Sunday, January 9, 2022

ಸಿಂಗಪನಾಯಕ / THE NAYAKA OF SINGAPURA

 ಸಿಂಗಪನಾಯಕ 

ಬಲಿತ ಬತ್ತದ ಸುವಾಸನೆಯನ್ನು ಹೊತ್ತು ತಂದ ತಂಗಾಳಿ 'ಸುಯ್ ಸುಯ್' ಎಂದು ಬೀಸುತ್ತಿತ್ತು.  ನಿರ್ಮಲ ನೀಲಿ ಆಕಾಶವನ್ನು ಪ್ರತಿಫಲಿಸುತ್ತ ಶಾಂತ ಸಾಗರವಾಗಿ ಕಂಗೊಳಿಸುತ್ತಿತ್ತು ವಿಶಾಲವಾದ ಕೆರೆ . ಕೆರೆಯ ನೀರುಂಡು ಪುಷ್ಟಿಯಾಗಿ ಬೆಳೆದಿದ್ದ ಚಿನ್ನದ ಬಣ್ಣದ ಬತ್ತದ ತೆನೆಗಳನ್ನು ಕಣ್ತುಂಬ ಕಂಡು  ಆನಂದಿಸುತ್ತಾ ನಿಂತಿದ್ದರು ನಲಪನಾಯ್ಕರು . 

'' ನೋಡೋ ಮಗ ! ನಮ್ಮ ದುಡಿಮೆಗೆ ಎಂತಾ ಫಲ ಕೊಟ್ಟಿದ್ದಾಳೆ ನಮ್ಮ ಭೂತಾಯಿ ! " ನಲಪನಾಯ್ಕರ ಮಾತಿಗೆ ಮುಖ ಸಿಂಡರಿಕೊಂಡ ಅವರ ಮಗ ಮರಿಯಪ . 

" ಹೌದು ಅಪ್ಪ ! ಆದರೆ ಇಷ್ಟು ಸಮೃದ್ಧ ಬೆಳೆ ಕೊಡ್ತಿರೋ  ಗದ್ದೇನ ನೀನು ತಿಪಯಗೆ ಕೊಡಲು ಮನಸ್ಸು ಮಾಡಿರೋದು ಯಾಕೆ ? " ಹನ್ನೆರಡು ವರ್ಷದ ಚುರುಕು ಬುದ್ಧಿಯ ಮರಿಯಪಗೆ  ತಮ್ಮ ಗದ್ದೆ ಕೈಬಿಟ್ಟು ಹೋಗುವ ಆತಂಕ ! 

                                                                                                     
'' ವರಮಾನವನ್ನ ಬೇಟೆರಾಯಗೆ ವಿಶೇಷ ಪೂಜೆ ಪುನಸ್ಕಾರ ಮಾಡಲು ಕೊಟ್ಟು ಅವನೂ ಬದುಕಿಕೊಳ್ಳಲಿ  ಅಂತಲೇ ತಿಪಯಗೆ ಗದ್ದೆಯನ್ನ ದಾನ ಮಾಡುತ್ತಿರುವೆ ! '' 

'' ಪ್ರತಿ ದಿನ ನಾವು ಪೂಜಿಸೋ ನಮ್ಮ ಮನೆ ದೇವ್ರಲ್ವಾ ಬೇಟೆರಾಯ ? ಈಗ ವಿಶೇಷ ಪೂಜೆ ಯಾಕಪ್ಪ? "  

" ಬೇಟೆರಾಯಗೆ ಸಿಂಗನ ಹೆಸರಲ್ಲಿ ನಿರಂತರ ಪೂಜೆ ನಡೀಬೇಕು ! ಸಿಂಗನಿಗೆ ಎಂದೆಂದೂ ಒಳಿತೇ ಆಗಬೇಕು ! ಅದಕ್ಕೆ ಮಗ ಈ ದಾನ ! " ನಲಪನಾಯ್ಕರ ದನಿಯಲ್ಲಿ ಧನ್ಯತಾ ಭಾವ ತುಂಬಿತ್ತು  . 

 ಸಿಂಗನ ಮೇಲೆ ಅಪ್ಪನಿಗೆ ವಿಶೇಷ ಪ್ರೀತಿ ಕಾಳಜಿ ಇರುವುದು ಮರಿಯಪ  ಅರಿತಿದ್ದ ವಿಷಯವೇ . ಅಪ್ಪನಿಗೆ ಮಾತ್ರವಲ್ಲದೆ ಅವನನ್ನರಿತ ಎಲ್ಲರಿಗೂ ಸಿಂಗನ ಮೇಲೆ ಅತ್ಯಂತ ಪ್ರೀತಿ ವಾತ್ಸಲ್ಯ ಉಂಟಾಗಿಬಿಡುವುದು ಊರಿಗೆ ಊರೇ ಅರಿತಿರುವ ವಿಷಯ . 

 ''  ಸಿಂಗ ಪೂಜೆಗೆ ಬರುವನೇ  ಅಪ್ಪ ? " ಕುತೂಹಲದಿಂದ ಪ್ರಶ್ನಿಸಿದ ಮರಿಯಪ . 

" ದೊಡ್ಡ ದೊಡ್ಡ ಜವಾಬ್ದಾರಿಗಳನ್ನ ನಿಭಾಯಿಸಬೇಕಾದ ಹೊಣೆ ಹೊತ್ತಿರುವನು ಸಿಂಗ  ! ಅವನೆಲ್ಲಿ ಈಗ ಬಂದಾನು ? "

" ದೊಡ್ಡ ಜವಾಬ್ದಾರಿ ಹೊರುವಷ್ಟು ಸಿಂಗ ಆಪಾಟಿ ದೊಡ್ಡ ಮನುಷ್ಯನಾಗಿದ್ದಾನೆಯೇ ? " 

ನಲಪನಾಯ್ಕರು ಕಿರಿನಗೆ ಬೀರಿ ಮರಿಯ ತಲೆ ನೇವರಿಸಿದರು . 

'' ಚಿಕ್ಕಂದಿನಿಂದಲೇ ದೊಡ್ಡ ಜವಾಬ್ದಾರಿಯನ್ನ ಹೆಗಲ ಮೇಲೆ ಹೊರುತ್ತಿರಲಿಲ್ವೆ  ಅವನು ! ಇಂದು ನೀನು ಬದುಕುಳಿದಿರೋದೇ ಅದಕ್ಕೆ ಸಾಕ್ಷಿಯಲ್ವೇನೋ  ಮಗ ? " 

" ಸಿಂಗನ ಆ ಸಾಹಸದ ಕಥೆಯನ್ನು ಮತ್ತೊಮ್ಮೆ ಹೇಳು ಅಪ್ಪ ! "  ಆ ರೋಮಾಂಚಕಾರೀ ಕಥೆಯನ್ನು ಮತ್ತೆ ಮತ್ತೆ ಕೇಳುವುದರಲ್ಲಿ ಮರಿಯಪಗೆ ಎಂತದ್ದೋ ಉತ್ಸಾಹ . 

" ಬಾ ! ಆ ಮರದ ಕೆಳಗೆ ಕೂರೋಣ ! " 

ಇಬ್ಬರೂ ಮಾವಿನ ಮರದ ನೆರಳಲ್ಲಿ ಕುಳಿತರು . ಎಲೆ ಮರೆಯಲ್ಲಿ ಕುಳಿತಿದ್ದ ಕುಟ್ರೂ ಹಕ್ಕಿಯ 'ಕುಟ್ರೂ ಕುಟ್ರೂ' ಮತ್ತು ಗಾಳಿಯ 'ಸುಯ್ ಸುಯ್' ಬಿಟ್ಟರೆ ಬೇರೆ ಶಬ್ದವಿಲ್ಲ . ನಲಪನಾಯ್ಕರು ಸಿಂಗನ  ಕಥೆ ಹೇಳಲು ಪ್ರಾರಂಭಿಸಿದರು . 

'' ಭಾಗ್ಯಕ್ಕನ ಬಿಂದಿಗೆ ಬಾವಿಗೆ ಬಿದ್ದೋಯ್ತು ! ಸಿಂಗನ್ನ  ಕರಿ ! ಕ್ಷಣದಲ್ಲಿ ತೆಗೆದು ಕೊಡ್ತಾನೆ ! " 

" ಶಾನುಭೋಗರ ತೆಂಗಿನ ತೋಟದಲ್ಲಿ ಕಾಯಿ ಕೀಳಬೇಕು ! ಸಿಂಗನ್ನ ಬರಹೇಳಿ !''

'' ತಾತನಿಗೆ ಜ್ವರ ಉಲ್ಬಣಗೊಂಡಿದೆ ! ಗಾಡಿಯಲ್ಲಿ ಎತ್ತಾಕ್ಕೊಂಡು ವೈದ್ಯರ ಬಳಿ ಕರಕೊಂಡು ಹೋಗು ಸಿಂಗ ! " 

ಹಳ್ಳಿಯಲ್ಲಿ ಎಲ್ಲರೂ  ಎಲ್ಲದಕ್ಕೂ ಸಿಂಗನ ನೆರವನ್ನೇ ಬೇಡುತ್ತಿದ್ದರು . ಯಾರು ಕರೆದರೂ ಇಲ್ಲ ಎನ್ನದೆ ಓಡಿ ಓಡಿ ಊರವರಿಗೆ ಉಪಕಾರ ಮಾಡುತ್ತಿದ್ದ ಸಿಂಗ . 

ಸಿಂಗನ ಅಪ್ಪ ಮಹಾರಾಜ ಕೃಷ್ಣರಾಯರ ಸೇನೆಯ ಒಂದು ತುಕಡಿಗೆ ನಾಯಕನಾಗಿದ್ದ . ಸುಖ ಸಮೃದ್ಧಿಯ ರಾಜ್ಯವಾಗಿದ್ದರೂ , ಹಠಾತ್ತನೆ  ಸಂಭವಿಸಬಹುದಾದ  ವೈರಿಗಳ  ಆಕ್ರಮಣವನ್ನು ಎದುರಿಸ ಬೇಕಾದ ಪರಿಸ್ಥಿತಿಯಲ್ಲಿ ಸದಾ ಸಿದ್ಧವಾಗಿರಬೇಕಿತ್ತು ರಾಯರ ಸೈನ್ಯ . ಹಾಗಾಗಿ ಸಿಂಗನ ಅಪ್ಪ ಮನೆಗೆ ಬರುವುದೇ ಅಪರೂಪವಾಗಿತ್ತು . 

 ಗದ್ದೆ ತೋಟ ತುರುಗಳನ್ನು ನೋಡಿಕೊಂಡು , ಸಿಂಗನ ಜೊತೆ ಹಳ್ಳಿಯಲ್ಲೇ ಉಳಿದುಕೊಂಡಿದ್ದಳು ಅವನ ಅಮ್ಮ . ಸಿಂಗನ ಅಮ್ಮ ದಿಟ್ಟ ಮಹಿಳೆ . ಧೈರ್ಯ , ಶೌರ್ಯ ಮತ್ತು ಪರೋಪಕಾರೀ ಚಿಂತನೆಗಳನ್ನು ಊಟದ ಜೊತೆಯಲ್ಲೇ ಮಗನಿಗೆ ಉಣಿಸಿ ಬೆಳೆಸಿದ್ದಳು ಅವಳು  . ಹನ್ನೆರಡು ವರ್ಷದ  ಸಿಂಗ ಬೆಳೆಯುತ್ತಿದ್ದಂತೆ ಧೈರ್ಯ ಮತ್ತು ಚುರುಕುತನ ಅವನ ಜೊತೆಯಲ್ಲೇ ಬೆಳೆದವು . 

 ಮರಿಯಪ ಸಣ್ಣ ಕೂಸಾಗಿದ್ದಾಗ ಒಂದು ದಿನ ಅವನನ್ನು ಮಲಗಿಸಿ ತೊಟ್ಟಿಲಿಗೆ ಹಾಕಿ ಅಡುಗೆ ಕೆಲಸಕ್ಕೆ ತೊಡಗಿಕೊಂಡಿದ್ದಳು ಅವನ ಅಮ್ಮ . ನಲಪನಾಯ್ಕರ  ಮನೆಗೆ ತಮ್ಮ ತೋಟದಲ್ಲಿ ಬೆಳೆದ ತರಕಾರಿಗಳನ್ನು ಸಿಂಗನ ಕೈಯಲ್ಲಿ ಕೊಟ್ಟು ಕಳುಹಿಸಿದ್ದಳು ಅವನ ತಾಯಿ . 

ತರಕಾರಿ ಬುಟ್ಟಿ  ಹಿಡಿದು ಮನೆಯೊಳಗೆ ಪ್ರವೇಶಿಸಿದ ಸಿಂಗ  ತೊಟ್ಟಿಲಲ್ಲಿ ಮಲಗಿದ್ದ ಕೂಸನ್ನು ಕಂಡ. ಅವನ ಮೊಗ ಸಂತೋಷದಲ್ಲಿ ಅರಳಿತು . ಮಗುವನ್ನು ಮುದ್ದಿಸಲು ಬಳಿ ಬಂದವನು ಚಕ್ಕೆಂದು ನಿಂತಲ್ಲೇ  ನಿಂದ . 

ಎಲ್ಲಿಂದ  ಬಂದಿತೋ ಏನೋ ? ತೊಟ್ಟಿಲನ್ನು ಕಟ್ಟಿದ್ದ  ಹಗ್ಗವೊಂದನ್ನು  ಸುತ್ತಿಬಳಸಿಕೊಂಡು ಸೂರಿನಿಂದ ಸರ ಸರ ಇಳಿಯುತ್ತಿತ್ತು ಒಂದು ಹಾವು ! ಕೂಗಿ ಗದ್ದಲ ಮಾಡಿದರೋ ಇಲ್ಲ ತೊಟ್ಟಿಲಲ್ಲಿ ಮಲಗಿದ್ದ ಮಗು ಎಚ್ಚರವಾಗಿ ಕೈ ಕಾಲು ಆಡಿಸಿದರೋ  ಹಾವು ಮಗುವಿನ ಮೇಲೆ ನೆಗೆದು ಕಚ್ಚುವ ಸಂಭವವಿತ್ತು ! ಕ್ಷಣ  ಮಾತ್ರ ತಡವರಿಸಿದ  ಸಿಂಗ ! ಮರು ಕ್ಷಣ ಅವನ  ಬಲಿಷ್ಠ ಮುಷ್ಟಿಯಲ್ಲಿ ಹಾವಿನ ತಲೆ ಬಲವಾಗಿ ಸಿಕ್ಕಿಕೊಂಡಿತ್ತು ! ಅದೇ ಸಮಯ ಹೊರಗೆ ಬಂದ ಮರಿಯ ಅಮ್ಮ ಸಿಂಗನ ಕೈಯಲ್ಲಿ  ವಿಲಿವಿಲಿ ಒದ್ದಾಡಿ  ಸತ್ತಿದ್ದ ಹಾವನ್ನು ಕಂಡು ಬೊಬ್ಬೆಯಿಟ್ಟಳು ! 

                                                                                                   

ಊರವರೆಲ್ಲ ಸಿಂಗನ ಧೈರ್ಯವನ್ನು ಕೊಂಡಾಡಿದ್ದರು .  ನಲಪನಾಯ್ಕರ ಮನೆಯವರು ಮರಿಯಪನನ್ನು ಬದುಕಿಸಿ ಕೊಟ್ಟ ಸಿಂಗನನ್ನು ಮರೆಯುವುದಾದರೂ ಉಂಟೆ  ? 

" ವರ್ಷಗಳ ಕೆಳಗೆ ಸಿಂಗ ನಿನ್ನ ಜೀವ ಉಳಿಸಿದ್ದ ದಿನವನ್ನು ನೆನಪಿಸಿಕೊಂಡು ಸಿಂಗನ  ಒಳಿತಿಗಾಗಿ ಪ್ರತಿ ವರ್ಷವೂ  ಬೇಟೆರಾಯಗೆ ವಿಶೇಷ ಪೂಜೆ ಮಾಡಿಸೋದು ವಾಡಿಕೆಯಾಯಿತು ! ಈಗ ತಿಪಯಗೆ ಕೊಡಲಿರೋ ದಾನದಿಂದ ಬೇಟೆರಾಯಗೆ ನಿರಂತರ ಪೂಜೆಗೂ ವ್ಯವಸ್ಥೆಯಾಯಿತು . " ಎಂದು ಕಥೆಯನ್ನು ಮುಗಿಸಿದರು ನಲಪನಾಯ್ಕರು  . 

ಮರಿಯಪ  ಸ್ವಲ್ಪ ಹೊತ್ತು  ಮಾತನಾಡಲಾರದೆ ಮೌನವಾಗಿ ಕುಳಿತಿದ್ದ . ಸಿಂಗ ಅಂದು ಮಾಡಿದಂತೆ ತಾನು ಇಂದು ಮಾಡ ಬಲ್ಲೆನೇ ಎಂದು ಯೋಚಿಸಿದಾಗ ಮರಿಯಪನ ಮೈ ಝಂಮೆಂಡಿತು ! ಅವನು  ಮಗುವಾಗಿದ್ದಾಗ  ಸಿಂಗ ಆತನನ್ನು ತನ್ನ ಹೆಗಲ ಮೇಲೆ ಕೂರಿಸಿಕೊಂಡು ಗ್ರಾಮದ ಜಾತ್ರೆಯಲ್ಲೆಲ್ಲ ತಿರುಗಾಡಿಸಿಕೊಂಡು ಬಂದ ನೆನಪು ಮಸುಕು ಮಸುಕಾಗಿ ನೆನಪಿಗೆ ಬಂದಿತು  . 

" ಅಪ್ಪ ! ಸಿಂಗ ನಮ್ಮ ಊರು ಬಿಟ್ಟು ಯಾಕೆ ಹೋದ ? ಆತ ಇಲ್ಲೇ ಇದ್ದಿದ್ದರೆ ಎಷ್ಟು ಚೆನ್ನಾಗಿರೋದು !" 

" ಅದು ಹೇಗೆ ಸಾಧ್ಯ  ಮರಿ ? ಅವನ ಧೈರ್ಯ ಸಾಮರ್ಥ್ಯ ಎಲ್ಲವನ್ನೂ  ಈ ಗ್ರಾಮದಲ್ಲೇ ನಂದಿ ಹೋಗಲು ಬಿಡುವನೇ  ಅವನ ತಂದೆ ? " 

ನಲಪನಾಯ್ಕರು  ಸಿಂಗನ ಕಥೆ ಮುಂದುವರಿಸಿದರು  . 

ಸಿಂಗ ಈಗ ಹದಿನೈದರ ಹರೆಯದ ಬಲಿಷ್ಠ ತರುಣನಾಗಿ ಬೆಳೆದಿದ್ದ . ಕತ್ತಿ  ವರಸೆ , ಕುಸ್ತಿ , ಈಟಿಗಾರಿಕೆ ಎಲ್ಲದರಲ್ಲೂ ಪರಿಣಿತನಾಗಿದ್ದ . ಓದುವುದು ಬರೆಯುವುದನ್ನೂ ಪಂಡಿತರಿಂದ ಕಲಿತಿದ್ದ . ತೋಟ ಗದ್ದೆಯಲ್ಲಿ ಕೆಲಸ ಮಾಡುವುದು , ತುರುಗಳನ್ನು ಕಾಯುವುದು ಎಂದು ಅಮ್ಮನಿಗೆ ನೆರವಾಗುತ್ತಿದ್ದ. ಅವನಿಂದ ಏಟು ತಿಂದ ಕಳ್ಳ ಕಾಕರು ಮತ್ತೆ ಆ ಗ್ರಾಮದ ಕಡೆ ತಲೆ ಹಾಕುವುದಕ್ಕೂ ಅಂಜಿದರು . 

ದಟ್ಟ ಕಾಡುಗಳಿಂದ ಆವೃತವಾಗಿರುವ  ಗದ್ದೆಗಳಲ್ಲಿ ಕಾಡು ಮೃಗಗಳ ಹಾವಳಿ ಸಹಜವಾಗಿತ್ತು . ಒಮ್ಮೆ ಭಾರಿಯಾದ ಒಂಟಿ  ಕಾಡು ಹಂದಿ ಒಂದು ಸೂರ್ಯಾಸ್ತವನ್ನೇ ಕಾದಿದ್ದು ಪ್ರತಿ ದಿನವೂ ತಪ್ಪದೆ ಒಂದಲ್ಲ ಒಂದು ತೋಟಕ್ಕೆ ನುಗ್ಗಿ ಪಯಿರು ಪಚ್ಛೆ ಗೆಡ್ಡೆ ಗೆಣಸು ಎಲ್ಲವನ್ನೂ ನಾಶ ಮಾಡ ತೊಡಗಿತು . 

ಕಾಡುಹಂದಿಯನ್ನು ಅಟ್ಟುವುದಕ್ಕೆ ಊರವರೆಲ್ಲ ಏನೇನೋ ಉಪಾಯಗಳನ್ನು ಮಾಡಿದರು . ಸೂರ್ಯಾಸ್ತದ ಸಮಯ  ಪಂಜುಗಳನ್ನು ಹೊತ್ತಿಸಿಟ್ಟರು . ತಮಟೆಗಳನ್ನು ಬಡಿದು ಹೆದರಿಸಲು ಪ್ರಯತ್ನಿಸಿದರು . ಆದರೆ ಬೆಂಕಿಗಾಗಲಿ ಶಬ್ದಕ್ಕಾಗಲಿ ಅಂಜದೆ , ಪ್ರತಿ ದಿನವೂ ತೋಟಕ್ಕೆ ನುಗ್ಗಿ ಬೆಳೆಗಳನ್ನು ನಾಶ ಮಾಡುತ್ತಲೇ ಇತ್ತು ಆ ಕಾಡು ಹಂದಿ . 

ಸಿಂಗ ಅದನ್ನು ತಾನು ಬೇಟೆಯಾಡಿ ತೊಲಗಿಸುವೆನೆಂದು  ಕಚ್ಛೆ ಕಟ್ಟಿಕೊಂಡು  ಹೊರಟು  ನಿಂತನು . ಒಂಟಿ ಸಲಗ, ಒಂಟಿ ಕಾಡುಕೋಣನಂತೆ  ಒಂಟಿ ಕಾಡುಹಂದಿಯೂ ಅಷ್ಟೇ ಅಪಾಯಕಾರಿ ಎಂದು ಊರವರೆಲ್ಲ ಸಿಂಗನನ್ನು ಎಚ್ಚರಿಸಿ ತಡೆದರು . 

ಸಿಂಗ ಯಾವ ಅಪಾಯವನ್ನೂ ಲೆಕ್ಕಿಸದೆ ಕೈಯಲ್ಲಿ ಈಟಿ ಹಿಡಿದು ಒಂದು ರಾತ್ರಿ ಹಂದಿ ಬೇಟೆಗೆ ಹೊರಟೇಬಿಟ್ಟ . ಗದ್ದೆಗಳ ನಡುವೆ ಅಡಗಿ ಕುಳಿತಿದ್ದ ಸಿಂಗ ಹಂದಿಯನ್ನು ಕಂಡ ಕೂಡಲೇ ಎದ್ದು ನಿಂತ . ಸಿಂಗನನ್ನು ನೋಡಿಬಿಟ್ಟ ಆ ಕಾಡು ಮೃಗ ಕಾಲು ಕೆರೆದುಕೊಂಡು ಅವನನ್ನು ಕುರಿತು ವೇಗವಾಗಿ ನುಗ್ಗಿ ಬಂದಿತು . ಜೊತೆಯಲ್ಲಿ ಹೋಗಿದ್ದ ಇಬ್ಬರು ಮೂರು ತರುಣರು ಬೆದರಿ ನಿಂತು ನೋಡ ನೋಡುತ್ತಿದ್ದ ಹಾಗೆಯೇ ಹಂದಿ ಸಿಂಗನನ್ನು ಕುರಿತು ವೇಗವಾಗಿ ಓಡಿ ಬಂದು ಅವನನ್ನುಕೆಳಕ್ಕುರುಳಿಸಿತು . ತನ್ನ ಕೋರೆ ಹಲ್ಲುಗಳಿಂದ ಅವನ ಎದೆಯನ್ನು ಇರಿಯಲು ಹೊರಟಿತು .

                                                                                                   

 ಕ್ಷಣದಲ್ಲಿ ಸುಧಾರಿಸಿಕೊಂಡು ತನ್ನ ಬಲವನ್ನೆಲ್ಲ ಒಗ್ಗೂಡಿಸಿಕೊಂಡು  ಆ ಮೃಗವನ್ನು ತನ್ನ ಬಲಿಷ್ಠ ಕೈಗಳಿಂದ ಬದಿಗೆ ಉರುಳಿಸಿದ ವೀರ .  ನಂತರ  ಒಂದೇ ನೆಗೆತಕ್ಕೆ ಜಿಗಿದೆದ್ದು  ಎರಡೂ ಕೈಗಳಲ್ಲಿ ಈಟಿಯನ್ನು ಹಿಡಿದುಕೊಂಡು ಆಕಾಶಕ್ಕೆ ಹಾರಿ ಹಂದಿಯಮೇಲೆರಗಿದ .  ಕಾಡು ಹಂದಿಯನ್ನು ಈಟಿಯಿಂದ ಇರಿದು ಕೊಂದ ವೀರ ಸಿಂಗ . 

ಈ ಘಟನೆಯ ಬಗ್ಗೆ ತಿಳಿದುಕೊಂಡ ಸಿಂಗನ ತಂದೆ ಇನ್ನು ಮುಂದೆ ಸಿಂಗನ ಸಾಮರ್ಥ್ಯವೆಲ್ಲ ರಾಯರ ಸೇವೆಗೆ ಸಲ್ಲ ಬೇಕು ಎಂದು ನಿರ್ಧರಿಸಿದನು .  ತಾಯಿ ಮಗ ಇಬ್ಬರನ್ನೂ ರಾಜಧಾನಿಗೆ ಕರೆಯಿಸಿಕೊಂಡನು . 

'' ಹೂಂ ! ಆಮೇಲೆ ? " ಹಂದಿ ಬೇಟೆಯ ಬಗ್ಗೆ ಆಶ್ಚರ್ಯದಿಂದ ಕೇಳಿಸಿಕೊಂಡ ಮರಿಯಪ   ಕುತೂಹಲದಿಂದ ಪ್ರಶ್ನಿಸಿದನು . 

'' ಆಮೇಲೆ ಏನು ? ಸಿಂಗನಿಗೆ ಸಮರ ವಿದ್ಯೆಯ ತರಬೇತಿ ನೀಡಲಾಯಿತು . ನಂತರ ತನ್ನ  ತಂದೆಯ  ಸೇನಾ ತುಕಡಿಗೆ ಅವನು ಸೇರಿಸಿಕೊಂಡ .ಆಗಿಂದಾಗ್ಯೆ ಗಡಿ ಪ್ರದೇಶಗಳಲ್ಲಿ ಉಂಟಾಗೋ  ಸಣ್ಣ ಪುಟ್ಟ ಕಲಹಗಳನ್ನು ನಿಯಂತ್ರಿಸಲು ಹೋಗುತ್ತಿದ್ದ ಯೋಧರೊಂದಿಗೆ ಸಿಂಗನೂ ಹೋಗತೊಡಗಿದ. ಕೆಚ್ಛೆದೆಯ ಸಿಂಗ ಶ್ರದ್ದೆಯಿಂದ ಹೋರಾಟಗಳಲ್ಲಿ ಬಾಗವಹಿಸಿದ . ಅವನ ಸಾಹಸಗಳು ಮೆಲ್ಲಮೆಲ್ಲನೆ ಮಹಾರಾಜರ ಗಮನಕ್ಕೂ ಬಂತು ." 

 ಈ ನಡುವೆ ಮಹಾರಾಜಾ ಕೃಷ್ಣ ರಾಯರು ಒಮ್ಮೆಗೇ ದಾಳಿ ಮಾಡಿ ಬಿಜಾಪುರ್ ಸುಲ್ತಾನನ್ನು ಸದೆ  ಬಡಿದು ಅವನ  ಸೊಕ್ಕಡಗಿಸುವ  ಧೃಡ ನಿರ್ಧಾರ ಮಾಡಿದರು . ಈ ನಿರ್ಣಾಯಕ ಯುದ್ಧದಲ್ಲಿ  ಗೆಲ್ಲಲೇಬೇಕೆಂಬ ಛಲದೊಂದಿಗೆ ವಿಜಯನಗರದ ಸೈನ್ಯವು ಎಲ್ಲಾ ತಯಾರಿಗಳನ್ನೂ ಮಾಡಿಕೊಳ್ಳ ತೊಡಗಿತು . 

 ರಾಯಚೂರಿನಲ್ಲಿ ನಡೆದ ಘೋರ ಯುದ್ಧದಲ್ಲಿ ರಾಯರ ಸೈನ್ಯ ಎದೆಗುಂದದೆ ಹೋರಾಡಿತು . ಸುಲ್ತಾನನ ಮದ್ದು ಗುಂಡುಗಳನ್ನೂ ಪಿರಂಗಿಗಳನ್ನೂ ಸಾಮರ್ಥ್ಯದಿಂದ ಎದುರಿಸಿತು ಸಿಂಗನ ತಂದೆಯ ಸೇನಾ ತುಕಡಿ . ನಡೆಯುತ್ತಿದ್ದ ಗಲಭೆಯಲ್ಲಿ ಸಿಂಗನ ತಂದೆ ಗಾಯಗೊಂಡನು. ನಾಯಕನಿಲ್ಲದೆ ತತ್ತರಿಸಿದ ಯೋಧರನ್ನು ಉತ್ಸಾಹಪಡಿಸಿ , ತಾನೇ ಮುಂದಾಳಾಗಿ ನಿಂತು ಹೋರಾಡಿದ ಸಿಂಗ .   ಕೋಟೆಯ ಗೋಡೆಯಿಂದ ಕಲ್ಲುಗಳನ್ನು ಕಿತ್ತೆಸೆದು  ರಾಯರ ಸೈನ್ಯ ಒಳನುಗ್ಗಲು ಅನುಕೂಲ ಮಾಡಿಕೊಟ್ಟಿತು ಸಿಂಗನ ಸೇನೆ . ರಾಯಚೂರು ಕೋಟೆ ರಾಯರ ವಶವಾಯಿತು .  

                                                                                                      

ಮದ್ದು ಗುಂಡುಗಳಿಂದಲೂ ಪಿರಂಗಿಗಳಿಂದಲೂ ಕೂಡಿದ ಅತ್ಯಂತ ಶಕ್ತಿಯುತ  ಸೈನ್ಯವಾಗಿದ್ದ ಸುಲ್ತಾನನ ಪಡೆ ಆ ನಿರ್ಣಾಯಕ ಯುದ್ಧದಲ್ಲಿ ಸೋತು ಮಣ್ಣು ಮುಕ್ಕಿ , ಕೃಷ್ಣಾ ನದಿಯನ್ನು ದಾಟಿ  ಓಡಿ ಹೋಯಿತು . 

"ವಿಜಯೋತ್ಸವದಲ್ಲಿ ಸಿಂಗನ ಸಾಹಸವನ್ನು ಮೆಚ್ಚಿ ಅವನನ್ನ ನಮ್ಮಇಡೀ ಸೀಮೆಗೆ ನಾಯಕನನ್ನಾಗಿ ಮಾಡಿದರು ಮಹಾರಾಜರು . ನಮ್ಮ ಸಿಂಗ ಸಿಂಗಪನಾಯಕನಾದ . ಅವನ ನಾಯಕತ್ವದಲ್ಲಿರೋ ಈ ನಮ್ಮ ಸೀಮೆ ಸಿಂಗಾಪುರವಾಯಿತು ! "   

" ಓ ! ಸಿಂಗನ ಹೆಸರಿನಿಂದಲೇ ನಮ್ಮ ಊರು ಸಿಂಗಾಪುರವಾಯಿತೇ ? " 

                                                                                                   

" ಸಿಂಗನಿಗೆ ಮಹಾರಾಜರಂತೆಯೇ ತಿರುಮಲೆ ದೇವರಮೇಲೆ ಅಪಾರ  ಭಕ್ತಿ .  ಬೆಟ್ಟದ ಮೇಲಿರೋ ತಿರುಮಲೆ ದೇವರ ಗುಡಿಯ ಪುನರುದ್ಧಾರಣ  ಮಾಡಬೇಕೆಂಬುದು ಅವನ ಬಹಳ ದಿನಗಳ ಕನಸಾಗಿತ್ತು . ಮಹಾರಾಜ ಕೃಷ್ಣರಾಯರು ಅವರ ಮಗನಿಗೆ ಯುವರಾಜ ಪಟ್ಟಾಭಿಷೇಕ ಮಾಡಿದ ಸಂದರ್ಭದಲ್ಲಿ ಸಿಂಗನ  ಕನಸು ನನಸಾಯಿತು . ಗುಡಿಯ  ಪುನರುದ್ಧಾರಣವಾಯಿತು . ತಿರುಮಲೆ ದೇವರ ಪೂಜೆ ಮತ್ತು  ನೈವೇದ್ಯಕ್ಕಾಗಿಯೂ , ಭಕ್ತಾದಿಗಳ ವಸತಿ ಮತ್ತು ಆಹಾರ ವ್ಯವಸ್ಥೆಗಾಗಿ ನಿರ್ಮಾಣವಾದ ರಾಮಾನುಜ ಕೂಟದ ನಿರ್ವಹಣೆಗಾಗಿಯೂ ಹಿರಿ ಅಯ ವರದರಾಜಯರವರಿಗೆ ಚಿಕ್ಕಬೆಟ್ಟ ಹಳ್ಳಿ ಗ್ರಾಮವನ್ನೇ ದಾನವಾಗಿ ಕೊಟ್ಟ ನಮ್ಮ ಸಿಂಗ  ! '' 

" ಸಿಂಗಪನಾಯಕ ಅನ್ನು ಅಪ್ಪ   ! ನಮ್ಮ ಸಿಂಗ ಈಗ ತುಂಬಾ ದೊಡ್ಡ ಮನುಷ್ಯನಲ್ಲವೇ ? " ಎಂದು ಅಪ್ಪನನ್ನು ತಿದ್ದಿದ ಮರಿಯಪ !

'' ಹೌದು ಕಣೋ ಮಗ ! ಸಿಂಗಪನಾಯಕರ ನಿರ್ವಾಹದಲ್ಲಿ ನಮ್ಮ ಸಿಂಗಾಪುರ ಮಹತ್ತರ ಅಭಿವೃದ್ಧಿ ಹೊಂದಿದೆ ! ಆಗೋ ತಿಪಯ ಬಂದ ! ಬಾ ! ನಮ್ಮ ವ್ಯವಹಾರ ಮುಗಿಸೋಣ ! '' ಎನ್ನುತ್ತ ಎದ್ದರು  ನಲಪನಾಯ್ಕರು . 

------------------------------------------------------------------------------------------------------

ಹಿನ್ನುಡಿ -

ಕೃಷ್ಣ ರಾಯರ  ಕಾಲದವರೆಗೂ ಅವರಿಗೆ  ಸೇವೆ ಸಲ್ಲಿಸಿದ ನಮ್ಮ ಸಿಂಗ ಅವರ ಉತ್ತರಾಧಿಕಾರಿಯಾದ ಅಚ್ಯುತರಾಯರ ಸೇವೆಯಲ್ಲೂ ನಿಷ್ಠಾವಂತನಾಗಿ ತೊಡಗಿಕೊಂಡನು . 

ಸಿಂಗನ  ಪ್ರೇರಣೆಯಿಂದ ಶಿವನಸಮುದ್ರ ಸೀಮೆಯನ್ನು ಆಳುತ್ತಿದ್ದ ಕೃಷ್ಣಪ್ಪನಾಯಕರು ಮಹಾರಾಜ ಅಚ್ಯುತರಾಯರಿಗೆ ಮತ್ತು ತನ್ನ ತಂದೆಯವರಿಗೆ ಒಳಿತಾಗಲೆಂದು ಸಿಂಗಾಪುರದ ತಿರುವೆಂಗಳನಾಥ ದೇವರ ಅಲಂಕಾರ , ನೈವೇದ್ಯ ಮತ್ತು ರಾಮಾನುಜಕೂಟದ ನಿರ್ವಹಣೆಗೆ ಹಾರೋಹಳ್ಳಿ ಗ್ರಾಮವನ್ನು ದಾನವಾಗಿ ನೀಡಿದರು . 

ಬೇಟೆರಾಯ , ತಿರುಮಲೆ ದೇವರು , ತಿರುವೆಂಗಳನಾಥ ಎಂದು ವಿವಿಧ ನಾಮದೇಯಗಳನ್ನು ಹೊಂದಿರುವ ದೇವರು ಇಂದು ವರದರಾಜಸ್ವಾಮಿಯಾಗಿ ಸಿಂಗಾಪುರದ ಅದೇ ಗುಡಿಯಲ್ಲಿ  ವಿರಾಜಮಾನರಾಗಿರುವರು . 

ದೇವರ ಸನ್ನಿಧಿಯ ಹೊರಗಡೆ ಬಲಬಾಗದಲ್ಲಿ ಕೈ ಜೋಡಿಸಿ ,  ತಲೆ ಬಾಗಿ ತನ್ನ ತಿರುಮಲೆ  ದೇವರನ್ನು ನಮಿಸುತ್ತ ನಿಂದಿರುವ ಸಿಂಗಪನಾಯಕರನ್ನು ಶಿಲ್ಪ ರೂಪದಲ್ಲಿ ಇಂದಿಗೂ ಕಾಣಬಹುದು . 

-----------------------------------------------------------------------------------------------------------------------

ಆಧಾರ : ಸಿಂಗಾಪುರ ಶಿಲಾ ಶಾಸನಗಳು 

1. ನಲಪನಾಯ್ಕನ ಶಾಸನ - 1528 C.E.

2. ಚಿಕ್ಕಬೆಟ್ಟಹಳ್ಳಿಯ ಸಿಂಗಪನಾಯಕನ ರಾಮಾನುಜಕೂಟ ಶಾಸನ - 1524 C.E.

3. ಹಾರೋಹಳ್ಳಿಯ ಕೃಷ್ಣಪ್ಪ ನಾಯಕನ ರಾಮಾನುಜಕೂಟ ಶಾಸನ - 1530 C.E.

-------------------------------------------------------------------------------------------------------------------------- 

                      THE NAYAKA OF SINGAPURA

 Nalapa Nayaka feasted his eyes happily on the golden sheaves of grain , shimmering across the field under the bright blue sky . A gentle breeze from over the brimming tank swirled around him and his young son , Mariyapa .

“ It has been a bountiful season, Son !   remarked Nalapa .

“ Yes, Father !  said the lad , “ our fertile land repays our hard work handsomely ….so, I still cannot understand why you have decided to gift it away to Tippaya ! 

                                                                                                 
Nalappa patted his son’s head : “ It will bring him the income to feed his family ….And , he will use part of the income to do special pujas and rituals for our Family Deity , Lord Beteraya , for the merit of our Singappa .”


At the mention of that name , the boy’s face lit up “ Will Singa be coming for this Gifting ceremony, Father ?  He asked eagerly .

“ How can he come ? He is a big officer now and always busy with important duties……..but , whether we see him or not , we will always keep him in our prayers, won’t we ! 


“ That we will….especially I . I owe my life to him !  Smiled Mariyapa .

Truly, had it not been for Singa , he would not be standing there !
——
It was not just Mariyapa . Everyone in the village had the same esteem and affection for Singa . For , ever since he was a mere boy , Singa had touched everyone’s life ,in one way or the other, with his extremely helpful nature , kindness and generosity . Not to forget courage !

The courage that a 12 year old Singa had shown in saving Mariyapa , when he was still a baby in the cradle, had become a local legend .

Singa’s Father , employed in the Royal army , visited the village only rarely . But Singa’s mother , a bold and capable lady , had brought up Singa to be a lion cub among the village children . He grew up not only strong and brave , but also with other admirable qualities like caring and sharing .

Once when Singa went over to Nalapa Nayaka’s house on an errand for his mother , he saw the little baby Mariyapa in the cradle . The baby’s mother was busy in the kitchen .

Making cooing sounds and babytalk , Sunga skipped towards the cradle intending to cuddle the infant …..but froze !

Wound around the rope from which the cradle hung and slithering slowly towards the baby was a shiny , black snake !

Singa became tense . He quickly understood that if the baby kicked up its legs or Singa caused alarm by shouting , the snake could dart down and cause harm. He knew he had to act fast , but with caution .
And he did , quick as lightning !

                                                                                                 
Just then, Mari’s mother looked in . And she screamed in terror . A dead snake hung like a limp rope from Singa’s bare hand , its neck crushed in his firm and strong grip !

This story of Singa saving Baby Mari was spoken of for days in the village , becoming part of local lore. And local lore was always full of Singa stories . Because Singa , like a guardian deity , was all over !

“ Bhagyakka’s pot has fallen in the well. Call Singa ! 

“ The Shanboga wants coconuts plucked from his trees , call Singa ! 

“ Grandpa’s fever has worsened , Singa , please put him in the cart and take him to the Vaidya . 

Everybody turned to Singa for help and he never said no .That was the quality that made him dear to all.

“ It would have been so nice , if Singa has stayed with us in the village always ….why did he have to go away to the city !  pouted Mariyapa , chewing on a stalk of grain.

“ Singa was made for bigger things , Son, not to get wasted within this small village !  Said his Father.  “ Even as a boy, he was so well versed in wrestling , archery , sword fight and spear throwing . His talents would have gone waste here …..fighting off wild pigs ! 

Mariyapa laughed , but remembered the day the village had witnessed that thrilling Boar fight !
———
The village had fertile fields that stretched right up to the edge of forest land . When the cultivated crop got ready to be harvested , it also attracted animals from the forest . Like elephants , deer or bisons .
Once, a big stray Wild Boar took to rampaging at night , uprooting crops and tearing down saplings . Though villagers tried chasing it away with noise, stones and fire brands , it persisted in its nightly visits of destruction.

Singa , merely 15 years of age then , decided to take it on , all by himself . Older people tried cautioning him that a wild boar could be as dangerous as a lone tusker or a Bison . But he had made up his mind to meet the rogue head on and nothing would change it . All he needed was his spear!

That night , Singa hid himself among the crops and waited . The huge wild boar came as usual , tearing up clods of earth with its mean looking tusks and hooves .


When it was quite close, Singa stood up , stretching to his full height - his muscular hands clutching the spear .

The startled boar stood still for a short while . Then it started stamping and kicking its foot in fury. And, in an unpredictable moment, charged at him like a huge boulder rolling down a hill .

Two boys who had followed Singa , threw down their sickles in fright and ran away as fast as they could . But Singa stood firmly .

                                                                                                
In the split second before the animal hurled itself at him , he leaped into the air and , aiming his spear , flew down upon it .The spear pierced the boar , pushing it to the ground .Singa then finished the job with his powerful hands .

It was this celebrated Boar Hunt which made his Father decide that Singa was a born Hero and was destined to join the Royal Army to serve the King .

Moving to the bigger city , Singa received the best training in all kinds of warfare . His father soon inducted him into the battalion he commanded . And Singa’s talents and skills were honed to perfection by actual participation too , in minor battles here and there .

It did not take very long for him to come to the notice of the King himself .

Once , when King Krishnaraya planned an attack on the Sultan of Bijapur, the Army of the Karnata Empire got into hectic and strenuous preparations for the war to be waged in the battlefield of Raichur .
The battalion commanded by Singa’s father gave ferocious fight to the Bijapuri cannons and artillery .

When , in a particularly trecherous combat, his Father was severely wounded , Singa spontaneously assumed command and , not letting his men’s morale slide down , led an inspiring assault with vigour and clever strategy .

                                                                                                    
Though the Bijapur Army had superior weaponry , that war ended with crushing defeat for it . And it had to retreat , away beyond River Krishna .

As a fit recognition for his bravery , Singa was made the commander of the entire regional force . And , bringing eternal pride to their little village, a Royal Decree was issued during Victory celebrations, re-naming their Village as Singapura in honour of the brave son of its soil !

Just like the King , Singa too had always held the Lord of Tirumale as his personal favourite deity . And it was his longstanding dream to get the ancient Temple that stood on top of the hill renovated .When King Krishnaraya announced the coronation of his son as the Yuvaraja ( Crown Prince) , Singa’s dream was realised . The temple was restored .

                                                                                                   

As his own contribution , Singa granted the entire Chikkabetta Village to Hiri Ayya Varadaraja for the upkeep of daily offerings to the Lord and to run the Ramanuja Koota which fed and sheltered pilgrim travelers .

The village’s all-time favourite son Singa was now celebrated widely as Singappa Nayaka ! Under his guidance , their village blossomed into a busy and prosperous town .

“ What we are today , we owe it all to our Singa !  beamed Nalapa Nayaka .

“ Not 'Singa' , Father , say ' Singappa Nayaka ' !  remarked Mariyapa proudly , “ Look, there comes Thippaya …..”

“ Lets go and arrange for the Granting Ceremony .”

-----------------------------------------------------------------------------------------------------------------
Epilogue :

After serving Krishnaraya , Singappa Nayaka continued to serve under the succeeding administrator Achyutaraya too .

Inspired by Singappa Nayaka , the Governor of Shivasamudra Seeme , Krishnappa Nayaka too made a Grant for the Merit of Achyutaraya and his Father , donating Harohalli Village to finance the upkeep , worship and offerings for Lord Tiruvengalanatha of Singapura and to run a Ramanuja Koota too.

Beteraya , Tirumale Devaru , Tiruvengalanatha are all different names given at different times to the same God enshrined in Singapura . Today , the Lord is known as Varadaraja Swami .
Just outside the sanctum , on the right side of the door, we can still see Singappa Nayaka , immortalised in stone , looking towards the Lord with palms joined in eternal prayer .

----------------------------------------------------------------------------------------------------------------------------

Based on Inscription Stones Of Singapura

1. Nalapa Nayaka inscription - 1528 C.E.

2. Chikkabettahalli inscription of Singappa Nayaka - 1524 C.E.

3. Harohalli inscription of Krishnappa Nayaka - 1530 C.E.

------------------------------------------------------------------------------------------------------------------------

1 comment: