Thursday, June 7, 2018

ಡೈನೋಸರ್ ಲೋಕದಲ್ಲಿ ಅದ್ದು ! - 5 / Addu in Dinosaur Land! - 5

 ಡೈನೋಸರ್ ಲೋಕದಲ್ಲಿ ಅದ್ದು !
  ಅಧ್ಯಾಯ  5




ಬ್ರಾಂಟೋ ಮರಿಗಳು ಸ್ವಲ್ಪ ಹೊತ್ತು ಕಳೆದಮೇಲೆ ನಿದ್ದೆಯಿಂದ ಎಚ್ಛೆತ್ತುಕೊಂಡವು.
" ಚೆನ್ನಾಗಿ ನಿದ್ದೆ ಮಾಡಿದ್ರಾ? " ಎಂದು ಅದ್ದು ಅವನ್ನು ಸವರಿ ಮುದ್ದು ಮಾತನಾಡಿದಳು.
" ಸವರು! " ಎಂದು ಬೇಡುವಂತೆ ಮರಿಗಳು ಕುತ್ತಿಗೆಗಳನ್ನು ಅವಳ ಬಳಿ ಚಾಚಿದವು.
" ಮಳೆ ಬರತ್ತೋ ಏನೋ! ಗುಡುಗು ಶಬ್ದ ಕೇಳಿಸ್ತಿದೆ! ಆಲ್ವಾ ವೃದ್ಧಿ? "
ಅದ್ದುವಿನ ಪ್ರಶ್ನೆಗೆ ಉತ್ತರಿಸದೆ ವೃದ್ಧಿ ಗಮನವಿಟ್ಟು ಶಬ್ದವನ್ನು ಆಲಿಸಿದಳು.
" ಅಯ್ಯೋ! ಮತ್ತೆ ಟಿ ರೆಕ್ಸ್ ಬಂತೆ? ಹೇಳು ವೃದ್ಧಿ! " ಅದ್ದು ಗಾಬರಿಗೊಂಡಳು.
ಬ್ರಾಂಟೋ ಮರಿಗಳು ಯಾಕೋ ಅತ್ತಿಂದಿತ್ತ ಇತ್ತಿಂದತ್ತ ಕೊರಳು ಚಾಚಿ ಚಡಪಡಿಸಿದವು. ಗುಹೆಯಿಂದ ಹೊರಕ್ಕೆ ಹೋಗಲು ಆತುರಗೊಂಡವು.
" ತಡಿರೀ! ತಡಿರೀ! ಹೊರಗೆ ಏನು ಅಪಾಯ ಕಾದಿದ್ಯೋ! " ಎನ್ನುತ್ತಾ ಅದ್ದು ಮರಿಗಳನ್ನು ಸಮಾಧಾನಗೊಳಿಸಿದಳು. ಆದರೂ ಬ್ರಾಂಟೋ  ಮರಿಗಳನ್ನ ತಡೆಯುವುದು ಅಸಾಧ್ಯವಾಯಿತು.  ವೃದ್ಧಿ ಗುಹೆಯಿಂದ ಮೆಲ್ಲನೆ ಹೊರಗೆ ಇಣುಕಿದಳು. ಗುಡುಗು ಶಬ್ದ ಹತ್ತಿರವೇ ಕೇಳಿಸಿತು.
" ಬೇಡ ವೃದ್ಧಿ! ಹೊರಗೆ  ತಲೆ ಹಾಕ್ಬೇಡ! "
"ಉಶ್!" ಅದ್ದುವನ್ನು ಎಚ್ಚರಿಸಿದಳು ವೃದ್ಧಿ. ನಂತರ ಗುಹೆಯಿಂದಾಚೆ ಬೆರಳು ಮಾಡಿ ತೋರಿಸಿದಳು.
ಅದ್ದು ವೃದ್ಧಿಯ ಹಿಂದೆ  ಹೋಗಿ ನಿಂತು ಹೊರಗೆ ಇಣುಕಿದಳು. ಆಶ್ಚರ್ಯದಿಂದ ಅವಳ ಕಣ್ಣುಗಳು ದೊಡ್ಡದಾದವು.
ಸ್ವಲ್ಪ ದೂರದಲ್ಲಿ ತನ್ನ ಉದ್ದವಾದ ಕುತ್ತಿಗೆಯನ್ನು ಅತ್ತಿತ್ತ ತಿರುಗಿಸಿ ನೋಡುತ್ತ ನಿಂತಿತ್ತು ಎತ್ತರವಾದ ಬೃಗದಾಕಾರವಾದ  ಬ್ರಾಂಟೋಸಾರಸ್ !  
ಅದ್ದುವನ್ನೂ ವೃದ್ಧಿಯನ್ನೂ ಪಕ್ಕಕ್ಕೆ ನೂಕಿಕೊಂಡು  ಮರಿಗಳು ಗುಹೆಯಿಂದ ಹೊರಗೆ ಧಾವಿಸಿದವು. 'ಕುಯುಮ್ ಕುಯುಮ್' ಎನ್ನುತ್ತಾ ಬ್ರ್ಯಾಂಟೋಸಾರಸ್ ಬಳಿ ಓಡಿದವು. ಅದರ ದಪ್ಪ ಕಾಲುಗಳ ಮೇಲೆ ತಮ್ಮ ನವಿರಾದ ಎಳೆ ಕೊರಳುಗಳನ್ನು ಉಜ್ಜಿಕೊಂಡು ನಿಂತವು.
" ಕೆಸರಲ್ಲಿ  ಕೂತಿದ್ದ  ಅದೇ ಬ್ರಾಂಟೋಸಾರಸ್! " ಎಂದಳು ಆಶ್ಚರ್ಯಗೊಂಡ ಅದ್ದು.
" ಹುಮ್! ಮರಿಗಳ ತಾಯಿ! "
" ಅವನ್ನು ಹುಡುಕಿ ಬಂದಿದೆ ನೋಡು! " 
ಸದ್ದಿಲ್ಲದೆ ಗುಹೆಯಿಂದ ಹೊರಬಂದ ಹುಡುಗಿಯರು, ತಾಯಿ ಮತ್ತು ಮರಿಗಳ ಸಂಭ್ರಮವನ್ನು ನೋಡುತ್ತ ನಿಂತರು. 
ಒಂದೊಂದೇ ಮರಿಯ ಕೊರಳನ್ನು ತನ್ನ ನೀಳವಾದ ಕೊರಳಿನಿಂದ  ಬಳಸಿ ಮುದ್ದಿಸಿತು ತಾಯಿ ಬ್ರಾಂಟೋಸಾರಸ್.
" ಡೈನೋಸರ್ಗಳಿಗೆ ಬುದ್ಧಿ ಇಲ್ಲ ಅಂದ್ಯಲ್ಲ ವೃದ್ಧಿ! ಈಗ ನೋಡು! " ಎಂದಳು ಅದ್ದು.
ಮರಿಗಳನ್ನು ಪ್ರೀತಿಯಿಂದ ಮುದ್ದಿಸುತ್ತಿದ್ದ ಅಮ್ಮ, ಅವುಗಳ ಮೇಲೆ ಅಲ್ಲಲ್ಲಿ ಅಂಟಿಸಿದ್ದ ಬ್ಯಾಂಡ್ ಏಡನ್ನು ಪರಿಶೀಲಿಸಿ ತನ್ನ ಹಲ್ಲುಗಳಿಂದ ಅವನ್ನು ಕಿತ್ತು ಹಾಕಿತು. ಮರಿಗಳು ಅಮ್ಮನ ಮುಂದೆ ಹಿಂದೆ ಕುಯಿಗುಟ್ಟಿ ಓಡಾಡಿದವು. ನಂತರ ಅದ್ದುವನ್ನು ಕುರಿತು ಓಡಿ ಬಂದವು. ತಮ್ಮ ತಮ್ಮ ಕೊರಳುಗಳನ್ನು ಮುಂದೆ ಚಾಚಿದವು. ಅದ್ದು ಅವುಗಳನ್ನು ಆದರದಿಂದ ಸವರಿದಳು.
ತಾಯಿ ಬ್ರಾಂಟೋಸಾರಸ್  ತನ್ನ ಕೊರಳನ್ನು ನೆಟ್ಟಗೆ ಮಾಡಿ ತಲೆಯೆತ್ತಿ ಒಮ್ಮೆ ದೀರ್ಘವಾಗಿ ಊಳಿಟ್ಟಿತು. ನಂತರ ಗಟ್ಟಿಯಾಗಿ ಹೆಜ್ಜೆಯ ಸಪ್ಪಳಮಾಡುತ್ತ  ಅದ್ದು ಮತ್ತು ವೃದ್ಧಿಯನ್ನು ಕುರಿತು ನಿಧಾನವಾಗಿ ನಡೆದು ಬರತೊಡಗಿತು.
ಅದ್ದು ಮೆಲ್ಲಮೆಲ್ಲನೆ ಹಿಂಜರಿದಳು.
                                                                                                                                ಆಮೇಲೆ ... 
-----------------------------------------------------------------------------------------------------

ADDU IN DINOSAUR LAND 
Chapter  5



Addu was  playing with the Bronto Babies who had just woken up from their nap, when she heard a faint rumble.
“ Do you think it is  going to rain, Vriddhi?”  She asked, looking up.
Vriddhi did not reply. She was listening attentively to the far off sound and scanning the direction from where it came.
“ Oh no ! ” Cried Addu ,  Do you think it is the sound of  T.Rex returning? ”
The Bronto Babies too perked up and became restless.
“ Its Ok…its Ok…Don’t panic ! ” Addu pacified them, but was herself worried.
The thundering sound came closer. She slid up behind Vriddhi and peered in that direction.
What a surprise !!!
Just a little way away from them stood a massive Brontosaurus, swaying its long neck from side to side, its eyes searching for something.
Seeing it,  the Babies got very excited and ran, pushing  the girls aside.
They hopped and skipped happily towards the huge Bronto.
“ Oh, isn’t this the same Bronto that was feeding in the muddy lake? ”
“  Yes, it’s the Babies’ mother!” remarked  Vriddhi.
The babies by now were frolicking around their Mother’s legs. The Mother Bronto nuzzled each one of them by turns, with its long neck.
“ You said Dinosaurs have no brain or thinking power. Look now! ” said Addu. “ It is as loving as any animal mother! ”
The Mother Bronto  fussed  over the babies and pulled  out all the Band Aids stuck on their bodies.
After enjoying  the Mother’s pampering for a while, they came running to Addu. One by one they offered their necks for her to tickle.
Mother Bronto lifted her head and gave a deep call.
Then , with heavy steps , came closer to the girls.
Addu stepped back warily.

                                                                To be continued............                                                        

No comments:

Post a Comment