Wednesday, March 5, 2014

Sooji Subba Raayana Kathe


ಸೂಜಿ ಸುಬ್ಬ ರಾಯನ ಕಥೆ 

"ಅಜ್ಜಿ ! ಕಥೆ ಓದೋಣಾ ?" ಅಜ್ಜಿಯ ಬಳಿ ಅಚ್ಚುಕಟ್ಟಾಗಿ ಬಂದು ಕುಳಿತಳು ಪುಟ್ಟಿ . 

" ತಿಂಡಿ ತಿಂದ್ಯ?"

" ಹಮ್ ! ಆಯ್ತು !" 

" ಪಾಠ ಮುಗ್ಸಿದ್ಯಾ ?"

" ಓ ! ಆಗ್ಲೇ ಮುಗೀತು !" 

" ಅರೆ ! ಏನಿವತ್ತು , ಇಷ್ಟ್ ಬೇಗ ಎಲ್ಲ ಮುಗ್ಸಿದ್ದೀ ?" ಅಜ್ಜಿಗೆ ಆಶ್ಚರ್ಯ. 

" ಇನ್ನೇನು ? ನಿನ್ ಕಥೆ ಮುಂದ್ವರಿಸ್ಬೇಕಲ್ಲಾ ?" ಎಂದ ತಾತ ತಾನೂ ಅಲ್ಲೇ ಕುಳಿತರು . 

" ಸರಿ ಮತ್ತೆ ! ಎಲ್ರೂ ತಯಾರ್ ಅಂದ್ರೆ ನಾನೂ ರೆಡೀನೆ. " ಎಂದ ಅಜ್ಜಿ  ಪುಟ್ಟಿಯಿಂದ ಪುಸ್ತಕ ಕೈಗೆ ತೆಗೆದುಕೊಂಡಳು . 

" ಅಜ್ಜಿ ಅಜ್ಜಿ ! ಇರು ! ನಾನೂ ಬಂದೆ!" ಪುಟ್ಟಣ್ಣನೂ  ಬಿರ ಬಿರನೆ ಬಂದು ಕುಳಿತ.    

ಅಜ್ಜಿ ಮುಂದಿನ ಕಥೆ ಓದ ತೊಡಗಿದಳು . 

                                     


ಯೋಚಿಸಿ ನೋಡಿದ ಹುಲಿಯಣ್ಣ 
ಹೋಗಲು ಬಿಟ್ಟಿತು ಸುಬ್ಬರಾಯನನ್ನಾ !
''ಕಾಡಲ್ಲೇ ಕಾಯುವೆ ನಿನಗಾಗಿ, 
ಮರೆಯದೆ ತಾ ವಡೆ ನನಗಾಗಿ !"
''ಕಂಡಿತ ತರುವೆ ಹುಲಿಯಣ್ಣಾ !"
ಎನ್ನುತ ಕುಣಿದೋಡಿದ ಸೂಜಿ ಸುಬ್ಬಣ್ಣಾ !
                                   


ಜುಳು ಜುಳು ಹರಿದಿತ್ತು ಹೊಳೆಯೊಂದು,  
ಹಟಾತ್ತನೆ ಹೊರಬಿತ್ತು ಮಕರವೊಂದು !
" ಯಾರದು ಹೊಳೆಯತ್ತ ಬಂದಿರುವೆ ?
    ನಾನೀಗ ನಿನ್ನನು ಕಬಳಿಸುವೆ  !"
                                                 

   ನಗು ಮುಖದಿಂದ ಅಂಜದ ಜಾಣನು 
  ನಾನೇ ಸೂಜಿ ಸುಬ್ಬ ರಾಯನೆಂದನು !
  " ಅಜ್ಜಿ ನನಗಾಗಿ ಕಾದಿರುವಳು, 
  ಕಜ್ಜಾಯ ಉಸ್ಲಿ  ಕಡುನಗುಬು ಮಾಡಿರುವಳು!
  ಮೊಸಳೆ ಅಣ್ಣ ನನ್ನನ್ನೀಗ ತಿನ್ನದಿರು. 
 ತಿಂದು ಕೊಬ್ಬಿ ಬರುವ ನನ್ನ ಕಾಯುತಿರು!
  ಈ 'ಸೂಜಿ' ನೀನೀಗ ಕಬಳಿಸಿದ್ರೆ, 
  ಗಂಟಲಿಗೆ ಚುಚ್ಚಿಕೊಂಡು ಬಲು ತೊಂದರೆ !"
                                                



 ಯೋಚನೆ ಮೆಚ್ಚಿದ ಮೊಸಳೆ ಅಣ್ಣಾ 
 ಹೋಗಲು ಬಿಟ್ಟಿತು ಸುಬ್ಬ ರಾಯನನ್ನಾ !
" ಕಡುಬೊಂದು ತಂದು ಬಿಡು ನನಗಾಗಿ ,
   ಹೊಳೆಯಲ್ಲೇ ಕಾದಿರುವೆ ನಿನಗಾಗಿ !"
"ಕಂಡಿತ ತರುವೇ ಮೊಸಳೆಯಣ್ಣಾ !"
ಎನ್ನುತ ಜಿಗಿದೋಡಿದ ಸೂಜಿ ಸುಬ್ಬಣ್ಣಾ !


"ಆಮೇಲೇನಾಯಿತು ಅಜ್ಜಿ ?" 

" ಆಮೇಲೆ ಸಶೇಷ !" ನಗತ್ತ ನುಡಿದು  ಎದ್ದಳು ಅಜ್ಜಿ . 

No comments:

Post a Comment