ಹಸಿರು ವೃಕ್ಷಗಳು ದಟ್ಟೈಸಿದ್ದ ಕಾಡು ಪ್ರದೇಶ -
ದಾರಿ ಕಾಣದಷ್ಟು ಚಟ ಪಟ ಬೀಳುತ್ತಿದ್ದ ಮಳೆ ಹನಿಗಳು -
ಹೆಡ್ ಲೈಟಿನಲ್ಲಿ ಕಂಡೂ ಕಾಣದಂತೆ ಗೋಚರವಾದ ಕಡಿದಾದ ಹೇರ ಪಿನ್ ತಿರುವುಗಳು -
ಪೋರ್ಟ್ಲ್ಯಾನ್ಡ್ ವೆಸ್ಟ್ ಹಿಲ್ಸ್ (Portland West Hills) ಎಂಬ ಪರ್ವತ ಶ್ರೇಣಿಯಿಂದ ಕೆಳಗಿಳಿಯುವುದೇ ಒಂದು ಸಾಹಸದ ಕಾರ್ಯವಾಗಿತ್ತು! ಪರ್ವತದ ಬುಡದಲ್ಲಿಯ ಹೆದ್ದಾರಿಯ ಜೊತೆ ಜೊತೆಯಾಗಿ ಹರಿದು ಬರುತ್ತದೆ ಮಲ್ಟ್ನೋಮ ಚ್ಯಾನಲ್ (Multnomah Channel) ಎಂಬ ನಾಲೆ. ಕೆಲವೇ ನಿಮಿಷಗಳಲ್ಲಿ ಸಾವಿ ಐಲಂಡ್ ಸೇತುವೆಯನ್ನು (Sauvie Island
Bridge) ಹಾದು ನಾವು ತಲಪುವುದು ಪ್ರಾಚೀನದಲ್ಲಿ ವಪ್ಪಟ್ಟೂ ಐಲ್ಯಾಂಡ್ ಎನ್ನಿಸಿಕೊಂಡಿದ್ದ ಇಂದಿನ ಸಾವಿ ಐಲಂಡನ್ನ!
ದಿಗಂತದ ವರೆಗೆ ಹರಡಿಕೊಂಡಿರುವ ಅಖಂಡವಾದ ಹಚ್ಛೆ ಹಸಿರಾದ ಪ್ರದೇಶ ನಮಗೆ ಸುಸ್ವಾಗತ ನೀಡುತ್ತದೆ! ವಲಸೆ ಹೋಗುವ ಪಕ್ಷಿ ಪ್ರಾಣಿಗಳಿಗೆ ತಾತ್ಕಾಲಿಕ ತಂಗುದಾಣವಾಗಿರುವ ಸಂರಕ್ಷಿಸಲ್ಪಟ್ಟ ಈ ಆರ್ದ್ರ ಭೂಮಿ ಅನೇಕ ಸಸ್ಯಗಳಿಗೆ ನೆಲೆಬೀಡಾಗಿದೆ. ಸ್ಟ್ರಾ ಬೆರಿ, ರಾಸ್ಪ್ ಬೆರಿ, ಬ್ಲೂ ಬೆರಿ, ಬ್ಲ್ಯಾಕ್ ಬೆರಿ, ಪೀಚ್, ಪೇರ್ ಮುಂತಾದ ಅನೇಕ ಹಣ್ಣುಗಳನ್ನೂ ಜೋಳ ಮತ್ತು ಇತರ ತರಕಾರಿಗಳನ್ನೂ ಉತ್ಪನ್ನ ಮಾಡುವ ಫಲವತ್ತಾದ ಮಣ್ಣನ್ನು ಹೊಂದಿದೆ ಸಾವಿ ಐಲಂಡ್. ಈ ದ್ವೀಪವು ಪೋರ್ಟ್ಲ್ಯಾನ್ಡ್ನ ವಾಯವ್ಯಕ್ಕೆ ಹತ್ತು ಮೈಲಿ ದೂರದಲ್ಲಿ ಕೊಲಂಬಿಯ ನದಿ ಮತ್ತು ವಿಲ್ಲಾಮೆಟ್ ನದಿಗಳು ಸಂಗಮವಾಗುವ ಪ್ರದೇಶದಲ್ಲಿದೆ.
ಸೆಪ್ಟಮ್ಬರ್ - ಅಕ್ಟೋಬರ್ ತಿಂಗಳು ಎಂದರೆ ಪೋರ್ಟ್ಲ್ಯಾನ್ಡ್ ವಾಸಿಗಳಿಗೆ ಎಲ್ಲಿಲ್ಲದ ಸಂಭ್ರಮ! ಏಕೆಂದರೆ ಅದು ಕುಂಬಳಕಾಯಿಯ ಸುಗ್ಗಿ ಕಾಲ! ಸುತ್ತಮುತ್ತಲಿನ ಕುಂಬಳಕಾಯಿ ತೋಟಗಳು ಕುಂಬಳಕಾಯಿ ಉತ್ಸವಕ್ಕೆ ಸಡಗರದಿಂದ ಅಣಿಯಾಗುವ ಕಾಲ. ವಪ್ಪಟ್ಟೂ ದ್ವೀಪದಲ್ಲಿಯ ಬೆಲ್ಲಾ ಆರ್ಗಾನಿಕ್ಸ್ ಏರ್ಪಡಿಸಿದ್ದ ಕುಂಬಳಕಾಯಿ ಹಬ್ಬಕ್ಕೆ ಪರಿವಾರ ಸಮೇತರಾಗಿ ನಾವು ಹಾಜರಾದಾಗ ಆವರೆಗೂ ಕಾರ್ಮುಗಿಲಲ್ಲಿ ಬಚ್ಚಿಟ್ಟುಕೊಂಡಿದ್ದ ಸೂರ್ಯ ಕಣ್ಣು ಕುಕ್ಕುವಂತಹ ಬೆಳಕನ್ನು ಚೆಲ್ಲುತ್ತ ಹೊರಗೆ ಇಣುಕಿದ!
ಒಂದು ಕ್ಷಣ ಮಳೆಯಾದರೆ ಮರು ಕ್ಷಣವೇ ಎಲ್ಲಿಂದಲೋ ತೂರಿ ಬಂದು ಜಾಜ್ವಲ್ಯವಾದ ಪ್ರಕಾಶವನ್ನು ಬೀರುವ ಪೋರ್ಟ್ಲ್ಯಾನ್ಡ್ ಸೂರ್ಯನ ಕಣ್ಣಾಮುಚ್ಚಿ ಆಟಕ್ಕೆ ನಾವು ಈಗಾಗಲೇ ಹೊಂದಿಕೊಂಡಿದ್ದೆವು! ಬಿಸಿಲಾದರೇನು? ಮಳೆಯಾದರೇನು? ವಾರದ ಅಂತ್ಯದಲ್ಲಿ ಆಚರಿಸಲ್ಪಡುವ ಎಲ್ಲ ಹಬ್ಬಗಳಿಗೂ ನಗರವಾಸಿಗಳು ಮಕ್ಕಳು ಮರಿಗಳೊಂದಿಗೆ ಹಾಜರಾಗುತ್ತಾರೆ!
ಒಂದು ಕ್ಷಣ ಮಳೆಯಾದರೆ ಮರು ಕ್ಷಣವೇ ಎಲ್ಲಿಂದಲೋ ತೂರಿ ಬಂದು ಜಾಜ್ವಲ್ಯವಾದ ಪ್ರಕಾಶವನ್ನು ಬೀರುವ ಪೋರ್ಟ್ಲ್ಯಾನ್ಡ್ ಸೂರ್ಯನ ಕಣ್ಣಾಮುಚ್ಚಿ ಆಟಕ್ಕೆ ನಾವು ಈಗಾಗಲೇ ಹೊಂದಿಕೊಂಡಿದ್ದೆವು! ಬಿಸಿಲಾದರೇನು? ಮಳೆಯಾದರೇನು? ವಾರದ ಅಂತ್ಯದಲ್ಲಿ ಆಚರಿಸಲ್ಪಡುವ ಎಲ್ಲ ಹಬ್ಬಗಳಿಗೂ ನಗರವಾಸಿಗಳು ಮಕ್ಕಳು ಮರಿಗಳೊಂದಿಗೆ ಹಾಜರಾಗುತ್ತಾರೆ!
ಕಾರ್ಮುಗಿಲ ಕಿರೀಟ ಧರಿಸಿದ್ದ ಪರ್ವತಶ್ರೇಣಿಗಳ ಹಿನ್ನೆಲೆಯಲ್ಲಿ ಹಚ್ಛೆ ಹಸಿರಾದ ಹುಲ್ಲು ಹಾಸಿನ ಮೇಲೆ ಚಿನ್ನದ ಚೆಂಡುಗಳಂತೆ ಉರುಳಿಕೊಂಡಿರುವ ಕುಂಬಳಕಾಯಿಗಳು -
ಪಂಪ್ಕಿನ್ ಪ್ಯಾಚ್ ಎಂಬ ಕುಂಬಳ ಬಳ್ಳಿಗಳ ತೋಟದಿಂದ ನಾವೇ ಸ್ವತಃ ನಮಗೆ ಬೇಕಾದ ಕಾಯಿಗಳನ್ನು ಆರಿಸಿ ತೆಗೆದುಕೊಳ್ಳುಬಹುದಾದ ಸೌಲಭ್ಯ -
ಉತ್ಸವಕ್ಕಾಗಿ ಸಜ್ಜುಗೊಳಿಸಲ್ಪಟ್ಟಿದ್ದ ಮಾರುಕಟ್ಟೆಯಲ್ಲಿ ವಿವಿಧ ಗಾತ್ರಗಳಲ್ಲಿ, ವಿವಿಧ ಆಕಾರಗಳಲ್ಲಿ, ಕಣ್ಣುಗಳನ್ನು ಕೋರೈಸುವಂತಹ ವಿವಿಧ ಬಣ್ಣಗಳಿಂದ ಕೂಡಿದ ಕುಂಬಳಕಾಯಿಗಳ ರಾಶಿ -
ವಿಶೇಷವಾದ ಹ್ಯಾಲೋವೀನ್ ಅಲಂಕಾರದಲ್ಲಿ ಕಂಗೊಳಿಸುವ ಮಾರ್ಕೆಟ್ ಚೌಕ -
ವಿಶೇಷವಾದ ಹ್ಯಾಲೋವೀನ್ ಅಲಂಕಾರದಲ್ಲಿ ಕಂಗೊಳಿಸುವ ಮಾರ್ಕೆಟ್ ಚೌಕ -
ಮಕ್ಕಳಿಗಾಗಿ ಹಸುವಿನಾಕಾರದ ಬೋಗಿಗಳೊಂದಿಗೆ ಪುಟಾಣಿ ಎಕ್ಸ್ಪ್ರೆಸ್ -
ಶುಭ್ರವಾದ ಪುಟ್ಟ ಮೃಗಾಲಯದಲ್ಲಿ ಮಕ್ಕಳಿಗಾಗಿ, ಅವರುಗಳು ಮುದ್ದಿಸಿ, ತಿನ್ನಿಸಿ ಆಡಿಸಲೆಂದು ಬೇಲಿಯೊಳಗೆ ಕೂಡಿಡಲ್ಪಟ್ಟಿದ್ದ ಕರುಗಳು, ಕುರಿಮರಿಗಳು ಮತ್ತು ಮರಿಹಂದಿಗಳು -
ಅದಲ್ಲದೆ ಮಕ್ಕಳಿಗೆ ಬಹು ಪ್ರಿಯವಾದ ಫೇಸ್ ಪೇಂಟಿಂಗ್ ಮತ್ತು ಪಾಪ್ ಕಾರ್ನ್ ಸ್ಟಾಲ್ಗಳು -
'ಕಾರ್ನ್ ಮೇಜ್' (corn maze) ಎಂಬ ಸಾಹಸದಾಟ ಮಕ್ಕಳನ್ನಲ್ಲದೆ ಹಿರಿಯರನ್ನೂ ಆಕರ್ಷಿಸುತ್ತದೆ. ಜೋಳದ ಗದ್ದೆಗಳಲ್ಲಿ ಏರ್ಪಡಿಸಲಾಗಿದ್ದ ಚಕ್ರ ವ್ಯೂಹದೊಳಗೆ ಹೊಕ್ಕು ನಿರ್ದಿಷ್ಟ ಕಾಲದೊಳಗೆ ಹೊರ ಬರ ಬೇಕಾದಂತಹ
ಆಟ ಇದು. 'ಹಾಂಟೆಡ್ ಕಾರ್ನ್ ಮೇಜ್' (haunted corn maze) ಎಂಬ ರೋಮಾಂಚಕಾರೀ ಚಕ್ರವ್ಯೂಹ ಹೃದಯ ಗಟ್ಟಿ ಇದ್ದವರಿಗೆ ಮಾತ್ರ! ಹ್ಯಾಲೋವೀನ್ ಪ್ರಯುಕ್ತ ಈ ವ್ಯೂಹದೊಳಗೆ ಭಯಾನಕ ಭೂತಗಳು ಅನಿರೀಕ್ಷಿತವಾಗಿ ನಮ್ಮ ಮುಂದೆ ಪ್ರತ್ಯಕ್ಷವಾಗಿ ದಿಗಿಲು ಹುಟ್ಟಿಸುತ್ತವೆ !
ಕುಂಬಳಕಾಯಿ ಹಬ್ಬದಲ್ಲಿ ಪಾಲ್ಗೊಂಡ ನೂತನ ಅನುಭವದೊಂದಿಗೆ ನಾವು ಹೊರ ಬರುತ್ತೇವೆ. ಗಲ್ಲಾದಲ್ಲಿ ಕುಂಬಳಕಾಯಿಗಳಿಗೆ ಬೆಲೆ ನಿರ್ಣಯಿಸುವ ರೀತಿ ಕಂಡು ವಿಚಿತ್ರವೆನಿಸುತ್ತದೆ. ಪ್ರತ್ಯೇಕವಾದ ಟೇಬಲ್ (pricing table) ಮೇಲೆ ಒಂದೊಂದು ಕಾಯನ್ನೂ ಕೂರಿಸಿ, ಅದರ ಸುತ್ತಳತೆಗೆ ತಕ್ಕಂತೆ ಬೆಲೆ ನಿರ್ಣಯಿಸಲ್ಪಡುತ್ತದೆ!
ಕುಂಬಳಕಾಯಿಗಳನ್ನು ತುಂಬಿಕೊಂಡು ಬಂದ ಕೈಬಂಡಿಯನ್ನು ವಾಪಸ್ಸು ಮಾಡಿ, ಒಬ್ಬೊಬ್ಬರೂ ಎರಡೆರಡು ಕುಂಬಳಕಾಯಿಗಳನ್ನು ಹೊರಲಾರದೆ ಹೊತ್ತುಕೊಂಡು ಕಾರನ್ನು ಕುರಿತು ನಡೆಯುತ್ತೇವೆ!
ಕುಂಬಳಕಾಯಿ ಕಾಲದಲ್ಲಿ ಸೂಪರ್ ಮಾರ್ಕೆಟ್ಗಳಲ್ಲಿ ಮಾರಾಟವಾಗುವ ಎಲ್ಲ ತಿಂಡಿ
ತಿನಿಸುಗಳಲ್ಲೂ ಕುಂಬಳಕಾಯಿಯೇ ಪ್ರಧಾನ ಪದಾರ್ಥವಾಗಿದೆ. ಪಂಪ್ಕಿನ್ ಬ್ರೆಡ್, ಪಂಪ್ಕಿನ್ ಕೇಕ್, ಪಂಪ್ಕಿನ್ ಕುಕ್ಕಿ, ಪಂಪ್ಕಿನ್ ಪೈ, ಪಂಪ್ಕಿನ್ ಸೂಪ್ ಇನ್ನೂ ಎಷ್ಟೋ ಪದಾರ್ಥಗಳು! ಸ್ಟಾರ್ ಬಕ್ಸ್ ಕಾಫಿ ಶಾಪಲ್ಲಿ ಪಂಪ್ಕಿನ್ ಲಾಟ್ಟೆ ಎಂಬ ಪೇಯ ಸಹ ದೊರಕುತ್ತದೆ ಎಂದರೆ ಕುಂಬಳಕಾಯಿಯ ವಿಶಾಲವಾದ ವ್ಯಾಪಕವನ್ನು ಏನೆಂದು ಹೇಳುವುದು? ಇಷ್ಟೆಲ್ಲಾ ದೊರಕಿದರೂ ಕುಂಬಳಕಾಯಿ ಹಬ್ಬಕ್ಕೆ ಆಗಮಿಸಿದವರೆಲ್ಲಾ ಕೈಬಂಡಿಯ ತುಂಬ ಕುಂಬಳಕಾಯಿಗಳನ್ನು ಕೊಂಡುಕೊಂಡೇ ಹೋಗುತ್ತಾರೆ!
ಕೊಂಡೊಯ್ದ ಕುಂಬಳಕಾಯಿಗಳನ್ನು ಸುಂದರವಾಗಿ ಕೆತ್ತಿ ಹ್ಯಾಲೋವೀನ್ ಸಮಯ ಅವುಗಳಲ್ಲಿ ದೀಪಗಳನ್ನು ಹಚ್ಚಿಟ್ಟು, ಆ ಜಾಕ್ ಆ ಲ್ಯಾಂಟರ್ನ್ ಗಳನ್ನು ಮನೆಯ ಮುಂದೆ ಅಲಂಕಾರವಾಗಿ ಇಡುತ್ತಾರೆ!
ನಮ್ಮ ಮನೆಯಲ್ಲಿ ಜಾಕ್ ಆ ಲ್ಯಾಂಟರ್ನ್ ಜೊತೆಗೆ ಕುಂಬಳಕಾಯಿ ತೊವ್ವೆ, ಕುಂಬಳಕಾಯಿ ಹಲ್ವ ಸಹ ತಯಾರಾಗುತ್ತವೆ!
ಕೊಂಡೊಯ್ದ ಕುಂಬಳಕಾಯಿಗಳನ್ನು ಸುಂದರವಾಗಿ ಕೆತ್ತಿ ಹ್ಯಾಲೋವೀನ್ ಸಮಯ ಅವುಗಳಲ್ಲಿ ದೀಪಗಳನ್ನು ಹಚ್ಚಿಟ್ಟು, ಆ ಜಾಕ್ ಆ ಲ್ಯಾಂಟರ್ನ್ ಗಳನ್ನು ಮನೆಯ ಮುಂದೆ ಅಲಂಕಾರವಾಗಿ ಇಡುತ್ತಾರೆ!
ನಮ್ಮ ಮನೆಯಲ್ಲಿ ಜಾಕ್ ಆ ಲ್ಯಾಂಟರ್ನ್ ಜೊತೆಗೆ ಕುಂಬಳಕಾಯಿ ತೊವ್ವೆ, ಕುಂಬಳಕಾಯಿ ಹಲ್ವ ಸಹ ತಯಾರಾಗುತ್ತವೆ!
ಒಟ್ಟಲ್ಲಿ ಸುಂದರವಾದ ವಪ್ಪಟ್ಟೂ ದ್ವೀಪದಲ್ಲಿ ನಾವು ಕಂಡ ಕುಂಬಳಕಾಯಿ ಹಬ್ಬ ನಿಜಕ್ಕೂ ಬಹಳ ಮೋಜಿನ ಹಬ್ಬವೇ ಆಗಿತ್ತು!
-------------------------------------------------------------------------------------------------
The market square is lively and is dazzling with decorations for Halloween.
There is brisk business in kiosks vending food and drinks.
Pumpkin Festival
in Wappatoo Island
The road , winding
across the thickly wooded Portland West Hills , is hardly visible through the
thick sheets of rain . The headlights pick
out a series of hairpin bends and the silvery trail of the Multnomah
Channel gurgling by the road. After quite
a rally, we cross Sauvie Island Bridge to arrive at Sauvie
Island that was once known as Wappatoo Island .
We are greeted by
the amazing sight of an endless field of
emerald green stretching to the horizon. It is a protected ecosystem that provides
a pit stop for migratory birds and the
rich soil of the island supports cultivation of a variety of crops like
Strawberry, Blueberry, Blackberry, Raspberry, Peach, Pear and Sweetcorn . It
lies at the confluence of rivers
Willamette and Columbia, 10 miles away from Portland City .
September-October
is a season of joy and festivities for
the people of Portland as it is Pumpkin Harvest time ! Fields in and around Portland are flooded with bumper
harvests of Pumpkin .
We are at the
Pumpkin Festival organised by Bella Organics . The rain that was chasing our
car has disappeared and a dazzling sun is lighting up the fields in brilliant
colours . Weather in Portland is always a fickle see-saw between dark clouds and bright Sun.
But rain or shine
, all Portlanders set out with family and friends to have a field day at the Pumpkin
patches . What a glorious sight these patches are ! Pumpkins like golden balls
scattered thickly over velvetty fields of green !
Visitors can choose and pick pumpkins off the patch by themselves .
Visitors can choose and pick pumpkins off the patch by themselves .
They are taken to
the patches by tractors pulling trailer wagons spread with hay.
The market square is lively and is dazzling with decorations for Halloween.
There is brisk business in kiosks vending food and drinks.
There are many
attractions for kids too , like a mini train with carriages that look like cows !
A small petting zoo with lambs , calves, chicken and piglets and games like Rubber Duck Race and Face Painting .
A small petting zoo with lambs , calves, chicken and piglets and games like Rubber Duck Race and Face Painting .
“The Corn Maze”created
in a corn field is a game of adventure that attracts not only kids , but adults too. Getting
lost inside the maze is easy ! “ The Haunted Corn Maze” is a variation that is
for the stout hearted only ! You never know what horrible halloween creature
will pounce on you at which corner !
After all the
games and eating our fill , we check out with the pumpkins we have picked . They
are not weighed for billing , but are priced according to the girth at The Pricing Table .
We return the wheelbarrow
and carry our fat pumpkins to the car, staggering under their weight .
During Pumpkin
Harvest Season , its Pumpkin all the way . Supermarkets sell pumpkin bread ,
pumpkin pies, pumpkin cake ,
pumpkin cookies , pumpkin soup ……including Pumpkin
Latte in Starbucks !
Inspite of such pumpkin overload , people still buy pumpkins by the dozen …..to carve Jack O Lanterns !
Inspite of such pumpkin overload , people still buy pumpkins by the dozen …..to carve Jack O Lanterns !
Lit up with a
candle placed within the hollowed pumpkin these grinning
Jack O
Lanterns are displayed in their gardens
, doorstep, window sill and roof tops .
In our home , in
addition to becoming Jack O Lanterns , some of the pumpkins we picked also become
Kumblakai Thovve and Kumblakai Halwa .
-----------------------------------------------------------------------------------------------------
No comments:
Post a Comment