ಮಕ್ಕಳ ದಿನ
ಗಿರಿಗಿರಿ ಗಿರಿಗಿರಿ ಗಿರಿಗಿಟ್ಲೆ !
ತಿರುಗಿ ತಿರುಗಿ ಗಿರಿಗಿಟ್ಲೆ !
ತಿರುಗುತ ಅರಳಿತು ತಾವರೆ!
ಗಿರಿಗಿರಿ ಗಿರಿಗಿರಿ ಗಿರಿಗಿಟ್ಲೆ !
ಸುತ್ತಿ ಸುತ್ತಿ ಗಿರಿಗಿಟ್ಲೆ!
ಸುತ್ತುತ ಮುದುಡಿತು ತಾವರೆ!
ಗಿರಿಗಿರಿ ಗಿರಿಗಿರಿ ಗಿರಿಗಿಟ್ಲೆ !
ತಿರುಗುತ ಸುತ್ತುತ ಗಿರಿಗಿಟ್ಲೆ!
ಮತ್ತೆ ಅರಳಿತು ತಾವರೆ!
" ಸಾಕು ಶಾಂತು ! ಸಾಕು!" ಶಾಂತು ಜೊತೆ ಗಿರಿಗಿಟ್ಲೆ ಆಡಿದ ಪುಟ್ಟಿಗೆ ಆಕಾಶ ಭೂಮಿ ಎಲ್ಲ ಗಿರ ಗಿರ ತಿರುಗುತ್ತಿದ್ದಂತೆ ಅನ್ನಿಸಿತು.
"ಗಿರಿಗಿಟ್ಲೆ ಮಜವಾಗಿದೆ ! ನಿನ್ ಲಂಗ ಎಷ್ಟು ಉಬ್ತು ಗೊತ್ತಾ?" ಎಂದಳು ಪುಟ್ಟಿಯ ಬೆಸ್ಟ್ ಫ್ರೆಂಡ್ ಶಾಂತು.
" ನಿನ್ ಲಂಗ ಕೂಡ! ಸರಿ. ಇನ್ನೊಂದ್ಸಲ ಆಡೋಣ?" ಎಂದಳು ಪುಟ್ಟಿ.
ಅಷ್ಟರಲ್ಲಿ -
" ಎಲ್ಲ ಪ್ರೇಯರ್ ಹಾಲ್ಗೆ ನಡೀರಿ ! " ಎಂದು ಕೂಗಿದರು ವತ್ಸಲಾ ಮಿಸ್. ಶಾಲೆಯ ಮೈದಾನದಲ್ಲಿ ಆಡುತ್ತಿದ್ದ ಮಕ್ಕಳೆಲ್ಲ ಒಳಕ್ಕೆ ಓಡಿದರು. ಪುಟ್ಟಿ ಶಾಂತು ಕೂಡ ಒಳಕ್ಕೆ ನಡೆದರು .
'' ಮಕ್ಕಳೇ ! ಎಲ್ಲ ಶಬ್ದ ಮಾಡ್ದೆ ಕೂತ್ಕೋಳಿ. ಇವತ್ತು ನಮ್ಮ ಭಾರತದ ಪ್ರಧಾನ ಮಂತ್ರಿಗಳಾಗಿರುವ ನೆಹರು ಮಾಮ ಅವರ ಹುಟ್ಟು ಹಬ್ಬ. ಮಕ್ಕಳಲ್ಲಿ ಅವರಿಗೆ ಬಹಳ ಪ್ರೀತಿ. ಎಲ್ಲ ಮಕ್ಕಳೂ ಚೆನ್ನಾಗಿ ಓದ್ಬೇಕು , ದೊಡ್ಡವರಾಗಿ ಸಾದ್ನೆಗಳ್ನ ಮಾಡ್ಬೇಕು ಅನ್ನೋದು ಅವರ ಆಸೆ. ನೀವೆಲ್ಲಾ ಚೆನ್ನಾಗ್ ಓದ್ತೀರಾ? " ಕೇಳಿದರು ವೇದಿಕೆಯ ಮೇಲಿದ್ದ ಪ್ರಮೀಳಾ ಮೇಡಂ .
" ಓ ! ಓದ್ತೀವಿ." ಒಂದೇ ದನಿಯಲ್ಲಿ ಕೂಗಿದರು ಮಕ್ಕಳು.
''ಸಾದ್ನೆ ಮಾಡ್ತೀರಾ ?"
" ಹೂಮ್ ! ಮಾಡ್ತೀವಿ!"
"ಇವತ್ತು ನಮ್ಮ ಶಾಲೇಲಿ ಮಕ್ಕಳ ದಿನದ ಹಬ್ಬ ಮಾಡ್ತಿದ್ದೀವಿ. ಈಗ ನಿಮಗಾಗಿ ನಿಮ್ಮ ಟೀಚರ್ಗಳೆಲ್ಲ ಒಂದು ಮನೋರಂಜನೆ ಕಾರ್ಯಕ್ರಮ ನಡೆಸ್ಕೊಡ್ತಾರೆ. ಅದಾದ ಮೇಲೆ ವರಾಂಡದಲ್ಲಿ ಪೆಪ್ಪರ್ಮಿಂಟು ಹಂಚ್ತಾರೆ. ಜೊತೆಗೆ ನೆಹರು ಮಾಮನಿಗೆ ಇಷ್ಟವಾದ ಗುಲಾಬಿ ಹೂವಿನ ಬಾಡ್ಜ್ ಕೂಡ ಕೊಡ್ತಾರೆ. ಈಗ ಕಾರ್ಯಕ್ರಮ. " ಮಾತು ಮುಗಿಸಿದರು ಪ್ರಮೀಳಾ ಮೇಡಂ.
"ಅಲ್ನೋಡು ಜಾನಾಬಾಯ್ ಮಿಸ್ !"ಕೂಗಿಕೊಂಡಳು ಪುಟ್ಟಿ.
" ಅಯ್ಯೋ ! ಕಸ್ತೂರಿ ಮಿಸ್ ನೋಡು !" ಎಂದಳು ಶಾಂತು.
" ಅಲ್ನೋಡು ! ರೀಟಾ ಮಿಸ್ ಇದ್ದಾರೆ!"
" ಪ್ರಭಾ ಟೀಚರ್ ! ಗೌರಿ ಮಿಸ್ !" ಆಶ್ಚರ್ಯದಿಂದ ಎಲ್ಲ ಮಕ್ಕಳೂ ಕೂಗಿದರು.
ಕಚ್ಚೆ ಪಂಚೆಯುಟ್ಟು ಕಪ್ಪು ಮೀಸೆ ಬಳಿದು ಪೇಟ ಕಟ್ಟಿಕೊಂಡ ಟೀಚರ್ಗಳು ವೇದಿಕೆಯ ಒಂದು ಕಡೆ ನಿಂತರು !
" ಅಯ್ಯೋ! ಅಲ್ನೋಡು, ಪದ್ಮಾ ಮಿಸ್, ಸರಳ ಮಿಸ್, ಜಯಾ ಟೀಚರ್ ! "
" ಮಿಸ್ ಸಂತೋಷ್, ಶ್ಯಾಮಲಾ ಟೀಚರ್ ಕೂಡ ಇದ್ದಾರೆ !"
ಕಚ್ಚೆ ಸೀರೆಯುಟ್ಟು , ತಲೆಯಲ್ಲಿ ತುರುಬು ಹಾಕಿ, ಕೈ ತುಂಬಾ ಗಾಜಿನ ಬಳೆ ತೊಟ್ಟು ಬಂದ ಟೀಚರ್ಗಳು ಮತ್ತೊಂದು ಕಡೆ !
ಕಚ್ಚೆ ಸೀರೆಯುಟ್ಟು , ತಲೆಯಲ್ಲಿ ತುರುಬು ಹಾಕಿ, ಕೈ ತುಂಬಾ ಗಾಜಿನ ಬಳೆ ತೊಟ್ಟು ಬಂದ ಟೀಚರ್ಗಳು ಮತ್ತೊಂದು ಕಡೆ !
ಮೈಕ್ ಗರ್ ಗರ್ ಎಂದಿತು. ಗೆಜ್ಜೆ ಝಲ್ ಝಲ್ ಎಂದಿತು. ಮಕ್ಕಳ ಗಿಜಿ ಗಿಜಿ ನಿಂತಿತು .
''ಚೆಲುವೈಯ ಚೆಲುವೋ ತಾನಿತಂದನ್ನಾ ಚಿನ್ಮಾಯಾ ರೂಪೇ ಕೋಲಣ್ಣ ಕೋಲೆ!
ಕೋಲಣ್ಣ ಕೋಲೇ ತಾನಿತಂದನ್ನಾ ಚಿನ್ಮಾಯಾ ರೂಪೇ ಕೋಲಣ್ಣ ಕೋಲೇ !''
ಟೀಚರ್ಗಳೆಲ್ಲ ಬಣ್ಣದ ಕೋಲು ತಟ್ಟಿ ಹಾಡಿಗೆ ತಕ್ಕಂತೆ ಕುಣಿಯುತ್ತ ಕೊಲಾಟವಾಡಿದರು. ಮಕ್ಕಳು ಉತ್ಸಾಹದಿಂದ ಕುಣಿದಾಡಿದರು.
"ಶಾಂತು ! ನಾವೂ ಕೋಲಾಟ ಆಡೋಣ ?"ಎಂದಳು ಪುಟ್ಟಿ.
" ಕೋಲುಗಳು ಬೇಕಲ್ಲ !" ಎಂದಳು ಶಾಂತು.
" ನಮ್ಮನೇಲಿದೆ !" ಎಂದಳು ಪುಟ್ಟಿ.
"ಶಾಂತು ! ನಾವೂ ಕೋಲಾಟ ಆಡೋಣ ?"ಎಂದಳು ಪುಟ್ಟಿ.
" ಕೋಲುಗಳು ಬೇಕಲ್ಲ !" ಎಂದಳು ಶಾಂತು.
" ನಮ್ಮನೇಲಿದೆ !" ಎಂದಳು ಪುಟ್ಟಿ.
ಕಾರ್ಯಕ್ರಮ ಮುಗಿದಮೇಲೆ ಮಕ್ಕಳೆಲ್ಲ ವಟ ವಟ ಮಾತಾಡುತ್ತ ಚಲ್ಲಾ ಪಿಲ್ಲಿ ಓಡಿದರು. ಗೋಪಿ ಸಾರ್ ಎಲ್ಲರಿಗೂ ಕಿತ್ತಳೆ ಮತ್ತು ನಿಂಬೆ ಪೆಪ್ಪರ್ಮಿಂಟುಗಳನ್ನು ಹಂಚಿದರು. ಗೀತಾ ಮೇಡಂ ಗುಲಾಬಿ ಹೂ ಬಾಡ್ಜ್ ಗಳನ್ನು ಒಬ್ಬೊಬ್ಬರ ಅಂಗಿಗೂ ಪಿನ್ ಮಾಡಿದರು.
" ಮಿಸ್ !ಮಿಸ್ ! ನಮ್ ಜೊತೆ ಆಟ ಆಡಿ, ಬನ್ನಿ ಮಿಸ್ !" ವೇಷ ಕಳಚಿ ಬಂದ ಜಾನಾಬಾಯ್ ಮಿಸ್ ಕೈ ಹಿಡಿದೆಳೆದಳು ಪುಟ್ಟಿ .
" ಬನ್ನಿ ಮಿಸ್ !ಬನ್ನಿ ಮಿಸ್!" ಎಲ್ಲ ಮಕ್ಕಳೂ ಪೀಡಿಸಿದರು .
" ಸರಿ ಸರಿ ! ಬಂದೆ ! ಇವತ್ತು ಹೊಸ ಆಟ ಆಡೋಣ ?" ಎಂದರು ಜಾನಾಬಾಯ್ ಮಿಸ್.
" ಏನ್ ಆಟ ಮಿಸ್ ?"
" ಏನ್ ಆಟ ಮಿಸ್ ?"
" ಮೊದ್ಲು ಎಲ್ರೂ ಕೈ ಹಿಡ್ಕೊಂಡು ರೌಂಡ್ ಆಗಿ ನಿಲ್ಲಿ. "
" ರಿಂಗ ರಿಂಗ ರೋಸಸ್ ಆಟಾನಾ ?" ಕೂಗಾಡಿದರು ಮಕ್ಕಳು.
"ಇಲ್ಲಪ್ಪ! ಬೇರೆ ಹಾಡು! ನಮ್ಮೂರಲ್ಲಿ ಎಲ್ರೂ ಹೇಳ್ಕೊಂಡು ಆಡೋದು!" ಜಾನಾಬಾಯ್ ಮಿಸ್ ಎಲ್ಲರನ್ನೂ ವೃತ್ತಾಕಾರವಾಗಿ ನಿಲ್ಲಿಸಿ ಪುಟ್ಟಿ ರೂಪಾರ ನಡುವೆ ತಾನೂ ನಿಂತರು.
ರತ್ತೋ ರತ್ತೋ ರಾಯನ ಮಗಳೇ
ಬಿತ್ತೋ ಬಿತ್ತೋ ಬೀಮನ ಮಗಳೇ
ಹದಿನಾರಂಬೆ ಕಾಯಲಾರೆ
ಬೈಟ್ ಕುಪ್ಪಿ ಬಾಳೆ ಕಂಬ
ಕುಕ್ಕರ್ ಬಸವಿ ಕೂರ್ ಬಸವಿ !
ಮಕ್ಕಳನ್ನು ಸುತ್ತಿ ಸುತ್ತಿ ಬರುವಂತೆ ಹೇಳಿ , ಜಾನಬಾಯ್ ಮಿಸ್ ಹಾಡಿದರು . ಎರಡು ರೌಂಡ್ ಆಡಿದ ಮೇಲೆ ಎಲ್ಲರೂ ತಾವಾಗಿಯೇ '' ರತ್ತೋ ರತ್ತೋ ''ಎಂದು ಹಾಡಿದರು . ಕೈ ಹಿಡಿದು ವೇಗವಾಗಿ ಸುತ್ತಿದರು. ''ಕುಕ್ಕರ್ ಬಸವಿ ಕೂರ್ ಬಸವಿ '' ಎನ್ನುತ್ತ 'ದೊಪ್ ' ಎಂದು ಕೆಳಗೆ ಕೂತು ಜೋರಾಗಿ ನಕ್ಕರು.
ಬೆಲ್ ಆದ ಮೇಲೆ ಪುಟ್ಟಿ ರಾಣಿಯ ಜೊತೆ ಮನೆಗೆ ಹೊರಟಳು .
ಬೆಲ್ ಆದ ಮೇಲೆ ಪುಟ್ಟಿ ರಾಣಿಯ ಜೊತೆ ಮನೆಗೆ ಹೊರಟಳು .
No comments:
Post a Comment