ಸಾಹಸ ವೀರ ಸಂಬಯ್ಯ
" ಸಂಬಯ್ಯ ! ಲಕುಮಿ ಯಾವೊತ್ನಾಗೆ ಕರ ಆಕ್ತಾವಳೋ ಏನೋ ! ನಾ ಕೊಟ್ಟಿಗೆ ತಾವ ಇರ್ಬೇಕು ! ವಸಿ ನನ್ ಗದ್ದೆಕಡೆ ನೋಡ್ಕಳಪ್ಪ ! " ಬದುವಿನ ಮೇಲೆ ನಿಂತು ಚಡಪಡಿಸುತ್ತ ಸಂಬಯ್ಯನನ್ನು ಕುರಿತು ಗಟ್ಟಿಯಾಗಿ ಕೂಗಿ ನುಡಿದ ಪಾಪಣ್ಣ .
" ಓ ! ಅದಕ್ಕೇನಣ್ಣಾ ? ನಾ ನೋಡ್ಕತ್ತೀನಿ ! ನೀನು ಚಿಂತಿಲ್ದೆ ಓಗು ! ಆದ್ರೆ ನನ್ಗೆ ಗಿಣ್ಣಾಲು ತರೋದ್ ಮಾತ್ರ ಮರೀಬ್ಯಾಡ ! " ಏತವನ್ನು ಚಲಿಸುತ್ತಲೇ ನಗುತ್ತ ನುಡಿದ ಸಂಬಯ .
" ವೋ ! ಅದೇಂಗ್ ಮರೀತದೆಕಣಪ್ಪಾ ? " ಕಿರುನಗೆ ಬೀರಿ ತುರ್ತಿನಿಂದ ಹೊರಟು ಹೋದ ಪಾಪಣ್ಣ .
ಸಂಬಯ್ಯನಿಗೆ ಅವನ ಅವ್ವ ಬೆಲ್ಲ ಬೆರೆಸಿ ಪಕ್ವ ಮಾಡಿ ಕೊಡುವ ಗಿಣ್ಣು ಹಾಲು ಎಂದರೆ ಪಂಚ ಪ್ರಾಣ! ಅದನ್ನು ತಿನ್ನುತ್ತಿದ್ದ ಕಾರಣದಿಂದಲೋ ಏನೋ , ಇನ್ನೂ ಹದಿನಾರು ವರುಷಗಳು ತುಂಬದಿದ್ದರೂ ಇಪ್ಪತ್ತು ಹರಯದ ತರುಣನಂತೆ ದಷ್ಟು ಪುಷ್ಟಾದ ಮೈಕಟ್ಟನ್ನು ಹೊಂದಿದ್ದ . ಸೋಮಾರಿಯಾಗಿ ಕುಳಿತಿರದೆ , ಲವಲವಿಕೆಯಿಂದ ಕಠಿಣವಾದ ಕೆಲಸಗಳನ್ನು ಮಾಡುತ್ತಿದ್ದು ಬಲಶಾಲಿಯಾಗಿದ್ದ .
ಅವನ ಮನೆಯಲ್ಲೇ ಸಾಕಷ್ಟು ತುರುಗಳಿದ್ದವು . ಹಾಗಾಗಿ ಗಿಣ್ಣಿಗೆ ಯಾವಾಗಲೂ ಬರ ಇರಲಿಲ್ಲ . ಅಷ್ಟೇ ಅಲ್ಲದೆ ಆ ಗ್ರಾಮದಲ್ಲಿ ಎಲ್ಲರ ಮನೆಗಳಲ್ಲೂ ತುರುಗಳ ಮುಂದೆ ಇದ್ದವು . ಗೋಗ್ರಹಣ ಮಾಡಲು ಬರುವ ಚೋರರಿಂದ ಅವುಗಳನ್ನು ಕಾಯುವುದೇ ಆ ಊರ ಯುವಕರ ಕೆಲಸವಾಗಿತ್ತು. ವರ್ಷವಿಡೀ ಒಂದಲ್ಲಾ ಒಂದು ಹಸು ಕರು ಹಾಕಿ ಗಿಣ್ಣು ಹಾಲು ನೀಡುತ್ತಿತ್ತು . ಅದರಲ್ಲಿ ಸಂಬಯ್ಯನಿಗೆ ಒಂದು ಪಾಲನ್ನು ತೆಗೆದಿಡುವುದನ್ನು ಯಾರೂ ಮರೆಯುವುದಿಲ್ಲ . ಸಂಬಯ್ಯನ ನಗು ನಗುತ್ತಿದ್ದ ಮುಖ , ಎಲ್ಲರಲ್ಲೂ ಅವನಿಗಿದ್ದ ಸ್ನೇಹ ಭಾವ , ಯಾವಾಗಲೂ ಎಂತಹ ಕೆಲಸಕ್ಕೂ ನೆರವಾಗಲು ಮುಂದಾಗುತ್ತಿದ್ದ ಅವನ ಉದಾರ ಗುಣ - ಇವೆಲ್ಲದ್ದರಿಂದಲೂ ಅವನು ಊರವರ ಪ್ರೀತಿಗೆ ಪಾತ್ರನಾಗಿದ್ದ. ಮದ ಶೆಟ್ಟಿಯ ಮಗನಾಗಿದ್ದರೂ ಊರವರೆಲ್ಲ ಅವನನ್ನು ತಮ್ಮ ಮನೆಯ ಮುದ್ದಿನ ಕಂದನೆಂದೇ ಭಾವಿಸಿದ್ದರು .
ಪಾಪಣ್ಣನನ್ನು ಕಳುಹಿಸಿಕೊಟ್ಟ ಸಂಬಯ್ಯ ಗದ್ದೆ ಕೆಲಸಗಳನ್ನು ಮುಂದುವರಿಸಿದನು . ಕಣ್ಣಿಗೆ ಕಂಡಷ್ಟು ದೂರ ಹಸಿರು ಹಾಸಿದ್ದ ಗದ್ದೆಗಳಲ್ಲಿ ಸಾಕು ಸಾಕು ಎನ್ನುವಷ್ಟು ಎರೆಹುಳುಗಳನ್ನು ತಿಂದಿದ್ದ ಬೆಳ್ಳಕ್ಕಿಗಳು ಗೂಡು ಸೇರುವ ತವಕದಲ್ಲಿ ಬುಗ್ಗನೆ ಒಟ್ಟಿಗೆ ಆಗಸಕ್ಕೆ ಹಾರಿದವು . ನವಿಲೊಂದು ಹಾರಿ ಬಂದು ಸಮೀಪವಿದ್ದ ಬಂಡೆಯಮೇಲೆರಗಿ ಗರಿ ಬಿಚ್ಚಿ ಅತ್ತಿಂದಿತ್ತ ಇತ್ತಿಂದತ್ತ ತಿರುಗುತ್ತ ತನ್ನ ಸೌಂದರ್ಯವನ್ನು ಪ್ರದರ್ಶನ ಮಾಡ ತೊಡಗಿತು.
ಆಹಾ ! ಎರೆಯಪ್ಪಮಂಗಲ ಅದೆಷ್ಟು ಸುಂದರವಾದ ಗ್ರಾಮ ! ಸಂಬಯ್ಯನಿಗೆ ತನ್ನ ಈ ಸುಂದರವಾದ ಊರಿನ ಬಗ್ಗೆ ಬಹಳ ಹೆಮ್ಮೆ , ಪ್ರೀತಿ ಮತ್ತು ಭಕ್ತಿ ಸಹ. ಒಂದಾನೊಂದು ಕಾಲದಲ್ಲಿ ಎರೆಯಪ್ಪಮಂಗಲ ವೇದಾಧ್ಯಯನ ಮಾಡುವವರು ತಂಗಿದ್ದ ಶಾಂತಿಯಿಂದ ಕೂಡಿದ ಸುಂದರ ಅಗ್ರಹಾರವಾಗಿತ್ತು. ಕಾಲ ಉರುಳಿದಂತೆ ಅಕ್ಕಪಕ್ಕದ ಗ್ರಾಮಗಳಿಂದ ವಲಸೆ ಬಂದ ಕುಟುಂಬಗಳು ಅಗ್ರಹಾರದ ಸುತ್ತಮುತ್ತ ನೆಲೆಯೂರಿ ತಮ್ಮ ತಮ್ಮ ಕಸುಬುಗಳಲ್ಲಿ ತೊಡಗಿಕೊಂಡಿದ್ದವು . ಆ ವರೆಗೆ ಬರಿ ಅಗ್ರಹಾರವಾಗಿದ್ದ ಎರೆಯಪ್ಪಮಂಗಲ ಇಂದು ಒಂದು ಸ್ವಯಂಪೂರ್ಣ ಸುಂದರ ಗ್ರಾಮವಾಗಿ ಪರಿವರ್ತನೆ ಹೊಂದಿದೆ . ಸಂಬಯ್ಯನ ಪೂರ್ವಜರು ಸಹ ಇಗ್ಗಲೂರಿನಿಂದ ಬಂದು ತಮ್ಮ ವ್ಯಾಪಾರವನ್ನು ಇಲ್ಲೇ ಸ್ಥಾಪಿಸಿಕೊಂಡು ಎರೆಯಪ್ಪಮಂಗಲದ ನಿವಾಸಿಗಳಾಗಿದ್ದರು .
ದೂರದ ಹೊಲಗಳಲ್ಲಿ ಕೆಲಸ ಮುಗಿಸಿದ್ದವರೆಲ್ಲ ತಮ್ಮ ತಮ್ಮ ಮನೆಗಳಿಗೆ ಮರಳ ತೊಡಗಿದ್ದರು . ಇನ್ನೇನು ಪಾಪಣ್ಣನ ಹೊಲಕ್ಕೆ ನೀರು ಹಾಯಿಸಿ ಮುಗಿಸಿದರೆ ತಾನೂ ಮನೆಗೆ ಹೊರಡಬಹುದು. ಕೆಲಸ ಮುಗಿಸಿ ತಣ್ಣನೆಯ ನೀರಿನಲ್ಲಿ ಕೈಕಾಲು ತೊಳೆದುಕೊಂಡ ಸಂಬಯ್ಯ ಮನೆಗೆ ಹೊರಟಾಗ ಸೂರ್ಯಾಸ್ತಮನವಾಗ ತೊಡಗಿತ್ತು . ಬೇಗ ಮನೆ ಸೇರುವ ಇಚ್ಛೆಯಿಂದ ಅಡ್ಡ ದಾರಿ ಹಿಡಿದು ದಟ್ಟವಾದ ತೋಪಿನೊಳಗೆ ನುಗ್ಗಿ ಹೆಜ್ಜೆಹಾಕ ತೊಡಗಿದ ಸಂಬಯ್ಯ .
ಸೂರ್ಯ ರಶ್ಮಿಗಳು ನುಸುಳಲಾರದಷ್ಟು ದಟ್ಟವಾಗಿದ್ದ ತೋಪಿನೊಳಗೆ ಕಾರ್ಗತ್ತಲು ಆವರಿಸಿತ್ತು . ತೋಪಿನ ಮಧ್ಯೆ ಯಾತ್ರಿಕರಿಗಾಗಿ ಏರ್ಪಡಿಸಲಾಗಿದ್ದ ಕಲ್ಲು ಮಂಟಪದ ಬಳಿ ನಿಂತಿದ್ದ ಎರಡು ಕುದುರೆಗಳನ್ನು ಕಂಡು ಚಕಿತನಾದ ಸಂಬಯ್ಯ . ಈವರೆಗೂ ತಮ್ಮ ಗ್ರಾಮದಲ್ಲಿ ಕುದುರೆ ಸವಾರರನ್ನು ಕಂಡವರಿಲ್ಲ . ಈಗ ಬಂದಿರುವರಾರು ? ಕುತೂಹಲದಿಂದ ಮೆಲ್ಲನೆ ಹೆಜ್ಜೆಯಿಟ್ಟ ಸಂಬಯ್ಯ ಮಂಟಪದ ಬಳಿ ಸದ್ದಿಲ್ಲದೇ ಸಾಗಿ ಮರೆಯಲ್ಲಿ ನಿಂತು ನೋಡಿದನು .
ಕತ್ತಲಾಗುತ್ತ ಬಂದಿತ್ತು . ಮಂಟಪವೋ ಊರಾಚೆ ಇತ್ತು . ಅಕ್ಕಪಕ್ಕದಲ್ಲಿ ಈ ಹೊತ್ತಲ್ಲಿ ಯಾರೂ ಇರಲಾರರು ಎಂಬ ಭರವಸೆಯಿಂದಲೋ ಏನೋ , ಗಟ್ಟಿಯಾಗಿಯೇ ಮಾತನಾಡುತ್ತಿದ್ದರು ಒಳಗಿದ್ದವರು . ಆ ಸಂಭಾಷಣೆಯನ್ನು ಕೇಳಿಸಿಕೊಂಡ ಸಂಬಯ್ಯನಿಗೆ ಆಘಾತವಾಯಿತು . ಹೃದಯ ದಡ ದಡ ಬಡಿದುಕೊಂಡಿತು . ಒಡಲು ಆವೇಶದಿಂದ ಕಂಪಿಸಿತು . ಮನಸಲ್ಲಿ ಅವರುಗಳನ್ನು ಕೂಡಲೇ ಹಿಡಿದು ಜಾಡಿಸಬೇಕೆಂಬ ಉದ್ವೇಗ ಉಂಟಾಯಿತು . ನಿಧಾನ ! ನಿಧಾನ ! ದುಡುಕ ಬೇಡ ಎಂದಿತು ಮೆದುಳು ! ಹಿರಿಯರಿಗೆ ತಿಳಿಸ ಬೇಕೋ ಬೇಡವೋ ? ಯೋಚನೆ ಮಾಡಬೇಕು ! ಮುಂದೆ ಕೈಗೊಳ್ಳಬೇಕಾದ ಕ್ರಮದ ಬಗ್ಗೆ ಯೋಚಿಸಿ ಒಂದು ತೀರ್ಮಾನ ಮಾಡಬೇಕು ! ಸಮಯ ಹೆಚ್ಚಿಗೆ ಇಲ್ಲ !
ಸದ್ದಿಲ್ಲದೇ ಅಲ್ಲಿಂದ ಕಾಲು ಕಿತ್ತು ಮನೆಯನ್ನು ಕುರಿತು ತಳಮಳಿಸುತ್ತ ಧಾವಿಸಿದ ಸಾಂಬಯ್ಯ . ಮನೆ ತಲುಪಿದಾಗ ಅವನಿಗೆ ಅಲ್ಲೊಂದು ಆಶ್ಚರ್ಯ ಕಾದಿತ್ತು . ಜಗುಲಿಯಮೇಲೆ ಕುಳಿತು ಅವನ ತಂದೆ ಮದ ಶೆಟ್ಟಿಯೊಂದಿಗೆ ಮಾತನಾಡುತ್ತಿದ್ದರು ಇಗ್ಗಲೂರಿಂದ ಆಗಮಿಸಿದ್ದ ಅವನ ಸೋದರ ಮಾವ ಕಬ್ಬಯ್ಯ ಪೊಲೆಯಮ್ಮ ಗಾವುಂಡರು ! ಕಂಬಕ್ಕೆ ಒರಗಿ ನಿಂತಿದ್ದಳು ಅವರ ಮಗಳು ಮಾದೇವಿ ! ಅವಳನ್ನು ಕಂಡ ಕೂಡಲೇ ಸಂಬಯ್ಯನ ಮೆದುಳಲ್ಲಿ ಮಿಂಚೊಂದು ಸುಳಿಯಿತು ! ಮುಖ ಪ್ರಕಾಶವಾಯಿತು !
-----------------------------------------------------------------------------------------------------------------------
ನೊಳಂಬರಿಗೂ ಗಂಗರಿಗೂ ಜನ್ಮಾಂತರದ ಹಗೆ ಇದ್ದದ್ದು ತಿಳಿದ ವಿಷಯವೇ . ಗಂಗವಾಡಿಗೆ ಸೇರಿದ ಪ್ರದೇಶಗಳನ್ನು ಆಕ್ರಮಿಸುವ ಯತ್ನವನ್ನು ಸದಾ ಮಾಡುತ್ತಲೇ ಇದ್ದರು ನೊಳಂಬರು . ಇದೀಗ ಎರೆಯಪ್ಪಮಂಗಲದ ಮೇಲೆ ಅವರುಗಳ ಕಣ್ಣು ಬಿದ್ದಿದೆ . ಮುಂಚಿತವಾಗಿ ಆ ಊರ ಬಗ್ಗೆ ಎಲ್ಲ ಮಾಹಿತಿಗಳನ್ನೂ ಸಂಗ್ರಹಿಸಿ ನೊಳಂಬ ಅಧಿಕಾರಿಗಳಿಗೆ ವರದಿ ಮಾಡಲೆಂದೇ ಈ ಗೂಢಚಾರರು ಆಗಮಿಸಿದ್ದರು. ಅಮಾವಾಸೆಯ ರಾತ್ರಿ ಧಾಳಿಯಾಗಲಿದೆ .
ಅಣ್ಣಿಗ ಬೀರನೊಳಂಬನಿಗೆ ಬುದ್ಧಿ ಕೆಟ್ಟಿರಬೇಕು . ಈ ಇಳಿ ವಯಸ್ಸಿನಲ್ಲಿ ಕೇಳಬಾರದವರ ಮಾತನ್ನು ಕೇಳಿಕೊಂಡು ಆಡಬಾರದ ಆಟ ಆಡುತ್ತಿರುವನು . ಅವನ ಒಪ್ಪಿಗೆ ಪಡೆದೋ ಪಡೆಯದೆಯೋ ಈ ಅಕ್ರಮ ಆಕ್ರಮಣ ನಡೆಯಲಿದೆ . ಮೇಲಧಿಕಾರಿಗಳ ವಿಚಾರ ತಮಗೆ ಯಾಕೆ ಬೇಕಿತ್ತು ? ಅಪ್ಪಣೆಯಾಗಿದ್ದ ಕೆಲಸವನ್ನ ತಾವು ಮುಗಿಸಿ್ ಹಿಂದಿರುಗಿದರೆ ಸಾಕು ಎಂದು ಅವರುಗಳು ಮಾತನಾಡಿಕೊಳ್ಳುತ್ತಿದ್ದದ್ದನ್ನು ಕೇಳಿಸಿಕೊಂಡಿದ್ದ ಸಂಬಯ್ಯ .
ಎರೆಯಪ್ಪಮಂಗಲದ ನಿವಾಸಿಗಳು ಸರಳ ಸ್ವಭಾವದವರು . ಶಾಂತಿಯಿಂದ ತಮ್ಮ ತಮ್ಮ ಕೆಲಸ ಕಾರ್ಯಗಳನ್ನು ನೋಡಿಕೊಂಡು ಜೀವನ ಸಾಗಿಸುತ್ತಿದ್ದ ಮಗ್ದ ಜೀವಿಗಳು . ಇಂತಹವರ ಮೇಲೆ ಹಠಾತ್ತನೆ ಧಾಳಿಯಾದರೆ ಅದನ್ನು ಎದುರಿಸುವ ಶಕ್ತಿ ಸಾಮರ್ಥ್ಯಗಳನ್ನು ಅವರುಗಳು ಹೊಂದಿರುವರೆ? ತನ್ನ ಪ್ರೀತಿಯ ಜನ ಬದುಕಿ ಉಳಿಯಬೇಕೆಂದರೆ ಅದಕ್ಕೆ ಇದ್ದದ್ದು ಇದೊಂದೇ ದಾರಿ. ತೀವ್ರವಾಗಿ ಚಿಂತಿಸಿ ತಾನು ಮಾಡಿದ್ದ ನಿರ್ಧಾರದ ಬಗ್ಗೆ ಮಾದೇವಿಗೆ ತಿಳಿಹೇಳಿದರೆ ಅವಳು ಖಂಡಿತ ಒಪ್ಪುವಳು .
ಆ 'ಬಿಕಾರಿ'ಗಳ ಸಂಭಾಷಣೆಯಿಂದ ತಾನು ಗ್ರಹಿಸಿಕೊಂಡಿದ್ದ ವಿಷಯಗಳನ್ನೆಲ್ಲ ಸಂಬಯ ಮಾದೇವಿಗೆ ವಿವರಿಸಿ ಹೇಳಿದ .
" ಇದು ಧರ್ಮದ ಕಾಳಗ ಅಲ್ಲ ಮಾದೇವಿ . ದರೋಡೆಕೋರರಾಂಗೆ ರಾತ್ರೋ ರಾತ್ರಿ ಬಂದು ಎಲ್ರನ್ನ ಸಾಯ್ಸಿ ಊರನ್ನ ಸೂರೆ ಮಾಡೋ ಸಂಚು . ನಮ್ ಜನ ಜೀವಂತ ಉಳಿಬೇಕಾರ ಒಟ್ಟಾರೆ ಎಲ್ರೂ ಇಲ್ಲಿಂದ ಒಂಟೋಗೋದೊಂದೇ ದಾರಿ . ನಾನು ಊರು ಬುಟ್ಟೋಗಿ ಅಂದ್ರ ಕೇಳೋರು ಯಾರು? ಅವರವರಿಗೆ ಅವರವರದ್ದೆ ಚಿಂತೆ ! ಸಮಯ ಎಚ್ಗಿಲ್ಲ ! ಅದಕ್ಕ ನಿನ್ ಕೇಳ್ಕೋತೀವ್ನಿ ! ದ್ಯಾವ್ರ ಮಾತು ಯಾರೂ ಮೀರಾಂಗಿಲ್ಲ ಅಲ್ವಾ ? ನಮ್ ಜನ್ರನ್ನ ಕಾಪಾಡಕ್ಕೆ ಒಂದ್ ಸಣ್ಣ ಸುಳ್ಳಾಡಿದ್ರೆ ದ್ಯಾವ್ರು ಏನೂ ಅನ್ನಕ್ಕಿಲ್ಲಾ ಮಾದೇವಿ ! "
ಕಡೆಗೂ ಸಂಬಯ್ಯನ ಕೋರಿಕೆಯನ್ನು ನೆರವೇರಿಸಿದ್ದಳು ಮಾದೇವಿ . ಸಂಬಯ್ಯ ಅಂದುಕೊಂಡಂತೆಯೇ ಊರವರೆಲ್ಲ ಲಗುಬಗೆಯಿಂದ ಗಂಟು ಮೂಟೆ ಕಟ್ಟಲು ಪ್ರಾರಂಭಿಸಿದರು . ಸಾಮಾನು ಸರಂಜಾಮು , ಧನ - ಧಾನ್ಯ ಮೂಟೆಗಳು , ಅವರವರ ವೃತ್ತಿಗೆ ಬೇಕಾದ ಉಪಕರಣಗಳು ಎಲ್ಲವನ್ನೂ ಪ್ರಯಾಣಕ್ಕೆ ಸಿದ್ಧಗೊಳಿಸುವುದರಲ್ಲಿ ಮಗ್ನರಾದರು . ಸಂಬಯ್ಯ ಮತ್ತು ಅವನ ಆಪ್ತ ಗೆಳೆಯರು ಎಲ್ಲರಿಗೂ ಹೆಗಲು ಕೊಟ್ಟು ನೆರವು ನೀಡುತ್ತಿದ್ದರು .
ಮರುದಿನ ಮುಂಜಾವಿನಲ್ಲೇ ಹೆಂಗೆಳೆಯರು , ಮಕ್ಕಳು ಮತ್ತು ಗಂಟು ಮೂಟೆಗಳನ್ನು ತುಂಬಿಕೊಂಡಿದ್ದ ಎತ್ತಿನ ಗಾಡಿಗಳು ದೂರದ ಪಯಣಕ್ಕೆ ತಯಾರಾಗಿ ಸಾಲುಗಟ್ಟಿ ನಿಂತವು .
" ಎಲ್ರೂ ಒಂಟ್ಮ್ಯಾಗೆ ಊರೆಲ್ಲ ಒಂದ್ ಸುತ್ತಾಕ್ಕಂಡ್ ಚೂರು ಪಾರು ಸಾಮಾನು ಬಿಟ್ಟಿದ್ರ , ಎಲ್ಲಾನು ಒತ್ಕಂಡ್ ನಾವು ಬತ್ತೀವಿ ! ನೀವೆಲ್ಲಾ ಒಲ್ಡಿ !" ಅವನನ್ನೂ ಜೊತೆಗೆ ಬರುವಂತೆ ಅವನ ತಾಯಿ ಕರೆದಾಗ ಅವಳಿಗೆ ಸಮಾಧಾನ ಹೇಳಿ ಕಳುಹಿಸಿದ ಸಂಬಯ್ಯ , ತನ್ನ ಗೆಳೆಯರೊಂದಿಗೆ ಅಲ್ಲೇ ಉಳಿದುಕೊಂಡ .
ಎತ್ತಿನಗಾಡಿಗಳು ಮೆಲ್ಲ ಮೆಲ್ಲನೆ ಚಲಿಸ ತೊಡಗಿದವು . ಸಾಗುತ್ತಿದ್ದ ಗಾಡಿಗಳ ಕೆಳಗೆ ಓಡೋಡುತ್ತ ಹೋಗುತ್ತಿದ್ದ ಶ್ವಾನಗಳು . ಗಾಡಿಗಳ ಅಕ್ಕಪಕ್ಕಗಳಲ್ಲಿ ಆಡಿನ ಮಂದೆಗಳನ್ನು ನಡೆಸಿಕೊಂಡು ಹೋದ ಪೋರರು. ಜಾನುವಾರುಗಳನ್ನು ಅಟ್ಟಿಕೊಂಡು ಹಿಂಬಾಲಿಸಿದ ವ್ಯಕ್ತಿಗಳು . ಗಾಡಿಗಳ ಮೇಲೆ ಕಟ್ಟಿದ್ದ ಬುಟ್ಟಿಗಳಲ್ಲಿ ಬೆದರಿ ಕುಳಿತಿದ್ದ ಕೋಳಿಗಳು . ಕೆಲವರು ತಲೆಯ ಮೇಲೆ ಗಂಟು ಮೂಟೆ ಹೊತ್ತಿದ್ದರೆ ಇನ್ನೂ ಕೆಲವರು ಸಣ್ಣ ಮಕ್ಕಳನ್ನು ಹೆಗಲಮೇಲೆ ಕೂರಿಸಿಕೊಂಡು ನಡೆಯುತ್ತಿದ್ದರು . ಲಕುಮಿಯ ಹಸುಳೆ ಕರುವನ್ನು ಜೋಳಿಗೆಯಲ್ಲಿ ಹೊತ್ತು ಒಯ್ಯುತ್ತಿದ್ದರು ಪಾಪಣ್ಣ ಮತ್ತು ಅವನ ಮಗ .
ತಾವು ಬದುಕಿ ಬಾಳಿದ ತಮ್ಮ ಪ್ರೀತಿಯ ಎರೆಯಪ್ಪಮಂಗಲವನ್ನು ತೊರೆದು ಎಲ್ಲರೂ ಭಾರವಾದ ಮನಸ್ಸಿನೊಂದಿಗೆ ಸುರಕ್ಷಿತವಾದ ಸ್ಥಳವನ್ನು ಅರಸಿ ಪಯಣವನ್ನು ತೊಡಗಿದರು . ಕೊನೆಯ ಗಾಡಿ ಕಣ್ಮರೆಯಾಗುವತನಕ ನೋಡುತ್ತಲೇ ನಿಂತ ಸಂಬಯ್ಯನ ಕಣ್ಣುಗಳು ತುಂಬಿ ಬಂದವು . ಅಂತೂ ಹೇಗೋ ಮಾಡಿ ಮಾದೇವಿಯ ದಯೆಯಿಂದ ಊರವರನ್ನೆಲ್ಲ ಭದ್ರವಾಗಿ ಕಳುಹಿಸಿಕೊಟ್ಟಾಗಿದೆ . ಇನ್ನು ಅಮಾವಾಸೆಯಂದು ಸಂಭವಿಸಲಿರುವ ಊರಳಿವನ್ನು ತಡೆಯುವುದೊಂದೇ ಅವನ ಗುರಿ . ಹೇಡಿಗಳಂತೆ ಓಡಿಹೋಗದೆ ಅದಕ್ಕಾಗಿಯೇ ಅಲ್ಲವೇ ತನ್ನ ಆಪ್ತ ಗೆಳೆಯರೊಂದಿಗೆ ತಾನು ಎರೆಯಪ್ಪಮಂಗದಲ್ಲೇ ಉಳಿದುಕೊಂಡಿರುವುದು !
ಎಷ್ಟೋ ತುರುಕಾಳಗಗಳಲ್ಲಿ ಜಯಶಾಲಿಗಳಾಗಿದ್ದ ಎರೆಯಪ್ಪಮಂಗಲದ ಯುವಕರಿಗೆ ಇದೊಂದು ಹೊಸ ಅನುಭವ ! ಆತಂಕದ ಚಿಟ್ಟೆಗಳು ಹೊಟ್ಟೆಯೊಳಗೆ ರೆಕ್ಕೆ ಬಡಿಯುತ್ತಿದ್ದರೂ , ಕೆಚ್ಛೆದೆಯ ಸಂಬಯ್ಯನ ಪ್ರೋತ್ಸಾಹದಿಂದ ಪ್ರೇರಿತರಾಗಿ ಹುರುಪಿನಿಂದ ಶಸ್ತ್ರಾಸ್ತ್ರಗಳನ್ನು ಹರಿತಗೊಳಿಸುವ ಕಾರ್ಯದಲ್ಲಿ ಎಲ್ಲರೂ ಮಗ್ನರಾದರು .
--------------------------------------------------------------------------------------------------------------
ಪುಟ್ಟ ಮಗುವಿನ ಅಳು , ತಾಯಿಯ ಲಾಲಿ ಹಾಡು , ವೃದ್ಧರ ಕೆಮ್ಮು , ಆಗೊಮ್ಮೆ ಈಗೊಮ್ಮೆ ಶಬ್ದಿಸುವ ಆಕಳುಗಳ ಕೊರಳ ಗಂಟೆ , ಆಗಂತುಕರನ್ನು ಕಂಡು ಬೊಗಳುವ ಕುನ್ನಿಗಳ ಆರ್ಭಟ - ಇದ್ಯಾವ ಮಾಮೂಲಿ ಗ್ರಾಮ ಸಂದಣಿಯೂ ಇಲ್ಲದೆ ಘಾಡ ಮೌನದಲ್ಲಿ ಕತ್ತಲನ್ನು ಹೊದ್ದು ಮಲಗಿತ್ತು ಎರೆಯಪ್ಪಮಂಗಲ . ಜೀರುಂಡೆಗಳ 'ಕಿರ್ ಕಿರ್' ಬಿಟ್ಟರೆ ಎಲ್ಲೆಲ್ಲೂ ಮೌನ . ಆ ಅಮಾವಾಸೆಯ ಕಾರ್ಗತ್ತಲಲ್ಲಿ ಎಲ್ಲಿಂದಲೋ ಒಂದು ನರಿ ಊಳಿಟ್ಟಿತು . ಪಂಜು ಹಿಡಿದು ಮೆಲ್ಲನೆ ರಹಸ್ಯವಾಗಿ ಗ್ರಾಮವನ್ನು ಕುರಿತು ಹೆಜ್ಜೆಯಿಡುತ್ತಿದ್ದ ನೊಳಂಬ ವೀರರ ಎದೆ ಝಲ್ಲೆಂದಿತು .
ಪ್ರತಿಯೊಂದು ಮನೆಯೊಳಗೂ ನುಗ್ಗಿ ತಪಾಸಣೆ ಮಾಡಿ ಖಾಲಿಯಾದ ಕಣಜಗಳನ್ನೂ , ಬಿಕೋ ಎನ್ನುತ್ತಿದ್ದ ಕೊಟ್ಟಿಗೆಗಳನ್ನೂ ಕಂಡು ತಬ್ಬಿಬ್ಬಾದರು ನೊಳಂಬ ವೀರರು . ಇಡೀ ಗ್ರಾಮವೇ ಖಾಲಿ ಖಾಲಿ ! ಇದ್ದಕ್ಕಿದಂತೆಯೇ ಭೀಕರವಾದ ಪ್ರತೀಕಾರದ ಕೂಗೊಂದು ಕೇಳಿಸಿತು . ಅವರುಗಳು ಚೇತರಿಸಿಕೊಳ್ಳುವ ಮುನ್ನವೇ ಸಂಬಯ್ಯ ಮತ್ತು ಅವನ ಸಹಪಾಠಿಗಳು ಆಯುಧಗಳನ್ನು ಹಿಡಿದು ವೈರಿಗಳ ಮೇಲೆರಗಿದ್ದರು .
ನೊಳಂಬ ವೀರರು ಈ ಅನಿರೀಕ್ಷಿತವಾದ ಹಲ್ಲೆಯಿಂದ ತಬ್ಬಿಬ್ಬಾಗಿ ಪ್ರತಿಭಟಿಸಲಾರದೆ ತತ್ತರಿಸಿದರು . ಅದಾಗಲೇ ಗಾಯಗೊಂಡ ಕೆಲವು ವೀರರು 'ಆ ' ಎಂದು ಕೂಗುತ್ತ ನೆಲಕಚ್ಚಿದ್ದರು . ಕಡೆಗೊಮ್ಮೆ ಆಕ್ರೋಶವಾದ ಕಾಳಗ ಶುರುವಾಗೆಯೇಬಿಟ್ಟಿತು .
ಬಲಗೈಯ್ಯಲ್ಲಿ ಖಡ್ಗ ಮತ್ತು ಎಡಗೈಯಲ್ಲಿ ಗುರಾಣಿ ಹಿಡಿದು ತೋಳಗಳ ಹಿಂಡಿನ ನಡುವೆ ನುಗ್ಗುವ ಹುಲಿಯಂತೆ ವೈರಿಗಳ ನಡುವೆ ನುಗ್ಗಿದ ಸಂಬಯ್ಯ . ಸುಂಟರಗಾಳಿಯಂತೆ ತಿರುಗುತ್ತ ಮಿಂಚಿನಂತೆ ಖಡ್ಗವನ್ನು ಬೀಸಿ ಅವರುಗಳನ್ನು ನಿರ್ನಾಮ ಮಾಡುತ್ತಿದ್ದ. ಒಮ್ಮೊಮ್ಮೆ ಅವನ ಬಲಿಷ್ಠ ಕಾಲುಗಳನ್ನೂ ಸಹ ಆಯುಧಗಳಾಗಿ ಬಳಸಿದಾಗ ಒದೆ ತಿಂದ ವೀರರು ದೂರ ಸರಿದು ಓಡಿದರು. ಸಂಬಯ್ಯನ ಸಹಪಾಠಿಗಳೂ ಸೋತವರಲ್ಲ . ಈ ಕಾಳಗ ತುರುಕಾಳಗಕ್ಕಿಂತ ಭಿನ್ನ ಅಲ್ಲ ಎಂಬುದನ್ನು ಶೀಘ್ರದಲ್ಲೇ ಕಂಡುಕೊಂಡು ಶೌರ್ಯದಿಂದ ಹೋರಾಡುತ್ತಿದ್ದರು .
ಪಾದಾತಿಗಳೆಲ್ಲ ಸುಸ್ತಾಗಿ ಸೋತು ಹಿಮ್ಮೆಟ್ಟುತ್ತಿರಲು , ಅಲ್ಲಿಯತನಕ ಅಡಗಿದ್ದ ರಾವುತರ ಪಡೆ ಈಗ ಮುನ್ನುಗ್ಗಿ ಬರುತ್ತಿತ್ತು. ಅಂಜದ ಹುಡುಗ ಸಂಬಯ್ಯ ತನ್ನ ಗೆಳೆಯರಿಗೆ ಹುರುಪು ತುಂಬುತ್ತ ಎದೆಗಾರಿಕೆಯಿಂದ ಹೋರಾಡಿದ .
" ಸಂಬಯ್ಯಾ ! " ಭೀಕರ ಕಾಳಗದ ಗದ್ದಲವನ್ನೂ ಸೀಳಿಕೊಂಡು ಹೊರಹೊಮ್ಮಿತು ಒಂದು ಚೀತ್ಕಾರ. ತೀವ್ರವಾಗಿ ಸೆಣೆಸುತ್ತಿದ್ದ ಸಂಬಯ್ಯನ ಗಮನ ಕ್ಷಣ ಮಾತ್ರ ಅತ್ತ ಹರಿಯಿತು. ಕೂಡಲೇ ಸೆಣೆಸುತ್ತಿದ್ದ ವೈರಿಯ ಖಡ್ಗ ಅವನ ಹೆಗಲಮೇಲೆರಗಿತು. ನೋವನ್ನು ಲೆಕ್ಕಿಸದೆ ಸಂಬಯ್ಯ ತನ್ನ ಖಡ್ಗ ಬೀಸಿ ವೈರಿಯ ಖಡ್ಗವನ್ನು ಎಗರಿಸಿದನು. ಅವನ ಹೊಟ್ಟೆಯನ್ನು ಕುರಿತು ತನ್ನ ಮಂಡಿಯಿಂದ ಬಲವಾಗಿ ಗುದ್ದಿದನು . ನೊಳಂಬ ವೀರ ಹೊಟ್ಟೆಯನ್ನು ಹಿಡಿದುಕೊಂಡು ಕುಸಿದು ಅವನ ಕಾಲಿಗೆರಗಿದ. ಆಕ್ರೋಶದಿಂದ ಮುನ್ನುಗ್ಗಿದ ಅಶ್ವಾರೂಢನನ್ನು ತನ್ನ ಖಡ್ಗದಿಂದ ತಿವಿದು ಉರುಳಿಸಿದ ಸಾಹಸ ವೀರ ಸಂಬಯ್ಯ .
ನಂತರ ತನ್ನನ್ನು ಕೂಗಿದ ವ್ಯಕ್ತಿಯ ಬಳಿ ಓಡಿದ . ಎಡಗೈಯಲ್ಲಿದ್ದ ಬಿಲ್ಲು ಕೆಳಕ್ಕೆ ಸರಿದಿತ್ತು . ಎಡ ತೊಡೆಯಲ್ಲಿ ಆಳವಾಗಿ ನೆಟ್ಟಿತ್ತು ಹರಿತವಾದ ಬಾಣ . ನೋವಿನಿಂದ ನರಳುತ್ತಿದ್ದರೂ ಆ ವ್ಯಕ್ತಿಯ ಬಲಗೈ ಭದ್ರವಾಗಿ ಕತ್ತಿಯನ್ನು ಹಿಡಿದಿತ್ತು .
''ಮಾವಾ !''
ಪಂಜಿನಿಂದ ಹಾರಿದ ಬೆಂಕಿ ಸೋಕಿ ಉರಿಯುತ್ತಿದ್ದ ಬಣವೆಯ ಸಮೀಪ ಗಾಯಗೊಂಡು ಬಿದ್ದಿದ್ದ ತನ್ನ ಮಾವನನ್ನು ಕಂಡು ಸಂಬಯ್ಯ ಆಘಾತಕ್ಕೊಳಗಾದನು . ಮಂಡಿಯೂರಿ ಕುಳಿತು ಅವರ ತಲೆಯನ್ನು ಎತ್ತಿ ತನ್ನ ತೊಡೆಯ ಮೇಲೆ ಇರಿಸಿಕೊಂಡನು .
" ಮಾವಾ ! ನೀ ಇಲ್ಲಿಗೇಂಗೆ .... ? "
" ಸಂಬಯ್ಯ .. ಗಾಡಿಯಾಗೆ ... ಮಾದೇವಿ ಎಲ್ಲ ಗುಟ್ಟು ಯೋಳಿದ್ಲು ! ನಿನ್ನ ಈ ಅಪಾಯದಾಗೆ ಒಬ್ನೇ ಬುಟ್ಟೋ ಗೋದ್ ಯಾಂಗೆ ... " ತಡವರಿಸುತ್ತ ನುಡಿದರು ಕಬ್ಬಯ್ಯ ಪೊಲೆಯಮ್ಮ ಗಾವುಂಡರು .
ವಿಷಯ ತಿಳಿದು ತಾನು ಹಿಂದಿರುಗುವಾಗ ಗಂಗ ದೊರೆ ರಸಮಲ್ಲ ಪೆಮ್ಮನವರ ದಂಡಿನ ತುಕಡಿ ನೆಲೆಸಿದ್ದ ಬಿಡಾರಕ್ಕೆ ಸುದ್ದಿಯನ್ನು ತಲುಪಿಸಿಯೇ ಬಂದಿದ್ದರು . ಬಂದವರೇ ತಾನೂ ಹೋರಾಟದಲ್ಲಿ ಪಾಲ್ಗೊಂಡಿದ್ದರು . ಆದಷ್ಟು ಸೆಣಸಿ ಗಾಯಾಳುವಾಗಿದ್ದರು .
'' ನೀನು ಸಾಹಸ ವೀರ ಕಣ್ಲಾ ! ದಂಡು ಬರಾತಂಕ ನೋಡ್ಕ ಮಗ ! " ಅಳಿಯನ ಮನಸ್ಸಲಿ ಧೈರ್ಯ ತುಂಬಿ ಕಣ್ಮುಚ್ಚಿದರು ಸಂಬಯ್ಯನ ಮಾವ .
ಕ್ಷಣಮಾತ್ರ ಸ್ತಬ್ದನಾದ ಸಂಬಯ್ಯ ಇಮ್ಮಡಿ ಆವೇಶದೊಂದಿಗೆ ರಣರಂಗವನ್ನು ಹೊಕ್ಕನು . ತನ್ನ ಕೊನೆಯುಸಿರು ಇರುವವರೆಗೆ ತನ್ನ ಪ್ರೀತಿಯ ಎರೆಯಪ್ಪಮಂಗಲವನ್ನು ಕಾಯಲು ಹೋರಾಡಿದನು .
ತುರ್ತಿನಿಂದ ಆಗಮಿಸಿದ ಗಂಗ ಸೈನ್ಯವನ್ನು ಎದುರಿಸಲಾರದೆ ನೊಳಂಬ ವೈರಿಗಳು ಹಿಮ್ಮೆಟ್ಟಿ ಓಡಿದರು. ಸಂಬಯ್ಯ ಮತ್ತು ಅವನಂತಹ ಅನೇಕ ವೀರ ಯುವಕರ ಪ್ರಾಣ ತ್ಯಾಗದಿಂದ ಗಂಗವಾಡಿಯ ಪ್ರದೇಶವೆಲ್ಲ ವೈರಿಗಳ ಪಾಲಾಗದೆ ಸುರಕ್ಷಿತವಾಗಿದ್ದವು .
ಇಂದು ಎರೆಯಪ್ಪಮಂಗಲ ಅಸ್ತಿತ್ವದಲ್ಲಿಲ್ಲ . ನಮ್ಮ ಸರಕಾರದ ಭೂ ಧಾಖಲೆಗಳಲ್ಲಿ ನಿರ್ಜನ ಗ್ರಾಮಗಳನ್ನು 'ಬೇಚಿರಾಕ್ ' (ಬೆಳಕಿಲ್ಲದ ) ಎಂದು ಸೂಚಿಸಲಾಗಿದೆ. ಎರೆಯಪ್ಪಮಂಗಲವೂ ಬೇಚಿರಾಕ್ ಆಗಿಹೋಗಿದೆ.
ಆದರೆ ಸಂಬಯ್ಯ ಮತ್ತು ಅವನಂತಹ ಎಷ್ಟೋ ಯುವಕರ ಶೌರ್ಯವನ್ನೂ ತ್ಯಾಗವನ್ನೂ ಸಾರುವ ಅನೇಕ ವೀರಗಲ್ಲುಗಳು ಇಂದಿಗೂ ಆ ಪ್ರಾಂತ್ಯದಲ್ಲಿ ಉಳಿದುಕೊಂಡಿವೆ .
---------------------------------------------------------------------------------------------------------------------
ಹಿನ್ನುಡಿ : ಗಂಗವಾಡಿಯ ಕೊತ್ತಮಂಗಲ ಗ್ರಾಮದ ಮೇಲೆ ಇಂತದ್ದೇ ವಿವೇಚನೆ ಇಲ್ಲದ ಧಾಳಿ ನಡೆಸಿದ ಅಣ್ಣಿಗ ಬೀರನೊಳಂಬ, ಗಂಗ ದೊರೆ ಮೂರನೇ ರಾಚಮಲ್ಲನಿಗೆ ಸೋತು ಅವನ ಆಧೀನಕ್ಕೆ ಒಳಪಟ್ಟನು ಎಂದು ಇತಿಹಾಸ ಹೇಳುತ್ತದೆ .
----------------------------------------------------------------------------------------------------------------------
ಆಧಾರ :
https://m.facebook.com/groups/inscriptionstones/permalink/2322946991279856/
----------------------------------------------------------------------------------------------------------------------
RETELLING SAMBAYYA’S STORY
“ Sambayya !” Called out Pappanna , climbing the embankment by his field, “ I have to go home now , my cow Lakumi is due to deliver anytime , I have to be there …..can you please finish my work on my field after yours is done today ? ”
“ Sure , Pappanna ! Don’t worry , consider your work done ! ……but don’t forget to bring my treat tomorrow ! ”
“ How could I ! ” Pappanna’s voice trailed off in the distance .
Indeed, how could he or anyone else in the village forget about Sambayya’s “Treat” ! Everybody knew how much Sambayya liked Ginnalu (Colostrum , First Milk) , the nutritious diary product with which his mother made a sweet pudding for him . Since everyone in the village had one or more cows , there were always calves being born and a supply of Ginnalu the year round . And everyone in the village was happy to give Sambayya a share because he was everyone’s darling . Not only was he a strong and active lad , he was also kind, generous, ever ready to help others and wise beyond his 14 years .
The sun had started
descending into the western horizon when Sambayya was done with the day’s work.
He washed off the mud and grime in the cool water and headed towards the
village . The golden glow of the setting sun had touched everything with Magic
. Clouds of birds were flying back to
their nests and a preening peacock was showing off his train in the cool and fragrant breeze .
As light was fading fast , Sambayya decided to take the short cut through the big grove . As he neared the stone pavilion that served as resting place for travelers , he was surprised to see two horses tied to a tree . He also heard two men talking within the pavilion.
Horses were rare in
Ereyappamangala . Even traveling traders who came by used only oxen carts .
People from big cities never visited . Who
were these people ? Tickled by curiosity , Sambayya cautiously crept behind a
bush and peeped .
What he heard made Sambayya’s heart pound wildly . For a moment panic overtook him , but soon he steadied himself . He knew he had to act fast. Creeping back noiselessly , he reached the beaten path and ran home.
When he reached , he found
his father Mada Setti in the front yard enjoying a chat with Uncle Kabbayya Poleyamma Gavunda , who had just
arrived from Iggalur .
Leaning on one of the pillars
and snacking on goodies from a plate was Madevi .
At the very sight of Madevi ,Sambayya’s eyes lit up like lamps .
----------------------------------------------------------------------------------
“ Goddess has descended on
Madevi !
The news had spread like
wildfire and within minutes, the front yard was filled up with anxious faces
and worried chatter .
“ Don’t know who committed what sin that The Goddess has come down in our village !...What does Amma want of us ? ……or has she a Prophecy to make ? ….Amma, please protect us ……”
Madevi , standing on the platform under the tree , was a frightful sight to behold. She was raging , eyes bloodshot , hair flying wild all around her sweaty face smeared with turmeric powder and kumkum . Unmindful of the people prostrating at her feet , she heaved and growled like the fearsome Chamundi herself , no longer the 10 year old sweet girl she was .Madevi had been experiencing episodes of “Possesion” by Divine entities since two years . When in such Trance , she uttered prophecies, judgements, warnings or remedial prescriptions to people around her. Most of what she said had come true or helped people and she had earned respect and fame as “ Iggalur Madevi ”. Within the family , elders had decided that Madevi was to wed Sambayya when both children reached marriageable age .
Along with the prostrating
and praying crowd, Sambayya too stood
with joined palms watching the now unrecognizable girl .
“ Awful events are about to erupt here ! ” She was growling “ More terrible than Pralaya . ”
“ O Mother ! Our Protector ! You are our refuge! ” cried the crowd,
“ Tell us what you want ……blood of a fowl or a goat ! …..”
“ Go ! Go ! Get away ! ” She shrieked “ Leave the village I command you. Immediately ! Take your valuables and GO ,GO ! There is no time , Pralaya kala Rudra is coming to swallow up your village …….Go , go ….”
With a final shriek , she fell
down in a faint . Some ladies lit camphor and waved it around her while her
aunt took her on her lap and splashed water on her face . Menfolk had already
run home to pack and load their animals .
Madevi opened one eye and looked at Sambayya briefly . A knowing look passed between them and he went in to bundle up his mother’s things .
Madevi had stubbornly refused to entertain his
request when he had approached her earlier that day .
“ No . I cannot fake it . God
has chosen to talk through me and I do only God’s bidding . I cannot cheat
people by pretending to be possessed . That is a Sin. I will not do it.
“ Look Madevi . It is a sin
only if you cheat people to make profit for yourself. I am telling you the
situation is grave . You can help save the whole village if you agree to my plan .
“ No Samba , its wrong . Instead
of asking me to pretend , you can tell them what you told me .”
“ Do you think they will
listen to me , if I did ? Our people are
good at protecting the cattle from cattle thieves . But Nolamba warriors ? we cannot stand against them . But our folk will not
understand and will brag we can fight them …and end up getting slaughtered.
How shocked Sambayya had been
to find out that the two men in the
traveler’s pavilion were Nolamba spies who
were sent to estimate the value and strength of this prosperous village .
The Nolambas had a long running enemity with Gangavadi and there were border skirmishes every now and then, causing distress to people on either side . General plunder was the main aim .
“ Old Anniga BeeraNolamba must have become senile and given too much power to wicked regional Deputees . Or perhaps , they have started acting on their own , ignoring him . Either way , this is going to be another unwanted bloodshed …..” Even those spies were tired of such senseless expeditions !
“ We need to save our people, Madevi . The Goddess who possesses you will understand my plan and give her blessings . Our people are gentle , simple minded folk who just cannot face an unexpected raid . But they are God fearing and will definitely heed your voice …..please agree to it …….we have no time . The raid is to be on New Moon Day .”
Finally Madevi agreed and
played her part . The result was as expected .
The whole village got busy packing . Early next morning the heavy carts started leaving , along with people with heavier hearts . Deserting their beloved Ereyappamangala was a sorrow too piercing to bear .
Sambayyya and a group of villagers had chosen to stay behind on the pretext of gathering up odds and ends . They were the trusty fighters who had saved the village from many cattle heists. This ooralivu ( village plunder ) would be a new experience .
After seeing off the last of
the carts safely to the highway , the young men started sharpening their weapons and strategies .
-----------------------------------------------------------------------------------
The darkness of the New Moon Night was punctured by points of light from the burning torches of the small party of raiders . They felt uneasy as they entered the village . It seemed eerily dead . Nothing stirred . Not a sound was heard , not even a baby’s whimper nor a sheep rustling in the hay .
Something was definitely not right , they told each other , as house after house yielded nothing but emptiness !
All of a sudden , with the startling
cry , Sambayya and his gang fell upon the raiders . So sudden and unexpected
was this ambush that the men , though trained as warriors in the Nolamba Army ,
fell into a confusion . It was time enough for the village heroes to cut down some
of the intruders .
Soon however , battling picked up in all ferocity and screams of wounded men filled the night .
Sambayya , fully armed , ploughed into the raiders flank like an enraged tiger. He and his group didn't take long to realise that this was much different from the cattle heist wars they were used to . Still , they were determined to fight to the finish ……….
“ Sambayya !” A cry of distress reached Sambayya’s ears amidst all the fury raging around him . For a moment, his attention was diverted to the direction the voice came from . At that moment , a sword swooped down and landed on his shoulder . In reflex to the searing pain , he kicked hard , knocking down the raider . He then dispatched him with a swift slice of his sword .
Sambayya leapt to the corner from where he had been
called and found a prostrate figure with a heavily wounded thigh . His hand
still gripped a sword.
“ Uncle ! ….how …why did you
come back here ?
“How could I leave you fighting here and take off without care ? ” whispered the Gavunda ,breathing heavily . “ While on the road , Madevi told me everything …….”
“ Uncle , you should not have
……”
“ You will have help soon ,
Sambayya . Keep them at bay for a while more . I have sent word to the nearest
Guard’s station , the battalion should be here soon ……..you are a brave lad !
……” with that he breathed his last .
The Nolamba raiders retreated
in tatters when the Guards battalion arrived and pounded them .
The same story was repeated at many villages , in many raids. Many Heroic men like Sambayya fought courageously to save Gangavadi from the Nolamba raiders .
Ereyappamangala does not exist today . Abandoned Settlements where people no longer live are designated as “ Bechirak ” in our land survey registers. Ereyappamangala too was labelled Bechirak .
But Hero stones , eulogizing the heroic deeds of people like Sambayya , are found scattered all over this
region , surviving to this day .
--------------------------------------------------------------------------------------
Epilogue : History records
that after a similar senseless raid on Kothamangala village of Gangavadi , Anniga Beera Nolamba met
a crushing defeat at the hands of Ganga King Rachamalla III .
-------------------------------------------------------------------------------------------
Based on :
https://m.facebook.com/groups/inscriptionstones/permalink/2322946991279856/
No comments:
Post a Comment