ಭಾರಿಯಾದ ಮೈಯನ್ನು ಹೊತ್ತು ತನ್ನ ದಪ್ಪವಾದ ಉದ್ದನೆಯ ಬಾಲವನ್ನೂ ಎಳೆದುಕೊಂಡು ದಾಪುಗಾಲು ಹಾಕಿ ಓಡಿಬರುತ್ತಿತ್ತು ಟಿ ರೆಕ್ಸ್! ಕೈಗಳಂತೆ ತೋರಿದ ಅದರ ಮುಂಬಾಗದ ಕಾಲುಗಳಲ್ಲಿ ಮೂರು ಮೂರು ದಪ್ಪ ಬೆರಳುಗಳು! ಅವುಗಳಲ್ಲಿ ಕೊಕ್ಕೆಯಂತಿದ್ದ ಚೂಪಾದ ಉಗುರುಗಳು! ಬ್ರಾಂಟೋ ಮರಿಗಳನ್ನು ಬಾಚಿ ಎತ್ತಿ ಬಾಯಿಗೆ ಹಾಕಿಕೊಳ್ಳುವ ಅವಸರದೊಂದಿಗೆ ಅದು ಹತ್ತಿರ ಹತ್ತಿರ ಧಾವಿಸುತ್ತಿತ್ತು!
" ಅದ್ದು! ಬೇಗ! ಮರಿಗಳನ್ನ ಕರಕೊಂಡು ಓಡು! " ಎನ್ನುತ್ತಾ ವೃದ್ಧಿ ತನ್ನ ಚೀಲದಿಂದ ಮಂತ್ರದ ಕೋಲನ್ನು ತೆಗೆದಳು.
" ಅಯ್ಯೋ! ಎಲ್ಲಿಗೆ? ಹೇಗೆ? " ಅದ್ದು ದಿಕ್ಕು ತೋಚದೆ ಗಾಬರಿಯಿಂದ ಕೂಗಿದಳು.
" ಭಯ ಬೇಡ ಅದ್ದು! ಆ ಕಡೆ ನೋಡು ಬಂಡೆಗಳು ! ಅಲ್ಲಿ ಯಾವುದಾದ್ರೂ ಗುಹೆ ಕಂಡ್ರೆ ಒಳಕ್ಕೆ ಹೋಗ್ಬಿಡು! ಬೇಗ! ನಾನು ಟಿ ರೆಕ್ಸನ್ನ ಅಲ್ಲಿಯವರೆಗೆ ತಡೆದು ನಿಲ್ಲಿಸಕ್ಕೆ ನೋಡ್ತೀನಿ!" ಎನ್ನುತ್ತಿದ್ದ ವೃದ್ಧಿಯನ್ನು ಪ್ರಭಾವಲಯ ಸುತ್ತಿಕೊಂಡಿತು.
ಅದ್ದು ತುರ್ತಾಗಿ ಮರಿಗಳನ್ನು ಮುದ್ದು ಮಾತಿನಿಂದ ಪುಸಲಾಯಿಸಿ, ಅವಕ್ಕೆ ಹುಲ್ಲನ್ನು ತೋರಿಸಿ ಓಲೈಸುತ್ತ ಓಡಿದಳು. ಹುಲ್ಲಿನಾಸೆಯಿಂದ ಮರಿಗಳೂ ಕುಯಿಗುಡುತ್ತ ವೇಗವಾಗಿ ಅವಳನ್ನು ಹಿಂಬಾಲಿಸಿದವು.
ಎಲ್ಲಿಂದಲೋ ಬಂದ ಬಲವಾದ ಸುಂಟರಗಾಳಿ ವೃದ್ಧಿಗೂ ಟಿ ರೆಕ್ಸಿಗೂ ನಡುವೆ ಗೋಡೆಯಂತೆ ಸುತ್ತತೊಡಗಿತು. ವೃದ್ಧಿ ಎರಡು ಕೈಗಳಿಂದ ಮಂತ್ರದ ಕೋಲನ್ನು ಅಡ್ಡವಾಗಿ ಹಿಡಿದು ಸುತ್ತುತ್ತಿದ್ದ ಗಾಳಿಯನ್ನು ಟಿ ರೆಕ್ಸನ್ನು ಕುರಿತು ಬಲವಾಗಿ ನೂಕಿ ಹಿಡಿದಳು. ಟಿ ರೆಕ್ಸ್ ಮುಂದೆ ಹೆಜ್ಜೆಯಿಡಲಾರದೆ ತತ್ತರಿಸಿತು. ಕೋಪದಿಂದ ಫೀಳಿಟ್ಟಿತು.
ಅದ್ದು ಮರಿಗಳೊಂದಿಗೆ ಓಡಿ ಓಡಿ ಬಂಡೆಗಳ ಸಂದಿನಲ್ಲಿದ್ದ ಒಂದು ಗುಹೆಯನ್ನು ಸೇರಿದಳು.
ಬೆನ್ನುಹತ್ತಿದ್ದ ಟಿ ರೆಕ್ಸನ್ನು ಕುರಿತು ಮಂತ್ರದ ಕೋಲನ್ನು ಒಂದೇ ಕೈಯಿನಿಂದ ಅಡ್ಡವಾಗಿ ಹಿಡಿದುಕೊಂಡ ವೃದ್ಧಿ, ಹಿಂದೆ ತಿರುಗಿ ತಿರುಗಿ ನೋಡುತ್ತ ಅದ್ದುವನ್ನು ಹಿಂಬಾಲಿಸಿ ಓಡಿದಳು. ಒಂದೇ ಕೈಯಲ್ಲಿ ಹಿಡಿದಿದ್ದ ಕಾರಣ ಮಂತ್ರದ ಕೋಲಿನ ಶಕ್ತಿ ಕುಂದ ತೊಡಗಿತು. ಆದ್ದರಿಂದ ಟಿ ರೆಕ್ಸ್ ಬಹಳ ಸುಲಭವಾಗಿ ಮುನುಗ್ಗಿ, ಅಬ್ಬರಿಸುತ್ತ, ಇಮ್ಮಡಿ ವೇಗದೊಂದಿಗೆ ಹಿಂಬಾಲಿಸ ತೊಡಗಿತು.
" ಬೇಗ! ಅದ್ದು! ನನ್ನ ಕೋಲನ್ನ ಹಿಂದೆ ತೋರಿಸ್ಕೊಂಡು ಅದನ್ನ ತಡೆಯಕ್ಕೆ ಆಗ್ತಾ ಇಲ್ಲ!" ಚೀರಿದಳು ವೃದ್ಧಿ.
" ಇಗೋ ಆಯಿತು! " ಗವಿಯೊಳಗೆ ನುಗ್ಗಿದ ಅದ್ದು, ಒಳಗಿನಿಂದ ಮರಿಗಳ ಕೊರಳು ಹಿಡಿದು ಎಳೆದಳು. ವೃದ್ಧಿ ಮಂತ್ರದ ಕೋಲಿಲ್ಲದ ತನ್ನ ಮೊತ್ತೊಂದು ಕೈಯಿಂದ ಮರಿಗಳನ್ನು ಹಿಂದಿನಿಂದ ದೂಡಿದಳು.
ಟಿ ರೆಕ್ಸ್ ಹತ್ತಿರ ಹತ್ತಿರ ಬರುತ್ತಿತ್ತು. ತನ್ನ ಭಯಾನಕ ಬಾಯನ್ನು ದೊಡ್ಡದಾಗಿ ತೆರೆದು ಕಚ್ಚುವುದಕ್ಕೆ ಸಿದ್ಧವಾಗಿ ರಭಸದಿಂದ ಮುನ್ನುಗ್ಗಿತು. ಅದೇ ಸಮಯ ಅದ್ದು ಮತ್ತು ವೃದ್ಧಿ ಮರಿಗಳೊಂದಿಗೆ ಗುಹೆಯೊಳಕ್ಕೆ ಸೇರಿಕೊಂಡುಬಿಟ್ಟರು. ನಿರಾಸೆಯಿಂದ ಟಿ ರೆಕ್ಸ್ 'ರಪ್ಪನೆ' ತನ್ನ ಬಾಯನ್ನು ಮುಚ್ಚಿತು.
ಅದ್ದು ಮತ್ತು ವೃದ್ಧಿ ಮರಿಗಳನ್ನು ತಬ್ಬಿಕೊಂಡು ಗವಿಯ ಗೋಡೆಗೆ ಅಂಟಿಕೊಂಡು ನಿಂತರು.
ಟಿ ರೆಕ್ಸ್ ತನ್ನ ಮೂತಿಯನ್ನು ಒಳಗೆ ತೂರಿಸಲೆತ್ನಿಸಿತು. ಗವಿಯ ಚಿಕ್ಕದಾದ ಇಕ್ಕಟ್ಟಾದ ದ್ವಾರದೊಳಗೆ ಅದರ ದೊಡ್ಡ ಭಯಾನಕ ಬಾಯಿಯನ್ನು ತೂರಿಸಲಾರದೆ ಮತ್ತೆ ಮತ್ತೆ ಫೀಳಿಟ್ಟಿತು. ನಂತರ ತನ್ನ ಪ್ರಯತ್ನದಲ್ಲಿ ಸೋತು ಹಿಮ್ಮೆಟ್ಟಿತು. ಭೂಮಿ ಕಂಪಿಸುವಂತಹ ಅದರ ಕಾಲ ಸಪ್ಪಳ ದೂರ ದೂರ ಸರಿದು ಹೋಗಿ ಕಡೆಗೊಮ್ಮೆ ನಿಂತೇ ಹೋಯಿತು.
" ಅಬ್ಬಾ! ಬದುಕಿದ್ವಿ! " ಎಂದಳು ವೃದ್ಧಿ.
" ನೀನೇನಾದ್ರೂ ಅದನ್ನ ನಿನ್ನ ಮಂತ್ರದ ಕೋಲು ಹಿಡಿದು ತಡೀದೇ ಹೋಗಿದ್ರೆ ನಮ್ಮ ಗತಿ ಏನಾಗ್ತಿತ್ತೋ!" ಎಂದಳು ಅದ್ದು.
ಮರಿಗಳು ಇನ್ನೂ ಭಯದಿಂದ 'ಕುಯ್ಯುಮ್ ಕುಯ್ಯುಮ್' ಎನ್ನುತ್ತಿದ್ದವು.
" ಭಯ ಬೇಡ ಮರಿ! ಟಿ ರೆಕ್ಸ್ ಓಡಿ ಹೋಯಿತು! " ಎನ್ನುತ್ತ ಅವನ್ನು ತಬ್ಬಿಕೊಂಡ ಅದ್ದು ಅವುಗಳ ಮೈಮೇಲಿದ್ದ ಗಾಯಗಳನ್ನು ಕಂಡಳು.
" ಭಯ ಬೇಡ ಮರಿ! ಟಿ ರೆಕ್ಸ್ ಓಡಿ ಹೋಯಿತು! " ಎನ್ನುತ್ತ ಅವನ್ನು ತಬ್ಬಿಕೊಂಡ ಅದ್ದು ಅವುಗಳ ಮೈಮೇಲಿದ್ದ ಗಾಯಗಳನ್ನು ಕಂಡಳು.
" ಅಯ್ಯೋ! ಮರಿಗಳ ಮೈಯೆಲ್ಲಾ ತರಚಿದಂತಿದೆ! "
ಅದ್ದು ಕನಿಕರದಿಂದ ಮರಿಗಳ ಒಂದೊಂದೇ ಗಾಯವನ್ನು ಪರಿಶೀಲಿಸಿದಳು.
" ಬಂಡೆ ಸಂದಿಯಲ್ಲಿ ಎಳೆಯೋವಾಗ ಗಾಯ ಆಗಿರ್ಬೇಕು! " ಎಂದಳು ವೃದ್ಧಿ.
"ಅಯ್ಯೋ ವೃದ್ಧಿ! ನೋಡು ನಿನ್ನ ಕೈಯಲ್ಲೂ ಗಾಯ!" ಎಂದ ಅದ್ದು, ಹೆಗಲಮೇಲೆ ಹಾಕಿಕೊಂಡಿದ್ದ ತನ್ನ ಬ್ಯಾಗನ್ನು ತೆಗೆದಳು. ಒಳಗಿನಿಂದ ಟಿಶ್ಯೂ ಪೇಪರ್ ತೆಗೆದು ಮೊದಲು ಮರಿಗಳ ಗಾಯವನ್ನು ಒರೆಸಿದಳು. ನಂತರ ವೃದ್ಧಿಯ ಗಾಯವನ್ನೂ ಚೆನ್ನಾಗಿ ಸ್ವಚ್ಛ ಮಾಡಿದಳು.
'' ಇದೆಲ್ಲ ನನಗೆ ಬೇಡ ಅದ್ದು! "
"ಸುಮ್ನಿರು! ಗಾಯಗಳನ್ನ ಕೂಡ್ಲೇ ಕ್ಲೀನ್ ಮಾಡದೇ ಹೋದ್ರೆ ಸೆಪ್ಟಿಕ್ ಆಗತ್ತೆ!" ಎನ್ನುತ್ತಾ ಕಾರ್ಯನಿರತಳಾದಳು ಅದ್ದು. ಮರಿಗಳ ಮತ್ತು ವೃದ್ಧಿಯ ಗಾಯಗಳ ಮೇಲೆಲ್ಲ ಒಂದೊಂದು ಬ್ಯಾನ್ಡ್ ಏಡ್ ಅಂಟಿಸಿದಳು.
ನಂತರ ಉಪಯೋಗಿಸಿದ ಟಿಶ್ಯೂ ಪೇಪರ್ ಮತ್ತು ಬ್ಯಾಂಡ್ ಏಡ್ ಕಾಗದಗಳನ್ನೆಲ್ಲ ಆರಿಸಿ ತನ್ನ ಚೀಲದಲ್ಲಿದ್ದ ಒಂದು ಕವರಿಗೆ ಹಾಕಿಕೊಂಡಳು.
" ಇದೆಲ್ಲ ಯಾಕೆ ಬ್ಯಾಗಿಗೆ ಹಾಕ್ಕೊತ್ತಿಯ ಅದ್ದು? ''
" ಮತ್ತೆ? ಇಲ್ಲೇ ಬಿಸಾಕಿ ಡೈನೋಸರ್ ದೇಶವನ್ನೆಲ್ಲಾ ಕೊಳಕು ಮಾಡಕ್ಕಾಗತ್ತಾ? '' ಎಂದಳು ಅದ್ದು.
ವೃದ್ಧಿಗೆ ಅದ್ದುವಿನ ಶಿಸ್ತು ಬಹಳ ಮೆಚ್ಚುಗೆ ಆಯಿತು.
ಮರಿಗಳು ಆಯಾಸದಿಂದ ತಲೆ ಬಾಗಿ ಮಲಗಿಬಿಟ್ಟವು.
" ಮಲಗಲಿ! ಪಾಪ !ಓಡಿ ಓಡಿ ಆಯಾಸವಾಗಿರಬೇಕು! "ಎಂದಳು ಅದ್ದು.
" ಹೌದು ಅದ್ದು! ಇವು ಸ್ವಲ್ಪ ಚೇತರಿಸ್ಕೊಂಡ ಮೇಲೆ ಹೊರಗೆ ಹೋಗೋಣ! "
" ಟಿ ರೆಕ್ಸ್ ಇಲ್ಲೇ ಹೊಂಚು ಹಾಕ್ತಿದೆಯೋ ಏನೋ? ಮತ್ತೇ ಅದರ ಕೈಗೆ ಸಿಕ್ಕಿ ಬೀಳ ಬಾರದು! " ಇದು ಅದ್ದುವಿನ ಭಯ!
" ಹಾಗೆಲ್ಲ ಯೋಚ್ನೆ ಮಾಡೋಂತ ಭುದ್ದಿ ಡೈನೋಸರಸ್ಗಳಿಗೆ ಇಲ್ಲ ಅದ್ದು! ತಿನ್ನಕ್ಕೆ ಸಿಕ್ಕರೆ ಸಾಕು! ಅಷ್ಟೇ! " ಎಂದಳು ವೃದ್ಧಿ.
ಅದ್ದು ಮಾತ್ರ ಟಿ ರೆಕ್ಸ್ ಮತ್ತೆ ಬರಬಹುದೋ ಏನೋ ಎಂದು ಮೌನವಾಗಿ ಆಲಿಸುತ್ತ ಕುಳಿತಳು.
ಆಮೇಲೆ.....
-----------------------------------------------------------------------------------------------------
ADDU IN DINOSAUR LAND!
Chapter 4
ಆಮೇಲೆ.....
-----------------------------------------------------------------------------------------------------
ADDU IN DINOSAUR LAND!
Chapter 4
The
T.Rex was coming at them, leaping on its powerful legs, dragging its gigantic
body and thick long tail. The short forelegs, which looked like its hands,
had three fat fingers each, ending in sharp claw- like nails. It was coming
for the Bronto Babies! With one swipe, it could snatch and stuff them into its fearsome mouth!
“ Addu
! Quick ! Take the Babies and run! ” Cried Vriddhi as she pulled her Magic Wand
out of her bag.
Addu
was bewildered. “ Oh My God! How??? Where ???? ” She gasped.
“ Don’t
panic! …Look over there. The rocks! Run! You will surely find some cave
there ….Go hide inside a cave with the
babies. I will stop this T.Rex, as long
as I can .”
Addu
patted the babies to calm them and tempting them with clumps of grass, she
quickly herded them towards the rocks.
Vriddhi
waved the Wand and a sudden tornado rose up like a wall between her and T.Rex .
She held the Wand across and pushed the tornado towards the terrifying dino.
The
T.Rex was pushed back and it roared in rage, unable to move.
Addu
reached the rocks and finding a small cave, hurried the babies towards the
opening.
Vriddhi
now started running towards the cave too, all the while pointing the Wand back, towards T.Rex. But, as she was holding it by only one hand, the Power of the
Wand started weakening. As it weakened, T.Rex found the strength to move and
it leapt behind her.
“ Quick
Addu! ” Screamed Vriddhi “ I am unable to point my wand backwards and hold this beast off for long …..”
“
Almost done ! ” Shouted Addu, getting into the small cave and pulling the
babies in. Vriddhi arrived and pushed them from behind.
Snarling
and leaping, T.Rex reached the cave too. It snapped at the entrance and tried
to wriggle its huge snout into the cave. Vriddhi and Addu flattened themselves
to the wall of the cave, holding back the babies.
As
the mouth of the cave was too small, T.Rex could not get its snout in. It tried
thrashing and pounding on the rocks, roaring in fury. But it failed in all its
efforts to get at the baby brontos. Defeated at last, it stomped away, shaking the ground like an
earthquake with its heavy steps.
As
the sound of its footsteps faded away,
the girls came out with relief.
“
Thank goodness! ” sighed Vriddhi
“
What if you hadn’t had your magic wand! ” panted Addu “ Oh dear! That was scary! ”
The
Bronto Babies came out one by one, still
squealing in fright.
“ Its
Ok , Babies ! Rex is gone ! Don’t be scared! ”
As
Addu hugged them, she noticed scratches on their bodies.
“They
must have got scratched while rushing through the rocks….poor babies!...here,
let me help you…”
She
pulled out a bottle of lotion and cotton balls from her backpack and cleaned the scratches.
And finished off the First Aid by
sticking Band Aid on all the scratches.
“ Vriddhi,
you have scratches too, let me clean them. ”
“ No
! I don’t need all that !”
“ Of course
you do! If you don’t clean the wounds, they will become septic. ”
After
attending to everyone, Addu collected all the used cotton and plastic wrappers
and put them in a brown paper bag. Then she stuffed this paper bag in the front
pouch of her backpack.
“
Why are you carrying them Addu ? ”
“
We must! We should not spoil the environment by throwing garbage wherever we
go! ”
Vriddhi
liked Addu’s discipline very much.
The
Bronto Babies were by now napping under a shade.
“ Let
them rest. We will take them back when they wake up. ”
“But
Vriddhi! What if T.Rex is just hiding somewhere and planning to pounce on them
when unexpected? ”
“ Worry
not! Dinos do not have the brains to think and plan so much…….they only hunt
for easy food. ”
But
Addu, still worried, kept an eye and ear open to sense any danger from T.Rex
again.
To be continued............
To be continued............
No comments:
Post a Comment