" ಆಯುಷ್ ಜೊತೆ ಅರ್ಜೆಂಟಾಗಿ ಹೋಗಬೇಕಿದೆ ! ಏನ್ಮಾಡೋದು? "
" ನೀನು ಹೋಗು ! ಅದು ತುಂಬ ಇಂಪಾರ್ಟೆಂಟ್ ಆಲ್ವಾ ! ಆರೋಕ್ ಜೊತೆ ನಾನಿದ್ದೀನಲ್ಲ!"
' ಅಮ್ಮ ಅಪ್ಪ ಎರಡೇ ವಾಕ್ಯಗಳಲ್ಲಿ ನಿರ್ಧಾರ ಮಾಡಿಬಿಟ್ರು ! ಅಷ್ಟೇ ! ನನ್ನ ಜೊತೆಗಿರೋದು ಬಿಟ್ಟು ಬೆಳ್ಳಂಬೆಳಿಗ್ಗೆ ಅಮ್ಮ ಆಯುಷ್ ಜೊತೆ ಹೊರಟೇ ಹೋಗಿದ್ದಾಳೆ ! ಛೆ ! ಅಮ್ಮ ಅಪ್ಪ ಇಬ್ರಿಗೂ ತುಂಬಾ ಪಾರ್ಷಾಲಿಟಿ ! ಅವರಿಗೆ ಯಾವಾಗ್ಲೂ ಅವನೇ ಇಂಪಾರ್ಟೆಂಟ್ ... '
ಒಳಗೊಳಗೇ ಕರುಬುತ್ತ ಬೀರುವಿನಲ್ಲಿದ್ದ ಬಟ್ಟೆಗಳನ್ನೆಲ್ಲ ಕೆಡವಿ ಹೊರಗೆಳೆದು ಹಾಕುತ್ತಿದ್ದ ಆರೋಕ್. ಅವನ ಮನಸ್ಸಲ್ಲಿ ತನ್ನಮೇಲಿನ ಮರುಕಕ್ಕಿಂತ ಆಯುಷ್ ಮೇಲಿನ ಅಸೂಯೆಯೇ ಹೆಚ್ಚಾಗಿತ್ತು.
" ಆರೋಕ್ ! ಇನ್ನೂ ರೆಡಿ ಇಲ್ವೇ ? ಕಾಂಪಿಟಿಷನ್ಗೆ ಸಮಯಕ್ಕೆ ಸರಿಯಾಗಿ ಹೋಗಬೇಡವೇ ? "
ಅಪ್ಪ ಕೂಗಿದಾಗ ಆರೋಕಿಗೆ ಇನ್ನಷ್ಟು ರೇಗಿತು.
" ಬಂದೆ ಅಪ್ಪ ! ನನ್ನ ಡ್ರೆಸ್ ಹುಡುಕ್ತಾ ಇದ್ದೀನಿ ! ನನ್ನ ಲಕ್ಕಿ ಶರ್ಟ್ ಎಲ್ಲೋ ಕಾಣಿಸ್ತಾ ಇಲ್ಲ!"
" ಅಯ್ಯೋ ! ಅದನ್ನ ಹುಡುಕಕ್ಕೆ ಹೊರಟೆಯಾ ? ಇಲ್ನೋಡು ! ಅಮ್ಮ ನಿನಗೆ ಬೇಕಾದ ಡ್ರೆಸ್ , ಸಾಕ್ಸ್ , ಷೂ ಎಲ್ಲ ರೆಡಿ ಮಾಡಿ ಇಲ್ಲಿ ಸೋಫಾದಲ್ಲಿ ನೀಟಾಗಿ ಇಟ್ಟು ಹೋಗಿದ್ದಾಳೆ ! ಪ್ಲಾಸ್ಕಲ್ಲಿ ಬೂಸ್ಟ್ ಸಹ ರೆಡಿ ! "
ಆರೋಕ್ ಬಿರ್ರನೆ ಹೋಗಿ ತನ್ನ ಉಡುಪುಗಳನ್ನು ಬಾಚಿಕೊಂಡನು.
" ಅವಳಿಗೆ ಇವತ್ತು ನಿನ್ನ ಬಿಟ್ಟು ಹೋಗಕ್ಕೇ ಮನಸ್ಸಿಲ್ಲ ! ಏನು ಮಾಡೋದು ? ಆಯುಷ್ ಜೊತೆ ಹೋಗಲೇ ಬೇಕಾಯಿತು ! ನಿನ್ನ ಜೊತೆ ನಾನಿದ್ದೇನಲ್ಲಾಂತ ಸಮಾಧಾನ ಮಾಡಿ ಕಳಿಸಿದೆ ! ನಿನಗೆ ಗುಡ್ ಲಕ್ ವಿಷ್ ಮಾಡಿ ಹೋದಳು ! ಆಯುಷ್ ಬೆಸ್ಟ್ ಅಫ್ ಲಕ್ ಹೇಳಿ ಹೋದ ! "
ಅಪ್ಪನ ಮಾತನ್ನು ನಿಂತು ಕೇಳಿಸಿಕೊಳ್ಳುವ ತಾಳ್ಮೆ ಇಲ್ಲದೆ ಆರೋಕ್ ತನ್ನ ಬಟ್ಟೆಗಳನ್ನು ತೆಗೆದುಕೊಂಡು ತನ್ನ ಕೋಣೆಗೆ ಹೋಗಿ ರಪ್ಪೆಂದು ಬಾಗಿಲು ಮುಚ್ಚಿಕೊಂಡ.
----------------------------------------------------------------------------------------------------
----------------------------------------------------------------------------------------------------
ಸಿಯ್ಯನೆಲ್ವಾಗಿಲ ಗದ್ದೆಗಳೆಲ್ಲ ಹೊಂಬಣ್ಣಕ್ಕೆ ತಿರುಗಿ ಕುಯ್ಯಲಿಗೆ ಸಿದ್ಧವಾಗಿದ್ದವು. ಉದುರಿದ್ದ ದಪ್ಪ ದಪ್ಪ ನೆಲ್ಮಣಿಗಳನ್ನು ಕುಕ್ಕಿ ತಿನ್ನಲು ಗುಬ್ಬಿಗಳು ಹೊಂಚು ಹಾಕುತ್ತಿದ್ದವು. ತುಂಬಿ ತುಳುಕಿದ ಕೆರೆಯ
ಅಂಚಿನಲ್ಲಿ ನಿಂತು ಮೀನಿಗಾಗಿ ತಪಸ್ಸು ಮಾಡುತ್ತಿದ್ದವು ಕೊಕ್ಕರೆಗಳು. ಅವಕ್ಕೆ ಪೈಪೋಟಿಯಾಗಿ ಮೀನಿಗೆ ಗಾಳ ಹಾಕಿ, ತಾಂಬೂಲ ಜಗಿಯುತ್ತ ಬಂಡೆಯ ಮೇಲೆ ಕುಳಿತು ಕಾಯುತ್ತಿದ್ದಳು ಅಜ್ಜವ್ವ.
ಆ ಪರಿಸರದ ಸೊಬಗನ್ನೆಲ್ಲ ಸ್ವಲ್ಪಹೊತ್ತು ಕಣ್ಣಿನಿಂದ ಹೀರುತ್ತ ನಿಂತ ತರುಣನು ಥಳ ಥಳ ಹೊಳೆದ ಕೆರೆ ನೀರಿನಲ್ಲಿ ಹಠಾತ್ತನೆ ಹಾರಿದನು. ನೀರೊಳು ಮುಳುಗಿ ತಲೆ ಎತ್ತಿದವನ ಕೇಶರಾಶಿಯಿಂದ ಜಿನುಗಿದ ನೀರ ಹನಿಗಳು ವಜ್ರದ ಮಣಿಗಳಂತೆ ಮಿನುಗಿದವು.
ಬಣ್ಣ ಬಣ್ಣದ ಸೀರೆಗಳನ್ನುಟ್ಟು ಒಯ್ಯಾರವಾಗಿ ಬಿಂದಿಗೆಗಳನ್ನು ಹೊತ್ತು ಬದುವಿನ ಮೇಲೆ ಸಾಲಾಗಿ ನಡೆದು ಬಂದ ಹುಡುಗಿಯರು ಕೆರೆಯ ಬಳಿ ಬಂದು ನಿಂತರು.
" ಎಲವೋ ಎರೆಯಮ್ಮ ! ದಿನಕ್ಕೆ ಅದೆಷ್ಟು ಬಾರಿತಾನೇ ಮೀಯೋದು ? ಒಮ್ಮೆ ಮಾತ್ರ ಮೀಯೋ ನಾವೆಲ್ಲಾ ಶುಚಿಯಾಗಿಲ್ವೇನು ? " ತರುಣನನ್ನು ಕುರಿತು ಕೀಟಲೆಯಿಂದ ಪ್ರಶ್ನಿಸಿದಳು ಓರ್ವ ಬಾಯ್ಬಡಕಿ.
" ಅದರಿಂದಾಗಿಯೇ ಅವನು ಪಳ್ಚತೆರೆಯಮ್ಮ ! ನಾವೆಲ್ಲಾ ಕೊಳಕು ಹುಡುಗಿಯರಮ್ಮ ! " ಎಂದು ರಾಗವಾಗಿ ನುಡಿದಳು ಮತ್ತೊಬ್ಬ ಹುಡುಗಿ.
ಎಲ್ಲ ಹುಡುಗಿಯರೂ ಗೊಲ್ಲೆಂದು ನಕ್ಕರು.
" ಏ ಮಾತಿನ ಮಲ್ಲಿಯರಾ ! ನನ್ನ ರಾಜ ಇನ್ನೂ ಚಿಕ್ಕ ಹುಡುಗ ! ಅವನನ್ನೇಕೆ ಚುಡಾಯಿಸ್ತೀರೀ ? ನೀರಿನಲ್ಲಿ ಮಿಂದರೆ ಮಾತ್ರ ಯಾರೂ ಪಳ್ಚದ್ ಆಗಲ್ಲ !ಆತನ ನಡೆ , ನುಡಿ , ಮನ , ಗುಣ ಎಲ್ಲವೂ ಪಳ್ಚದ್ ! ಅದಕ್ಕೇ ಅವನನ್ನ ಎಲ್ಲರೂ ಪಳ್ಚತೆರೆಯಮ್ಮ ಅನ್ನೋದು ! "
ಎಲ್ಲರ ಮಾತನ್ನೂ ಕಿರುನಗೆಯೊಂದಿಗೆ ಕೇಳಿಸಿಕೊಳ್ಳುತ್ತಿದ್ದ ಎರೆಯಮ್ಮ, " ಬಿಡು ಅಜ್ಜವ್ವ !ಅಕ್ಕಂದಿರಿಗೆ ಇದೆಲ್ಲ ಒಂದು ಆಟ ! " ಎನ್ನುತ್ತ ಮತ್ತೊಂದು ಮುಳುಕು ಹಾಕಿದ.
ಕೂಡಲೇ ಹೊರ ಬಂದು " ಅಜ್ಜವ್ವ ! ನಿನ್ನ ಗಾಳಕ್ಕೆ ದೊಡ್ಡ ಮೀನು ಸಿಕ್ಕಿದೆ ! ಮೇಲಕ್ಕೆಳೀ ! " ಎಂದು ಕೂಗಿದ.
ಗಾಳವನ್ನು ಎಳೆಯಲಾರದೆ ಒದ್ದಾಡಿದಳು ಅಜ್ಜವ್ವ. ಎರೆಯಮ್ಮ ನೀರಿನಿಂದ ನೆಗೆದು ಬಂಡೆಗೆ ಹಾರಿ ಗಾಳವನ್ನು ಅವಳ ಕೈಯಿಂದ ಕಸಿದುಕೊಂಡು ಎಳೆಯ ತೊಡಗಿದ. ಮೇಲಕ್ಕೆಳೆದು ಹಾಕಿದ ಮೀನನ್ನು ಕಂಡು ಅಜ್ಜವ್ವ ಬಾಯಿ ಬಿಟ್ಟಳು.
" ಅಬ್ಬಾ ! ಯಾಪಾಟಿ ದೊಡ್ಡದು ! "
" ನನ್ನ ರಾಜ ! ನೀನು ನೂರು ವರುಷ ಚೆನ್ನಾಗಿರಬೇಕು ! ಗದ್ದೆಯಲ್ಲಿ ದುಡೀತಿಯ ! ತುರುಗಳನ್ನ ಕಾಯ್ತಿಯ ! ನನ್ನಂತ ಬಡಪಾಯಿಗಳಿಗೆ ಉಪಕಾರ ಮಾಡ್ತಿಯ .... "
" ಹೂಂ ! ದಿನಕ್ಕೆ ಮೂರು ಬಾರಿ ಕೆರೆಯಲ್ಲಿ ಮೀಯ್ತೀಯಾ .... " ಅಜ್ಜವ್ವನಂತೆ ಅನುಕರಣೆ ಮಾಡಿದಳು ಮತ್ತೊಬ ಹುಡುಗಿ.
ಹುಡುಗಿಯರೆಲ್ಲ ಮತ್ತೊಮ್ಮೆ ಗೊಲ್ಲೆಂದು ನಕ್ಕರು.
" ನಿಮಗೆಲ್ಲ ಅಣಕಿಸೋದು ಮಾತ್ರ ಗೊತ್ತು! ನನ್ನ ರಾಜಾ .... "
" ಅಜ್ಜವ್ವ ! ಸಾಕು ! ಸುಂಸುಮ್ನೆ ಕೊಂಡಾಡಬೇಡ ! ಎಲ್ರೂ ಮಾಡೋದನ್ನೇ ನಾನು ಮಾಡ್ತಿದ್ದೀನಿ ! ತಗೋ ನಿನ್ನ ಮೀನು ! " ಅಜ್ಜವ್ವನ ಮಾತನ್ನು ಕತ್ತರಿಸಿ , ಗಾಳದಿಂದ ಬಿಡಿಸಿದ ಮೀನನ್ನು ಅವಳ ಬುಟ್ಟಿಗೆ ಹಾಕಿದ ಪಳ್ಚತೆರೆಯಮ್ಮ.
" ಮಾಡ್ತಾರೆ ಮಾಡ್ತಾರೆ ! ಎಲ್ರೂ ಮಾಡೋದಿರ್ಲಿ ! ನಿನ್ನ ತಮ್ಮ ಮಾಡ್ತಾನೆಯೇ ? ಅದನ್ನ ಹೇಳು ಮೊದ್ಲು ! "
ಅದೇ ಸಮಯ ಬಿರುಗಾಳಿಯಂತೆ ಕೆರೆಯ ಬಳಿ ಓಡಿ ಬಂದ ತಮ್ಮಯ್ಯ .
" ಅಣ್ಣ ! ಅಣ್ಣ ! ನಮ್ಮ ಬಸವ .... " ಏದುಸಿರು ಬಿಡುತ್ತ ತಡವರಿಸಿದ.
" ಏನ್ಲಾ ಆಯ್ತು ಬಸವನ್ಗೆ ? " ಕಾತರದಿಂದ ಪ್ರಶ್ನಿಸಿದ ಪಳ್ಚತೆರೆಯಮ್ಮ.
" ಗೂಟ ಕಿತ್ಕೊಂಡು ಬೀದಿಗೆ ನುಗ್ಗಿ ಅಟ್ಟಹಾಸ ಮಾಡ್ತಾವ್ನೆ ! ಜನ ಬೆದರಿದ್ದಾರೆ ! "
ನೀರು ಮೊಗೆಯಲು ಬಂದ ಹುಡುಗಿಯರು ' ಅಯ್ಯೋ !' ಎಂದು ಚೀರಿದರು.
" ಅಯ್ಯೋ ಶಿವನೇ ! ಬಸವ ಮಹಾ ಪುಂಡನಲ್ಲಾ? ಯಾರಿಗೆ ಏನು ಗ್ರಹಚಾರ ಕಾದಿದ್ಯೋ ? " ಅಜ್ಜವ್ವ ಪ್ರಲಾಪಿಸಿದಳು.
" ಇಗೋ ಬಂದೆ ! "
ಹಾರಾಡುತ್ತಿದ್ದ ಉದ್ದ ಕೂದಲನ್ನು ಒಟ್ಟಿಗೆ ಸೇರಿಸಿ ತಲೆಯ ಬಲ ಬಾಗದಲ್ಲಿ ಗಂಟು ಹಾಕಿಕೊಂಡು
ಊರನ್ನು ಕುರಿತು ದಾಪುಗಾಲು ಹಾಕಿ ಓಡತೊಡಗಿದ ಪಳ್ಚತೆರೆಯಮ್ಮ.
-------------------------------------------------------------------------------------------------
-------------------------------------------------------------------------------------------------
" ಒಮ್ಮೆ ಗುರು ದ್ರೋಣಾಚಾರ್ಯರು ತಮ್ಮ ಶಿಷ್ಯರಾದ ಪಾಂಡವರಿಗೂ ಕೌರವರಿಗೂ ಬಿಲ್ಲುಗಾರಿಕೆಯಲ್ಲಿ ಒಂದು ಪರೀಕ್ಷೆ ಏರ್ಪಡಿಸಿದ್ರಂತೆ. ಒಂದು ಮರದ ಮೇಲೆ ಪಕ್ಷಿಯ ಗೊಂಬೆಯನ್ನು ಕೂರಿಸಿದರು. ಗುರಿ ತಪ್ಪದೆ ಅದರ ಕಣ್ಣನ್ನು ಹೊಡೆದವರೇ ಗೆದ್ದವರು! ಶಿಷ್ಯರರೆಲ್ಲ ತಯಾರಾದರು. ಮೊದಲು ಯುಧಿಷ್ಠಿರನನ್ನ ಕರೆದು, ಪಕ್ಷಿ ಕಾಣಿಸುತ್ತಿದೆಯೇ ಅಂತ ಕೇಳಿದ್ರು.
'ಹೌದು ಗುರುಗಳೇ ! ಪಕ್ಷಿ, ಅದು ಕೂತಿರೋ ಮರ , ಮರದ ಎಲೆಗಳು ಎಲ್ಲ ಚೆನ್ನಾಗಿ ಕಾಣಿಸ್ತಿವೆ .' ಯುಧಿಷ್ಠಿರ ಹೀಗಂದಾಗ ಬಿಲ್ಲನ್ನು ಬದಿಗಿಟ್ಟು ಕೂರುವಂತೆ ಹೇಳಿದ್ರು ಗುರುಗಳು. ಒಬ್ಬೊಬ್ಬರನ್ನಾಗಿ ಎಲ್ಲರನ್ನು ಕರೆದು ಕೇಳಿದಾಗ ಹೆಚ್ಚು ಕಮ್ಮಿ ಎಲ್ರೂ ಅದೇ ರೀತಿ ಉತ್ತರಿಸಿದ್ರು . ಬಿಲ್ಲನ್ನು ಬದಿಗಿಟ್ಟು ಕೂತರು. ಕೊನೆಗೆ ಅರ್ಜುನನ ಸರದಿ.
" ಅರ್ಜುನ ! ನಿನಗೆ ಏನು ಕಾಣಿಸ್ತಿದೆ?" ಅಂತ ಗುರುಗಳು ಪ್ರಶ್ನಿಸಿದ್ರು.
" ಕಣ್ಣು ! " ಎಂದ ಅರ್ಜುನ.
" ಇನ್ನೇನು ಕಾಣಿಸ್ತಿದೆ ?'' ಎಂದರು ಗುರುಗಳು.
" ಇನ್ನೇನೂ ಕಾಣಿಸ್ತಿಲ್ಲ ! ಬರಿ ಕಣ್ಣು ಮಾತ್ರ ಕಾಣಿಸ್ತಿದೆ ! " ಎಂದ ಅರ್ಜುನ. ಗುರುಗಳ ಅಪ್ಪಣೆ ಪಡಕೊಂಡು ಅವನು ಬಿಟ್ಟ ಬಾಣ ಸರಿಯಾಗಿ ಪಕ್ಷಿಯ ಕಣ್ಣಿಗೆ ನಾಟಿ ನಿಂತಿತಂತೆ.
ಅರ್ಜುನನ ಹಾಗೆ, ಏಕಾಗ್ರತೆಯಿಂದ ಬಾಣ ಚಲಿಸು. ಅರ್ಜುನನ ಹಾಗೆ ಫೋಕಸ್ ಇದ್ರೆ ನೀನೇ ಚಾಂಪಿಯನ್ ! "
ಕಾರನ್ನು ಸ್ಟೇಡಿಯಂ ಕುರಿತು ಚಲಿಸುತ್ತಿದ್ದಾಗ ಅಪ್ಪ ಹೇಳಿದ ಆ ಕಥೆ ಸ್ವಾರಸ್ಯಕರವಾಗೇನೋ ಇತ್ತು. ಆದರೆ ...
" ಆರೋಕ್ ! ವಿಷ್ ಯೂ ಆಲ್ ದಿ ಬೆಸ್ಟ್ ! ಗಮನದಿಂದಿರು ಚಿನ್ನಾ ... "
" ಹಾಯ್ ಬ್ರೋ ! ಆಲ್ ದಿ ಬೆಸ್ಟ್ ... "
ಸ್ಪೀಕರಲ್ಲಿ ಅಮ್ಮ ಮತ್ತು ಆಯುಷ್ ಮಾತನಾಡಿಸಿದಾಗ ಅವನ ಮೂಡ್ ಸಂಪೂರ್ಣವಾಗಿ ಕೆಟ್ಟಿತು .
'ಬ್ರೋ ಅಂತೇ ಬ್ರೋ ! ಮಹಾ ದೊಡ್ಡ ಮನುಷ್ಯ ಅಂತ ವಿಷ್ ಮಾಡಕ್ಕೆ ಬಂದ್ಬಿಟ್ಟ !ಯಾರಿಗೆ ಬೇಕಿತ್ತು ಇವನ ವಿಷಸ್ ? '
ಮನಸ್ಸೆಲ್ಲ ದಗ ದಗ ಉರಿಯೋವಾಗ ಎಲ್ಲಿಯ ಫೋಕಸ್ ? ಎಲ್ಲಿಯ ಏಕಾಗ್ರತೆ ?
ಸ್ಟೇಡಿಯಂ ತಲುಪಿದಾಗ ಸ್ಪರ್ಧೆಯನ್ನು ನೋಡಲು ಮೆಲ್ಲ ಮೆಲ್ಲನೆ ಜನ ಸೇರ ತೊಡಗಿದ್ದರು. ಬಾಗವಹಿಸಲಿರುವ ಆರು ಜನ ಬಿಲ್ಲುಗಾರರಿಗಾಗಿ ಬಣ್ಣಮಾಯವಾದ ಟಾರ್ಗೆಟ್ ಬೋರ್ಡ್ಗಳು ಸಾಲಾಗಿ ಸಿದ್ಧವಾಗಿದ್ದವು.
ಇಂದು ಒಳ್ಳೆ ಪಾಯಿಂಟ್ಸ್ ತೆಗೆದು ಈ ಜೂನಿಯರ್ ಚಾಂಪಿಯನ್ಷಿಪ್ ಗೆದ್ದುಬಿಟ್ಟರೆ ನ್ಯಾಷನಲ್ ಚಾಂಪಿಯನ್ಷಿಪ್ಗೆ ಆಯ್ಕೆ ! ನಂತರ ವಿಶ್ವ ಆರ್ಚರಿ ಕಪ್ ! ಒಲಿಂಪಿಕ್ಸ್ ....
ಆರೋಕ್ ಸುಂದರವಾದ ಕನಸಿನಲ್ಲಿ ಬಿಲ್ಲು ಹಿಡಿದು ವಿಶ್ವವನ್ನೆಲ್ಲ ತಿರುಗಾಡುತ್ತಿದ್ದಾಗ ಪಂದ್ಯಕ್ಕೆ ಕರೆ ಬಂದಿತು.
" ಆರೋಕ್ ! ನಿನ್ನಿಂದ ಸಾಧ್ಯ ! ಬೆಸ್ಟ್ ಆಫ್ ಲಾಕ್ ! " ಎಂದು ಅವನ ಬೆನ್ನು ತಟ್ಟಿದರು ಅವನ ಕೋಚ್.
'ಇದು ನನ್ನ ಕ್ಷೇತ್ರ ! ಇಲ್ಲಿ ನಾನೇ ರಾಜ !'
ಆರೋಕ್ ಧೃಡವಾಗಿ ಎದ್ದು ನಿಂತಾಗ ಬೆಳಿಗ್ಗೆಯಿಂ ಮನಸ್ಸನ್ನು ಕೊರೆಯುತ್ತಿದ್ದ ಕೀಳರಿಮೆ, ಕೋಪ ಎಲ್ಲವೂ ಕಾಣೆಯಾಗಿದ್ದವು. ಅರ್ಜುನನಂತಹ ಏಕಾಗ್ರತೆಯೊಂದಿಗೆ ಗಂಭೀರವಾಗಿ ಬಿಲ್ಲನ್ನು ಹೆಗಲಿಗೆ ಏರಿಸಿಕೊಂಡು ಸ್ಪರ್ಧೆಗೆ ತಯಾರಾದನು.
ಬೀದಿಯೆಲ್ಲ ಅಲ್ಲೋಲಕಲ್ಲೋಲವಾಗಿತ್ತು. ಹುಚ್ಛೆದ್ದು ರೋಷಾವೇಶದಿಂದ ವೇಗವಾಗಿ ಓಡುತ್ತಿದ್ದ ಬಸವ. ಜನರೆಲ್ಲಾ ಹೆದರಿ ಚಲ್ಲಾಪಿಲ್ಲಿ ಓಡುತ್ತಿದ್ದರು.
" ಬಸವಾ .... ! "
ಪಳ್ಚತೆರೆಯಮ್ಮನ ಧ್ವನಿ ಕೇಳಿ ಥಟ್ ಎಂದು ನಿಂತ ಬಸವ. ದೊಡ್ಡ ಕಣ್ಣುಗಳು ಇನ್ನೂ ದೊಡ್ಡದಾದವು. ಉಗ್ರ ನೋಟ ಬೀರಿ ಬುಸುಗುಟ್ಟುತ್ತ ಅವನನ್ನು ಕುರಿತು ರಭಸದಿಂದ ಮುನ್ನುಗ್ಗಿದ.
ಹೆದರದೆ ಬೆದರದೆ ಎರೆಯಮ್ಮ ತಾನೂ ಬಸವನನ್ನು ಕುರಿತು ಮುನ್ನುಗ್ಗಿದ. ಸುತ್ತುವರಿದಿದ್ದ ಮಂದಿಯೆಲ್ಲ 'ಅಯ್ಯೋ' ಎಂದು ಚೀರಿದರು.
ಎರೆಯಮ್ಮ ಛಂಗೆಂದು ಹಾರಿ ತನ್ನ ಎರಡು ಕೈಗಳಿಂದಲೂ ಬಸವನ ಎರಡು ಕೊಂಬುಗಳನ್ನೂ ಗಟ್ಟಿಯಾಗಿ ಹಿಡಿದುಕೊಂಡ. ತಲೆಯನ್ನು ಕುಲುಕಿ ಅವನನ್ನು ದೂರಕ್ಕೆಸೆಯಲು ಪ್ರಯ್ತ್ನಿಸಿದ ಬಸವ, ಅದು ಸಾಧ್ಯವಾಗದೆ ಎಗರಿ ಕುಣಿದು ರಂಪ ಮಾಡಿದ. ಬಸವನ ಗೊರಸುಗಳು ಎಬ್ಬಿಸಿದ ಧೂಳು ಮಂಡಲದಿಂದ ಯಾರಿಗೂ ಏನೂ ಕಾಣಿಸದಾಯಿತು.
" ಅಯ್ಯೋ ದೇವರೇ ! ಈ ಹುಡುಗನನ್ನ ಕಾಪಾಡಪ್ಪ! " ಅಜ್ಜವ್ವ ದನಿಯೆತ್ತಿ ಬೇಡಿಕೊಂಡಳು.
" ಈ ಪಾಟಿ ಧೂಳು ಎದ್ದಿದೆ ! ಏನು ನಡೀತಿದೆ ಅನ್ನೋದೇ ತಿಳೀತಿಲ್ವಲ್ಲಾ ! "
ಎಲ್ಲರೂ ಸಂಕಟದಿಂದ ಮಂಕುಬಡಿದವರಂತೆ ನಿಂತಿರಲು, ಸ್ವಲ್ಪ ಹೊತ್ತಿನಲ್ಲೇ ಧೂಳಿನ ಪರದೆ ಸರಿಯಿತು.
ಗೋಚರವಾದ ದೃಶ್ಯ ಕಂಡು ಎಲ್ಲರೂ ಬೆರಗಾದರು!
ಒಂದು ನಿಮಿಷ ಎಲ್ಲೆಡೆ ನಿಶಬ್ದ!
ಮರು ಕ್ಷಣ ' ಹೋ ' ಎಂಬ ಹರ್ಷೋದ್ಗಾರ !
ಪಳ್ಚತೆರೆಯಮ್ಮ ಬಸವನ ಕೊರಳನ್ನು ಮೃದುವಾಗಿ ಕೆರೆಯುತ್ತ ನಿಂತಿದ್ದನು. ಬಸವ ಸಾಧುವಾಗಿ ಅವನ ಕೈಯಲ್ಲಿದ್ದ ಸಿಯನೆಲ್ಲು ಹುಲ್ಲನ್ನು ಕಿತ್ತು ಜಗಿಯುತ್ತಿದ್ದ.
ಗಾವುಂಡರ ಮಡದಿ ಬಿರಬಿರನೆ ಮನೆಯಿಂದ ಹೊರಬಂದು ಎರೆಯಮ್ಮನಿಗೆ ಆರತಿ ಮಾಡಿದಳು.
'ಕಾಗೆ ಕಣ್ಣು ಗೂಬೆ ಕಣ್ಣು ನಾಯಿ ಕಣ್ಣು ನರಿ ಕಣ್ಣು ಎಲ್ಲ ಕೆಟ್ಟ ಕಣ್ಣೂ ಒಂಟೋಯ್ತು !' ಎಂದು ಗಟ್ಟಿಯಾಗಿ ಕೂಗಿದಳು ಅಜ್ಜವ್ವ.
ಪಳ್ಚತೆರೆಯಮ್ಮ ಬಸವನನ್ನು ಹಿಡಿದು ಕಟ್ಟಿದ ಕೂಡಲೇ ಗ್ರಾಮದ ಯುವಕರೆಲ್ಲ ಡೊಳ್ಳುಗಳನ್ನು ಬಾರಿಸುತ್ತ ಕುಣಿಯತೊಡಗಿದರು.
ಗೆಜ್ಜೆಯ ಘಲ್ ಘಲ್ ನಾದ !
ಬಳೆಗಳ ಝಲ್ ಝಲ್ ನಿನಾದ !
ಎರೆಯಮ್ಮನ ಸುತ್ತ ತರುಣಿಯರೂ ಗೋಷ್ಠಿಯಾಗಿ ಹಾಡುತ್ತ ಕುಣಿಯ ತೊಡಗಿದರು.
' ನಡೆಯೂ ನುಡಿಯೂ
ಪಳ್ಚದ್ ! ಪಳ್ಚದ್ !
ಮನವೂ ಗುಣವೂ
ಪಳ್ಚದ್ ! ಪಳ್ಚದ್ !
ಪಳ್ಚತೆರೆಯಮ್ಮಾ
ಪಳ್ಚದ್ ! ಪಳ್ಚದ್ !
ನಮ್ಮೂರ ವೀರ
ಪಳ್ಚದ್ ! ಪಳ್ಚದ್ !
ಹರಸೋಣು ಬಾರಾ
ಪಳ್ಚದ್ ! ಪಳ್ಚದ್ ! '
ಸಂತೋಷದಿಂದ ನೋಡುತ್ತ ನಿಂತಿದ್ದ ಪಳ್ಚತೆರೆಯಮ್ಮನ ಮೊಗದಲ್ಲಿ ಅರಳಿದ ನಗೆಯೂ ಪಳ್ಚದ್ !
-------------------------------------------------------------------------------------------------
ಆರೋಕ್ ಸಂತೋಷದ ಹೊನಲಿನಲ್ಲಿ ತೇಲಿ ತಬ್ಬಿಬ್ಬಾಗಿದ್ದನು. ಆರ್ಚರಿ ಸ್ಪರ್ಧೆಯ ಎಲ್ಲ ಸುತ್ತಿನಲ್ಲೂ ಹೆಚ್ಚಿನ ಅಂಕೆ ಗಳಿಸಿ ಜೂನಿಯರ್ ಚಾಂಪಿಯನ್ಷಿಪ್ ಗೆದ್ದಿದ್ದನು. ಇನ್ನೂ ನ್ಯಾಷನಲ್ಸ್ಗೆ ಆಯ್ಕೆ ಆದ ಹಾಗೆಯೇ ! ಅಭಿನಂದನೆಗಳನ್ನು ಹೇಳಿದವರ ಕೈಗಳನ್ನು ಕುಲುಕಿ ಕುಲುಕಿ ಕೈ ನೋವೇ ಶುರುವಾದಂತಿತ್ತು !
" ಸಾರ್ ! ನಿಮ್ಮ ಮಗ ಅರ್ಜುನನ ಅಂಶವಿರಬೇಕು ! ಏನು ಷೂಟ್ ಮಾಡ್ತಾರೆ ಸರ್ ! " ಎಂದು ಅನೇಕರು ಮೆಚ್ಚಿದರು.
" ನಿಮ್ಮ ಎಲ್ಲ ಪ್ರಶಂಸೆಗಳೂ ಕೋಚ್ ಅವರಿಗೆ ಸೇರಿದ್ದು ! " ಅಪ್ಪ ವಿನಯದಿಂದ ನುಡಿದರು.
" ನನ್ನದ್ದೇನು ಸರ್ ? ನಿಮ್ಮ ಕೆಲಸ ಕಾರ್ಯಗಳ ಮಧ್ಯೆ ಮಕ್ಕಳಿಗಾಗಿ ಸಮಯ ಉಳಿಸಿ ಇಷ್ಟು ಪ್ರೋತ್ಸಾಹ ಕೊಟ್ಟಿದ್ದೀರಿ ! ಮಕ್ಕಳ ಸಾಧನೆಗೆ ನಿಮ್ಮಂತ ತಂದೆ ತಾಯಿಯರೇ ಕಾರಣ ಸಾರ್ ! " ಕೋಚ್ ಮೆಚ್ಚುಗೆಯ ಮಾತನ್ನಾಡಿದರು.
ಮನೆಗೆ ಹಿಂದಿರುಗುತ್ತಿದ್ದಾಗ ಅಪ್ಪ ಅವನಿಗೆ ಬಹಳ ಇಷ್ಟವಾದ ಐಸ್ ಕ್ರೀಮ್ ತೆಗೆಸಿ ಕೊಟ್ಟರು.
" ಆರೋಕ್ ! ಐ ಆಮ್ ಸೋ ಪ್ರೌಡ್ ಆಫ್ ಯು ! ಚಿಂದಿ ಉಡಾಯಿಸ್ಬಿಟ್ಟೆಕಣೋ !" ಅವನ ತಲೆಗೂದಲಲ್ಲಿ ಕೈಯಾಡಿಸಿ ಅಪ್ಪ ಹೀಗೆಂದಾಗ ಹೆಮ್ಮೆಯಿಂದಲೂ ಸಂತೋಷದಿಂದಲೂ ಅವನ ಎದೆಯುಬ್ಬಿತು.
" ಅಮ್ಮ ಕರೆ ಮಾಡಿದ್ಲು ಆರೋಕ್ ! ನಿನ್ನ ವಿಕ್ಟರಿಗಾಗಿ ಆಯುಷ್ ಎಲ್ಲರಿಗೂ ಸಿಹಿ ತಿಂಡಿ ಹಂಚಿದ್ನಂತೆ ! ಅಮ್ಮ ಇವತ್ತು ನಮ್ಮೆಲರಿಗೂ ಸ್ಪೆಷಲ್ ಡಿನ್ನರ್ ಆರ್ಡರ್ ಮಾಡಿದ್ದಾಳೆ! ರಾತ್ರಿ ಎಷ್ಟೊತ್ತಾದ್ರೂ ಬಂದ್ಬಿಡ್ತಿವಿ ಅಂದ್ಲು ! "
ಆದರೆ ರಾತ್ರಿ ಅಮ್ಮ ಬರಲಿಲ್ಲ ! ಕರೆ ಮಾತ್ರ ಬಂದಿತು !
" ಆರೋಕ್ ! ಕಂಗ್ರಾಟ್ಸ್ ಪುಟ್ಟಾ ! ಸೊ ಸೋ ಪ್ರೌಡ್ ಆಫ್ ಯು ! 'ನೀನು ಆರೋಕ್ ಹತ್ರ ಸ್ವಲ್ಪ ಬಿಲ್ಲುಗಾರಿಕೆ ಕಲ್ತಿದ್ರೆ ಚೆನ್ನಾಗಿತ್ತು ' ಅಂತ ಎಲ್ರೂ ಆಯೂಷ್ಗೆ ಹೇಳ್ತಿದ್ದಾರೆ. ಸೋ ಫನ್ನಿ ಅಲ್ಲ ? " ಅಮ್ಮ ಒಂದೇ ಸಮನೆ ಮಾತಾಡುತ್ತ ಹೋದಳು.
" ಆಮೇಲೆ ಇನ್ನೊಂದ್ ವಿಷಯ ! ಇವತ್ತು ಡಿನ್ನರ್ ಇಟ್ಕೋಳೋಣ ಅಂತಲೇ ಪ್ಲಾನ್ ಮಾಡಿದ್ದೆ. ಆದ್ರೆ ನೋಡು ಚಿನ್ನ! ಆಯುಷ್ಗೆ ಇನ್ನೊಂದು ದಿನ ಇಲ್ಲಿ ಇರಲೇಬೇಕಾಗಿದೆ ! ಇವತ್ತು ಮಲಗಿ ಚೆನ್ನಾಗಿ ರೆಸ್ಟ್ ತಗೋ ! ನಾಳೆ ರಾತ್ರಿ ಖಂಡಿತ ಡಿನ್ನರ್ ಇಟ್ಕೋಳೋಣ ... "
' ಮತ್ತೇ ಆಯುಷ್ ! ನನ್ನ ಸಂತೋಷ ಹಾಳು ಮಾಡಲೆಂದೇ ಅವತರಿಸಿದ್ದಾನೆ ಮಾರಾಯ ! ಇವನು ಹುಟ್ಟದೇ ಹೋಗಿದ್ರೆ ಚೆನ್ನಾಗಿತ್ತೇನೋ ! '
ಆರೋಕ್ ಮನಸ್ಸಲ್ಲಿ ಅಡಗಿದ್ದ ದುಃಖ, ಅಸೂಯೆ ಎಲ್ಲ ಕ್ರೋದವಾಗಿ ಪರಿವರ್ತಿಸಿತು. ಹಿಡಿದಿದ್ದ ಮೊಬೈಲನ್ನು ದೂರ ಬಿಸಾಡಿ , ತನ್ನ ಕೋಣೆಯನ್ನು ಕುರಿತು ದಡ ದಡ ಓಡಿದನು.
ಅಮ್ಮ '' ಆರೋಕ್ ! ಆರೋಕ್ !" ಎಂದು ಕರೆತ್ತಿದ್ದದ್ದು ಸ್ಪೀಕರಲ್ಲಿ ಕೇಳಿಸುತ್ತಿದ್ದರೂ, ಲಕ್ಷ್ಯಮಾಡದೆ ಕೋಣೆಯೊಳಕ್ಕೆ ಹೋಗಿ ಸೇರಿಕೊಂಡನು.
'' ಡೋಂಟ್ ವರಿ ! ಸುಸ್ತು ಪಾಪ ! ನಾಳೆ ನಾನೇ ಅವನನ್ನ ಸಮಾಧಾನ ಮಾಡಿ ಅಲ್ಲಿಗೆ ಕರಕೊಂಡು ಬರ್ತೀನಿ ... "
ರಪ್ಪೆಂದು ಬಾಗಿಲನ್ನು ಬಡಿದು ಮುಚ್ಚಿಕೊಂಡಾಗ ಅಪ್ಪ ಅಮ್ಮನಿಗೆ ಹೇಳುತ್ತಿದ್ದ ಮಾತುಗಳು ಅವನ ಕಿವಿಗಳಲ್ಲೂ ಬಿದ್ದವು.
------------------------------------------------------------------------------------------------------
------------------------------------------------------------------------------------------------------
ಪಳ್ಚತೆರೆಯಮ್ಮ ಮನೆ ಮುಟ್ಟಿದಾಗ, ಅಮ್ಮ ಕಾತರದಿಂದ ಕಾಯುತ್ತ ಹೊರಗೇ ನಿಂತಿದ್ದಳು.
" ಯಾಕೋ ಮಗ ಇಷ್ಟೊತ್ತು? "
" ಪಟೇಲರ ಮನೆ ಛಾವಣಿಯನ್ನ ದುರಸ್ತಿ ಮಾಡಬೇಕಿತ್ತು. ಸಹಾಯಕ್ಕೆ ಹೋಗಿದ್ದೆ ಅಮ್ಮ! ಅದ್ಸರಿ ! ನೀನ್ಯಾಕೆ ಗಾಬರಿಯಾಗಿದ್ದೀ ? " ಕಾಳಜಿಯಿಂದ ಪ್ರಶ್ನಿಸಿದ ಪಳ್ಚತೆರೆಯಮ್ಮ.
" ಹೊತ್ತು ಹೋಗ್ತಾ ಇದೆ ! ತುರುಗಳು ಮೇವಿನಿಂದ ಹಿಂದಿರುಗಿಲ್ಲವೇ ! " ಎಂದಳು ಅಮ್ಮ.
" ಎರೆಯಮ್ಮ ! ಬಂದೆಯಾ ? ತುರುಗಳು ಬಂದಿಲ್ಲವಲ್ಲಾಂತ ಯೋಚನೆಯಾಗಿತ್ತು ! " ಎಂದರು ಪಕ್ಕದ ಮನೆಯಿಂದ ಹೊರಬಂದ ರಾಚಣ್ಣ.
" ಇವತ್ತು ತುರುಗಳೊಂದಿಗೆ ನಾನು ಹೋಗ್ಲಿಲ್ಲ ಅಣ್ಣ ! ತಮ್ಮಯ್ಯ ಹೋಗಿದ್ದಾನೆ ! ಜೊತೆಯಲ್ಲಿ ಹುಡುಗರು ... "
" ಹುಡುಗರು ಯಾರೂ ಬೇಡಾಂತ ಹಠ ಮಾಡಿ ಒಬ್ಬನೇ ಹೋದಕಣೋ ನಿನ್ನ ಮುದ್ದು ತಮ್ಮ ! "
" ಅಮ್ಮ! ಅವನನ್ನ ಒಂಟಿಯಾಗಿ ಹೋಗಲು ಯಾಕೆ ಬಿಟ್ಟೆ ? ಆ ನಮ್ಮ ನೆರೆಯೂರ ಮರುಳ ! ಮೂರು ದಿವಸಗಳಿಂದ ಇಲ್ಲೇ ಕೂತಿದ್ದಾನಲ್ಲ ! ಜೊತೆಗೆ ಅವನು ಹೋಗಬೋದಿತ್ತಲ್ಲ ? "
" ಆ ಹೊಟ್ಟೆಬಾಕನೇ ? ನಿಮ್ಮ ತುರುಗಳ ಹಾಲಿನಿಂದ್ಲೇ ಮೊಸರನ್ನ ಇಷ್ಟು ಸೀಯಾಗಿದೆ ಅಂತ ಸ್ತುತಿ ಮಾಡ್ತಾ ಮಾಡ್ತಾ ಒಂದು ಸೇರು ಮೊಸರನ್ನ ತಿಂದು ಆಗಲೇ ಊರಿಗೆ ಹೊರಟು ಹೋದ ! "
ಅಮ್ಮನಿಗೆ ದುಃಖ ಉಮ್ಮಳಿಸಿತು.
"ಅವನಿಗೆ ಹೊತ್ತು ಗೊತ್ತು ತಿಳಿಯಲ್ಲ! ಕಾಡಿಂದ ನರಿಯೋ ಹುಲಿಯೋ ಬಂದು ಮೇಲೆ ಬಿದ್ದರೆ ಏನು ಮಾಡಿಯಾನು ? "
ಕ್ಷಣಮಾತ್ರ ಪಳ್ಚತೆರೆಯಮ್ಮ ಶಿಲೆಯಾಗಿ ನಿಂದ. ಮರು ಕ್ಷಣ ಬೆನ್ನ ಮೇಲೆ ಬತ್ತಳಿಕೆ ಹೊತ್ತು, ಎಡಗೈಯಲ್ಲಿ ಬಿಲ್ಲನ್ನೂ ಬಲಗೈಯಲ್ಲಿ ಬಾಕುವನ್ನೂ ಹಿಡಿದು ಹುಲ್ಲುಗಾವಲನ್ನು ಕುರಿತು ವೇಗವಾಗಿ ಹೆಜ್ಜೆಯಿಟ್ಟ.
------------------------------------------------------------------------------------------------------
------------------------------------------------------------------------------------------------------
" ಆರೋಕ್ ! ಎದ್ದೇಳು ! ಇವತ್ತಿನ ಪೇಪರಲ್ಲಿ ನಿನ್ನ ಫೋಟೋ ಬಂದಿದೆ ನೋಡು ! " ಇನ್ನೂ ಮಲಗಿದ್ದ ಆರೋಕನ್ನು ಉತ್ಸಾಹದಿಂದ ಎಬ್ಬಿಸಿದರು ಅಪ್ಪ.
ಆರೋಕ್ ಹಾಸಿಗೆಯಮೇಲೆ ಎದ್ದು ಕುಳಿತು ಕಣ್ಣುಜ್ಜಿಕೊಂಡನು. ಅಪ್ಪ ತೋರಿಸಿದ ಪೇಪರನ್ನು ತೆಗೆದುಕೊಂಡು ನೋಡಿದನು. ಫೋಟೋದೊಂದಿಗೆ ಅವನ ಸಾಹಸದ ಬಗ್ಗೆ ಪ್ರಕಟವಾಗಿದ್ದ ಸಾಲುಗಳನ್ನು ಓದಿದಾಗ ಬಹಳ ಖುಷಿಯಾಯಿತು.
" ಗೆಟ್ ಅಪ್ ! ಗೆಟ್ ರೆಡಿ ! ಇವತ್ತು ಒಂದು ಪ್ಲಾನ್ ಮಾಡಿದ್ದೀನಿ, ಬೇಗ ಹೊರಡು! "
" ಏನು ಪ್ಲಾನ್ ಅಪ್ಪ? " ಕುತೂಹಲದಿಂದ ಪ್ರಶ್ನಿಸಿಸಿ ಹಾಸಿಗೆ ಬಿಟ್ಟು ಎದ್ದ ಆರೋಕ್.
" ಇವತ್ತು ನಾವಿಬ್ರೂ ಅವರಿರುವಲ್ಲಿಗೇ ಹೋಗಿ ಅಮ್ಮ ಆಯುಷ್ ಇಬ್ಬರಿಗೂ ಸರ್ಪ್ರೈಸ್ ಕೊಡೋಣ! ಆಮೇಲೆ ಅವರ ಜೊತೆಯಲ್ಲೇ ಹಿಂದಿರುಗೋಣ !"
ಪೇಪರ್ ನೋಡಿದಾಗ ಉಂಟಾದ ಉತ್ಸಾಹ ಅಪ್ಪನ ಮಾತು ಕೇಳಿದೊಡನೆ ಇಂಗಿ ಹೋಯಿತು.
" ಬೇಡ ಅಪ್ಪ ! ಅವರು ಬರೋವಾಗ ಬರಲಿ ! ನಾನು ಇನ್ನೂ ಸ್ವಲ್ಪ ಹೊತ್ತು ಮಲಗ್ತೀನಿ ! "
" ಇಲ್ಲಿ ಕೇಳು ಆರೋಕ್! ನಮ್ಮ ಜೊತೆ ಸೆಲಿಬ್ರೇಟ್ ಮಾಡೋದಕ್ಕೂ ಬರಗೊಡಿಸದೆ, ಅದೇನು ಅಂತ ಅಗತ್ಯ ಕೆಲಸ ಅಂತ ನಾವೇ ಹೋಗಿ ನೋಡಿಯೇಬಿಡೋಣ ಅನ್ನಿಸ್ತು! ಅದಕ್ಕೇ ಈ ಪ್ಲಾನ್! "
ಅಪ್ಪ ಮಾತಾಡುವ ವಿಧದಲ್ಲಿ ಮಾತಾಡಿ ಅರೋಕ್ ನನ್ನು ಒಪ್ಪಿಸಿಬಿಟ್ಟರು !
-----------------------------------------------------------------------------------------------
-----------------------------------------------------------------------------------------------
ಹುಲ್ಲುಗಾವಲು ಬರಿದಾಗಿ ಬಿಕೋ ಎನ್ನುತ್ತಿತ್ತು!
''ತಮ್ಮಯ್ಯಾ.. ! " ಯಾವ ಪ್ರತಿಯುತ್ತರವೂ ಇಲ್ಲ.
"ಗಂಗೇ....! ಗೌರೀ .... !"
"ತುಂಗೇ....! ಕಾವೇರೀ !"
" ಬೆಳ್ಳೀ ! ಕೆಂಪೀ ..... "
ಹುಲ್ಲುಗಾವಲಲ್ಲಿ ತುರುಗಳನ್ನು ಕಾಣದೆ ಅವುಗಳ ಹೆಸರು ಹಿಡಿದು ಗಟ್ಟಿಯಾಗಿ ಕೂಗಿ ಕರೆಯುತ್ತ ಕಾಡನ್ನು ಕುರಿತು ನಡೆಯತೊಡಗಿದ ಪಳ್ಚತೆರೆಯಮ್ಮ.
ಎತ್ತರವಾದ ಮರಗಳ ದಟ್ಟವಾದ ಎಲೆಗಳ ಸಂದಿನಿಂದ ನುಸುಳಿ ಬರಲು ಯತ್ನಿಸುತ್ತಿತ್ತು ಸೂರ್ಯನ ಬೆಳಕು. ತಣ್ಣನೆ ಬೀಸಿದ ಗಾಳಿ ತುರುಗಳ ನಿರ್ದಿಷ್ಟವಾದ ವಾಸನೆಯನ್ನು ಹೊತ್ತು ಬಂದು ಅವನ ಮೂಗಿಗೆ ಬಡಿಯಿತು. ಪಳ್ಚತೆರೆಯಮ್ಮ ಚುರುಕಾಗಿ ವಾಸನೆ ಸೆಳೆದ ದಿಕ್ಕಿನಲ್ಲಿ ತುರುಗಳನ್ನು ಕರೆಯುತ್ತಲೇ ವೇಗವಾಗಿ ನಡೆಯತೊಡಗಿದ.
'' ಗಂಗೆ .. ಗೌರೀ ..... "
ಇದ್ದಕ್ಕಿದ್ದಂತೆ ' ಅಂಬಾ ' ಎಂಬ ಕೂಗು ಆ ಕಾಡಿನ ಮೌನವನ್ನು ಸೀಳಿಕೊಂಡು ಹೊರಬಂದಿತು. ತುರುಗಳು ದಬ ದಬ ಓಡಿ ಬರುವ ಶಬ್ದ! ಎರೆಯಮ್ಮ ಶಬ್ದ ಬಂದ ದಿಕ್ಕಿನಲ್ಲಿ ಓಡುತ್ತ ಹೋಗಿ ನೋಡಿದಾಗ ....
ಮೂರು ನಾಲ್ಕು ಹುಡುಗರು ಓಡಲು ಹತ್ತಿದ ತುರುಗಳನ್ನು ಕಡ್ಡಿಯಿಂದ ಬಡಿದು ತಡೆಯಲು ಯತ್ನಿಸುತ್ತಿದ್ದರು.
" ಲೇಯ್ ! ಯಾವಾನೋ ನಮ್ಮೂರ ತುರುಗಳನ್ನ ಅಟ್ಕಂಡೋಗೋದು ? "
ಪಳ್ಚತೆರೆಯಮ್ಮ ಗದರುತ್ತ ತನ್ನ ಬಿಲ್ಲನ್ನು ಹೆದೆಗೇರಿಸಿದನು.
ಅವನ ಧ್ವನಿ ಕೇಳಿದ ತುರುಗಳು ತಮ್ಮನ್ನು ಹಿಂಸಿಸಿದ ಹುಡುಗರನ್ನು ತಿವಿದು ತಳ್ಳಿ ಎರೆಯಮ್ಮನಿದ್ದ ದಿಕ್ಕಿನಲ್ಲಿ ದೌಡಾಯಿಸಿ ಬರ ತೊಡಗಿದವು.
" ಓಡಿ ! ಓಡಿ ! ಎಲ್ಲ ಮನೆಕಡೆ ಓಡಿ .... " ಓಡಿದ ತುರುಗಳ ಬೆನ್ನು ಸವರಿ ಉತ್ಸಾಹಪಡಿಸಿದ ಪಳ್ಚತೆರೆಯಮ್ಮ.
ಇದ್ದಕ್ಕಿದ್ದಂತೆ ಅವನನ್ನು ಕುರಿತು ಸುಯ್ಯೆಂದು ಬಂದಿತು ಒಂದು ಬಾಣ. ತಕ್ಕ ಸಮಯದಲ್ಲಿ ಜರುಗಿ ತಪ್ಪಿಸಿಕೊಂಡ ಪಳ್ಚತೆರೆಯಮ್ಮ.
'' ಯಾವನೋ ಅದು ಹೇಡಿ ? ಧೈರ್ಯವಿದ್ರೆ ಎದುರಲ್ಲಿ ನಿಂತು ಯುದ್ಧ ಮಾಡೋ ! ''
ಪಳ್ಚತೆರೆಯಮ್ಮನ ಸವಾಲಿಗೆ ಉತ್ತರಿಸುವಂತೆ ಹೆಮ್ಮರದ ಮರೆಯಿಂದ ಹೊರ ಬಂದ ಮರುಳ !
" ಎಲವೋ ದುಷ್ಟ ! ನಮ್ಮ ಮನೆ ಊಟ ತಿಂದು ನಮ್ಮ ತುರುಗಳನ್ನ ಕಳವು ಮಾಡ್ತಿಯಾ ? "
" ಏ ಎರೆಯಮ್ಮ ! ನಂಗೇ ಸವಾಲು ಓಡ್ತೀಯಾ ? " ಎನ್ನುತ ಮೊದಲ ಬಾಣವನ್ನು ಪ್ರಯೋಗ ಮಾಡಿದನು ಮರುಳ.
ಇಬ್ಬರೆಡೆ ಭೀಕರವಾದ ಕಾಳಗ ಜರುಗಿತು. ಕೊನೆಗೊಮ್ಮೆ ಪಳ್ಚತೆರೆಯಮ್ಮ ಬಿಟ್ಟ ಬಾಣ ಮರುಳನ ತೋಳಿಗೆ ನಾಟಿತು.
' ಅಯ್ಯೋ ಅಮ್ಮಾ ! ' ಅವನು ನೋವಿನಿಂದ ತೋಳನ್ನು ಹಿಡಿದುಕೊಂಡಾಗ ಬಿಲ್ಲು ಹಿಡಿದಿದ್ದ ಕೈ ಸಡಿಲಗೊಂಡಿತು.
ಮತ್ತೊಂದು ಬಾಣ ಪ್ರಯೋಗಕ್ಕೆ ಪಳ್ಚತೆರೆಯಮ್ಮ ತಯಾರಾದಾಗ ಹಿಂದಿನಿಂದ ಎರಡು ಬಾಣಗಳು ಸುಯ್ಯೆಂದು ಬಂದು ಅವನ ಬೆನ್ನಿಗೆ ನಾಟಿಕೊಂಡವು. ತಬ್ಬಿಬ್ಬಾದ ಅವನು ಹಿಂದಿರುಗಿ ನೋಡುವ ಮುನ್ನ, ಮರುಳ ತನ್ನನ್ನು ಸುಧಾರಿಸಿಕೊಂಡು ಇನ್ನೆರಡು ಬಾಣಗಳನ್ನು ಎರೆಯಮ್ಮನ ಎದೆಗೆ ಗುರಿಯಿಟ್ಟು ಹೊಡೆದನು.
" ಮತ್ತೆ ಬರ್ತೀನೋ ! ನಿಮ್ಮೂರ ತುರುಗಳನ್ನ ಹೊಡಕೊಂಡೇ ಹೋಗ್ತೀನೋ ! "
ಸವಾಲೆಸೆದು ಜೊತೆಗಿದ್ದ ಹುಡುಗರೊಂದಿಗೆ ಕಾಡೊಳಗೆ ಕಣ್ಮರೆಯಾದ ದುಷ್ಟ ಮರುಳ.
ತೂರಾಡುತ್ತ ಹಿಂದಿರುಗಿ ನೋಡಿದ ಪಳ್ಚತೆರೆಯಮ್ಮನಿಗೆ ತನ್ನ ಬೆನ್ನಿಗೆ ಬಾಣ ಹೊಡೆದವನನ್ನು ಕಂಡು ಆಘಾತವಾಯಿತು!
" ತಮ್ಮಯ್ಯ ! ನೀನಾ ? "
ಸ್ಥಿರವಾಗಿ ನಿಲ್ಲಲಾರದೆ, ಬೆನ್ನಲ್ಲಿ ಚುಚ್ಚಿಕೊಂಡಿದ್ದ ಬಾಣಗಳಿಂದ ಮರದ ಬೊಡ್ಡೆಗೆ ಒರಗಲೂ ಆಗದೆ
ಪರದಾಡಿದ ಪಳ್ಚತೆರೆಯಮ್ಮ.
" ತಮ್ಮಯ್ಯ ! ನನ್ನ ಮೇಲಿನ ಅಸೂಯೆಯಲ್ಲಿ ನಮ್ಮ ತುರುಗಳನ್ನೇ ಬಿಟ್ಟುಕೊಟ್ಟೆಯಲ್ಲೋ ... "
ತಮ್ಮಯ್ಯ ಮೌನ ಸಾಧಿಸಿದನು.
" ಹುಚ್ಚು ಮರುಳ ! ನಮ್ಮ ತುರುಗಳ ಹಾಲಿನಿಂದ್ಲೇ ಮೊಸರನ್ನ ಸೀ ಅಂದ್ಕೊಂಡಿದ್ದಾನೆ ! ನಮ್ಮ
ಸಿಯ್ಯನೆಲ್ಲಿನ ಅನ್ನದಿಂದ್ಲೇ ಮೊಸರನ್ನಕ್ಕೆ ಸೀ ಅನ್ನೋದು ಅವ್ನಿಗೆ ಗೊತ್ತಿಲ್ಲ .... "
ಏದುಸಿರು ಬಿಡುತ್ತ ಮುಂದುವರೆದ ಪಳ್ಚತೆರೆಯಮ್ಮ.
" ಈ ವಿಷಯ ತಿಳಿದ್ರೆ ನಾಳೆ ನಮ್ಮ ಊರಳಿವಿಗೂ ಅವನು ಸಿದ್ಧನಾಗ್ತಾನೆ .... "
ಪಳ್ಚತೆರೆಯಮ್ಮ ಕುಸಿದು ಕುಳಿತನು.
" ತಮ್ಮಯ್ಯ ... ! ಆವತ್ತು ಬಸವನ ಕಟ್ಟು ಬಿಚ್ಚಿದ್ದು ನೀನೆ ಅನ್ನೋದು ನನಗೆ ಗೊತ್ತಿತ್ತು! ಅದು ಬರಿ ಹುಡುಗಾಟದ ಹೊಟ್ಟೆಕಿಚ್ಚು ಅಂದ್ಕೊಡೆ ... ಆದ್ರೆ ... ಆದ್ರೆ ! ನನ್ನನ್ನ ಕೊಲ್ಲೋ ಅಷ್ಟು ದ್ವೇಷ.... ಯಾಕೋ ... ಯಾಕೋ ? "
ಪಳ್ಚತೆರೆಯಮ್ಮ ಮೆಲ್ಲಮೆಲ್ಲನೆ ನೆಲಕ್ಕೆ ಸರಿದ.
" ತಮ್ಮಯ್ಯ ! ಎಚ್ಚರ ! ನಮ್ಮ ತುರುಗಳು ಜೋಪಾನ .... ನಮ್ಮ ಊರು ಜೋಪಾನ..... "
ಅದೇ ಪಳ್ಚತೆರೆಯಮ್ಮನ ಕೊನೆಯ ಮಾತಾಗಿತ್ತು.
ಎಲ್ಲೆಲ್ಲೂ ಭೀಕರ ಮೌನ ...
" ಇಲ್ಲ! ಇಲ್ಲ! ನೀನು ಸಾಯಬಾರದು ! ಸಾಯಬೇಡಕಣೋ ! ನನಗೆ ನೀನು ಬೇಕುಕಣೋ ! "
ನೆಲಕ್ಕೆ ಸರಿದಿದ್ದ ಪಳ್ಚತೆರೆಯಮ್ಮನನ್ನು ಎದೆಗಪ್ಪಿಕೊಂಡು ಗೋಳಾಡಿದವನು ತಮ್ಮಯ್ಯನಲ್ಲ!
ಆರೋಕ್ !
--------------------------------------------------------------------------------------------------
--------------------------------------------------------------------------------------------------
" ಚುರುಕಾದ ಮಕ್ಕಳು ಸಾರ್ ! ಎಂತಾ ಕ್ರಿಯಾಶೀಲತೆ ! ಆಯುಷ್ ಅಭಿನಯದಲ್ಲಿ ಚಾಂಪಿಯನ್ ! ಆರೋಕ್ ಬಿಲ್ಲುಗಾರಿಕೆಯಲ್ಲಿ ಚಾಂಪಿಯನ್! ಕಂಗ್ರಾಟ್ಸ್ ಸಾರ್ ! "
ಅಪ್ಪ ನಮ್ರತೆಯಿಂದ ಮೆಚ್ಚುಗೆಯ ಮಾತನ್ನು ಸ್ವೀಕರಿಸಿದರು.
" ಆಯುಷ್ ಅಭಿನಯ ನೋಡಿ ಕಟ್ ಹೇಳಕ್ಕೂ ಮರೆತುಹೋಯಿತು ! " ಎಂದು ಮುಂದುವರೆದರು ಡೈರೆಕ್ಟರ್ ಪ್ರಾಣೇಶ್ ಅವರು.
" ಆರೋಕ್ ಅವರ ಪ್ರತಿಕ್ರಿಯೆ ನೋಡಿ ಮೈ ಝುಮ್ ಅಂದ್ಬಿಡ್ತು ಸಾರ್ ! ಏನ್ ಆರೋಕ್ ಸಾರ್ ! ನೀವೂ ಚಿತ್ರಗಳಲ್ಲಿ ಅಭಿನಯ ಮಾಡ್ತೀರೇನು ? '' ಅಪ್ಪನ ಸಮೀಪ ನಿಂತಿದ್ದ ಆರೋಕನ್ನು ಕುರಿತು ಪ್ರಶ್ನಿಸಿದರು ಡೈರೆಕ್ಟರ್ ಅವರು.
" ಸೋದರರಲ್ಲಿ ಕಾಂಪಿಟಿಷನ್ ಯಾಕೆ ಸಾರ್ ? ಅವರವರ ಕ್ಷೇತ್ರ ಅವರವರಿಗೆ ! " ಆರೋಕ್ ಹೀಗೆಂದಾಗ ಡೈರೆಕ್ಟರ್ ಮೆಚ್ಚುಗೆಯ ನಗೆ ಬೀರಿದರು.
" ಮ್ಯಾಡಮ್ ಮತ್ತು ಆಯುಷ್ ನಿನ್ನೆ ಆರೋಕ್ ಜೊತೆ ಇರಕ್ಕಾಗ್ಲಿಲ್ಲ ಅಂತ ತುಂಬಾ ಫೀಲ್ ಮಾಡಿದ್ರು... ! ತುಂಬಾ ಸಾರೀ ಸಾರ್ ! ಶೂಟಿಂಗ್ ಮಾಡೋದಕ್ಕೆ ಪರವಾನಗಿ ಸಿಕ್ಕಿದ್ದೇ ತುಂಬಾ ಲೇಟು. ಅಲ್ದೆ ಗದ್ದೆಗೆ ಒಂದ್ಕಡೆ , ಕೆರೆಗೆ ಒಂದ್ಕಡೆ , ಕಾಡಿಗೆ ಒಂದ್ಕಡೆ ಅಂತ ತುಂಬಾ ಸುತ್ತ ಬೇಕಿತ್ತು. ಹೇಳಿದ್ದ ಟೈಮ್ಗೆ ಮುಗಿಸಕ್ಕೆ ಆಗ್ಲಿಲ್ಲ ... "
" ಇರ್ಲಿ ಬಿಡಿ ! ಒಪ್ಕೊಂಡ ಕೆಲಸ ಮುಗಿಸ್ಲೇಬೇಕಲ್ಲ ! "
" ಮ್ಯಾಡಂ ಹಾಗಿರ್ಲಿ, ಆಯುಷ್ ಸಹ ಅದನ್ನೇ ಹೇಳಿದ್ರು ಸಾರ್ ! ಈ ಕಾಲದಲ್ಲಿ ಎಷ್ಟು ಜನಕ್ಕೆ ಆ ಡೆಡಿಕೇಷನ್ ಇದೆ ಸಾರ್ ? ಮಾಕ್ಕಳಿಗೆ ಒಳ್ಳೆ ವ್ಯಾಲ್ಯೂಸ್ ಕಲಿಸಿದ್ದೀರಿ ಸಾರ್ ."
" ಅದೆಲ್ಲ ಇರ್ಲಿ ! ಚಿತ್ರ ಯಾವಾಗ ಬಿಡುಗಡೆಯಾಗತ್ತೆ ? " ಮಾತು ತಿರುಗಿಸಿದರು ಅಪ್ಪ.
" ಒಂದಿಷ್ಟು ಕಂಪ್ಯೂಟರ್ ಗ್ರಾಫಿಕ್ಸ್ ಮಾಡಬೇಕಿದೆ ! ಸಿಯ್ಯನೆಲ್ವಾಗಿಲ ಪಳ್ಚತೆರೆಯಮ್ಮನ ವೀರಗಲ್ಲನ್ನ ಒಂದು ಜೂಮ್ ಷಾಟ್ ತಗೋಬೇಕು. ಆ ವೀರಗಲ್ಲ ಬಗ್ಗೆ ತಜ್ಞರೊಬ್ಬರ ವಾಯ್ಸ್ ಓವರ್ ರೆಕಾರ್ಡ್ ಮಾಡ್ಬೇಕು ! ಎಲ್ಲ ಮುಗಿದ್ರೆ ಹಬ್ಬಕ್ಕೆ ಬಿಡುಗಡೆ ! "
ಡೈರೆಕ್ಟರ್ ತನ್ನ ಚಿತ್ರ ಸೊಗಸಾಗಿ ಮೂಡಿ ಬಂದಿರುವ ಉತ್ಸಾಹದಲ್ಲಿ ವಿವರವಾಗಿ ಬಡ ಬಡ ಮಾತನಾಡಿದರು.
ಮೇಕಪ್ ತೆಗೆದು ಉಡುಪು ಬದಲಿಸಿ ವ್ಯಾನಿನಿಂದ ಹೊರ ಬಂದ ಆಯುಷ್. ಆರೋಕ್ ಅವನನ್ನು ಕುರಿತು ಧಾವಿಸಿದ ! ಸೋದರರಿಬ್ಬರೂ ಪ್ರೀತಿಯಿಂದ ಒಬ್ಬರನ್ನೊಬ್ಬರು ಬಿಗಿದಪ್ಪಿಕೊಂಡರು!
-----------------------------------------------------------------------------------------------------
ಡಾ . ಪಿ . ವಿ . ಕೃಷ್ಣಮೂರ್ತಿ ಅವರ 'ಶ್ರೀನಿವಾಗಿಲ ತುರುಗೋಳ್ ಶಿಲ್ಪಿ' ಎಂಬ ಲೇಖನವನ್ನು ಆಧಾರಿಸಿ ರಚಿಸಲ್ಪಟ್ಟ ಕಥೆ.
https://drive.google.com/file/d/0B5GbasXByROQekFXM2FYSngwS1U/view
-------------------------------------------------------------------------------------------------------
ಡಾ . ಪಿ . ವಿ . ಕೃಷ್ಣಮೂರ್ತಿ ಅವರ 'ಶ್ರೀನಿವಾಗಿಲ ತುರುಗೋಳ್ ಶಿಲ್ಪಿ' ಎಂಬ ಲೇಖನವನ್ನು ಆಧಾರಿಸಿ ರಚಿಸಲ್ಪಟ್ಟ ಕಥೆ.
https://drive.google.com/file/d/0B5GbasXByROQekFXM2FYSngwS1U/view
-------------------------------------------------------------------------------------------------------
‘ Ayush ! Ayush !
Ayush ! Everyone is always
concerned only with Ayush !
No one cares for
me ! No one is bothered that today is an important day for me !’
Arok was in a
terrible state of mind .
He had heard the
brief conversation Mom and Dad had had from within his room .
Mom had said : “ Its unavoidable . I have to
go with Ayush ! What to do ?”
“ Dont worry ” Dad had told her “ you carry on. That
is important . I will accompany Arok. ”
Mom had left with
Ayush early in the morning ......‘ leaving me on my big day ! As though only
what he does is important and not me or
what I do. ....Everybody is full of partiality . Only he is important to them
....’
Fuming with rage ,
he was pulling out everything from the wardrobe and throwing things all over
the room. More than self pity , it was jealousy of Ayush that had filled up his
mind.
“ Arok !” he
heard Dad calling from the living room “
Are you ready yet ? We have to be in the
stadium on time.”
“ Coming ” growled
Arok , “ I cant find my lucky shirt, searching.”
“ Oh , dont waste time . Mom has kept everything you need
on the sofa here- your dress, cap, socks and shoes , and even a flask of Boost
...”
Arok rushed out of
the room and snatched up his things, pouting.
“ Mom really
regrets she cannot be with you on your big day . But it was unavoidable ...she
had to go with Ayush .....they both wished you goid luck before they left. ”
Having no patience
to listen, Arok rushed back to his room with his things and shut the door with
a loud bang .
-------------------------------------------------------------
-------------------------------------------------------------
The fields of
Siyyanelvagilu had turned golden with ripe crops ready for harvest . Flocks of
sparrows were invading to loot the fat , sweet grains on stalk . Storks stood
in penance , waiting to swoop down on succulent fish to come their way.
Competing with these birds was Ajjavva , sitting on a boulder by the tank , enjoying her
tamboola , holding a fishing line lowered into the water.
The youth who was
standing by enjoying the pleasant atmosphere , suddenly made a dive and torpedoed into the sparkling water
. When he came up again , his long wet
hair cascaded on his shoulders shimmering with drops of water that shone like diamonds .
A few village
girls in colourful sareess, carrying water pots , came gliding gracefully to
the banks of the tank .
A playful one
among them hailed the lad “ O Yereyamma ! Tell me how many times have you already bathed today .. ? ”
To which her friend laughed and added : “ Hush , silly girl ! He is not
like us dull and dirty people bathing only once ! He is The Dazzler -
Palchtereyamma ! - and has to keep bathing to keep dazzling ! ”
All girls giggled
.
Ajjavva raised her
voice and scolded them “ O you chattering imps! My darling is still a little
boy , why do you pick on him ? He is really a Dazzler , not because he bathes
twice or thrice . Why do you think everyone calls him Palchtereyamma ? He is
Palch (dazzling ) in everything - his mind , his behaviour , his speech
everything is Brilliant !”
The girls giggled
more .
“ Ajjavva , don't
mind them ” Said the lad , “ pulling my leg is harmless entertainment for these
Akkas ....”, he dived in again.
But was out the
next instant “ Ajjavva ! There’s a huge fish caught in your rod , pull it out ! ”
Ajjavva got very
excited and started tugging on her
fishing rod . But she could not pull up
the string .
Palchtereyamma
sprang to her rescue . He took the rod from her and pulled up the huge fish at the end of the line.
Ajjavva’s jaw
dropped “ Thats a huge one ! ......O , my dear boy ! You are such a help to
everyone ! You work in the fields , you watch the cattle , you help unfortunate
people like me .....”
“ .......and you
bathe thrice a day to keep yourself dazzling !” said one of the girls ,
mimicking Ajjavva’s voice .
To which all girls
laughed out loud .
“ Get lost you
silly girls ! ....all you know is to make fun of others ! What do you know
about my darling boy , he ........”
“Enough Ajjavva ! ” He cut her short , as he lay the huge fish removed
from the string , carefully inside her basket. “ There is no need to praise me
so much . I only do what everyone else
does ......”
“ Who does what ? ” countered Ajjavva “ take your own brother , what does he do , tell me ? ”
Right at that
moment , Thammayya came rushing
towards them .
“ Anna ! Anna !
Our Basava !” he panted in panic .
“ Whats with
Basava now ? ”
“ He has snapped
his tether and has entered the main street ....is creating such a ruckus there ....”
“ O Dear God ! ” cried Ajjavva , “ Basava is such a rowdy ! Who is going to get hurt now ! ”
“ Coming ! ” Palchtereyamma was already on his feet , gathering his long hair into a bun at
the right side of his head .
They all ran
towards the village.
------------------------------------------------------------
------------------------------------------------------------
“ Once Guru
Dronacharya announced a competition for his students to test their archery skills . He fixed a model of a bird
on the branch of a tree and the challenge
was to hit the eye of the bird .
He called
Yudhishtira and asked “ Tell me what you
see over there.”
“ I see a tree ,
its branches and leaves . I see the bird you have kept there , its wings and
its eye . ”
Drona called up the rest of his students and asked
them , one by one , the same question . To which they all answered the
same too.
Finally he called
Arjuna to tell him what he saw.
“ The Eye . I see
only the Eye and nothing else.” Said Arjuna .
Needless to say ,
Arjuna got the eye in a single shot.
“ That is called
Focus ! ” ended Dad , parking the car behind the stadium. “ Just like Arjuna ,
if you have a single minded Focus , you will be the champion. ”
It was a nice
motivational story , but Arok was still
in a bad mood to appreciate what Dad was narrating .
“ Arok ! Wish you
the Best , Dear !” Mom’s voice broke
through the speaker of Dad’s phone . “ I
know you will do well ! ”
“ Best of Luck
,Bro ! ” followed Ayush’s voice “ Focus and Shoot!”
Arok answered to neither of them, but just started
walking towards the stadium door , gnashing his teeth :
‘ Bro - gro- crow
! Who needs this great fellow’s blessings ! .....’
The stadium was filling up . There were six
people contesting for the Juniors Archery Championship .
‘ If I win today ,
I will be eligible for the Nationals ...then, International title ...Olympics
....’ Arok’s imagination took wing
and started flying ....
“ Good Luck , Arok
!,” The Coach patted his back . “ Just Focus ! ...You can win this ! ”
As he took his position , facing the target ,
Arok told himself ‘This is my Field ! I
am King here ! Focus !’
All his anger ,
disappointments and negative thoughts fell off his mind .
Like Arjuna , full
of Focus , he lifted his bow .
------------------------------------------------------------------------------------------
------------------------------------------------------------------------------------------
The whole street
was in panic and commotion . A highly agitated Basava was charging at
everything in sight , snorting furiously
. People were shrieking and fleeing to safety.
“ Basava !”
As soon as he
heard this command , Basava stopped in his track . And turned . Now his red
eyes were trained on Yereyamma .
Kicking and stamping his powerful front legs on the dusty ground, he charged towards his new target in murderous rage .
Undaunted, the lad
charged at the massive bull too . The crowd screamed in terror .
Yereyamma sprang up and caught the animal by its horns
with both hands. Basava tried to shake him off , but was unable to do so. This infuriated him further and he jumped and stamped and reared up , shaking
his head violently. The lad held fast.
It was a vigorous
duel that kicked up great quantities of dust , so fully enveloping them that the
crowds could not see anything clearly
through the thick clouds of it .
“ O God , please
save the dear boy ! ” Wailed Ajjavva loudly .
After a while ,
when the dust settled down , what they saw left the people stunned ! For a
moment they were frozen in silence , the next moment , the whole village
erupted into a jubilant cry and wild cheering.
The lad was gently
stroking Basava’s neck , while the animal’s head was bowed , quietly browsing on a sheaf of sweet rice stalks from
his hand ! The beast was humbled !
The Gavunda’s wife
came out with a tray of Aarathi and waved it around the victor .
“ May all the Evil
Glances of the Crow-Eyed , the Owl-Eyed, the Dog-Eyed , the Fox-Eyed be removed
forever ! ” Chanted Ajjavva.
As soon as
Palchtereyamma had led Basava back to his barn and tied him up , the young
people of the village brought out their drums and started celebrating . Anklet bells tinkling and bracelets
clinking , they all danced to a jolly , congratulatory song :
The Walk or The
Talk , its Razzle Dazzle !
The Flair or The Forte , its Razzle Dazzle
Palchtereyamma !
He is Razzle Dazzle !
Hail our Hero ,
Razzle Dazzle !
-----------------------------------------------------------------------------------
-----------------------------------------------------------------------------------
Arok was on Cloud 9 .
He had won on all
counts with great distinction and was declared
Junior Champion . Now, National Championship seemed within reach .
Congratulatory messages had been pouring in non stop and Dad
was close to dislocating his wrist with all that handshaking .
“ Your son is Arjuna born again , Sir ! What perfect shots ! ”
“ All praise is
due to his excellent coach . ”
“ And to you too
Sir , for encouraging him in this field, doing everything to groom him in it ,
in spite of your busy schedules. ”
While driving back
home , Dad bought him his favourite Ice Cream.
“ I am so proud of
you , Arok ! ” Said Dad , ruffling his
hair affectionately, “ You were just marvelous today ! ”
Arok ’s chest was
filled with happiness .
“ Mom had called ,
Arok. Ayush distributed sweets to all to celebrate your victory it seems . Mom
said she has ordered a special dinner for tonight and has promised they will be home , however late .”
But things turned out differently .
At dinner time ,
Mom called and told him how happy she was .
“You have made us
all so proud , Dear ! You know, everyone has been telling Ayush that he must pick up some arrow shooting tips from
you ! ........I had made great plans for a celebratory dinner today , but, my dear, I am afraid I cannot make it home
today . Unavoidably I have to stay back
here with Ayush, his work is not done yet
.....I know you will understand, dear . Take good rest today , we will
definitely have a wonderful celebration
tomorrow I promise ....”
All his happiness
came crashing down. ‘ Ayush again , stealing my joy ! O , why did he have to be
born my sibling ! ’
Arok threw
down the phone and ran to his room , shutting the door behind him , even as Mom’s
voice kept calling out : “ Arok ? Arok ? Can you hear me ? ...”
Dad picked up the
phone and told Mom “Don’t worry , he is
just tired . After a good sleep , he should be fine . I will convince him and
bring him over there tomorrow .”
When Yereyamma
returned home he found his Mother looking very worried .
“ Why so late to
return home , son !”
“ Whats the matter , Mother ? I was helping to fix the
roof at patel’s house.......why are you
so anxious ? ”
“ It is getting very late , but the cows have not
come home yet ....”
Rachanna came in
from the neighbouring house to inquire .
“ I dint take the
cows out today , Annayya .” He said , “Thammayya and the other boys said they
will graze them today.”
“ No , no other
boy went !” Cut in Mother , “ Your dear brother refused to take anyone and went
alone to the pasture.”
“ Mother ! Why did
you allow him to go alone ! Our guest from the next village , Marula , has been
here since three days . Couldn’t you send him along ? ”
“ That glutton is
good for nothing !” remarked Mother angrily. “ He has only been busy
praising that the curds prepared from
the milk of our cows is specially sweet
. And he already left after gulping down one seer of Curd Rice .....our boy has no sense of time
, don’t know where he is playing ....what if any wolf or tiger from the forest
came into the pasture .....” Mother was getting anguished.
Yereyamma did not
waste another moment . He gathered his bow and
arrows and sped towards the pastureland .
--------------------------------------------------------
--------------------------------------------------------
“ Good Morning , Arok ! Get up ! ...Look, you
are in the newspaper today ! ”
Dad came in,
waving the newspaper excitedly.
Arok sat up in bed
, rubbing his eyes . He looked at the newspaper report Dad showed him .
Beside his photograph
was a nice report about his performance at the contest the previous day. He
was thrilled .
“ Now get up and
get ready ! We have to start ! ”
“ Where are we
going Dad ?”
“ We are going to
where Mom and Ayush are and surprising them !
We can all celebrate together and then drive back together . ”
Arok’s face fell.
His excitement drained away . “ No , Dad . Let them come whenever they want . I
am going to sleep some more. ”
“ Listen , Arok !
Don’t we want to know what’s so important happening there that they didn’t come
for dinner last might ? So, lets spring a surprise on them , Ok ?”
Dad knew how to
cajole him and get him to agree to his plan .
The Pasture land
was empty. There were neither cattle nor cowherds to be seen anywhere .
“ Thammayya ! ” Called out Yereyamma
There was no
response .
“ Gangey !
....Thunge .....Gowree ! ... Kaveree ! .... ” he called out to the cows loudly. No cows appeared.
The tall trees
were filtering in the low light of the setting sun . A soft breeze blowing from beyond the trees
brought with it an unmistakable smell . Yereyamma’s keen nose at once
recognized it as the smell of his cows and he ran towards the direction it came
from , calling out :
“ Gangey
....Gowree .... ”
“ Ambaaaaa” A sudden
mooing of a cow was followed by a
clattering of hooves.
Yereyamma followed the noise and soon found
the cows behind tall trees. But they were being beaten and held back by four
boys !
“ Hey you
fellows ! Who are you , holding back our
cows !” He roared at them.
As soon as the
cows heard his voice , they knocked the boys aside and started rushing towards
their master .
“ Run , Run ,
Dears , Run home now ! ” Yereyamma stroked them comfortingly.
Just then , an
arrow sliced through the air towards him , but he ducked just in time.
“ Who is that
coward ? If you are brave enough , come out and show yourself ! ” He shouted ,
getting his arrows ready .
In response to that call , the shooter came
out from behind a tree . It was Marula !
“ What ! You rogue
! You eat our food and steal our cows ! How dare you ! ”
“ Yereyamma ! Dont
challenge me ! ” shouted Marula , shooting a quick arrow at him .
A fierce fight
erupted between the two archers .
Soon , Yereyamma’s
arrow pierced Marula’s shoulder and he hit the ground , screaming in pain . His
bow fell off his hand .
Before
Yereyamma could take out another arrow ,
he felt the sharp stabbing pain of two arrows piercing his back .
Marula , who had
managed to get up , shot two more arrows at his chest and raced towards the
trees where his friends were hiding .
“ I will be back !
I vow I will be back to snatch your cows!” Shouted Marula as he ran away with
his friends into the thick , dark forest .
Too shocked and
losing strength, Yereyamma turned with difficulty to see who had shot him from
the back .
He was stunned .
“Thammayya ! You ?
Why ? ”
He dragged himself
towards a tree , wincing in pain .
“ Blinded by your
jealousy of me , you went so far as to surrender our cows to that rascal ! ”
Thammayya was
silent .
“ Marula is a fool
! He thinks the sweetness of our curd rice comes from the sweet milk of our
cows and tried to steal them ! .... he doesn’t know the sweetness comes from
the sweet rice our land produces .....”
He sat up leaning
to a tree , panting . He spoke in a low , faltering voice : “ Thammayya ! The
sweet rice is a gift of our land . If that rogue comes to know of that , he
will even try to seize our lands.
..... the other
day , I knew it was you that cut loose
Basava . I had thought it was one of your pranks to irritate me ....but , now
,you go so far as to kill me ... why Brother ? Has envy blinded you so much?”
His voice was
weakening , he was sliding down slowly.
“ Take care ! Take
care of our Cows ! ...Take care of our
...village..”
Those were his
last words.
“ No ! No ! Don’t
die ! You must not die ! Please don’t go ! I need you , Brother !”
Grabbing the
sliding Yereyamma to his chest and wailing in distress was , not Thammayya !
“ Very smart
children, Sir ! So creative and skilled. One in Archery, one in Acting ! You
are one lucky father , Sir !”
Director Pranesh
wouldn’t stop congratulating Dad !
“ I even forgot to
say “cut” , so wonderful was Ayush’s performance ! .....and Arok’s spontaneous
reaction to it ! That was great ! .... what , Arok-Sir ? Will you consider
acting in films too? ”
“ Not competing
with Brother !” Smiled Arok “ I have my own interest to follow. To each his
own field. ”
“ Ayush and Madam
were very disappointed that they could not be with Arok at the stadium
yesterday .... Sorry Sir . There was some problem with the Permit for Shooting,
we got it late and then we had to go to three different locations here for the
Fields, the Tank , the Forest... we couldn’t
wrap up the schedule on time .”
“ It is ok .” Said
Mom. “Having agreed to finish work , we had to honour that .”
“ Even Ayush said
the same yesterday , Sir ! So much responsibility and dedication ! That too in
such a young lad . You have instilled good values in your kids , Sir . ”
“ By the way ,when
is the movie releasing ? ”
“ Some computer
graphics have to be done yet . We are taking a zoom of the Seeyanelvagilu
Palchtereyamma inscription and getting an epigraphist to do a voice over about
it . And then Editing and re-recording . I am hoping to complete everything by
Dasara or Deepavali , Sir. ”
Ayush came out of
the van with his make-up cleaned off and dress changed to normal . Arok ran
towards him .The brothers
laughed and hugged each other .
-------------------------------------------------------------------------------------------------------
This story is based on an article titled 'Srinivaagila Turugol Shilpa' by Dr. P.V.Krishnamurthy, published in Itihasa Darshana.
https://drive.google.com/file/d/0B5GbasXByROQekFXM2FYSngwS1U/view
This story is based on an article titled 'Srinivaagila Turugol Shilpa' by Dr. P.V.Krishnamurthy, published in Itihasa Darshana.
https://drive.google.com/file/d/0B5GbasXByROQekFXM2FYSngwS1U/view
------------------------------------------------------------------------------------------------------------------
No comments:
Post a Comment