೋನಿ ಎಕ್ಸ್ಪ್ರೆಸ್ ಅಂಚೆಗಾಗಿ ಕುದುರೆಗಳನ್ನು ತರಬೇತು ಮಾಡಿದ್ದರು.
ಲೋಕದಾದ್ಯಂತ ಟಪ್ಪಾ ಕುದುರೆಗಳ ತಂಡಗಳು ಅಂಚೆ ಸೇವೆಗೆಂದೇ ತಯಾರಾಗಿದ್ದವು .
ಪರ್ಷಿಯಾ ದೇಶದಲ್ಲಿ ಪಾರಿವಾಳಗಳ ಅಂಚೆ ರೂಡಿಯಲ್ಲಿತ್ತು .
ಆ ಅದ್ಧೂರಿಯ ಸಂದೇಶವಾಹಕನ ಹೆಸರು ಜೆಯ್ ಸಿಂಗ್ ! ಕಲ್ಕತ್ತೆಯಿಂದ ಮುಂಬಯ್ ವರೆಗೂ ಹಡಗಿನಲ್ಲಿ ಪಯಣಿಸಿದ ಪೋಸ್ಟ್ ಮ್ಯಾನ್ ಜೆಯ್ ಸಿಂಗ್ !

ಅಲ್ಲಿಂದ ತನ್ನ ಗಜ ಗಂಭೀರ ನಡಿಗೆಯಲ್ಲಿ ಬರೋಡ ತಲುಪಿ ಮಹಾರಾಜರಿಗೆ ಪತ್ರ ತಲುಪಿಸಿದ !

ಈ ಅದ್ಧೂರಿಯ ಆನೆ ಅಂಚೆ ( ಹಾತಿ ಡಾಕ್ )ಕೂಚ್ ಬಿಹಾರ್ ನಿಂದ ಬರೋಡಾ ತಲುಪಲು ತೆಗೆದುಕೊಂಡ ಅವಕಾಶ ಎಷ್ಟು ಎಂಬುದು ಮಾತ್ರ ಮರ್ಮವಾಗಿಯೇ ಉಳಿದಿದೆ !
Nice research work!
ReplyDeleteThank you.
Delete