Monday, August 12, 2013

Keerthinidhi Kesari Singha - Book Release

    "ಕೀರ್ತಿನಿಧಿ ಕೇಸರಿ ಸಿಂಘ"  ಪುಸ್ತಕ ಬಿಡುಗಡೆ 



ಲೇಖಕಿ ಶ್ರೀಮತಿ ಚಿತ್ರಾ ರಾಮಚಂದ್ರನ್ ಅವರ "ಕೀರ್ತಿನಿಧಿ ಕೇಸರಿ ಸಿಂಘ" ಎಂಬ ಸಚಿತ್ರ ಚಾರಿತ್ರಿಕ ಕಥನ  ಆಗಸ್ಟ್ ೪ರಂದು ಬೆಂಗಳೂರಿನ ಅಲಿಯಾನ್ಸ್ ಫ್ರಾನ್ಸೇಸ್ ಸಭಾಂಗಣದಲ್ಲಿ ಬಿಡುಗಡೆಯಾಯಿತು . ಮಾನ್ಯ ಶ್ರೀ ಬೇಲೂರು ರಾಮಮೂರ್ತಿ ಅವರ ಅಧ್ಯಕ್ಷತೆಯಲ್ಲಿ, ಮಾನ್ಯ ಶ್ರೀ ಎಮ್. ಶಿವಕುಮಾರ್ ಅವರು ಪುಸ್ತಕ ಬಿಡುಗಡೆ ಮಾಡಿದರು.ಮಾನ್ಯ ಶ್ರೀ ಕೃಷ್ಣ ಸುಬ್ಬರಾವ್ ಅವರು ಪುಸ್ತಕದ ಪರಿಚಿಯವನ್ನು ಮಾಡಿಕೊಟ್ಟರು.

ಒಂದು ಮಹಾಕ್ರಾಂತಿಯ ಕಾಲಘಟ್ಟದಲ್ಲಿ ತಂದೆಯ ಮಹದಾಕಾಂಕ್ಷೆ ಈಡೇರಿಸಲು ಹೊರಟ ಒಬ್ಬ ಹುಡುಗನ ಶೌರ್ಯದ ಕಥೆ "ಕೀರ್ತಿನಿಧಿ ಕೇಸರಿ ಸಿಂಘ". ಫಿರಂಗಿಯರನ್ನು ಎದುರಿಸಿದ ಮೈಸೂರು ಹುಲಿ ಟಿಪ್ಪು ಸುಲ್ತಾನನ ಇತಿಹಾಸದ ಹಿನ್ನೆಲೆಯಲ್ಲಿ ರಚಿಸಲ್ಪಟ್ಟ ಒಂದು ಸಚಿತ್ರ ಚಾರಿತ್ರಿಕ ಕಲ್ಪನೆ ಇದು. ೧೮ನೇ ಶತಮನದ ಮೈಸೂರಿನ ಜನ ಜೀವನ, ಅಂದು ಜಾರಿಯಲ್ಲಿದ್ದ ರಾಜ್ಯ ವ್ಯವಹಾರ, ಎಲ್ಲವನ್ನೂ ಅಳವಡಿಸಿಕೊಂಡು ಈ ಚಾರಿತ್ರಿಕ ಕಲ್ಪನೆಯನ್ನು ರಚಿಸಲಾಗಿದೆ.ಮೈಸೂರಿನ ಕಲಾಚಾರ,ಲಲಿತ ಕಲೆ, ಕಾವ್ಯ ವಾಚನ, ಪಾಕ ಶಾಸ್ತ್ರ, ಮನೆ ಮದ್ದು, ದಂಡ ಯುದ್ಧ, ವಜ್ರ ಮುಷ್ಟಿ ಮುಂತಾದ ಅನೇಕ ವಿಚಾರಗಳ ಬಗ್ಗೆ ಸಂಗ್ರಹಿಸಲ್ಪಟ್ಟ ಮಾಹಿತಿಗಳು ಕಥೆಯೊಡನೆ ಹೆಣೆಯಲ್ಪಟ್ಟು, ಕಥೆಗೆ ಪುಷ್ಟಿ ನೀಡಿವೆ.ಪ್ರಕೃತಿಯ ಸೌಂದರ್ಯ ಲಾಸ್ಯವಾಡುವ ಮೈಸೂರಿನ ಸುತ್ತ ಮುತ್ತಲಿನ ಪ್ರದೇಶಗಳ ಹಿನ್ನೆಲೆಯಲ್ಲಿ ಕಥೆ ಜರುಗುತ್ತದೆ.
ಒಟ್ಟಲ್ಲಿ ಸ್ನೇಹ, ತ್ಯಾಗ, ಶೌರ್ಯ, ಸ್ವಾಮಿ ನಿಷ್ಠೆಗಳನ್ನು  ಎಳೆ ಎಳೆಯಾಗಿ ಹೇಳುವ ಸಚಿತ್ರ ಚಾರಿತ್ರಿಕ ಕಥನ "ಕೀರ್ತಿನಿಧಿ ಕೇಸರಿ ಸಿಂಘ."
ಅಪರಂಜಿ ಮತ್ತು ಸುಧಾ ಪತ್ರಿಕೆಗಳಲ್ಲಿ ಲೇಖಕಿ ಶ್ರೀಮತಿ ಚಿತ್ರಾ ರಾಮಚಂದ್ರನ್ ಅವರ ಅನೇಕ ಕಥೆಗಳು ಪ್ರಕಟವಾಗಿವೆ. ಸ್ವತಹ ಲೇಖಕಿಯಾದ ಶ್ರೀಮತಿ ವಿದ್ಯಾ ಮುರಳಿ ಅವರು ಕಂಪ್ಯೂಟರ್ ಬಳಸಿ ರಚಿಸಿರುವ ಸುಂದರವಾದ ವರ್ಣ ಚಿತ್ರಗಳು ಪುಸ್ತಕಕ್ಕೆ ಶೊಭೆ ನೀಡುತ್ತವೆ.

ಸಂಪರ್ಕ : kesarisingha@gmail.com
ಈ ಪುಸ್ತಕವನ್ನು ಕೊಳ್ಳಲು :ನೀವು ಭಾರತದಲ್ಲಿ  ಇದ್ದರೆ :
 ಮೇಲೇ ಕಂಡು ಬರುವ email ಗೆ ಸಮ್ಪರ್ಕಿಸಿ. ಪುಸ್ತಕದ ಬೆಲೆ 250 ರುಪಾಯಿ,  ಇದರೊಂದಿಗೆ, ಪುಸ್ತಕ ಕಳುಹಿಸಲಾಗುವ ಟಪಾಲು ಕರ್ಚು , ಚೆಕ್ ಅಥವಾ ಮನಿ ಆರ್ಡೆರ್ ಮೂಲಕ ಸಲ್ಲಿಸಬಹುದು ..
ನೀವು ಭಾರತದ ಹೊರಗೆ ಇರುವವರಾದರೆ
: ಈ blog ಗಿನ ಪಕ್ಕದ ಅಂಚಿನಲ್ಲಿರುವ   "Buy Now" button ಬಳಸಿರಿ . ಬೆಲೆ, ಪಾರ್ಸೆಲ್ ಚಾರ್ಜ್ ಒಳಗೊಂಡದ್ದು .
ಮೊತ್ತ ವಾಗಿ ಕೊಳ್ಳುವವರಿಗೆ Bulk Purchase Discount ಕೊಡಲಾಗುವುದು ( ವೈಭವಗಳಲ್ಲಿ ಹುಡುಗೊರೆಯಾಗಿ ಕೊಟ್ಟು , ಕನ್ನಡದ ಪರಿಮಳವನ್ನು ಹಬ್ಬಿ  ಹರಡಿಸಲು ಸೂಕ್ತ ವಸ್ತು ಈ ಪುಸ್ತಕ. )
 



1 comment: