Saturday, May 17, 2014

Kaayi Kadubina Kathe / ಕಾಯಿ ಕಡುಬಿನ ಕಥೆ - The Dumpling Story

ಕಾಯಿ ಕಡುಬಿನ ಕಥೆ - ಬಾಗ ೩
" ಕಡುಬಿಗೆ ಬದ್ಲು ಡಬ್ಬೀಲಿ  ಇಲೀನ್  ಕಂಡ ಜಾಣಮರಿಗೆ ಏನೇನೋ  ಅನುಮಾನ ! ಅಮ್ಮನ್ನ ಕೇಳಕ್ಕೆ  ಓಡ್ತು !"ಎಂದು ಮುಂದುವರಿಸಿದಳು ಅಜ್ಜಿ . 
" ಅಮ್ಮಾ ಅಮ್ಮ ! ಕಾಯ್ ಕಡುಬಿಗೆ ಬಾಲ ಉಂಟೇನು ?"
" ಬಾಲವೂ ಇಲ್ಲ ಏನಿಲ್ಲ ! ಕಡುಬಿನ  ತುದಿಯ ಜುಟ್ಟು ಬಾಲದ ಹಾಗೆ ಕಂಡಿರಬೇಕು  !ಹೋಗೆ ಹುಚ್ಚಮ್ಮ ! ಹೋಗಿ ಕಡುಬನ್ನು ತಾ !"


ಜಾಣ ಮರಿ ಮತ್ತೆ ಒಳಗೆ ಹೋದಳು. ಆದರೆ ಕೂಡಲೇ ಹಿಂದಿರುಗಿದಳು. 
" ಅಮ್ಮಾ ಅಮ್ಮ ! ಕಾಯ್ ಕಡುಬಿಗೆ ಕಾಲು ಉಂಟೇನು ?"
" ಕಡುಬಿಗೆ ಕಾಲೇ ? ಅಯ್ಯೋ ಹುಚ್ಚಮ್ಮ ! ಕಣಕ ಎಲ್ಲೋ ಹರಿದಿರಬೇಕು ! ಬೇಗ ಹೋಗಿ ಕಡುಬನ್ನು  ತಾ !"


ಜಾಣಮರಿ ಮತ್ತೆ ಒಳಗೆ ಹೋಗಿ ಕೂಡಲೇ ಹಿಂದಿರುಗಿದಳು . 
" ಅಮ್ಮಾ ಅಮ್ಮ ! ಕಾಯ್ ಕಡುಬಿಗೆ ಮೂಗು ಉಂಟೇನು ?"
" ಕಡುಬಿಗೆ ಮೂಗೇ ? ಹೋಗೆ ಹುಚ್ಚಮ್ಮ ! ಕಣಕ ಎಲ್ಲೋ ಇಷ್ಟು ಹೆಚ್ಚಾಗಿದ್ದಿರ ಬೇಕಷ್ಟೇ ! ಬೇಗ ಹೋಗಿ ಕಡುಬನ್ನು ತಾ !"

ಜಾಣಮರಿ ಮತ್ತೆ ಒಳಗೆ ಹೋದಳು. ಕೂಡಲೇ ಹಿಂದಿರುಗಿದಳು. 
" ಅಮ್ಮಾ ಅಮ್ಮ ! ಕಾಯ್ ಕಡುಬಿಗೆ ಕಣ್ಣು ಉಂಟೇನು?"
" ಕಣ್ಣೂ ? ಹೋಗೆ ಪೆದ್ದಮ್ಮ ! ಹೂರಣ ತುಂಬುವಾಗ ಎಲ್ಲೋ ತೂತಾಗಿರಬೇಕು ! ಕೂಡಲೇ ಹೋಗಿ ಕಡುಬನ್ನು ತಾ !"


ಜಾಣಮರಿ ಮತ್ತೆ ಒಳಗೆ ಹೋಗಿ ಕೂಡಲೇ ಹಿಂದಿರುಗಿದಳು . 
"ಅಮ್ಮಾ ಅಮ್ಮ ! ಕಾಯ್ ಕಡುಬಿಗೆ ಕಿವಿಗಳುಂಟೇನು ?"
"ಕಿವಿಗಳೇ? ಸರಿಹೋಯಿತು ! ಕಣಕವನ್ನ ಎಲ್ಲೋ  ಸ್ವಲ್ಪ ಹೆಚ್ಚು ಕಮ್ಮಿ   ಮಡಿಚಿರಬೇಕು ! ಬೇಗ ನಡಿ ! ಕಡುಬನ್ನು ತಾ !''


" ಪಾಪ ಜಾಣಮರಿ ! ಅವ್ಳಮ್ಮನ್ಗೆ  ನಿಜ ಸಂಗ್ತಿ  ಗೊತ್ತಾಗ್ಲೇ ಇಲ್ವಾ ?" ಎಂದು  ಅನುಕಂಪದಿಂದ ಕೇಳಿದಳು ಪುಟ್ಟಿ . 

No comments:

Post a Comment