ಸಿಡ್ನಿ ರಾಯಲ್ ಈಸ್ಟರ್ ಷೋ
ಪ್ರತಿ ವರುಷವೂ ಈಸ್ಟರ್ ಹಬ್ಬದ ಸಮಯದಲ್ಲಿ 'ಸಿಡ್ನಿ ರಾಯಲ್ ಈಸ್ಟರ್ ಷೋ' ಎಂಬ ವಸ್ತು ಪ್ರದರ್ಶನ ಸಿಡ್ನಿಯಲ್ಲಿರುವ 'ಸಿಡ್ನಿ ಒಲಿಂಪಿಕ್ ಪಾರಕ್' ಆವರಣದಲ್ಲಿರುವ ಮೈದಾನದಲ್ಲಿ ವಿಜೃಂಭಣೆಯಿಂದ ನಡೆಯುತ್ತದೆ. ಗ್ರಾಮೀಣ ಉದ್ಯಮಿಗಳ ಮತ್ತು ರೈತರ ಉತ್ಪಾದನೆಗಳನ್ನು ಇಲ್ಲಿ ಪ್ರದರ್ಶಿಸಲಾಗುತ್ತದೆ.
ಇದು ನಗರಿಕರು ಮತ್ತು ಗ್ರಾಮೀಣರು ಸಂಧಿಸುವ ಒಂದು ಸಂತೋಷ ಸಮಾರಂಭ.
ಇದು ನಗರಿಕರು ಮತ್ತು ಗ್ರಾಮೀಣರು ಸಂಧಿಸುವ ಒಂದು ಸಂತೋಷ ಸಮಾರಂಭ.
ಹೋದ ಬಾರಿ ನಾವು ಸಿಡ್ನಿಗೆ ಪಯಣವಾಗಿದ್ದಾಗ ಈಸ್ಟರ್ ಷೋ ನೋಡುವ ಅವಕಾಶ ದೊರಕಿತು. ಬೆಳಿಗ್ಗೆ ಒಂಬತ್ತು ಗಂಟೆಗೆ ಮನೆ ಬಿಟ್ಟ ನಮಗೆ ಸಂಜೆ ಏಳು ಗಂಟೆಯಾದರೂ ಮನೆಗೆ ಹಿಂದಿರುಗುವ ಮನಸ್ಸಿರಲಿಲ್ಲ. ನೋಡಲು, ಕಲಿಯಲು ಅಷ್ಟು ವಿಷಯಗಳಿದ್ದವು.
ಜಾನುವಾರುಗಳ ಪ್ರದರ್ಶನ, ಶ್ವಾನ ಪ್ರದರ್ಶನ, ಬೆಕ್ಕುಗಳ ಪ್ರದರ್ಶನ, ಕುದುರೆ ಸವಾರಿ ಪ್ರದರ್ಶನ ಮುಂತಾದ ಅನೇಕ ಪ್ರದರ್ಶನಗಳು -
ಮಕ್ಕಳೊಂದಿಗಿನ ಒಡನಾಟಕ್ಕೆ ತಕ್ಕಂತಹ ಜಾನುವಾರುಗಳ ಶಿಶು ವಿಹಾರಗಳು -
ಮಕ್ಕಳು ಅವುಗಳನ್ನು ಮುಟ್ಟಲೂ ತಿಂಡಿ ತಿನ್ನಿಸಲೂ ಏರ್ಪಡಿಸಲಾಗಿದ್ದ ಸುವ್ಯವಸ್ಥೆ -
(ಆಡುವ ಮುನ್ನ ಮತ್ತು ಆಡಿದ ನಂತರ ಹ್ಯಾಂಡ್ ಸ್ಯಾನಿಟೈಝರ್ ಉಪಯೋಗಿಸುವುದು ಕಡ್ಡಾಯ!)
ಕೇಕ್, ಉಪ್ಪಿನಕಾಯಿ, ಜಾಮ್ ಮುಂತಾದ ವ್ಯಂಜನಗಳ ತಯಾರಿಕೆ, ಆಟಿಕೆಯ ತಯಾರಿಕೆ, ಹೊಲಿಗೆ, ಕಸೂತಿ, ನೆಯ್ಗೆ, ಬಟ್ಟೆಗಳಿಗೆ ಬಣ್ಣ ಹಾಕುವುದು, ಶಿಲ್ಪಗಳ ಕೆತ್ತನೆ, ಚಿತ್ರ ಕಲೆ, ಛಾಯಾ ಗ್ರಹಣ ಇತ್ಯಾದಿ ಕಲೆಗಳಿಗಾಗಿ ಆಯೋಜಿಸಲ್ಪಟ್ಟಿದ್ದ ವಿವಿಧ ಸ್ಪರ್ಧೆಗಳು -
ರೈಲ್ವೆ, ಅಗ್ನಿಶಾಮಕ ದಳ ಮತ್ತು ಪೊಲೀಸ್ ಇಲಾಖೆಗಳ ಬಗೆಗಿನ ಸ್ವಾರಸ್ಯಕರವಾತದ ಮಾಹಿತಿಗಳ ಪ್ರದರ್ಶನ -
ತೋಟಗಾರಿಕೆ ಇಲಾಖೆಯಲ್ಲಿ ಬೃಹದಾಕಾರವಾದ ಕುಂಬಳಕಾಯಿಗಳು, ಬದನೆ, ಟೊಮೆಟೊ ಮೊದಲಾದ ಮನಸೆಳೆವ ತರಕಾರಿಗಳು -
ಮೆರ್ರಿ ಗೊ ರೌಂಡ್, ಜಯಂಟ್ ವೀಲ, ಎತ್ತರವಾದ ಬಣ್ಣಮಯವಾದ ಜಾರು ಬಂಡೆ, ಮುಂತಾದ ಅನೇಕ ಖುಷಿ ಕೊಡುವಂತಹ ಸವಾರಿಗಳು -
ರಂಗಮಂದಿರದಲ್ಲಿ ಹಿರಿಯರನ್ನೂ ರಂಜಿಸುವಂತಹ ನಿಂಜಾ ಟರ್ಟಲ್ ಷೋ -
ಜೀವಂತ ಡೈನೋಸರ್ಗಳಂತೆಯೇ ನೋಡುವವರನ್ನು ಬೆದರಿಸುವಂತಹ ಚಲಿಸುವ, ಫೀಳಿಡುವ ಬೃಹತ್ ಡೈನೋಸರ್ಗಳ ಪ್ರದರ್ಶನ -
ಸವಿಯಾದ ದೇಶ ವಿದೇಶದ ತಿಂಡಿ ತಿನಿಸುಗಳನ್ನು ಸರಬರಾಜು ಮಾಡುತ್ತಿದ್ದ ನೂರಾರು ಉಪಹಾರ ಮಂದಿರಗಳು -
ಭರವೇ ಇಲ್ಲದಷ್ಟು ಐಸ್ ಕ್ರೀಮ್, ಚಿಪ್ಸ್, ಪಾಪ್ ಕಾರ್ನ್, ಪಿಜ್ಜಾ -
ಬೊಂಬೆ ಅಂಗಡಿಗಳಲ್ಲಿ ದೊರಕುವ ಆಕರ್ಷಕ 'ಷೋ ಬ್ಯಾಗ್' ಗಳನ್ನು ಕೊಳ್ಳದೆ ಯಾವ ಮಗುವೂ ಮನೆಗೆ ಮರಳುವುದಿಲ್ಲ. ಪ್ರಾರಂಭದ ದಿನಗಳಲ್ಲಿ ಉದ್ಯಮಿಗಳು ತಮ್ಮ ಮಾರಾಟ ಸರಕುಗಳ ಮಾದರಿಗಳನ್ನು ತುಂಬಿ ಷೋ ಬ್ಯಾಗುಗಳನ್ನು ವಿತರಣೆ ಮಾಡುತ್ತಿದ್ದರಂತೆ. ಆದರೆ ಇಂದು ಮಕ್ಕಳನ್ನು ಆಕರ್ಷಿಸುವಂತಹ ಆಟಿಕೆಗಳನ್ನು ತುಂಬಿದ ಷೋ ಬ್ಯಾಗುಗಳು ಮಾತ್ರವೇ ಮಾರಾಟವಾಗುತ್ತಿವೆ.
ನಮ್ಮ ಮಕ್ಕಳು ಸಿಡ್ನಿ ರಾಯಲ್ ಈಸ್ಟರ್ ಷೋದಲ್ಲಿ ನೋಡಿ ಖುಷಿಪಟ್ಟ ಕೆಲವು ದೃಶ್ಯಗಳನ್ನು ಕೆಳಕಂಡ ಚಿತ್ರಗಳಲ್ಲಿ ನೀವೂ ಕಾಣಿರಿ !
ಪ್ರವೇಶ ದ್ವಾರ |
ಷೋ ಆವರಣ |
ಬಹುಮಾನ ಪಡೆದ ಗೋವು ಉಣ್ಣೆ ಕತ್ತರಿಸಲ್ಪಟ್ಟ ಕುರಿ ಬಹುಮಾನ ಗಳಿಸಿದ ಉಣ್ಣೆಯ ನೂಲು |
ಟೋಪಿಗಳ ಅಂಗಡಿ |
ಬಣ್ಣಮಯವಾದ ಜಾರು ಬಂಡೆ |
ನಿಂಜಾ ಟರ್ಟಲ್ ಷೋ
|
ಆಟ ಮತ್ತು ಆಟಿಕೆಗಳು ಬೆದರಿಸುವ ಡೈನೋ!
|
No comments:
Post a Comment