ಕಾಯಿ ಕಡುಬಿನ ಕಥೆ - ಬಾಗ ೨
"ಏನಾಯ್ತು ಅಜ್ಜಿ ? " ಪುಟ್ಟಿ ಕುತೂಹಲದಿಂದ ಪ್ರಶ್ನಿಸಿದಳು .
"ಸಿಹಿ ಸಿಹಿ ಕಡುಬು , ಘಮ ಘಮ ಕಡುಬು ಕಂಡ್ರೆ ನೀನೆನ್ಮಾಡ್ತಿ ಹೇಳು ?"
" ಜೊಲ್ಲು ಸುರಿಸ್ತಿನಿ ! ಆಮೇಲೆ ಅಮ್ಮನ್ನ ಕೇಳ್ಕೊಂಡು ತಿಂತೀನಿ ! "
" ಹಾಂ ! ನೀನು ಏನೇ ಆದ್ರೂ ಜಾಣ ಮರಿ ಅಲ್ವೇ ? ಆದ್ರೆ ನಮ್ ತುಂಟಮರಿ ಮಾಡಿದ್ದೇನು ಗೊತ್ತೇ ?"ಎನ್ನುತ್ತ ಅಜ್ಜಿ ಕಥೆ ಮುಂದುವರಿಸಿದಳು.
ಅಮ್ಮನ ಮಾತು ನೆನಪಿಗೆ ಬಂದಿತು. 'ಸರಿ ! ನೋಡಿದ ಮಾತ್ರಕ್ಕೆ ಏನು ತಪ್ಪಾದೀತು ?' ಎಂದುಕೊಂಡಳು. ಡಬ್ಬಿಯ ಮುಚ್ಚಳ ತೆರೆದು ಒಳಗಿದ್ದ ಮೃದುವಾದ ರಸಭರಿತ ಕಡುಬುಗಳನ್ನು ನೋಡಿದಳು .
ಅಮ್ಮನ ಮಾತು ನೆನಪಾಯಿತು.' ಸರಿ!ಮುಟ್ಟಿದ ಮಾತ್ರಕ್ಕೆ ಏನು ತಪ್ಪಾದೀತು?' ಎಂದುಕೊಂಡಳು. ಬಿಸಿಯಾಗಿ, ಮೃದುವಾಗಿ , ಘಮ ಘಮಿಸಿದ ಒಂದು ಕಡುಬನ್ನು ಕೈಗೆತ್ತಿಕೊಂಡಳು !
ಅಮ್ಮನ ಮಾತು ನೆನಪಿಗೆ ಬಂದಿತು. 'ಸರಿ ! ನೋಡಿದ ಮಾತ್ರಕ್ಕೆ ಏನು ತಪ್ಪಾದೀತು ?' ಎಂದುಕೊಂಡಳು. ಡಬ್ಬಿಯ ಮುಚ್ಚಳ ತೆರೆದು ಒಳಗಿದ್ದ ಮೃದುವಾದ ರಸಭರಿತ ಕಡುಬುಗಳನ್ನು ನೋಡಿದಳು .
ಅಮ್ಮನ ಮಾತು ನೆನಪಾಯಿತು.' ಸರಿ!ಮುಟ್ಟಿದ ಮಾತ್ರಕ್ಕೆ ಏನು ತಪ್ಪಾದೀತು?' ಎಂದುಕೊಂಡಳು. ಬಿಸಿಯಾಗಿ, ಮೃದುವಾಗಿ , ಘಮ ಘಮಿಸಿದ ಒಂದು ಕಡುಬನ್ನು ಕೈಗೆತ್ತಿಕೊಂಡಳು !
ಅಮ್ಮನ ಮಾತು ಮತ್ತೆ ನೆನಪಾಯಿತು. 'ಚೂರೇ ಚೂರು ತಿಂದ ಮಾತ್ರಕ್ಕೆ ಏನು ತಪ್ಪಾದೀತು?' ಎಂದುಕೊಂಡವಳೇ ಒಂದು ಚೂರು ಕಡುಬನ್ನು ರುಚಿ ನೋಡಿದಳು. ಮರುಕ್ಷಣ ಇಡೀ ಕಡುಬು ಅವಳ ಬಾಯೊಳಕ್ಕೆ ಮಾಯವಾಯಿತು !
ಮತ್ತೆ ಅಮ್ಮನ ಮಾತು ನೆನಪಾಯಿತು. 'ಬೇಕಾದಷ್ಟು ಕಡುಬುಗಳಿವೆ . ಎರಡೇ ಎರಡು ತಿಂದ ಮಾತ್ರಕ್ಕೆ ಏನು ತಪ್ಪಾದೀತು?' ಎಂದುಕೊಂಡವಳೇ ಇನ್ನೂ ಎರಡು ಕಡುಬುಗಳನ್ನು ಲಗಾಯಿಸಿದಳು !
ಹೀಗಾಗಿ 'ಎರಡೇ ಎರಡು, ಮತ್ತೆರಡು , ಇನ್ನೂ ಎರಡೇ ಎರಡು' ಎಂದು ಸವಿ ಕಡುಬುಗಳನ್ನು ತಿನ್ನುತ್ತಲೇ ಹೋದಳು .
ಕಡೆಗೆ ಡಬ್ಬಿಯಲ್ಲಿ ಒಂದೇ ಒಂದು ಕಡುಬು ಮಾತ್ರ ಉಳಿದಿತ್ತು . ತುಂಟಮರಿಗೆ ಅಮ್ಮನ ಮಾತು ಮತ್ತೆ ನೆನಪಾಯಿತು. ಬಹಳ ಹೆದರಿಕೆಯೂ ಆಯಿತು . ಥಟ್ಟನೆ ಡಬ್ಬಿ ಮುಚ್ಚಿಟ್ಟು ಓಡಿಬಿಟ್ಟಳು .
ತುಂಟಮರಿ ಅವಸವಸರವಾಗಿ ಮುಚ್ಚಿದ್ದ ಕಾರಣ ಡಬ್ಬಿ ಅರ್ಧಂಬರ್ದ ತೆರೆದೇ ಇತ್ತು. ಅದರಿಂದ ಹೊರಟ ಕಡುಬಿನ ಸ್ವಾಧ ಒಂದು ಇಲಿಯನ್ನು ಆಕರ್ಷಿಸಿತು. ಡಬ್ಬಿಯತ್ತ ಧಾವಿಸಿ ಬಂದ ಇಲಿ, ಸಡಿಲವಾಗಿದ್ದ ಮುಚ್ಚಳವನ್ನು ತನ್ನ ಮೂಗಿನಿಂದ ನೂಕಿ ತೆರೆಯಿತು !
'ಆಆಆಃಃ ! ಎಂತ ಸೊಗಸಾದ ದಪ್ಪ ಕಡುಬು !' ತನ್ನ ಮೂಗನ್ನು ಡಬ್ಬಿಯೊಳಗೆ ತೂರಿಸಿ ಕಡುಬನ್ನು ಸವಿಯ ತೊಡಗಿತು ಇಲಿ.
ಇದಕ್ಕಿದ್ದಹಾಗೆ ಮುಚ್ಚಳ ಜಾರಿ ಡಬ್ಬಿ ತಾನಾಗಿಯೇ ಮುಚ್ಚಿಕೊಂಡಿತು . ಇಲಿ ಡಬ್ಬಿಯೊಳಗೆ ಸಿಕ್ಕಿಬಿದ್ದಿತು !
ಅಂದು ಸಂಜೆ ಪೂಜೆಯ ವೇಳೆಗೆ ಅಮ್ಮ ತನ್ನ ಮಕ್ಕಳನ್ನು ಕುರಿತು ಹೇಳಿದಳು :
" ಹುಡುಗಿಯರೇ ! ಯಾರಾದರೊಬ್ಬರು ಹೋಗಿ ದೇವರಿಗೆ ಅರ್ಪಿಸಲು ನಾಲ್ಕು ಕಡುಬುಗಳನ್ನು ತನ್ನಿ !"
ಜಾಣಮರಿ ಒಂದು ತಟ್ಟೆ ಹಿಡಿದು ಒಳಕ್ಕೆ ಹೋದಳು . ಮುಚ್ಚಳವನ್ನು ತೆರೆದವಳು ಕಡುಬಿಗೆ ಬದಲಾಗಿ ಡಬ್ಬಿಯಲ್ಲಿ ಮಲಗಿದ್ದ ಇಲಿಯ ಆಕಾರವನ್ನು ಕಂಡು ಆಶ್ಚರ್ಯದಿಂದ ಕಣ್ಣಗಲಿಸಿದಳು. ತಬ್ಬಿಬ್ಬಾಗಿ ಕೂಡಲೇ ಡಬ್ಬಿ ಮುಚ್ಚಿ ಹಿಂತಿರುಗಿ ಓಡಿದಳು .
"ಅಯ್ಯಯ್ಯೋ ! ಆಮೇಲೆ ?" ಎಂದಳು ಪುಟ್ಟಿ .
No comments:
Post a Comment