ಸೂಜಿ ಸುಬ್ಬ ರಾಯನ ಕಥೆ
" ಸೂಜಿ ಸುಬ್ಬನ್ನ ಹುಲಿ ಏನ್ ಮಾಡ್ತಜ್ಜಿ ?" ಪುಟ್ಟಿ ಭಯದಿಂದ ಕೇಳಿದಳು.
" ತುಂಟ ಸುಬ್ಬ ರಾಯನು ಮಾತಿನ ಮಲ್ಲ ,
ಅಂಜಿಕೆ ಹೆದರಿಕೆ ಎಳ್ಳಷ್ಟೂ ಇಲ್ಲ !"
ಪುಟ್ಟಣ್ಣ ರಾಗವಾಗಿ ನುಡಿದ .
" ಕರೆಕ್ಟ್ ! " ಎಂದ ಅಜ್ಜಿ ಮುಂದಕ್ಕೆ ಓದಿದಳು .
೨೧
ಹೊರಬಿದ್ದ ಸೂಜಿ ಸುಬ್ಬ ಕೂಗಾಡಿದನು !
ಜೋರಾಗಿ ರಂಪಾಟವ ಮಾಡಿದನು !
" ಕರಡಿಯಣ್ಣ , ನರಿಯಣ್ಣ , ಮೊಸಳೆಯಣ್ಣಾ !
ಹಿಡಿದುಕೊಂಡ ಹುಲಿಯಣ್ಣ
ಸೂಜಿ ಸುಬ್ಬ ರಾಯನನ್ನಾ !"
೨೨
ಕೂಡಲೇ ಧಾವಿಸಿ ಬಂದ ಪ್ರಾಣಿಗಳು ,
ಹುಲಿಯ ಮೇಲೆರಗಿ ಕಚ್ಚಾಡಿದವು !
೨೩
ಸೂಜಿ ಗಾತ್ರದ ಸೂಜಿ ಸುಬ್ಬ ರಾಯನು ,
ಅರಸುತ ರಾತ್ರಿಯ ಊಟವನ್ನು,
ನುಸುಳಿಕೊಂಡು ಅಲ್ಲಿಂದ ಪಾರಾದನು !
ಅಜ್ಜಿ ಮುಗಿಸಿದಾಗ ಎಲ್ಲರೂ ' ಸೂಜಿ ಸುಬ್ಬ ರಾಯನಿಗೆ ಜೇಯ್ ! ' ಎಂದು ಉತ್ಸಾಹದಿಂದ ಘೋಷಣೆ ಮಾಡಿದರು .
" ಪ್ರಾಣಿಗಳೆಲ್ಲ ಕಾಡಲ್ಲಿ ಇನ್ನೂ ಕಾದಾಡ್ತಾನೆ ಇತ್ವಂತೆ ! ನನ್ ತಾತ ಹೇಳ್ತಿದ್ರು !"
" ಈಗ್ಲೂ ?" ಪುಟ್ಟಿ ಕಣ್ಣಗಲಿಸಿ ಕೇಳಿದಳು .
" ಹುಂ! ಈಗ್ಲೂ ಕಾದಾಡ್ತಾನೇ ಇವ್ಯಂತೆ !" ಎಂದಳು ಅಜ್ಜಿ !
No comments:
Post a Comment