Sunday, June 10, 2018

ಡೈನೋಸರ್ ಲೋಕದಲ್ಲಿ ಅದ್ದು! - 7 / Addu in Dinosaur Land - 7

ಡೈನೋಸರ್ ಲೋಕದಲ್ಲಿ ಅದ್ದು!
ಅಧ್ಯಾಯ 7



ಗಾಲಾ ಹಕ್ಕಿಗಳ ಚಿಲಿಪಿಲಿ ಕೇಳಿ  ಕಣ್ಣು ಬಿಟ್ಟ ಅದ್ವಿಕಾ  ಹಾಸಿಗೆಯಿಂದ ಎದ್ದು ಕಿಟಕಿಯ ಬಳಿ ಓಡಿದಳು.  ಹಸಿರು ಹುಲ್ಲಿನ ಹಾಸಿನ ಮೇಲೆ ಗಾಲಾ ಹಕ್ಕಿಗಳು ಹೆಕ್ಕಿ ಹೆಕ್ಕಿ ಏನನ್ನೋ ತಿನ್ನುತ್ತಿದ್ದವು. ಅಪ್ಪ ಮತ್ತು ಅಮ್ಮ ತೋಟದಲ್ಲಿದ್ದ ಗಿಡಗಳ  ಆರೈಕೆ ಮಾಡುತ್ತಿದ್ದರು. 
" ಅಪ್ಪಾ! ಅಮ್ಮಾ! ಬೇಗ ಬನ್ನಿ! ನಿಮಗೊಂದು ಸರ್ಪ್ರೈಸ್ ತೋರಿಸ್ತೀನಿ! " ಕಿಟಕಿಯ ಹೊರಕ್ಕೆ ತಲೆ ಹಾಕಿ ಕೂಗಿದಳು ಅದ್ದು. 
" ಓ ಎದ್ದೆಯಾ? ಗುಡ್ ಮಾರ್ನಿಂಗ್ ಮರಿ! " ಅಪ್ಪ ನೀರು ನಿಲ್ಲಿಸಿ  ಪೈಪನ್ನು ಸುರುಳಿ ಸುತ್ತುತ್ತ ನಗು ಮುಖದಿಂದ ಸುಪ್ರಬಾತ ಹೇಳಿದರು. 
" ಅದ್ದು! ಹೋಗಿ ಮುಖ ತೊಳಕೊಂಡು ಬಾ! ತಿಂಡಿ ತಿನ್ನುವಿಯಂತೆ! " ಎನ್ನುತ್ತಾ ಅಮ್ಮ ಗುಡಿಸಿದ ಒಣ ಎಲೆಗಳನ್ನೆಲ್ಲ ಕಸದ ಡಬ್ಬಿಗೆ ತುಂಬಿದಳು. 
" ಅಯ್ಯೋ! ಅದೆಲ್ಲ ಆಮೇಲೆ! ನಿಮಗೆ ಒಂದು ಸರ್ಪ್ರೈಸ್ ತಂದಿದ್ದೀನಿ! ಬೇಗ ಬನ್ನಿ, ತೋರಿಸ್ತೀನಿ! " ಎಂದವಳೇ ಕೋಣೆಯೊಳಕ್ಕೆ ತಿರುಗಿ ಓಡಿದಳು.  ಅಪ್ಪ ಅಮ್ಮ ಬರೋ ಮುನ್ನ ಬ್ರಾಂಟೋ ಕೊಟ್ಟ ಮೊಟ್ಟೆಯನ್ನು ತೆಗೆದು ತಯಾರಾಗಿ ಇಡಬೇಕು! ಎಲ್ಲಿ ನನ್ನ ಚೀಲ?
ಅದ್ದು ಸುತ್ತಮುತ್ತ ಕಣ್ಣಾಡಿಸಿದಳು. ಆಗೋ ನನ್ನ ಚೀಲ! ಅವಳು ಹೆಗಲ ಮೇಲೆ ಹಾಕಿಕೊಂಡಿದ್ದ  ಈ ಚೀಲದಲ್ಲೇ ಅಲ್ಲವೇ ಡೈನೋ ಮೊಟ್ಟೆಯನ್ನು ಭದ್ರವಾಗಿ ಇರಿಸಿ ತಂದಿದ್ದು?  ಅವಸರ ಅವಸರವಾಗಿ ಚೀಲವನ್ನು ತೆರೆದ ಅದ್ದು ದಿಗ್ಬ್ರಾಂತಳಾದಳು! 
" ಅದ್ದು! ಇನ್ನೂ ಮುಖ ತೊಳೀಲಿಲ್ವಾ? " ಅಮ್ಮ ಅವಳನ್ನು ಹುಡುಕಿ ಬಂದಾಗ ಅದ್ದುವಿಗೆ ತಡೆಯಲಾರದ ದುಃಖ ಉಕ್ಕಿ ಬರಿತ್ತಿತು. 
" ಅಮ್ಮ! ನನ್ನ ಚೀಲ ಕ್ಲೀನ್ ಮಾಡಿದ್ಯಾ? " 
" ನಾನೇನೂ ಕ್ಲೀನ್ ಮಾಡ್ಲಿಲ್ವಲ್ಲಾ? "
" ಮತ್ತೆ? ನಾನು ಅದ್ರಲ್ಲಿಟ್ಟಿದ್ದ ನನ್ನ ಸರ್ಪ್ರೈಸ್ ಕಾಣಿಸ್ತಿಲ್ಲ? " ಅದ್ದುವಿನ ಕಣ್ಣುಗಳಲ್ಲಿ ನೀರು ತುಳುಕಿತು. 
" ಮೊದ್ಲು ಮುಖ ತೊಳೆದು ತಿಂಡಿ ತಿನ್ನು! ಆಮೇಲೆ .... "
" ಮೊದ್ಲು ನನ್ಗೆ ಅದು ಬೇಕು! " ಎಂದು ಸ್ವರ ತೆಗೆದಳು ಅದ್ದು. 
" ಅದು ಅಂದ್ರೆ ಯಾವುದೇ ?" ಎಂದಳು ಅಮ್ಮ ಅಸಹನೆಯಿಂದ. 
" ಅದೇ! ಅಪ್ಪನ್ಗೂ ನಿನ್ಗೂ  ಸರ್ಪ್ರೈಸ್ ಕೊಡ್ಬೇಕು ಅಂದ್ಕೊಂಡ್ನಲ್ಲ! ಅದು ಕಾಣಿಸ್ತಿಲ್ಲ! " ಹೇಳುತ್ತಿದ್ದ ಹಾಗೆಯೇ ಅದ್ದು ಗಟ್ಟಿಯಾಗಿ ಅಳಲು ಶುರು ಮಾಡಿದಳು.
" ಬೆಳಗೆದ್ದು ಶುರು ಮಾಡಿದ್ಯಾ ರಾಮಾಯಣ? ಇನ್ನೊಂದು ತಿಂಗಳಾದ್ರೆ ಏಳು ವರ್ಷ ತುಂಬತ್ತೆ! ಇನ್ನೂ ಚಿಕ್ಕ ಮಗೂ ಹಾಗೆ ರಗಳೆ ಮಾಡ್ತಿಯ ! ನಡಿ ಮುಖ ತೊಳಿ! " 
ಬಲವಂತದಿಂದ  ಅಮ್ಮ ಅವಳನ್ನು ಹಲ್ಲುಜ್ಜಿಸಿ ಮುಖ ತೊಳೆಸಿದಾಗ ಅದ್ದು ಗಟ್ಟಿ ಸ್ವರದಲ್ಲಿ ಅಳುತ್ತಲೇ ಇದ್ದಳು. 
" ಅದ್ದೂ! ಬಾ ಮರಿ! ಏನು ಕಾಣಿಸ್ತಿಲ್ಲ ಹೇಳು! ಇಬ್ಬರೂ ಸೇರಿ ಹುಡುಕೋಣ! " ಎನ್ನುತ್ತಾ ಅಪ್ಪ ಅವಳನ್ನು ಎತ್ತಿ ತೊಡೆಯ ಮೇಲೆ ಕೂರಿಸಿಕೊಂಡು ಸಮಾಧಾನ ಮಾಡಿದರು. 
 "  ನೆನ್ನೆ ರಾತ್ರಿ ನಾನು ವೃದ್ಧಿ ಡೈನೋಸರ್ ದೇಶಕ್ಕೆ ಹೋಗಿದ್ವಿ.  ಆವಾಗ ಅಮ್ಮ ಬ್ರಾಂಟೋ ನನಗೆ ಕೊಡ್ತಲ್ಲ ಆ ಮೊಟ್ಟೆ ಕಾಣಿಸ್ತಾ ಇಲ್ಲ !"
" ಏನು ? ಡೈನೋಸರ್ ದೇಶಕ್ಕೆ ಹೋಗಿದ್ಯಾ ?" 
" ಹೌದು ಅಪ್ಪ! " ಎಂದ ಅದ್ದು, ತಾನು ವೃದ್ಧಿಯ ಜೊತೆ  ಆಕಾಶದಲ್ಲಿ ಹಾರಿ ಹೋದದ್ದು, ಬ್ರಾಂಟೋ ಮರಿಗಳನ್ನು ಕಂಡದ್ದು, ಟಿ ರೆಕ್ಸನಿಂದ  ತಪ್ಪಿಸಿಕೊಂಡದ್ದು, ಕೊನೆಯದಾಗಿ ಅಮ್ಮ ಬ್ರಾಂಟೋ ಅವಳಿಗೆ ತನ್ನ ಮೊಟ್ಟೆಯನ್ನು ಉಡುಗೊರೆಯಾಗಿ ಕೊಟ್ಟದ್ದು ಎಲ್ಲವನ್ನೂ  ಬಿಕ್ಕುತ್ತಲೇ ವಿವರಿಸಿದಳು.
" ಈಗ ಎಲ್ಲ ಅರ್ಥವಾಯಿತು! " ಎನ್ನುತ್ತಾ ಅಪ್ಪ ತನ್ನ ಮುಂದಿದ್ದ ಲ್ಯಾಪ್ ಟಾಪನ್ನು  ತೆರೆದರು. 
" ಇಲ್ನೋಡು ? ಇದನ್ನೇ ನೀನು  ನೋಡಿದ್ಯಾ? ಇದೇ ಮೊಟ್ಟೆಯನ್ನ ಕೊಡ್ತಾ?"  ಅಪ್ಪ ಕಂಪ್ಯೂಟರಲ್ಲಿ ಡೈನೋಸರ್ ಚಿತ್ರಗಳನ್ನು ಒಂದೊಂದಾಗಿ ತೋರಿಸಿ ಕೇಳಿದರು.  
ಅದ್ದು ಅಮ್ಮ ತಿನ್ನಿಸಿದ ದೋಸೆಯನ್ನು ನುಂಗುತ್ತ " ಹೌದಪ್ಪಾ ! ನಾನು ನೋಡಿದ್ದು ಇಂತದ್ದೇ ಬ್ರಾಂಟೋಸಾರಸ್ ! " ಎಂದು ಉತ್ತರಿಸಿದಳು. ಒಂದು ಲೋಟ ಹಾಲನ್ನೂ  ಕುಡಿದ ಮೇಲೆ ಅವಳು ಶಾಂತವಾದಳು. 
" ಅಪ್ಪ! ಬ್ರಾಂಟೋ ಮೊಟ್ಟೆ ಹುಡುಕೋಣ ಬಾ ! "
" ಇರು! ಇರು! ಒಂದು ಪ್ರಶ್ನೆಗೆ ಉತ್ತರ ಹೇಳು ಮೊದ್ಲು!"
" ಏನಪ್ಪಾ?" 
"ನೀನು ಇಲ್ಲಿ ಸಿಡ್ನಿಯಿಂದ ಬೆಂಗ್ಳೂರಲ್ಲಿರೋ ಅಜ್ಜಿ ಮನೆಗೆ ಹೋಗಕ್ಕೆ ಎಷ್ಟು ಟೈಮ್ ಆಗತ್ತೆ ಹೇಳು !"
" ತುಂಬಾ ಟೈಮ್ ಆಗತ್ತೆ!" ಎಂದಳು ಅದ್ದು. 
" ಸಿಡ್ನಿಯಿಂದ ಬೆಂಗಳೂರಿಗೆ ಪ್ಲೇನಲ್ಲಿ ಹೋಗಕ್ಕೆ ಹದಿಮೂರು ಗಂಟೆಗಳು  ಮತ್ತು ಹದಿನೈದು ನಿಮಿಷಗಳ ಕಾಲವಾಗತ್ತೆ! ಇಲ್ಲಿಗೂ ಅಲ್ಲಿಗೂ ಟೈಮ್ ವ್ಯತ್ಯಾಸ ಎಷ್ಟು ಗೊತ್ತೇ ? "
" ಟೈಮ್ ವ್ಯತ್ಯಾಸ ಅಂದ್ರೆ ? " ಎಂದಳು ಅದ್ದು.
" ನಮಗೆ ಇಲ್ಲಿ ಎಂಟು ಗಂಟೆ ಬ್ರೇಕ್ಫಾಸ್ಟ್ ಟೈಮ್. ಆದ್ರೆ  ಅಜ್ಜಿಗೆ ಇನ್ನೂ 
ಬೆಳಕೇ ಹರಿದಿಲ್ಲ. "
" ಹೌದಾ ಅಪ್ಪ ? ಅಜ್ಜಿ ಇನ್ನೂ ಮಲಗೇ ಇರ್ತಾಳಾ ?"
 " ಹೌದು ಮರಿ ! ನಾವು ಅಜ್ಜಿಯಿಂದ ಸುಮಾರು ಐದು ಗಂಟೆಗಳ ಕಾಲ ಮುಂದಿದ್ದೀವಿ !ಅಷ್ಟೇ ! ಹಾಗೂ ಅಜ್ಜಿಯ ಬಳಿ ಹೋಗಕ್ಕೆ ತುಂಬಾ ಟೈಮ್ ಹಿಡಿಸತ್ತೆ ಅಲ್ವೇ ?"
"ಹುಂ ! ಪ್ಲೇನಲ್ಲಿ ಕೂತು ಕೂತು ತುಂಬಾ ಬೇಜಾರಾಗತ್ತೆ!"
" ಅದೇ ರೀತಿ ನಾವು ಡೈನೋಸರ್ಗಳಿಂದ ಅದೆಷ್ಟೋ  ಮಿಲಿಯನ್ ಅಂಡ್ ಮಿಲಿಯನ್ ಗಂಟೆಗಳ  ಕಾಲ ಮುಂದಿದ್ದೀವಿ. ಹಾಗಾಗಿ ಅಲ್ಲಿಗೆ  ಹೋಗಕ್ಕೆ ಅದೆಷ್ಟೋ ಮಿಲಿಯನ್ ಗಂಟೆಗಳ ಟೈಮ್ ಬೇಕಾಗತ್ತೆ! ಅಲ್ವೇ ? " ಅಪ್ಪ ಅದ್ದುವಿನ ಮುಖವನ್ನೇ ನೋಡುತ್ತಾ ಕೇಳಿದರು. 
" ಹೌದಪ್ಪ! " 
" ಹಾಗಾದ್ರೆ ನೀನು ಒಂದೇ ರಾತ್ರಿಯಲ್ಲಿ ಅಷ್ಟು ದೂರ ಹೋಗಿ ಬಂದಿದ್ದು ಹೇಗೆ? "
ಅದ್ದು ಯೋಚಿಸಿದಳು. 
" ನೀನು  ವೃದ್ಧಿ ಜೊತೆ ಹೋಗಿದ್ದು, ಡೈನೋಸರ್ಗಳನ್ನ ನೋಡಿದ್ದು ಎಲ್ಲ ನಿಜವಲ್ಲ ಮರಿ! ಹಾಗೆ ಹೋಗಿದ್ದು ನಿನ್ನ ಕನಸಲ್ಲಿ!" ಎಂದರು ಅಪ್ಪ. 
" ಹೌದಾ ಅಪ್ಪಾ? ಎಲ್ಲ ಬರಿ ಕನಸೇ? "
" ಹೌದು ಮರಿ! ಬಹಳ ಸುಂದರವಾದ ಕನಸು!"
" ಬ್ರಾಂಟೋ  ಮೊಟ್ಟೆ ಕೊಡ್ತೂಂತ ಎಷ್ಟು ಖುಷಿಯಾಗಿದ್ದೆ!" ಎಂದಳು ಅದ್ದು ನಿರಾಶೆಯಿಂದ. 
" ನಿನ್ನ ಷೋ ಬ್ಯಾಗಲ್ಲಿ ಏನಿದೇ ಅಂತ ನೋಡ್ಲೇ ಇಲ್ವಲ್ಲ! ಬಾ  ನೋಡೋಣ! " ಅಮ್ಮ ಹೊಳಪಿನ ಷೋ ಬ್ಯಾಗನ್ನು ಅದ್ದುವಿನ ಕೈಗಿಟ್ಟು ಅವಳ ಗಮನ ತಿರುಗಿಸಿದಳು.
ಅದ್ದು ಬ್ಯಾಗಿನಿಂದ ಒಂದೊಂದೇ ಸಾಮಾನು ತೆಗೆದು ಮೇಜಿನಮೇಲಿಟ್ಟಳು.  
ಡೈನೋಸರ್ ಟೋಪಿ. 
ಡೈನೋಸರ್ ಡಿಜಿಟಲ್ ವಾಚ್. 
ರೂಪಾಂತರಗೊಳ್ಳುವಂತಹ ರಬ್ಬರ್ ಡೈನೋಸರ್. 
ಭಯಂಕರವಾಗಿ ಬಾಯಿ ಬಿಟ್ಟುಕೊಂಡಿದ್ದ ಒಂದು ಟಿ ರೆಕ್ಸ್. 
ಒಂದು ಪ್ಯಾಕೆಟ್ ತುಂಬ ಬಣ್ಣ ಬಣ್ಣದ ಪುಟ್ಟ ಡೈನೋಸರ್ಗಳು. 
ಕೊನೆಯದಾಗಿ ಹೊರತೆಗೆದ ವಸ್ತು ಕಂಡು ಅದ್ದು ಅಪ್ಪನ ತೊಡಯಿಂದ ಎಗರಿ ಇಳಿದು ಕುಣಿದಾಡ ತೊಡಗಿದಳು. 
"ಡೈನೋ ಮೊಟ್ಟೆ!"
ಗಾರೆಯಿಂದಾದ ಆ ಮೊಟ್ಟೆಯನ್ನು ಅದರ ಜೊತೆಯಲ್ಲೇ ಇದ್ದ ಸಣ್ಣ ಉಳಿಯಿಂದ ಕೊರೆದು ಕೊರೆದು ಕೆತ್ತಿ ಕೆತ್ತಿ ತೆಗೆದಾಗ ಒಳಗಿಂದ ಹೊರಬಂದಿತು ಒಂದು ನೀಲಿ ಬಣ್ಣದ ಪುಟಾಣಿ ಬ್ರಾಂಟೋಸಾರಸ್! 


" ಮರಿ! ಅಪ್ಪಾ! ಬ್ರಾಂಟೋ ಮರಿ! " ಎಂದು ಉತ್ಸಾಹದಿಂದ ಕೂಗಿದಳು ಅದ್ದು!

                                                                                                                               ಮುಗಿಯಿತು. 
------------------------------------------------------------------------------------------------------------------
ADDU IN DINOSAUR LAND
Chapter - 7


Addu woke up to  the chirping of Galah birds.
She opened the window drapes and saw the Galahs pecking for food on the fresh green lawn.
Her parents were busy gardening.
“ Appa ! Amma !   Called out Addu.  “ Come to my room ! I  have a Surprise for you !  
“ Good Morning , Dear !   Called out Appa , rolling up the hosepipe.
“ Addu ! Go brush your teeth ....I’ll get your breakfast   Said Mother , dumping the dry leaves she had swept up  into the garbage can.
But Addu was breathless with excitement.  “All that later, Amma ! Come see my Surprise first !  
She ran into the room, towards the bedside table, to fetch the Dino egg from her bag, before her parents came in.
Now , where was the bag ? .....oh, there it was , in the shelf below. Hadn’t she kept  the Dino Egg given by Mother Bronto safely in the pocket of the  bag .....?
She opened her backpack eagerly. And was shocked.
There was no Egg in the bag !
Where could it go ? How did it disappear ?
Tears filled her eyes.
“ Amma ! Did you clean out my bag ?   she demanded, as soon as her parents came into her room.
“ What bag ? ...... have you not brushed your teeth yet ?  
“ Whats the matter, dear ? Why are you crying  ? ” Asked Appa
“ It  has disappeared from my bag  !   Wailed Addu.
“ Brush your teeth and have  breakfast first ...your stories later !  
“No !  I want It now  !  
“ Stop acting like a baby, Addu, remember you  are going to be seven next month ! .....Enough of your tantrums ! ” Mother pulled her to the bathroom and got her teeth brushed.
Addu started wailing loudly.
“ Calm down, dear.   said Father kindly, “ what is that “IT”surprise, tell me ? ”
“ The Egg  that Mother Bronto gave me when Vriddhi  and I visited  Dinoland last night!   Sobbed Addu.
“ You visited Dinosaur  land ? ! 
“ Yes I did ! With Vriddhi !   angry and sobbing, Addu narrated everything about her adventure in Dinoland -  their flight in space, finding the Bronto Babies, escaping T.Rex, getting a gift of The Egg from  Mother Bronto .....
“ Ah , now I understand !   Said Father and he fetched his laptop.
“ Come here, my dear ....look at this !   he pointed to the laptop screen showing a page full of  pictures  of dinosaur species. “ Is this the one you  saw ?  He pointed to one.
“ Yes yes, I saw the Brontosaurs ....” replied Addu impatiently, as she swallowed the dosa pieces her mother fed her. “ Now let us search for the Egg.  
After she had eaten breakfast and drunk a glass of milk , Addu  was calmer.
“ Before we search, I want to ask you a few things.  
“ Yes, Appa ”
“ When we go from our home here in Sydney to visit Grandma in Bangalore,  how long does it take ?  
“ Too long ! I always get bored sitting in the plane.  
“ Yes. It takes 13 hours and 15 minutes to reach there. And do you know the time difference between here and there ?  
“ I don't know.  
“ About four and a half hours....For us its morning now. For grandma its still night! ”
“ Really ?  
“ Grandma is less than five hours away, yet we take so long to reach there. Dinosaurs are millions of years away, can we reach there in one night and return? ”
Addu looked confused. She thought hard.
Finally , she was very disappointed. “ So it was all just a dream ?! 
“ Yes. A lovely dream ! 
Mother smiled as she  took her hand and led her to the cupboard. “ Forget the dream , dear. ... Look , your show bag from the Easter Show is still unopened. Shall we look in to see what we got ? ”
Addu opened the shiny bag and started taking out the toys, one by one.
Dinosaur Cap. 
Dinosaur digital watch. 
Shape changing rubber dinosaur. 
A wicked looking red plastic T.Rex. 
A packet of  tiny assorted dinos of all colours. 
When the last item was taken out, Addu jumped up in excitement  !
It was a Fossil Hunter  kit containing a plaster dinosaur egg and a small plastic chisel-and-hammer set.
Spreading a sheet of paper on the floor, Addu started hammering on the plaster egg, chipping it away piece by piece.
Hidden inside it was a cute little blue baby dinosaur toy !


Addu  squealed and  clapped  her hands  in delight  !
“A Brontosaur Baby !”

                                                                       THE END

1 comment: