ಪಿಂಕಿ - ಪುಟ್ಟಿ ಜುಗಲ್ಬಂಧಿ !
"ಆ ಮರದಲ್ಲಿ ಗೂಬೆ ಪಕ್ಷಿ ಕೂತು ಕೊಂಡಿದೇ,
Pussy cat pussy cat where had you been?
I had been to London to look at the queen! ಕೇಳೋ ಕಳ್ಳ!ಮುದ್ದಿನ ಮಲ್ಲ!ಮೈಸೂರ ಅರಮನೆಗೆ.
I frightened the little mouse under the chair! ರಾಣಿಯ ಮಂಚದ ಕೆಳಗೆ ಕಂಡೆನು ಚಿಲಿಪಿಲಿ ಇಲಿಯೊಂದ!
ಪಿಂಕಿ ಪುಟ್ಟಿ ಮುಗಿಸಿದಾಗ ಎಲ್ಲರೂ ಜೋರಾಗಿ ಚಪ್ಪಾಳೆ ತಟ್ಟಿದರು .
"ಆ ಮರದಲ್ಲಿ ಗೂಬೆ ಪಕ್ಷಿ ಕೂತು ಕೊಂಡಿದೇ,
ಅತ್ತಲಾಗಿಯೂ ಇತ್ತಲಾಗಿಯೂ,
ಆ ಮರದಲ್ಲಿ ಗೂಬೆಗಳು ಕೂತುಕೊಂಡಿವೆ!
ನೀರಿನಲ್ಲಿ ಮೀನುಗಳು ಈಜುತಲಿವೆ,
ಅತ್ತಲಾಗಿಯೂ ಇತ್ತಲಾಗಿಯೂ,
ನೀರಿನಲ್ಲಿ ಮೀನುಗಳು ಈಜುತಲಿವೆ!
ಸಾಗರದಲ್ಲಿ ದೋಣಿಗಳು ತೆಲುತಲಿವೆ,
ಅತ್ತ ಲಾಗಿಯೂ , ಇತ್ತಲಾಗಿಯೂ,
ಸಾಗರದಲ್ಲಿ ದೋಣಿಗಳು ತೆಲುತಲಿವೆ!
ಆಗಸದಲ್ಲಿ ತಾರೆಗಳು ಮಿನುಗುತಲಿವೆ,
ಅತ್ತಲಾಗಿಯೂ ಇತ್ತಲಾಗಿಯೂ
ಆಗಸದಲ್ಲಿ ತಾರೆಗಳು ಮಿನುಗುತಲಿವೆ!
ಬೆಟ್ಟದಾಚೆ ಮಾಯಾಲೋಕ ಹೊಳೆಯುತಲಿದೆ,
ಅತ್ತಲಾಗಿಯೂ ಇತ್ತಾಲಾಗಿಯೂ,
ಬೆಟ್ಟದಾಚೆ ಮಾಯಾಲೋಕವು ಹೊಳೆಯುತಲಿದೆ! "
ಪಕ್ಷಿಗಳು ಹಾರಿದಂತೆ, ಮೀನು ಈಜಿದಂತೆ , ದೋಣಿ
ತೇಲಿದಂತೆ , ತಾರೆಗಳು
ತೇಲಿದಂತೆ , ತಾರೆಗಳು
ಮಿನುಗಿದಂತೆ ಕಣ್ಣಗಲಿಸಿ, ತಲೆದೂಗಿ, ಕೈಗಳನ್ನೂ ಆಡಿಸಿ
ಅಭಿನಯ ಮಾಡುತ್ತಲೇ ಹಾಡಿದಳು ಪುಟ್ಟಿ .
ಅಭಿನಯ ಮಾಡುತ್ತಲೇ ಹಾಡಿದಳು ಪುಟ್ಟಿ .
ಬೆಂಗಳೂರ್ ಕಾನ್ವೆಂಟಿನಲ್ಲಿ ತಾನು ಕಲಿತಿದ್ದ Hot Cross Buns ,
London bridge , Old King Cole ಮುಂತಾದ ಆಂಗ್ಲ ಗೀತೆಗಳನ್ನು
London bridge , Old King Cole ಮುಂತಾದ ಆಂಗ್ಲ ಗೀತೆಗಳನ್ನು
ಈಗಾಗಲೇ ಹಾಡಿ ತೋರಿಸಿದ್ದಳು ವೆಂಕಿ ಮಾಮನ
ಮಗಳು ಪಿಂಕಿ.
ಪುಟ್ಟಿಯ ಹಾಡು ಕೇಳಿ ಪಿಂಕಿ ಮಾತ್ರವಲ್ಲದೇ, ವೆಂಕಿ ಮಾಮ ,
ಸುಜಾ ಆಂಟಿ, ಮತ್ತು ಪಿಂಕಿ ,
ಪಮ್ಮಿ ಅಕ್ಕ ಕೂಡ ಸಂತೋಷದಿಂದ ಉದ್ಗರಿಸಿದರು .
ಮಗಳು ಪಿಂಕಿ.
ಪುಟ್ಟಿಯ ಹಾಡು ಕೇಳಿ ಪಿಂಕಿ ಮಾತ್ರವಲ್ಲದೇ, ವೆಂಕಿ ಮಾಮ ,
ಸುಜಾ ಆಂಟಿ, ಮತ್ತು ಪಿಂಕಿ ,
ಪಮ್ಮಿ ಅಕ್ಕ ಕೂಡ ಸಂತೋಷದಿಂದ ಉದ್ಗರಿಸಿದರು .
" Oranges and lemons ಗೊತ್ತಾ? ಹಾಡ್ತೀನಿ ಕೇಳು . ಪಮ್ಮಿ,
ನೀನೂ ಬಾ "
ನೀನೂ ಬಾ "
ಅಕ್ಕಳನ್ನು ಕರೆದಳು ಪಿಂಕಿ.
" ನಾನು ಪಾಪು ಜೊತೆ ಆಡ್ತೀನಿ . ನೀನೇ ಹಾಡು . " ಪಮ್ಮಿ
ಸರಸು ಅತ್ತೆ ಮಡಿಲಲ್ಲಿದ್ದ ಪಾಪುವಿಗೆ ಆಟ ತೋರಿಸುತ್ತ
ಹಜಾರದ ಮೆಟ್ಟಲ ಮೇಲೆ ಕುಳಿತುಬಿಟ್ಟಳು .
ಸರಸು ಅತ್ತೆ ಮಡಿಲಲ್ಲಿದ್ದ ಪಾಪುವಿಗೆ ಆಟ ತೋರಿಸುತ್ತ
ಹಜಾರದ ಮೆಟ್ಟಲ ಮೇಲೆ ಕುಳಿತುಬಿಟ್ಟಳು .
Oranges and lemons,
Sold for a penny !
And the school girls are also many!
The grass is green and the rose is red,
Remember me when I am dead, dead, dead, dead !
Sold for a penny !
And the school girls are also many!
The grass is green and the rose is red,
Remember me when I am dead, dead, dead, dead !
ಪಿಂಕಿ ಜೊತೆ ತಾನೂ ಸೇರಿಕೊಂಡು ಹಾಡಿದಳು ಪುಟ್ಟಿ .
" ನಿನ್ಗೂ ಈ ಹಾಡು ಬರತ್ಯೇ ?" ಪಿಂಕಿಗೆ ಆಶ್ಚರ್ಯ .
" ಇದೇ ಹಾಡನ್ನ ಕನ್ನಡದಲ್ಲೂ ಹೇಳ್ಕೊಟ್ಟಿದ್ದಾರೆ ನಮ್
ಮಿಸ್ ."
ಮಿಸ್ ."
ಎಂದು ಕೊಚ್ಚಿಕೊಂಡಳು ಪುಟ್ಟಿ .
" ಹಾಗೇನು ? ಹೇಳು ಮತ್ತೆ ಕೇಳೋಣ ." ಎಂದರು
ಕುರ್ಚಿಯಲ್ಲಿ ಕುಳಿತಿದ್ದ ವೆಂಕಿ ಮಾಮ .
ಕುರ್ಚಿಯಲ್ಲಿ ಕುಳಿತಿದ್ದ ವೆಂಕಿ ಮಾಮ .
" ಆ ಕಾಲದಲ್ಲಿ ಆಂಗ್ಲ ಸಾಕ್ಷರತೆ ಕೊಡೊ ಸ್ಕೂಲ್ ಗಳನ್ನ
ಅಂಗ್ಲ ದೇಶದ ಪಾದ್ರಿಯರೇ ಹೆಚ್ಚಾಗಿ ನಿರ್ವಹಿಸ್ತಿದ್ರು.
ಪಾಠದೊಂದಿಗೆ, ಆಂಗ್ಲರ ಅನೇಕ ಕ್ರೀಡೆ
ಮತ್ತು ಮನರಂಜನೆಯ ಆಟಗಳನ್ನ ನಮ್ಮ ದೇಶದ
ಮಕ್ಳಿಗೆ ಪರಿಚಯಿಸಿ ಕೊಟ್ರು . Nursery Rhymes ಗಳನ್ನೂ
ಮಕ್ಳಿಗೆ ಕಲಿಸಿದ್ರು .
ಅಂಗ್ಲ ದೇಶದ ಪಾದ್ರಿಯರೇ ಹೆಚ್ಚಾಗಿ ನಿರ್ವಹಿಸ್ತಿದ್ರು.
ಪಾಠದೊಂದಿಗೆ, ಆಂಗ್ಲರ ಅನೇಕ ಕ್ರೀಡೆ
ಮತ್ತು ಮನರಂಜನೆಯ ಆಟಗಳನ್ನ ನಮ್ಮ ದೇಶದ
ಮಕ್ಳಿಗೆ ಪರಿಚಯಿಸಿ ಕೊಟ್ರು . Nursery Rhymes ಗಳನ್ನೂ
ಮಕ್ಳಿಗೆ ಕಲಿಸಿದ್ರು .
ಕ್ರಮೇಣ Nursery Rhymes ಗಳನ್ನ ನಮ್ಮ ದೇಶದ ಭಾಷೆಗಳಿಗೆ
ಅನುವಾದ ಮಾಡಿ ಅವನ್ನೂ ಸ್ಕೂಲ್ ಗಳಲ್ಲಿ ಹೇಳಿ ಕೊಟ್ರು."
ಎಂದು ಬಾಷಣವೇ ಬಿಗಿದುಬಿಟ್ಟರು ತಾತ .
ಅನುವಾದ ಮಾಡಿ ಅವನ್ನೂ ಸ್ಕೂಲ್ ಗಳಲ್ಲಿ ಹೇಳಿ ಕೊಟ್ರು."
ಎಂದು ಬಾಷಣವೇ ಬಿಗಿದುಬಿಟ್ಟರು ತಾತ .
" ಕರೆಕ್ಟ್ ! ನಮ್ಮ ಸ್ಟೆಲ್ಲಾ ಮಿಸ್ ಕೂಡ ಹಾಗೇ ! ಕನ್ನಡದಲ್ಲೂ
ನಮ್ಗೆ ಹಾಡಕ್ಕೆ ಕಲ್ಸಿದ್ದಾರೆ. ನಾವೆಲ್ಲಾ ಸ್ಕೂಲಲ್ಲಿ
'ಕಿತ್ತಳೆ ಹಣ್ಣು' ಹಾಡ್ಕೊಂಡೆ ಆಟ ಆಡ್ತೀವಿ . ಪಮ್ಮಿ! ನೀನೂ
ಬಾ ಆಡೋಣ . " ಎಂದು ಮತ್ತೆ ತನ್ನ ಅಕ್ಕಳನ್ನು ಕರೆದಳು ಪಿಂಕಿ.
ನಮ್ಗೆ ಹಾಡಕ್ಕೆ ಕಲ್ಸಿದ್ದಾರೆ. ನಾವೆಲ್ಲಾ ಸ್ಕೂಲಲ್ಲಿ
'ಕಿತ್ತಳೆ ಹಣ್ಣು' ಹಾಡ್ಕೊಂಡೆ ಆಟ ಆಡ್ತೀವಿ . ಪಮ್ಮಿ! ನೀನೂ
ಬಾ ಆಡೋಣ . " ಎಂದು ಮತ್ತೆ ತನ್ನ ಅಕ್ಕಳನ್ನು ಕರೆದಳು ಪಿಂಕಿ.
" ಹೋಗೆ ಪಿಂಕಿ ! ಮೂರೇ ಜನ ಹೇಗೆ ಆಡೋದು ?" ಎಂದಳು
ಪಮ್ಮಿ .
ಪಮ್ಮಿ .
" ನಾನೂ ಬರ್ತೀನಿ ಬಾ ! ಪುಟ್ಟಣ್ಣ ನೀನೂ ಬಾ !" ಎನ್ನುತ್ತಾ
ಅಮ್ಮನ ಕೈಗೆ ಪಾಪುವನ್ನು ಕೊಟ್ಟಳು ಸರಸು ಅತ್ತೆ .
ಅಮ್ಮನ ಕೈಗೆ ಪಾಪುವನ್ನು ಕೊಟ್ಟಳು ಸರಸು ಅತ್ತೆ .
ಇಬ್ಬರೂ ತಮ್ಮ
ಕೈಗಳನ್ನು ಗೋಪುರದಂತೆ ಜೋಡಿಸಿಕೊಂಡು
ಕೈಗಳನ್ನು ಗೋಪುರದಂತೆ ಜೋಡಿಸಿಕೊಂಡು
ಎದುರುಬದುರಾಗಿ ನಿಂತರು. ಉಳಿದವರು ಆ
ಗೋಪುರದೊಳಗೆ ತೂರಿ
ಗೋಪುರದೊಳಗೆ ತೂರಿ
ಹೊರಬರಲು ಸಿದ್ದರಾದರು.
"ಕಿತ್ತಲೆ ಹಣ್ಣು ! ಕಾಸಿಗೆ ಒಂದು ,
ಶಾಲೆಯ ಮಕ್ಕಳು ಬಹಾಳ ಹೆಚ್ಚು !
ಹುಲ್ಲೂ ಹಸಿರು, ಗುಲಾಬಿ ಕೆಂಪು ,
ನಾ ಸತ್ತಾಗ ನೆನಪ್ಪು ಮಾಡಿ, ಡುಂ ಡುಂ ಡುಂ ಡುಂ ಡುಂ ! "
ಹುಲ್ಲೂ ಹಸಿರು, ಗುಲಾಬಿ ಕೆಂಪು ,
ನಾ ಸತ್ತಾಗ ನೆನಪ್ಪು ಮಾಡಿ, ಡುಂ ಡುಂ ಡುಂ ಡುಂ ಡುಂ ! "
ಎಲ್ಲರೂ ಒಟ್ಟಿಗೆ ಹಾಡುತ್ತ ಕೈ ಗೋಪುರದೊಳಗೆ ಸಾಲಾಗಿ ನುಗ್ಗಿ ನುಗ್ಗಿ
ಹೊರಬಂದರು . ಹಾಡು ಮುಗಿಯುತ್ತಿದ್ದ ಹಾಗೆ 'ಡುಂ ಡುಂ ಡುಂ ' ಎನ್ನುತ್ತಾ ,
ಆ ಸಮಯಕ್ಕೆ ಸರಿಯಾಗಿ ಗೋಪುರದೊಳಗೆ ನುಗ್ಗಿದ ಪಿಂಕಿ 'ಪಕ್' ಕನೆ ಸೆರೆ
ಹಿಡಿಯಲ್ಪಟ್ಟಳು .
ಅದೇ ಸಮಯ ತೋಟದಲ್ಲಿ ಹಾದು ಹೋದ ಪಕ್ಕದ ಮನೆ
ಬೆಕ್ಕಿನ ಕಡೆ ಪುಟ್ಟಿಯ ಗಮನ ತಿರುಗಿತು. ಹುರುಪಿನಿಂದ ಜೋರಾಗಿ ಹಾಡತೊಡಗಿದಳು .
ಬೆಕ್ಕಿನ ಕಡೆ ಪುಟ್ಟಿಯ ಗಮನ ತಿರುಗಿತು. ಹುರುಪಿನಿಂದ ಜೋರಾಗಿ ಹಾಡತೊಡಗಿದಳು .
I had been to London to look at the queen!
Pussy cat pussy cat what did you there?
I frightened the little mouse under the chair!
ಪಿಂಕಿಗೂ ಖುಷಿಯಾಯಿತು . ಅವಳೂ ತಾನು ಕಲಿತಿದ್ದ ಬೆಕ್ಕಿನ ಹಾಡನ್ನು
ಹಾಡಿದಳು.
ಬೆಕ್ಕೇ ಬೆಕ್ಕೇ ! ಮುದ್ದಿನ ಸೊಕ್ಕೆ ! ಎಲ್ಲಿಗೆ ಹೋಗಿದ್ದೇ ?
ಕರೆದರೂ ಇಲ್ಲ ! ಹಾಲು ಬೆಲ್ಲ ಕಾಯಿಸಿ ಇಟ್ಟಿದ್ದೆ !
ಕೇಳೋ ಕಳ್ಳ !ಮುದ್ದಿನ ಮಲ್ಲ ! ಮೈಸೂರು ಅರಮನೆಗೆ !
ರಾಜನ ಸಂಗಡ ರಾಣಿಯು ಇದ್ದಳು ಅಂತಃಪುರದೊಳಗೆ !
ಬೆಕ್ಕೇ ಬೆಕ್ಕೇ!ಬೇಗನೆ ಹೇಳೇ !ಏನದು ಆನಂದ?
ರಾಣಿಯ ಮಂಚದ ಕೆಳಗೆ ಕಂಡೆನು ಚಿಲಿಪಿಲಿ ಇಲಿಯೊಂದಾ !
ಕೇಳೋ ಕಳ್ಳ !ಮುದ್ದಿನ ಮಲ್ಲ ! ಮೈಸೂರು ಅರಮನೆಗೆ !
ರಾಜನ ಸಂಗಡ ರಾಣಿಯು ಇದ್ದಳು ಅಂತಃಪುರದೊಳಗೆ !
ಬೆಕ್ಕೇ ಬೆಕ್ಕೇ!ಬೇಗನೆ ಹೇಳೇ !ಏನದು ಆನಂದ?
ರಾಣಿಯ ಮಂಚದ ಕೆಳಗೆ ಕಂಡೆನು ಚಿಲಿಪಿಲಿ ಇಲಿಯೊಂದಾ !
" ತುಂಬಾ ಚೆನ್ನಾಗಿದೆ ಪಿಂಕಿ. ಈಗ ನಾವಿಬ್ರೂ ಒಟ್ಟಿಗೆ ಹಾಡೋಣಾ ? ನೀನು
ಬೇಕೇ ಬೆಕ್ಕೇ ಹಾಡು. ನಾನು ಪುಸ್ಸಿ ಕ್ಯಾಟ್ ಹಾಡ್ತೀನಿ ." ಪುಟ್ಟಿ ಉತ್ಸಾಹದಿಂದ
ಕುಣಿದಳು .
" ಬೆಕ್ಕೇ ಬೆಕ್ಕೇ ತುಂಬಾ ದೊಡ್ಡ ಹಾಡು . ಒಟ್ಗೇ ಹಾಡಿದ್ರೆ ಸರಿ
ಹೋಗಲ್ಲ." ಎಂದಳು ಪಿಂಕಿ .
" ಬೆಕ್ಕಿನಿಂದ ಎರಡು ಸಾಲುಗಳು ತೆಗೆದ್ಹಾಕಿದ್ರೆ ಆಯಿತು." ಎಂದಳು ಪಮ್ಮಿ .
" ನಾನು ಅದನ್ನ ಹಾಡ್ತೀನಿ ." ಪುಟ್ಟಿ ಉತ್ಸಾಹದಿಂದ ಮುಂದೆ ಬಂದಳು.
" ಸರಿ. ನಾನು ಪುಸ್ಸಿ ಕ್ಯಾಟ್ ಹೇಳ್ತೀನಿ !" ಎಂದು ಒಪ್ಪಿಕೊಂಡಳು ಪಿಂಕಿ .
ಶುರುವಾಯಿತು ಪಿಂಕಿ - ಪುಟ್ಟಿಯರ ಜುಗಲ್ಬಂಧಿ !
ಪಿಂಕಿ - ಪುಟ್ಟಿ -
Pussy cat pussy cat where had you been? ಬೆಕ್ಕೇ ! ಮುದ್ದಿನ ಸೊಕ್ಕೆ ! ಎಲ್ಲಿಗೆ ಹೋಗಿದ್ದೇ? I had been to London to look at the queen! ಕೇಳೋ ಕಳ್ಳ!ಮುದ್ದಿನ ಮಲ್ಲ!ಮೈಸೂರ ಅರಮನೆಗೆ.
Pussy cat pussy cat what did you there? ಬೆಕ್ಕೇ ಬೆಕ್ಕೇ!ಬೇಗನೆ ಹೇಳೇ !ಏನದು ಆನಂದ?
I frightened the little mouse under the chair! ರಾಣಿಯ ಮಂಚದ ಕೆಳಗೆ ಕಂಡೆನು ಚಿಲಿಪಿಲಿ ಇಲಿಯೊಂದ!
ಪಿಂಕಿ ಪುಟ್ಟಿ ಮುಗಿಸಿದಾಗ ಎಲ್ಲರೂ ಜೋರಾಗಿ ಚಪ್ಪಾಳೆ ತಟ್ಟಿದರು .
ಅಜ್ಜಿ ಮತ್ತು ಪಾಪು ಕೂಡ ಆನಂದದಿಂದ ನಕ್ಕರು!
ಮಕ್ಕಳಿದ್ದ ಮನೆ ಎಂದಮೇಲೆ ಆನಂದಕ್ಕೆ ಕೇಳಬೇಕೆ ?
No comments:
Post a Comment