Tuesday, June 5, 2018

ಡೈನೋಸರ್ ಲೋಕದಲ್ಲಿ ಅದ್ದು ! - 2 / Addu in Dinosaur Land - 2

ಡೈನೋಸರ್ ಲೋಕದಲ್ಲಿ ಅದ್ದು ! 
ಅಧ್ಯಾಯ  2


 ಅದ್ದು ಗಕ್ಕನೆ ಕಣ್ಣು ತೆರೆದಳು. 
ಥಟ್ಟನೆ ಎದ್ದು ಕುಳಿತು ಕಿಟಕಿಯ ಕಡೆ ನೋಡಿದಳು. 
ಮತ್ತೆ 'ಕಟ ಕಟ' ಶಬ್ದವಾಯಿತು. ಅದ್ದು ಮೆಲ್ಲನೆ ಮಂಚದಿಂದ ಇಳಿದು ಕಿಟಕಿಯ ಬಳಿ ನಡೆದು ಪರದೆ ಸರಿಸಿ ನೋಡಿದಳು. ಕತ್ತಲಲ್ಲಿ ನೆರಳಿನಂತೆ ನಿಂತಿದ್ದ ಆಕಾರ ಕಂಡಿತು. ಅದ್ದುವಿನ ಮುಖದಲಿ ದೊಡ್ಡ ನಗೆಯರಳಿತು.
" ವೃದ್ಧಿ! "
ವೃದ್ಧಿ ತುಟಿಯ ಮೇಲೆ ಬೆರಳಿಟ್ಟು ' ಶ್ ....ಶ್!' ಎಂದು ಸನ್ನೆ ಮಾಡಿದಳು.
ಅದ್ದು ಸದ್ದಿಲ್ಲದೇ  ಕಿಟಕಿಯನ್ನು ತೆರೆಯಲು ಕಂಬಿ ಇಲ್ಲದ ಕಿಟಕಿಯ ಮೂಲಕ ವೃದ್ಧಿ ಮೆಲ್ಲನೆ ಅದ್ದುವಿನ ಕೋಣೆಯೊಳಕ್ಕೆ ಜಿಗಿದಳು.
'' ವೃದ್ಧಿ! ಯಾಕೆ ಇಷ್ಟು ದಿನ ಬರಲಿಲ್ಲ? " ಅದ್ದು ವೃದ್ಧಿಯ ಕೈ ಹಿಡಿದು ಮಂಚದ ಮೇಲೆ ಕೂರಿಸುತ್ತ ಕೇಳಿದಳು.
" ಇಂಡಿಯಾಗೆ ಹೋಗಿದ್ದೆ! "
"ಇಂಡಿಯಾಗಾ?" ಎನ್ನುತ್ತ ಅದ್ದು ಅವಳ ಪಕ್ಕ ಕುಳಿತಳು.
" ಅಲ್ಲಿ ಬೆಂಗಳೂರಿಗೆ  ಹೋಗಿದ್ದೆ! "
" ಬೆಂಗಳೂರಲ್ಲಿ  ನನ್ನ ಅಜ್ಜಿ ಇದ್ದಾರಲ್ಲಾ !"
" ಅವರನ್ನೂ ನೋಡ್ದೆ! ನಿನ್ನ ಅಜ್ಜಿ ನಿನ್ನನ್ನ ಎಷ್ಟು ಜ್ಞಾಪಿಸ್ಕೊಂಡ್ರು  ಗೊತ್ತಾ? "
" ಅಜ್ಜಿಯನ್ನ ಮಾತಾಡಿಸಿದ್ಯಾ? ನನ್ನ ಸ್ಕೂಲ್ ಬಗ್ಗೆ ಎಲ್ಲ ಹೇಳಿದ್ಯಾ? " ಅದ್ದು ಕುತೂಹಲದಿಂದ ಕೇಳಿದಳು.
" ಅದು ಹೇಗೆ ಸಾಧ್ಯ ಅದ್ದು? ನಿನಗೇ ಗೊತ್ತು! ನಾನು ನನ್ನಂತಾ ಮಕ್ಕಳಿಗೆ ಮಾತ್ರ ಫ್ರೆಂಡ್! "
" ಓ! ಹೌದು! ನೀನು ಮಕ್ಕಳ ಸ್ಪೆಷಲ್  ಫ್ರೆಂಡ್ ಅಲ್ವ? "
ವೃದ್ಧಿ ನಕ್ಕಳು.
" ಬೆಂಗಳೂರಿಗೆ  ಹೋಗಿ ಏನು ಮಾಡ್ದೆ? "
" ನಿನ್ನ ಹಾಗೆ  ಅಲ್ಲೊಂದು ಫ್ರೆಂಡ್! ಅದಿತಿ ಅಂತ ಅಲ್ಲಿದ್ದಾಳೆ ! ಅವಳನ್ನ ತಾರಾ ಲೋಕಕ್ಕೆ ಕರಕೊಂಡು ಹೋಗಿದ್ದೆ."
" ಇಲ್ಲಿ ಸಿಡ್ನಿಯಿಂದ ಅಷ್ಟು ದೂರದಲ್ಲಿರೋ ಬೆಂಗಳೂರಲ್ಲೂ ನಿನಗೆ ಫ್ರೆಂಡ್ ಇದ್ದಾಳಾ?!"
" ನನಗೆ ಪ್ರಪಂಚದ ಎಲ್ಲ ಕಡೆಯೂ ಫ್ರೆಂಡ್ಸ್ ಇದ್ದಾರೆ ಅದ್ದು! "
"ಸಿಯಾ, ಮಾಯಾ ಅಂತ ಅಮೇರಿಕಾದಲ್ಲಿ  ನನ್ನ ಮಾವನ ಮಕ್ಕಳಿದ್ದಾರೆ ! ಅವರನ್ನೂ ನಿನಗೆ ಗೊತ್ತೇ? " 
" ಹೌದು! ಹೋದ ತಿಂಗಳುತಾನೆ ಅವರಿಬ್ಬರನ್ನೂ  ಹಿಮಯುಗಕ್ಕೆ ಕರಕೊಂಡು ಹೋಗಿದ್ದೆ! "
"ವೃದ್ಧಿ! ನಾನೂ ನೀನೂ ಸುತ್ತಾಡಕ್ಕೆ  ಹೋಗಿ ಎಷ್ಟು ದಿನಗಳಾಗಿಬಿಟ್ಟವು! ಎಲ್ಲಿಗಾದ್ರೂ  ಹೋಗೋಣವೆ? "
" ಓ! ನೀನೇ  ಹೇಳು ಎಲ್ಲಿಗೆ ಹೋಗೋಣ? "
" ಡೈನೋಸರ್ ದೇಶಕ್ಕೆ ಹೋಗೋಣ! " ಅದ್ದುವಿನ ಕಣ್ಣುಗಳು ಮಿಂಚಿದವು.
" ಓ! ಜುರಾಸಿಕ್ ಯುಗ! ನಿನಗೆ ಭಯವಾಗಲ್ವೆ ಅದ್ದು? "
"ಊಂಹೂಂ! ನನಗೆ ಡೈನೋಸರ್ ತುಂಬಾ ಇಷ್ಟ! ನೋಡು ಇವತ್ತು ಈಸ್ಟರ್ ಷೋದಲ್ಲಿ  ಡೈನೋಸರ್ ಷೋ ಬ್ಯಾಗನ್ನೇ ತಗೊಂಡೆ! " ತನ್ನ ಬ್ಯಾಗನ್ನು ಹೆಮ್ಮೆಯಿಂದ ವೃದ್ಧಿಗೆ ತೋರಿಸಿದಳು ಅದ್ದು.
" ಓ! ತುಂಬಾ ಚೆನ್ನಾಗಿದೆ! " ಎಂದ ವೃದ್ಧಿ, " ಸರಿ ಹಾಗಾದ್ರೆ! ಬೇಗ ರೆಡಿಯಾಗು! " ಎಂದಳು.
ಅದ್ದು ಚಟಪಟನೇ ಬಟ್ಟೆ ಬದಲಿಸಿಕೊಂಡಳು. ಕಾಲಿಗೆ ಬೂಟು ತೊಟ್ಟಳು.
" ರೆಡಿನಾ?" ವೃದ್ಧಿ ಹೊರಡಕ್ಕೆ ಸಿದ್ಧವಾದಳು.
 " ಇರು! ಇರು! ನನ್ನ ಬ್ಯಾಂಡ್ ಏಯ್ಡ್ ಪ್ಯಾಕೆಟ್  ತಗೋಬೇಕು!"
ಅದ್ದು ಬ್ಯಾಂಡ್ ಏಯ್ಡ್ ಪ್ಯಾಕೆಟನ್ನು ತನ್ನ ಬೆನ್ನಚೀಲದಲ್ಲಿ ತುರುಕಿದಳು. ಹ್ಯಾಂಡ್ ವಾಷ್,  ಕೈ ಒರೆಸುವ ಟಿಶ್ಯೂಸ್, ಒಂದು ಬಾಚಣಿಗೆ, ಟೂತ್ ಪೇಸ್ಟ್, ಸೋಪು ಮೊದಲಾದ ಇನ್ನೂ ಅನೇಕ ವಸ್ತುಗಳಿದ್ದ ಆ ಚೀಲವನ್ನು ಬೆನ್ನ ಮೇಲೆ ಏರಿಸಿಕೊಂಡಳು.
'' ನಾನು ರೆಡಿ!"
" ಸರಿ! ಬಾ!"
ವೃದ್ಧಿ ಅದ್ದುವಿನ ಕೈಹಿಡಿದುಕೊಂಡಳು. ಇಬ್ಬರೂ ಕಿಟಕಿಯಾಚೆ ದುಮುಕಿದರು. ವೃದ್ಧಿ ತನ್ನ ಬೆನ್ನಚೀಲದಿಂದ ಒಂದು ಮಂತ್ರದ ಕೋಲನ್ನು ಹೊರ ತೆಗೆದಳು. ಕೂಡಲೇ ಒಂದು ಪ್ರಭಾ ವಲಯ ಅವಳನ್ನು ಸುತ್ತಿಕೊಂಡಿತು. ಕೋಲಿನ ಒಂದು ತುದಿಯನ್ನ ವೃದ್ಧಿ ಹಿಡಿದುಕೊಂಡಳು. ಮತ್ತೊಂದು ತುದಿಯನ್ನು ಅದ್ದುವಿನ ಬಳಿ ಚಾಚಿದಳು.
"ಅದ್ದು! ಆ ತುದಿಯನ್ನ ಭದ್ರವಾಗಿ ಹಿಡಿದುಕೊ! ಇನ್ನೇನು ಹೊರಡೋಣ!"
ಅದ್ದು ಕೋಲಿನ ತುದಿಯನ್ನು ಗಟ್ಟಿಯಾಗಿ ಹಿಡಿದುಕೊಂಡಳು. ಕೂಡಲೇ ಎಲ್ಲಿಂದಲೋ ಬಂದ  ಸುಂಟರಗಾಳಿ  ಅವರಿಬ್ಬರನ್ನೂ ಬಾಚಿ ಎತ್ತಿಕೊಂಡು ಹೋಗಿ ಆಕಾಶ ಮುಟ್ಟಿಸಿ ಹೋಯಿತು.
ಶಾಂತವಾದ ಆಕಾಶದಲ್ಲಿ ಇಬ್ಬರೂ ತೇಲತೊಡಗಿದರು.
ಅದ್ದುವಿಗೆ  ರೋಮಾಂಚನವಾಯಿತು. ತಣ್ಣನೆಯ ಗಾಳಿಯಲ್ಲಿ ಆಕಾಶದಲ್ಲಿ ತೇಲಿ ಹೋಗುವುದು ಬಹಳ ಖುಷಿ ಕೊಟ್ಟಿತು. ಅಡವಿಗಳನ್ನೂ ಬೆಟ್ಟ ಗುಡ್ಡಗಳನ್ನೂ ನದಿಗಳನ್ನೂ ಕಾಡುಗಳನ್ನೂ ಸಮುದ್ರಗಳನ್ನೂ ದಾಟಿ ಹಾರಿ ಹಾರಿ ತೇಲಿ ತೇಲಿ ಹೋಗುತ್ತಿದ್ದರು ಅದ್ದು ಮತ್ತು ವೃದ್ಧಿ.

                                                                                                                          ಆಮೇಲೆ ....... 
--------------------------------------------------------------------------------------------------


ADDU IN DINOSAUR LAND!
Chapter 2


Addu woke up with a start.
She sat up and looked towards the window.
There was an urgent tapping again. Addu walked towards the window and parted the curtain.
Behind the glass was a shadowy figure….
Addu broke into a huge smile !
“Vriddhi !”
“Shhh….” Signalled Vriddhi , as she silently slid into the room through the window Addu opened for her.
“Vriddhi ! Why dint you visit me for so long?”
“Sorry,  I was away in India” Said Vriddhi, “ I visited Bangalore!”
“Bangalore! “Clapped Addu in joy “That’s where my Grandma lives!”
“ I saw her too. Grandma misses you very much”
“Did you talk to her and tell her about my school?”
“ How can I !”Smiled Vriddhi  “You know very well that I am a Friend of only little kids like you!”
“ Oh yes ofcourse! You are  The Special Friend of  Children ….What did you do in Bangalore?”
“There is a girl  named Adithi in Bangalore just like you and I am her Special Friend too! I had taken her to The Milky Way …..I have Friends all over the world …..”
“ Are my cousins, Sia and Maya , in America , your friends too?”
“ Yes, they are! and a month ago, I had taken them on a trip to the Ice Age!”
“ But you  have not taken me on a picnic for a long time, Vriddhi !”
sulked Addu.
“Here I am  to take you!” Vriddhi laughed merrily “Tell me where you want to go!”
“I want to go to Dinosaur Land !”
“ Alright! So we will go to Jurassic Era today!  Are you sure you will not be afraid of Dinosaurs ?”
“ No! No! I love Dinos. ….Look at  this Dino bag I bought. And so many Dino toys  too !”
“Lovely! So, get ready now ! Lets go !”
Excited, Addu changed her dress and slipped into boots.
“Ready?” asked Vriddhi.
“Just a moment! I need to pack my band-aids…..” She opened  her back pack and quickly stuffed in a packet of band-aids, a hand sanitiser, tissues,  comb, tooth paste, soap and a few other things and slung it on her back.
“Ready !!!”
Holding hands, they both jumped out of the window.
Vriddhi took out a magic wand from her back pack and held it up. A glowing golden Halo spread around her.
“Hold this” She said and Addu took hold of one end of the wand while Vriddhi held the other end.
A sudden gust of whirling wind sucked up the girls and carried them away  to the sky…..and  left them floating in space.
It was so enjoyable, floating in cool space!  
Higher and higher they floated away, leaving the mountains and seas and jungles and rivers far,  far behind them. 
                                                                  
                                                                To be continued............                                                             

1 comment:

  1. Sia and Maya are very excited to be part of this story.

    Love,
    ARam

    ReplyDelete